Just In
- 13 min ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- 49 min ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
- 1 hr ago ಏಪ್ರಿಲ್ 24 ದಿನ ಭವಿಷ್ಯ: ಬುಧವಾರದ ಈ ದಿನ ನಿಮ್ಮ ರಾಶಿಫಲ ಹೇಗಿದೆ?
- 3 hrs ago UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
Don't Miss
- News ಲೋಕಸಭಾ ಚುನಾವಣೆ 2ನೇ ಹಂತದ ಬಹಿರಂಗ ಪ್ರಚಾರಕ್ಕೆ ನಾಳೆ ತೆರೆ; ಮನೆ ಮನೆ ಪ್ರಚಾರಕ್ಕೆ ಅವಕಾಶ
- Movies Bhagyalakshmi: ಕೆಲಸ ಹುಡುಕುವುದೇ ಭಾಗ್ಯಾಗೆ ಸವಾಲು; ಶ್ರೇಷ್ಠಾಳಿಂದ ತಾಂಡವ್ಗಿಲ್ಲ ಉಳಿಗಾಲ
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅತಿಥಿಗಳ ಎದುರು ಮುಜುಗರಕ್ಕೀಡಾದ ಮಹಿಳೆಯ ಕಥೆ ಇದು....
ಮಹಿಳೆಯ ಪತಿ ಆಕೆಯ ಹುಟ್ಟುಹಬ್ಬದ ಕೂಟದ ಸಮಯದಲ್ಲಿ ಅಕೆಗೆ ಏನೋ ಅಚ್ಚರಿ ತೋರಿಸುತ್ತೇನೆ ಎಂದು ಆಕೆಯ ಕಣ್ಣುಗಳಿಗೆ ಪಟ್ಟಿ ಕಟ್ಟಿ ಅತಿಥಿಗಳ ಎದುರು ಕರೆತಂದಿದ್ದ, ಆದರೆ ಅಲ್ಲಿ ನಡೆದದ್ದೇ ಬೇರೆ...!
ಈ ಕಥೆಯಲ್ಲಿ ನಾಯಕಿ ತನ್ನ ಮನೆಗೆ ಬಂದ ಅತಿಥಿಗಳ ಎದುರು ಯಾವುದೋ ಅನೈಚ್ಛಿಕ ಕಾರ್ಯವನ್ನು ತೋರಿ ಎಲ್ಲರ ದಿಗ್ಭ್ರಮೆ, ಮುಜಗರ, ಕುತೂಹಲ, ಅಚ್ಚರಿಗೆ ಕಾರಣಳಾಗುತ್ತಾಳೆ. ಆದರೆ ಇದಕ್ಕೆ ಏನು ಕಾರಣ ಎಂದು ಗೊತ್ತಾದ ಬಳಿಕ ಇದೊಂದು ಜೀವಮಾನದಲ್ಲಿಯೇ ನೆನಪಿಡಬಹುದಾದ ಹಾಸ್ಯಪ್ರಸಂಗವಾಗಿದೆ.
ಓರ್ವ ಮಹಿಳೆಯ ಪತಿ ಆಕೆಯ ಹುಟ್ಟುಹಬ್ಬದ ಕೂಟದ ಸಮಯದಲ್ಲಿ ಅಕೆಗೆ ಏನೋ ಅಚ್ಚರಿ ತೋರಿಸುತ್ತೇನೆ ಎಂದು ಆಕೆಯ ಕಣ್ಣುಗಳಿಗೆ ಪಟ್ಟಿ ಕಟ್ಟಿ ಅತಿಥಿಗಳ ಎದುರು ಕರೆತಂದಿದ್ದ. ಆ ಅತಿಥಿಗಳು ಅಕ್ಕ ಪಕ್ಕ ಇದ್ದುದೂ ಆಕೆಗೆ ಗೊತ್ತಿರಲಿಲ್ಲ. ಇದಕ್ಕೂ ಮುನ್ನ ಆಕೆ ಒಂದು ಪ್ಲೇಟ್ ಭರ್ತಿ ಬೇಕ್ಡ್ ಬೀನ್ಸ್ ಅಥವಾ ಬೇಯಿಸಿದ ಬೀನ್ಸ್ ಕಾಳುಗಳನ್ನು ಸೇವಿಸಿದ್ದಳು. ತಮಾಷೆಯ ಸಂಗತಿ: 'ನಾವೇ ಬೇರೆ, ನಮ್ಮ ಸ್ಟೈಲ್ಯೇ ಬೇರೆ!
ಬೇಕ್ಡ್ ಬೀನ್ಸ್ ಎಂದರೆ ನಮ್ಮ ಹಲಸಿನ ಬೀಜ ಯಾವ ಪರಿಣಾಮ ಉಂಟುಮಾಡುತ್ತದೆಯೋ ಅದಕ್ಕೂ ಭಾರಿ ಪರಿಣಾಮ ಬೀರುತ್ತದೆ. ಮುಂದೇನಾಯಿತು ಎಂದು ನೋಡೋಣ. ನೆನಪಿರಲಿ, ಆಕೆ ತನ್ನ ಮನೆಯಲ್ಲಿ ತನ್ನ ಮತ್ತು ತನ್ನ ಪತಿಯ ಹೊರತು ಇನ್ನಾರೂ ಇಲ್ಲವೆಂದೇ ಭಾವಿಸಿದ್ದಳು....
