'ಮಾನವ ಧ್ವನಿಯ' ಬಗ್ಗೆ ಕೆಲವೊಂದು ಅಚ್ಚರಿಯ ಸಂಗತಿಗಳು....

ಸಾಮಾನ್ಯವಾಗಿ ಧ್ವನಿಪೆಟ್ಟಿಗೆ ಸೋಂಕಿಗೆ ಸುಲಭವಾಗಿ ತುತ್ತಾಗದಿರುವ ಕಾರಣ ಹೆಚ್ಚಿನವರು ಈ ಬಗ್ಗೆ ಅಸಡ್ಡೆ ವಹಿಸುತ್ತಾರೆ. ಧ್ವನಿಪೆಟ್ಟಿಗೆ/ಧ್ವನಿಯ ಬಗ್ಗೆ ಕೆಲವಾರು ಅಚ್ಚರಿಯ ಮಾಹಿತಿಗಳಿದ್ದು ಪ್ರತಿಯೊಬ್ಬರೂ ಅರಿತಿರುವುದು ಅಗತ್ಯ...

By: manu
Subscribe to Boldsky

ವಿಶ್ವದ ಜೀವಿಗಳಲ್ಲಿಯೇ ಅತ್ಯಂತ ಬುದ್ಧಿವಂತ ಜೀವಿಯಾಗಿರುವ ಮಾನವರ ಅತ್ಯಂತ ಪ್ರಬಲವಾದ ಶಕ್ತಿ ಎಂದರೆ ಸಂವಹನದ ಶಕ್ತಿ. ಮಾತಿನ ಮೂಲಕ ಇಬ್ಬರು ವ್ಯಕ್ತಿಗಳ ನಡೆಯುವ ಸಂವಹನದ ಸಾಮರ್ಥ್ಯ ಬೇರಾವ ಜೀವಿಗೂ ಇಲ್ಲ. ಸಏಕೆಂದರೆ ಮೆದುಳಿನ ಆಲೋಚನೆಯನ್ನು ಪದಗಳ ಮೂಲಕ ಎದುರಿನ ವ್ಯಕ್ತಿಗೆ ತಲುಪಿಸಿ ಆ ಮೂಲಕ ಅಗತ್ಯ ಕೆಲಸಗಳಿಗೆ ಸೂಚನೆಯನ್ನು ನೀಡುವುದು ಮಾನವರಿಗೆ ಮಾತ್ರ ಸಾಧ್ಯ. ಕೆಲವು ಪ್ರಾಣಿಗಳಲ್ಲಿಯೂ ಈ ಸಂವಹನ ಶಕ್ತಿ ಇದೆಯಾದರೂ ಮಾನವರಿಗೆ ಹೋಲಿಸಿದರೆ ಈ ಶಕ್ತಿ ಅತ್ಯಲ್ಪವಾದುದು.   ಮನುಷ್ಯನ ಶರೀರದ ಬಗ್ಗೆ 9 ಅಚ್ಚರಿಯ ವಿಷಯಗಳು

ಮಾತುಗಳು ಪದಗಳ ರೂಪದಲ್ಲಿ ಹೊರಬರಬೇಕಾದರೆ ನಮ್ಮ ಯೋಚನೆಗಳನ್ನು ಮೆದುಳು ವಿದ್ಯುತ್‌ ತರಂಗಗಳನ್ನಾಗಿಸಿ ಧ್ವನಿಪೆಟ್ಟಿಗೆಯ ಮೂಲಕ ಹೊರಹೋಗುವ ವಾಯುವನ್ನು ಕ್ರಮಬದ್ದವಾಗಿ ಸಂಕುಚಿಸಿ ವಿಕಸಿರುವಂತೆ ಮಾಡಬೇಕು. ವಾಸ್ತವವಾಗಿ ಮಾತನಾಡುವುದು ಎಂದರೆ ಧ್ವನಿಪೆಟ್ಟಿಗೆ, ನಾಲಿಗೆ ಮತು ಇತರ ಸ್ನಾಯುಗಳಿಗೆ ನೀಡುವ ಅಪಾರವಾದ ಕೆಲಸವೇ ಆಗಿದೆ.

