ನಂಬುತ್ತೀರೋ ಬಿಡುತ್ತೀರೋ, ಇದು ಪಕ್ಕಾ ಚಿನ್ನದ ಶೌಚಾಲಯ!

ಇಟಲಿಯ ಮೌರಿಝೊ ಕ್ಯಾಟ್ಟೆಲನ್ ಎನ್ನುವವರು ಸಂಪೂರ್ಣ ಸ್ವರ್ಣದಿಂದ ಮಾಡಿದ ಶೌಚಾಲಯವನ್ನು ನಿರ್ಮಾಣ ಮಾಡಿದ್ದಾರೆ. ಇದನ್ನು ನ್ಯೂಯಾರ್ಕ್ ನ ಗಗೆನ್ಹೇಮ್ ಮ್ಯೂಸಿಯಂನಲ್ಲಿಡಲಾಗಿದೆ....

By: manu
Subscribe to Boldsky

ಚಿನ್ನವನ್ನು ಬಹಳ ಹಿಂದಿನ ಕಾಲದಿಂದಲೇ ಇದೊಂದು ಸಂಪತ್ತು ಎಂದು ಪರಿಗಣಿಸಲ್ಪಟ್ಟಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದರಲ್ಲೂ ಸ್ವರ್ಣದ ಒಡೆಯರು ಶ್ರೀಮಂತರು ಹಾಗೂ ತಮ್ಮ ವರ್ಚಸ್ಸು, ಘನತೆ, ಗೌರವ ಮತ್ತು ಪ್ರತಿಷ್ಠೆಯನ್ನು ಪ್ರಕಟಿಸಲು ಬಳಸುತ್ತಾ ಬಂದಿದ್ದಾರೆ. 

 Golden Toilet
 

ಅಷ್ಟೇ ಅಲ್ಲದೇ ಇತ್ತೀಚಿನ ದಿನಗಳಲ್ಲಿ ದೇವಾಲಯಗಳಿಗೂ ಬಂಗಾರದ ಹೊದಿಕೆಮಾಡುವುದನ್ನು ಕೇಳಿದ್ದೇವೆ/ ನೋಡಿದ್ದೇವೆ... ಅದರಲ್ಲೂ ಭಾರತೀಯರು ಬಂಗಾರವನ್ನು ಹೆಚ್ಚು ಪವಿತ್ರವೆಂದು ಭಾವಿಸುತ್ತಾರೆ. ಆದರೆ ಇಟಲಿಯಲ್ಲಿ ಶೌಚಾಲಯವನ್ನು ಕೂಡ ಬಂಗಾರದಿಂದ ತಯಾರಿಸಲಾಗಿದೆ. ಇದನ್ನು ಕೇಳಿ ಸ್ವಲ್ಪ ಮಟ್ಟಿಗೆ ವಿಚಿತ್ರವೆನಿಸಬಹುದು..!

Toilet
 

ಹೌದು,ಇಟಲಿಯ ಮೌರಿಝೊ ಕ್ಯಾಟ್ಟೆಲನ್ ಎನ್ನುವವರು ಸಂಪೂರ್ಣ ಸ್ವರ್ಣದಿಂದ ಮಾಡಿದ ಶೌಚಾಲಯವನ್ನು ನಿರ್ಮಾಣ ಮಾಡಿದ್ದಾರೆ. ಇದನ್ನು ನ್ಯೂಯಾರ್ಕ್ ನ ಗಗೆನ್ಹೇಮ್ ಮ್ಯೂಸಿಯಂನಲ್ಲಿಡಲಾಗಿದೆ. ಇದರಲ್ಲಿ ಗಮನಹರಿಸಬೇಕಾದ ಪ್ರಮುಖ ಅಂಶವೆಂದರೆ ಇದಕ್ಕೆ ಸಾರ್ವಜನಿಕರಿಗೆ ಪವೇಶ ನೀಡಲಾಗಿದೆ. ಬಂಗಾರ ಪ್ರಿಯರೇ, ತಿಳಿದಿರಲಿ ಚಿನ್ನದಂತಹ ಸಂಗತಿ...  

Golden
 

ಇದನ್ನು ತಯಾರಿಸಿರುವ ಕಲಾಕಾರನ ಪ್ರಕಾರ ಇದು ಕೇವಲ ಕಲೆ ಮಾತ್ರವಲ್ಲ. ಇದು ಸಾರ್ವಜನಿಕರು ಬಳಸಬಹುದಾದ ಶೌಚಾಲಯವಾಗಿದೆ. ಜನರು ಇದನ್ನು ಬಳಸಿದಾಗ ಮಾತ್ರ ಕಲಾಕೃತಿಯು ಪೂರ್ಣವಾಗುತ್ತದೆ ಎನ್ನುತ್ತಾನೆ ಕಲಾಕಾರ. 

Golden toilet
 

ಸ್ವರ್ಣದ ಶೌಚಾಲಯಕ್ಕೆ ಅಮೆರಿಕಾ ಎಂದು ಹೆಸರನ್ನು ಇಡಲಾಗಿದೆ. ವಾಖ್ಯಾನಕ್ಕೆ ಮುಕ್ತವೆನ್ನುವುದು ಇದರ ಅರ್ಥವಾಗಿದೆ. ಅಲ್ಲಿನ ಅಗ್ರ ಮಾಧ್ಯಮವೊಂದು ಇದು ಸಂಪತ್ತನ್ನು ತೋರಿಸುವ ಪರಾಕಾಷ್ಠೆ ಎಂದು ಬಣ್ಣಿಸಿದೆ. ನಮ್ಮಲ್ಲಿ ಸಾಧಾರಣ ಶೌಚಾಲಯಗಳನ್ನು ಬಳಕೆ ಮಾಡಲು ಸರತಿ ಸಾಲಿನಲ್ಲಿ ನಿಲ್ಲುವಂತೆ ಅಲ್ಲಿ ಬಂಗಾರದ ಶೌಚಾಲಯವನ್ನು ಬಳಸಲು ಜನರು ಸರತಿಯಲ್ಲಿ ನಿಂತಿದ್ದಾರೆ. 

Golden toilet
 

ಶೌಚಾಲಯ ಇರುವ ಕಡೆ ಸುರಕ್ಷತೆಗೆ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಇದು ಕಳವಾಗದಂತೆ ತಡೆಯಲು ರಕ್ಷಣಾ ಸಿಬ್ಬಂದಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. ಸಾಮಾನ್ಯವಾಗಿ ಸಾಧಾರಣ ಶೌಚಾಲಯವನ್ನು ಬಳಸಿದಾಗ ಅದು ಕಳೆಗುಂದುತ್ತಾ ಹೋಗುತ್ತದೆ.

Golden toilet

ಆದರೆ ಬಂಗಾರದ ಶೌಚಾಲಯವು ಬಳಸಿದ ಬಳಿಕ ಹೆಚ್ಚಿನ ಕಾಂತಿ ಪಡೆಯುತ್ತದೆ. ಫ್ಲಶ್ ಮಾಡಿದಾಗ ಬಂಗಾರದ ಕಾಂತಿ ತೋರಿಸುತ್ತದೆ. ಆದರೆ ನಿಜವಾಗಿಯೂ ಇದು ಬೇಕೇ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಾ ಇರುತ್ತದೆ.

Story first published: Monday, November 21, 2016, 12:35 [IST]
English summary

First Golden Toilet Open For Public Use!

How happy would you be if you were given a chance to use a toilet that is completely made of gold? Though this sounds something that is impossible, we here to share a bit with you!
Please Wait while comments are loading...
Subscribe Newsletter