For Quick Alerts
ALLOW NOTIFICATIONS  
For Daily Alerts

ವಿಶ್ವದ ಅತಿ ಪುರಾತನ ಇತಿಹಾಸ ಹೊಂದಿರುವ ಭಾಷೆಗಳು

ಇತಿಹಾಸದ ಕೆಲವಾರು ವಿಷಯಗಳು, ನಂಬಿಕೆಗಳು ಹಾಗೇ ಉಳಿದುಕೊಳ್ಳುತ್ತವೆ, ಇನ್ನಷ್ಟು ಗಟ್ಟಿಯಾಗುತ್ತವೆ.ಭಾಷೆ ಸಹಾ ಇದೇ ರೀತಿಯ ಒಂದು ಬಂಡೆಯಾಗಿದ್ದು ಕಾಲಾಂತರದಲ್ಲಿ ಬದಲಾವಣೆಗೆ ಒಳಪಡುತ್ತಾ ಬದಲಾಗುತ್ತಾ ಸಾಗುತ್ತದೆ.

By Arshad
|

ನಮ್ಮ ಇಂದಿನ ವರ್ತಮಾನ ಹಿಂದಿನ ಇತಿಹಾಸದ ಬುನಾದಿಯ ಮೇಲೆ ನಿಂತಿದೆ ಎಂಬುದು ಸ್ಪಷ್ಟ. ಹೊಸ ನೀರು ಬಂದಾಗ ಹಳೆಯ ನೀರು ಕೊಚ್ಚಿಕೊಂಡು ಹೋಗುತ್ತದೆಯೇ ಹೊರತು ಹಳೆಯ ಬಂಡೆಗಳಲ್ಲ. ಅಂತೆಯೇ ಇತಿಹಾಸದ ಕೆಲವಾರು ವಿಷಯಗಳು, ನಂಬಿಕೆಗಳು ಹಾಗೇ ಉಳಿದುಕೊಳ್ಳುತ್ತವೆ, ಇನ್ನಷ್ಟು ಗಟ್ಟಿಯಾಗುತ್ತವೆ.

ಭಾಷೆ ಸಹಾ ಇದೇ ರೀತಿಯ ಒಂದು ಬಂಡೆಯಾಗಿದ್ದು ಕಾಲಾಂತರದಲ್ಲಿ ಬದಲಾವಣೆಗೆ ಒಳಪಡುತ್ತಾ ಬದಲಾಗುತ್ತಾ ಸಾಗುತ್ತದೆ. ಆದರೆ ಇದನ್ನು ಆಡುವವರ ಭಾಷೆ ಕಡಿಮೆಯಾಗುತ್ತಾ ಹೋದಂತೆ ಈ ಭಾಷೆ ನಿಧಾನವಾಗಿ ಸಾಯುತ್ತದೆ. ಇಂದು ಈ ಜಗತ್ತಿನಲ್ಲಿ ಸುಮಾರು ಮೂರು ಸಾವಿರಕ್ಕೂ ಭಾಷೆಗಳು ನಾಮಾವಶೇಷವಾಗಿವೆ ಎಂದು ಒಂದು ಅಂದಾಜು.

ಇಂದಿನ ಲೇಖನದಲ್ಲಿ ವಿಶ್ವದಲ್ಲಿ ಇಂದಿಗೂ ಜೀವಂತವಾಗಿರುವ ಜಗತ್ತಿನ ಅತಿ ಹಳೆಯ ಹತ್ತು ಭಾಷೆಗಳ ಬಗ್ಗೆ ಅರಿಯೋಣ. ಇದರ ವಿಶೇಷತೆ ಏನೆಂದರೆ ಈ ಭಾಷೆಗಳು ಪ್ರಾರಂಭವಾದಂದಿನಿಂದ ಇಂದಿನವರೆಗೆ ಹೆಚ್ಚೂ ಕಡಿಮೆ ಬದಲಾವಣೆ ಇಲ್ಲದೇ ಅಥವಾ ಅತಿ ಕಡಿಮೆ ಬದಲಾವಣೆಗಳೊಂದಿಗೆ ಇಂದು ಪ್ರಸ್ತುತವಿವೆ.

