For Quick Alerts
ALLOW NOTIFICATIONS  
For Daily Alerts

ಓಡುವ ವಾಹನಗಳನ್ನು ಕಂಡರೆ ನಾಯಿಗಳೇಕೆ ಅಷ್ಟು ಕೋಪ?

By Manu
|

ನಿಯತ್ತಿಗೆ ಇನ್ನೊಂದು ಹೆಸರು ನಾಯಿ. ವಿಶ್ವದ ಅತಿಹೆಚ್ಚು ಜನರ ಮೆಚ್ಚಿನ ಸಾಕುಪ್ರಾಣಿಯೂ ಹೌದು. ಮನೆಯ ರಕ್ಷಕನೂ ಹೌದು, ಓರ್ವ ಗೆಳೆಯನೂ ಹೌದು. ಆದರೆ ನಾಯಿಗಳ ಕೆಲವು ವರ್ತನೆಗಳು ಮಾತ್ರ ವಿಚಿತ್ರವಾಗಿರುತ್ತವೆ. ನಿಮ್ಮ ಮನೆಗೆ ಬರುವ ಉತ್ತಮ ಬಟ್ಟೆ ತೊಟ್ಟ ಅತಿಥಿಗಳಿಗೆ ಬೊಗಳದಿರುವ ನಿಮ್ಮ ನಾಯಿ ಅದೇ ಹರಕು ಬಟ್ಟೆ ತೊಟ್ಟು ಬಂದ ಭಿಕ್ಷುಕರನ್ನು ಕಂಡಾಕ್ಷಣ ಮೈಮೇಲೆ ಹಾರಿ ಬೊಗಳಿ ಓಡಿಸುತ್ತವೆ. ನಾಯಿ ಕಡಿತಕ್ಕೆ ಪರಿಣಾಮಕಾರಿ ಪ್ರಥಮ ಚಿಕಿತ್ಸೆ ಹೇಗಿರಬೇಕು?

ಕೆಲವೊಮ್ಮೆ ಬಿರಿಯಾನಿಯಂತಹ ಸ್ವಾದಿಷ್ಟ ಆಹಾರವನ್ನೂ ಮೂಸಿನೋಡದ ನಾಯಿ ನಿಮ್ಮ ಅತಿಥಿಗಳು ಹೊರಗೆ ಬಿಟ್ಟು ಬಂದ ಶೂ ಒಳಗಿನ ದುರ್ನಾತ ಬೀರುವ ಕಾಲುಚೀಲವನ್ನು (ಸಾಕ್ಸ್) ಬಹಳ ಆನಂದದಿಂದ ಜಗಿಯುತ್ತಾ ಆಸ್ವಾದಿಸುತ್ತದೆ...! ನಾಯಿಗಳ ಬಗ್ಗೆ ಇರುವ ಒಂದಿಷ್ಟು ಇಂಟರೆಸ್ಟಿಂಗ್ ಸಂಗತಿ

ಇದೇ ರೀತಿ ನಾಯಿಗಳ ಇನ್ನೊಂದು ವಿಚಿತ್ರ ಅಭ್ಯಾಸವೆಂದರೆ ದಾರಿಯಲ್ಲಿ ಹೋಗುವ ವಾಹನಗಳನ್ನು ಕೊಂಚ ದೂರದವರೆಗೆ ಬೊಗಳುತ್ತಾ ಹಿಂಬಾಲಿಸುವುದು. ಕೆಲವು ಸಂದರ್ಭಗಳಲ್ಲಿ ಬೈಕ್ ಓಡಿಸುವವರ ಕಾಲನ್ನೂ ಕಚ್ಚಿವೆ. ನಾಯಿಗಳ ಇಂತಹ ಕೆಲವು ಅಭ್ಯಾಸಗಳ ಬಗ್ಗೆ ಕೆಲವು ಮಾಹಿತಿಗಳನ್ನು ಸಂಗ್ರಹಿಸಲಾಗಿದ್ದು ಇದಕ್ಕೆ ಕಾರಣವೇನಿರಬಹುದು ಎಂಬ ಬಗ್ಗೆ ತಜ್ಞರು ನೀಡಿರುವ ಉತ್ತರಗಳನ್ನು ಮುಂದೆ ಓದಿ...

