For Quick Alerts
ALLOW NOTIFICATIONS  
For Daily Alerts

ವ್ಯಕ್ತಿಯ 'ಹಸ್ತಾಕ್ಷರ' ಕೂಡ ಆತನ ವ್ಯಕ್ತಿತ್ವವನ್ನು ಬಿಚ್ಚಿಡುತ್ತದೆ!

By Manu
|

ಯಾರೊಬ್ಬರನ್ನೂ ಮುಖ ನೋಡಿ ಇಂಥ ವ್ಯಕ್ತಿ ಎಂಬ ನಿರ್ಧಾರಕ್ಕೆ ಬರುವುದು ಸಾಧ್ಯವಿಲ್ಲ, ಸರಿಯೂ ಅಲ್ಲ. ನಿಜಜೀವನದಲ್ಲಿ ನೋಡಲು ಸುಂದರರಾಗಿರುವವರು ಅತಿ ಕ್ರೂರಿಗಳಾಗಿರಬಹುದು, ಸುಂದರರಲ್ಲದವರು ದೇವರಿಗೆ ಸಮಾನರಂತೆ ಕಾಣಿಸಿಕೊಳ್ಳಬಹುದು. ಚಾರ್ಲ್ಸ್ ಶೋಭರಾಜ್ ಮತ್ತು ಗಾಂಧೀಜಿಯವರರನ್ನು ಈ ನಿಟ್ಟಿನಲ್ಲಿ ಉದಾಹರಿಸಬಹುದು.

ವ್ಯಕ್ತಿಯ ನಡವಳಿಕೆಯ, ಮಾಡಿದ ಕೆಲಸಗಳ ಮೂಲಕವೇ ವ್ಯಕ್ತಿತ್ವ ಅರಿಯಲು ಸಾಧ್ಯ. ಆದರೆ ಇದಕ್ಕೆ ಸಮಯಾವಕಾಶದ ಅಗತ್ಯವಿದೆ. ಆದರೆ ಓರ್ವ ವ್ಯಕ್ತಿಯ ವ್ಯಕ್ತಿತ್ವವನ್ನು ಸ್ಥೂಲವಾಗಿ ಅವಲೋಕಿಸಲು ಒಂದು ಸುಲಭ ವಿಧಾನವಿದೆ, ಅದೇ, ಅವರ ಹಸ್ತಾಕ್ಷರವನ್ನು (ಕೈಬರಹ) ಗಮನಿಸುವುದು.

ಈ ವ್ಯತ್ಯಾಸ ಜನಸಾಮಾನ್ಯರಿಗೆ ಅಷ್ಟೊಂದು ಗೊತ್ತಾಗದಿದ್ದರೂ ಹಸ್ತಾಕ್ಷರ ಪ್ರವೀಣರು ಸೂಕ್ಷ್ಮ ವಿವರಗಳನ್ನು ಗಮನಿಸಿ ವ್ಯಕ್ತಿತ್ವವನ್ನು ತಿಳಿಸಬಲ್ಲರು. ಉದಾಹರಣೆಗೆ ಒಂದು ಅಕ್ಷರವನ್ನು ಅತಿ ಕಡಿಮೆ ಗೆರೆಯಲ್ಲಿ ಬರೆದಿದ್ದಾರೋ ಅಥವಾ ಓದುವವರಿಗೆ ಸ್ಪಷ್ಟವಾಗಿ ಅರ್ಥವಾಗುವಂತೆ ಮುದ್ರಿತ ಅಕ್ಷರಕ್ಕೆ ಸಮನಾಗಿ ಬರೆದಿದ್ದಾರೋ ಎಂದು ಗಮನಿಸಿ ಇವರು ಎದುರಿನವರಿಗೆ ಪ್ರಾಮುಖ್ಯತೆ ನೀಡುತ್ತಾರೋ ಇಲ್ಲವೋ ಗಮನಿಸಬಹುದು.

