ನಿಮಗೆ ತಿಳಿಯದೆ ಇರುವ ಬರೋಬ್ಬರಿ 10 ನಿಜಾಂಶಗಳು!

By: Deepu
Subscribe to Boldsky

ನಾವು ಬದುಕುತ್ತಿರುವ ಸಮಾಜ ಹಾಗೂ ವಿಶ್ವದಲ್ಲಿ ಹಲವಾರು ವಿಷಯ ಹಾಗೂ ವಸ್ತುಗಳನ್ನು ಹಿಂದಿನಿಂದಲೂ ಒಪ್ಪಿಕೊಂಡು ಅಥವಾ ಅದರ ಬಗ್ಗೆ ಗೊತ್ತಿರುವುದನ್ನು ತಿಳಿದುಕೊಂಡಿರುತ್ತೇವೆ. ಆದರೆ ನಿಜಾಂಶ ಮಾತ್ರ ಬೇರೆಯೇ ಆಗಿರುತ್ತದೆ. ಇಂತಹ ಹಲವಾರು ವಿಷಯಗಳು ನಮಗೆ ತಿಳಿದೆ ಇರುವುದಿಲ್ಲ. ಈ ಲೇಖನದಲ್ಲಿ ನಿಮಗೆ ತಿಳಿಯದೆ ಇರುವ ಕೆಲವೊಂದು ಅದ್ಭುತ ಸತ್ಯಾಂಶಗಳ ಬಗ್ಗೆ ತಿಳಿಸಿಕೊಡುವ ಪ್ರಯತ್ನ ಮಾಡಲಾಗಿದೆ. ಅಚ್ಚರಿ, ಕುತೂಹಲ ಕೆರಳಿಸುವ ಮನೋವೈಜ್ಞಾನಿಕ ಸಂಗತಿಗಳು

ಇದು ವೈಜ್ಞಾನಿಕವಾಗಿ ಕೂಡ ನಿಜವಾಗಿರುವಂತದ್ದಾಗಿದೆ. ಈ ಕಾರಣದಿಂದಾಗಿ ಲೇಖನವು ಮತ್ತಷ್ಟು ಆಸಕ್ತಿಯನ್ನು ಉಂಟು ಮಾಡಿದೆ. ತಿಳಿಯದೆ ಇರುವ ವಿಷಯಗಳನ್ನು ಕಲಿಯುವುದು ತುಂಬಾ ಆಸಕ್ತಿದಾಯಕವಾಗಿರುತ್ತದೆ. ನಿಮಗೆ ತಿಳಿಯದೆ ಇರುವ ಹತ್ತು ನಿಜಾಂಶಗಳ ಬಗ್ಗೆ ತಿಳಿಯಿರಿ ಮತ್ತು ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ. ಹಾಗಾದರೆ ಓದಲು ತಯಾರಾಗಿ...    

ವಾಸ್ತವ #2

ಅತಿಯಾಗಿ ಟಿವಿ ನೋಡುವ ಮತ್ತು ಲ್ಯಾಪ್‌ಟಾಪ್ ಮುಂದೆ ಕೆಲಸ ಮಾಡುವಂತಹ ವ್ಯಕ್ತಿಗಳು ಯಾವಾಗಲೂ ಬಳಲಿದ ಸಮಸ್ಯೆಯನ್ನು ಎದುರಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಸಣ್ಣವಯಸ್ಸಿನವರು ಈ ಸಮಸ್ಯೆ ಎದುರಿಸುತ್ತಿದ್ದಾರೆ....  ನಿರ೦ತರ ಲ್ಯಾಪ್‌ಟಾಪ್‌ ಬಳಕೆದಾರರಿಗೆ ಕಾದಿದೆ ಅಪಾಯ!

