ಚುಂಬನದ ಸಮಯದಲ್ಲಿ ಕಣ್ಣು ಮುಚ್ಚಿ ಕೊಳ್ಳುವುದೇಕೆ?

ಸಾಮಾನ್ಯವಾಗಿ ಇನ್ನೊಬ್ಬ ವ್ಯಕ್ತಿಯನ್ನು ಚುಂಬಿಸುವಾಗ ನೈಸರ್ಗಿಕವಾಗಿಯೇ ಕಣ್ಣುಗಳು ಮುಚ್ಚಿ ಹೋಗುತ್ತದೆ. ಚುಂಬನದ ಬಗ್ಗೆ ಇರುವ ಕೆಲವೊಂದು ರೋಚಕತೆಗಳನ್ನು ನೀವಿಲ್ಲಿ ಓದಿಕೊಳ್ಳಿ.....

By: manu
Subscribe to Boldsky

ಪ್ರೇಮದ ಪ್ರಕಟಣೆಯನ್ನು ಬಿಂಬಿಸುವಲ್ಲಿ ಚುಂಬನಕ್ಕಿಂತ ಸಮರ್ಥವಾದ ಇನ್ನೊಂದು ಮಾಧ್ಯಮವಿಲ್ಲ. ತಾಯಿ ಮಗುವಿಗೆ ನೀಡುವ ಚುಂಬನ ಮಮತೆಯಾಗಿದ್ದರೆ ಪ್ರೇಮಿ ತನ್ನ ಪ್ರೇಮಿಗೆ ನೀಡುವ ಚುಂಬನ ಸುರಕ್ಷತೆಯ ಭರವಸೆಯಾಗಿದೆ. ದಂಪತಿಗಳ ನಡುವಣ ಚುಂಬನದಲ್ಲಿ ತುಟಿಗೆ ತುಟಿಗಳು ಬೆಸೆದು ನಾಲಿಗೆಗಳು ಮಾತನಾಡಿದರೂ ಆ ಸಮಯದಲ್ಲಿ ಭಾವಪರವಶೆಯಿಂದ ಕಣ್ಣುಗಳು ತನ್ನಿಂತಾನೇ ಮುಚ್ಚಿಕೊಳ್ಳುತ್ತವೆ. ಇಲ್ಲಿ ಪ್ರತಿದಿನ ಬಾಸ್‌‌ಗೆ ಕಿಸ್ ಕೊಟ್ಟೇ ಕೆಲಸ ಪ್ರಾರಂಭ! ವಿಡಿಯೋ ವೈರಲ್

ಒಂದು ವೇಳೆ ಕಣ್ಣುಗಳು ತೆರೆದೇ ಇದ್ದರೆ ಆ ಚುಂಬನ ಭಾವಾತ್ಮಕವಾಗಿರದೇ ಕೇವಲ ವ್ಯವಹಾರಿಕ ಅಥವಾ ವ್ಯಾಪಾರಿಕವಾಗಿರುತ್ತದೆ. ಇದನ್ನು ಅಸಾಮಾನ್ಯ ನಡುವಳಿಕೆ ಎಂದೂ ಪರಿಗಣಿಸಲಾಗುತ್ತದೆ. ಆದರೆ ಈ ಸಮಯದಲ್ಲಿ ಕಣ್ಣುಗಳು ತನ್ನಿಂತಾನೇ ಏಕೆ ಮುಚ್ಚಿಕೊಳ್ಳುತ್ತವೆ ಎಂದು ಗೊತ್ತೇ? ಎಲ್ಲಾ ಚುಂಬನಗಳ ಸಮಯದಲ್ಲಿ ಕಣ್ಣುಗಳು ಮುಚ್ಚಿಯೇ ಇರುತ್ತವೆ. ಚುಂಬನದ ಹಿಂದಿರುವ ಇಂಟರೆಸ್ಟಿಂಗ್ ಸಂಗತಿ