ಅಚ್ಚರಿ ಎಂದರೆ ಮೂರು ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೆ ಈ ಪಟ್ಟಿಯಲ್ಲಿ ಸ್ಥಾನವಿಲ್ಲ. ಏಕೆಂದರೆ ಕನ್ನಡದ ಅತಿ ಪುರಾತನ ಶಾಸನವೆಂದರೆ ಕ್ರಿ.ಪೂ 450ರದ್ದು. ಅಲ್ಲದೇ ಕನ್ನಡ ಭಾಷೆ ಭಾರೀ ಬದಲಾವಣೆಗಳನ್ನು ಪಡೆದು ಇಂದು ಕಂಗ್ಲಿಷ್ ವರೆಗೆ ತಲುಪಿರುವ ಕಾರಣವೇನೋ ಇತಿಹಾಸ ತಜ್ಞರು ನಮ್ಮ ಭಾಷೆಯನ್ನು ಪರಿಗಣಿಸಿರಲಿಕ್ಕಿಲ್ಲ. ಬನ್ನಿ, ಈ ಪಟ್ಟಿಯನ್ನು ಈಗ ನೋಡೋಣ......

1#ತಮಿಳು

1#ತಮಿಳು

ಸುಮಾರು ಐದು ಸಾವಿರ ವರ್ಷಗಳ ಹಿಂದೆ ಬಳಕೆಯಲ್ಲಿತ್ತು ಎಂದು ಪುರಾವೆ ದೊರಕಿದ ಬಳಿಕ ತಮಿಳು ಪ್ರಸ್ತುತ ಭಾರತದ ಅತಿ ಪುರಾತನ ಭಾಷೆಯಾಗಿದೆ. ಸುಮಾರು ಹದಿನಾಲ್ಕು ವರ್ಷಗಳ ಹಿಂದೆ ನಡೆಸಿದ ಸಮೀಕ್ಷೆಯ ಪ್ರಕಾರ ತಮಿಳು ಭಾಷೆಯ 1863 ವೃತ್ತಪತ್ರಿಕೆಗಳು ಮತ್ತು ಇತರ ಮಾಧ್ಯಮಗಳು ವಿಶ್ವದಾದ್ಯಂತ ಪ್ರಕಟವಾಗುತ್ತವೆ.

2# ಸಂಸ್ಕೃತ

2# ಸಂಸ್ಕೃತ

ಇತಿಹಾಸ ತಜ್ಞರ ಸಂಶೋಧನೆಯ ಪ್ರಕಾರ ಸಂಸ್ಕೃತ ತಮಿಳು ಭಾಷೆಯಿಂದ ಉದ್ಭವವಾದ ಭಾಷೆಯಾಗಿದ್ದು ಇದರಲ್ಲಿ ಹಲವಾರು ಯೋರೋಪಿಯನ್ ಭಾಷೆಗಳ ಪದಗಳನ್ನು ಬಳಸಲಾಗಿದೆ. ಈ ಭಾಷೆ ಸುಮಾರು ಕ್ರಿ. ಪೂ ಮೂರು ಸಾವಿರ ವರ್ಷಗಳ ಹಿಂದಿನಿಂದ ಬಳಕೆಯಲ್ಲಿದೆ ಎಂದು ಅಂದಾಜಿಸಲಾಗುತ್ತದೆ. ಭಾರತದಲ್ಲಿ ಇಂದು ಈ ಭಾಷೆಯನ್ನು ಆಡುವವರು ಅತಿ ಕಡಿಮೆಯಾಗಿದ್ದಾರೆ. ಅಚ್ಚರಿ ಎಂದರೆ ಬರೆಯ ಸಂಸ್ಕೃತವನ್ನೇ ಆಡುವ ಊರೊಂದು ನಮ್ಮ ಕರ್ನಾಟಕದಲ್ಲಿಯೇ ಇದೆ. ಶಿವಮೊಗ್ಗ ಬಳಿಯ ತುಂಗಾತೀರದ ಮತ್ತೂರು ಎಂಬ ಊರಿನಲ್ಲಿ ಇಂದಿಗೂ ಜನರು ಕೇವಲ ಸಂಸ್ಕೃತವನ್ನೇ ಮಾತನಾಡುತ್ತಾರೆ ಹಾಗೂ ಎಲ್ಲಾ ವ್ಯವಹಾರಗಳನ್ನೂ ನಡೆಸುತ್ತಾರೆ.

