For Quick Alerts
ALLOW NOTIFICATIONS  
For Daily Alerts

ಸಂಸ್ಥೆ ಯಾವುದಾದರೂ, ಎಲ್ಲಾ ವಿಮಾನಗಳ ಬಣ್ಣ ಬಿಳಿ! ಯಾಕೆ ಹೀಗೆ?

By Arshad
|

ಒಂದು ಕಾಲದಲ್ಲಿ ಕೇವಲ ಶ್ರೀಮಂತರು ಮಾತ್ರವೇ ಅನುಭವಿಸಬಹುದಾಗಿದ್ದ ವಿಮಾನಯಾನ ಇಂದು ಜನಸಾಮಾನ್ಯರೂ ಭರಿಸುವಂತಿದೆ. ವಿಶ್ವಜಗತ್ತಿನ ಕಲ್ಪನೆಯ ಸಾಕಾರವಾಗಲು ವಿಮಾನಯಾನ ಪ್ರತ್ಯಕ್ಷ ನೆರವು ನೀಡಿದೆ. ಹಿಂದೆಲ್ಲಾ ದಿನಗಟ್ಟಲೇ ಹಿಡಿಯುತ್ತಿದ್ದ ಪ್ರಯಾಣ ಇಂದು ಕೆಲವೇ ಗಂಟೆಗಳಲ್ಲಿ ಸಾಧ್ಯವಾಗಿದೆ. ವಿಮಾನ ಅಪಹರಣಗಳಲ್ಲಿಯೇ ಅತಿ ಭಯಾನಕವಾದ ಪ್ರಕರಣಗಳು

ಹಿಂದೆ ಸರ್ಕಾರದ ಒಡೆತನದ ಒಂದೇ ಸಂಸ್ಥೆ ಇದ್ದರೆ ಈಗ ಹಲವು ಖಾಸಗಿ ಸಂಸ್ಥೆಗಳು ಪೈಪೋಟಿಯ ಮೂಲಕ ಅತ್ಯುನ್ನತ ಸೇವೆಗಳನ್ನು ನೀಡುತ್ತಿವೆ. ಗ್ರಾಹಕರನ್ನು ಸೆಳೆಯಲು ಹತ್ತು ಹಲವು ಬಣ್ಣಗಳ ಅತ್ಯಾಧುನಿಕ ವಿಮಾನಗಳು, ಆರಾಮ ಆಸನಗಳು, ಯಾನದ ನಡುವೆ ಲಭ್ಯವಾಗುವ ಭರ್ಜರಿ ಊಟ, ಟೀವಿ, ಇತ್ಯಾದಿಗಳನ್ನು ನೀಡುತ್ತಿವೆ. ವಿಮಾನದಲ್ಲಿ ಶೌಚಾಲಯ ಬಳಸುವುದಕ್ಕೂ ರೂಲ್ಸ್ ಇದೆ!

ಸಂಸ್ಥೆಗಳು ಯಾವುದೇ ಇರಲಿ, ಒಳಾಂಗಣದ ಬಣ್ಣ ಹೇಗೇ ಇರಲಿ, ಹೊರಗಿನ ಬಣ್ಣ ಮಾತ್ರ ಅಪ್ಪಟ ಬಿಳಿಯಾಗಿದ್ದು ಇದರ ಮೇಲೆ ಕೊಂಚ ಮಾತ್ರ ವಿನ್ಯಾಸ ಹೊಂದಲು ಅವಕಾಶವಿರುತ್ತದೆ. ಈ ಪ್ರಶ್ನೆಗೆ ಉತ್ತರ ನೀಡುವಾಗ ಹಲವು ಆಸಕ್ತಿದಾಯಕ ಸಂಗತಿಗಳು ಹೊರಬರುತ್ತವೆ. ಅದೆಂತಹ ಆಸಕ್ತಿದಾಯಕ ವಿಷಯಗಳು? ಮುಂದೆ ಓದಿ....