ದೇಹದ ಇತರ ಯಾವುದೇ ಅಂಗಗಳಿಗೆ ಇರುವಂತೆ ಈ ಅಂಗಗಳಿಗೂ ತಮ್ಮದೇ ಆದ ಸಾಮರ್ಥ್ಯಗಳಿವೆ. ಇದನ್ನು ಮೀರಿದರೆ ಆರೋಗ್ಯ ಕೆಡುವುದು ಖಾತರಿಯಾಗಿದೆ. ಸಾಮಾನ್ಯವಾಗಿ ಧ್ವನಿಪೆಟ್ಟಿಗೆ ಸೋಂಕಿಗೆ ಸುಲಭವಾಗಿ ತುತ್ತಾಗದಿರುವ ಕಾರಣ ಹೆಚ್ಚಿನವರು ಈ ಬಗ್ಗೆ ಅಸಡ್ಡೆ ವಹಿಸುತ್ತಾರೆ. ಧ್ವನಿಪೆಟ್ಟಿಗೆ ಮತ್ತು ಧ್ವನಿಯ ಬಗ್ಗೆ ಕೆಲವಾರು ಅಚ್ಚರಿಯ ಮಾಹಿತಿಗಳಿದ್ದು ಇವುಗಳನ್ನು ಪ್ರತಿಯೊಬ್ಬರೂ ಅರಿತಿರುವುದು ಅಗತ್ಯ.... 


ಮಾಹಿತಿ#1

ಮಾನವನ ವಯಸ್ಸಿನೊಂದಿಗೆ ಧ್ವನಿಯೂ ಬದಲಾಗುತ್ತಾ ಹೋಗುತ್ತದೆ. ಮಗುವಿದ್ದಾಗ ಕೀರಲಾಗಿದ್ದ ಸ್ವರ ವಯಸ್ಸಾಗುತ್ತಿದ್ದಂತೆಯೇ ಗಡಸಾಗುತ್ತಾ ಸಾಗುತ್ತದೆ. ವಿಶೇಷವಾಗಿ ಪುರುಷರಲ್ಲಿ ಈ ಗಡಸು ಧ್ವನಿ ತೀರಾ ಹೆಚ್ಚಾಗಿರುತ್ತದೆ. ವೃದ್ದಾಪ್ಯ ಸಮೀಪಿಸುತ್ತಿದ್ದಂತೆ ಧ್ವನಿ ಸರಳರೇಖೆಯಂತಿರದೇ ಚುಕ್ಕಿಗಳ ರೇಖೆಯಂತಿರುತ್ತದೆ. ಈ ಧ್ವನಿಗೆ mezzo-soprano ಅಥವಾ baritone ಎಂದು ಕರೆಯುತ್ತಾರೆ. ಅಚ್ಚರಿ ಎಂದರೆ ಮಹಿಳೆಯರ ಧ್ವನಿ ಹೆಚ್ಚು ಗಡಸಾಗುವುದಿಲ್ಲ.

ಮಾಹಿತಿ #2

ಮಾನವರು ಎಷ್ಟು ದೊಡ್ಡದಾಗಿ ದನಿ ಮೂಡಿಸಬಹುದು? ಮೈಕ್ ಇಲ್ಲದೇ ಮಾತನಾಡಬಲ್ಲವರೂ ನಾಚುವಂತೆ ಇಂಗ್ಲೆಂಡಿನ ಕೆಂಟ್ ಪ್ರಾಂತದ ಉಪ ಪ್ರಾಧ್ಯಾಪಕರೊಬ್ಬರು 129 ಡೆಸಿಬೆಲ್ ನಷ್ಟು ದೊಡ್ಡ ದನಿ ಮೂಡಿಸಿದ್ದಾರೆ. ಈ ಪ್ರಾಬಲ್ಯವೇ ಅವರಿಗೆ ವಿಶ್ವದ ಅತಿ ದೊಡ್ಡ ದನಿಯ ವ್ಯಕ್ತಿ ಎಂಬ ಗಿನ್ನೆಸ್ ದಾಖಲೆಯ ಖ್ಯಾತಿಯನ್ನೂ ತಂದಿದೆ. ದೊಡ್ಡ ಇಂಜಿನ್ ಕೆಲಸ ಮಾಡುತ್ತಿರುವಾಗ ಸುಮಾರೂ ನೂರಿಪ್ಪತ್ತು ಡೆಸಿಬೆಲ್ ಇದ್ದು ಈ ಸಮಯದಲ್ಲಿ ಅಕ್ಕಪಕ್ಕದವರು ಮಾತನಾಡಿದ್ದು ಕೇಳಿಸುವುದೇ ಇಲ್ಲ. ನೂರಾನಲವತ್ತು ಡೆಸಿಬೆಲ್ ದಾಟಿದರೆ ಕಿವಿ ತಮಟೆ ತಾಳಿಕೊಳ್ಳದೇ ಕಿವುಡುತನ ಆವರಿಸಬಹುದು. ಹಾಗಿದ್ದಾಗ 129 ಡೆಸಿಬೆಲ್ ಧ್ವನಿ ಹೇಗಿರಬಹುದು ಎಂದು ಊಹಿಸಬಹುದು.

