For Quick Alerts
ALLOW NOTIFICATIONS  
For Daily Alerts

ರೈಲು ಹಳಿಗಳ ಕೆಳಗೆ ಒಡೆದ ಜಲ್ಲಿಕಲ್ಲುಗಳನ್ನೇ ಹಾಕುತ್ತಾರೆ ಏಕೆ?

By Deepu
|

ರೈಲು ಪ್ರಯಾಣ ಇಂದು ಅತ್ಯಂತ ಸಾಮಾನ್ಯವಾಗಿದೆ. ರೈಲುಹಳಿಯ ಮೇಲೆ ಯಾವುದೇ ರೈಲು ಓಡಾಡಿದರೂ, ರೈಲು ಹಳಿಗಳ ಕೆಳಗೆ ಮಾತ್ರ ಕಡ್ಡಾಯವಾಗಿ ಮಧ್ಯಮ ಗಾತ್ರದಲ್ಲಿ ಒಡೆದ ಜಲ್ಲಿಕಲ್ಲುಳಗಳನ್ನೇ ಹಾಸಿರುತ್ತಾರೆ. ಅಷ್ಟೇ ಅಲ್ಲ, ಕಾಲಕಾಲಕ್ಕೆ ಜರಿದುಹೋಗಿದ್ದ ಕಲ್ಲುಗಳನ್ನು ಮತ್ತೆ ಸೇರಿಸುತ್ತಲೂ, ಅಗತ್ಯಬಿದ್ದರೆ ಇನ್ನೂ ಹೆಚ್ಚಿನ ಕಲ್ಲುಗಳನ್ನು ಸೇರಿಸುತ್ತಲೂ ಇರುತ್ತಾರೆ.

ಇದನ್ನು ಗಟ್ಟಿ ಕಾಂಕ್ರೀಟಿನಿಂದ ಶಾಶ್ವತವಾಗಿಸಬಹುದಲ್ಲ, ಇಲ್ಲ, ಜಲ್ಲಿಕಲ್ಲುಗಳನ್ನೇ ಬಳಸುವುದು ಏಕೆಂದು ಗೊತ್ತೇ? ಇದಕ್ಕೆ ವೈಜ್ಞಾನಿಕವಾದ ಕಾರಣವಿದೆ. ಇಂದಿನ ಲೇಖನದಲ್ಲಿ ಜಲ್ಲಿಕಲ್ಲುಗಳನ್ನು ಬಳಸುವ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲಾಗಿದೆ.

ಇದಕ್ಕೂ ಮೊದಲು ಜಲ್ಲಿಕಲ್ಲುಗಳಿಂದಾಗಿ ಪ್ರಾಣ ಕಳೆದುಕೊಳ್ಳುವವರ ಬಗ್ಗೆ ಅರಿತುಕೊಳ್ಳುವುದು ಅಗತ್ಯ. ಜಲ್ಲಿಕಲ್ಲುಗಳು ರೈಲುಹಳಿಗಳಿಗೆ ಸೂಕ್ತವೇ ಹೊರತು ಇದರ ಮೇಲೆ ಮನುಷ್ಯರಾಗಲೀ ಜಾನುವಾರುಗಳಾಗಲೀ ಗಟ್ಟಿನೆಲದ ಮೇಲೆ ನಡೆದಷ್ಟು ಸುಲಭವಾಗಿ ನಡೆಯಲು ಸಾಧ್ಯವಿಲ್ಲ. ಹಳಿಗಳ ಮೇಲೆ ಧಾವಿಸುತ್ತಿರುವ ರೈಲು ಥಟ್ಟನೇ ನಿಲ್ಲಲೂ ಸಾಧ್ಯವಿಲ್ಲ. ಆದ್ದರಿಂದ ರೈಲು ಹಳಿಯನ್ನು ದಾಟುವಾಗ ಅತಿ ಹೆಚ್ಚಿನ ಎಚ್ಚರಿಕೆಯನ್ನು ವಹಿಸುವುದು ಅಗತ್ಯ.

ಕಾರಣ #1

ಕಾರಣ #1

ಹಳಿಗಳ ಕೆಳಗೆ ಹಾಸುವ ಈ ಜಲ್ಲಿಕಲ್ಲುಗಳಿಗೆ ತಾಂತ್ರಿಕವಾಗಿ ಬಾಲಾಸ್ಟ್ (ballast) ಎಂದು ಕರೆಯಲಾಗುತ್ತದೆ. ರೈಲುಗಳ ಓಡಾಟಕ್ಕೆ ಈ ಕಲ್ಲುಗಳು ಅತಿ ಅಗತ್ಯವಾಗಿದೆ.

