ಉಂಗುರ ಯಾವತ್ತೂ ಉಂಗುರ ಬೆರಳಿಗೇ ಮೀಸಲು! ಏನಿದರ ರಹಸ್ಯ?

By: Arshad
Subscribe to Boldsky

ನಮ್ಮ ಬೆರಳುಗಳನ್ನು ಬಳಸುವ ರೀತಿಯಿಂದಲೇ ಇವಕ್ಕೆ ಆಯಾ ಹೆಸರು ಬಂದಿದೆ. ಮುಖ್ಯವಾದ ಪಾತ್ರ ವಹಿಸಿದುದಕ್ಕಾಗಿ ಹೆಬ್ಬೆರಳು, ಕಿರಿದಾಗಿರುವ ಕಾರಣ ಕಿರಿಬೆರಳು. ಅಂತೆಯೇ ಉಂಗುರ ಧರಿಸುವ ಕಾರಣಕ್ಕೇ ಉಂಗುರ ಬೆರಳು. ಆದರೆ ವಿಶೇಷವಾಗಿ ವಿವಾಹದ ಪ್ರತೀಕವಾದ ಉಂಗುರವನ್ನು ಎಡಗೈಯ ಉಂಗುರ ಬೆರಳಿಗೇ ಏಕೆ ತೊಡಬೇಕು?   ಅಚ್ಚರಿಗೆ ತಳ್ಳುವ ಕೈ ಬೆರಳಿನ ಮೂಲಕ ಮಾಡುವ ಚಿಕಿತ್ಸೆ!

ಈ ಪ್ರಶ್ನೆಗೆ ಹೆಚ್ಚಿನವರು ನೀಡುವ ಸಿದ್ಧ ಉತ್ತರವೆಂದರೆ ಈ ಬೆರಳಿನ ನರ ನೇರವಾಗಿ ಹೃದಯಕ್ಕೆ ಹೋಗುತ್ತದೆ. ಹಾಗಾದರೆ ಉಳಿದ ಬೆರಳುಗಳ ನರ ಎಲ್ಲಿ ಹೋಗುತ್ತವೆ? ಈ ಪ್ರಶ್ನೆಗೆ ಸರಿಯಾದ ಉತ್ತರವಿಲ್ಲ. ಆದರೆ ಸಾಂಪ್ರಾದಾಯಿಕವಾಗಿ ಹೆಚ್ಚಿನ ಎಲ್ಲಾ ಧರ್ಮಗಳಲ್ಲಿಯೂ ವಿವಾಹದ ಉಂಗುರವನ್ನು ಎಡಗೈಯ ಉಂಗುರ ಬೆರಳಿಗೇ ತೊಡಲಾಗುತ್ತದೆ... ಮುಂದೆ ಓದಿ....      ಜ್ಯೋತಿಷ್ಯ: ಚಿನ್ನ, ಬೆಳ್ಳಿಗಿಂತಲೂ 'ತಾಮ್ರದ ಉಂಗುರ' ಶ್ರೇಷ್ಠ!   

ಕತ್ತಿನಲ್ಲಿ ತಾಳಿ ಇರುವಂತೆ ಪುರುಷರ ಬೆರಳಿನಲ್ಲಿ ಉಂಗುರ

ವಿವಾಹಕ್ಕೂ ಮುನ್ನ ನಿಶ್ಚಿತಾರ್ಥವನ್ನು ಉಂಗುರ ಬದಲಿಸಿಕೊಂಡು ನಡೆಸುವುದು ವಿಶ್ವದ ಬಹುತೇಕ ಎಲ್ಲಾ ಕಡೆಗಳಲ್ಲಿ, ಎಲ್ಲಾ ಧರ್ಮಗಳಲ್ಲಿ ಅನುಸರಿಸಲಾಗುತ್ತದೆ. ಅಲ್ಲದೇ ಮಹಿಳೆಯರಿಗೆ ಕತ್ತಿನಲ್ಲಿ ತಾಳಿ ಇರುವಂತೆ ಪುರುಷರ ಬೆರಳಿನಲ್ಲಿ ಉಂಗುರವಿರುವುದು ವಿವಾಹತರಾಗಿರುವ ಸಂಕೇತವೂ ಹೌದು.

ಇತಿಹಾಸವನ್ನು ಕೆದಕಿದರೆ....