3# ಈಜಿಪ್ಶಿಯನ್

3# ಈಜಿಪ್ಶಿಯನ್

ಆಫ್ರೋ-ಏಶಿಯನ್ ಭಾಷೆಗಳಿಂದ ಉದ್ಭವವಾದುದು ಎಂದು ಭಾವಿಸಲಾಗಿರುವ ಈ ಭಾಷೆ ಕ್ರಿ. ಪೂ 2600-2000 ರಷ್ಟು ಹಳೆಯದು ಎಂದು ನಂಬಲಾಗಿದೆ. ಈ ಭಾಷೆಯನ್ನು ಹೆಚ್ಚೂ ಕಡಿಮೆ ಮೂಲಭಾಷೆಯಷ್ಟೇ ಸುಲಲಿತವಾಗಿ ಇಂದಿಗೂ ಈಜಿಪ್ಟ್ ನಲ್ಲಿ ಆಡಲಾಗುತ್ತದೆ.

4# ಗ್ರೀಕ್

4# ಗ್ರೀಕ್

ಪುರಾತನ ಗ್ರೀಸ್ ದೇಶದ ರಾಷ್ಟ್ರಭಾಷೆಯಾಗಿರುವ ಗ್ರೀಕ್ ಭಾಷೆ ಕಿ.ಪೂ 3000-1000 ರಷ್ಟು ಹಳೆಯದಾಗಿದ್ದು ಅಂದಿನ ದಿನದ ಫೀನೀಶಿಯನ್ ಲಿಪಿಯನ್ನು ಬಳಸಲಾಗುತ್ತಿತ್ತು. ಈ ಲಿಪಿ ಚಿತ್ರರೂಪದಲ್ಲಿದ್ದು ಮೂರು ಪ್ರಮುಖ ಪಂಗಡಗಳಲ್ಲಿತ್ತು. ಆಟಿಕ್, ಅಯೋನಿಕ್ ಮತ್ತು ಡೋರಿಕ್ ರೂಪಗಳ ಈ ಲಿಪಿಯನ್ನು ಆಧರಿಸಿ ಗ್ರೀಕ್ ನ ವಾಸ್ತುಶಿಲ್ಪವೂ ಬೆಳೆದುಬಂದಿದೆ. ಇಂದು ಲಭ್ಯವಿರುವ ವಿಶ್ವದ ಅತಿ ಪುರಾತನ ಕವನಗಳು ಮತ್ತು ಹೋಮರ್ ಬರೆದಿರುವ "ಓಡಿಸ್ಸೀ" ಸಹಾ ಇದೇ ಭಾಷೆಯಲ್ಲಿ ಬರೆಯಲಾಗಿದೆ.

5# ಚೈನೀಸ್

5# ಚೈನೀಸ್

ಸುಮಾರು ಮೂರು ಸಾವಿರ ವರ್ಷಗಳ ಹಿಂದಿನ ಭಾಷೆಯಾದ ಚೈನೀಸ್ (ವಾಸ್ತವದಲ್ಲಿ ಚೈನೀಸ್ ಮಂಡಾರಿನ್) ಭಾಷೆ ಇಂದಿನೂ ಹೆಚ್ಚೂ ಕಡಿಮೆ ಬದಲಾವಣೆ ಪಡೆಯದ ಭಾಷೆಯಾಗಿದ್ದು ಕನಿಷ್ಟ ನೂರಿಪ್ಪತ್ತು ಕೋಟಿ ಜನರು ಆಡುವ ಭಾಷೆಯಾಗಿರುವ ಕಾರಣ ವಿಶ್ವದ ಅತಿ ಹೆಚ್ಚು ಜನರು ಆಡುವ ಭಾಷೆಯ ಪಟ್ಟ ಪಡೆದಿದೆ. ಅಂತೆಯೇ ಅತಿ ಕಷ್ಟಕರವೂ ಸಹಾ, ಏಕೆಂದರೆ ಈ ಭಾಷೆಯಲ್ಲಿ ಒಂದೇ ಅಕ್ಷರವನ್ನು ಕೊಂಚವೇ ಬದಲಿಸುವ ಮೂಲಕ ಸಂಪೂರ್ಣ ಭಿನ್ನವಾದ ಪದವನ್ನು ಉಚ್ಛರಿಸಲಾಗುತ್ತದೆ.

