For Quick Alerts
ALLOW NOTIFICATIONS  
For Daily Alerts

ಭಾರತದ ಶ್ರೀಮಂತ ಭಿಕ್ಷುಕರು!-ಅದೃಷ್ಟ ಅಂದರೆ ಹೀಗಿರಬೇಕು!

By manu
|

ಕಾಯಕವೇ ಕೈಲಾಸ ಎಂಬುದನ್ನು ಬೀಚಿಯವರು ಅತಿ ಸುಂದರವಾಗಿ ಕೈಸಾಲವೇ ಕೈಲಾಸ ಎಂದು ಬಣ್ಣಿಸಿದ್ದಾರೆ. ಸಂಬಳ ಬಂದ ದಿನ ಒಂದು ದಿನದ ರಾಜರಾಗುವ ನಾವು ತಿಂಗಳು ಕಳೆಯುತ್ತಾ ಬಂದಂತೆ ಅವರಿವರ ಹತ್ತಿರ ಕೈಸಾಲ ಪಡೆಯಬೇಕಾಗಿ ಬಂದರೆ ಈ ಹೊತ್ತಿನಲ್ಲಿ ನಾವು ಭಿಕ್ಷುಕರಾದ ಅನುಭವವಾಗುತ್ತದೆ. ಆದರೆ ಇತರರಲ್ಲಿ ಬೇಡಿ ತಿನ್ನುವುದನ್ನೇ ವೃತ್ತಿಯಾಗಿಸಿಕೊಂಡವರು ನಮ್ಮ ಸಮಾಜದಲ್ಲಿದ್ದಾರೆ. ಪಾಪ ಭಿಕ್ಷುಕ, ಊಟ ಮಾಡಿ ಎಷ್ಟು ದಿನವಾಯಿತೋ ಎಂಬ ಮರುಕದಿಂದ ನೀಡಿದ ಪುಡಿಗಾಸನ್ನು ಇಡಿಯ ದಿನ ಒಟ್ಟು ಮಾಡಿ ನೋಡಿದರೆ ಈ ಮೊತ್ತ ನೋಡಿ ದಿಗ್ಭ್ರಮೆಯಾಗುವುದು ಖಚಿತ.

ಎಷ್ಟೋ ನಗರಗಳಲ್ಲಿ ಈ ಭಿಕ್ಷಾಟನೆ ಒಂದು ಮಾಫಿಯಾವಾಗಿ ಬೆಳೆದಿದೆ. ಜನರ ಮರುಕ ಹುಟ್ಟುವ ಸಮಯ ಮತ್ತು ಸಂದರ್ಭಗಳನ್ನು ಅನುಸರಿಸಿ ಹೆಚ್ಚು ಹಣವನ್ನು ಒಟ್ಟುಗೂಡಿಸುವ ಬುದ್ದಿವಂತ ಭಿಕ್ಷುಕರೂ ನಮ್ಮ ನಡುವೆ ಇದ್ದಾರೆ. ಇವರು ಇದುವರೆಗೆ ಸಂಗ್ರಹಿಸಿದ ಹಣದ ಮೊತ್ತ ನೋಡಿದರೆ ಮಾತ್ರ ಬೆಚ್ಚಿಬೀಳುವುದು ಖಂಡಿತಾ. ನಿಜವಾಗಲೂ ಭಾರತ ಸಿಂಗಾಪುರ್ ನಂತೆ ಆಗಲು ಸಾಧ್ಯವೇ?

ಸಾಮಾನ್ಯವಾಗಿ ನಮ್ಮೆಲ್ಲರಲ್ಲಿ ಒಂದು ಗುಣವಿದೆ. ಅದೆಂದರೆ ನಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತಿದ್ದಂತೆಯೇ ನಮ್ಮ ವೃತ್ತಿ ಮತ್ತು ಜೀವನವನ್ನು ಅದಕ್ಕೆ ತಕ್ಕನಾಗಿ ಅಳವಡಿಸಿಕೊಳ್ಳುತ್ತಾ ಹೋಗುತ್ತೇವೆ. ಕೆಲವರು ಇದನ್ನು ಮೀರಿರುವುದೂ ಇದೆ. ಆದರೆ ಈ ಭಿಕ್ಷುಕರು ತಾವು ಸಂಗ್ರಹಿಸಿದ ಅಪಾರ ಧನ ಮತ್ತು ಆಸ್ತಿಗಳ ಹೊರತಾಗಿಯೂ ಭಿಕ್ಷಾಟನೆಯನ್ನೇ ಮುಂದುವರೆಸುವುದು ಮಾತ್ರ ವ್ಯಂಗ್ಯವಾಗಿದೆ. ಬನ್ನಿ, ಇಂತಹ ಶ್ರೀಮಂತ ಭಿಕ್ಷುಕರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ:

