For Quick Alerts
ALLOW NOTIFICATIONS  
For Daily Alerts

ವಿಮಾನ ಅಪಹರಣಗಳಲ್ಲಿಯೇ ಅತಿ ಭಯಾನಕವಾದ ಪ್ರಕರಣಗಳು

By Super
|

ಕೆಲದಿನಗಳ ಹಿಂದೆ ತಿಳಿಗೇಡಿಯೊಬ್ಬ ಈಜಿಪ್ಟ್ ಏರ್ ವಿಮಾನವೊಂದನ್ನು ಅಪಹರಿಸಿ ಸೈಪ್ರಸ್ ದೇಶಕ್ಕೆ ಬಲವಂತವಾಗಿ ಕೊಂಡೊಯ್ದಿದ್ದ. ಇದಕ್ಕೆ ಕಾರಣ? ಆತನ ವಿಚ್ಛೇದಿತ ಪತ್ನಿ ಸೈಪ್ರಸ್ ಪ್ರಜೆಯಾಗಿದ್ದು ಆಕೆಯನ್ನು ಭೇಟಿಯಾಗಲು ನಕಲಿ ಸ್ಫೋಟಕವಿದ್ದಂತಹ ಬೆಲ್ಟ್ ಧರಿಸಿ ವಿಮಾನ ಸ್ಫೋಟಿಸುವ ಬೆದರಿಕೆ ಹಾಕಿ ತನ್ನ ಕೆಲಸ ಸಾಧಿಸಲು ಯತ್ನಿಸಿದ್ದ ಈ ತಿಳಿಗೇಡಿ. ಈ ಪ್ರಕರಣ ಸುಖಾಂತ್ಯಗೊಂಡರೂ ಇನ್ನುಳಿದ ವಿಮಾನಾಪಹರಣ ಪ್ರಕರಣಗಳು ಇದರಂತೆ ಸುಖಾಂತ್ಯಗೊಂಡಿರಲಿಲ್ಲ. ಮಲೇಶಿಯಾ ವಿಮಾನದಂತೆ ಸುಳಿವೇ ಸಿಕ್ಕದ 6 ಕಾಣೆಯಾದ ವಿಮಾನಗಳು!

ತಮ್ಮ ದುರುದ್ದೇಶವನ್ನು ಸಾಧಿಸಲು ಭಯೋತ್ಪಾದಕರು ಮತ್ತು ದೇಶದ್ರೋಹಿಗಳು ಕಂಡುಕೊಂಡ ಒಂದು ಕ್ರಮವಾಗಿದ್ದು ಇದರಿಂದ ಪ್ರಯಾಣಿಕರು, ಪ್ರಯಾಣಿಕರ ಬಂಧುಬಳಗ, ವಿಮಾನದ ಸಿಬ್ಬಂದಿ, ತಾಂತ್ರಿಕವರ್ಗ, ದೇಶದ ಆಡಳಿತ ವೃಂದ, ಒಟ್ಟಾರೆ ಇಡಿಯ ದೇಶವೇ ದುಗುಡ, ಆತಂಕ, ಅಸಹಾಯಕತೆಯ ಸಂದರ್ಭವನ್ನು ಎದುರಿಸುತ್ತದೆ. ಅದರಲ್ಲೂ ಬಂಧಿತರ ಮನೆಯವರ ಮತ್ತು ಆಪ್ತರ ಗೋಳು ಕೇಳತೀರದಂತಾಗುತ್ತದೆ.

ವಿಮಾನಯಾನದ ಇತಿಹಾಸದಲ್ಲಿ ಇಂತಹ ಹಲವು ಪ್ರಕರಣಗಳನ್ನು ವಿಶ್ವದಲ್ಲಿ ದಾಖಲಾಗಿಸಿದ್ದು ಇದರಲ್ಲಿ 9/11ರ ಪ್ರಕರಣ ಅತ್ಯಂತ ಭಯಾನಕ ವಿಧ್ವಂಸಕ ಕೃತ್ಯವೆಂದು ಪರಿಗಣಿಸಲಾಗಿದೆ. ಈ ಕೃತ್ಯವು ಅಪ್ಪಟ ಆತ್ಮಹತ್ಯಾ ಪ್ರಕರಣವಾಗಿದ್ದು ಕಟ್ಟಡವನ್ನು ಉರುಳಿಸುವ ಉದ್ದೇಶವೇ ಇರುವ ಕಾರಣ ಕೆಳಗಿನ ಪಟ್ಟಿಯಲ್ಲಿ ಇದರ ಹೊರತಾಗಿ ಉಳಿದ ಪ್ರಕರಣಗಳು ವಿಮಾನಾಪಹರಣದ್ದಾಗಿವೆ....