ಈ ಸಂಪ್ರದಾಯ ಎಂದು ಪ್ರಾರಂಭವಾಯಿತು ಎಂಬ ಕುತೂಹಲಕ್ಕೆ ಇತಿಹಾಸವನ್ನು ಕೆದಕಿದರೆ ಇದಕ್ಕೆ ಸುರಿಸುಮಾರು ಐದು ಸಾವಿರ ವರ್ಷಗಳ ಇತಿಹಾಸವಿರುವುದು ಕಂಡುಬರುತ್ತದೆ. ಕ್ರಿ.ಪೂ 3000ರಲ್ಲಿಯೇ ನವವಿವಾಹಿತರು ಉಂಗುರ ಬದಲಿಸಿಕೊಳ್ಳುವುದು ಕಂಡುಬಂದಿದೆ. ಅಂದಿನ ದಿನದಿಂದಲೇ ವರ ತನ್ನ ಮಾವನಿಗೆ ಅಂದರೆ ಮದುವೆಯಾಗುವ ಹುಡುಗಿಯ ತಂದೆಗೆ ಉಂಗುರವೊಂದನ್ನು ಕೊಡುವ ಮೂಲಕ 'ವಧುವನ್ನು ಖರೀದಿಸಿದ' ಸೂಚನೆಯಾಗಿತ್ತು.   ಕೈ ಬೆರಳಿನ ಉದ್ದವನ್ನು ಪರಿಗಣಿಸಿ, ಭವಿಷ್ಯವನ್ನು ನಿರ್ಧರಿಸಿ!

ಪುರಾತನ ರೋಮನ್ ಮತ್ತು ಗ್ರೀಕ್ ಪರಂಪರೆಗಳ ಮೂಲಕ

ಆದರೆ ಈ ಉಂಗುರವನ್ನು ಉಂಗುರ ಬೆರಳಿಗೆ ಅಂದಿನಿಂದಲೇ ತೊಡಲು ಪ್ರಾರಂಭವಾಯಿತೇ? ಪ್ರಾಯಶಃ ಈ ವಿಧಿ ಪುರಾತನ ರೋಮನ್ ಮತ್ತು ಗ್ರೀಕ್ ಪರಂಪರೆಗಳ ಮೂಲಕ ಪ್ರಾರಂಭವಾಯಿತು. ಆಗಲೇ ಈ ಬೆರಳಿನ ನರ ನೇರವಾಗಿ ಹೃದಯಕ್ಕೆ ಸಂಪರ್ಕ ಹೊಂದಿದೆ ಎಂದು ಪ್ರಚಾರ ಪಡಿಸಲಾಯಿತು. 

ಪುರಾತನ ರೋಮನ್ ಮತ್ತು ಗ್ರೀಕ್ ಪರಂಪರೆಗಳ ಮೂಲಕ

ಆದರೆ ಎಡಗೈಯೇ ಏಕೆ? ಏಕೆಂದರೆ ಹೃದಯದ ಎಡಭಾಗದಲ್ಲಿರುವ ಕಾರಣ ಬಲಗೈಗಿಂತಲೂ ಎಡಗೈ ಹೆಚ್ಚು ಹತ್ತಿರ ಎನ್ನುವುದು ಇವರ ತರ್ಕವಾಗಿತ್ತು. ಈ ನರಕ್ಕೆ ಅವರು "vena amoris" ಅಥವಾ ಪ್ರೀತಿಯ ನರ ಎಂದು ಹೆಸರನ್ನೂ ಇಟ್ಟುಬಿಟ್ಟರು.

ಪಾಶ್ಚಾತ್ಯ ದೇಶಗಳಲ್ಲಿಯೂ ಪ್ರಾರಂಭಿಸಲಾಯಿತು

ಈ ಪರಂಪರೆಯನ್ನು ನಿಧಾನವಾಗಿ ಪಾಶ್ಚಾತ್ಯ ದೇಶಗಳಲ್ಲಿಯೂ ಅನುಸರಿಸಲು ಪ್ರಾರಂಭಿಸಲಾಯಿತು. ತನ್ನ ಎಡಗೈಯ ಉಂಗುರ ಬೆರಳಿಗೆ ಉಂಗುರ ತೊಟ್ಟ ಪುರುಷ ತನ್ನ ಪತ್ನಿ ಮತ್ತು ತನ್ನ ಕುಟುಂಬದ ಪ್ರತಿ ತನ್ನ ಜವಾಬ್ದಾರಿಗಳನ್ನು ನಿಭಾಯಿಸಲು ಸಮರ್ಥನಾಗಿದ್ದಾನೆ ಎಂದು ಈ ಮೂಲಕ ಪ್ರಕಟಿಸಲಾಗುತ್ತಿತ್ತು.

