For Quick Alerts
ALLOW NOTIFICATIONS  
For Daily Alerts

ಹೊಟ್ಟೆಯ ಹೊಕ್ಕಳು: ನೀವು ತಿಳಿದಿರದ ಅಮೋಘ ಸಂಗತಿಗಳು

By Manu
|

ತಾಯಿಯ ಗರ್ಭದಿಂದ ಈ ಭೂಮಿಯ ಮೇಲೆ ಬರುವವರೆಗೂ ಮಗುವಿಗೆ ಅನ್ನಾಹಾರಗಳನ್ನು ನೀಡುವ ಕರಳುಬಳ್ಳಿ ಹೊಟ್ಟೆಗೆ ಅಂಟಿಕೊಂಡಿದ್ದು ಜನನದ ಬಳಿಕ ಕತ್ತರಿಸಲ್ಪಡುವ ಮೂಲಕ ಮತ್ತೆ ಮುಚ್ಚಿಕೊಳ್ಳುವ ರಂಧ್ರವೇ ಹೊಕ್ಕಳು. ಪ್ರತಿಯೊಬ್ಬರಲ್ಲಿಯೂ ಈ ಹೊಕ್ಕಳು ವಿಧವಿಧವಾಗಿರುತ್ತದೆ.

ಕೆಲವರಲ್ಲಿ ಇದು ಒಳಗೆ ಸೆಳೆದುಕೊಂಡು ಚಿಕ್ಕ ಗುಹೆಯಂತೆ ಕಂಡರೆ ಕಲವರಿಗೆ ಬೆಲೂನಿನ ಗಾಳಿಯೂದುವ ಭಾಗ ಗಂಟುಕಟ್ಟಿದ ಬಳಿಕ ಹೇಗೆ ಕಾಣುತ್ತದೆಯೋ ಹಾಗೇ ತಿರುಚಿ ಹೊರಗಿಣಿಕುತ್ತಿರುತ್ತದೆ. ಕೆಲವರಿಗಂತೂ ಇದು ಸೌಂದರ್ಯ ಪ್ರದರ್ಶನದ ಪ್ರತೀಕವಾಗಿದ್ದು ಹೊಕ್ಕುಳ ಕೆಳಗೇ ಸೀರೆ ಉಡುವ ಮೂಲಕ ದೇಹ ಸೌಂದರ್ಯವನ್ನು ಹೆಚ್ಚಿಸುವ ಹುಮ್ಮಸ್ಸು ಮೂಡಿದರೆ ಇನ್ನೂ ಕೆಲವರು ಈ ಭಾಗದಲ್ಲಿಯೇ ಆಭರಣವೊಂದನ್ನು ಚುಚ್ಚಿಸಿಕೊಂಡು ಪ್ರದರ್ಶಿಸಿ ಸಂಭ್ರಮಪಡುತ್ತಾರೆ. ಬನ್ನಿ, ಹೊಕ್ಕುಳ ಬಗ್ಗೆ ನಿಮಗೆ ತಿಳಿಯದೇ ಇದ್ದ ಕೆಲವು ಕುತೂಹಲಕರ ಸಂಗತಿಯನ್ನು ಕೆಳಗಿನ ಸ್ಲೈಡ್ ಷೋ ಮೂಲಕ ನೋಡೋಣ:

ಕೆಲವರಿಗಂತೂ ಹೊಕ್ಕುಳೇ ಇರುವುದಿಲ್ಲ

ಕೆಲವರಿಗಂತೂ ಹೊಕ್ಕುಳೇ ಇರುವುದಿಲ್ಲ

ವಾಸ್ತವವಾಗಿ ಹೊಕ್ಕಳು ಇರದ ಮನುಷ್ಯರೇ ಇಲ್ಲ. ಆದರೆ ಜನನಕ್ಕೂ ಮುನ್ನ ಕರುಳು ಹೊಟ್ಟೆಯ ಭಾಗದಿಂದ ಹೊರಗಿಣಿಕುತ್ತಿರುತ್ತವೆ. umbilical hernia or gastroschisis ಎಂದು ಕರೆಯಲ್ಪಡುವ ಈ ಸ್ಥಿತಿಯೊಡನೆ ಜನನವಾದ ಮಗುವಿಗೆ ತಕ್ಷಣ ವೈದ್ಯರು ಕರುಳನ್ನು ಮತ್ತೆ ಹೊಟ್ಟೆಯ ಒಳಗೆ ಹಾಕಿ ಹೊಲಿಗೆ ಹಾಕಿ ಮುಚ್ಚಬೇಕಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕೆಲವರಿಗಂತೂ ಹೊಕ್ಕುಳೇ ಇರುವುದಿಲ್ಲ