ಮಾಹಿತಿ #3

ನಡುವಯಸ್ಸು ದಾಟಿದ ಪುರುಷರಲ್ಲಿ ಬಹುತೇಕ ಎಲ್ಲರೂ ಚುಕ್ಕಿಗಳ ಅಥವಾ baritone ಧ್ವನಿಯನ್ನು ಹೊಂದಿರುತ್ತಾರೆ. ಅಂದರೆ ಇವರಿಗೆ ಇನ್ನು ಮುಂದೆ ಮಕ್ಕಳಂತೆ ಕೀರಲು ಸ್ವರದಲ್ಲಿ ಮಾತನಾಡಲು ಸಾಧ್ಯವಿಲ್ಲ. ಅಚ್ಚರಿಯ ಮಾಹಿತಿ ಎಂದರೆ ಈ ಬಾರಿಟೋನ್ ಧ್ವನಿಯನ್ನೇ ಹೆಚ್ಚಿನ ಯುವತಿಯರು ಇಷ್ಟಪಡುತ್ತಾರೆ.

ಮಾಹಿತಿ #4

ಮಾನವನ ಧ್ವನಿಯನ್ನು ಮುದ್ರಿಸುವ ನಿಟ್ಟಿನಲ್ಲಿ ಪ್ರಥಮ ಯಶಸ್ಸು ಸಿಕ್ಕಿದ್ದು ಯಾವಾಗ ಎಂದು ಗೊತ್ತೇ? 1857ರಲ್ಲಿ. ಫೋನಾಟೋಗ್ರಾಫ್ (Phonautograph) ಎಂಬ ಉಪಕರಣವನ್ನು Édouard-Léon Scott de Martinville ಎಂಬುವರು ಕಂಡುಹಿಡಿದಿದ್ದರು. ಬಳಿಕ 1877ರಲ್ಲಿ ಥಾಮಸ್ ಆಲ್ವಾ ಎಡಿಸನ್ ರವರು ಇದನ್ನು ಅಭಿವೃದ್ದಿಪಡಿಸಿ ಸುಧಾರಿತ ರೂಪವನ್ನು ವಿಶ್ವಕ್ಕೆ ಪರಿಚಯಿಸಿದರು.

ಮಾಹಿತಿ#5

ಮಾನವರ ಮೆದುಳು ಮತ್ತು ಮಾನವರ ಧ್ವನಿಗೆ ನಿಕಟ ಸಂಬಂಧವಿದೆ ಎಂದು ನಿಮಗೆ ಗೊತ್ತೇ? ಹೌದು, ನಮ್ಮ ಮೆದುಳು ನಾವು ಕೇಳುವ ಇತರ ಯಾವುದೇ ಧ್ವನಿಗಿಂತಲೂ ಹೆಚ್ಚಿನ ಪ್ರಾಮುಖ್ಯತೆಯನ್ನು ಮಾನವರ ಧ್ವನಿಗೆ ನೀಡುತ್ತದೆ. ಇದೇ ಕಾರಣಕ್ಕೆ ಸಂಗೀತದ ನಡುವೆ ಸಂಗೀತಗಾರರ ಪದಗಳೇ ನಮಗೆ ನೆನಪಿರುತ್ತವೆ. ಉಳಿದ ವಾದ್ಯಗಳ ಆಲಾಪನೆ ನಮಗೆ ಇಷ್ಟವಾದರೂ ಪದಗಳಷ್ಟು ಸುಲಭವಾಗಿ ನೆನಪಿಟ್ಟುಕೊಳ್ಳಲಾರೆವು.