ಪಾಶ್ಚಾತ್ಯ ದೇಶಗಳಲ್ಲಿಯೂ ಪ್ರಾರಂಭಿಸಲಾಯಿತು

ಮುಂದಿನ ಜೀವನವಿಡೀ ಆಕೆಯ ರಕ್ಷಣೆಯ ಜವಾಬ್ದಾರಿ ತನ್ನದು ಎಂದು ವಿವಾಹದ ವಿಧಿಯನ್ನು ಬೋಧಿಸಲಾಗುತ್ತಿತ್ತು. ಅಂದಿನಿಂದಲೇ "till death do us part" ಎಂಬ ವಿಧಿಯನ್ನು ಬೋಧಿಸಿದ ಬಳಿಕವೇ ಉಂಗುರವನ್ನು ತೊಟ್ಟು ಈ ಬಾಧ್ಯತೆಯನ್ನು ಹಿರಿಯರ ಮತ್ತು ದೇವರ ಎದುರು ಪ್ರಮಾಣ ಮಾಡಲಾಗುತ್ತಿದೆ.

ಪ್ರೇಮವನ್ನು ನಿವೇದಿಸಲು....

ಅಷ್ಟೇ ಅಲ್ಲ, ಉಂಗುರವನ್ನು ಸದಾ ಈ ಬೆರಳಿನಲ್ಲಿಯೇ ತೊಟ್ಟಿರುವ ಮೂಲಕ ದಂಪತಿಗಳು ತಮ್ಮ ಪ್ರೇಮವನ್ನು ನಿವೇದಿಸಲು ಸಾಧ್ಯವಾಗುತ್ತಿತ್ತು. ಅಂದರೆ ಈ ಉಂಗುರ ಬೆರಳಿನಲ್ಲಿದ್ದಷ್ಟೂ ಹೊತ್ತು ತಮ್ಮ ಪತ್ನಿಯ ಹೊರತಾಗಿ ಪರಸ್ತ್ರಿಯನ್ನು ನೋಡುವುದಿಲ್ಲ ಎಂಬುದೇ ಆಗಿದೆ.

ಹಿಂದಿನಿಂದ ನಡೆದು ಬಂದ ಸಂಪ್ರದಾಯದಂತೆ....

ಆದರೆ ಉಂಗುರವನ್ನು ಇದೇ ಬೆರಳಿಗೆ ತೊಡಬೇಕೆಂದು ಯಾವುದೇ ದೇಶದ ಕಾನೂನಿನಲ್ಲಿಯೇ ಆಗಲಿ, ಯಾವುದೇ ಧರ್ಮದ ಗ್ರಂಥಗಳಲ್ಲಾಗಲಿ ಕಟ್ಟಪ್ಪಣೆಯಂತೆ ಸೂಚಿಸಿಯೇ ಇಲ್ಲ. ಹಿಂದಿನಿಂದ ನಡೆದು ಬಂದ ಸಂಪ್ರದಾಯದಂತೆ ಇದು ಇಂದಿಗೂ ನಡೆಯುತ್ತಾ ಬಂದಿದೆ ಅಷ್ಟೇ. ಆದರೆ ವಿಶ್ವದ ಕೆಲವು ಕಡೆ, ಉದಾಹರಣೆಗೆ ಉತ್ತರ ಯೂರೋಪ್ ರಾಷ್ಟ್ರಗಳಲ್ಲಿ ಎಡಗೈ ಬದಲಿಗೆ ಬಲಗೈಯ ಉಂಗುರ ಬೆರಳಿಗೆ ತೊಡಲಾಗುತ್ತದೆ. ಆಸ್ಟ್ರಿಯಾ, ಡೆನ್ಮಾರ್ಕ್, ಪೋಲ್ಯಾಂಡ್, ಜರ್ಮನಿಯ ನವವಿವಾಹಿತರು ಬಲಗೈಯ ಉಂಗುರ ಬೆರಳಿನಲ್ಲಿ ಉಂಗುರ ತೊಡುತ್ತಾರೆ.

ಭಾರತದಲ್ಲಿ....