ದೃಶ್ಯ #1
ಇಂದು ಆಕೆಯ ಹುಟ್ಟುಹಬ್ಬವಾಗಿತ್ತು. ಇಂದಿನ ದಿನವನ್ನು ವಿಶೇಷವಾಗಿ ಆಚರಿಸಲು ಆಕೆಯ ಪತಿ ಆಕೆಗೆ ತಿಳಿಸದೇ ರಾತ್ರಿಯ ಊಟದ ಕೂಟವನ್ನು ರಹಸ್ಯವಾಗಿ ಏರ್ಪಡಿಸಿ ಆಕೆಗೆ ಅಚ್ಚರಿ ಮೂಡಿಸುವ ಯೋಜನೆ ಹಾಕಿದ.
ದೃಶ್ಯ #2
ಅಂದಿನ ದಿನ ಆಕೆ ಮನೆಯ ಒಳಗಣ ಕೋಣೆಯಲ್ಲಿದ್ದಂತೆಯೇ ಸದ್ದಿಲ್ಲದೇ ಹೊರಕೋಣೆಯಲ್ಲಿ ಔತಣಕೂಟದ ಸಿದ್ಧತೆ ನಡೆಯಿತು. ಇನ್ನೇನು ಔತಣಕ್ಕೆ ಕೊಂಚ ಹೊತ್ತು ಇದೆ ಎನ್ನುವಾಗ ಆಕೆಯ ಪತಿ ಒಳಬಂದು ನಿನಗೇನೋ ಅಚ್ಚರಿ ತೋರಿಸುತ್ತೇನೆ ಎಂದು ಕಣ್ಣುಗಳಿಗೆ ಪಟ್ಟಿ ಕಟ್ಟಿದ.
ದೃಶ್ಯ #3
ಆ ಹೊತ್ತಿಗೂ ಸುಮಾರು ಒಂದು ಗಂಟೆ ಮೊದಲು ಒಂದು ಭರ್ತಿ ತಟ್ಟೇ ಬೇಕ್ಡ್ ಬೀನ್ಸ್ ತಿಂದಿದ್ದ ಪರಿಣಾಮವಾಗಿ ಆಕೆಯ ಹೊಟ್ಟೆ ತುಂಬಿದಂತಾಗಿದ್ದು ವಾಯುಪ್ರಕೋಪ ತನ್ನ ಪರಿಣಾಮ ನಿಧಾನವಾಗಿ ಏರಿಸುತ್ತಿತ್ತು.
ದೃಶ್ಯ #4
ಹೊರಗಿದ್ದವರು ಈಗ ಕರೆತನ್ನಿ ಎಂದು ಆಕೆಯ ಪತಿಗೆ ಸೂಚನೆ ನೀಡಿದ ತಕ್ಷಣ ಆಕೆಯನ್ನು ಆ ಸ್ಥಿತಿಯಲ್ಲಿಯೇ ಕಣ್ಣುಗಳಿಗೆ ಬಟ್ಟೆ ಕಟ್ಟಿ ಹೊರತಂದ. ಎಲ್ಲಾ ಅತಿಥಿಗಳು ಅತ್ಯಂತ ಮೌನವನ್ನು ವಹಿಸಿದ್ದ ಕಾರಣ ಈ ಕೋಣೆಯಲ್ಲಿ ತಮ್ಮಿಬ್ಬರ ಹೊರತು ಬೇರಾರೂ ಇಲ್ಲವೆಂದು ಆಕೆ ತಿಳಿದಿದ್ದಳು.
ದೃಶ್ಯ #5
ಇನ್ನೇನು ಕಣ್ಣಿನ ಪಟ್ಟಿ ತೆರೆದು ಅಚ್ಚರಿಯನ್ನು ಪ್ರಕಟಿಸಬೇಕು ಎನ್ನುವ ಮೊದಲೇ ಹೊಟ್ಟೆಯೊಳಗಣ ವಾಯುಪ್ರಕೋಪ ಒತ್ತಡವನ್ನು ತಾಳಲಾರದೇ ಭಾರೀ ಸದ್ದಿನೊಂದಿಗೆ ಬಿಡುಗಡೆಗೊಂಡಿತು. ಇದರೊಂದಿಗೇ ಗೊಬ್ಬರವೂ ನಾಚುವ ಅತೀವ ಘಾಟು ಘ್ರಾಣವೂ ನೆರೆದವರ ಮೂಗುಗಳಿಗೆ ಅಪ್ಪಳಿಸಿತು.
ದೃಶ್ಯ #6
ಬಳಿಕ ಕಣ್ಣು ತೆರೆದು ನೋಡುತ್ತಾಳೆ, ಆಕೆಯ ಮನೆಯ ಹೊರಕೋಣೆ ಅತಿಥಿಗಳಿಂದ ತುಂಬಿದ್ದು ಆಕೆಯ ಆಪ್ತರೆಲ್ಲಾ ದಿಗ್ಭ್ರಮೆಗೊಂಡ ಕಣ್ಣುಗಳಿಂದ ಆಕೆಯನ್ನೇ ನೋಡುತ್ತಿದ್ದಾರೆ. ಹೆಚ್ಚಿನವರು ಮೂಗನ್ನೂ ಬಾಯಿಯನ್ನೂ ಮುಚ್ಚಿಕೊಂಡಿದ್ದಾರೆ. ಕಣ್ಣುಗಳು ಅಗಲವಾಗಿ ತೆರೆದಿವೆ.
ದೃಶ್ಯ #7
ಈ ಪರಿಯಿಂದ ಅತೀವ ಮುಜುಗರಕ್ಕೀಡಾದ ಮಹಿಳೆ ಜೀವಮಾನದಲ್ಲಿ ಇನ್ನೆಂದೂ ಬೇಕ್ಡ್ ಬೀನ್ಸ್ ತಿನ್ನಲಾರೆ ಎಂದು ಭೀಷ್ಮಪ್ರತಿಜ್ಞೆ ಮಾಡಿದಳಂತೆ...!