1973 ರ ನೇಪಾಳದ ವಿಮಾನಾಪಹರಣ

1973 ರ ನೇಪಾಳದ ವಿಮಾನಾಪಹರಣ

ಹಿಮಾಲಯದ ತಪ್ಪಲಲ್ಲಿರುವ ನೇಪಾಳದಲ್ಲಿಯೂ 1973ರಲ್ಲಿ ಒಂದು ವಿಮಾನಾಪಹರಣ ನಡೆದಿದೆ. 10ನೇ ಜೂನ್ 1973ರಲ್ಲಿ ಹತ್ತೊಂಭತ್ತು ಜನರು ಕುಳಿತುಕೊಳ್ಳಬಹುದಾದ ಚಿಕ್ಕ ರಾಯಲ್ ಏರ್ ಲೈನ್ ವಿಮಾನವನ್ನು ನೇಪಾಳಿ ಕಾಂಗ್ರೆಸ್ ನ ಸದಸ್ಯರು ಎಂದು ಕರೆದುಕೊಳ್ಳುತ್ತಿದ್ದ ಮೂವರು ವ್ಯಕ್ತಿಗಳು ಅಪಹರಿಸಿದ್ದರು. ನೇಪಾಳ ಸರ್ಕಾರಕ್ಕೆ ಸೇರಿದ್ದ ಮೂವತ್ತು ಲಕ್ಷ ರೂಪಾಯಿ ನಗದನ್ನು ಈ ಅಪಹರಣಕಾರರು ಪಡೆದು ವಿಮಾನದ ಪೈಲಟ್‌ಗೆ ವಿಮಾನವನ್ನು ಭಾರತದ ಬಿಹಾರದಲ್ಲಿ ಇಳಿಸುವಂತೆ ಬಲವಂತ ಮಾಡಿದ್ದರು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ Image courtesy

1973 ರ ನೇಪಾಳದ ವಿಮಾನಾಪಹರಣ

1973 ರ ನೇಪಾಳದ ವಿಮಾನಾಪಹರಣ

ನೇಪಾಳ ಸರ್ಕಾರಕ್ಕೆ ಸೇರಿದ್ದ ಮೂವತ್ತು ಲಕ್ಷ ರೂಪಾಯಿ ನಗದನ್ನು ಈ ಅಪಹರಣಕಾರರು ಪಡೆದು ವಿಮಾನದ ಪೈಲಟ್‌ಗೆ ವಿಮಾನವನ್ನು ಭಾರತದ ಬಿಹಾರದಲ್ಲಿ ಇಳಿಸುವಂತೆ ಬಲವಂತ ಮಾಡಿದ್ದರು. ಇಳಿದ ವಿಮಾನದಿಂದ ಈ ಮೂವರೂ ನಾಪತ್ತೆಯಾಗಿದ್ದರು. ಈ ವಿಮಾನಾಪಹರಣದ ತನಿಖೆಯಲ್ಲಿ ಪೂರ್ಣ ಸಹಕಾರ ತೋರಿದ ಭಾರತ ಸರ್ಕಾರದ ಅಧಿಕಾರಿಗಳು ಒಂದೇ ವರ್ಷದಲ್ಲಿ ಈ ಮೂವರನ್ನೂ ಹಿಡಿದು ಬಂಧಿಸುವಲ್ಲಿ ಸಫಲವಾಯಿತು. ಆದರೆ ಯಾವ ರಾಜಕೀಯ ಶಕ್ತಿ ಇವರ ಹಿಂದೆ ಕೆಲಸ ಮಾಡುತ್ತಿತ್ತೋ ಏನೋ, ಕೆಲವೇ ದಿನಗಳಲ್ಲಿ ಈ ಮೂವರೂ ಜಾಮೀನಿನ ಮೇಲೆ ಬಿಡುಗಡೆಯಾದರು.

ಮಲೇಶಿಯಾ ಏರ್ ಲೈನ್ಸ್ ಫ್ಲೈಟ್ 653

ಮಲೇಶಿಯಾ ಏರ್ ಲೈನ್ಸ್ ಫ್ಲೈಟ್ 653

4ನೇ ಡಿಸೆಂಬರ್ 1977 ರಂದು ಪೆನಾಂಗ್ ನಗರದಿಂದ ಕುವಾಲಾಲುಂಪುರ್ ನಗರಕ್ಕೆ ತೆರಳುತ್ತಿದ್ದ ಈ ವಿಮಾನವನ್ನು ಮಾರ್ಗದ ನಡುವೆ ಅಪಹರಿಸಲಾಯಿತು. ಅಪಹರಣಕಾರರು ವಿಮಾನದ ಪೈಲಟ್ ಗೆ ವಿಮಾನವನ್ನು ಸಿಂಗಪುರದ ಕಡೆ ತಿರುಗಿಸುವಂತೆ ಬಲವಂತ ಮಾಡಿದರು. ಆದರೆ ಸಿಂಗಾಪುರಕ್ಕೆ ಇನ್ನೂ ನಲವತ್ತೇಳು ಕಿ.ಮೀ ದೂರ ಇರುವಂತೆಯೇ ತಂಜುಂಗ್ ಕುಪಾಂಗ್ (Tanjung Kupang) ಎಂಬ ಸ್ಥಳದಲ್ಲಿ ಈ ವಿಮಾನ ಅಪಘಾತಕ್ಕೀಡಾಯಿತು. ಈ ಅಪಘಾತದಲ್ಲಿ ಎಲ್ಲಾ 93 ಪ್ರಯಾಣಿಕರು ಮತ್ತು ಏಳು ವಿಮಾನದ ಸಿಬ್ಬಂದಿವರ್ಗ ಸಾವಿಗೀಡಾದರು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ...