ಕಡಿಮೆ ವೆಚ್ಚ

ಕಡಿಮೆ ವೆಚ್ಚ

ಒಂದು ಇಡಿಯ ವಿಮಾನದ ಹೊರಗೆ ಬಣ್ಣವನ್ನು ಬರೆಯ ಬಿಳಿ ಬಣ್ಣದಿಂದ ಹಚ್ಚಿದಾಗ ಇದರ ಬಣ್ಣ ಹಚ್ಚುವ ವೆಚ್ಚ ಕನಿಷ್ಠದ್ದಾಗಿರುತ್ತದೆ. ಹೆಚ್ಚು ಬಣ್ಣಗಳನ್ನು ಬಳಸಿದಷ್ಟೂ ಇದರ ವೆಚ್ಚ ಹೆಚ್ಚಾಗುತ್ತಾ ಹೋಗುತ್ತದೆ. ಅಂದರೆ ಇತರ ಬಣ್ಣ ಹೊಡೆಯದಿದ್ದರೆ ಉಳಿತಾಯವಾಗುವ ಹಣ ಎಷ್ಟೆಂಬ ಅಂದಾಜಿದೆಯೇ? ಸುಮಾರು $50,೦೦೦ ದಿಂದ $2೦೦೦೦೦! (33,27,822.50 ರಿಂದ 1,33,11,290 ರೂಪಾಯಿಗಳು)

ಬಿಳಿಯ ಬಣ್ಣ ಕನಿಷ್ಠ ಬಿಸಿಯಾಗುತ್ತದೆ

ಬಿಳಿಯ ಬಣ್ಣ ಕನಿಷ್ಠ ಬಿಸಿಯಾಗುತ್ತದೆ

ಸೂರ್ಯನ ಕಿರಣಗಳಲ್ಲಿರುವ ಬಿಸಿಯನ್ನು ಕಪ್ಪು ಬಣ್ಣ ಗರಿಷ್ಠ ಮಟ್ಟದಲ್ಲಿ ಮತ್ತು ಬಿಳಿಬಣ್ಣ ಕನಿಷ್ಠ ಮಟ್ಟದಲ್ಲಿ ಹೀರುತ್ತವೆ. ಅಂದರೆ ವಿಮಾನದ ಹೊರಬಣ್ಣ ಬಿಳಿ ಇದ್ದಷ್ಟೂ ಸೂರ್ಯನ ಕಿರಣಗಳಿಗೆ ಕನಿಷ್ಠ ಬಿಸಿಯಾಗುತ್ತದೆ. ಈ ಬಿಸಿಯನ್ನು ತಂಪುಗೊಳಿಸಲು ಹೆಚ್ಚಿನ ಇಂಧನ ಬೇಕಾಗುತ್ತದೆ. ಅಂದರೆ ಪರೋಕ್ಷವಾಗಿ ನಿರ್ವಹಣಾ ವೆಚ್ಚ ಹೆಚ್ಚುತ್ತದೆ.

