ಕಪ್ಪು ಹಣದ ಮೇಲೆ 'ಸರ್ಜಿಕಲ್ ಸ್ಟ್ರೈಕ್'-ಅಂತೂ ಎಲ್ಲರಿಗೂ ಅಚ್ಚರಿ!

ಕಪ್ಪುಹಣ ಹೊಂದಿದ್ದ ಒಂದಷ್ಟು ಮಂದಿ ತೆರಿಗೆ ಕಟ್ಟಿ ಬಿಳಿಯಾಗಿಸಿದ್ದರು. ಆದರೆ ಹೆಚ್ಚಿನವರು ಸರಕಾರ ಏನೂ ಮಾಡಲಿಕ್ಕಿಲ್ಲವೆನ್ನುವ ಅಸಡ್ಡೆಯಿಂದಾಗಿ ಹಾಗೆ ಕುಳಿತುಕೊಂಡಿದ್ದರು, ಆದರೆ ಈಗ ಎಲ್ಲಾ ತಲೆಕೆಳಗಾಗಿದೆ...

By: Hemanth
Subscribe to Boldsky

ಕಪ್ಪು ಹಣವಿದ್ದರೆ ಅದಕ್ಕೆ ಸರಿಯಾದ ತೆರಿಗೆ ಕಟ್ಟಿ ಅದನ್ನು ಬಿಳಿ ಹಣವಾಗಿ ಮಾಡಿ ಎಂದು ಕೇಂದ್ರ ಸರಕಾರವು ಸಪ್ಟೆಂಬರ್ 30ರ ತನಕ ಅವಕಾಶ ನೀಡಿತ್ತು. ಕಪ್ಪುಹಣ ಹೊಂದಿದ್ದ ಒಂದಷ್ಟು ಮಂದಿ ತೆರಿಗೆ ಕಟ್ಟಿ ಬಿಳಿಯಾಗಿಸಿದ್ದರು. ಆದರೆ ಹೆಚ್ಚಿನವರು ಸರಕಾರ ಏನೂ ಮಾಡಲಿಕ್ಕಿಲ್ಲವೆನ್ನುವ ಅಸಡ್ಡೆಯಿಂದಾಗಿ ಹಾಗೆ ಕುಳಿತುಕೊಂಡಿದ್ದರು. ಆದರೆ ನ.8ರಂದು ರಾತ್ರಿ 12 ಗಂಟೆ ಬಳಿಕ 500 ಹಾಗೂ 1000 ನೋಟು ಕಾನೂನುಬದ್ಧವಾಗಿ ಚಲಾವಣೆಯಲ್ಲಿರುವುದಿಲ್ಲವೆಂದು ಘೋಷಣೆಯಾದ ಬಳಿಕ ಕಪ್ಪುಹಣ ಹೊಂದಿರುವವರು ನಿದ್ದೆಗೆಟ್ಟಿದ್ದಾರೆ.

ಕಪ್ಪು ಹಣ ಹಾಗೂ ನಕಲಿ ನೋಟನ್ನು ತಡೆಯಲು ಸರಕಾರದ ಸೂಕ್ತ ನಿರ್ಧಾರ ಇದಾಗಿದೆ. ಈ ಸಂದರ್ಭದಲ್ಲಿ ಕಪ್ಪು ಹಣವೆಂದರೆ ಏನು ಎನ್ನುವ ಪ್ರಶ್ನೆ ಬರುತ್ತದೆ. ತೆರಿಗೆ ಕಟ್ಟದೆ ಇಟ್ಟಿರುವ ಹಣವನ್ನು ಕಪ್ಪು ಹಣವೆಂದು ಪರಿಗಣಿಸಲಾಗಿದೆ. ತೆರಿಗೆ ಕಟ್ಟದೆ ಇರುವಂತಹ ನಗದು ಹಣವು ಹೆಚ್ಚು ವ್ಯಾಪಾರಿಗಳು, ರಾಜಕಾರಣಿಗಳು ಹಾಗೂ ಕೆಲವೊಂದು ವ್ಯಕ್ತಿಗಳಲ್ಲಿ ಇಂತಹ ಹಣವು ಖಜಾನೆಗಳಲ್ಲಿ ಇದೆ. ನಕಲಿ 10 ರೂ.ನಾಣ್ಯಗಳನ್ನು ಪತ್ತೆಹಚ್ಚಲು ಸಿಂಪಲ್ ಟಿಪ್ಸ್