ಅಕ್ಷರಗಳ ಗಾತ್ರ, ಎರಡು ಅಕ್ಷರಗಳ ನಡುವಣ ಅಂತರ, ಇರಡು ಸಾಲುಗಳ ನಡುವೆ ಬಿಟ್ಟ ಸ್ಥಳ, ಅಕ್ಷರಗಳನ್ನು ವಾರೆ ಅಥವಾ ಓಲಿಸಿ ಬರೆಯುವುದು, ತಡೆತಡೆದು ಅಥವಾ ನಿರರ್ಗಳವಾಗಿ ಬರೆಯುವುದು ಇತ್ಯಾದಿಗಳು ಹಸ್ತಾಕ್ಷರ ಪ್ರವೀಣರು ಗಮನಿಸುವ ಅಂಶಗಳಾಗಿವೆ. ಇವನ್ನು ಆಧರಿಸಿ ಇವರು ವ್ಯಕ್ತಿಯ ವ್ಯಕ್ತಿತ್ವವನ್ನು ಸ್ಥೂಲವಾಗಿ ಅವಲೋಕಿಸಬಲ್ಲರು. ಬನ್ನಿ, ಈ ಪ್ರವೀಣರು ಗಮನಿಸುವ ಸೂಕ್ಷ್ಮ ವಿವರಗಳು ಏನು ಹೇಳುತ್ತವೆ ಎಂಬುದನ್ನು ನೋಡೋಣ....

ಅಕ್ಷರಗಳ ಗಾತ್ರ

ಅಕ್ಷರಗಳ ಗಾತ್ರ

ಚಿಕ್ಕ ಅಕ್ಷರಗಳು: ಗಮನವಿಟ್ಟು ನೋಡುವ ವ್ಯಕ್ತಿತ್ವ ಆದರೆ ಕ್ರಮಬದ್ದ. ಸಾಮಾನ್ಯವಾಗಿ ಚಿಕ್ಕ ಅಕ್ಷರಗಳಲ್ಲಿ ಬರೆಯುವವರು ಸಮಾಜದಲ್ಲಿ ಅಷ್ಟು ಹೆಚ್ಚಾಗಿ ಬೆರೆಯುವವರಲ್ಲ. ಇವರು ಸಾಮಾನ್ಯವಾಗಿ ಅಂತರ್ಮುಖಿಗಳಾಗಿದ್ದು ಏಕಾಗ್ರತೆಯನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ.

ಅಕ್ಷರಗಳ ಗಾತ್ರ

ಅಕ್ಷರಗಳ ಗಾತ್ರ

ದೊಡ್ಡ ಅಕ್ಷರಗಳು: ಇವರು ಹೆಚ್ಚು ಸಾಮಾಜಿಕ ಸಂಬಂಧಗಳನ್ನು ಹೊಂದಿದ್ದು ಮನೆಯಿಂದ ಹೊರಗೇ ಹೆಚ್ಚಿನ ಸಮಯ ಕಳೆಯಲು ಇಚ್ಛಿಸುತ್ತಾರೆ. ಇವರು ಪ್ರಸಿದ್ಧಿಯನ್ನು ಬಯಸುವ ವ್ಯಕ್ತಿಗಳಾಗಿರುತ್ತಾರೆ.

ಅಕ್ಷರಗಳ ಗಾತ್ರ

ಅಕ್ಷರಗಳ ಗಾತ್ರ

ದೊಡ್ಡ, ಚಿಕ್ಕ ಅಕ್ಷರಗಳ ಮಿಶ್ರಣ: ಇವರು ಏಕಾಂತವನ್ನೂ ಬಯಸುವವರಾದರೂ ಅಗತ್ಯಕ್ಕೆ ತಕ್ಕಷ್ಟು ಸಾಮಾಜಿಕ ಸಂಬಂಧಗಳನ್ನೂ ಹೊಂದಿರುತ್ತಾರೆ. ಇವರು ಸಮಾಜದ ಎಲ್ಲಾ ಸ್ತರದ ವ್ಯಕ್ತಿಗಳೊಂದಿಗೆ ಸುಲಭವಾಗಿ ಬೆರೆಯಬಲ್ಲವರಾಗಿದ್ದು ಯಾವುದೇ ಬದಲಾವಣೆಗೆ ಉಳಿದವರಿಗಿಂತ ಬೇಗನೇ ಮತ್ತು ಸುಲಭವಾಗಿ ಒಗ್ಗಿಬಿಡುತ್ತಾರೆ.