ಹೆಚ್ಚು ಸ್ಪಷ್ಟವಾಗಿ ಕಾಣುತ್ತದೆ

ಹೆಚ್ಚು ಸ್ಪಷ್ಟವಾಗಿ ಕಾಣುತ್ತದೆ

ಬಣ್ಣಗಳಲ್ಲೊಂದು ವಿಶೇಷತೆಯಿದೆ. ಬೆಳಕಿನ ಮೂಲದಿಂದ ಹೊರಟ ಬೆಳಕು ಕೆಂಪು ಬಣ್ಣಕ್ಕಿದ್ದರೆ ಅದು ಅತಿ ಹೆಚ್ಚು ದೂರ ಕಾಣಿಸುತ್ತದೆ. (ಇದೇ ಕಾರಣಕ್ಕೆ ನಿಲ್ಲಿಸುವ ಸಂಕೇತದ ದೀಪದ ಬಣ್ಣ ಕೆಂಪು) ಆದರೆ ಪ್ರತಿಫಲನಗೊಂಡಾಗ ಅತಿ ದೂರಕ್ಕೆ ಕಾಣುವ ಬಣ್ಣವೆಂದರೆ ಬಿಳಿ. ಅಂದರೆ ಹೊರಗಿನ ಬೆಳಕಿನಲ್ಲಿ ಬಿಳಿಬಣ್ಣವೇ ಇತರ ಎಲ್ಲಾ ಬಣ್ಣಕ್ಕಿಂತ ಸ್ಪಷ್ಟವಾಗಿ ಗೋಚರಿಸುತ್ತದೆ. ಅಷ್ಟೇ ಅಲ್ಲ, ಈ ಬಣ್ಣದಲ್ಲಿ ಆದ ಬಿರುಕು, ಪಕಳೆ, ಪದರಗಳೂ ಇತರ ಬಣ್ಣಗಳಿಗಿಂತ ಸ್ಪಷ್ಟವಾಗಿ ಕಾಣಿಸುತ್ತವೆ. ಇದು ಶೀಘ್ರವಾಗಿ ದುರಸ್ತಿ ನಡೆಸಲು ನೆರವಾಗುತ್ತವೆ.

ಮಾರಾಟ ಮಾಡುವುದೂ ಸುಲಭ

ಮಾರಾಟ ಮಾಡುವುದೂ ಸುಲಭ

ಕಾರುಗಳಂತೆಯೇ ವಿಮಾನವನ್ನು ಸೆಕೆಂಡ್ ಹ್ಯಾಂಡ್ ಕೊಳ್ಳುವವರೂ ಹೊರಾಂಗಣವನ್ನು ಗಮನಿಸುತ್ತಾರೆ. ಮಾರುವವರು ವಿಮಾನದ ಹೊರಬಣ್ಣವನ್ನು ಬಿಳಿಬಣ್ಣದಿಂದ ಒಂದು ಪದರ ಪೇಂಟ್ ಹೊಡೆಸಿದರಾಯ್ತು. ಅಗ್ಗದ ಖರ್ಚಿನಲ್ಲಿ ವಿಮಾನ ಮಾರಾಟಕ್ಕೆ ತಯಾರಾಗುತ್ತದೆ.

ಕಡಿಮೆ ಲೀಸ್ ನಿಯಮಗಳು

ಕಡಿಮೆ ಲೀಸ್ ನಿಯಮಗಳು

ಸಾಮಾನ್ಯವಾಗಿ ವಿಮಾನಯಾನ ನಡೆಸುವ ಸಂಸ್ಥೆಗಳು ತಮ್ಮ ಸ್ವಂತ ವಿಮಾನಗಳನ್ನು ಹೊಂದಿರುವುದೇ ಇಲ್ಲ. ವಿಶೇಷವಾಗಿ ಬಜೆಟ್ ಏರ್ ಲೈನುಗಳು. ಇವು ಬಾಡಿಗೆಯ ಆಧಾರದ ಮೇಲೆ ವಿಮಾನಗಳನ್ನು ಪಡೆದು ಯಾನಗಳನ್ನು ನಡೆಸುತ್ತವೆ. ಆದ್ದರಿಂದ ಬಾಡಿಗೆಗೆ ವಿಮಾನ ಪಡೆಯುವಾಗ ಅಪ್ಪಟ ಬಿಳಿ ಬಣ್ಣದ ವಿಮಾನವೊಂದನ್ನು ಪಡೆದು ಅದರ ಮೇಲೆ ತಮ್ಮ ಸಂಸ್ಥೆಯ ಲಾಂಛನವನ್ನು ಮುದ್ರಿಸಿದರೆ ಸಾಕು. ವಿಮಾನ ಸೇವೆಗೆ ಸಿದ್ಧ. ಅದೂ ಅಗ್ಗದಲ್ಲಿ.

English summary

Ever Wondered Why Airplanes Are White In Colour?

There are few practical reasons to explain you this undiscovered and interesting fact. This is something that would totally amaze you as why the aeroplanes are white in colour. Find out about the reasons as to why airplanes are mostly white in colour...
Story first published: Monday, October 3, 2016, 19:21 [IST]
X
Desktop Bottom Promotion