ಪ್ರತಿ ನಾಯಿಯೂ ತನ್ನ ಎಲ್ಲೆಕಟ್ಟು ನಿರ್ಮಿಸುತ್ತದೆ

ಪ್ರತಿ ನಾಯಿಯೂ ತನ್ನ ಎಲ್ಲೆಕಟ್ಟು ನಿರ್ಮಿಸುತ್ತದೆ

ಕಾಡಿನಲ್ಲಿ ಹುಲಿ, ಸಿಂಹಗಳು ತಮ್ಮ ಎಲ್ಲೆಕಟ್ಟುಗಳನ್ನು ನಿರ್ಮಿಸುವಂತೆ ನಾಯಿಗಳೂ ತಮ್ಮ ಎಲ್ಲೆಕಟ್ಟುಗಳನ್ನು ನಿರ್ಮಿಸಿಕೊಳ್ಳುತ್ತವೆ. ಬೆಕ್ಕುಗಳಿಗೂ ಈ ಅಭ್ಯಾಸವಿದೆ. ನಾಯಿಗಳು ತಮ್ಮ ಎಲ್ಲೆಕಟ್ಟಿನ ಗಡಿಗಳ ಉದ್ದಕ್ಕೂ ಮರ ಅಥವಾ ಇತರ ನೇರವಾಗಿರುವ ವಸ್ತುಗಳ ಮೇಲೆ ಕೊಂಚಕೊಂಚವಾಗಿಯೇ ಮೂತ್ರ ವಿಸರ್ಜಿಸಿ ನಾಯಿಗಳು ಮಾತ್ರ ಮೂಸಬಹುದಾದ ವಾಸನೆಯ ಬೇಲಿಯನ್ನು ಕಟ್ಟಿಬಿಡುತ್ತವೆ. ಅಂದರೆ ಈ ಬೇಲಿಯ ಒಳಗೆ ಬರುವ ಯಾರೇ ಆದರೂ ಅವರು ಅತಿಕ್ರಮಿಗಳು.

ಪ್ರತಿ ನಾಯಿಯೂ ತನ್ನ ಎಲ್ಲೆಕಟ್ಟು ನಿರ್ಮಿಸುತ್ತದೆ

ಪ್ರತಿ ನಾಯಿಯೂ ತನ್ನ ಎಲ್ಲೆಕಟ್ಟು ನಿರ್ಮಿಸುತ್ತದೆ

ಒಂದು ವೇಳೆ ಈ ಬೇಲಿಯ ಒಳಗೆ ರಸ್ತೆಯೊಂದು ಹಾದು ಹೋಗಿದ್ದು ಆ ರಸ್ತೆಯ ಮುಖಾಂತರ ಬರುವ ಯಾವುದೇ ವಾಹನವಾದರೂ, ಮನುಷ್ಯರೇ ಆದರೂ, ಬೇರೆ ನಾಯಿಯೇ ಆದರೂ ಈ ನಾಯಿ ಅದನ್ನು ಸಹಿಸುವುದಿಲ್ಲ. ತನ್ನ ಕುಟುಂಬಕ್ಕೆ ಸೇರಿದವರನ್ನು ಮಾತ್ರ ಸಹಿಸುವ ನಾಯಿ ಬೇರೆ ಯಾವುದೇ ವಾಹನ ಬಂದರೂ ಇದನ್ನು ಓಡಿಸಲು ಬೊಗಳುತ್ತಾ ಬರುತ್ತದೆ. ತನ್ನ ಪ್ರದೇಶದ ಗಡಿಯನ್ನು ಆ ವಾಹನ ದಾಟಿ ಹೋಗುತ್ತಿದ್ದಂತೆಯೇ ಮರಳುತ್ತದೆ. ನಮಗೆ ಇದು ವಿಚಿತ್ರವೆನಿಸಬಹುದು, ಆದರೆ ನಾಯಿಗಳ ಮೆದುಳಿನಲ್ಲಿ ಇದು ತನ್ನ ರಾಜ್ಯ ಎಂಬ ಭಾವನೆ ಬೇರೂರಿರುತ್ತದೆ. ಇದೇ ಕಾರಣಕ್ಕೆ ಮಳೆಯಾದ ಬಳಿಕ ನಾಯಿಗಳು ಓಡಿಸಿಕೊಂಡು ಬರುವುದಿಲ್ಲ, ಬೇಕಾದರೆ ಗಮನಿಸಿ ನೋಡಿ. ಈ ಶ್ವಾನಗಳು ಮನೆಯಲ್ಲಿದ್ದರೆ ಕಾವಲುಗಾರ ಬೇಕಾಗಿಲ್ಲ

