ಧೈರ್ಯ ಶಾಲಿಗಳ 'ಧೈರ್ಯ' ಸೂಚಿಸುವ ರಾಶಿ ಭವಿಷ್ಯ

ಧೈರ್ಯದಿಂದ ಮುನ್ನುಗ್ಗಲು ಸ್ವಪ್ರೇರಣೆಯ ಜೊತೆಗೇ ಸ್ನೇಹಿತರು, ಕುಟುಂಬ ಸದಸ್ಯರು, ಆತ್ಮೀಯರು ಮತ್ತು ಹಿತೈಷಿಗಳು ನೀಡುವ ಪ್ರೇರಣೆ ಮಹತ್ವದ ಪಾತ್ರ ವಹಿಸುತ್ತದೆ. ಹೀಗೆ ಪ್ರೇರಣೆ ನೀಡುವವರೂ ಕೆಲವು ರಾಶಿಗಳಲ್ಲಿ ಹುಟ್ಟಿದವರೇ ಆಗಿರುತ್ತಾರೆ....

By: manu
Subscribe to Boldsky

ವಿವಿಧ ಜನ್ಮರಾಶಿಗಳಲ್ಲಿ ಹುಟ್ಟಿದವರ ಅಭ್ಯಾಸ, ಚಟುವಟಿಕೆ, ಮನೋಭಾವ ಎಲ್ಲವೂ ಬೇರೆ ಬೇರೆಯೇ ಆಗಿರುತ್ತದೆ. ಧೈರ್ಯ ಶಾಲಿಯಾಗಿರುವುದು ಕೆಲವು ರಾಶಿಯ ಜನರಿಗೆ ಜನ್ಮತಃ ಬಂದಿರುವ ಗುಣವಾಗಿದ್ದರೆ ಕೆಲವು ರಾಶಿಯವರಲ್ಲಿ ಇದು ಕಡಿಮೆ ಇರುತ್ತದೆ. ಕೆಲವರು ಪುಕ್ಕಲರಾಗಿರಲು ಇವರ ಜನ್ಮರಾಶಿಯೇ ಕಾರಣವಾಗಿರಬಹುದು. ರಾಶಿ ಭವಿಷ್ಯ: ನಿಮ್ಮ ಅದೃಷ್ಟವನ್ನೇ ಖುಲಾಯಿಸುವ 'ಭವಿಷ್ಯವಾಣಿ'

ಸಾಮಾನ್ಯವಾಗಿ ಧೈರ್ಯದಿಂದ ಮುನ್ನುಗ್ಗಲು ಸ್ವಪ್ರೇರಣೆಯ ಜೊತೆಗೇ ಸ್ನೇಹಿತರು, ಕುಟುಂಬ ಸದಸ್ಯರು, ಆತ್ಮೀಯರು ಮತ್ತು ಹಿತೈಷಿಗಳು ನೀಡುವ ಪ್ರೇರಣೆ ಮಹತ್ವದ ಪಾತ್ರ ವಹಿಸುತ್ತದೆ. ಹೀಗೆ ಪ್ರೇರಣೆ ನೀಡುವವರೂ ಕೆಲವು ರಾಶಿಗಳಲ್ಲಿ ಹುಟ್ಟಿದವರೇ ಆಗಿರುತ್ತಾರೆ. mಯಾವ ರಾಶಿಯಲ್ಲಿ ಹುಟ್ಟಿದವರು ಹೆಚ್ಚು ಧೈರ್ಯವಂತರಾಗಿರುತ್ತಾರೆ ಎಂಬುದನ್ನು ಮುಂದೆ ಓದಿ.... ರಾಶಿಫಲದ ಪ್ರಕಾರ ದೇವರನ್ನು ಪೂಜಿಸಿ, ಸಂತೃಪ್ತಿ ಪಡೆಯಿರಿ     

 

