For Quick Alerts
ALLOW NOTIFICATIONS  
For Daily Alerts

ಮನೆಯ ವಾಸ್ತು ಹೀಗಿದ್ದರೆ-ಮನೆಯಲ್ಲಿ 'ಲಕ್ಷ್ಮಿ' ಸದಾ ನೆಲೆಸುವಳು....

By Manu
|

ಹಣ ಯಾರಿಗೆ ಬೇಡ? ಅದರಲ್ಲೂ ಹೆಚ್ಚಿನ ಹಣ ಎಲ್ಲರಿಗೂ ಬೇಕು. ಜೀವನಕ್ಕೆ ಸೌಲಭ್ಯಗಳು ಅಗತ್ಯ. ಈ ಸೌಲಭ್ಯಗಳನ್ನು ಪಡೆಯಲು ಹಣವನ್ನು ಖರ್ಚು ಮಾಡಲೇಬೇಕು. ಹಣ ಹೆಚ್ಚಿದ್ದಷ್ಟೂ ಸೌಲಭ್ಯಗಳು ಹೆಚ್ಚುತ್ತವೆ ಹಾಗೂ ಉತ್ತಮ ಆಹಾರ ಮತ್ತು ಸವಲತ್ತುಗಳು ಐಷಾರಾಮಗಳೂ ಲಭ್ಯವಾಗುತ್ತವೆ. ಇಂದಿನ ದಿನಗಳಲ್ಲಿ ಹಣವಿದ್ದವರಿಗೇ ಹೆಚ್ಚಿನ ಮಾನ್ಯತೆ ದೊರಕುತ್ತಿರುವುದು ನಗ್ನಸತ್ಯ. ಆದರೆ ಹಣವನ್ನು ಕೇವಲ ಕತ್ತೆಯಂತೆ ದುಡಿಯುವುದರಿಂದ ಸಂಪಾದಿಸಲು ಸಾಧ್ಯವಿಲ್ಲ. ವಾಸ್ತು ಪ್ರಕಾರ ಮನೆಯಲ್ಲಿ ಇಂತಹ ವಸ್ತುಗಳು ಇರಲೇಬಾರದು!

ಒಂದು ವೇಳೆ ಸಾಕಷ್ಟು ಹಣವನ್ನು ಸಂಪಾದಿಸಿದರೂ ಇದರ ಸದ್ಬಳಕೆ ಅಗತ್ಯ. ಆದರೆ ಹೆಚ್ಚಿನವರಿಗೆ ಅವರ ಖರ್ಚುಗಳು ಕೈಗೆ ಎಟುಕದೇ ಸಂಪಾದಿಸಿದ್ದಷ್ಟೂ ಖರ್ಚಾಗಿ ತಿಂಗಳ ಕಡೆಗೆ ಖಾಲಿ ಕೈ ಇರುವ ಸಂಭವ ಎದುರಾಗುತ್ತದೆ. ವಾಸ್ತು ಶಾಸ್ತ್ರ: ನೀವು ತಿಳಿಯಬೇಕಾದ ದಿಕ್ಕಿನ ಪ್ರಾಮುಖ್ಯತೆ

ಹೆಚ್ಚಿನ ಸಂದರ್ಭಗಳಲ್ಲಿ ನಮ್ಮ ಮನೆಯ ವಾಸ್ತು ಸರಿಯಾಗಿರದೇ ಇದ್ದರೆ ಅನಾವಶ್ಯಕ ಖರ್ಚುಗಳು ಸದಾ ಒಂದರ ಮೇಲೊಂದು ಎದುರಾಗುತ್ತಾ ಗಳಿಕೆಯನ್ನೆಲ್ಲಾ ಕಬಳಿಸಿಬಿಡುತ್ತವೆ. ಆದರೆ ಮನೆಯ ವಸ್ತುಗಳನ್ನು ಇರಿಸುವ ಸ್ಥಳಗಳನ್ನು ಕೊಂಚ ಬದಲಿಸುವ ಮೂಲಕ ಮನೆಯ ವಾಸ್ತುವನ್ನು ಬದಲಿಸಿ ನಿಮ್ಮ ಗಳಿಕೆಯ ಬಹಳಷ್ಟು ಮನೆಯಲ್ಲಿಯೇ ಉಳಿಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದ್ದು ನಿಮ್ಮ ಮನೆಯಲ್ಲಿಯೂ ಹಣ ಮತ್ತು ಸಮೃದ್ಧಿ ನೆಲೆಸಲು ಸಾಧ್ಯವಾಗುತ್ತದೆ.

