For Quick Alerts
ALLOW NOTIFICATIONS  
For Daily Alerts

ಕಾಫಿ ಶಾಪ್‌ನಲ್ಲಿ, ವ್ಯಕ್ತಿಯ ಕಂಪ್ಲೀಟ್ ಬಯೋಡೇಟಾವನ್ನೇ ಅರಿಯಿರಿ!

By Arshad
|

ಈ ಜಗತ್ತಿನಲ್ಲಿ ಯಾವುದೇ ವ್ಯಕ್ತಿ ಇನ್ನೊಬ್ಬರಂತೆ ಇಲ್ಲ. ಏಕೆಂದರೆ ಪ್ರತಿಯೊಬ್ಬರ ವ್ಯಕ್ತಿತ್ಯವೂ ಆಯಾ ಕಾಲಕ್ಕೆ ಸಂದರ್ಭಾನುಸಾರ ಬದಲಾಗುತ್ತದೆ. ಆದರೆ ಪ್ರತಿ ವ್ಯಕ್ತಿಯ ಪ್ರಮುಖ ಗುಣಗಳೇ ಆತನ ಬಗ್ಗೆ ಒಂದು ಅಭಿಪ್ರಾಯ ಮೂಡಿಸುತ್ತವೆ. ಉದಾಹರಣೆಗೆ ವೀರಪ್ಪನ್ ಎಂದಾಕ್ಷಣ ಆತನೊಬ್ಬ ದಂತಚೋರ, ಅಪಹರಣಕಾರ ಎಂದು ಗೊತ್ತಾಗುತ್ತದೆ. ಆದರೆ ಕಳ್ಳತನದ ಹಣದಲ್ಲಿ ಆತ ಬಡವರಿಗೆ ಮಾಡುತ್ತಿದ್ದ ಸಹಾಯ ಯಾರಿಗೂ ಕಾಣುವುದಿಲ್ಲ. (ಇದೇ ಕಾರಣಕ್ಕೆ ಆತ ಎಷ್ಟೋ ವರ್ಷಗಳ ಕಾಲ ಪೋಲೀಸರ ಕೈಗೆ ಸಿಕ್ಕಿರಲೇ ಇಲ್ಲ).

ಆದರೆ ಸಾಮಾನ್ಯ ಜನರಲ್ಲಿಯೂ ಕೆಲವು ಉತ್ತಮಗುಣ, ಕೆಲವು ಅವಗುಣಗಳಿದ್ದು ಅವುಗಳಲ್ಲಿ ಯಾವ ಗುಣ ಪ್ರಮುಖವಾಗಿದೆ ಎಂದು ತಿಳಿದುಕೊಳ್ಳಲು ಅವರ ಅಭ್ಯಾಸಗಳನ್ನು ಗಮನಿಸಿದರೆ ಕಂಡುಕೊಳ್ಳಬಹುದು. ಇದನ್ನು ಕಂಡುಕೊಳ್ಳಲು ಕೆಲವಾರು ದಿನ ಅವರೊಂದಿಗೆ ಕಳೆಯುವುದು ಅವಶ್ಯ. ಆದ್ದರಿಂದಲೇ ಹಿರಿಯರು 'ಸೋನಾ ಘಸ್ ಕೇ ದೇಖ್, ಆದ್ಮೀ ಕೇ ಸಾಥ್ ಬಸ್ ಕೆ ದೇಖ್' ಎಂದು ಹೇಳಿರುವುದು (ಚಿನ್ನ ಒರೆಹಚ್ಚಿ ನೋಡು, ಜನರೊಂದಿಗೆ ಬೆರೆತು ನೋಡು). ವಿಶ್ವದೆಲ್ಲೆಡೆ ಜನಪ್ರಿಯವಾಗಿರುವ ವಿವಿಧ ಬಗೆಯ ಕಾಫಿಗಳು!