Image courtesy

ಮಲೇಶಿಯಾ ಏರ್ ಲೈನ್ಸ್ ಫ್ಲೈಟ್ 653

ಮಲೇಶಿಯಾ ಏರ್ ಲೈನ್ಸ್ ಫ್ಲೈಟ್ 653

ಇದನ್ನು ಅಪಹರಿಸಿದವರು ಯಾರು, ಏಕೆ ಎಂಬ ಪ್ರಶ್ನೆಗಳಿಗೆ ಇದುವರೆಗೆ ಸ್ಪಷ್ಟವಾದ ಉತ್ತರ ಸಿಕ್ಕಿಲ್ಲ. ಕೆಲವು ಮಾಹಿತಿಗಳ ಪ್ರಕಾರ ರೆಡ್ ಆರ್ಮಿ ಎಂಬ ಸಂಘಟನೆಗೆ ಸೇರಿದವರು ಈ ವಿಮಾನವನ್ನು ಅಪಹರಿಸಿದ್ದರು ಎಂದು ತಿಳಿಸಿದರೂ ಇವರು ಅಪಘಾತದ ಬಳಿಕ ಏನಾದರು ಎಂಬುದು ಇದುವರೆಗೆ ಬಿಡಿಸಲಾಗದ ಚಿದಂಬರ ರಹಸ್ಯವಾಗಿದೆ. Image courtesy

ಸಿಂಗಾಪುರ ಏರ್ ಲೈನ್ಸ್ ಫ್ಲ್ರೈಟ್ 117

ಸಿಂಗಾಪುರ ಏರ್ ಲೈನ್ಸ್ ಫ್ಲ್ರೈಟ್ 117

ಮಲೇಶ್ಯಾದ ಪಶ್ಚಿಮದಲ್ಲಿರುವ ಸುಬಾಂಗ್ ಎಂಬ ನಗರದಿಂದ ಸಿಂಗಾಪುರಕ್ಕೆ ಹೊರಟಿದ್ದ ಈ ವಿಮಾನವನ್ನು 26ನೇ ಮಾರ್ಚ್ 1991ರಂದು ಪಾಕಿಸ್ತಾನದ ನಾಲ್ವರು ಪ್ರಯಾಣಿಕರೇ ಅಪಹರಿಸಿದ್ದರು. ವಿಮಾನ ಸುಬಾಂಗ್ ನಿಂದ ಹೊರಟು ಸಿಂಗಾಪುರದಲ್ಲಿ ಇಳಿಯುವವರೆಗೂ ಸಭ್ಯರಾಗಿ ನಡೆದುಕೊಂಡ ಇವರು ಬಳಿಕ ಎಲ್ಲಿಂದಲೂ ಮಾರಕ ಅಸ್ತ್ರಗಳನ್ನು ಪ್ರಕಟಿಸಿ ವಿಮಾನವನ್ನು ಅಪಹರಿಸುವ ಭಯೋತ್ಪಾದಕರಾಗಿ ಬದಲಾದರು. ಇವರ ಬೇಡಿಕೆ ಪಾಕಿಸ್ತಾನದ ಪೂರ್ವ ಪ್ರಧಾನಿ ದಿವಂಗತ ಬೆನಜೀರ್ ಭುಟ್ಟೋ ರವರ ಪತಿ ಅಸಿಫ್ ಅಲಿ ಜರ್ದಾರಿಯವರ ಮತ್ತು ಇತರ ಪಿಪಿಪಿ ಕಾರ್ಯಕರ್ತರ ಬಿಡುಗಡೆಯಾಗಿತ್ತು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

