ಅತಿಥಿಗಳ ಎದುರು ಮುಜುಗರಕ್ಕೀಡಾದ ಮಹಿಳೆಯ ಕಥೆ ಇದು....

ಮಹಿಳೆಯ ಪತಿ ಆಕೆಯ ಹುಟ್ಟುಹಬ್ಬದ ಕೂಟದ ಸಮಯದಲ್ಲಿ ಅಕೆಗೆ ಏನೋ ಅಚ್ಚರಿ ತೋರಿಸುತ್ತೇನೆ ಎಂದು ಆಕೆಯ ಕಣ್ಣುಗಳಿಗೆ ಪಟ್ಟಿ ಕಟ್ಟಿ ಅತಿಥಿಗಳ ಎದುರು ಕರೆತಂದಿದ್ದ, ಆದರೆ ಅಲ್ಲಿ ನಡೆದದ್ದೇ ಬೇರೆ...!

Subscribe to Boldsky

ಈ ಕಥೆಯಲ್ಲಿ ನಾಯಕಿ ತನ್ನ ಮನೆಗೆ ಬಂದ ಅತಿಥಿಗಳ ಎದುರು ಯಾವುದೋ ಅನೈಚ್ಛಿಕ ಕಾರ್ಯವನ್ನು ತೋರಿ ಎಲ್ಲರ ದಿಗ್ಭ್ರಮೆ, ಮುಜಗರ, ಕುತೂಹಲ, ಅಚ್ಚರಿಗೆ ಕಾರಣಳಾಗುತ್ತಾಳೆ. ಆದರೆ ಇದಕ್ಕೆ ಏನು ಕಾರಣ ಎಂದು ಗೊತ್ತಾದ ಬಳಿಕ ಇದೊಂದು ಜೀವಮಾನದಲ್ಲಿಯೇ ನೆನಪಿಡಬಹುದಾದ ಹಾಸ್ಯಪ್ರಸಂಗವಾಗಿದೆ.

ಓರ್ವ ಮಹಿಳೆಯ ಪತಿ ಆಕೆಯ ಹುಟ್ಟುಹಬ್ಬದ ಕೂಟದ ಸಮಯದಲ್ಲಿ ಅಕೆಗೆ ಏನೋ ಅಚ್ಚರಿ ತೋರಿಸುತ್ತೇನೆ ಎಂದು ಆಕೆಯ ಕಣ್ಣುಗಳಿಗೆ ಪಟ್ಟಿ ಕಟ್ಟಿ ಅತಿಥಿಗಳ ಎದುರು ಕರೆತಂದಿದ್ದ. ಆ ಅತಿಥಿಗಳು ಅಕ್ಕ ಪಕ್ಕ ಇದ್ದುದೂ ಆಕೆಗೆ ಗೊತ್ತಿರಲಿಲ್ಲ. ಇದಕ್ಕೂ ಮುನ್ನ ಆಕೆ ಒಂದು ಪ್ಲೇಟ್ ಭರ್ತಿ ಬೇಕ್ಡ್ ಬೀನ್ಸ್ ಅಥವಾ ಬೇಯಿಸಿದ ಬೀನ್ಸ್ ಕಾಳುಗಳನ್ನು ಸೇವಿಸಿದ್ದಳು.  ತಮಾಷೆಯ ಸಂಗತಿ: 'ನಾವೇ ಬೇರೆ, ನಮ್ಮ ಸ್ಟೈಲ್‌ಯೇ ಬೇರೆ!

ಬೇಕ್ಡ್ ಬೀನ್ಸ್ ಎಂದರೆ ನಮ್ಮ ಹಲಸಿನ ಬೀಜ ಯಾವ ಪರಿಣಾಮ ಉಂಟುಮಾಡುತ್ತದೆಯೋ ಅದಕ್ಕೂ ಭಾರಿ ಪರಿಣಾಮ ಬೀರುತ್ತದೆ. ಮುಂದೇನಾಯಿತು ಎಂದು ನೋಡೋಣ. ನೆನಪಿರಲಿ, ಆಕೆ ತನ್ನ ಮನೆಯಲ್ಲಿ ತನ್ನ ಮತ್ತು ತನ್ನ ಪತಿಯ ಹೊರತು ಇನ್ನಾರೂ ಇಲ್ಲವೆಂದೇ ಭಾವಿಸಿದ್ದಳು.... 

ದೃಶ್ಯ #1

ಇಂದು ಆಕೆಯ ಹುಟ್ಟುಹಬ್ಬವಾಗಿತ್ತು. ಇಂದಿನ ದಿನವನ್ನು ವಿಶೇಷವಾಗಿ ಆಚರಿಸಲು ಆಕೆಯ ಪತಿ ಆಕೆಗೆ ತಿಳಿಸದೇ ರಾತ್ರಿಯ ಊಟದ ಕೂಟವನ್ನು ರಹಸ್ಯವಾಗಿ ಏರ್ಪಡಿಸಿ ಆಕೆಗೆ ಅಚ್ಚರಿ ಮೂಡಿಸುವ ಯೋಜನೆ ಹಾಕಿದ.