ಅದರಲ್ಲೂ ಹೊಸತಾದ ಸಂಬಂಧಕ್ಕೆ ಒಳಗಾದ ಪ್ರೇಮಿಗಳು ಇನ್ನಷ್ಟು ಹತ್ತಿರ ಬರಲು ಹಾಗೂ ಬಾಂಧವ್ಯ ಇನ್ನಷ್ಟು ಹೆಚ್ಚಲು ಕಣ್ಣುಮುಚ್ಚಿಕೊಂಡ ಚುಂಬನ ಭದ್ರ ತಳಹದಿಯಾಗಿದೆ. ಬನ್ನಿ, ಈ ಪರವಶತೆಯ ಸಮಯದಲ್ಲಿ ಕಣ್ಣುಗಳನ್ನು ಮುಚ್ಚಿಕೊಳ್ಳುವ ವೈಜ್ಞಾನಿಕ ಕಾರಣಗಳನ್ನು ಈಗ ನೋಡೋಣ: ಇದು ಚುಂಬನದ ವಿಷಯ, ಸ್ವಲ್ಪ ಇಂಟರೆಸ್ಟಿಂಗ್!       

ಕಣ್ಣುಗಳು ತನ್ನಿಂತಾನೇ ಮುಚ್ಚಿಕೊಳ್ಳುತ್ತವೆ ಯಾಕೆ?

ಯಾವುದೇ ವಸ್ತುವನ್ನು ತೀರಾ ಹತ್ತಿರಕ್ಕೆ ತಂದರೆ ನೋಡಲು ಕಷ್ಟವಾಗುತ್ತದೆ. ಚುಂಬನದ ಸಮಯದಲ್ಲಿ ಪ್ರೇಮಿ ಅತಿ ನಿಕಟವಾಗಿರುವ ಕಾರಣಕ್ಕೇ ಕಣ್ಣುಗಳು ತನ್ನಿಂತಾನೇ ಮುಚ್ಚಿಕೊಳ್ಳುತ್ತವೆ ಎಂದು ಭಾವಿಸಲಾಗಿತ್ತು. ಆದರೆ ವಾಸ್ತವ ಬೇರೆಯೇ ಇದೆ.

ಇಲ್ಲಿ ಮೆದುಳು ಅಸಮರ್ಥವಾಗಿ ಬಿಡುತ್ತದೆ!

ನಮ್ಮ ಮೆದುಳು ಒಂದೇ ಸಮಯದಲ್ಲಿ ಹಲವು ಕೆಲಸಗಳನ್ನು ಮಾಡಲು ಅಸಮರ್ಥವಾಗಿದೆ. ಸಾಮಾನ್ಯವಾಗಿ ಒಂದೇ ಹೊತ್ತಿನಲ್ಲಿ ನಾವು ಎರಡಕ್ಕಿಂತ ಹೆಚ್ಚು ಕೆಲಸಗಳನ್ನು ಮಾಡುತ್ತೇವಾದರೂ ಇವುಗಳಲ್ಲಿ ಅರ್ಧದಷ್ಟನ್ನು ಮೆದುಳುಬಳ್ಳಿ ನಡೆಸುತ್ತದೆ. ಉದಾಹರಣೆಗೆ ನಡೆಯುತ್ತಾ ಸಂಗೀತ ಆಲಿಸುವುದು.

ಇಲ್ಲಿ ಮೆದುಳು ಅಸಮರ್ಥವಾಗಿ ಬಿಡುತ್ತದೆ!