Image courtesy

ಸಿಂಗಾಪುರ ಏರ್ ಲೈನ್ಸ್ ಫ್ಲ್ರೈಟ್ 117

ಸಿಂಗಾಪುರ ಏರ್ ಲೈನ್ಸ್ ಫ್ಲ್ರೈಟ್ 117

ಇವರ ಬೇಡಿಕೆ ತೀರಿಸುವುದು ನಮ್ಮಿಂದ ಸಾಧ್ಯವಿಲ್ಲ ಎಂದು ಮಲೇಶ್ಯಾ ಸರ್ಕಾರ ಪ್ರಕಟಿಸಿದಾಗ ಇವರು ಪ್ರತಿ ಹತ್ತು ನಿಮಿಷಕ್ಕೊಬ್ಬ ಪ್ರಯಾಣಿಕರನ್ನು ಕೊಲ್ಲುವ ಬೆದರಿಕೆ ಒಡ್ಡಿದರು. ಆದರೆ ಈ ಸಮಯದಲ್ಲಿ ಅತೀವ ಸಾಹಸ ಶೌರ್ಯ ಪ್ರಕಟಿಸಿದ ಸಿಂಗಾಪುರದ ಕಮಾಂಡೋ ಘಟಕದ ಅಧಿಕಾರಿಗಳು (Singapore Armed Forces Commando Formation (SAF CDO FN) ಕೇವಲ ಮೂವತ್ತು ಸೆಕೆಂಡುಗಳ ಒಳಗೆ ವಿಮಾನದೊಳಗೆ ನುಗ್ಗಿ ಈ ನಾಲ್ವರೂ ಭಯೋತ್ಪಾದಕರನ್ನು ಕೊಂದು ಎಲ್ಲಾ 123 ಪ್ರಯಾಣಿಕರ ಪ್ರಾಣವುಳಿಸಿದರು.

Image courtesy

ಫ್ರಾನ್ಸ್ ಏರ್ ಲೈನ್ಸ್ ಫ್ಲ್ರೈಟ್ 8969

ಫ್ರಾನ್ಸ್ ಏರ್ ಲೈನ್ಸ್ ಫ್ಲ್ರೈಟ್ 8969

24ನೇ ಡಿಸೆಂಬರ್ 1994ರಂದು ಆಲ್ಜೀರಿಯಾದ ಆಲ್ಜಿಯರ್ಸ್ ನಗರದ ಹುವಾರಿ ವಿಮಾನ ನಿಲ್ದಾಣದಿಂದ ಹೊರಟು ಫ್ರಾನ್ಸ್ ನ ಪ್ಯಾರಿಸ್ ನಗರ ತಲುಪಲಿದ್ದ ಈ ವಿಮಾನವನ್ನು ಆಲ್ಜೀರಿಯಾದ ಅಧ್ಯಕ್ಷರ ರಕ್ಷಣಾ ಪೋಲೀಸ್ ಪಡೆಗಳಂತೆ (Algerian presidential police) ಸಮವಸ್ತ್ರ ಧರಿಸಿದ್ದ ನಾಲ್ವರು ವ್ಯಕ್ತಿಗಳು ಏರಿದ ಕೆಲವೇ ಕ್ಷಣಗಳಲ್ಲಿ ವಿಮಾನವನ್ನು ತಮ್ಮ ವಶಕ್ಕೆ ಪಡೆದುಕೊಂಡರು. ಈ ನಾಲ್ವರೂ ತಮ್ಮನ್ನು ತಾವು Armed Islamic Group ಎಂಬ ಸಂಘಟನೆಗೆ ಸೇರಿದ ಸದಸ್ಯರು ಎಂದು ಹೇಳಿಕೊಂಡು Islamic Salvation Front political party ಎಂಬ ಸಂಘಟನೆಗೆ ಸೇರಿದ ಅಬ್ಬಾಸಿ ಮದನಿ ಮತ್ತು ಅಲಿ ಬೆಲ್ಹಾದ್ಜ್ ಎಂಬ ಇಬ್ಬರು ನಾಯಕರನ್ನು ಬಿಡುಗಡೆ ಮಾಡುವ ಬೇಡಿಕೆ ಇಟ್ಟರು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