ಹನುಮಂತನ ವಿಗ್ರಹ

ಹನುಮಂತನ ವಿಗ್ರಹ

ಮನೆಯ ನೈಋತ್ಯ ದಿಕ್ಕಿನಲ್ಲಿ ಪಂಚರೂಪಿ ಹನುಮಂತನ ವಿಗ್ರಹವನ್ನು ಇರಿಸಿ ನಿತ್ಯವೂ ಪೂಜಿಸಿ. ಈ ವಿಗ್ರಹ ನಿಮ್ಮ ಮನೆಗೆ ಆಗಮಿಸುವ ಧನಾತ್ಮಕ ಶಕ್ತಿಗಳನ್ನು ಹೆಚ್ಚಿಸುತ್ತದೆ. ಅಲ್ಲದೇ ನಿಮ್ಮ ಮನೆಗೆ ಹಣ ಬರಲು ಇರುವ ಅಡ್ಡಿಗಳನ್ನು ನಿವಾರಿಸಿ ದಾರಿಯನ್ನು ಸುಗಮವಾಗಿಸುತ್ತದೆ.

ಲಕ್ಷ್ಮಿ ಕುಬೇರರ ಪಟ

ಲಕ್ಷ್ಮಿ ಕುಬೇರರ ಪಟ

ನಿಮ್ಮ ಮನೆಯ ಪ್ರಧಾನ ಬಾಗಿಲಿಗೆ ಎದುರಾಗುವಂತೆ ಗೋಡೆಯಲ್ಲಿ ಲಕ್ಷ್ಮಿ-ಕುಬೇರರ ಚಿತ್ರಪಟವನ್ನು ನೇತುಹಾಕಿ. ಇದು ಸಿಗದಿದ್ದರೆ ಬರೆಯ ಕುಬೇರನ ಪಟ, ಇದೂ ಸಿಗದಿದ್ದರೆ ಸ್ವಸ್ತಿಕ್ ಚಿಹ್ನೆ ಇರುವ ಪಟವನ್ನು ನೇತುಹಾಕಿ. ಇದರಿಂದ ನಿಮ್ಮ ಮನೆಗೆ ಬಂದಿದ್ದ ಹಣ ಹೊರಹೋಗದಿರುವಂತೆ ನೋಡಿಕೊಳ್ಳಬಹುದು.

ವಾಸ್ತುದೇವರ ಪಟ

ವಾಸ್ತುದೇವರ ಪಟ

ವಾಸ್ತುದೇವರ ಪಟ ಅಥವಾ ವಿಗ್ರಹವೊಂದನ್ನು ನಿಮ್ಮ ಮನೆಯ ಯಾವುದಾದರೊಂದು ಭಾಗದಲ್ಲಿ ಇರಿಸುವ ಮೂಲಕ ವಾಸ್ತುದೋಷಗಳನ್ನು ನಿವಾರಿಸಬಹುದು. ಅಲ್ಲದೇ ಮನೆಯೊಳಗಣ ಪರಿಸರದಲ್ಲಿ ಪಾವಿತ್ರ್ಯತೆ ಹಾಗೂ ಸುಖದ ವಾತಾವರಣವನ್ನು ಉಂಟುಮಾಡುತ್ತದೆ.

ಕುಬೇರ ಮತ್ತು ಇತರ ದೇವರು ಜೊತೆಯಲ್ಲಿರುವ ಪಟ ನೇತುಹಾಕಿ

ಕುಬೇರ ಮತ್ತು ಇತರ ದೇವರು ಜೊತೆಯಲ್ಲಿರುವ ಪಟ ನೇತುಹಾಕಿ

ಈ ಪಟವನ್ನು ನೇತುಹಾಕುವ ಮೂಲಕ ನಿಮ್ಮ ಮನೆಯಲ್ಲಿ ಧನ ಸಂಗ್ರಹ ಎಂದಿಗೂ ಕಡಿಮೆಯಾಗದಂತೆ ನೋಡಿಕೊಳ್ಳಬಹುದು. ನಿಮ್ಮ ಮನೆಯಲ್ಲಿರುವ ಹಣ ಅಗತ್ಯಕ್ಕೂ ಹೆಚ್ಚು ಖರ್ಚಾಗಲು ಎದುರಾಗುವ ಕಾರಣಗಳನ್ನು ಇದು ತಡೆಯುತ್ತದೆ.