ಆದರೆ 500 ಹಾಗೂ ಒಂದು ಸಾವಿರ ರೂ. ನೋಟನ್ನು ಹಠಾತ್ ಆಗಿ ಬಂದ್ ಮಾಡಿರುವ ಕಾರಣದಿಂದಾಗಿ ಕೆಲವರು ಅಚ್ಚರಿಗೊಂಡಿದ್ದಾರೆ. ಆದರೆ ಇದರ ಬಗ್ಗೆ ಯಾರೂ ಚಿಂತಿಸಬೇಕಿಲ್ಲ. ಯಾಕೆಂದರೆ ಬ್ಯಾಂಕ್‌ಗಳಲ್ಲಿ 500 ರೂ. ನೋಟನ್ನು ಬದಲಾಯಿಸಿಕೊಳ್ಳಬಹುದು. ಇನ್ನು 2 ಸಾವಿರ ರೂ. ನೋಟು ಕೂಡ ಪಡೆಯಬಹುದು. ಏನು ಕಳೆದುಕೊಳ್ಳದೆ ನಕಲಿ ಹಣವನ್ನು ಹೇಗೆ ಧ್ವಂಸ ಮಾಡಬಹುದು ಎಂದು ತಿಳಿದುಕೊಳ್ಳಿ...

ಆಸ್ಪತ್ರೆ ಬಿಲ್ ಪಾವತಿಸಲು......

ಆಸ್ಪತ್ರೆ ಬಿಲ್ ಪಾವತಿಸಲು ಹಾಗೂ ಮೆಡಿಕಲ್ ನಲ್ಲಿ ಔಷಧಿ ಖರೀದಿಸಲು 500 ಹಾಗೂ ಒಂದು ಸಾವಿರದ ನೋಟನ್ನು ಬಳಸಬಹುದು.

ಸರಕಾರಿ ಮಾನ್ಯತೆ ಹೊಂದಿರುವ ಅಂಗಡಿಗಳಲ್ಲಿ....

ಸರಕಾರಿ ಮಾನ್ಯತೆ ಹೊಂದಿರುವ ಸಫಲ್ ನಂತಹ ಅಂಗಡಿಗಳಲ್ಲಿ ನೀವು ಈ ನೋಟುಗಳನ್ನು ಬಳಸಿಕೊಳ್ಳಬಹುದು.

ಪೆಟ್ರೋಲ್ ಬಂಕ್ ಗಳಲ್ಲಿ....

ಪೆಟ್ರೋಲ್ ಬಂಕ್ ಗಳಲ್ಲಿ ನೀವು 500 ಹಾಗೂ ಒಂದು ಸಾವಿರ ನೋಟನ್ನು ಬಳಸಬಹುದು. ಯಾಕೆಂದರೆ ಅವರಲ್ಲಿ ಹಣಕ್ಕೆ ದಾಖಲೆಯಿರುತ್ತದೆ.

ಟಿಕೆಟ್ ಮಾಡಿಸಲು....

ವಿಮಾನ ಟಿಕೆಟ್, ರೈಲು ಟಿಕೆಟ್ ಹಾಗೂ ಸರಕಾರಿ ಬಸ್ ಗಳ ಟಿಕೆಟ್ ಖರೀದಿಸಲು ಇದನ್ನು ಬಳಸಬಹುದು.

ಹಳೆ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಬಹುದು

ವಿಮಾನ ನಿಲ್ದಾಣಗಳಲ್ಲಿ ಹಳೆ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಬಹುದು.

ಹಣ ಪಾವತಿ ಮಾಡುವಂತಹ ವ್ಯವಸ್ಥೆ ಇರುವ ಎಟಿಎಂಗಳಲ್ಲಿ

ಹಳೆಯ ನೋಟುಗಳನ್ನು ನೀವು ಹಣ ಪಾವತಿ ಮಾಡುವಂತಹ ವ್ಯವಸ್ಥೆ ಇರುವ ಎಟಿಎಂಗಳಲ್ಲಿ ಪಾವತಿ ಮಾಡಬಹುದು.(ಇದು ಕಪ್ಪು ಹಣವೆಲ್ಲವೆಂದು ನಾವು ಭಾವಿಸಿರುತ್ತೇವೆ)

ಅಂತೂ ಇಂತೂ ಎಲ್ಲರಿಗೂ ಸರ್ಫೈಸ್....

ಕೇಂದ್ರ ಸರಕಾರದ ಹಠಾತ್ ನಿರ್ಧಾರದಿಂದಾಗಿ ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ಈ ಮಾರ್ಗವು ಭ್ರಷ್ಟಾಚಾರ, ಕಪ್ಪು ಹಣ, ಉಗ್ರರಿಗೆ ಸರಬರಾಜಾಗುವ ಹಣ ಸಹಿತ ಎಲ್ಲದಕ್ಕೂ ನಿಯಂತ್ರಣ ಹೇರಲಿದೆ. ಮೋದೀಜಿಗೆ ಒಂದು ಸಲಾಮ್!

 

Story first published: Wednesday, November 9, 2016, 12:26 [IST]
English summary

How Will India Get Rid Of Black Money?

People are baffled with the sudden decision of banning of the 500 and 1000 rupee notes, as they will be invalid hereon on and should hence be exchanged for the new 500 notes. Also, 2000 rupee notes will be shortly launched by the authorities and will be in circulation. Now, check out details on how Indians can get rid of the fake money without losing on anything...
Please Wait while comments are loading...
Subscribe Newsletter