For Quick Alerts
ALLOW NOTIFICATIONS  
For Daily Alerts

ಭಾರತದ ನಾಣ್ಯ-ನೋಟುಗಳ ಇತಿಹಾಸ ಕೆದಕಿದಾಗ...!

By Super
|

ಭಾರತದ ಇತಿಹಾಸದಷ್ಟೇ ಭಾರತದ ಕರೆನ್ಸಿ ನೋಟುಗಳ ಇತಿಹಾಸವೂ ರೋಚಕವಾಗಿದೆ. ಭಾರತದ ಅಚ್ಚು ಹಾಕಿದ ನಾಣ್ಯಗಳು ಕ್ರಿಸ್ತನ ಕಾಲಕ್ಕಿಂತಲೂ ಹಿಂದಿನದ್ದಾಗಿವೆ ಎಂದು ಈಗಾಗಲೇ ಸಾಬೀತುಪಡಿಸಲ್ಪಟ್ಟಿವೆ. ಕೆಲವು ನಾಣ್ಯಗಳಂತೂ ಕ್ರಿ. ಪೂರ್ವ ಆರನೆಯ ಶತಮಾನಕ್ಕೆ ಸೇರಿವೆ ಎಂದು ತಿಳಿದುಬಂದಿದೆ. ಇದು ಪ್ರಾಯಶಃ ಭಾರತದಲ್ಲಿ ಮಾನವರ ಅಸ್ತಿತ್ವ ಪ್ರಾರಂಭವಾದ ಕಾಲವಾಗಿರಬಹುದು.

ಈ ಬಗ್ಗೆ ಕೊಂಚ ಕೆದಕಿದರೆ ನಾಣ್ಯ ಮತ್ತು ನೋಟುಗಳ ಬಗ್ಗೆ ಹಲವಾರು ಅಚ್ಚರಿಯ ಸಂಗತಿಗಳು ಹೊರಬೀಳುತ್ತವೆ. ಭಾರತದ ಹಣಕಾಸಿನ ಇತಿಹಾಸದಲ್ಲಿ ಹಲವಾರು ರೋಚಕ ಸಂಗತಿಗಳಿವೆ. ಇಂತಹ ಹತ್ತು ಸಂಗತಿಗಳನ್ನು ಕೆಳಗಿನ ಸ್ಲೈಡ್‌ ಶೋ ಮೂಲಕ ನೀಡಲಾಗಿದೆ:

ಭಾರತದ ನಾಣ್ಯಗಳು ಕ್ರಿ.ಪೂರ್ವ ಆರನೆಯ ಶತಮಾನಕ್ಕೆ ಸೇರಿವೆ

ಭಾರತದ ನಾಣ್ಯಗಳು ಕ್ರಿ.ಪೂರ್ವ ಆರನೆಯ ಶತಮಾನಕ್ಕೆ ಸೇರಿವೆ

ಭಾರತದಲ್ಲಿ ಹಲವೆಡೆ ಉತ್ಖತನ ನಡೆಸಿದ ವೇಳೆ ಹಲವಾರು ನಾಣ್ಯಗಳು ದೊರಕಿವೆ. ಇವುಗಳನ್ನು ವಿಶ್ಲೇಷಿಸಿದಾಗ ಇವು ಕ್ರಿ. ಪೂರ್ವ ಆರನೆಯ ಶತಮಾನಕ್ಕೆ ಸೇರಿವೆ ಎಂದು ತಿಳಿದುಬಂದಿದೆ. ಮೊಘಲರ ಕಾಲದಲ್ಲಿಯೂ ಹಣಕಾಸಿನ ವ್ಯವಸ್ಥೆ ನಾಣ್ಯಗಳ ಮೂಲಕ ನಡೆಯುತ್ತಿತ್ತು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಭಾರತದ ನಾಣ್ಯಗಳು ಕ್ರಿ.ಪೂರ್ವ ಆರನೆಯ ಶತಮಾನಕ್ಕೆ ಸೇರಿವೆ