Image courtesy

ಫ್ರಾನ್ಸ್ ಏರ್ ಲೈನ್ಸ್ ಫ್ಲ್ರೈಟ್ 8969

ಫ್ರಾನ್ಸ್ ಏರ್ ಲೈನ್ಸ್ ಫ್ಲ್ರೈಟ್ 8969

ಈ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ ಎಂದು ಆಲ್ಜೀರಿಯಾ ಸರ್ಕಾರ ಉತ್ತರಿಸಿದಾಗ ಸಿಟ್ಟಿಗೆದ್ದ ಇವರು ಪ್ರಮಾಣಿಕರಲ್ಲಿ ಮೂವರನ್ನು ಕೊಲೆಗೈದು ಮುಂದಿನ ಕ್ರಮವಾಗಿ ಪ್ಯಾರಿಸ್ಸಿನ ಐಫೆಲ್ ಗೋಪುರವನ್ನು ಈ ವಿಮಾನವನ್ನು ಢಿಕ್ಕಿ ಹೊಡೆಸಿ ಸ್ಪೋಟಿಸುತ್ತೇವೆ ಎಂದು ಬೆದರಿಸಿದರು. ಇದೇ ದ್ವಂದ್ವದಲ್ಲಿ ಆತಂಕದ ಮೂರು ದಿನಗಳು ಕಳೆದವು. ಬಳಿಕ ಸೂಕ್ತ ಅವಕಾಶಕ್ಕಾಗಿ ಕಾಯುತ್ತಿದ್ದ special operation units of France, GIGN ನ ವಿಶೇಷ ಪಡೆಯ ಅಧಿಕಾರಿಗಳಿಗೆ ಒಂದು ಅವಕಾಶ ಸಿಕ್ಕಿ ವಿಮಾನದೊಳಗೆ ನುಗ್ಗಿ ನಾಲ್ವರೂ ಭಯೋತ್ಪಾದಕರನ್ನು ಹತ್ಯೆ ಮಾಡಲಾಯಿತು.

ಎಲ್ ಅಲ್ ಫ್ಲೈಟ್ 426

ಎಲ್ ಅಲ್ ಫ್ಲೈಟ್ 426

23ನೇ ಜುಲೈ 1968ರಂದು ಲಂಡನ್ನಿನ ಹೀಥ್ರೋ ವಿಮಾನ ನಿಲ್ದಾಣದಿಂದ ಇಸ್ರೇಲ್ ರಾಷ್ಟ್ರದ ಲಾಡ್ ವಿಮಾನ ನಿಲ್ದಾಣ (ಇಂದಿನ ಬೆನ್ ಗುರಿಯಾನ್) ಕ್ಕೆ ಹೊರಟಿತ್ತು. ಮಾರ್ಗಮಧ್ಯೆ ಇಟಲಿಯ ರೋಂ ನಗರದಲ್ಲಿ ಇಳಿದು ಇಂಧನ ತುಂಬಿ ಮತ್ತೆ ಹೊರಡಬೇಕಿತ್ತು. ಆದರೆ ಈ ವಿಮಾನ ಹೊರಟ ಕೂಡಲೇ ಪ್ರಯಾಣಿಕರ ಸೋಗಿನಲಿಲ್ ಆಗಮಿಸಿದ್ದ popular front for the liberation of Palestine group (PFLP) ಎಂಬ ಸಂಘಟನೆಗೆ ಸೇರಿದ್ದ ಮೂವರು ಭಯೋತ್ಪಾದಕರು ಈ ವಿಮಾನವನ್ನು ಆಲ್ಜೀರಿಯಾದ ಆಲ್ಜಿಯರ್ಸ್ ನಗರಕ್ಕೆ ವಿಮಾನವನ್ನು ಬಲವಂತವಾಗಿ ಕೊಂಡೊಯ್ದರು. ಇವರಲ್ಲಿ ಪಿಸ್ತೂಲು ಮತ್ತು ಕೈಬಾಂಬುಗಳಿದ್ದು ಇವರಲ್ಲೊಬ್ಬ ಪೈಲಟ್, ಒರ್ವ ಸೇನಾ ಕರ್ನಲ್ ಮತ್ತೊಬ್ಬ ಕರಾಟೆ ಶಿಕ್ಷಕರಾಗಿದ್ದರು. ಇವರು ವಿಮಾನದಲ್ಲಿದ್ದ ಇಸ್ರೇಲ್ ಪ್ರಜೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ನಾಗರಿಕರನ್ನು ಬಿಡುಗಡೆ ಮಾಡಿದರು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ...

ಎಲ್ ಅಲ್ ಫ್ಲೈಟ್ 426

ಎಲ್ ಅಲ್ ಫ್ಲೈಟ್ 426

ಹತ್ತು ದಿನಗಳ ಬಳಿಕ ಇವರಲ್ಲಿ ಹತ್ತು ಮಹಿಳೆಯರನ್ನು ಮತ್ತು ಮಕ್ಕಳನ್ನು ಬಿಡುಗಡೆ ಮಾಡಲಾಯಿತು. ಇತರ ಇಸ್ರೇಲ್ ಪ್ರಜೆಗಳ ಬಿಡುಗಡೆಗೆ ಇಸ್ರೇಲ್ ಸರ್ಕಾರ ಬಂಧಿಸಿರುವ ಹದಿನಾರು ಅರಬ್ ನಾಯಕರ ಬಿಡುಗಡೆ ಮಾಡಬೇಕು ಎಂಬುದು ಇವರ ಬೇಡಿಕೆಯಾಗಿತ್ತು. ಇದೇ ಕೊಡುಕೊಳ್ಳುವ ವಿಚಾರದಲ್ಲಿ ಆತಂಕದ ಸುಮಾರು ನಲವತ್ತು ದಿನಗಳು ಕಳೆದವು. ಕಡೆಗೂ ಒತ್ತಡಕ್ಕೆ ಮಣಿದ ಇಸ್ರೇಲ್ ಸರ್ಕಾರ ಪ್ರತಿ ಬಂಧಿತ ನಾಯಕರ ಬದಲಿಗೆ ಇಷ್ಟು ಪ್ರಯಾಣಿಕರು ಎಂಬ ಲೆಕ್ಕಾಚಾರದಲ್ಲಿ ಹದಿನಾರು ನಾಯಕರನ್ನು ಬಿಡುಗಡೆ ಮಾಡಿ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರತಂದಿತು. ವಿಮಾನ ಅಪಹರಣದ ಇತಿಹಾಸದಲ್ಲಿಯೇ ಅತಿ ಹೆಚ್ಚಿನ ಕಾಲ ಆತಂಕ ಮೂಡಿಸಿದ್ದ ಪ್ರಕರಣ ಎಂದು ಈ ಪ್ರಕರಣ ದಾಖಲಾಗಿದೆ.