ಅಕ್ಷರಗಳನ್ನು ಜೋಡಿಸುವ ಕ್ರಮ

ಅಕ್ಷರಗಳನ್ನು ಜೋಡಿಸುವ ಕ್ರಮ

ಓರೆಯಾಗಿ ಅಥವಾ ಇಟ್ಯಾಲಿಕ್ ಅಕ್ಷರಗಳ ರೂಪದಲ್ಲಿ ಬರೆಯುವವರು ಸಾಮಾನ್ಯವಾಗಿ ತೆರೆದ ಅಥವಾ ವಿಶಾಲ ಮನಸ್ಸಿನವರಾಗಿದ್ದು ಸದಾ ಜನರ ನಡುವೆ ಇರಲು ಇಚ್ಛಿಸುತ್ತಾರೆ. ಇವರು ಜನರ ಕಷ್ಟಗಳಿಗೆ, ಸುಖ ದುಃಖಗಳಿಗೆ ಸಮಾನವಾಗಿ ಸ್ಪಂದಿಸಿ ತನ್ನಿಂದಾದ ಸಹಾಯಕ್ಕೆ ಮುಂದಾಗುತ್ತಾರೆ.

ಅಕ್ಷರಗಳನ್ನು ಜೋಡಿಸುವ ಕ್ರಮ

ಅಕ್ಷರಗಳನ್ನು ಜೋಡಿಸುವ ಕ್ರಮ

ಎಡಕ್ಕೆ ಓರೆಯಾಗಿ ಬರೆಯುವ ವ್ಯಕ್ತಿಗಳು ಒಂಟಿಯಾಗಿ ಕೆಲಸ ಮಾಡಲು ಇಷ್ಟಪಡುತ್ತಾರೆ ಹಾಗೂ ತಮ್ಮ ವೈಯಕ್ತಿಕ ವಿಷಯಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಲು ಇಚ್ಛಿಸುವುದಿಲ್ಲ. ಅದೇ ಬಲಕ್ಕೆ ವಾಲಿರುವ ಅಕ್ಷರಗಳನ್ನು ಬರೆಯುವವರು ಅತಿ ಸರಳ ಜೀವಿಗಳಾಗಿದ್ದು ಸದಾ ಸುದ್ದಿಯಲ್ಲಿರಬೇಕೆಂದು ಇಚ್ಛಿಸುತ್ತಾರೆ. ನೆಟ್ಟನೆಯ ಕಂಭದಂತಹ ಅಕ್ಷರದ ವ್ಯಕ್ತಿಗಳು ಸದಾ ವಾಸ್ತವದಲ್ಲಿದ್ದು ಭಾವನಾತ್ಮಕವಾಗಿ ಅತಿ ದೃಢರಿರುತ್ತಾರೆ.

ಅಕ್ಷರಗಳ ನಡುವಣ ಅಂತರ

ಅಕ್ಷರಗಳ ನಡುವಣ ಅಂತರ

ಎರಡು ಪದಗಳ ನಡುವೆ ಹೆಚ್ಚು ಅಂತರ ಬಿಡುವ ವ್ಯಕ್ತಿಗಳು ಸಾಮಾನ್ಯವಾಗಿ ಕಡಿಮೆ ಜನರ ನಡುವೆ ಇರಲು ಇಚ್ಛಿಸುತ್ತಾರೆ. ಇವರು ಸ್ವೇಚ್ಛೆಯನ್ನು ಬಯಸುವ ವ್ಯಕ್ತಿಗಳಾಗಿರುತ್ತಾರೆ.