ಕೆಲವರಿಗಂತೂ ಹೊಕ್ಕುಳೇ ಇರುವುದಿಲ್ಲ

ಈ ಹೊಲಿಗೆಯ ಅಡಿಯಲ್ಲಿ ಹೊಕ್ಕಳು ಮಾಯವಾಗುತ್ತದೆ. ಹೊಲಿಗೆ ಮಾಗಿದ ಬಳಿಕ ಮಗು ದೊಡ್ಡದಾಗುತ್ತಾ ಹೋದಂತೆ ಈ ಭಾಗದಲ್ಲಿ ಬೆಳೆದ ಚರ್ಮದ ಕಾರಣ ಹೊಕ್ಕಳು ಇಲ್ಲದೇ ಇದ್ದಂತೆಯೇ ತೋರುತ್ತದೆ.

 ಹೊಕ್ಕಳೇ ನಮ್ಮೆಲ್ಲರ ಮೊದಲ ಗಾಯವಾಗಿದೆ

ಹೊಕ್ಕಳೇ ನಮ್ಮೆಲ್ಲರ ಮೊದಲ ಗಾಯವಾಗಿದೆ

ಹೊಕ್ಕುಳೇ ಇಲ್ಲದ ವ್ಯಕ್ತಿಗಳ ಹೊರತು ಉಳಿದವರೆಲ್ಲರಿಗೆ ಹೊಕ್ಕುಳ ಗಾಯ ಜೀವನದ ಪ್ರಥಮ ಗಾಯವಾಗಿದ್ದು ಇದು ಮಾಗಿದ ಬಳಿಕ ಉಳಿಯುವ ಗುರುತೇ ಆಗಿದೆ. ಜನನದ ಬಳಿಕ ಹೊಕ್ಕುಳಿಗೆ ಅಂಟಿಕೊಂಡಿದ್ದ ಕರಳುಬಳ್ಳಿಯನ್ನು ಹೊಟ್ಟೆಯಿಂದ ಕೊಂಚವೇ ಮುಂದೆ ಕತ್ತರಿಸಿ ಗಂಟುಹಾಕಿ ಬಿಡಲಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

 ಹೊಕ್ಕಳೇ ನಮ್ಮೆಲ್ಲರ ಮೊದಲ ಗಾಯವಾಗಿದೆ

ಹೊಕ್ಕಳೇ ನಮ್ಮೆಲ್ಲರ ಮೊದಲ ಗಾಯವಾಗಿದೆ

ಕ್ರಮೇಣ ಈ ಗಾಯ ಮಾಗಿ ಹೊಕ್ಕುಳ ರೂಪ ಪಡೆಯುತ್ತದೆ. ಮೊಟ್ಟೆಯಿಂದ ಹೊರಬರುವ ಜೀವಿಗಳನ್ನು ಬಿಟ್ಟು ಎಲ್ಲಾ ಸಸ್ತನಿಗಳಿಗೆ ಹೊಕ್ಕಳು ಇದೆ.

ಹೊಕ್ಕಳಲ್ಲಿ ಅಪಾರ ವಿಧದ ಬ್ಯಾಕ್ಟೀರಿಯಾಗಳಿರುತ್ತವೆ!

ಹೊಕ್ಕಳಲ್ಲಿ ಅಪಾರ ವಿಧದ ಬ್ಯಾಕ್ಟೀರಿಯಾಗಳಿರುತ್ತವೆ!

ಸ್ನಾನ ಮಾಡುವಾಗ ಹೊಕ್ಕುಳನ್ನೂ ಸ್ವಚ್ಛಗೊಳಿಸಬೇಕೆಂದು ಅಮ್ಮ ಹೇಳಿದ್ದರೂ ಹೆಚ್ಚಿನವರು ಸ್ವತಃ ಸ್ನಾನ ಮಾಡಲು ಕಲಿತ ಬಳಿಕ ಹೊಕ್ಕುಳನ್ನು ನಿರ್ಲಕ್ಷಿಸುವುದು ಸಾಮಾನ್ಯ. ಇದೇ ಕಾರಣಕ್ಕೆ ಹೊಕ್ಕುಳಲ್ಲಿ ಅಪಾರ ವಿಧದ ಮತ್ತು ಅಪಾರ ಪ್ರಮಾಣದಲ್ಲಿ ಬ್ಯಾಕ್ಟೀರಿಯಾಗಳು ಆಶ್ರಯ ಪಡೆಯುತ್ತವೆ.