ಇಲ್ಲಿ ನಡೆಯುವ ಕೆಲಸದ ಎಲ್ಲಾ ಸೂಚನೆಗಳನ್ನು ಮೆದುಳುಬಳ್ಳಿ ನಿರ್ವಹಿಸಿದರೆ ಕೇಳುವ ಕೆಲಸವನ್ನು ಮೆದುಳು ನಿರ್ವಹಿಸುತ್ತದೆ. ಇದೇ ಪರಿಯಲ್ಲಿ ಚುಂಬನದ ಅವಧಿಯಲ್ಲಿ ನೋಡುವ ಮತ್ತು ತುಟಿಗಳ ಸಂವೇದನೆಯನ್ನು ಅನುಭವಿಸುವ ಎರಡೂ ಕೆಲಸಗಳನ್ನು ಮೆದುಳು ಏಕಕಾಲದಲ್ಲಿ ನಿರ್ವಹಿಸಲು ಸಾಧ್ಯವಾಗದ ಕಾರಣ ಈ ಸಮಯದಲ್ಲಿ ಕಣ್ಣನ್ನು ತನ್ನಿಂತಾನೇ ಮುಚ್ಚುವಂತೆ ಮಾಡುತ್ತದೆ. ತನ್ಮೂಲಕ ತುಟಿಗಳ ಸಂವೇದನೆ ಹಾಗೂ ಸುರಕ್ಷತೆ ಮತ್ತು ಭರವಸೆಯ ಭಾವನೆಯನ್ನು ಪಡೆದಂತಾಗುತ್ತದೆ.

ಮನಃಶಾಸ್ತ್ರಜ್ಞರ ಪ್ರಕಾರ

ಈ ವಿಷಯದಲ್ಲಿ ಹಲವು ಸಂಶೋಧನೆಗಳನ್ನು ನಡೆಸಿದ ಖ್ಯಾತ ಮನಃಶಾಸ್ತ್ರಜ್ಞರಾದ ಪಾಲಿ ಡಾಲ್ಟನ್ ಹಾಗೂ ಸಾಂಡ್ರಾ ಮರ್ಫಿಯವರ ಪ್ರಕಾರ ಮೆದುಳು ಏಕಕಾಲದಲ್ಲಿ ದ್ರಶ್ಯ ಮತ್ತು ಸ್ಪರ್ಶದ ಸಂವೇದನೆಗಳನ್ನು ಪೂರ್ಣಪ್ರಮಾಣದಲ್ಲಿ ಗುರುತಿಸಲು ಸಾಧ್ಯವಿಲ್ಲ. ಅಂದರೆ ಭಾವ ಪರವಶತೆಯ ಸಮಯದಲ್ಲಿ ಕಣ್ಣು ತೆರೆದಿದ್ದರೆ ಪರವಶತೆ ಪೂರ್ಣಪ್ರಮಾಣದಲ್ಲಿ ಸಿಗಲು ಸಾಧ್ಯವಾಗುವುದಿಲ್ಲ.

ಮನಃಶಾಸ್ತ್ರಜ್ಞ ಪ್ರಕಾರ

ಆಗ ಮೆದುಳು ಕಣ್ಣುಗಳನ್ನು ಮುಚ್ಚಿ ಈ ಭಾವಪರವಶತೆಯನ್ನು ಪೂರ್ಣವಾಗಿ ಗ್ರಹಿಸಲು ಸೂಚನೆಗಳನ್ನು ನೀಡುತ್ತದೆ. ಇದೇ ಕಾರಣದಿಂದ ಕಣ್ಣುಗಳು ತನ್ನಿಂತಾನೇ ಮುಚ್ಚಿಕೊಳ್ಳುತ್ತವೆ.

ಮನಃಶಾಸ್ತ್ರಜ್ಞ ಪ್ರಕಾರ

"ಈ ಅವಧಿಯಲ್ಲಿ ಕಣ್ಣುಗಳನ್ನು ಮುಚ್ಚಿಕೊಳ್ಳುವ ಮೂಲಕ ಕಣ್ಣುಗಳ ಮೂಲಕ ಲಭ್ಯವಾಗದ ಮಾಹಿತಿಯನ್ನು ವಿಶ್ಲೇಷಿಸಲು ಮೆದುಳಿಗೆ ಅಗತ್ಯವಿಲ್ಲದೇ ತನ್ನ ಪೂರ್ಣಪ್ರಮಾಣದ ಗಮನವನ್ನು ಹರಿಸಲು ಸಾಧ್ಯವಾಗುತ್ತದೆ" ಎಂದು ಮನಃಶಾಸ್ತ್ರಜ್ಞರು ಅಭಿಪ್ರಾಯ ಪಡುತ್ತಾರೆ.

