For Quick Alerts
ALLOW NOTIFICATIONS  
For Daily Alerts

ಶ್!! ಇದು ಮಹಿಳೆಯರ ಗುಟ್ಟಿನ ವಿಷಯ! ಅಚ್ಚರಿಯಾದರೂ ಸತ್ಯ

By Suma
|

ಸಾಮಾನ್ಯವಾಗಿ ಮಹಿಳೆಯರು ಒಳ ಉಡುಪುಗಳ ಕಂಚುಕವನ್ನು ಆಯ್ದುಕೊಳ್ಳುವಾಗ ಸ್ತನಗಳ ಗಾತ್ರವನ್ನು ಅರಿತುಕೊಳ್ಳುವುದು ಅಗತ್ಯ. ಹೊರನೋಟಕ್ಕೆ ಇವು ಚಿಕ್ಕ ಮಧ್ಯಮ ಮತ್ತು ದೊಡ್ಡ ಎಂಬ ಮೂರು ಗಾತ್ರಗಳನ್ನಾಗಿ ವಿಭಾಗಿಸಬಹುದಾದರೂ ವಾಸ್ತವವಾಗಿ ಏಳು ಭಿನ್ನ ಬಗೆಯ ಗಾತ್ರಗಳಿವೆ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯೋಣ: ಯಾವ ಗಾತ್ರದ ಎದೆಗಾತಿಯರು ಪುರುಷರಿಗೆ ಅಚ್ಚುಮೆಚ್ಚು?

ಸಾಮಾನ್ಯವಾಗಿ ಬ್ರಾವನ್ನು ಆಯ್ದುಕೊಳ್ಳಲು ಮಹಿಳೆಯರು ತಮ್ಮ ಸ್ತನಗಳು ಯಾವ ಬಗೆಯದ್ದು ಎಂಬುದನ್ನು ಅರಿತುಕೊಂಡರೆ ಮುಂದಿನ ಕೆಲಸ ಸುಲಭ. ಸ್ತನಗಳ ಬಗ್ಗೆ ನೀವು ತಿಳಿದಿರದ ಕುತೂಹಲಕಾರಿ ಸಂಗತಿಗಳು...

ಏಕೆಂದರೆ ಅಸಮರ್ಪಕ ಕಂಚುಕ ತೊಟ್ಟುಕೊಂಡರೆ ಇದರಿಂದ ಎದೆ ಬಿಗಿಯಾಗಿದ್ದು ಉಸಿರಾಟವೇ ಕಷ್ಟಕರವಾಗುವುದು ಮಾತ್ರವಲ್ಲ, ಆರಾಮದಾಯಕವೂ ಆಗಿರದೇ ಕಂಚುಕ ಧರಿಸಿರದೇ ಇರುವುದೇ ಮೇಲು ಎಂಬ ಅಭಿಪ್ರಾಯಕ್ಕೂ ಬರಲು ಕಾರಣವಾಗುತ್ತದೆ. ಬನ್ನಿ, ಈ ಆಯ್ಕೆಯನ್ನು ಹೇಗೆ ಸುಲಭ ಮತ್ತು ನಿಖರವಾಗಿಸಿಕೊಳ್ಳಬಹುದು ಎಂಬುದನ್ನು ನೋಡೋಣ.....


ಕಿರಿಯ, ದಕ್ಷಿಣಾಭಿಮುಖಿ (Slender)

ಕಿರಿಯ, ದಕ್ಷಿಣಾಭಿಮುಖಿ (Slender)

ಈ ಸ್ತನಗಳು ಹೆಚ್ಚು ತುಂಬಿಕೊಳ್ಳದೇ ತೊಟ್ಟುಗಳು ದಕ್ಷಿಣಾಭಿಮುಖವಾಗಿರುತ್ತವೆ. ಈ ವಿಧದ ಸ್ತನಗಳ ಒಡತಿಯರು ಕೆಳಭಾಗವನ್ನು ಮೇಲೆತ್ತಿ ಹಿಡಿಯುವ ಕಿರಿಯ ಗಾತ್ರದ ಬ್ರಾಗಳನ್ನು ಧರಿಸುವ ಮೂಲಕ ಮೇಲ್ಭಾಗವನ್ನು ಕೊಂಚವೇ ಉಬ್ಬಿದಂತಾಗಿಸಲು ಸಾಧ್ಯವಾಗುತ್ತದೆ. ಈ ಮೂಲಕ ಸಹಜ ಸೌಂದರ್ಯವನ್ನು ಪಡೆಯಲು ನೆರವಾಗುತ್ತದೆ.

