ಮನೆಯಲ್ಲಿ ಹೀಗೆಲ್ಲಾ ನಡೆದರೆ, ನಂಬಬೇಕೇ? ಬಿಡಬೇಕೇ?

ನಂಬುಗೆಗಳನ್ನು ಪಾಲಿಸುವುದರಿಂದ ಜೀವನದಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ನಾವು ಭಾವಿಸುತ್ತೇವೆ, ಆದರೆ ವಿಚಾರವಂತರು ಮಾತ್ರ ವೈಜ್ಞಾನಿಕ ಆಧಾರವಲ್ಲದಿರುವುದನ್ನು ಅಲ್ಲಗೆಳೆಯುತ್ತಾರೆ

By: manu
Subscribe to Boldsky

ನಾವೆಲ್ಲರೂ ಹಲವಾರು ನಂಬುಗೆಗಳನ್ನು ಪರಾಮರ್ಶಿಸದೇ ಅನುಸರಿಸಿಕೊಂಡು ಬರುತ್ತಿದ್ದೇವೆ. ಮನೆಯ ವಿಷಯ ಬಂದಾಗ ಇದರಲ್ಲಿ ವಾಸ್ತುವಿನ ನಂಬುಗೆಗಳೇ ಹೆಚ್ಚು. ಮನೆಯ ಸಂಖ್ಯೆ, ಮನೆಯಲ್ಲಿ ಒಲೆಯನ್ನು ಯಾವ ಕೋನದಲ್ಲಿಡಬೇಕು ಇತ್ಯಾದಿ ಚಿಕ್ಕಪುಟ್ಟ ವಿವರಗಳೂ ಹಲವಾರು ನಂಬುಗೆಗಳ ಪ್ರಭಾವಕ್ಕೆ ಒಳಗಾಗಿದೆ.

ಸಾಮಾನ್ಯವಾಗಿ ಈ ನಂಬುಗೆಗಳನ್ನು ಪಾಲಿಸುವುದರಿಂದ ಜೀವನದಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ನಾವು ಭಾವಿಸುತ್ತೇವೆ. ಬಹುತೇಕ ಎಲ್ಲವೂ ನಮ್ಮ ಪೂರ್ವಾಗ್ರಹ ನಂಬಿಕೆಗಳಾಗಿವೆ. ಅಂದರೆ ಹಿಂದಿನಿಂದ ಅನುಸರಿಸಿಕೊಂಡು ಬಂದ ವಿಧಾನಗಳನ್ನು ನಾವು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ.  ಗಡಿಯಾರ ನಿಂತರೆ ಅಶುಭ! ಕೂಡಲೇ ಚಲಿಸುವಂತೆ ಮಾಡಿ...

ನಾವೆಲ್ಲರೂ ನಮ್ಮ ವಾಸಸ್ಥಳಗಳಲ್ಲಿ ಅಂದರೆ ಮನೆಯಲ್ಲಿ ದುರಾದೃಷ್ಟ ಬರಬಾರದೆಂದೇ ಆಶಿಸುತ್ತೇವೆ. ಇದಕ್ಕಾಗಿ ಪೂಜೆ, ಪ್ರಾರ್ಥನೆ, ತೋರಣ, ತಾಯತ ಇತ್ಯಾದಿ ಹಲವು ವಿಧಾನಗಳನ್ನು ಅನುಸರಿಸುತ್ತೇವೆ.

ಇನ್ನೂ ಹೆಚ್ಚಾಗಿ ಮನೆಯ ಓರ್ವ ಸದಸ್ಯ ಈ ವಿಧಾನಗಳನ್ನು ನಂಬದೇ ಇದ್ದವರೂ ಮನೆಯ ಇತರ ಸದಸ್ಯರು ಈ ವಿಧಾನಗಳನ್ನು ಅಪಾರವಾಗಿ ನಂಬುವ ಪರಿಣಾಮವಾಗಿ ನಿಧಾನವಾಗಿ ನಂಬತೊಡಗುತ್ತಾರೆ. ಬನ್ನಿ, ಇಂತಹ ಕೆಲವು ನಂಬುಗೆಗಳ ಬಗ್ಗೆ ವಿವರಗಳನ್ನು ನೋಡೋಣ....       ಇದೇ ಕಾರಣಕ್ಕೆ ಮನೆಯಲ್ಲಿ ಜಗಳ, ಅಶಾಂತಿ ಉಂಟಾಗುವುದು!    

 

ನಂಬುಗೆ #1

ಒಂದು ವೇಳೆ ತೆರೆದ ಕಿಟಕಿಯಿಂದ ಹಕ್ಕಿ ಒಳಬಂದರೆ ಇದು ಅಪಶಕುನವೆಂದು ಭಾವಿಸಲಾಗುತ್ತದೆ. ಅಂದರೆ ಈ ಶಕುನ ಸಾವಿನ ಸೂಚನೆ ಎಂದು ಭಾವಿಸಲಾಗುತ್ತದೆ.

ನಂಬುಗೆ #2

ಒಂದು ವೇಳೆ ಬ್ರೆಡ್ ತುಂಡನ್ನು ಕತ್ತರಿಸಿದ ಬಳಿಕ ಕತ್ತರಿಸಿದ ತುಂಡು ಉಲ್ಟಾ ಬಿದ್ದರೆ ಇದನ್ನು ಅಪಶಕುನವೆಂದು ಭಾವಿಸಲಾಗುತ್ತದೆ. ಅಂದರೆ ಈ ಮೂಲಕ ದುಷ್ಟ ಆತ್ಮಗಳಿಗೆ ಆಹ್ವಾನ ನೀಡಿದಂತಾಗುತ್ತದೆ ಎಂದು ಭಾವಿಸಲಾಗುತ್ತದೆ. ಇನ್ನೂ ಕೆಲವರು ಇದರಿಂದ ಮನೆಯ ಹಿರಿಯರ ದೇಹಾಂತ್ಯವೂ ಆಗಬಹುದು ಎಂದು ಭಾವಿಸುತ್ತಾರೆ.