ಓಟದಲ್ಲಿ ಹಿಂದಿಕ್ಕುವುದನ್ನು ಸಹಿಸದು!

ಓಟದಲ್ಲಿ ಹಿಂದಿಕ್ಕುವುದನ್ನು ಸಹಿಸದು!

ವಾಸ್ತವವಾಗಿ ನಾಯಿಗಳು ಗುಂಪಿನಲ್ಲಿ ಬೇಟೆಯಾಡುವ ಪ್ರಾಣಿಗಳು. ವೇಗವೇ ಇದರ ಅಸ್ತ್ರ. ಚಿಕ್ಕಪುಟ್ಟ ಪ್ರಾಣಿಗಳನ್ನು ಅಟ್ಟಾಡಿಸಿ ಕೋರೆಹಲ್ಲುಗಳಿಂದ ಹಿಡಿದು ತಿನ್ನುವುದೇ ಇದರ ಆಹಾರ ಕ್ರಮ. ಆದರೆ ಮನುಷ್ಯರ ಒಡನಾಟದಲ್ಲಿ ಇವು ಸಾಕುಪ್ರಾಣಿಗಳಾಗಿದ್ದರೂ ಆಗಾಗ ತಮಗಿಂತಲೂ ವೇಗವಾಗಿ ಯಾರಾದರೂ ಓಡಿದರೆ ಇವು ಸಹಿಸುವುದಿಲ್ಲ. ಅದರಲ್ಲೂ ತಮಗಿಂತ ವೇಗವಾಗಿ ಓಡುವವರನ್ನು ಇವು ತಮ್ಮ ಪ್ರತಿಸ್ಪರ್ಧಿಗಳೆಂದೇ ತಿಳಿಯುತ್ತವೆ.

ಓಟದಲ್ಲಿ ಹಿಂದಿಕ್ಕುವುದನ್ನು ಸಹಿಸದು!

ಓಟದಲ್ಲಿ ಹಿಂದಿಕ್ಕುವುದನ್ನು ಸಹಿಸದು!

ವೇಗವಾಗಿ ಓಡುವ ವಾಹನದ ಬದಿಯಲ್ಲಿ ಬೊಗಳದೇ ಓಡುತ್ತಾ ವಾಹನವನ್ನು ಹಿಂದೆ ಹಾಕಲು ಯತ್ನಿಸುತ್ತವೆ. ಗಮನಿಸಿ ನೋಡಿ, ಇವು ಕಚ್ಚಲು ಯತ್ನಿಸುವುದಿಲ್ಲ. ವಾಹನದ ವೇಗ ಕಡಿಮೆಯಾದಾಗ ಇವೂ ತಮ್ಮ ವೇಗ ಕಡಿಮೆ ಮಾಡುತ್ತವೆ, ವಾಹನ ವೇಗ ಹೆಚ್ಚಿಸಿಕೊಂಡಾಗ ಇವೂ ವೇಗ ಹೆಚ್ಚಿಕೊಳ್ಳುತ್ತವೆ. ಎಲ್ಲಿಯವರೆಗೆ ಅಂದರೆ ಕಾಲುಗಳ ಶಕ್ತಿ ಸೋಲುವವರೆಗೂ ವಾಹನವನ್ನು ಹಿಂಬಾಲಿಸುತ್ತದೆ.