ಅಕ್ಷರಗಳ ನಡುವಣ ಅಂತರ

ಅಕ್ಷರಗಳ ನಡುವಣ ಅಂತರ

ಎರಡು ಪದಗಳ ನಡುವೆ ಅತಿ ಕಡಿಮೆ ಸ್ಥಳಾವಕಾಶ ನೀಡುವ ಜನರು ಸೂಕ್ಷ್ಮಮತಿಗಳಾಗಿದ್ದರೂ ಚಿಕ್ಕ ಪುಟ್ಟ ಒತ್ತಡಗಳಿಗೂ ತೀವ್ರವಾಗಿ ಸ್ಪಂದಿಸಿ ತಲೆಬಿಸಿ ಮಾಡಿಕೊಳ್ಳುವ ಪ್ರವೃತ್ತಿಯ ಜನರಾಗಿರುತ್ತಾರೆ.

ಅಕ್ಷರಗಳ ಬಣ್ಣಗಳು

ಅಕ್ಷರಗಳ ಬಣ್ಣಗಳು

ನೀಲಿ ಬಣ್ಣ ಬಯಸುವ ವ್ಯಕ್ತಿಗಳು- ಸೂಕ್ಷ್ಮಗ್ರಾಹಿಗಳೂ, ಶಾಂತ ಚಿತ್ತರೂ, ಮಮತಾಮಯಿಗಳೂ, ಅತಿ ಪ್ರಾಮಾಣಿಕರೂ ಹಾಗೂ ಪ್ರೇಮಮಯಿಗಳೂ ಆಗಿರುತ್ತಾರೆ.

ಕಪ್ಪು ಬಣ್ಣ ಬಯಸುವ ವ್ಯಕ್ತಿಗಳು-ಅನ್ಯಾಯವನ್ನು ಬಲವಾಗಿ ಪ್ರತಿಭಟಿಸುವವರೂ, ಸದಾ ಗಂಭೀರವಾಗಿರುವವರೂ, ಸುಲಭವಾಗಿ ಖಿನ್ನತೆಗೆ ಒಳಗಾಗುವವರೂ ಆಗಿರುತ್ತಾರೆ.

ಅಕ್ಷರಗಳ ಬಣ್ಣಗಳು

ಅಕ್ಷರಗಳ ಬಣ್ಣಗಳು

ಗುಲಾಬಿ ಬಣ್ಣ ಬಯಸುವ ವ್ಯಕ್ತಿಗಳು- ಇವರ ವ್ಯಕ್ತಿತ್ವದಲ್ಲಿ ಹೆಚ್ಚಾಗಿ ಹೆಣ್ಣಿನ ಭಾವವನ್ನು ಗಮನಿಸಬಹುದು. ಇವರು ಮಮತಾಮಯಿಗಳೂ, ಕಾಳಜಿ ವಹಿಸುವವರೂ ಉದಾರ ಮನಸ್ಸಿನವರೂ ಆಗಿರುತ್ತಾರೆ.

ಅಕ್ಷರಗಳ ಬಣ್ಣಗಳು

ಅಕ್ಷರಗಳ ಬಣ್ಣಗಳು

ಕೆಂಪು ಬಣ್ಣ ಬಯಸುವವರು-ಇವರು ತಮ್ಮ ನಿಲುವಿನ ಬಗ್ಗೆ ಸ್ಪಷ್ಟ ನಿರ್ಧಾರವುಳ್ಳವರೂ, ಹಠಮಾರಿಗಳೂ, ಸುಲಭವಾಗಿ ಸಿಟ್ಟಿಗೇಳುವವರೂ, ಕುತೂಹಲಿಗಳೂ, ಬಲಶಾಲಿ ಹಾಗೂ ಕಾಮವನ್ನು ಹೆಚ್ಚು ಬಯಸುವವರೂ ಆಗಿರುತ್ತಾರೆ.

English summary

Handwriting Can Describe Your Personality!

Did you know that your handwriting can reveal and describe about your personality. Your handwriting can describe and give a picture of your nature and personality. Lets check out different types of handwriting which describes your personality. So what are the considerations for checking the handwriting analysis? Basically the characteristics, traits and handwriting strokes are examined to know personality such as size, spacing, letters, slant or straight type
X
Desktop Bottom Promotion