For Quick Alerts
ALLOW NOTIFICATIONS  
For Daily Alerts

ಇವರು ಹುಟ್ಟುವಾಗ ಗಂಡು, ಈಗ ಕಣ್ಮನ ಸೆಳೆಯುವ ಹೆಣ್ಣು!

By Super
|

ಹೆಣ್ಣಿನಲ್ಲಿ ಅಂದವಿಟ್ಟನೋ ನಮ್ಮ ಶಿವ ಗಂಡಿನಲ್ಲಿ ಆಸೆಯಿಟ್ಟನು ಎಂಬ ವಾಕ್ಯವೊಂದು ಕನ್ನಡ ಚಿತ್ರಗೀತೆಯಲ್ಲಿದೆ. ಅಂತೆಯೇ ಅಂದವಿರುವ ಮಹಿಳೆಯರನ್ನು ಕಂಡಾಗ ಪುರುಷರ ಎದೆಯಲ್ಲಿ ಅವಲಕ್ಕಿ ಕುಟ್ಟಲು ಪ್ರಾರಂಭವಾಗುತ್ತದೆ. ಅಂತಹಾ ಮಹಾತಪಸ್ವಿ ವಿಶ್ವಾಮಿತ್ರರೇ ಮೇನಕೆಯ ಸೌಂದರ್ಯಕ್ಕೆ ಮರುಳಾಗಿ ತಮ್ಮ ತಪಸ್ಸನ್ನೇ ತ್ಯಜಿಸಿದರು ಎಂದರೆ ಸಾಮಾನ್ಯಜನರ ಪಾಡು ಕೇಳುವುದೇ ಬೇಡ. ಇಂತ ಅದ್ಭುತ ಸೌಂದರ್ಯದ ಅಪ್ಸರೆಯರು ಇಂದಿಗೂ ಈ ಲೋಕದಲ್ಲಿದ್ದಾರೆ.

ಇಂತಹ ಅದ್ಭುತ ಸೌಂದರ್ಯದ ಮಹಿಳೆಯರ ಪೈಕಿ ಕೆಲವರು ಭಿನ್ನರಾಗಿದ್ದಾರೆ. ಇವರು ಹೇಗೆ ಭಿನ್ನ ಎಂದರೆ ಇವರು ಹುಟ್ಟಿದ್ದಾಗ ಹೆಣ್ಣೇ ಆಗಿರದೇ ಗಂಡಾಗಿ ಹುಟ್ಟಿ ಬಳಿಕ ಸ್ವಭಾವತಃ ತಾವೊಂದು ಹೆಣ್ಣು ಎಂದು ಭಾವಿಸಿ ಬಳಿಕ ಶಸ್ತ್ರಚಿಕಿತ್ಸೆಯ ಮೂಲಕ ಹೆಣ್ಣಾಗಿ ಪರಿವರ್ತಿತಗೊಂಡವರೇ ಆಗಿದ್ದಾರೆ. ಇವರನ್ನು ಲಿಂಗಪರಿವರ್ತಿತರು (transgender) ಎಂದು ವೈದ್ಯಕೀಯ ಭಾಷೆಯಲ್ಲಿ ಕರೆಯುತ್ತಾರೆ.

ಹೆಣ್ಣಾಗಿ ಪರಿವರ್ತಿತವಾದ ಬಳಿಕ ಇವರು ನಿರಾಳವಾಗಿ ತಮ್ಮ ಜೀವನವನ್ನು ಸಾಗಿಸುತ್ತಾ ತಮ್ಮ ಸೌಂದರ್ಯವನ್ನೇ ಬಂಡವಾಳವಾಗಿಸಿಕೊಂಡು ಜೀವನಕ್ಕೊಂದು ದಾರಿ ಮಾಡಿಕೊಂಡು ಸಂತೃಪ್ತ ಜೀವನ ನಡೆಸುತ್ತಿದ್ದಾರೆ. ಇಂದು ಇಂತಹ ಅಪ್ಸರೆಯರ ಬಗ್ಗೆ ಬೋಲ್ಡ್ ಸ್ಕೈ ತಂಡ ಹಲವು ಕುತೂಹಲಕರ ಮಾಹಿತಿಯನ್ನು ಸಂಗ್ರಹಿಸಿದ್ದು ಕೆಳಗಿನ ಸ್ಲೈಡ್ ಶೋ ಮೂಲಕ ಪ್ರಸ್ತುತಪಡಿಸಲು ಹರ್ಷಿಸುತ್ತದೆ....

