For Quick Alerts
ALLOW NOTIFICATIONS  
For Daily Alerts

ಈ ದೇಶಗಳಲ್ಲಿ ಮಹಿಳೆಯರಿಗೆ ನಯಾ ಪೈಸೆಯ ಮರ್ಯಾದಿ ಇಲ್ಲ!

|

ಮಹಿಳೆಯರಿಗೆ ಸಮಾನ ಹಕ್ಕುಗಳು ಸಿಗಬೇಕು ಎಂದು ಮೆರವಣಿಗೆ ಪ್ರತಿಭಟನೆಗಳು ಆಗಾಗ ನಡೆಯುತ್ತಿದ್ದರೂ ಇನ್ನೂ ಸಮಾನತೆ ಎಂಬುದು ಭಾರತದಲ್ಲಿ ಪೂರ್ಣಪ್ರಮಾಣದಲ್ಲಿ ಪ್ರಾಪ್ತವಾಗಿಲ್ಲ. ಭಾರತದ ಮಟ್ಟಿಗೆ ಹೇಳುವುದಾದರೆ ಇತ್ತೀಚಿನ ಅತ್ಯಾಚಾರ ಪ್ರಕರಣಗಳು ಭಾರತವನ್ನೂ ಅಪಾಯಕರ ಪಟ್ಟಿಯಲ್ಲಿ ತಂದಿರಿಸಿವೆ. ಅತ್ಯಾಚಾರ ಪ್ರಕರಣ ಹೆಚ್ಚಾಗಿರುವ ವಿಶ್ವದ ಪ್ರತಿಷ್ಠಿತ ರಾಷ್ಟ್ರಗಳು

ಜಗತ್ತಿನಲ್ಲಿ ಎಷ್ಟೋ ರಾಷ್ಟ್ರಗಳು ಅಭಿವೃದ್ಧಿಯ ಪಥದಲ್ಲಿ ಎಷ್ಟು ಮುಂದೆ ಸಾಗಿದ್ದರೂ ಮಹಿಳೆಯರ ಸುರಕ್ಷತೆಯ ವಿಷಯದಲ್ಲಿ ಅತೀವ ಹಿಂದುಳಿದಿವೆ. ಅಂದರೆ ಈ ದೇಶಗಳ ಮಹಿಳೆಯರು ಸದಾ ಆತಂಕ, ಭಯದಲ್ಲಿಯೇ ಕಾಲ ಕಳೆಯುತ್ತಾರೆ.

ಇಂದಿನ ಲೇಖನದಲ್ಲಿ ಇಂತಹ ಕೆಲವು ರಾಷ್ಟ್ರಗಳ ಬಗ್ಗೆ ಕೆಲವು ಮಾಹಿತಿಗಳನ್ನು ನೀಡಲಾಗಿದ್ದು ಈ ದೇಶಗಳು ಮಹಿಳೆಯರ ಮಟ್ಟಿಗೆ ಸುರಕ್ಷಿತರಲ್ಲ ಎಂಬ ಕಾರಣದಿಂದ ಇಲ್ಲಿಗೆ ಹೋಗದೇ ಇರಲು ಪ್ರೋತ್ಸಾಹಿಸುತ್ತಿವೆ. ಅಷ್ಟೇ ಅಲ್ಲ, ಕೆಲವು ರಾಷ್ಟ್ರಗಳಲ್ಲಿ ಅಮಾನವೀಯ ಮತ್ತು ಕ್ರೂರ ವಿಧಾನಗಳನ್ನು ಇನ್ನೂ ಅನುಸರಿಸಲಾಗುತ್ತಿದ್ದು ಕೆಲವು ಚಿತ್ರಗಳು ಓದುಗರ ಚಿತ್ತಸ್ವಾಸ್ಥ್ಯವನ್ನು ಕದಡಬಹುದು. ಈ ರಾಷ್ಟ್ರಗಳಲ್ಲಿ ಅತ್ಯಾಚಾರಿಗಳಿಗೆ ನೀಡುವ ಶಿಕ್ಷೆ ಹೇಗಿರುತ್ತೆ ನೋಡಿ

ಅಫ್ಘಾನಿಸ್ಥಾನ

ಅಫ್ಘಾನಿಸ್ಥಾನ

ಮಹಿಳೆಯರಿಗೆ ಅತ್ಯಂತ ಅಪಾಯಕರ ರಾಷ್ಟ್ರಗಳ ಪಟ್ಟಿಯಲ್ಲಿ ಅಫ್ಘಾನಿಸ್ಥಾನ ಮೊದಲ ಸ್ಥಾನದಲ್ಲಿದೆ. ಇಲ್ಲಿ ಮಹಿಳೆಯರನ್ನು ಕೀಳಾಗಿ ನಡೆಸುಕೊಳ್ಳುವುದು ಮಾತ್ರವಲ್ಲ, ಇಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣಕ್ಕೂ ಅವಕಾಶವಿಲ್ಲದಾಗಿದೆ.