ಹೊಕ್ಕಳಲ್ಲಿ ಅಪಾರ ವಿಧದ ಬ್ಯಾಕ್ಟೀರಿಯಾಗಳಿರುತ್ತವೆ!

ಹೊಕ್ಕಳಲ್ಲಿ ಅಪಾರ ವಿಧದ ಬ್ಯಾಕ್ಟೀರಿಯಾಗಳಿರುತ್ತವೆ!

2012ರಲ್ಲಿ ನಡೆದ ಸಂಶೋಧನೆಯಲ್ಲಿ ವಿವಿಧ ಜನರ ಹೊಕ್ಕುಳಲ್ಲಿರುವ ಬ್ಯಾಕ್ಟೀರಿಯಾಗಳ ಬಗ್ಗೆ ಮಾಹಿತಿ ಪಡೆಯಲಾಯಿತು. ಇದರ ಫಲಿತಾಂಶದಲ್ಲಿ 2,368 ವಿಧದ ಬ್ಯಾಕ್ಟೀರಿಯಾಗಳು ಪತ್ತೆಯಾದವು. ಇನ್ನೂ ವಿಚಿತ್ರವೆಂದರೆ ಪ್ರತಿ ವ್ಯಕ್ತಿಯ ಹೊಕ್ಕುಳಲ್ಲಿ ಸರಿಸುಮಾರು 67 ವಿಧದ ಬ್ಯಾಕ್ಟೀರಿಯಾಗಳಿದ್ದವು!

ಹೊಕ್ಕಳ ಭಾಗದಲ್ಲಿ ಚುಚ್ಚಿಸಿಕೊಂಡರೆ ಮಾಗಲು ಅಪಾರ ಸಮಯ ಬೇಕು

ಹೊಕ್ಕಳ ಭಾಗದಲ್ಲಿ ಚುಚ್ಚಿಸಿಕೊಂಡರೆ ಮಾಗಲು ಅಪಾರ ಸಮಯ ಬೇಕು

ಸಾಮಾನ್ಯ ಗಾಯಗಳು ವಾರದೊಳಗೇ ಮಾಗಿದರೆ ಹೊಕ್ಕುಳ ಸುತ್ತ ಆಭರಣಗಳನ್ನು ನೇತುಹಾಕಲು ಚುಚ್ಚಿಸಿಕೊಂಡ ತೂತುಗಳ ಗಾಯ ಮಾಗಲು ಕನಿಷ್ಟ ಆರರಿಂದ ಹನ್ನೆರಡು ತಿಂಗಳ ಅವಧಿ ಬೇಕಾಗುತ್ತದೆ.

ಹೊಕ್ಕಳ ಭಾಗದಲ್ಲಿ ಚುಚ್ಚಿಸಿಕೊಂಡರೆ ಮಾಗಲು ಅಪಾರ ಸಮಯ ಬೇಕು

ಹೊಕ್ಕಳ ಭಾಗದಲ್ಲಿ ಚುಚ್ಚಿಸಿಕೊಂಡರೆ ಮಾಗಲು ಅಪಾರ ಸಮಯ ಬೇಕು

ಅದೂ ಸೂಕ್ತ ಆರೈಕೆ ಮತ್ತು ಸೋಂಕುಗಳಿಂದ ರಕ್ಷಿಸಿದರೆ ಮಾತ್ರ. ಒಂದು ವೇಳೆ ಸೋಂಕು ತಗುಲಿದರೆ ಇದು ಅಪಾರ ನೋವು ನೀಡುವುದು ಮಾತ್ರವಲ್ಲ ವಾಸಿಯಾಗಲು ಇನ್ನಷ್ಟು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ.