ಭಾರತದಲ್ಲಿಯೂ ಹೆಚ್ಚಿನ ಜನರು ಎಡಗೈ ಉಂಗುರ ಬೆರಳಿನಲ್ಲಿಯೇ ಉಂಗುರ ತೊಡುತ್ತಾರೆ. ಇದರಿಂದ ಅದೃಷ್ಟ ಖುಲಾಯಿಸುತ್ತದೆ ಎಂದು ನಂಬುತ್ತಾರೆ. ಆದರೆ ಕೆಲವರು ಮಾತ್ರ ಬಲಗೈಗೆ ತೊಡಲು ಇಷ್ಟಪಡುತ್ತಾರೆ. ಏಕೆಂದರೆ ಮುಖ್ಯವಾದ ಕೆಲಸಗಳನ್ನೆಲ್ಲಾ ಬಲಗೈಯಲ್ಲಿಯೇ ಮಾಡುವ ಕಾರಣ ಉಂಗುರ ಬಲಗೈಯಲ್ಲಿಯೇ ಇದ್ದರೆ ಉತ್ತಮ ಎಂದು ಇವರ ಅಭಿಪ್ರಾಯ.

ಎಡಗೈಗೆ ಏಕೆ ಉಂಗುರ ತೊಡಲಾಗುತ್ತದೆ?

ಎಡಗೈಗೆ ಏಕೆ ಉಂಗುರ ತೊಡಲಾಗುತ್ತಿತ್ತು ಎಂಬ ಪ್ರಶ್ನೆಗೆ ಇನ್ನೊಂದು ವಾದವೂ ಇದೆ. ಹಿಂದೆ ಉಂಗುರವನ್ನು ದಂತ, ಚರ್ಮದ ಪಟ್ಟಿ ಮತ್ತು ಇತರ ಅಮೂಲ್ಯ ವಸ್ತುಗಳಿಂದ ತಯಾರಿಸಲಾಗುತ್ತಿತ್ತು. ಬಲಗೈಯಲ್ಲಿ ಧರಿಸಿದ್ದರೆ ಕೆಲಸದ ಭರದಲ್ಲಿ ಉಂಗುರದ ಪಟ್ಟಿ ಹಾಳಾಗುವ ಸಾಧ್ಯತೆ ಇದ್ದುದರಿಂದ ಎಡಗೈಗೆ ಧರಿಸಲಾಗುತ್ತಿತ್ತು ಎಂಬುದೇ ಈ ವಾದ. ಅಲ್ಲದೇ ನಾಲ್ಕನೆಯ ಬೆರಳಿಗೆ ತೊಡುವ ಮೂಲಕ ಅತಿ ಕಡಿಮೆ ಘಾಸಿಯಾಗುತ್ತದೆ ಎನ್ನಲಾಗುತ್ತಿತ್ತು. ಇದರಿಂದ ತಮ್ಮ ಪ್ರೇಮದ ಸಂಕೇತವನ್ನು ಜೋಪಾನವಾಗಿಟ್ಟುಕೊಳ್ಳಲು ಸಾಧ್ಯವಾಗುತ್ತಿತ್ತು.

ಎಡಗೈಗೆ ಏಕೆ ಉಂಗುರ ತೊಡಲಾಗುತ್ತದೆ?

ಈ ಬೆರಳಿಗೆ ಬಿಟ್ಟು ಬೇರೆ ಬೆರಳುಗಳಿಗೆ ತೊಡಲು ಇತರ ಕಾರಣಗಳಿವೆ. ಸಂಧಿವಾತ ಅಥವಾ ಇತರ ತೊಂದರೆಗಳ ಕಾರಣ ಬೆರಳುಗಳು ಕೊಂಚ ಊದಿಕೊಂಡು ಉಂಗುರ ತೊಡಲು ಕಷ್ಟವಾದಾಗ ಇತರ ಬೆರಳಿಗೆ ತೊಡಲಾಗುತ್ತದೆ.

 

Story first published: Monday, October 17, 2016, 12:04 [IST]
English summary

Ever Wondered Why You Wear Wedding Ring On The Four Finger

It's pretty much accepted that ring should be worn on the fourth finger of your left hand but have you ever wondered the reason behind this tradition? Why do bride and groom need to follow this tradition? Here's the complete story behind the myth of wearing your wedding ring on left hand.
Please Wait while comments are loading...
Subscribe Newsletter