ಭಾರತದ ನಾಣ್ಯಗಳು ಕ್ರಿ.ಪೂರ್ವ ಆರನೆಯ ಶತಮಾನಕ್ಕೆ ಸೇರಿವೆ

ಆದರೆ ಇವುಗಳಲ್ಲಿ ಅತಿ ಪ್ರಮುಖವಾದುದೆಂದರೆ ಚಕ್ರವರ್ತಿ ಶೇರ್ ಷಾ ಸೂರಿಯ ಕಾಲದ ನಾಣ್ಯವಾದ ರೂಪಿಯಾ. ಈ ರುಪಿಯಾದಿಂದಲೇ ಭಾರತದ ಹಣಕಾಸಿಗೆ ರೂಪಾಯಿ ಎಂಬ ಹೆಸರು ಬಂದಿದೆ.

ಕಾಗದದ ನೋಟುಗಳು ಹದಿನೆಂಟನೆಯ ಶತಮಾನಕ್ಕೆ ಸೇರಿವೆ

ಕಾಗದದ ನೋಟುಗಳು ಹದಿನೆಂಟನೆಯ ಶತಮಾನಕ್ಕೆ ಸೇರಿವೆ

ಭಾರತದ ಹಣಕಾಸಿನ ವ್ಯವಸ್ಥೆ ಹದಿನೆಂಟನೆಯ ಶತಮಾನದಲ್ಲಿ ಪ್ರಮುಖ ಬದಲಾವಣೆ ಕಂಡಿತು. ಅಂದಿನ ಪ್ರಮುಖ ಬ್ಯಾಂಕುಗಳಾಗಿದ್ದ ಬ್ಯಾಂಕ್ ಆಫ್ ಹಿಂದೋಸ್ತಾನ್, ಜೆನರಲ್ ಬ್ಯಾಂಕ್ ಆಫ್ ಬೆಂಗಾಲ್ ಮತ್ತು ಬೆಂಗಾಲ್ ಬ್ಯಾಂಕುಗಳು ಭಾರತದಲ್ಲಿ ಕಾಗದದ ನೋಟುಗಳನ್ನು ಚಲಾವಣೆಗೆ ತಂದ ಬ್ಯಾಂಕುಗಳಾಗಿವೆ.

ಪ್ರಥಮ ನೋಟುಗಳಲ್ಲಿ ವಿಕ್ಟೋರಿಯಾ ರಾಣಿಯ ಚಿತ್ರ

ಪ್ರಥಮ ನೋಟುಗಳಲ್ಲಿ ವಿಕ್ಟೋರಿಯಾ ರಾಣಿಯ ಚಿತ್ರ

ಭಾರತ ಸರ್ಕಾರದ ಪ್ರಥಮ ನೋಟುಗಳಲ್ಲಿ ರಾಣಿ ವಿಕ್ಟೋರಿಯಾರವರ ಚಿತ್ರ ಅಚ್ಚಾಗಿತ್ತು. ಈ ನೋಟುಗಳನ್ನು ಇಂಗ್ಲೆಂಡಿನಲ್ಲಿ ಮುದ್ರಿಸಿ ಭಾರತಕ್ಕೆ ತರಲಾಗುತ್ತಿತ್ತು. ದಾರಿ ಮಧ್ಯೆ ಎಲ್ಲಾದರೂ ಕಳುವಾಗುವ ಸಂಭವ ಇದ್ದ ಕಾರಣ ನೋಟುಗಳನ್ನು ಅರ್ಧವಾಗಿ ಕತ್ತರಿಸಿ ಮೊದಲು ಕಳುಹಿಸಲಾಗುತ್ತಿತ್ತು.