ಆದರೆ ಓರ್ವ ವ್ಯಕ್ತಿಯನ್ನು ಗಮನಿಸಲು ಅಷ್ಟೊಂದು ಸಮಯವಿಲ್ಲವಾದರೆ ಆತ ಆರ್ಡರ್ ಮಾಡುವ ಕಾಫಿಯನ್ನು ಗಮನಿಸಿದರೆ ಆತ ಯಾವ ವ್ಯಕ್ತಿತ್ವದ ವ್ಯಕ್ತಿ ಎಂಬುದನ್ನು ಸ್ಥೂಲವಾಗಿ ಅರಿಯಬಹುದು. ಉದಾಹರಣೆಗೆ ವಿನೋದ ವ್ಯಕ್ತಿತ್ವದ ವ್ಯಕ್ತಿ ಎಂದಿಗೂ ಅಮೇರಿಕಾನೋ ಕಾಫಿಯನ್ನು ತರಿಸುವುದಿಲ್ಲ. ಅಂತೆಯೇ ಗಂಭೀರ ವ್ಯಕ್ತಿತ್ವದ ವ್ಯಕ್ತಿಗಳು ಲ್ಯಾಟ್ಟೆ ಕಾಫಿಯನ್ನು ತರಿಸುವುದಿಲ್ಲ. ಕಾಫಿಯನ್ನು ತಯಾರಿಸುವಾಗ ಯಾವ ಕಾಫಿ, ಎಷ್ಟು ಸಕ್ಕರೆ, ಎಷ್ಟು ಹಾಲು, ಕೋಕೋ ಸುರಿದಿದ್ದಾರೆ ಎಂದು ಕಂಡುಕೊಳ್ಳುವ ಮೂಲಕ ಅವರ ವ್ಯಕ್ತಿತ್ವದ ಬಗ್ಗೆ ಒಂದು ಅಂದಾಜು ಸಿಗುತ್ತದೆ.

ಸಾಮಾನ್ಯವಾಗಿ ಓರ್ವ ವ್ಯಕ್ತಿಯನ್ನು ಪ್ರಥಮ ಬಾರಿಗೆ ಭೇಟಿಯಾಗಲು ಕಾಫಿ ಶಾಪ್ ಅಥವಾ ಹೋಟೆಲಿಗೆ ಆಹ್ವಾನಿಸಿ ಕಾಫಿ ಕುಡಿಯುವಾಗ ಈ ವಿವರಗಳನ್ನು ಗಮನಿಸಿದರೆ ಈ ವ್ಯಕ್ತಿ ನಿಮ್ಮ ನಂಬಿಕೆ ವಿಶ್ವಾಸಗಳಿಗೆ ಅರ್ಹನೋ/ಅರ್ಹಳೋ ಎಂದು ಕಂಡುಕೊಳ್ಳಲು ನೆರವಾಗುತ್ತದೆ. ಮೊದಲು ನೀವು ಅರಿತಿರುವ ಸ್ನೇಹಿತರಲ್ಲಿ ಈ ವಿಧಾನವನ್ನು ಪರೀಕ್ಷಿಸಿ ಹೌದು ಎಂದಾದರೆ ಅಪರಿಚಿತ ವ್ಯಕ್ತಿಗಳ ಬಗ್ಗೆ ಅರಿಯಲು ಪ್ರಯತ್ನಿಸಬಹುದು..

ಎಸ್ಪ್ರೆಸ್ಸೋ ಅಥವಾ ಕಪ್ಪು ಕಾಫಿ

ಎಸ್ಪ್ರೆಸ್ಸೋ ಅಥವಾ ಕಪ್ಪು ಕಾಫಿ

ಈ ಕಾಫಿಯನ್ನು ಆರಿಸುವವರು ಜೀವನವನ್ನು ಅತಿಯಾದ ಕಾಳಜಿಯಿಂದ ಪರಿಗಣಿಸುತ್ತಾರೆ. ಇವರು ಕಲೆಯ ಆರಾಧಕರು ಅಥವಾ ಕಾನೂನುಪಾಲಕರಾಗಿರುತ್ತಾರೆ. ಇವರು ತಮ್ಮ ಸಮಯವನ್ನು ಎಂದೂ ಪೋಲು ಮಾಡದೇ ಒಂದಲ್ಲಾ ಒಂದು ಕೆಲಸದಲ್ಲಿ ವ್ಯಸ್ತರಾಗಿರುತ್ತಾರೆ.

ಎಸ್ಪ್ರೆಸ್ಸೋ ಅಥವಾ ಕಪ್ಪು ಕಾಫಿ

ಎಸ್ಪ್ರೆಸ್ಸೋ ಅಥವಾ ಕಪ್ಪು ಕಾಫಿ

ಇವರು ತಮ್ಮ ಕೆಲಸಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ಕಾಫಿ ಆರ್ಡರ್ ಮಾಡಿದ ಬಳಿಕ ತಾಳ್ಮೆಯಿಂದ ಕಾದು ಕಾಫಿ ಬಂದಾಕ್ಷಣ ಸಮಯ ಕಳೆಯದೇ ಗುಟುಕರಿಸಲು ತೊಡಗುತ್ತಾರೆ. ಇವರು ತಮ್ಮ ಬಗ್ಗೆ ಹೆಚ್ಚು ಹಾಗೂ ತಮ್ಮ ಕುಟುಂಬದ ಬಗ್ಗೆ ಕೊಂಚ ಕಡಿಮೆ ಕಾಳಜಿ ವ್ಯಕ್ತಪಡಿಸುತ್ತಾರೆ.