ಮೇಷ

ಈ ರಾಶಿಯ ಜನರು ಸಾಮಾನ್ಯವಾಗಿ ದಿಟ್ಟರೂ, ಹುರುಪುಳ್ಳವರೂ ಆತ್ಮವಿಶ್ವಾಸವುಳ್ಳವರೂ ಆಗಿರುತ್ತಾರೆ. ಯಾವುದೇ ಹೊಸ ಕಾರ್ಯವನ್ನು ಇವರು ಥಟ್ಟನೇ ಕೈಗೊಳ್ಳದೇ, ಇದರ ಸಾಧಕ ಬಾಧಕಗಳನ್ನು ಪರಿಗಣಿಸಿಯೇ ಮುಂದುವರೆಯುವಷ್ಟು ತಾಳ್ಮೆಯನ್ನು ತೋರುತ್ತಾರೆ. ಸರಿ ಎನಿಸಿದ ಬಳಿಕವೇ ಧೈರ್ಯದಿಂದ ಮುನ್ನುಗ್ಗುತ್ತಾರೆ.

ವೃಷಭ

ಈ ರಾಶಿಯ ಜನರು ಸ್ಥಿತಪ್ರಜ್ಞರೂ, ಜವಾಬ್ದಾರಿಯುತರೂ, ಸಾವಧಾನಿಗಳೂ ಮತ್ತು ವಾಸ್ತವವನ್ನು ಆಧರಿಸಿ ಮುಂದುವರೆಯುವವರೂ ಆಗಿರುತ್ತಾರೆ. ಆದರೆ ಮೇಶರಾಶಿಯವರಿಗಿಂತ ಕಡಿಮೆ ಧೈರ್ಯ ತೋರುತ್ತಾರೆ.

ಮಿಥುನ

ಈ ರಾಶಿಯವರು ಎಲ್ಲಾ ವಿಷಯದಲ್ಲಿ ತಮ್ಮ ಕುತೂಹಲವನ್ನು ಪ್ರಕಟಿಸಿ ತಾವು ಎಲ್ಲೆಲ್ಲೂ ಸಲ್ಲುವವರು ಎಂಬ ಭಾವನೆಯನ್ನು ಹೊಂದಿರುತ್ತಾರೆ. ಆದರೆ ಯಾವುದೇ ಒಂದು ವಿಷಯದಲ್ಲಿ ತಮ್ಮ ಕುತೂಹಲವನ್ನು ಕೇಂದ್ರೀಕರಿಸಲು ವಿಫಲರಾಗುತ್ತಾರೆ. ಇವರಿಗೆ ಅತಿ ಆಕರ್ಷಕವಾಗಿ ಕಂಡ ವಿಷಯದಲ್ಲಿ ಮುನ್ನುಗ್ಗಲು ಇವರು ಧೈರ್ಯ ತೋರುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ಇವರು ಯಾರೂ ಮುನ್ನುಗ್ಗದೆಡೆ ಮುನ್ನುಗ್ಗುವ ಧೈರ್ಯವನ್ನೂ ತೋರುತ್ತಾರೆ.

ಕಟಕ

ಈ ರಾಶಿಯ ಜನರು ಅತಿ ಸೂಕ್ಷ್ಮಮತಿಗಳಾಗಿದ್ದು ಹೆಚ್ಚಿನ ಸಂವೇದನಾಶಾಲಿಗಳೂ ಆಗಿರುತ್ತಾರೆ. ವೈಯಕ್ತಿಕವಾಗಿ ಇದು ಅಗತ್ಯವಿಲ್ಲದಿರುವ ಹೊರತು ಇವರು ಹೊಸ ವಿಷಯದೆಡೆ ಮುನ್ನುಗ್ಗಲು ಧೈರ್ಯ ತೋರುವುದಿಲ್ಲ.