ಅಫ್ಘಾನಿಸ್ಥಾನ

ಅಫ್ಘಾನಿಸ್ಥಾನ

ಮಹಿಳೆಯರು ಕೇವಲ ಮನೆಗೆಲಸ ಮತ್ತು ಮಕ್ಕಳ ಲಾಲನೆ ಪಾಲನೆಯಲ್ಲಿಯೇ ತೊಡಗಿರಬೇಕೇ ವಿನಃ ಸ್ವತಂತ್ರರಾಗಿ ಏನನ್ನೂ ಮಾಡಲು ಅವಕಾಶವಿಲ್ಲ. ಪ್ರತಿಯೊಂದಕ್ಕೂ ತಮ್ಮ ಪತಿ ಅಥವಾ ತಂದೆಯನ್ನೇ ಅವಲಂಬಿಸಬೇಕಾಗುತ್ತದೆ. ಒಂದರ್ಥದಲ್ಲಿ ಇವರು ತಮ್ಮ ಮನೆಯಲ್ಲಿಯೇ ಗುಲಾಮರಾಗಿ ಜೀವನ ನಡೆಸುತ್ತಾರೆ.

ಭಾರತ

ಭಾರತ

ಇತ್ತೀಚಿನವರೆಗೂ ಮಹಿಳೆಯರಿಗೆ ಸುರಕ್ಷಿತವಾಗಿದ್ದ ಭಾರತ ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿರುವ ಅಥವಾ ಹಿಂದೆಯೂ ನಡೆಯುತ್ತಿದ್ದರೂ ಬೆಳಕಿಗೆ ಬಾರದೇ ಇದ್ದ ಅತ್ಯಾಚಾರ, ಅಪಹರಣ ಮೊದಲಾದ ಕಾರಣಗಳಿಂದ ಮಹಿಳೆಯರು ಸುರಕ್ಷಿತರಲ್ಲದ ದೇಶ ಎಂಬ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆಯಲು ಕಾರಣವಾಗಿದೆ. ದಿನ ನಿತ್ಯದ ಅತ್ಯಾಚಾರದ ಹೊರತಾಗಿ ಕಳೆದ ವರ್ಷದಲ್ಲಿ ಸುಮಾರು ಐದು ಕೋಟಿ ಹೆಣ್ಣು ಭ್ರೂಣಗಳ ಹತ್ಯೆಯಾಗಿರುವ ವಿಷಯ ಆತಂಕಕಾರಿಯಾಗಿದೆ.

ಸೋಮಾಲಿಯಾ

ಸೋಮಾಲಿಯಾ

ಕಡಲ್ಗಳ್ಳರ ತಾಣವಾಗಿರುವ ಸೋಮಾಲಿಯಾದಲ್ಲಿ ಸಶಕ್ತವಾದ ಕಾನೂನು ವ್ಯವಸ್ಥೆಯೇ ಇಲ್ಲ. ಅಲ್ಲದೇ ಇಲ್ಲಿ ಹೆಣ್ಣು ಮಕ್ಕಳಿಗೂ ಸುನ್ನತಿ ಮಾಡುವ ಕ್ರಮವಿದ್ದು 95 %ರಷ್ಟು ಹೆಣ್ಣು ಮಕ್ಕಳು 4 ರಿಂದ 11 ವರ್ಷದವರಿದ್ದಾಗಲೇ ಸುನ್ನತಿ ಮಾಡಲಾಗುತ್ತದೆ.

ಸೋಮಾಲಿಯಾ

ಸೋಮಾಲಿಯಾ

ಇದರ ಹೊರತಾಗಿ ಮಹಿಳೆಯರ ಮೇಲೆ ಅತ್ಯಾಚಾರ, ಬಾಲ್ಯ ವಿವಾಹ ಪದ್ದತಿಗಳೂ ಇನ್ನೂ ಜೀವಂತವಾಗಿವೆ. ಶಿಶುಮರಣದ ಪ್ರಮಾಣವೂ ಅತಿ ಹೆಚ್ಚಾಗಿದ್ದು ಮಹಿಳೆಯರಿಗೆ ಇದು ಅತಿ ಅಸುರಕ್ಷಿತ ದೇಶವಾಗಿದೆ.