ತಣ್ಣನೆಯ ಕಾಫಿ

ತಣ್ಣನೆಯ ಕಾಫಿ

ತಣ್ಣನೆಯ ಕಾಫಿಯನ್ನು ಆರ್ಡರ್ ಮಾಡುವವರು ಶಾಂತಸ್ವಭಾವದರೂ ಆರಾಮಜೀವಿಗಳೂ ಆಗಿರುತ್ತಾರೆ. ಇವರಿಗೆ ಬೇರೆಯವರು ತಮ್ಮ ಬಗ್ಗೆ ಏನು ಆಡಿಕೊಳ್ಳುತ್ತಾರೆ ಎಂಬುದರ ಬಗ್ಗೆ ಚಿಂತೆ ಇರುವುದಿಲ್ಲ. ಇವರು ತಮ್ಮ ಲೋಕದಲ್ಲಿಯೇ ಮುಳುಗಿದ್ದು ತಮ್ಮನ್ನೇ ಕೇಂದ್ರವಾಗಿರಿಸಿಕೊಂಡಿರುತ್ತಾರೆ.

ತಣ್ಣನೆಯ ಕಾಫಿ

ತಣ್ಣನೆಯ ಕಾಫಿ

ವಾಸ್ತವವಾಗಿ ತಣ್ಣನೆಯ ಅಥವಾ ಕೋಲ್ಡ್ ಕಾಫಿ ಬೇಸಿಗೆಗೆ ಮುಡಿಪಾಗಿದ್ದರೂ ಇವರು ವರ್ಷವಿಡೀ ಇದೇ ಕಾಫಿಯನ್ನು ಬಯಸುತ್ತಾರೆ. ಇದು ಇವರ ಭಾವೋದ್ವೇಗಕ್ಕೆ ಒಳಗಾಗದ ಸ್ವಭಾವನ್ನು ಸೂಚಿಸುತ್ತದೆ. ಇವರ ಬಗ್ಗೆ ಯಾರು ಏನೂ ಹೇಳಿದರೂ ಸುಮ್ಮನೆ ನಕ್ಕು ನಿರ್ಲಕ್ಷಿಸುತ್ತಾರೆ. ತಮ್ಮ ಪಾಲಿನ ಕರ್ತ್ಯವ್ಯವನ್ನು ಆರಾಮವಾಗಿಯೇ ಮುಗಿಸಿ ಇದರ ತಪ್ಪುಗಳ ಬಗ್ಗೆ ಹೆಚ್ಚು ಚಿಂತಿಸುವುದಿಲ್ಲ.

ಅಮೇರಿಕಾನೋ ಕಾಫಿ

ಅಮೇರಿಕಾನೋ ಕಾಫಿ

ಈ ಕಾಫಿಯನ್ನು ಚಪ್ಪರಿಸುವವರು ಸಾಮಾನ್ಯವಾಗಿ ಮಹತ್ವಾಕಾಂಕ್ಷಿಗಳಾಗಿದ್ದು ಜೀವನದಲ್ಲಿ ಬಹಳಷ್ಟನ್ನು ಸಾಧಿಸುವವರಾಗಿರುತ್ತಾರೆ. ಇವರು ಜೀವನದಲ್ಲಿ ಪ್ರತಿಯೊಂದನ್ನೂ ಯೋಜನೆಯ ಮೂಲಕ ಮೊದಲು ಗುರುತುಹಾಕಿಕೊಂಡು ಬಳಿಕ ಅದನ್ನು ಸಾಧಿಸುವ ಗುಣದವರಾಗಿರುತ್ತಾರೆ. ಇವರು ಸಾಮಾನ್ಯವಾಗಿ ತಮ್ಮ ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ಮತ್ತು ದೋಷರಹಿತವಾಗಿ ನಿರ್ವಹಿಸಲು ತಮ್ಮ ಬೆವರನ್ನು

ಹರಿಸುತ್ತಾರೆ. ಸಾಮಾನ್ಯವಾಗಿ ಇವರು ತಮ್ಮ ಕೆಲಸ ಮತ್ತು ಕರ್ತವ್ಯವನ್ನೇ ಹೆಚ್ಚಾಗಿ ನೆಚ್ಚಿಕೊಂಡಿರುವ ಕಾರಣ ಇವರಿಗೆ ಕೆಲಸದ ಸಮಯದಲ್ಲಿ ಮನೆಯವರು ಬಂದರೂ ಸಹಿಸುವುದಿಲ್ಲ. ಇದು ಕ್ರಮೇಣ ಪ್ರೀತಿಪಾತ್ರರಿಂದ ದೂರವಾಗಿರಲು ಕಾರಣವಾಗಿರುತ್ತದೆ.