ಪುರುಷರ ಹೊಕ್ಕುಳಲ್ಲಿ ಹೆಚ್ಚು ಕಸ ತುಂಬಿಕೊಳ್ಳುತ್ತದೆ

ಪುರುಷರ ಹೊಕ್ಕುಳಲ್ಲಿ ಹೆಚ್ಚು ಕಸ ತುಂಬಿಕೊಳ್ಳುತ್ತದೆ

ಪುರುಷರಿಗೆ ಹೊಟ್ಟೆಯಲ್ಲಿ ಮತ್ತು ಹೊಕ್ಕುಳ ಸುತ್ತ ಕೂದಲು ಬೆಳೆಯುವ ಕಾರಣ ಮತ್ತು ಈ ಕೂದಲುಗಳು ಉದುರಿದ ಬಳಿಕ ಒಳ ಉಡುಪುಗಳ ಒತ್ತಡದ ಮೂಲಕ ಹೊಕ್ಕುಳ ಒಳಗೆ ಸಿಕ್ಕಿಕೊಳ್ಳುವ ಸಂಭವ ಹೆಚ್ಚು. ಅದೂ ಅಲ್ಲದೇ ಒಳ ಉಡುಪುಗಳ ಸಡಿಲ ದಾರಗಳ ಎಳೆಗಳೂ ಇಲ್ಲಿ ಸಂಗ್ರಹವಾಗುತ್ತವೆ. ಇದನ್ನು ತಡೆಯಲು ಆಗಾಗ ಹೊಕ್ಕುಳ ಸುತ್ತ ಇರುವ ಕೂದಲನ್ನು ನಿವಾರಿಸುವುದು ಉತ್ತಮ. ಸ್ನಾನದ ಸಮಯದಲ್ಲಿ ಹೊಕ್ಕುಳನ್ನೂ ಸ್ವಚ್ಛಗೊಳಿಸುವುದು ಅಗತ್ಯ.

ಈ ಕಸ ಸಂಗ್ರಹಿಸಿದವನದ್ದೂ ಒಂದು ದಾಖಲೆ

ಈ ಕಸ ಸಂಗ್ರಹಿಸಿದವನದ್ದೂ ಒಂದು ದಾಖಲೆ

ನಾವೆಲ್ಲರೂ ಅಸಹ್ಯಪಡುವ ಈ ಕಸವನ್ನೇ ಅತಿ ಹೆಚ್ಚಾಗಿ ಸಂಗ್ರಹಿಸಿ ಗಿನ್ನೆಸ್ ದಾಖಲೆಯ ಖ್ಯಾತಿ ಪಡೆದ ವ್ಯಕ್ತಿ ಗ್ರಹಾಂ ಬಾರ್ಕರ್. ಜನವರಿ 17, 1984ರಿಂದ ತನ್ನ ಹೊಕ್ಕುಳ ಕಸವನ್ನು ಸಂಗ್ರಹಿಸುತ್ತಾ ಬಂದಿರುವ ಈತನ ಬಳಿ ಇರುವಷ್ಟು ಕಸ ಜಗತ್ತಿನಲ್ಲಿ ಇನ್ನಾರ ಬಳಿಯೂ ಇಲ್ಲ.

 ಸಂಗಾತಿಯನ್ನು ಸೆಳೆಯಲು ಹೊಕ್ಕುಳ ಬಳಕೆ

ಸಂಗಾತಿಯನ್ನು ಸೆಳೆಯಲು ಹೊಕ್ಕುಳ ಬಳಕೆ

ಕೆಲವರಿಗೆ ಆಳವಾದ ಹೊಕ್ಕಳು ಹೆಚ್ಚಿನ ಕುತೂಹಲ ಮೂಡಿಸುತ್ತವೆ. ಈ ಹೊಕ್ಕಳನ್ನು ಹೆಚ್ಚು ಪ್ರಚೋದನಕಾರಿಯಾಗಿ ಪ್ರದರ್ಶಿಸಲು ಯಾವ ಉಡುಗೆ ಶ್ರೇಷ್ಠ ಎಂಬುದನ್ನು ಕಂಡುಕೊಳ್ಳಲು ಸಂಶೋಧನೆಗಳೂ ನಡೆದಿವೆ. ಇದರ ಫಲಿತಾಂಶದ ಪ್ರಕಾರ ಇಂಗ್ಲಿಷಿನ T ಆಕಾರದ ಒಳ ಉಡುಪೇ ಅತಿ ಹೆಚ್ಚು ಪ್ರಚೋದನಕಾರಿಯಾಗಿದೆ.

English summary

Interesting Navel (Belly Button) Facts

Belly buttons, the wonderful birthmark that we're all left with. Some of us have innies while others have outties. Some are pierced and have wonderful displays of jewellery (or not-so-wonderful displays), while others may just be naked and shown in are their glory. Here are facts you probably didn't know about belly buttons.
X
Desktop Bottom Promotion