ಭರತ್ ಜೈನ್

ಭರತ್ ಜೈನ್

ಪ್ರಸ್ತುತ ಭಾರತದ ಅತ್ಯಂತ ಶ್ರೀಮಂತ ಭಿಕ್ಷುಕ ಎಂಬ ಹೆಗ್ಗಳಿಕೆ ಪಡೆದ ಭರತ್ ಜೈನ್ ಬಳಿ ಎರಡು ಫ್ಲ್ಯಾಟ್ ಗಳಿವೆ. ಇವುಗಳ ಒಟ್ಟು ಮೌಲ್ಯ 140ಲಕ್ಷ ರೂಪಾಯಿಗಳು. ಅಷ್ಟೇ ಅಲ್ಲ, ಈತನದ್ದೊಂದು ಜ್ಯೂಸ್ ಅಂಗಡಿಯೂ ಇದ್ದು ಪ್ರತಿತಿಂಗಳೂ ಕನಿಷ್ಠ ಹತ್ತು ಸಾವಿರ ರೂ ಆದಾಯವಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

Image courtesy

ಭರತ್ ಜೈನ್

ಭರತ್ ಜೈನ್

ಫ್ಯಾಟ್ ಬಾಡಿಗೆ ಹೊರತಾಗಿ ಈತ ಪ್ರತಿತಿಂಗಳೂ ಭಿಕ್ಷೆಯಿಂದ ಸಂಗ್ರಹಿಸುವ ಮೊತ್ತವೇ ಅರವತ್ತು ಸಾವಿರ ರೂ. ಈ ಮಾಹಿತಿಯನ್ನು ಅರಗಿಸಿಕೊಳ್ಳಲು ಒಂದು ಲೋಟ ನೀರು ಬೇಕಾಗಬಹುದು.!!

Image courtesy

ಸರ್ವಾತಿಯಾ ದೇವಿ

ಸರ್ವಾತಿಯಾ ದೇವಿ

ಪಾಟ್ನಾ ನಗರದ ಅತ್ಯಂತ ಜನಪ್ರಿಯ ಶ್ರೀಮಂತ ಭಿಕ್ಷುಕಿ ಎಂದರೆ ಸರ್ವಾತಿಯಾ ದೇವಿ. ಈಕೆ ಪ್ರತಿದಿನ ಪಾಟ್ನಾದ ರೈಲಿನಲ್ಲಿ ತಿರುಗುತ್ತಾ (ಟಿಕೆಟ್ ಇಲ್ಲದೇ) ಭಿಕ್ಷೆ ಬೇಡುತ್ತಾಳೆ. ಎಷ್ಟು ಕಮಾಯಿ ಆಗುತ್ತದೆ ಎಂದು ಯಾರಿಗೂ ಗೊತ್ತಿಲ್ಲ, ಆದರೆ ಈಕೆ ತನ್ನ ಮೇಲೆ ಇಳಿಸಿರುವ ವಿಮೆಯ ಪ್ರೀಮಿಯಂ ವಾರ್ಷಿಕ 36,000 ರೂ. ಕಟ್ಟುತ್ತಾಳೆ. ಹಾಗಾದರೆ ವಾರ್ಷಿಕ ಕಮಾಯಿ ಎಷ್ಟು ಆಗಬಹುದೆಂಬ ಲೆಕ್ಕ ಮಾಡುವ ಆಯ್ಕೆ ನಿಮ್ಮದು. ಅಂದ ಹಾಗೆ ನಮ್ಮಲ್ಲಿ ಎಷ್ಟು ಜನ ಈಕೆಗಿಂತಲೂ ಹೆಚ್ಚು ಪ್ರೀಮಿಯಂ ಕಟ್ಟುತ್ತೇವೆ?