ಶಿನಾತಾ ಸಾಂಘಾ

ಶಿನಾತಾ ಸಾಂಘಾ

ಈಕೆ ಪ್ರಸ್ತುತ ಬ್ರಿಟನ್ನಿನಲ್ಲಿ ಅತ್ಯಂತ ಖ್ಯಾತಿ ಪಡೆದಿರುವ ದಕ್ಷಿಣ ಏಷ್ಯಾದ ಲಿಂಗಪರಿವರ್ತಿತ ರೂಪದರ್ಶಿಯಾಗಿದ್ದು ಅಸೂಯೆ ಪಡುವಂತಹ ಆದಾಯವನ್ನೂ ಗಳಿಸುತ್ತಿದ್ದಾಳೆ. ಬ್ರಿಟನ್ನಿನವರಿಗೆ ಈಕೆ ದಕ್ಷಿಣ ಏಷ್ಯಾದವಳೆಂದು ಗೊತ್ತಿತ್ತೇ ವಿನಃ ತೀರಾ ಇತ್ತೀಚಿನವರೆಗೂ ಈಕೆ ಹುಟ್ಟಿದ್ದು ಭಾರತದ ಪಂಜಾಬ್‌ನ ಹಳ್ಳಿಯ ಹುಡುಗನಾಗಿ ಎಂದು ಗೊತ್ತೇ ಇರಲಿಲ್ಲ.

ಮಲ್ಲಿಕಾ

ಮಲ್ಲಿಕಾ

ಥಾಲ್ಲೆಂಡಿನಲ್ಲಿ ನಡೆದ ಮಿಸ್ ಇಂಟರ್ನ್ಯಾಶನಲ್ ಕ್ವೀನ್ ಎಂಬ ಸೌಂದರ್ಯಸ್ಪರ್ಧೆಯಲ್ಲಿ ಸ್ಪರ್ಧಿಸಿದ ಪ್ರಪ್ರಥಮ ಲಿಂಗಪರಿವರ್ತಿತ ರೂಪದರ್ಶಿ ಎಂಬ ಹೆಗ್ಗಳಿಕೆಗೆ ಪಾತ್ರಳಾದ ಮಲ್ಲಿಕಾ ಮೂಲತಃ ಭಾರತವಳಾಗಿದ್ದನು.

ಕ್ಯಾರೋಲಿನ್ ’ತುಲಾ’ಕೋಸ್ಸಿ (Caroline

ಕ್ಯಾರೋಲಿನ್ ’ತುಲಾ’ಕೋಸ್ಸಿ (Caroline "Tula" Cossey)

ಈಕೆ ಬ್ರಿಟನ್ನಿನ ಓರ್ವ ರೂಪದರ್ಶಿಯಾಗಿದ್ದು ವಿಶ್ವದ ಪ್ರಮುಖ ಲಿಂಗಪರಿವರ್ತಿತ ರೂಪದರ್ಶಿಯರಲ್ಲಿ ಪ್ರಮುಖಳಾಗಿದ್ದಾಳೆ. ಈ ಚಿತ್ರ ನೋಡಿದರೆ ಈಕೆ ಹಿಂದೆಂದಾದರೂ ಪುರುಷನಾಗಿದ್ದನೆಂದು ಅನ್ನಿಸುತ್ತದೆಯೇ?