ಒಂಟಿತನದಿಂದ ದೂರಾಗಲು ಊಳಿಡುವುದು

ಒಂಟಿತನದಿಂದ ದೂರಾಗಲು ಊಳಿಡುವುದು

ನಾಯಿಗಳು ಮನುಷ್ಯರಂತೆಯೇ ಸಂಘಜೀವಿಗಳು. ಯಾವುದೋ ಕಾರಣದಿಂದ ಗುಂಪಿನಿಂದ ಬೇರೆಯಾದ ನಾಯಿ ಸದಾ ತನಗೊಂದು ಜೊತೆ ಬೇಕೆಂದು ಹುಡುಕುತ್ತಾ ಇರುತ್ತದೆ. ವಿಶೇಷವಾಗಿ ರಾತ್ರಿಯ ಹೊತ್ತಿನಲ್ಲಿ ಒಂಟಿಯಾಗಿದ್ದಾಗ ಯಾರಾದರೂ ಬರುತ್ತಾರೆಯೇ ಎಂದು ಕಾಯುತ್ತಿರುತ್ತದೆ. ಈ ಸಮಯದಲ್ಲಿ ಊಳಿಟ್ಟು ತಾನು ಒಂಟಿಯಾಗಿದ್ದೇನೆ ಎಂದು ಪ್ರಕಟಿಸುತ್ತದೆ. ನರಿಗಳೂ ಊಳಿಡುತ್ತವೆ.

ಒಂಟಿತನದಿಂದ ದೂರಾಗಲು ಊಳಿಡುವುದು

ಒಂಟಿತನದಿಂದ ದೂರಾಗಲು ಊಳಿಡುವುದು

ಕೆಲವೊಮ್ಮೆ ಅಕ್ಕಪಕ್ಕದ ಮನುಷ್ಯರು ತಮ್ಮ ಗಮನವನ್ನು ತನ್ನೆಡೆಗೆ ಸೆಳೆಯಲಿ ಎಂದೂ ಕೆಲವೊಮ್ಮೆ ನಾಯಿಗಳು ಊಳಿಡುತ್ತವೆ. ಊಳಿಟ್ಟ ನಾಯಿಗೆ ಕೊಂಚ ಅನ್ನ ಹಾಕಿದರೆ ಆ ಬಳಿಕ ಅದು ಊಳಿಡುವುದಿಲ್ಲ, ಬೇಕಾದರೆ ಪರಾಮರ್ಶಿಸಿ ನೋಡಿ.

ಮನುಷ್ಯರಿಗಿಂತಲೂ ನಾಯಿಗಳು ಹೆಚ್ಚು ಶಬ್ಧ ಮತ್ತು ವಾಸನಾಗ್ರಹಿಗಳು

ಮನುಷ್ಯರಿಗಿಂತಲೂ ನಾಯಿಗಳು ಹೆಚ್ಚು ಶಬ್ಧ ಮತ್ತು ವಾಸನಾಗ್ರಹಿಗಳು

ನಾಯಿಗಳ ವಾಸನಾಗ್ರಹಣ ಮತ್ತು ಶಬ್ಧಗ್ರಹಣ ಶಕ್ತಿಗೆ ಹೋಲಿಸಿದರೆ ಮಾನವರ ಶಕ್ತಿ ಕುಬ್ಜವಾಗಿದೆ.