ಲ್ಯಾಟ್ಟೆ ಕಾಫಿಪ್

ಲ್ಯಾಟ್ಟೆ ಕಾಫಿಪ್

ಈ ಕಾಫಿಯ ಪ್ರಿಯರು ಸಾಮಾನ್ಯವಾಗಿ ಒಂಟಿ ಜೀವಿಗಳಾಗಿದ್ದು ಬೇರೆಯವರ ಬಗ್ಗೆ ಚಿಂತಿಸುವುದಾಗಲೀ ನೆರವಿಗೆ ಧಾವಿಸುವುದಾಗಲೀ ಮಾಡುವುದಿಲ್ಲ. ಇವರಿಗೆ ಜೀವನ ಹೇಗಿರಬೇಕೋ ಹಾಗೇ ಜೀವಿಸುತ್ತಾರೆ. ಇವರು ತಮ್ಮದೇ ನಿಯಮ ಮತ್ತು ಕ್ರಮಗಳನ್ನು ಅನುಸರಿಸಿ ಬೇರೆಯವರಿಗಾಗಿ ತಮ್ಮ ನಿಯಮಗಳನ್ನು ಮುರಿಯಲು ಇಚ್ಛಿಸುವುದಿಲ್ಲ. ಇವರು ತಮ್ಮ ಅಗತ್ಯಕ್ಕೆ ತಕ್ಕಂತೆ ಬದಲಾಗುತ್ತಾರೆಯೇ ವಿನಃ ಬೇರೆಯವರಿಗಾಗಿ ಬದಲಾಗರು.

 ಕ್ಯಾಪುಚೀನೋ

ಕ್ಯಾಪುಚೀನೋ

ಈ ಕಾಫಿಯನ್ನು ಸೇವಿಸುವವರು ಸ್ವಯಂ-ಪ್ರಜ್ಞೆಯುಳ್ಳ ವ್ಯಕ್ತಿಗಳಾಗಿದ್ದು ತಮ್ಮ ತೂಕದ ಬಗ್ಗೆ ಬಹಳ ಅಸ್ಥೆ ಹೊಂದಿರುತ್ತಾರೆ. ಇವರಿಗೆ ಲೋಕದಲ್ಲಿ ಆಕರ್ಷಕ ವಸ್ತುಗಳೇ ಪ್ರಿಯವಾಗಿದ್ದು ಈ ವಸ್ತು ತಮಗೆ

ಉಪಯುಕ್ತವೇ ಅಲ್ಲವೇ ಎಂಬ ಗೋಜಿಗೆ ಹೋಗದೇ ಇದು ತಮ್ಮಲ್ಲಿರಬೇಕು ಎಂದು ಬಯಸುತ್ತಾರೆ. ಇವರಲ್ಲಿ ಸದಾ ಅಧುನಿಕ ಉಪಕರಣಗಳಿದ್ದು ಇದರಲ್ಲಿ ಕೆಲವನ್ನು ಮಾತ್ರ ಉಪಯೋಗಿಸುತ್ತಿದ್ದು ಇನ್ನುಳಿದವನ್ನು ಹಾಗೇ ಬಿಟ್ಟಿರುತ್ತಾರೆ. ಇವರು ಕುಡಿಯುವ ಕಾಫಿಯಲ್ಲಿಯ ಶೇಖಡಾ ಅರವತ್ತರಷ್ಟು ನೊರೆ ಇದೆ ಎಂದು ತಿಳಿದೂ ಬೇರೆಯವರಿಗೆ ಇದರ ಭರ್ತಿ ಕಾಫಿ ಇದೆ ಎಂಬ ಭ್ರಮೆ ಮೂಡಿಸುವ ಯತ್ನದಲ್ಲಿರುತ್ತಾರೆ.