ಪೂರ್ವ ಪಶ್ಚಿಮಾಭಿಮುಖಿ (East-West)

ಪೂರ್ವ ಪಶ್ಚಿಮಾಭಿಮುಖಿ (East-West)

ಈ ಬಗೆಯ ಸ್ತನಗಳನ್ನು ಹೊಂದಿರುವವರ ತೊಟ್ಟುಗಳು ಒಂದು ಪೂರ್ವದತ್ತ, ಇನ್ನೊಂದು ಪಶ್ಚಿಮದತ್ತ ನೋಡುತ್ತಿರುವಂತೆ ವಿರುದ್ಧ ದಿಕ್ಕುಗಳತ್ತ ಬಾಗಿರುತ್ತವೆ.

ಪೂರ್ವ ಪಶ್ಚಿಮಾಭಿಮುಖಿ (East-West)

ಪೂರ್ವ ಪಶ್ಚಿಮಾಭಿಮುಖಿ (East-West)

ಇಲ್ಲಿ ಸ್ತನಗಳ ಆಕಾರಕ್ಕಿಂದಲೂ ತೊಟ್ಟುಗಳ ದಿಕ್ಕುಗಳೇ ಪ್ರಧಾನವಾಗಿವೆ. ಈ ಬಗೆಯ ಸ್ತನಗಳನ್ನು ಹೊಂದಿರುವ ಮಹಿಳೆಯರು ಕಂಚುಕಗಳ ನಡುವೆ ಇರುವ ಪಟ್ಟಿ ಚಿಕ್ಕದಿರುವುದನ್ನೇ ಆರಿಸಿಕೊಳ್ಳಬೇಕು.

ನಿರಾಳ (Relaxed)

ನಿರಾಳ (Relaxed)

ಈ ಬಗೆಯ ಸ್ತನಗಳು ಅತಿ ಹೆಚ್ಚೂ ಅಲ್ಲ, ಅತಿ ಕಡಿಮೆಯೂ ಅಲ್ಲ ಎನ್ನುವಷ್ಟಿದ್ದು ತೊಟ್ಟುಗಳು ದಕ್ಷಿಣದತ್ತ ವಾಲಿರುತ್ತವೆ. ಈ ಬಗೆಯ ಸ್ತನಗಳ ಒಡತಿಯರು ಕೊಂಚ ಮೇಲೆ ಏರಿಸುವ ಬ್ರಾಗಳನ್ನು ಆಯ್ದುಕೊಳ್ಳಬೇಕು.

ಕ್ರೀಡಾಪಟು (Athletic)

ಕ್ರೀಡಾಪಟು (Athletic)

ಈ ಬಗೆಯ ಸ್ತನಗಳು ಹೆಚ್ಚೂ ಕಡಿಮೆ ಚಪ್ಪಟೆಯಾಗಿದ್ದು ದೃಢವಾದ ಸ್ನಾಯುಗಳನ್ನು ಹೊಂದಿರುವಂತೆ ಕಾಣುತ್ತದೆ. ತೊಟ್ಟುಗಳು ನಡುವೆ ಇದ್ದು ಒಳಗಿನಿಂದ ಚುಚ್ಚಿ ಹೊರಬಂದಂತೆ ತೋರುತ್ತದೆ. ಕ್ರೀಡಾಪಟುಗಳು ಮತ್ತು ಭಾರ ಎತ್ತುವ ಪಟುಗಳು ಸ್ತನಗಳ ಮೃದು ಅಂಗಾಂಶವನ್ನು ಕಳೆದುಕೊಂಡು ದೃಢ ಸ್ನಾಯುಗಳನ್ನು ಪಡೆಯುವ ಮೂಲಕ ಈ ಬಗೆಯ ಸ್ತನಗಳು ಬೆಳೆಯುತ್ತವೆ. ಈ ಮಹಿಳೆಯರು ಚಿಕ್ಕ ಕಪ್ ಇರುವ ಕಂಚುಕಗಳನ್ನೇ ಧರಿಸಬೇಕು.