ಚ್ಯಾಮಿಲಾ ಆಸಾನ್ಕಾ

ಚ್ಯಾಮಿಲಾ ಆಸಾನ್ಕಾ

ಫ್ಯಾಷನ್ ಜಗತ್ತಿನಲ್ಲಿ ಶ್ರೀಲಂಕಾದ ಕೊಡುಗೆ ಏನಾದರೂ ಇದ್ದರೆ ಇದರಲ್ಲಿ ಚ್ಯಾಮಿಲಾಳ ಪಾತ್ರ ಮಹತ್ತರವಾಗಿದೆ. 2011ರಲ್ಲಿ ಮಿಸ್ ಇಂಟರ್ನ್ಯಾಶನಲ್ ಕ್ವೀನ್ ಎಂಬ ಸೌಂದರ್ಯಸ್ಪರ್ಧೆಯಲ್ಲಿ ಭಾಗವಹಿಸಿದ್ದ ಈಕೆ ಗೆಲವಿನ ಸ್ಥಾನ ಪಡೆಯದೇ ಇದ್ದರೂ ಮುಂದಿನ ದಿನಗಳಲ್ಲಿ ಪ್ರಮುಖ ಹತ್ತು ಲಿಂಗಪರಿವರ್ತಿತ ರೂಪದರ್ಶಿಯರಲ್ಲಿ ಆರನೆಯ ಸ್ಥಾನಕ್ಕೇರಿದ್ದಾಳೆ.

ಸಿರಪಸಾರ್ನ್ ಅತ್ತಯಾಕಾರ್ನ್ (Sirapassorn Atthayakorn)

ಸಿರಪಸಾರ್ನ್ ಅತ್ತಯಾಕಾರ್ನ್ (Sirapassorn Atthayakorn)

ಸ್ಯಾಮಿ ಎಂದೇ ಹೆಚ್ಚು ಪರಿಚಿತಳಾದ ಈಕೆ ಥಾಯ್ಲೆಂಡ್ ನಾಗರಿಕಳಾಗಿದ್ದು 2011ರಲ್ಲಿ ನಡೆದ ಮಿಸ್ ಇಂಟರ್ನ್ಯಾಷನಲ್ ಕ್ವೀನ್ ಎಂಬ ಸೌಂದರ್ಯಸ್ಪರ್ಧೆಯ ವಿಜೇತಳಾಗಿದ್ದಾಳೆ.

ಪ್ಲೋರೆನ್ಸಿಯಾ ಡೆ ಲಾ ವಿ (Florencia De La V)

ಪ್ಲೋರೆನ್ಸಿಯಾ ಡೆ ಲಾ ವಿ (Florencia De La V)

Roberto Carlos Trinidad ಎಂಬ ಹೆಸರಿನಿಂದ ತನ್ನ ಬಾಲ್ಯವನ್ನು ಕಳೆದ ಈ ತರುಣ ಹೆಣ್ಣಾಗಿ ಪರಿವರ್ತಿತನಾದ ಬಳಿಕ ಹೊಸ ಹೆಸರಿನೊಂದಿಗೆ ತನ್ನ ರೂಪದರ್ಶಿಯ ಜೀವನವನ್ನು ಪ್ರಾರಂಭಿಸಿದ್ದು ಜಗತ್ತಿನ ಅತಿ ಪ್ರಮುಖ ಲಿಂಗಪರಿವರ್ತಿತ ರೂಪದರ್ಶಿ ಎಂಬ ಹೆಗ್ಗಳಿಕೆ ಪಡೆದಿದ್ದಾಳೆ. ಅಷ್ಟೇ ಅಲ್ಲ, ಬಾಡಿಗೆ ತಾಯಿಯ ಮೂಲಕ ಅವಳಿ ಮಕ್ಕಳ ತಾಯಿಯೂ ಆಗಿದ್ದಾಳೆ.

ಐಸಿಸ್ ಕಿಂಗ್

ಐಸಿಸ್ ಕಿಂಗ್

"Darrell Walls" ಎಂಬ ಹೆಸರಿನಿಂದ ಹುಟ್ಟಿದ ಯುವಕ ಹೆಣ್ಣಾಗಿ ಪರಿವರ್ತಿತಗೊಂಡು ಸೌಂದರ್ಯ ಸ್ಪರ್ಧೆಗಳಲ್ಲಿ ಹೊಸ ಹೆಸರಿನೊಂದಿಗೆ ಭಾಗವಹಿಸತೊಡಗಿದಳು. ಮೊದಮೊದಲು ಯಾವುದೇ ಜನಪ್ರಿಯತೆ ದಕ್ಕದೇ ಇದ್ದರೂ "America's Next Top Model" ಎಂಬ ಸ್ಪರ್ಧೆಯಲ್ಲಿ ಪಡೆದ ಗೆಲುವು ಈಕೆಗೆ ಅತಿ ಹೆಚ್ಚಿನ ಜನಪ್ರಿಯತೆ ನೀಡಿತು.