ಕಾರಣ #2

ಕಾರಣ #2

ಎರಡೂ ಕಂಬಿಗಳ ನಡುವೆ ಅಡ್ಡಲಾಗಿ ಮರದ ಅಥವಾ ಕಾಂಕ್ರೀಟಿನ ಅಡ್ಡಪಟ್ಟಿಗಳನ್ನು ರೈಲುಹಳಿಯ ಉದ್ದಕ್ಕೂ ಹಾಸಲಾಗಿರುತ್ತದೆ. ಈ ಅಡ್ಡಪಟ್ಟಿಗಳು ಸರಿಸುಮಾರು ಮುಕ್ಕಾಲು ಪಾಲಿಗಿಂತಲೂ ಹೆಚ್ಚು ಭಾಗ ಜಲ್ಲಿಕಲ್ಲುಗಳ ನಡುವೆ ಹುದುಗಿರುತ್ತದೆ. ರೈಲು ಹಳಿಗಳ ಮೇಲೆ ಓಡುವಾಗ ರೈಲಿನ ಭಾರವನ್ನು ಈ ಪಟ್ಟಿಗಳು ಒಂದೇ ಸ್ಥಳದ ಮೇಲೆ ಹಾಕದೇ ಚಿಕ್ಕ ಚಿಕ್ಕ ಜಲ್ಲಿಕಲ್ಲುಗಳ ಮೂಲಕ ವಿಶಾಲ ಪ್ರದೇಶದ ಮೇಲೆ ಹರಡುತ್ತದೆ. ಅಲ್ಲದೇ ಹಳಿಗಳು ಗಟ್ಟಿಯಾಗಿ ನೆಲಕ್ಕೆ ಕಚ್ಚಿರುವಂತೆ ನೋಡಿಕೊಳ್ಳುತ್ತದೆ.

ಕಾರಣ #3

ಕಾರಣ #3

ಜಲ್ಲಿಕಲ್ಲುಗಳ ಅಂಚುಗಳು ತೀಕ್ಷ್ಣವಾಗಿದ್ದು ಮರದ ಅಥವಾ ಕಾಂಕ್ರೀಟಿನ ಪಟ್ಟಿಗಳನ್ನು ಒತ್ತಡದಲ್ಲಿ ಭದ್ರವಾಗಿ ಕಚ್ಚಿಕೊಂಡಿರಲು ನೆರವಾಗುತ್ತವೆ. ಹೀಗೆ ಹಿಡಿದುಕೊಂಡಿರಬೇಕೆಂದಲೇ ಒಡೆದ ಜಲ್ಲಿಕಲ್ಲುಗಳನ್ನೇ ಆಯ್ದುಕೊಳ್ಳಲಾಗುತ್ತದೆ.

ಕಾರಣ #4

ಕಾರಣ #4

ಹಳಿಗಳು ನೆಲಮಟ್ಟಕ್ಕಿಂತಲೂ ಕೊಂಚ ಎತ್ತರದಲ್ಲಿದ್ದರೆ ಮಾತ್ರ ಮಳೆಗಾಲದಲ್ಲಿ ಹಳಿಗಳು ನೀರಿನಿಂದ ಆವೃತವಾಗದಿರಲು ಸಾಧ್ಯ. ಆದ್ದರಿಂದ ಜಲ್ಲಿಕಲ್ಲುಗಳ ಕೆಳಗೆ ಹೆಚ್ಚಿನ ಮಣ್ಣನ್ನು ಹಾಕಿ ನೆಲಮಟ್ಟಕ್ಕಿಂತಲೂ ಕೊಂಚ ಎತ್ತರವಿರುವಂತೆ ಮಾಡಲಾಗುತ್ತದೆ.

ಕಾರಣ #5

ಕಾರಣ #5

ಹಳಿಗಳ ನಡುವೆ ಮಣ್ಣಿದ್ದರೆ ಕಳೆ ಗಿಡಗಳು ಸುಲಭವಾಗಿ ಬೆಳೆದುಬಿಡುತ್ತವೆ. ಇವನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಿವುದು ಹೆಚ್ಚಿನ ಖರ್ಚು ಮತ್ತು ಅನಾವಶ್ಯಕ ವಿಳಂಬಕ್ಕೆ ಕಾರಣವಾಗಬಹುದು. ಜಲ್ಲಿಕಲ್ಲುಗಳ ಮೇಲೆ ಕಳೆ ಬೆಳೆಯುವ ಸಾಧ್ಯತೆ ಕಡಿಮೆ ಇರುವುದರಿಂದ ಈ ತೊಂದರೆಯನ್ನು ತಡೆದ ಹಾಗಾಗುತ್ತದೆ.

English summary

Ever Wondered Why There Are Crushed Stones On Train Tracks

This is something that is common with all train tracks. But have you wondered why exactly there are crushed stones on train tracks? Well, they are there for a reason. In this article, we are here to share some of the reasons as to why all the train tracks have crushed stones on them.
Story first published: Thursday, August 25, 2016, 20:17 [IST]
X
Desktop Bottom Promotion