ಸಿಂಹ

ಈ ರಾಶಿಯ ಜನರು ಜನ್ಮತಃ ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ. ಇವರು ಸದಾ ಆಕರ್ಷಣೆಯ ಕೇಂದ್ರವಾಗಿರಬೇಕು ಎಂದು ಆಶಿಸುತ್ತಾರೆ. ಎಲ್ಲರೂ ಇವರನ್ನು ಇಷ್ಟಪಡಬೇಕು ಎಂದು ಬಯಸುತ್ತಾರೆ. ಇದೇ ಕಾರಣಕ್ಕೆ ಇವರು ತಮ್ಮ ಮನಸ್ಸಿನ ಭಾವನೆಗಳನ್ನು ಸ್ಪಷ್ಟವಾಗಿ ಹೊರಗೆಡವುವ ಧೈರ್ಯ ತೋರುತ್ತಾರೆ.

ಕನ್ಯಾ

ಈ ರಾಶಿಯ ಜನರು ಶಿಸ್ತುಬದ್ದರಾಗಿದ್ದು ತಮ್ಮ ನಿತ್ಯದ ಚಟುವಟಿಕೆಯಲ್ಲಿ ಒಪ್ಪ ಓರಣಗಳನ್ನೇ ಬಯಸುತ್ತಾರೆ. ಇವರಿಗೆ ತಮ್ಮ ಕೆಲಸದಲ್ಲಿಯೇ ಆಗಲಿ ಸಂಬಂಧಪಟ್ಟ ಇತರರಿಂದ ಪಡೆಯುವ ಸಹಾಯಗಳೇ ಆಗಲಿ ಓರಣವಾಗಿರಬೇಕು. ಇದಕ್ಕಾಗಿ ಇವರು ಕಠಿಣ ಕ್ರಮಗಳನ್ನು ಕೈಗೊಳ್ಳುವ ಧೈರ್ಯವನ್ನು ಪ್ರಕಟಿಸುತ್ತಾರೆ.

ತುಲಾ

ಈ ರಾಶಿಯ ಜನರು ತಮ್ಮ ಸಾಮರ್ಥ್ಯದ ಮಿತಿಗೆ ಹೊರತಾದ ಕಾರ್ಯಗಳಿಗೆ ಕೈ ಹಾಕಲು ಹೋಗುವುದೇ ಇಲ್ಲ. ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಲು ಮನುಷ್ಯರಿಗೆ ಸಾಮಾನ್ಯವಾಗಿದ್ದರೂ ಈ ರಾಶಿಯ ಜನರು ಸರಿಯಾದ ನಿರ್ಧಾರವನ್ನೇ ಕೈಗೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಾರೆ.

ವೃಶ್ಚಿಕ

ಈ ರಾಶಿಯ ಜನರು ವಿವಿಧ ಗುಣಗಳನ್ನು ಹೊಂದಿದ್ದು ಧೈರ್ಯವಂತರಾಗಿರುವುದು ಇದರಲ್ಲೊಂದು. ಸಾಮಾನ್ಯವಾಗಿ ತಮ್ಮ ಚಟುವಟಿಕೆಯ ಬಗ್ಗೆ ಇವರು ಗೌಪ್ಯತೆಯನ್ನು ಕಾಪಾಡಿಕೊಂಡು ಬರುತ್ತಾರೆ. ಇದೇ ಕಾರಣಕ್ಕೆ ಇವರು ಜೀವನದ ಇನ್ನೊಂದು ಮಗ್ಗುಲಿನ ಸಂತೋಷವನ್ನು ಕಳೆದುಕೊಳ್ಳುತ್ತಾರೆ. ಹೀಗೆ ಕಳೆದುಕೊಂಡಿರುವುದನ್ನು ಪಡೆಯಲು ಇವರು ಮುನ್ನುಗ್ಗಲು ಹೆಚ್ಚಾಗಿ ಯತ್ನಿಸುವುದಿಲ್ಲ.