ಇರಾಕಿ ಎರ್‍ ವೇಸ್ ಫ್ಲೈಟ್ 163

ಇರಾಕಿ ಎರ್‍ ವೇಸ್ ಫ್ಲೈಟ್ 163

25ನೇ ಡಿಸೆಂಬರ್ 1986ರಂದು ಇರಾಕ್ ನ ಬಗ್ದಾದ್ ನಗರದಿಂದ ಜೋರ್ಡಾನ್ ನ ಅಮ್ಮಾನ್ ನಗರಕ್ಕೆ ಹೊರಟಿದ್ದ ಬೋಯಿಂಗ್ 737 ವಿಮಾನವೊಂದನ್ನು ಆಗಸಮಾರ್ಗದಲ್ಲಿದ್ದಾಗ ಅಪಹರಿಸಲಾಯಿತು. ಒಟ್ಟು ನಾಲ್ವರು ಅಪಹರಣಕಾರರು ಕೈಬಾಂಬುಗಳನ್ನು ಹೊಂದಿದ್ದರು. ವಿಮಾನದ ಸಿಬ್ಬಂದಿ ಪರಿಸ್ಥಿತಿಯನ್ನು ತಮ್ಮ ಸಾಮರ್ಥ್ಯದಲ್ಲಿಯೇ ನಿಭಾಯಿಸಲು ಯತ್ನಿಸಿದ ಪರಿಣಾಮವಾಗಿ ಸಿಟ್ಟಿಗೆದ್ದ ಅಪಹರಣಕಾರರು ಪ್ರಯಾಣಿಕರು ಕುಳಿತಿದ್ದಲ್ಲಿ ಒಂದು ಕೈಬಾಂಬನ್ನು ಸ್ಪೋಟಿಸಿ ತುರ್ತು ಭೂಸ್ಪರ್ಶಕ್ಕೆ ಬಲವಂತ ಮಾಡಿದರು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

Image courtesy

ಇರಾಕಿ ಎರ್‍ ವೇಸ್ ಫ್ಲೈಟ್ 163

ಇರಾಕಿ ಎರ್‍ ವೇಸ್ ಫ್ಲೈಟ್ 163

ಇದೇ ವೇಳೆ ಇನ್ನೊಬ್ಬ ಅಪಹರಣಕಾರ ವಿಮಾನದ ಕಾಕ್ ಪಿಟ್ ನಲ್ಲಿಯೇ ಇನ್ನೊಂದು ಕೈಬಾಂಬ್ ಸ್ಫೋಟಿಸಿದ ಪರಿಣಾಮವಾಗಿ ವಿಮಾನದ ನಿಯಂತ್ರಣ ಕಳೆದುಕೊಂಡು ಸೌದಿ ಅರೇಬಿಯಾದ ಆರಾರ್ ಎಂಬಲ್ಲಿ ವಿಮಾನ ಅಪಘಾತಕ್ಕೀಡಾಯಿತು. ಬಿದ್ದ ರಭಸಕ್ಕೆ ಎರಡು ತುಂಡಾದ ವಿಮಾನಕ್ಕೆ ತಕ್ಷಣ ಬೆಂಕಿ ಹೊತ್ತಿಕೊಂಡಿತು. ವಿಮಾನದಲ್ಲಿ 91 ಪ್ರಯಾಣಿಕರೊಂದಿಗೆ ಹದಿನೈದು ಸಿಬ್ಬಂದಿ ವರ್ಗ ಇದ್ದು ಇವರಲ್ಲಿ 63 ಜನರು ಅಪಘಾತದಲ್ಲಿ ಪ್ರಾಣ ಕಳೆದುಕೊಂಡರು.