ದೃಶ್ಯ #2

ಅಂದಿನ ದಿನ ಆಕೆ ಮನೆಯ ಒಳಗಣ ಕೋಣೆಯಲ್ಲಿದ್ದಂತೆಯೇ ಸದ್ದಿಲ್ಲದೇ ಹೊರಕೋಣೆಯಲ್ಲಿ ಔತಣಕೂಟದ ಸಿದ್ಧತೆ ನಡೆಯಿತು. ಇನ್ನೇನು ಔತಣಕ್ಕೆ ಕೊಂಚ ಹೊತ್ತು ಇದೆ ಎನ್ನುವಾಗ ಆಕೆಯ ಪತಿ ಒಳಬಂದು ನಿನಗೇನೋ ಅಚ್ಚರಿ ತೋರಿಸುತ್ತೇನೆ ಎಂದು ಕಣ್ಣುಗಳಿಗೆ ಪಟ್ಟಿ ಕಟ್ಟಿದ.

ದೃಶ್ಯ #3

ಆ ಹೊತ್ತಿಗೂ ಸುಮಾರು ಒಂದು ಗಂಟೆ ಮೊದಲು ಒಂದು ಭರ್ತಿ ತಟ್ಟೇ ಬೇಕ್ಡ್ ಬೀನ್ಸ್ ತಿಂದಿದ್ದ ಪರಿಣಾಮವಾಗಿ ಆಕೆಯ ಹೊಟ್ಟೆ ತುಂಬಿದಂತಾಗಿದ್ದು ವಾಯುಪ್ರಕೋಪ ತನ್ನ ಪರಿಣಾಮ ನಿಧಾನವಾಗಿ ಏರಿಸುತ್ತಿತ್ತು.

ದೃಶ್ಯ #4

ಹೊರಗಿದ್ದವರು ಈಗ ಕರೆತನ್ನಿ ಎಂದು ಆಕೆಯ ಪತಿಗೆ ಸೂಚನೆ ನೀಡಿದ ತಕ್ಷಣ ಆಕೆಯನ್ನು ಆ ಸ್ಥಿತಿಯಲ್ಲಿಯೇ ಕಣ್ಣುಗಳಿಗೆ ಬಟ್ಟೆ ಕಟ್ಟಿ ಹೊರತಂದ. ಎಲ್ಲಾ ಅತಿಥಿಗಳು ಅತ್ಯಂತ ಮೌನವನ್ನು ವಹಿಸಿದ್ದ ಕಾರಣ ಈ ಕೋಣೆಯಲ್ಲಿ ತಮ್ಮಿಬ್ಬರ ಹೊರತು ಬೇರಾರೂ ಇಲ್ಲವೆಂದು ಆಕೆ ತಿಳಿದಿದ್ದಳು.

ದೃಶ್ಯ #5

ಇನ್ನೇನು ಕಣ್ಣಿನ ಪಟ್ಟಿ ತೆರೆದು ಅಚ್ಚರಿಯನ್ನು ಪ್ರಕಟಿಸಬೇಕು ಎನ್ನುವ ಮೊದಲೇ ಹೊಟ್ಟೆಯೊಳಗಣ ವಾಯುಪ್ರಕೋಪ ಒತ್ತಡವನ್ನು ತಾಳಲಾರದೇ ಭಾರೀ ಸದ್ದಿನೊಂದಿಗೆ ಬಿಡುಗಡೆಗೊಂಡಿತು. ಇದರೊಂದಿಗೇ ಗೊಬ್ಬರವೂ ನಾಚುವ ಅತೀವ ಘಾಟು ಘ್ರಾಣವೂ ನೆರೆದವರ ಮೂಗುಗಳಿಗೆ ಅಪ್ಪಳಿಸಿತು.

ದೃಶ್ಯ #6

ಬಳಿಕ ಕಣ್ಣು ತೆರೆದು ನೋಡುತ್ತಾಳೆ, ಆಕೆಯ ಮನೆಯ ಹೊರಕೋಣೆ ಅತಿಥಿಗಳಿಂದ ತುಂಬಿದ್ದು ಆಕೆಯ ಆಪ್ತರೆಲ್ಲಾ ದಿಗ್ಭ್ರಮೆಗೊಂಡ ಕಣ್ಣುಗಳಿಂದ ಆಕೆಯನ್ನೇ ನೋಡುತ್ತಿದ್ದಾರೆ. ಹೆಚ್ಚಿನವರು ಮೂಗನ್ನೂ ಬಾಯಿಯನ್ನೂ ಮುಚ್ಚಿಕೊಂಡಿದ್ದಾರೆ. ಕಣ್ಣುಗಳು ಅಗಲವಾಗಿ ತೆರೆದಿವೆ.

ದೃಶ್ಯ #7

ಈ ಪರಿಯಿಂದ ಅತೀವ ಮುಜುಗರಕ್ಕೀಡಾದ ಮಹಿಳೆ ಜೀವಮಾನದಲ್ಲಿ ಇನ್ನೆಂದೂ ಬೇಕ್ಡ್ ಬೀನ್ಸ್ ತಿನ್ನಲಾರೆ ಎಂದು ಭೀಷ್ಮಪ್ರತಿಜ್ಞೆ ಮಾಡಿದಳಂತೆ...!

 

Story first published: Friday, October 21, 2016, 10:45 [IST]
English summary

Her Partner Blindfolded Her For A Surprise And This Happened...

This is a story of a woman who embarrassed her party guests while she was left with a red face. Check out the hilarious story of the woman who had quite a memory to remember for a lifetime! This is an incident that had happened when a woman was having a surprise birthday party that was thrown by her partner; and the poor lady was blindfolded not knowing that people were around her....
Please Wait while comments are loading...
Subscribe Newsletter