ಕ್ಲಾಡಿಯಾ ಚಾರಿಯೆಜ಼್

ಕ್ಲಾಡಿಯಾ ಚಾರಿಯೆಜ಼್

ಈಕೆಯ ಚಿತ್ರವನ್ನು ಕೊಂಚ ಗಮನವಿಟ್ಟು ನೋಡಿ. ಈಕೆ ಎಂದಾದರೂ ಗಂಡಾಗಿದ್ದಿರಬಹುದು ಎಂಬ ಕಲ್ಪಿಸಿಕೊಳ್ಳಲೂ ನಿಮಗೆ ಸಾಧ್ಯವಿಲ್ಲ. ಏಕೆಂದರೆ ಹುಟ್ಟಿದಾಗ ಗಂಡಾಗಿದ್ದರೂ ಬಳಿಕ ಹೆಣ್ಣಾಗಿ ಪರಿವರ್ತಿತಗೊಂಡು 2008ರಲ್ಲಿ "America's Next Top Model" ಸ್ಪರ್ಧೆಯಲ್ಲಿ ವಿಜೇತಳಾದಳು.

ಲೀ ಟಿ (Lea T)

ಲೀ ಟಿ (Lea T)

Leandro Cerezo ಎಂಬ ಹೆಸರಿನಿಂದ ಗಂಡಾಗಿ ಹುಟ್ಟಿದ್ದು ಬಳಿಕ ಹೆಣ್ಣಾಗಿ ಪರಿವರ್ತನೆಗೊಂಡ ಈಗೆ ಪ್ರಸ್ತುತ ಅತ್ಯಂತ ಪ್ರತಿಷ್ಠಿತ ಫ್ಯಾಷನ್ ಮಳಿಗೆಯಲ್ಲಿ ಅತ್ಯಂತ ವ್ಯಸ್ತಳಾದ ರೂಪದರ್ಶಿಯಾಗಿದ್ದಾಳೆ.

ಆಂದ್ರೇಜ್ ಪೆಜಿಕ್ (Andrej Pejic)

ಆಂದ್ರೇಜ್ ಪೆಜಿಕ್ (Andrej Pejic)

ಸರ್ಬಿಯಾ ಮತ್ತು ಆಸ್ಟ್ರೇಲಿಯಾ ಎರಡರ ಪೌರತ್ವ ಹೊಂದಿರುವ ಈತ ಮತ್ತು ಈಕೆ ಓರ್ವ ಪ್ರಖ್ಯಾತ ರೂಪದರ್ಶಿಯಾಗಿದ್ದಾನೆ, ರೂಪದರ್ಶಿಯಾಗಿದ್ದಾಳೆ. ಎರಡೂ ಪದಗಳನ್ನು ಏಕೆ ಉಪಯೋಗಿಸಬೇಕಾಯಿತೆಂದರೆ ಈ ವ್ಯಕ್ತಿ ಗಂಡಿನ ಮತ್ತು ಹೆಣ್ಣಿನ ಎರಡೂ ಸ್ಪರ್ಧೆಗಳಲ್ಲಿ ಭಾವಹಿಸಿದ್ದಾನೆ/ಳೆ. ಜನವರಿ 2011ರ ಸೌಂದರ್ಯಸ್ಪರ್ಧೆಯಲ್ಲಿ ಎರಡೂ ವಿಭಾಗಗಳನ್ನು ಪ್ರತಿನಿಧಿಸ ಹೆಗ್ಗಳಿಗೆ ಈ ವ್ಯಕ್ತಿಯದ್ದಾಗಿದೆ.

English summary

Gorgeous Women Who Were Born Male

If you think that you have seen the most beautiful women around the world, this list will leave you dazzled. Here, in this article today, we are here to share the list of the most beautiful women that you should know about. The most interesting part about these women is that they were all born males!
X
Desktop Bottom Promotion