ಇಂಡಿಯನ್ ಏರ್‍ ಲೈನ್ಸ್ ಫ್ಲೈಟ್ 814

ಇಂಡಿಯನ್ ಏರ್‍ ಲೈನ್ಸ್ ಫ್ಲೈಟ್ 814

24ರ ಡಿಸೆಂಬರ್ 1999ರಂದು ನೇಪಾಳದ ಕಾಠ್ಮಂಡು ನಗರದಿಂದ ಭಾರತದ ನವದೆಹಲಿಗೆ 176ರಂದು ಹೊರಟಿದ್ದ ವಿಮಾನವನ್ನು ಹರ್ಕತುಲ್ ಮುಜಾಹಿದೀನ್ ಎಂಬ ಭಯೋತ್ಪಾದಕ ಸಂಘಟನೆಗೆ ಸೇರಿದ ಭಯೋತ್ಪಾದಕರು ವಿಮಾನ ಮೇಲೇರಿದ ಕೆಲವೇ ಸಮಯದಲ್ಲಿ ಅಪಹರಿಸಿದರು. ಇವರು ವಿಮಾನವನ್ನು ತಮ್ಮ ಮನಸ್ಸಿಗೆ ತೋಚಿದಂತೆ ಮಾರ್ಗ ಬದಲಿಸಲು ಪೈಲಟ್ ರಿಗೆ ಬಲವಂತ ಮಾಡಿದ್ದರು. ಪರಿಣಾಮವಾಗಿ ಅಮೃತಸರ, ಲಾಹೋರ್, ದುಬೈ ನಗರಗಳಲ್ಲಿ ಇಳಿದು ಮತ್ತೆ ಹಾರಿ ಕಡೆಗೆ ಅಫ್ಟಾನಿಸ್ತಾನದ ಕಂದಹಾರ್ ನಗರದಲ್ಲಿ ಇಳಿಯುವಂತೆ ಮಾಡಿದರು. ದುಬೈಯಲ್ಲಿ 27 ಪ್ರಯಾಣಿಕರನ್ನು ಬಿಡುಗಡೆ ಮಾಡಿದರು. ಆದರೆ ದುಬೈಗೆ ಬರುವ ಮುನ್ನ ನಡೆದ ಚಕಮಕಿಯಲ್ಲಿ ರೂಪನ್ ಕತ್ಯಾಲ್ ಎಂಬ ಭಾರತೀಯ ಪ್ರಯಾಣಿಕರೊಬ್ಬರಿಗೆ ಚೂರಿ ಇರಿತದ ಗಾಯವಾಗಿ ಸೂಕ್ತ ಆರೈಕೆ ಸಿಗದೇ ಸಾವು ಸಂಭವಿಸಿತು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

Image courtesy

ಇಂಡಿಯನ್ ಏರ್‍ ಲೈನ್ಸ್ ಫ್ಲೈಟ್ 814

ಇಂಡಿಯನ್ ಏರ್‍ ಲೈನ್ಸ್ ಫ್ಲೈಟ್ 814

ಕೆಲವು ಇತರ ಪ್ರಯಾಣಿಕರಿಗೂ ಗಾಯಗಳಾದವು. ಇಷ್ಟು ಹೊತ್ತಿನವರೆಗೂ ಯಾವುದೇ ಬೇಡಿಕೆ ಇಡದಿದ್ದ ಇವರು ಕಂದಹಾರ್ ನಲ್ಲಿ ಇಳಿದ ಬಳಿಕವೇ 9/11ರ ಧಾಳಿಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಪಾಕಿಸ್ತಾನದ ನಾಯಕರ ಬಿಡುಗಡೆಯ ಬೇಡಿಕೆ ಇಟ್ಟರು. ಸುಮಾರು ಏಳು ದಿನಗಳ ಕಾಲ ಅಪಹರಣಕಾರರು ಭಾರತದ ಸರ್ಕಾರವನ್ನು ಮೂವರು ಭಯೋತ್ಪಾದಕರಾದ ಮುಷ್ತಾಖ್ ಅಹ್ಮದ್ ಜರ್ಗಾರ್, ಅಹ್ಮದ್ ಒಮರ್ ಸಯೀದ್ ಶೇಖ್ ಮತ್ತು ಮೌಲಾನಾ ಮಸೂದ್ ಅಜಹರ್ ಎಂಬುವರ ಬಿಡುಗಡೆಗೆ ಆಗ್ರಹಿಸಿತು. ಬೇರೆ ನಿರ್ವಾಹವಿಲ್ಲದೇ ಭಾರತ ಸರ್ಕಾರ ಈ ಮೂವರು ಭಯೋತ್ಪಾದಕರನ್ನು ಬಿಡುಗಡೆ ಮಾಡಿ ಎಲ್ಲಾ ಪ್ರಯಾಣಿಕರನ್ನು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಪಡೆದುಕೊಂಡಿತು.

Image courtesy

9/11 ಧಾಳಿ....

9/11 ಧಾಳಿ....