ಅತಿ ಸೂಕ್ಷ್ಮ ವಾಸನಾಕಣವನ್ನೂ ಗ್ರಹಿಸಬಲ್ಲವು

ಅತಿ ಸೂಕ್ಷ್ಮ ವಾಸನಾಕಣವನ್ನೂ ಗ್ರಹಿಸಬಲ್ಲವು

ನಾಯಿಗಳು ತಮ್ಮ ಕಿವಿಯನ್ನು ಶಬ್ಧ ಬರುವತ್ತ ತಿರುಗಿಸಿ ಅತಿ ಸೂಕ್ಷ್ಮ ಕಂಪನವನ್ನೂ ಮೂಗಿನಿಂದ ಅತಿ ಸೂಕ್ಷ್ಮ ವಾಸನಾಕಣವನ್ನೂ ಗ್ರಹಿಸಬಲ್ಲವು. ವಾತಾವರಣದಲ್ಲಿ ಹೊಸ ವಾಸನೆ ಅಥವಾ ಶಬ್ಧ ಕಂಡುಬಂದರೆ ಇದಕ್ಕೆ ಬೊಗಳಿ ಸ್ಪಂದಿಸುತ್ತದೆ.

ತನ್ನ ಇರುವಿಕೆಯ ಬಗ್ಗೆ ಪ್ರಕಟಣೆ

ತನ್ನ ಇರುವಿಕೆಯ ಬಗ್ಗೆ ಪ್ರಕಟಣೆ

ಸಾಮಾನ್ಯವಾಗಿ ನಾಯಿ ತನ್ನ ಒಡೆಯನನ್ನು ರಕ್ಷಿಸುವ ಹೊಣೆಯನ್ನು ಹೊಂದಿರುತ್ತದೆ. ತನ್ನ ವಾಸಸ್ಥಳದ ಸುತ್ತಲೂ ಎಲ್ಲೆಕಟ್ಟೊಂದನ್ನು ನಿರ್ಮಿಸಿಕೊಂಡು ಇದರ ಒಳಗೆ ಬರುವ ಯಾವುದೇ ಹೊಸ ವ್ಯಕ್ತಿ ಅಥವಾ ಪ್ರಾಣಿಗೆ ತನ್ನ ಇರುವಿಕೆಯನ್ನು ಪ್ರಕಟಿಸಲು ಬೊಗಳುತ್ತದೆ.

ತನ್ನ ಇರುವಿಕೆಯ ಬಗ್ಗೆ ಪ್ರಕಟಣೆ

ತನ್ನ ಇರುವಿಕೆಯ ಬಗ್ಗೆ ಪ್ರಕಟಣೆ

ವಾಸ್ತವವಾಗಿ ನಾಯಿಯ ಇದೇ ಗುಣ ಕಾಡಿನಲ್ಲಿ ಇದನ್ನು ನಾಲಾಯಕ್ಕಾಗಿಸಿದೆ. ಏಕೆಂದರೆ ಚಿರತೆಗೆ ನಾಯಿ ಎಂದರೆ ನೆಚ್ಚಿನ ಆಹಾರ. ತಾನು ಇಲ್ಲಿದ್ದೇನೆ ಎಂದು ಆಹಾರವೇ ಬಾಯಿ ಬಿಟ್ಟು ಹೇಳುತ್ತಿದ್ದರೆ ಬಕಾಸುರ ಅಲ್ಲಿ ಧಾವಿಸದಿರುತ್ತಾನೆಯೇ?

English summary

Ever Wondered Why Dogs Run Behind Moving Vehicles?

Have you ever wondered why dogs run behind moving vehicles? Or do you find dogs bark at people who are walking around or even at the poor beggars? Yes, these questions may have cropped up in our minds; however, we may not seem to find an answer. So, here, in this article, we are about to share some of the reasons as to why dogs actually bark. When dogs generally bark at new strangers, it is a way they show that the person is not invited in their territory.
Story first published: Wednesday, September 21, 2016, 20:27 [IST]
X
Desktop Bottom Promotion