Image courtesy

ಕೃಷ್ಣಕುಮಾರ್ ಗೀತೆ

ಕೃಷ್ಣಕುಮಾರ್ ಗೀತೆ

ಮುಂಬೈಯ ಈ ಭಿಕ್ಷುಕ ಐದು ಲಕ್ಷ ರೂ ಮೌಲ್ಯದ ಫ್ಲಾಟ್ ಒಂದರ ಒಡೆಯ. ಮುಂಬೈಯಲ್ಲಿ ಬಾಡಿಗೆಗೇ ಫ್ಲ್ಯಾಟ್ ದೊರಕುವುದು ದುಸ್ತರವಾಗಿರುವಾಗ ಈತ ಐದು ಲಕ್ಷದ ಫ್ಲ್ಯಾಟ್ ಖರೀದಿಸಿರಬಹುದಾದರೆ ಈತನ ಬಳಿ ಇನ್ನೆಷ್ಟು ಹಣ ಇರಬಹುದು? ಯಾರಿಗೂ ಗೊತ್ತಿಲ್ಲ.

Image courtesy

ಸಂಭಾಜಿ ಕಾಳೆ

ಸಂಭಾಜಿ ಕಾಳೆ

ಇತ್ತೀಚಿನವರೆಗೂ ಈತನೇ ಭಾರತದ ಶ್ರೀಮಂತ ಭಿಕ್ಷುಕನಾಗಿದ್ದ. ಈತ ಸೋಲಾಪುರದಲ್ಲಿರುವ ಒಂದು ಫ್ಲ್ಯಾಟ್, ಎರಡು ಒಂಟಿ ಮನೆ ಮತ್ತು ಕೊಂಚ ಜಮೀನಿನ ಒಡೆಯನಾಗಿದ್ದಾನೆ.

Image courtesy

ಸಂಭಾಜಿ ಕಾಳೆ

ಸಂಭಾಜಿ ಕಾಳೆ

ಅಷ್ಟೇ ಅಲ್ಲ, ಹಲವಾರು ಬ್ಯಾಂಕುಗಳಲ್ಲಿ ಲಕ್ಷಾಂತರ ರೂ. ಹೂಡಿದ್ದಾನೆಂತೆ, ಹಾಗಾದರೆ ನೀವೇ ಊಹಿಸಿ,ಭಿಕ್ಷಾಟನೆ ಎಷ್ಟು ದೊಡ್ಡ ಬ್ಯುಸಿನೆಸ್ ಆಗಿ ಬಿಟ್ಟಿದೆ ಅಂತ!

Image courtesy

ಲಕ್ಷ್ಮೀ ದಾಸ್

ಲಕ್ಷ್ಮೀ ದಾಸ್

ತನ್ನ ಹದಿನಾರನೇ ವಯಸ್ಸಿನಲ್ಲಿ ಭಿಕ್ಷಾಟನೆಗೆ ತೊಡಗಿದ ಅಂಗವಿಕಲೆಯಾದ ಈಕೆ ತನ್ನ ಗಳಿಕೆಯನ್ನೆಲ್ಲಾ ಉಳಿಸಿ ಕನಿಷ್ಠ ಖರ್ಚಿನಲ್ಲಿ ಮುಂದಿನ ಐವತ್ತು ವರ್ಷ ಕಳೆದಳು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

Image courtesy

ಲಕ್ಷ್ಮೀ ದಾಸ್

ಲಕ್ಷ್ಮೀ ದಾಸ್

ಈಗ ಹೀಗೇ ಸಂಗ್ರಹವಾದ ಹಣದ ಚಿಲ್ಲರೆಯೇ ಒಟ್ಟು ತೊಂಬತ್ತೊಂದು ಕೇಜಿ ತೂಗುತ್ತಿತ್ತು. ಭರ್ತಿ ಅರ್ಧ ದಿನ ವ್ಯಯಿಸಿ ಎಣಿಸಿದ ಬ್ಯಾಂಕ್ ಸಿಬ್ಬಂದಿ ಈ ಮೊತ್ತವನ್ನು ಆಕೆಯ ಖಾತೆಗೆ ಜಮಾ ಮಾಡಿದರು ಇದು ಸುಮಾರು ಮೂವತ್ತು ಸಾವಿರ ರೂ. ಇರಬಹುದೆಂದು ಒಂದು ಅಂದಾಜು.

Image courtesy

English summary

List Of Richest Beggars In India

When we are running short of money or are going through a rough financial condition, we often feel like beggars. But, do you know there are certain rich beggars out there who own quite a good amount of money? Yes, though it sounds crazy, there are many of them! Here, in this article, we've shared the list of richest beggars in India. These are the guys who are really rich and for sure can give you a complex with their assets and possessions.
X
Desktop Bottom Promotion