ಚುಟುಕಾಗಿ 9/11 ಧಾಳಿ ಎಂದೇ ಇತಿಹಾಸದಲ್ಲಿ ದಾಖಲಿಸಲ್ಪಟ್ಟಿರುವ ಈ ಪ್ರಕರಣ ವಿಶ್ವದ ಅತಿ ದೊಡ್ಡ ಭಯೋತ್ಪಾದಕಾ ಕೃತ್ಯವಾಗಿದೆ. ನಾಲ್ಕು ಪ್ರಯಾಣಿಕಾ ಸೇವಾ ವಿಮಾನಗಳಾದ ಯುನೈಟೆಡ್ ಏರ್‍ ಲೈನ್ ಫ್ಲೈಟ್ 175 ಮತ್ತು 93, ಅಮೇರಿಕನ್ ಏರ್‍ ಲೈನ್ ಫ್ಲೈಟ್ 11 ಮತ್ತು 77 ಗಳನ್ನು ಒಟ್ಟು ಹತ್ತೊಂಭತ್ತು ಅಲ್ ಖೈದಾ ಭಯೋತ್ಪಾದನಾ ಸಂಘಟನೆಯ ಉಗ್ರರು 11ನೇ ಸೆಪ್ಟೆಂಬರ್ 2001 ರಂದು ಅಪಹರಿಸಿದ್ದರು. ಇವುಗಳಲ್ಲಿ ಎರಡು ಅಂದರೆ ಯುನೈಟೆಡ್ ಏರ್‍ ಲೈನ್ ಫ್ಲೈಟ್ 175 ಅಮೇರಿಕನ್ ಏರ್‍ ಲೈನ್ ಫ್ಲೈಟ್ 11 ಗಳನ್ನು ಟ್ವಿನ್ ಟವರ್ಸ್ ಎಂದೇ ಪ್ರಖ್ಯಾತವಾಗಿದ್ದ ವರ್ಲ್ಡ್ ಟ್ರೇಡ್ ಸೆಂಟರ್ ಕಟ್ಟಡಗಳಿಗೆ ನೇರವಾಗಿ ಢಿಕ್ಕಿ ಹೊಡೆಯುವಂತೆ ಹಾರಿಸಲಾಯಿತು.

9/11 ಧಾಳಿ....

9/11 ಧಾಳಿ....

ಮೂರನೆಯ ವಿಮಾನ ಅಮೇರಿಕನ್ ಏರ್‍ ಲೈನ್ ಫ್ಲೈಟ್ 77 ಅನ್ನು ಅಮೇರಿಕಾದ ರಕ್ಷಣಾ ವ್ಯವಸ್ಥೆಯ ಕೇಂದ್ರ ಕಟ್ಟಡವಾದ ಪೆಂಟಗನ್ ಮೇಲೆ ಬೀಳುವಂತೆ ಹಾರಿಸಲಾಯಿತು. ನಾಲ್ಕನೆಯ ವಿಮಾನ ಯುನೈಟೆಡ್ ಏರ್‍ ಲೈನ್ ಫ್ಲೈಟ್ 93 ವಾಷಿಂಗ್ಟನ್ ಡಿ.ಸಿ. ನಗರದ ಮೇಲೆ ಬೀಳುವಂತೆ ಏರ್ಪಾಡು ಮಾಡಲಾಗಿತ್ತಾದರೂ ನಗರಕ್ಕೆ ಅನತಿದೂರದಲ್ಲಿರುವ ಗದ್ದೆಯೊಂದರಲ್ಲಿ

ಅಪಘಾತಕ್ಕೀಡಾಯಿತು. ಈ ಎಲ್ಲಾ ಧಾಳಿಗಳಲ್ಲಿ ಟ್ವಿನ್ ಟವರ್ ಕಟ್ಟಡಗಳು ಅತಿ ಹೆಚ್ಚಿನ ಹಾನಿಗೊಳಗಾಗಿ ಕಟ್ಟಡ ನೇರವಾಗಿ ಕುಸಿದ ಪರಿಣಾಮವಾಗಿ 19 ಅಪಹರಣಕಾರರ ಸಹಿತ ಒಟ್ಟು 2996 ಜನರು ಮೃತಪಟ್ಟರು. ಆರು ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡರು. ಹತ್ತು ಬಿಲಿಯನ್ ಗೂ ಹೆಚ್ಚಿನ ಸೊತ್ತು ನಷ್ಟಗೊಂಡಿತು.

English summary

Most Terrifying Airplane Hijackings of All Time

Although flying the friendly skies is statistically the safest way to travel, the feeling of helplessness that comes when there’s any hint of danger is quite unsettling. Most frequent flyers have been on planes that encountered at least moderate turbulence, for example, and despite the fact that it’s not as dangerous as, say, an engine malfunction, most people can’t help but brace themselves for the worst possible outcome..
X
Desktop Bottom Promotion