ಚಹಾ

ಚಹಾ

ಟೀ ಪ್ರಿಯರು ಸಾಮಾನ್ಯವಾಗಿ ತಮಗಿಂತಲೂ ತಮ್ಮ ಅಕ್ಕಪಕ್ಕದ ಜನರ, ಕುಟುಂಬವರ್ಗ, ಸ್ನೇಹಿತರ ಭಾವನೆಗಳನ್ನು ಅರ್ಥ ಮಾಡಿಕೊಂಡು ತಮ್ಮಿಂದಾದ ನೆರವು ನೀಡಲು ಸನ್ನದ್ಧರಾಗಿರುತ್ತಾರೆ. ಇವರು ಸರಳ ಜೀವನವನ್ನು ಬಯಸುವವರಾಗಿದ್ದು ಹಾಸಿಗೆ ಇದ್ದಷ್ಟು ಕಾಲು ಚಾಚಿ ಜೀವನದಲ್ಲಿ ಬಂದದ್ದನ್ನು ಸಂತೃಪ್ತಿಯಿಂದ ಅನುಭವಿಸುವ ವ್ಯಕ್ತಿಗಳಾಗಿರುತ್ತಾರೆ.

ಚಹಾ

ಚಹಾ

ಇವರು ಆರೋಗ್ಯದ ಬಗ್ಗೆ ಕಾಳಜಿ ಉಳ್ಳವರಾಗಿದ್ದು ವ್ಯಾಯಾಮದ ಮೂಲಕ ಉತ್ತಮ ಆರೋಗ್ಯವನ್ನು ಹೊಂದಿರುತ್ತಾರೆ. ವೈದ್ಯರು ನೀಡಿದ ಸಲಹೆಗಳನ್ನು ಚಾಚೂ ತಪ್ಪದೆ ಪಾಲಿಸುವ ಇವರಿಗೆ ದೂರ ಪ್ರಯಾಣವೆಂದರೆ ಇಷ್ಟ. ಇವರು ತಮ್ಮ ಸಮಯವನ್ನು ತಮಗಿಂತಲೂ ತಮ್ಮ ಕುಟುಂಬವರ್ಗ ಹಾಗೂ ಅಗತ್ಯವುಳ್ಳವರಿಗಾಗಿ ಮುಡಿಪಾಗಿವ ಮೂಲಕ ಧನ್ಯತೆ ಅನುಭವಿಸುತ್ತಾರೆ.

ಫ್ರಾಪ್ಪ್ಯುಚೀನೋ

ಫ್ರಾಪ್ಪ್ಯುಚೀನೋ

ಈ ಕಾಫಿಯ ಪ್ರಿಯರು ಸಾಮಾನ್ಯವಾಗಿ ಸ್ವಾರ್ಥಿಗಳಾಗಿದ್ದು ಬೇರೆಯವರ ಬಗ್ಗೆ ಯಾವುದೇ ಭಾವನೆ ವ್ಯಕ್ತಪಡಿಸುವುದಿಲ್ಲ. ಇವರು ತಮ್ಮ ಬಳಿ ಅತ್ಯುತ್ತಮವಾದ ಮತ್ತು ಬೇರೆ ಯಾರಲ್ಲೂ ಇರದಿರುವ ವಸ್ತುಗಳೇ ಇರಬೇಕು ಎಂದು ಬಯಸುತ್ತಾರೆ.

ಫ್ರಾಪ್ಪ್ಯುಚೀನೋ

ಫ್ರಾಪ್ಪ್ಯುಚೀನೋ

ಒಂದು ವೇಳೆ ಇವರಲ್ಲಿರುವ ವಸ್ತು ಬೇರೆಯವರಲ್ಲಿಯೂ ಇದೆ ಎಂದಾಕ್ಷಣ ಇವರು ಅತೀವವಾದ ವೇದನೆಯನ್ನು ಅನುಭವಿಸಿ ಇದಕ್ಕೂ ಉತ್ತಮವಾದ ಅಥವಾ ಭಿನ್ನವಾದ ವಸ್ತುವನ್ನು ಹೊಂದಲು ತವಕಿಸುತ್ತಿರುತ್ತಾರೆ. ಇವರು ತಮ್ಮ ವ್ಯಕ್ತಿತ್ವಕ್ಕೆ ಹೊಂದದ ವ್ಯಕ್ತಿಗಳೊಂದಿಗೆ ಬೆರೆಯಲು ಇಷ್ಟಪಡುವುದಿಲ್ಲ. ಇವರಿಂದ ಬೇರೆಯವರು ಯಾವುದೇ ಸಹಾಯವನ್ನು ನಿರೀಕ್ಷಿಸಲು ಸಾಧ್ಯವಿಲ್ಲ.

English summary

Interesting Things To Know About A Person By His Coffee Order

Your nature can be revealed by many things and one of them is your coffee. The type of coffee you like can reveal your nature and the way you take things. A jolly and fun-loving person will never order an Americano. In the same way, a person who takes life seriously will never order a Latte.
X
Desktop Bottom Promotion