6# ಅರಾಮಾಯಿಕ್

6# ಅರಾಮಾಯಿಕ್

ಕ್ರಿ. ಪೂ 900-700 ರಷ್ಟು ಹಳೆಯದಾದ ಈ ಭಾಷೆ ಸಿರಿಯನ್ ಸಾಮ್ರಾಜ್ಯದಲ್ಲಿ ಆಡಲಾಗುತ್ತಿತ್ತು. ಈ ಭಾಷೆಯಲ್ಲಿ ಹಲವಾರು ಬೈಬಲ್ ಕುರಿತಾದ ಕೃತಿಗಳು ಲಭ್ಯವಿವೆ. ಅಂದಿನ ಸಮಯದ ಕ್ರೈಸ್ತ, ಜ್ಯೂ ಮತ್ತು ಮ್ಯಾಂಡಿಯನ್ ಜನಾಂಗದ ಜನರು ಈ ಭಾಷೆಯನ್ನು ಆಡುತ್ತಿದ್ದರು. ಇಂದು ಈ ಭಾಷೆಯನ್ನು ಆಡುವವರು ಅತಿ ಕಡಿಮೆಯಾಗಿದ್ದು ಪ್ರಸ್ತುತ ಉತ್ತರ ಇರಾಕ್, ನೈರುತ್ಯ ಸಿರಿಯಾ, ಆಗ್ನೇಯ ತುರ್ಕಿ ಮತ್ತು ಈಶಾನ್ಯ ಇರಾನ್ ನ ಸುಮಾರು ಒಂದು ಲಕ್ಷದಷ್ಟು ಜನರು ಮಾತ್ರ ಆಡುತ್ತಿದ್ದಾರೆ.

7# ಹೀಬ್ರೂ

7# ಹೀಬ್ರೂ

ಜ್ಯೂ ಜನಾಂಗದ ಧರ್ಮಪಠಣದ ಭಾಷೆಯಾಗಿರುವ ಈ ಭಾಷೆ ಸುಮಾರು ಕಿ.ಪೂ 400ರಷ್ಟು ಹಳೆಯದಾಗಿದ್ದು ಇಂದಿಗೂ ಯಾವುದೇ ಬದಲಾವಣೆ ಇಲ್ಲದೇ ಚಾಲ್ತಿಯಲ್ಲಿದೆ. ಆದರೆ ಈ ಭಾಷೆಯನ್ನು ಕೊಂಚವೇ ಮಾರ್ಪಾಡಿಸಿ ಬರೆಯಲು ಮತ್ತು ವ್ಯವಹಾರಕ್ಕೆ ತಕ್ಕಂತ ಮಾರ್ಪಾಡಿಸಿ ಇಸ್ರೇಲ್ ದೇಶದ ರಾಷ್ಟ್ರಭಾಷೆಯನ್ನಾಗಿ ಮಾಡಲಾಗಿದೆ.