ನಂಬುಗೆ #3

ಜೇನ್ನೊಣಗಳು ದೇವರ ಸಂದೇಶವಾಹಕರೆಂದು ಕೆಲವರು ನಂಬುತ್ತಾರೆ. ಒಂದು ವೇಳೆ ದಿನದ ಹೊತ್ತಿನಲ್ಲಿ ಜೇನ್ನೊಣಗಳು ಮನೆಯ ಒಳಗಡೆ ಕಂಡುಬಂದರೆ ಮನೆಯಲ್ಲಿ ಸಾವು ಎದುರಾಗುವ ಸಂದೇಶವನ್ನು ಇವು ತಂದಿವೆ ಎಂದು ಕೆಲವರು ಭಾವಿಸುತ್ತಾರೆ.

ನಂಬುಗೆ #4

ಹೊಸಮನೆಯನ್ನು ಪ್ರವೇಶಿಸುವಾಗ ಕಡ್ಡಾಯವಾಗಿ ಹೊಸ ಪೊರಕೆಯನ್ನೇ ಕೊಂಡೊಯ್ಯಬೇಕು. ಹಳೆಯ ಪೊರಕೆಯನ್ನು ಕೊಂಡೊಯ್ದರೆ ಇದರ ಮೂಲಕ ಋಣಾತ್ಮಕ ಶಕ್ತಿಗಳೂ ಮನೆ ಪ್ರವೇಶಿಸುತ್ತವೆ ಎಂಬುದೊಂದು ನಂಬಿಕೆಯಾಗಿದೆ. ಹೇಗೆಂದರೆ ಹಳೆಯ ಮನೆಯಲ್ಲಿದ್ದ ಋಣಾತ್ಮಕ ಶಕ್ತಿಗಳು ಈ ಪೊರಕೆಯ ಕೊಳೆಯಲ್ಲಿ ಸಂಗ್ರಹವಾಗಿದ್ದು ಹೊಸಮನೆಯನ್ನೂ ಪ್ರವೇಶಿಸಬಹುದು.

ನಂಬುಗೆ #5

ಒಂದು ವೇಳೆ ಮನೆಯಲ್ಲಿರುವ ಕನ್ನಡಿ ತನ್ನಿಂತಾನೇ ಒಡೆದರೆ ಇದು ಭಾರೀ ಅಪಶಕುನ ಎಂದು ಭಾವಿಸಲಾಗುತ್ತದೆ. ಇದು ಮನೆಯಲ್ಲಿ ಸಾವು ಸಂಭವಿಸುವ ಸಂಕೇತ ಎಂದು ಭಾವಿಸಲಾಗುತ್ತದೆ.

ನಂಬುಗೆ #6

ಒಂದು ವೇಳೆ ಒಡೆದ ಗಡಿಯಾರವೊಂದು ಅಕಸ್ಮಾತ್ತಾಗಿ ಗಂಟೆ ಬಾರಿಸಿದರೆ ಇದು ಸಹಾ ಮನೆಯಲ್ಲಿ ಸಾವು ಸಂಭವಿಸುವ ಸೂಚನೆ ಎಂದು ಭಾವಿಸಲಾಗುತ್ತದೆ. ಅಲ್ಲದೇ ನಿಂತು ಹೋಗಿದ್ದ ಗಡಿಯಾರ ಗಂಟೆಬಾರಿಸಿದರೆ ಇದು ಎಚ್ಚರಿಕೆ ನೀಡುತ್ತಿದೆ ಎಂದು ಭಾವಿಸಲಾಗುತ್ತದೆ.

ಈ ಶಕುನಗಳ ಬಗ್ಗೆ ವಿಚಾರವಂತರ ವಿಮರ್ಶೆ

ವಿಚಾರವಂತರ ಪ್ರಕಾರ ಇವೆಲ್ಲವೂ ಕೇವಲ ನಂಬಿಕೆಗಳೇ ಆಗಿದ್ದು ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ. ಸಾವಿಗೂ ಈ ಶಕುನಗಳಿಗೂ ಯಾವುದೇ ಸಂಭವವಿಲ್ಲ. ಇನ್ನೂ ಹೆಚ್ಚಾಗಿ ಈ ನಂಬುಗೆಗಳಿಂದ ಪ್ರಭಾವಿತರಾಗಿ ಹೆದರಿಕೆಯಿಂದಲೇ ಎದೆಯೊಡೆದು ಸಾಯುವ ಸಾಧ್ಯತೆ ಇದೆ. ಆದ್ದರಿಂದ ಹಳೆಯ ನಂಬುಗೆಗಳನ್ನೆಲ್ಲಾ ಬದಿಗಿಟ್ಟು ಜೀವನ ನಮಗೆ ನೀಡುತ್ತಿರುವ ಸುಂದರ ಜೀವನನ್ನು, ಸ್ವತಂತ್ರವಾಗಿ, ನಿರ್ಭಯರಾಗಿ ಮತ್ತು ಪೂರ್ಣವಾಗಿ ಜೀವಿಸುವುದೇ ಉತ್ತಮ.

 

Story first published: Wednesday, November 2, 2016, 12:46 [IST]
English summary

Know These Myths About Your House

These are some of the most dumbest beliefs that we all have been hearing about our houses. Check them out...
Please Wait while comments are loading...
Subscribe Newsletter