ಧನು

ಈ ರಾಶಿಯವರು ಸಾಮಾನ್ಯವಾಗಿ ಎಲ್ಲಕೂ ಸೈ ಎನ್ನುವ ಮನೋಭಾವ ಹೊಂದಿರುತ್ತಾರೆ. ಇಲ್ಲ, ಸಾಧ್ಯವಿಲ್ಲ ಎಂದು ಹೇಳುವುದನ್ನು ಇವರು ಇಷ್ಟಪಡುವುದಿಲ್ಲ. ಹೀಗೆ ಹೇಳಬೇಕಾದರೆ ಏಕಾಗಿ ಹೇಳಬೇಕಾಗಿ ಬಂತು? ಇದನ್ನು ಹೇಳದಿರಲು ಏನು ಮಾಡಬಹುದು ಎಂಬತ್ತ ಅವರ ಚಿಂತನೆ ಹರಿಯುತ್ತದೆ ಹಾಗೂ ಈ ನಿಟ್ಟಿನಲ್ಲಿ ಮುಂದುವರೆಯುವ ಧೈರ್ಯವನ್ನು ಪ್ರಕಟಿಸುತ್ತಾರೆ.

ಮಕರ

ಈ ರಾಶಿಯ ಜನರು ಸಾಮಾನ್ಯವಾಗಿ ನಿಯಮಗಳನ್ನು ಪಾಲಿಸುವವರಾಗಿದ್ದು ಉತ್ತಮ ಪ್ರೇಮಿಗಳೂ ಆಗಿರುತ್ತಾರೆ. ಇವರು ಸಂಪ್ರದಾಯಸ್ಥರೂ, ಹಠಮಾರಿಗಳೂ ಆಗಿರುತ್ತಾರೆ. ಹೊಸ ವಿಷಯಕ್ಕೆ ಇವರನ್ನು ಒಲಿಸುವುದು ಮತ್ತು ಬದಲಿಸುವುದೇ ಬಹಳ ತ್ರಾಸದಾಯಕ ಕಾರ್ಯವಾಗಿದೆ.

ಕುಂಭ

ಈ ರಾಶಿಯ ಜನರು ತಮ್ಮ ಮೆದುಳು ಮತ್ತು ಭಾವನೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಅಂದರೆ ಭಾವನಾತ್ಮಕವಾದ ಯಾವುದೇ ವಿಷಯವನ್ನು ಇವರು ಎದುರಿಸಲು ಸಮರ್ಥರಾಗಿದ್ದು ಇದಕ್ಕಾಗಿ ಧೈರ್ಯದಿಂದ ಮುನ್ನುಗ್ಗಲು ಸದಾ ಸಿದ್ಧರಿರುತ್ತಾರೆ.

ಮೀನ

ಈ ರಾಶಿಯ ಜನರು ಸಾಮಾನ್ಯವಾಗಿ ತಮ್ಮ ಹಿಂದಿನ ದಿನಗಳ ದುಃಖವನ್ನೇ ಮೆಲುಕು ಹಾಕುತ್ತಾ ಋಣಾತ್ಮಕ ಭಾವನೆಯನ್ನು ಪ್ರಕಟಿಸುತ್ತಿರುತ್ತಾರೆ. ಇವರು ವಾಸ್ತವವನ್ನು ಎದುರಿಸಲು ಪುಕ್ಕಲುತನ ತೋರುತ್ತಾರೆ. ಇತರ ರಾಶಿಗಳಿಗೆ ಹೋಲಿಸಿದರೆ ಹೊಸ ವಿಷಯದತ್ತ ಒಲವು ತೋರಲು ಇವರು ಧೈರ್ಯವನ್ನು ಎಲ್ಲರಿಗಿಂತ ಕಡೆಗೆ ಪ್ರಕಟಿಸುತ್ತಾರೆ.

Story first published: Wednesday, October 26, 2016, 11:37 [IST]
English summary

how be daring based on your zodiac-sign

In this article, we've shared the list on how daring people of different zodiac signs can be. Read them and do enlighten others as well.
Please Wait while comments are loading...
Subscribe Newsletter