ಪ್ರಥಮ ನೋಟುಗಳಲ್ಲಿ ವಿಕ್ಟೋರಿಯಾ ರಾಣಿಯ ಚಿತ್ರ

ಪ್ರಥಮ ನೋಟುಗಳಲ್ಲಿ ವಿಕ್ಟೋರಿಯಾ ರಾಣಿಯ ಚಿತ್ರ

ಇದು ಸುರಕ್ಷಿತವಾಗಿ ತಲುಪಿದ ಸುದ್ದಿ ತಿಳಿದ ಬಳಿಕವೇ ಉಳಿದರ್ಧ ಭಾಗವನ್ನು ಕಳುಹಿಸಲಾಗುತ್ತಿತ್ತು. ಬಳಿಕ ಇವನ್ನು ಒಂದೊಂದಾಗಿ ಜೋಡಿಸಲಾಗುತ್ತಿತ್ತು. 1867ರಲ್ಲಿ ಇಂತಹ ನೋಟುಗಳನ್ನು ನಿಲ್ಲಿಸಿ ಭಾರತದಲ್ಲಿಯೇ ಮುದ್ರಿಸುವ ಕಾರ್ಯ ಪ್ರಾರಂಭವಾಯಿತು.

1935ರಲ್ಲಿ ಅಸ್ತಿತ್ವಕ್ಕೆ ಬಂದ ರಿಸರ್ವ್ ಬ್ಯಾಂಕ್

1935ರಲ್ಲಿ ಅಸ್ತಿತ್ವಕ್ಕೆ ಬಂದ ರಿಸರ್ವ್ ಬ್ಯಾಂಕ್

ಭಾರತದ ನೋಟುಗಳನ್ನು ಮುದ್ರಿಸಲು ಮತ್ತು ನಿರ್ವಹಿಸಲೆಂದೇ ಭಾರತೀಯ ರಿಸರ್ವ್ ಬ್ಯಾಂಕ್ 1935ರಲ್ಲಿ ಪ್ರಾರಂಭವಾಯಿತು. ಆರ್ಬಿಐ ಎಂದೇ ಪ್ರಖ್ಯಾತವಾದ ಈ ಬ್ಯಾಂಕ್ ಮುದ್ರಿಸಿದ ಪ್ರಥಮ ನೋಟು ಐದು ರೂಪಾಯಿದ್ದಾಗಿದ್ದು ಆರನೆಯ ರಾಜ ಜಾರ್ಜ್(King George VI)ರವರ ಭಾವಚಿತ್ರ ಹೊಂದಿತ್ತು.

ಒಂದು ರೂಪಾಯಿ ಬಂದಿದ್ದು ಸ್ವಾತಂತ್ರ್ಯದ ಬಳಿಕ

ಒಂದು ರೂಪಾಯಿ ಬಂದಿದ್ದು ಸ್ವಾತಂತ್ರ್ಯದ ಬಳಿಕ

ಪ್ರಾರಂಭದಲ್ಲಿ ಆರ್ ಬಿ ಐ ಒಂದು ರೂಪಾಯಿಯ ನೋಟುಗಳನ್ನು ಮುದ್ರಿಸಿರಲೇ ಇಲ್ಲ. ಅಲ್ಲಿಯವರೆಗೆ ಬಳಕೆಯಲ್ಲಿ ಇತರ ಒಂದು ರೂಪಾಯಿಯ ನೋಟುಗಳು ಬಳಕೆಯಲ್ಲಿದ್ದವು. ಸ್ವಾತಂತ್ರದ ಬಳಿಕವೇ ಒಂದು ರೂಪಾಯಿಯ ನೋಟುಗಳನ್ನು ಪ್ರಥಮವಾಗಿ ಮುದ್ರಿಸಲಾಯಿತು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಒಂದು ರೂಪಾಯಿ ಬಂದಿದ್ದು ಸ್ವಾತಂತ್ರ್ಯದ ಬಳಿಕ

ಒಂದು ರೂಪಾಯಿ ಬಂದಿದ್ದು ಸ್ವಾತಂತ್ರ್ಯದ ಬಳಿಕ

1949ರಲ್ಲಿ ಮೊದಲಾಗಿ ಸ್ವತಂತ್ರ ಭಾರತದ ಸ್ವತಂತ್ರ ಒಂದು ರೂಪಾಯಿಯ ನೋಟು ಬಿಡುಗಡೆಯಾಯಿತು. ಸ್ವಾರಸ್ಯವೆಂದರೆ ಇದೇ ಸಮಯದಲ್ಲಿ ಐದು ಸಾವಿರ ಮತ್ತು ಹತ್ತು ಸಾವಿರ ರೂಪಾಯಿಗಳ ನೋಟುಗಳನ್ನೂ ಮುದ್ರಿಸಲಾಯಿತು.