ವೃತ್ತಾಕಾರ (Round)

ವೃತ್ತಾಕಾರ (Round)

ಹೆಚ್ಚಿನ ಪುರುಷರು ಬಯಸುವ ಈ ಸ್ತನಗಳು ಹೆಸರೇ ಸೂಚಿಸುವಂತೆ ವೃತ್ತಾಕಾರದಲ್ಲಿದ್ದು ತೊಟ್ಟುಗಳು ಒಳಗಿನಿಂದ ತೂರಿ ಹೊರಬಂದಂತೆ ಕಾಣುತ್ತದೆ. ಈ ಸ್ತನಗಳ ಒಡತಿಯರು ನಡುವಿನ ಪಟ್ಟಿ ಉದ್ದವಾಗಿರುವ ಕಂಚುಕಗಳನ್ನು ಧರಿಸುವ ಮೂಲಕ ಸಹಜ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.

ಒಂದು ಚಿಕ್ಕ ಒಂದು ದೊಡ್ಡ (Asymmetrical)

ಒಂದು ಚಿಕ್ಕ ಒಂದು ದೊಡ್ಡ (Asymmetrical)

ಹೆಚ್ಚಿನ ಮಹಿಳೆಯರಲ್ಲಿ ಎರಡೂ ಸ್ತನಗಳ ಗಾತ್ರ ಒಂದೇ ಬಗೆಯದ್ದಾಗಿರುವುದಿಲ್ಲ. ಬದಲಿಗೆ ಕೊಂಚ ವ್ಯತ್ಯಾಸ ಕಂಡುಬರುತ್ತದೆ. ಈ ವ್ಯತ್ಯಾಸವನ್ನು ಸರಿಪಡಿಸಲು ಚಿಕ್ಕ ಸ್ತನದ ಕೆಳಗೆ ಚಿಕ್ಕ ಪ್ಯಾಡ್ ಇರಿಸಿ ಸೂಕ್ತ ಬ್ರಾ ಧರಿಸುವ ಮೂಲಕ ಸೌಂದರ್ಯವನ್ನು ವೃದ್ಧಿಸಿಕೊಳ್ಳಬಹುದು.

ಘಂಟೆಯಾಕಾರ (Bell-Shaped)

ಘಂಟೆಯಾಕಾರ (Bell-Shaped)

ಈ ಬಗೆಯ ಸ್ತನಗಳ ಒಳಭಾಗದಲ್ಲಿ ಹೆಚ್ಚಿನ ಕೊಬ್ಬು ತುಂಬಿಕೊಂಡಿದ್ದು ಬುಡವನ್ನು ತಮ್ಮ ಭಾರದ ಕಾರಣ ಜಗ್ಗುವ ಕಾರಣ ಘಂಟೆಯ ರೂಪ ಪಡೆದಿರುತ್ತವೆ.

ಘಂಟೆಯಾಕಾರ (Bell-Shaped)

ಘಂಟೆಯಾಕಾರ (Bell-Shaped)

ಇವರು ಬ್ರಾ ಧರಿಸದೇ ಹೊರಹೋಗಲು ಸಾಧ್ಯವೇ ಇಲ್ಲವೆನ್ನುವಷ್ಟು ಮಟ್ಟಿಗೆ ಮೊಲೆತೊಟ್ಟುಗಳು ಜೋಲುಬೀಳುತ್ತವೆ. ಇವುಗಳನ್ನು ಮೇಲೆತ್ತುವ ಸೂಕ್ತ ಗಾತ್ರದ ಬ್ರಾ ಧರಿಸುವ ಮೂಲಕ ಸೌಂದರ್ಯವನ್ನು ಹೆಚ್ಚಿಸಬಹುದು.

English summary

Do You Know There Are 7 Types Of Breasts?

Do you know that there are more ways to describe breasts than just big, small or sagging? Well, there are different types of breasts! If you're wondering, how many different types of breasts are there, the answer is 7! Here, in this article, we are about to share the pointers on different types of breasts women have.
Story first published: Monday, November 28, 2016, 19:48 [IST]
X
Desktop Bottom Promotion