For Quick Alerts
ALLOW NOTIFICATIONS  
For Daily Alerts

ಅಯ್ಯೋ ದೇವರೇ ಇಂತಹ ಸ್ಥಿತಿ ನಮ್ಮ ಶತ್ರುವಿಗೂ ಬಾರದಿರಲಿ....

By Arshad
|

ಈ ಜಗತ್ತು ನಾವು ಕಾಣುವಷ್ಟು ಸುಂದರವಲ್ಲ. ಏಕೆಂದರೆ ಹೊರಗಿನಿಂದ ಸಭ್ಯತೆಯ ಸೆರಗು ಹೊದ್ದುಕೊಂಡಿರುವ ನಮ್ಮ ಸಮಾಜ ಒಳಗಿನಿಂದ ಎಷ್ಟೊಂದು ಕ್ರೂರ ಎಂಬುದನ್ನು ಕಂಡರೆ ದಿಗ್ಭ್ರಮೆಯುಂಟಾಗುತ್ತದೆ. ಇಂತಹ ಕೆಲವು ವಾಸ್ತವ ಸಂಗತಿಗಳ ಬಗ್ಗೆ ತಿಳಿಯುತ್ತಾ ಬಂದರೆ ಇದಕ್ಕೆ ಕಾರಣರಾದವರ ಬಗ್ಗೆ ರೋಷ ಉಕ್ಕುತ್ತದೆ.

2014ರ ನೋಬೆಲ್ ಶಾಂತಿ ಪ್ರಶಸ್ತಿಯನ್ನು ಮಲಾಲಾರೊಂದಿಗೆ ಹಂಚಿಕೊಂಡ ಭಾರತೀಯರಾದ ಶ್ರೀ ಕೈಲಾಸ್ ಸತ್ಯಾರ್ಥಿಯವರು ತಮ್ಮ ಅನುಭವಗಳಿಂದ ಹೇಳುವ ಕೆಲವು ಹೃದಯ ವಿದ್ರಾವಕ ಕಥೆಗಳನ್ನು ಕೇಳುತ್ತಾ ಬಂದರೆ ಹೀಗೂ ಉಂಟೇ ಎಂದು ಮೂಗಿನ ಮೇಲೆ ಬೆರಳಿಡುವಂತಾಗುತ್ತದೆ. ಬದಲಾಗದ ದೇಶ; ನೋಡಿ ಸ್ವಾಮಿ ನಾವ್ ಇರೋದೇ ಹೀಗೆ!

ಎಷ್ಟೋ ಪ್ರಸಂಗಗಳು ತಲೆ ತಗ್ಗಿಸುವಷ್ಟು ಹೀನಾಯವಾಗಿದ್ದರೆ ಇನ್ನುಳಿದವು ರಕ್ತ ಕುದಿಸುತ್ತವೆ. ನಾಗರಿಕತೆ ಬಹಳಷ್ಟು ಮುಂದುವರೆದಿದ್ದರೂ ಈ ಪ್ರಸಂಗಗಳು ನಮ್ಮ ಸಮಾಜವನ್ನು ಇನ್ನೂ ನಾಲ್ಕಾರು ಶತಮಾನ ಹಿಂದಕ್ಕೆ ಜಗ್ಗುತ್ತಿದೆಯೋ ಎನ್ನಿಸುತ್ತದೆ. ಇಲ್ಲಿ ವಿವರಿಸಿರುವ ಕೆಲವು ನೈಜ ವಾಸ್ತವಗಳು ದುರ್ಬಲಹೃದಯದವರಿಗೆ ಖಂಡಿತಾ ಸಲ್ಲದು. ಆದರೂ ಈ ಬಗ್ಗೆ ಅರಿವಿರುವುದು ಎಲ್ಲರಿಗೂ ಅಗತ್ಯವಾದುದರಿಂದ ಒಬ್ಬರ ಬದಲಾಗಿ ಗುಂಪಿನಲ್ಲಿ ನೋಡಿ ಚರ್ಚಿಸುವುದು ಉತ್ತಮ ಎಂದು ನಮ್ಮ ಭಾವನೆ.....