ಅತಿಹೆಚ್ಚಿನ ವರ್ಗರಾಶಿಯ ನೋಟು ಎಂದರೆ ಹತ್ತು ಸಾವಿರ ರೂಪಾಯಿಯ ನೋಟು

ಅತಿಹೆಚ್ಚಿನ ವರ್ಗರಾಶಿಯ ನೋಟು ಎಂದರೆ ಹತ್ತು ಸಾವಿರ ರೂಪಾಯಿಯ ನೋಟು

1938 ರಿಂದ 1946 ರ ನಡುವೆ ಒಂದು ಸಾವಿರದಿಂದ ಹತ್ತು ಸಾವಿರ ರೂಪಾಯಿಗಳ ವರ್ಗರಾಶಿಯ ನೋಟುಗಳು ಚಲಾವಣೆಯಲ್ಲಿದ್ದವು. ಆದರೆ ಬಳಿಕ ಇವುಗಳ ಚಲಾವಣೆಯನ್ನು ಹಿಂದೆ ತೆಗೆದುಕೊಳ್ಳಲಾಯಿತು. ಇದುವರೆಗೆ ಆರ್ ಬಿ ಐ ಮುದ್ರಿಸಿದ ಅತಿ ಹೆಚ್ಚು ಮೌಲ್ಯದ ಒಂದು ನೋಟಿನ ಬೆಲೆ ಹತ್ತು ಸಾವಿರ ರೂಪಾಯಿಗಳು.

ಸಾವಿರ, ಐದುಸಾವಿರ ಮತ್ತು ಹತ್ತು ಸಾವಿರದ ನೋಟು ಚಲಾವಣೆಯಿಂದ ಹಿಂದಕ್ಕೆ

ಸಾವಿರ, ಐದುಸಾವಿರ ಮತ್ತು ಹತ್ತು ಸಾವಿರದ ನೋಟು ಚಲಾವಣೆಯಿಂದ ಹಿಂದಕ್ಕೆ

1954ರಲ್ಲಿ ಒಂದು, ಐದು ಮತ್ತು ಹತ್ತುಸಾವಿರ ಮೌಲ್ಯದ ನೋಟುಗಳನ್ನು ಮರು ಚಲಾವಣೆ ಮಾಡಲಾಯಿತು. ಆದರೆ ಬಳಿಕ 1978 ರಲ್ಲಿ ಇವುಗಳನ್ನ ಚಲಾವಣೆಯನ್ನು ರದ್ದುಗೊಳಿಸಿ ಹಿಂತೆಗೆದುಕೊಳ್ಳಲಾಯಿತು.

2011ರಲ್ಲಿ ಪೈಸೆಗಳಿಗೆ ಇಲ್ಲವಾದ ಮೌಲ್ಯ

2011ರಲ್ಲಿ ಪೈಸೆಗಳಿಗೆ ಇಲ್ಲವಾದ ಮೌಲ್ಯ

ಜೂನ್ 30, 2011ರಲ್ಲಿ ಒಂದು ಪೈಸೆ, ಎರಡು ಪೈಸೆ, ಮೂರು ಪೈಸೆ, ಐದು ಪೈಸೆ, ಹತ್ತು ಪೈಸೆ, ಇಪ್ಪತ್ತು ಪೈಸೆ ಮತ್ತು ಇಪ್ಪತ್ತೈದು ಪೈಸೆಗಳ ಚಲಾವಣೆಯನ್ನು ರದ್ದುಗೊಳಿಸಿ ಅದೇಶ ಹೊರಡಿಸಲಾಯಿತು. ಈಗ ಐವತ್ತು ಪೈಸೆಯೇ ಕನಿಷ್ಠ ಮೊತ್ತದ ನಾಣ್ಯವಾಗಿದೆ.