ಮಾಹಿತಿ #6

ವಿಶ್ವದ ಜೀವಿಗಳಲ್ಲಿ ಅತಿ ವೈವಿಧ್ಯಮಯ ಧ್ವನಿತರಂಗಗಳನ್ನು ಹೊರಡಿಸಲು ಸಾಧ್ಯವಿರುವುದು ಮಾನವರಿಗೆ ಮಾತ್ರ. ಕೆಳಸ್ತರದಿಂದ ಮೇಲಿನ ಸ್ತರದವರೆಗೆ ಧ್ವನಿ ತರಂಗಗಳನ್ನು ಬದಲಿಸುತ್ತಾ ಅಕ್ಷರ ಮತ್ತು ಪದಗಳನ್ನು ಬದಲಿಸುತ್ತಾ ಹೆಚ್ಚೂ ಕಡಿಮೆ ಅನಂತ ಬಗೆಯ ಧ್ವನಿಗಳನ್ನು ಮಾನವರು ಹೊರಡಿಸಬಹುದು. ವಿಶ್ವದ ಬೇರಾವ ಜೀವಿಯೂ ಇಷ್ಟೊಂದು ವೈವಿಧ್ಯಮಯ ಧ್ವನಿಗಳನ್ನು ಹೊರಡಿಸಲಾರದು.

ಮಾಹಿತಿ #7

ಇಟಲಿಯಲ್ಲಿ ಪ್ರಚಲಿತವಾಗಿದ್ದ ಒಂದು ಕ್ರೂರ ವಿಧಾನದಲ್ಲಿ ಬಾಲಕನೊಬ್ಬನನ್ನು ನಪುಂಸಕನಾಗಿಸಿ ಈತನ ಧ್ವನಿಯನ್ನು ಕೀರಲಾಗಿಸುತ್ತಿತ್ತು. ಈ ವಿಧಿಗೆ castration ಎಂದು ಕರೆಯಲಾಗುತ್ತದೆ. ಈ ವಿಧಾನಕ್ಕೆ ಒಳಗಾದ ವ್ಯಕ್ತಿಯನ್ನು Castrati ಎಂದು ಕರೆಯುತ್ತಾರೆ.

ಮಾಹಿತಿ #8

ಒಂದು ಸಮೀಕ್ಷೆಯಲ್ಲಿ ಕಂಡುಕೊಂಡ ಪ್ರಕಾರ ತಾರಕಸ್ತರದ ಧ್ವನಿಯನ್ನು ಹೊಂದಿರುವ ಮಹಿಳೆಯರು ಹೆಚ್ಚಿನ ತಾರಕ ಸ್ವರದ ಪುರುಷರನ್ನು ಇಷ್ಟಪಡುತ್ತಾರೆ ಮತ್ತು ಮಂದ್ರಸ್ತರದ ಧ್ವನಿ ಅಥವಾ ಗಡಸು ದನಿಯನ್ನು ಹೊಂದಿರುವ ಮಹಿಳೆಯರು ಗಡಸು ದನಿಯ ಪುರುಷರನ್ನೇ ಇಷ್ಟಪಡುತ್ತಾರೆ. ಕಾಕತಾಳೀಯ ಅನ್ನಿಸುತ್ತಿಲ್ಲವೇ?

 

Story first published: Wednesday, November 23, 2016, 10:59 [IST]
English summary

Interesting Facts About Human Voice

Human voice is something magical. Expressing out our thoughts through words makes life truly beautiful. But, have we ever given a serious thought on the unknown facts about human voice or the vocal cords, unless there is any medical need for it? Well, we are here to share some of the unknown and interesting facts about voice that you should know.
Please Wait while comments are loading...
Subscribe Newsletter