ಮಣ್ಣಿನ ಮಡಕೆ ಅಥವಾ ಸುರಾಹಿ

ಮಣ್ಣಿನ ಮಡಕೆ ಅಥವಾ ಸುರಾಹಿ

ಅಪ್ಪಟ ಮಣ್ಣಿನಿಂದ ಮಾಡಿದ ಮಡಕೆ ಅಥವಾ ನೀಳವಾದ ಸುರಾಹಿಯೊಂದನ್ನು ಮನೆಯಲ್ಲಿರಿಸಿ ಇದರಲ್ಲಿ ಸದಾ ನೀರು ತುಂಬಿರುವಂತೆ ನೋಡಿಕೊಳ್ಳಿ. ಆಗಾಗ ನೀರನ್ನು ಖಾಲಿಮಾಡಿ ತಕ್ಷಣ ಬರ್ತಿಮಾಡಿ ಸದಾ ಚಿಕ್ಕ ಮುಚ್ಚಳದಿಂದ ಮುಚ್ಚಿಡಿ.

ಪಿರಮಿಡ್

ಪಿರಮಿಡ್

ಒಂದು ವೇಳೆ ಮನೆಯಲ್ಲಿ ಬೆಳ್ಳಿಯ, ಕಂಚಿನ ಅಥವಾ ತಾಮ್ರದ ಪಿರಮಿಡ್ ಒಂದನ್ನು ಮನೆಯವರೆಲ್ಲಾ ಹೆಚ್ಚು ಕಾಲ ಕಳೆಯುವ ಕೋಣೆಯಲ್ಲಿ ಇರಿಸಿದರೆ ಮನೆಯ ಎಲ್ಲಾ ಸದಸ್ಯರ ಆದಾಯ ಹೆಚ್ಚುತ್ತದೆ.

ಪೊರಕೆ

ಪೊರಕೆ

ನಿಮ್ಮ ಮನೆಯ ಸ್ವಚ್ಛತೆಗೆ ಬಳಸುವ ಪೊರಕೆ, ಪಾದರಕ್ಷೆ ಮೊದಲಾದವುಗಳನ್ನು ಮೆಟ್ಟಿಲ ಕೆಳಗೆ ಸಂಗ್ರಹಿಸಬೇಡಿ.

ಪೊರಕೆ

ಪೊರಕೆ

ಮೆಟ್ಟಿಲ ಕೆಳಗೆ ಯಾವುದೇ ವಸ್ತುಗಳನ್ನು ಚಲನೆಗೆ ಅಡ್ಡಿಯಾಗುವಂತಿಡುವುದು ವಾಸ್ತುವಿಗೆ ವಿರುದ್ದವಾಗಿದ್ದು ಮನೆಯಲ್ಲಿ ದಾರಿದ್ರ್ಯ ಆವರಿಸಲು ಕಾರಣವಾಗುತ್ತದೆ.

ಗ್ಯಾಸ್ ಒಲೆ

ಗ್ಯಾಸ್ ಒಲೆ

ಗ್ಯಾಸ್ ಒಲೆಯನ್ನು ಮನೆಯ ಉತ್ತರ ಭಾಗದಲ್ಲಿ ಇಡಕೂಡದು. ಇದರಿಂದ ಮನೆಗೆ ಆಗಮಿಸುವ ಧನ ಮತ್ತು ಧನಾತ್ಮಕ ಶಕ್ತಿಯನ್ನು ಬೆಂಕಿ ದಹಿಸಿ ಬಿಡುತ್ತದೆ.

ಲಕ್ಷ್ಮಿ ದೇವಿಯ ಪಟ

ಲಕ್ಷ್ಮಿ ದೇವಿಯ ಪಟ

ಅಂತಿಮವಾಗಿ ಮನೆಯಲ್ಲಿ ಧನ ಮತ್ತು ಸಂಪತ್ತು ನೆಲೆಸಿರಲು ಲಕ್ಷ್ಮೀದೇವಿಯ ಪಟವೊಂದನ್ನು ನಿಮ್ಮ ಮನೆಯ ಪೂಜಾಗೃಹದಲ್ಲಿ ಸದಾ ಇರುವಂತೆ ನೋಡಿಕೊಳ್ಳಿ ಹಾಗೂ ನಿತ್ಯದ ಪೂಜೆಯಲ್ಲಿ ಲಕ್ಷ್ಮಿ ದೇವಿಗೂ ಪೂಜೆ ಸಲ್ಲಿಸಿ. ಇದರಿಂದ ಮನೆಯಲ್ಲಿ ಸಮೃದ್ಧತೆ ತುಂಬಿ ಸದಸ್ಯರಲ್ಲಿ ಸಾಮರಸ್ಯ ಹಾಗೂ ಪ್ರೀತಿ ತುಂಬಿ ತುಂಬಿರುತ್ತದೆ.

English summary

Dont forget to keep things in your house and never run out of money!

Everyone desires to have lots of money --- money is probably the most important thing that is needed for survival, along with food. However, can you get rich just by hard work?Here is a list of things you should keep in your house to attract good vastu and increase the inflow of money in your house.
X
Desktop Bottom Promotion