ಚಿನ್ನದ ಉತ್ಪಾದನೆಗೆ ವಿಶ್ವದ ಹದಿನೆಂಟು ದೇಶಗಳಲ್ಲಿ ಬಾಲಕಾರ್ಮಿಕರ ಬಳಕೆ

ಚಿನ್ನದ ಉತ್ಪಾದನೆಗೆ ವಿಶ್ವದ ಹದಿನೆಂಟು ದೇಶಗಳಲ್ಲಿ ಬಾಲಕಾರ್ಮಿಕರ ಬಳಕೆ

ಬಾಲ ಕಾರ್ಮಿಕ ಪದ್ಧತಿಯನ್ನು ವಿಶ್ವದ ಬಹುತೇಕ ರಾಷ್ಟ್ರಗಳು ನಿಷೇಧಿಸಿವೆ. ಆದರೆ ಅತ್ಯಂತ ನಿರಾಶಾದಾಯಕ ವಿಷಯವೆಂದರೆ ಈ ವಿಶ್ವದಲ್ಲಿ ಹದಿನೆಂಟು ರಾಷ್ಟ್ರಗಳು ಇನ್ನೂ ಬಾಲಕಾರ್ಮಿಕ ಪದ್ಧತಿಯನ್ನು ಉಳಿಸಿಕೊಂಡಿವೆ. ಈ ದೇಶಗಳಲ್ಲಿ ಚಿನ್ನದ ಗಣಿಗಳಲ್ಲಿ ಮಕ್ಕಳನ್ನು ಪುಡಿಗಾಸಿನ ವೇತನದಲ್ಲಿ ದುಡಿಸಿಕೊಳ್ಳಲಾಗುತ್ತದೆ.

ಪ್ರತಿವರ್ಷ ಹನ್ನೆರಡು ಲಕ್ಷ ಮಕ್ಕಳ ಅಪಹರಣವಾಗುತ್ತದೆ

ಪ್ರತಿವರ್ಷ ಹನ್ನೆರಡು ಲಕ್ಷ ಮಕ್ಕಳ ಅಪಹರಣವಾಗುತ್ತದೆ

ವಿಶ್ವವನ್ನೇ ಬೆಚ್ಚಿಬೀಳಿಸುವ ಈ ವಾಸ್ತವದ ಕುರಿತು ಹೆಚ್ಚಿನವರು ಅಜ್ಞಾನಿಗಳಾಗಿದ್ದಾರೆ. ವಿಶ್ವದಾದ್ಯಂತ ಒಟ್ಟು ಹನ್ನೆರಡು ಲಕ್ಷ ಮಕ್ಕಳು ಕಾಣಿಯಾಗಿರುವ ದೂರುಗಳು ದಾಖಲಾಗುತ್ತವೆ. ಇದೊಂದು ವ್ಯಾಪಕವಾದ ಮಾಫಿಯಾವಿದ್ದು ಈ ಮಕ್ಕಳನ್ನು ವೇಶ್ಯಾವಾಟಿಕೆ, ಗುಲಾಮಗಿರಿ ಸಹಿತ ಇತರ ಕಡೆ ಬಳಸಿಕೊಳ್ಳಲಾಗುತ್ತದೆ.

ಪ್ರತಿ 3.6 ಸೆಕೆಂಡುಗಳಲ್ಲಿ ವಿಶ್ವದಲ್ಲಿ ಓರ್ವ ವ್ಯಕ್ತಿ ಹಸಿವಿನಿಂದ ಸಾಯುತ್ತಾನೆ

ಪ್ರತಿ 3.6 ಸೆಕೆಂಡುಗಳಲ್ಲಿ ವಿಶ್ವದಲ್ಲಿ ಓರ್ವ ವ್ಯಕ್ತಿ ಹಸಿವಿನಿಂದ ಸಾಯುತ್ತಾನೆ

ಆಹಾರ ಪೋಲು ಮಾಡುವವರು ಕೊಂಚ ಇತ್ತ ಗಮನಿಸಬೇಕು. ಇಡಿಯ ವಿಶ್ವದಲ್ಲಿ ಪ್ರತಿ 3.6 ಸೆಕೆಂಡುಗಳಿಗೆ ಓರ್ವ ವ್ಯಕ್ತಿ ಆಹಾರದ ಕೊರತೆಯಿಂದ ಸಾವನ್ನಪ್ಪುತ್ತಾನೆ. ಈ ಸತ್ಯದ ಮನ ಕರಗಿಸುವ ಭಾಗವೆಂದರೆ ಹೀಗೆ ಸಾಯುವವರಲ್ಲಿ ಮುಕ್ಕಾಲು ಪಾಲು ಐದು ವರ್ಷಕ್ಕೂ ಕಡಿಮೆ ವಯಸ್ಸಿನ ಮಕ್ಕಳೇ ಆಗಿದ್ದಾರೆ.