ಚಿಕ್ಕ ನಾಣ್ಯದ ಗರಿಮೆ ಐವತ್ತು ಪೈಸೆಗೆ

ಚಿಕ್ಕ ನಾಣ್ಯದ ಗರಿಮೆ ಐವತ್ತು ಪೈಸೆಗೆ

ಇಂದು ಐವತ್ತು ಪೈಸೆಯ ನಾಣ್ಯವೇ ಚಿಕ್ಕ ನಾಣ್ಯದ ಗರಿಮೆ ಹೊಂದಿದ್ದು ಇದರ ಮುಂದಿನ ನಾಣ್ಯ ಎಂದರೆ ಒಂದು ರೂಪಾಯಿಯ ನಾಣ್ಯವಾಗಿದೆ.

ನೋಟುಗಳಲ್ಲಿ ಬದಲಾದ ಮಹಾತ್ಮಾ ಗಾಂಧಿ ಸರಣಿ

ನೋಟುಗಳಲ್ಲಿ ಬದಲಾದ ಮಹಾತ್ಮಾ ಗಾಂಧಿ ಸರಣಿ

ನೋಟುಗಳಲ್ಲಿ ಮಹತ್ಮಾ ಗಾಂಧಿಯವರ ಕ್ರಮ ಅಥವಾ ಸರಣಿಯನ್ನು (MG series)1996ರಲ್ಲಿ ಪ್ರಾರಂಭಿಸಲಾಯಿತು. ಹಲವಾರು ಸುರಕ್ಷಾ ವಿಧಾನಗಳನ್ನು ಪ್ರತಿ ನೋಟುಗಳಲ್ಲಿ ಅಳವಡಿಸಲಾಯಿತು. 2005ರಲ್ಲಿ ಈ ಸುರಕ್ಷಾ ವಿಧಾನಗಳನ್ನೆಲ್ಲಾ ಬದಲಿಸಲಾಯಿತು.

ನೋಟುಗಳಲ್ಲಿ ಬದಲಾದ ಮಹಾತ್ಮಾ ಗಾಂಧಿ ಸರಣಿ

ನೋಟುಗಳಲ್ಲಿ ಬದಲಾದ ಮಹಾತ್ಮಾ ಗಾಂಧಿ ಸರಣಿ

2005ಕ್ಕೂ ಮುನ್ನ ಮುದ್ರಿಸಿದ್ದ ನೋಟುಗಳನ್ನು ಚಲಾವಣೆಯಿಂದ ಹಿಂದೆ ಪಡೆದುಕೊಂಡು ಮಾರುಕಟ್ಟೆಯಲ್ಲಿ 2005ರ ಬಳಿಕ ಮುದ್ರಿಸಿದ ನೋಟುಗಳನ್ನು ಬದಲಿಸಿಕೊಳ್ಳುವಂತೆ ದೇಶದಾದ್ಯಂತ ಬ್ಯಾಂಕುಗಳಿಗೆ ನಿರ್ದೇಶನ ನೀಡಲಾಯಿತು. ಈ ಪ್ರಕ್ರಿಯೆ ಜೂನ್ 30, 2015ರವರೆಗೂ ಮುಂದುವರೆದಿತ್ತು.

English summary

Interesting facts about Indian currency you probably dont know

Indian currency is as historic as the Indian civilization. Currency in the form of punch-marked coins existed even before Christ. Coinage can be traced back to as early as the 6th century BC, in the earliest of civilizations in India. This history of coins and notes is as interesting as it is long.Here are some interesting facts about Indian currency:
X
Desktop Bottom Promotion