ಗಮನ ಪಂದೇ ಕಡೆ ಕೇಂದ್ರಿ ಕೃತವಾಗಿರುತ್ತದೆ

ಕಣ್ಣು ಮುಚ್ಚಿ ಚುಂಬನದ ಆಹ್ಲಾದತೆಯನ್ನು ಅನುಭವಿಸುವಾಗ ತನ್ನ ಪ್ರೇಮಿಯ ಗಮನವನ್ನು ಬೇರೆಡೆಗೆ ಹರಿಯುವುದರಿಂದಲೂ ತಡೆದಂತಾಗುತ್ತದೆ. ಅಲ್ಲದೇ ದಂಪತಿಗಳ ನಡುವಣ ಮಿಲನದ ಪೂರ್ವಹಂತದ ಕ್ರಿಯೆಯಾಗಿರುವ ಚುಂಬನ ಈ ಪಥವನ್ನು ಸರಿಯಾದ ದಾರಿಯತ್ತ ಸಾಗಿಸಲು ನೆರವಾಗುತ್ತದೆ.

ಸಂತೋಷಕರ ದಾಂಪತ್ಯಕ್ಕೆ ನಾಂದಿ

ಅಂದರೆ ಈ ಹೊತ್ತಿನಲ್ಲಿ ಮೆದುಳು ಬೇರೆ ಆಕರ್ಷಣೆಗಳತ್ತ ವಾಲದೇ ಕೇವಲ ಸಂಗಾತಿಯ ಆಪ್ತತೆ, ನಿಕಟತೆಯನ್ನು ಬಯಸಲು, ಈ ಮೂಲಕ ಆತ್ಮೀಯತೆಯ ಬೆಸುಗೆ ಸಾಧಿಸಲು ಸಾಧ್ಯವಾಗುತ್ತದೆ. ಈ ಬೆಸುಗೆ ಶಾಶ್ವತ, ಸುಂದರ, ಸಂತೋಷಕರ ದಾಂಪತ್ಯಕ್ಕೆ ನಾಂದಿಯಾಗಿದೆ.

ಇನ್ನು ಬೇರೇನನ್ನೂ ಯೋಚಿಸದೇ ಕಣ್ಣುಗಳನ್ನು ಮುಚ್ಚಿಕೊಳ್ಳಿ

ಆದ್ದರಿಂದ ನಿಮ್ಮ ಸಂಗಾತಿಯೊಂದಿಗೆ ಚುಂಬಿಸುವಾಗ ಬೇರೇನನ್ನೂ ಯೋಚಿಸದೇ ಕಣ್ಣುಗಳನ್ನು ಮುಚ್ಚಿಕೊಂಡು ಶೇಕಡಾ ನೂರರಷ್ಟು ಅನುಭವಿಸಿ, ಸುಖಿಗಳಾಗಿರಿ.

 

Story first published: Tuesday, October 25, 2016, 11:36 [IST]
English summary

Ever Wondered Why We Close Eyes While Kissing?

Liplock with closed eyes is the best combination of having a perfect kiss. Kissing is not only about tongue and lips, but it is also a daunting experience that everyone of us has gone through. The best kiss is getting your tongue dancing and snuggling into each other's mouth with closed eyes. Many people find it creepy when they find their partner kissing with open eyes, which is also termed to be an unusual behaviour.
Please Wait while comments are loading...
Subscribe Newsletter