ಮಾನವ ಕಳ್ಳಸಾಗಣೆ

ಮಾನವ ಕಳ್ಳಸಾಗಣೆ

ಗಂಧದ ಕಳ್ಳಸಾಗಣೆ, ಚಿನ್ನದ ಕಳ್ಳಸಾಗಣೆ ಮೊದಲಾದವುಗಳನ್ನು ಕೇಳಿದ್ದೇವೆ. ಆದರೆ ಮಾನವ ಕಳ್ಳಸಾಗಣೆ? ಹೌದು, ಅಕ್ರಮವಾಗಿ ಮಾನವರನ್ನೇ ಒಂದು ಪ್ರದೇಶದಿಂದ ಇನ್ನೊಂದು ದೇಶಕ್ಕೆ ಸಾಗಿಸುವುದು ಈ ವಿಶ್ವದ ಅಕ್ರಮ ಕಾರ್ಯಗಳಲ್ಲಿ ಮೂರನೆಯ ಸ್ಥಾನ ಪಡೆದಿದೆ.

ಮಾನವ ಕಳ್ಳಸಾಗಣೆ

ಮಾನವ ಕಳ್ಳಸಾಗಣೆ

ಪ್ರಥಮ ಸ್ಥಾನ ಮಾದಕ ವಸ್ತು ಹಾಗೂ ಎರಡನೆಯ ಸ್ಥಾನದಲ್ಲಿ ಅಕ್ರಮ ಆಯುಧಗಳಿವೆ. ಆದರೆ ಮಾನವ ಕಳ್ಳಸಾಗಣೆಯಲ್ಲಿ ಸುಮಾರು 32 ಬಿಲಿಯನ್ ಡಾಲರುಗಳಷ್ಟು ಭಾರೀ ಪ್ರಮಣದ ವಹಿವಾಟು ನಡೆಯುತ್ತದೆ.

ಪ್ರತಿ ರಾತ್ರಿಯೂ ಮಕ್ಕಳ ಶೀಲಹರಣ

ಪ್ರತಿ ರಾತ್ರಿಯೂ ಮಕ್ಕಳ ಶೀಲಹರಣ

ಈ ವಾಸ್ತವಗಳಲ್ಲಿಯೇ ಅತ್ಯಂತ ಅಮಾನವೀಯ ಮತ್ತು ಕ್ರೂರವಾದ ವಾಸ್ತವವೆಂದರೆ ಮಕ್ಕಳನ್ನು ಕಾಮತೃಷೆಗೆ ಬಳಸಿಕೊಳ್ಳುವುದು.

ಪ್ರತಿ ರಾತ್ರಿಯೂ ಮಕ್ಕಳ ಶೀಲಹರಣ

ಪ್ರತಿ ರಾತ್ರಿಯೂ ಮಕ್ಕಳ ಶೀಲಹರಣ

ಗುಲಾಮಗಿರಿಗೆ ತಳ್ಳಲ್ಪಟ್ಟ ಮಕ್ಕಳನ್ನು ರಾತ್ರಿ ಸರಾಸರಿ ಐದರಿಂದ ಹತ್ತು ಬಾರಿ ಉಪಯೋಗಿಸಿಕೊಳ್ಳಲಾಗುತ್ತದೆ. ಈ ವಾಸ್ತವ ಕರುಳನ್ನು ಮಾತ್ರವಲ್ಲ ಮನಸ್ಸನ್ನೂ ಹಿಂಡುತ್ತದೆ. ಅತ್ಯಾಚಾರ ಪ್ರಕರಣ ಹೆಚ್ಚಾಗಿರುವ ವಿಶ್ವದ ಪ್ರತಿಷ್ಠಿತ ರಾಷ್ಟ್ರಗಳು

English summary

Heartbreaking Facts About Life

Were sure these heartbreaking facts about life will not only leave you shocked but also disturbed… Check fact as that would shock you the ...
X
Desktop Bottom Promotion