ಕೊಲಂಬಿಯಾ

ಕೊಲಂಬಿಯಾ

ಇತ್ತೀಚಿನ ವರದಿಯ ಪ್ರಕಾರ ವಿಶ್ವದಲ್ಲಿ ಲಿಂಗಾಧಾರಿತ ಹಿಂಸಾಕೃತ್ಯಗಳು ಈ ದೇಶದಲ್ಲಿ ಅತಿ ಹೆಚ್ಚಾಗಿ ನಡೆದಿವೆ. ಅಂದರೆ ಮಹಿಳೆಯರ ಮೇಲೆ ಆಮ್ಲ ಎರಚುವುದು, ಮನೆಯಲ್ಲಿರುವ ಮಹಿಳೆಯರ ಮೇಲೆ ಅನಾಚಾರ ಮೊದಲಾದವು ಈ ದೇಶದಲ್ಲಿ ಅತಿ ಹೆಚ್ಚು.

ಕೊಲಂಬಿಯಾ

ಕೊಲಂಬಿಯಾ

ಎಲ್ಲಕ್ಕಿಂತ ಹೀನವಾದ ಸಂಗತಿ ಎಂದರೆ ಆಮ್ಲ ಎರಚಿ ಪರಾರಿಯಾದ ವ್ಯಕ್ತಿಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದು. ಇದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ.

ಈಜಿಪ್ಟ್

ಈಜಿಪ್ಟ್

ಈಜಿಪ್ಟ್ ದೇಶದ ಕಾನೂನು ವ್ಯವಸ್ಥೆಯಲ್ಲಿ ಮಹಿಳೆಯರ ರಕ್ಷಣೆಗಾಗಿ ಯಾವುದೇ ಸೂಕ್ತ ವಿಧಿಯೇ ಇಲ್ಲದಿರುವುದು ದೊಡ್ಡ ಕೊರತೆಯಾಗಿದ್ದು ಮಹಿಳೆಯರಿಗೆ ಯಾವುದೇ ಹಕ್ಕುಗಳೇ ಇಲ್ಲ.

ಈಜಿಪ್ಟ್

ಈಜಿಪ್ಟ್

ಇಲ್ಲಿನ ಮಹಿಳೆಯರು ತಮ್ಮ ಇಷ್ಟದ ವ್ಯಕ್ತಿಯನ್ನು ಮದುವೆಯಾಗುವ, ಇಷ್ಟವಿಲ್ಲದ ಪುರುಷನಿಂದ ಬಿಡುಗಡೆ ಪಡೆಯುವ, ಮಗುವಿನ ಒಡೆತನ ಪಡೆಯುವ ಅಥವಾ ತನ್ನ ಸ್ವಂತದ ನಿರ್ಣಯಗಳನ್ನು ಪಡೆಯುವ ಯಾವುದೇ ಹಕ್ಕನ್ನು ಪಡೆಯಲು ಸಾಧ್ಯವಿಲ್ಲ.

ಮೆಕ್ಸಿಕೋ

ಮೆಕ್ಸಿಕೋ

ಮೆಕ್ಸಿಕೋ ದೇಶದ ಕಾನೂನು ವ್ಯವಸ್ಥೆಯಲ್ಲಿಯೂ ಮಹಿಳೆಯರಿಗಾಗಿ ವಿಶೇಷವಾದ ರಕ್ಷಣಾ ವ್ಯವಸ್ಥೆಯ ಕೊರತೆ ಇದೆ. ಇದರ ಪ್ರಯೋಜನವನ್ನು ಪಡೆದುಕೊಂಡ ಮೆಕ್ಸಿಕೋ ಪುರುಷರು ಮಹಿಳೆಯರ ಮೇಲೆ ಸತತವಾಗಿ ಆಕ್ರಮಣ ಎಸಗುತ್ತಲೇ ಇರುತ್ತಾರೆ.

ಮೆಕ್ಸಿಕೋ

ಮೆಕ್ಸಿಕೋ

ಶೋಷಣೆಗೊಳಗಾದ ಮಹಿಳೆಯರಲ್ಲಿ ಕೆಲವು ದಿಟ್ಟೆಯರು ಮಾತ್ರ ಹೊರಬಂದು ತಮ್ಮ ಮೇಲಾದ ಆಕ್ರಮಣದ ಬಗ್ಗೆ ದೂರು ಸಲ್ಲಿಸುತ್ತಾರೆ. ಆದರೆ ಯಥಾ ರಾಜಾ ತಥಾ ಪ್ರಜಾ ಎಂಬಂತೆ ಇವರ ಗೋಳನ್ನು ಆಲಿಸುವವರೇ ಇಲ್ಲವಾಗಿದ್ದಾರೆ. ಇದರಿಂದ ಅತ್ಯಾಚಾರಿಗಳಿಗೆ ಇನ್ನಷ್ಟು ಕುಮ್ಮಕ್ಕು ನೀಡಿದಂತಾಗುತ್ತದೆ.

English summary

Most Dangerous Countries Women Should Not Live In

Here in this article, we are about to share the list of countries that are just not safe for women. These are the most dangerous countries for women and follow some of the most disturbing and inhuman practices when it comes to treating women. Check the most unsafe countries for women in this world...
X
Desktop Bottom Promotion