8# ಕೊರಿಯನ್

8# ಕೊರಿಯನ್

ಕ್ರಿ.ಪೂ 600 ರಷ್ಟು ಹಳೆಯದಾದ ಈ ಭಾಷೆಯನ್ನು ಸುಮಾರು ಆರುವರೆ ಕೋಟಿ ಜನರು ಮಾತನಾಡುತ್ತಾರೆ. ಕೊರಿಯಾ ಪ್ರಸ್ಥಭೂಮಿಯ ಮತ್ತು ಸುತ್ತಮುತ್ತಲ ದ್ವೀಪಗಳ ಆಡುಭಾಷೆಯಾಗಿದೆ. ಇಲ್ಲಿನ ವಿಶೇಷತೆ ಎಂದರೆ ಈ ಪ್ರಾಂತದಲ್ಲಿ ಚಾಲ್ತಿಯಲ್ಲಿರುವ ಆಡಲು ಮತ್ತು ಬರೆಯಲು ಕೊರಿಯನ್ ಒಂದೇ ಆಗಿದ್ದು ಕೇವಲ ವಿದೇಶ ವ್ಯವಹಾರಗಳಲ್ಲಿ ಅಗತ್ಯವಿರುವವರು ಮಾತ್ರ ಇಂಗ್ಲಿಷ್ ಆಡುತ್ತಾರೆ.

9# ಆರ್ಮೇನಿಯನ್

9# ಆರ್ಮೇನಿಯನ್

ಇಂಡೋ ಯೂರೋಪಿಯನ್ ಭಾಷೆಗಳಲ್ಲೊಂದಾಗಿದ್ದು ಇಂದೂ ಆರ್ಮೀನಿಯಾದಲ್ಲಿ ಚಾಲ್ತಿಯಲ್ಲಿರುವ ಈ ಭಾಷೆಗೆ ಸುಮಾರು ಐನೂರು ವರ್ಷಗಳ ಇತಿಹಾಸವಿದೆ. ಈ ಭಾಷೆಯಲ್ಲಿ ಭಾಷಾಂತರಗೊಳಿಸಿದ ಬೈಬಲ್ ಇಂದು ಲಭ್ಯವಿರುವ ವಿಶ್ವದ ಅತಿ ಪುರಾತನ ಗ್ರಂಥವಾಗಿದೆ.

10# ಲ್ಯಾಟಿನ್

10# ಲ್ಯಾಟಿನ್

ಕ್ರಿ. ಪೂ 75 ರಲ್ಲಿ ಪ್ರವರ್ಧಮಾನಕ್ಕೆ ಬಂದ ಈ ಭಾಷೆ ಇಟಾಲಿಯನ್ ಪರ್ಯಾಯದ್ವೀಪಭಾಗದಲ್ಲಿ ಆಡಲಾಗುತ್ತಿತ್ತು. ಅಂದಿನ ಸಮಯದಲ್ಲಿ ನಡೆದ ನೂರಾರು ಯುದ್ದಗಳಲ್ಲಿಯೂ ಇದೇ ಭಾಷೆಯನ್ನು ಬಳಸಲಾಗುತ್ತಿತ್ತು. ಇದೇ ಕಾರಣಕ್ಕೆ ಲೂಟಿಯಾದ ಸಂಪತ್ತನ್ನು ಬಚ್ಚಿಟ್ಟು ನಕ್ಷೆಗಳ ರೂಪದಲ್ಲಿ ಮುಂದಿನವರಿಗೆ ಸಿಗುವಂತೆ ಮಾಡಿರುವ ನಕ್ಷೆಗಳೆಲ್ಲಾ ಲ್ಯಾಟಿನ್ ನಲ್ಲಿಯೇ ಇವೆ. ಇಂದಿಗೂ ಕೆಲವು ಲ್ಯಾಟಿನ್ ನಲ್ಲಿರುವ ನಕ್ಷೆಗಳು ಬಿಡಿಸಲಾರದ ಕಗ್ಗಂಟಾಗಿದ್ದು ಹಲವರು ಇಂದಿಗೂ ಇವುಗಳ ಮೂಲಕ ಹಿಂದಿನ ಸಂಪತ್ತನ್ನು ಪಡೆಯಲು ಯತ್ನಿಸುತ್ತಿದ್ದಾರೆ.

English summary

List Of Oldest Languages In The World

Here, in this article, we are about to share the list of some of the oldest languages that are being used in the world. These are the languages that have been followed for decades and there are hardly any changes in the way they are being used in today's generation! Find out about these world's oldest languages that people still follow!
Story first published: Friday, December 16, 2016, 19:04 [IST]
X
Desktop Bottom Promotion