ವಾಸ್ತವ#3

ಹೆಚ್ಚಾಗಿ ಮನುಷ್ಯರು ಬೆಳಗಿನ ಜಾವ 3ರಿಂದ 4ರ ಮಧ್ಯೆ ಸಾವನ್ನಪ್ಪುತ್ತಾರೆ. ಯಾಕೆಂದರೆ ಈ ಸಮಯದಲ್ಲಿ ಮನುಷ್ಯನ ದೇಹವು ತುಂಬಾ ದುರ್ಬಲವಾಗಿರುತ್ತದೆ. ಇದರಿಂದಾಗಿ ಹೃದಯಾಘಾತ ಮತ್ತು ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಈ ಸಂದರ್ಭದಲ್ಲಿ ಕಾಣಿಸಿಕೊಳ್ಳುತ್ತದೆ.

ವಾಸ್ತವ #1

ಮನೋವೈಜ್ಞಾನಿಕ ಸಂಶೋಧನೆಯ ಪ್ರಕಾರ ಏಕಾಂಗಿಯಾಗಿರುವಾಗ ಮದುವೆಯಾಗಿ ಸಂಗಾತಿಯೊಂದಿಗೆ ಸಂತೋಷದಿಂದ ಇರಬೇಕೆಂದು ಬಯಸುತ್ತಾರೆ. ಅದೇ ಮದುವೆಯಾದ ಬಳಿಕ ಏಕಾಂಗಿಯಾಗಿಯೇ ಸಂತೋಷವಾಗಿದ್ದೆ ಎಂದನಿಸುತ್ತದೆ. ಇದು ತುಂಬಾ ವಿಚಿತ್ರವಲ್ಲವೇ?

ವಾಸ್ತವ #5

ನಿದ್ರೆಯಲ್ಲಿ ಕೆಲವೊಮ್ಮೆ ಉಂಟಾಗುವ ಹಠಾತ್ ಸೆಳೆತವನ್ನು `ಹೈಪನಿಕ್ ಜರ್ಕ್' ಎಂದು ಕರೆಯಲಾಗುತ್ತದೆ. ಅರ್ಧ ನಿದ್ರೆಯಲ್ಲಿ ಕನಸಿಗೆ ಜಾರಿದಾಗ ಹೀಗೆ ಆಗುತ್ತದೆ.

ವಾಸ್ತವ #4

ತಡರಾತ್ರಿ ಮಾಡುವಂತಹ ಮೆಸೇಜ್‌ಗಳಲ್ಲಿ ಹೆಚ್ಚಿನವರು ಭಾವನಾತ್ಮಕವಾಗಿ ತಪ್ಪೊಪ್ಪಿಕೊಳ್ಳುತ್ತಾರೆ. ಆದರೆ ಕರೆಗಳಿಗೆ ಸಂಬಂಧಿಸಿ ಇದು ಅನ್ವಯವಾಗಲ್ಲ.

ವಾಸ್ತವ #6

ಗಾಯನವಿಲ್ಲದೆ ಕೇವಲ ಸಂಗೀತವನ್ನು ಕೇಳುವುದರಿಂದ ಓದುವಾಗ, ಬರೆಯುವಾಗ ಮತ್ತು ಕಲಿಯುವಾಗ ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ ಎಂದು ನಿಮಗೆ ತಿಳಿದಿದೆಯಾ?

ವಾಸ್ತವ #7

ಮಹಿಳೆಯನ್ನು ಪ್ರೀತಿಸಲು ಪುರುಷರಿಗೆ ಕೇವಲ ಮೂರು ದಿನ ಮಾತ್ರ ಸಾಕು. ಅದೇ ಮಹಿಳೆಯರಿಗೆ ಪುರುಷರನ್ನು ಪ್ರೀತಿಸಲು 14 ಸಲ ಡೇಟಿಂಗ್‌ಗೆ ಹೋಗಬೇಕಾಗುತ್ತದೆ.

ವಾಸ್ತವ #8

ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಹಾಗೂ ನಿಮ್ಮ ದೈನಂದಿನ ಚಟುವಟಿಕೆಗಳ ಬಗ್ಗೆ ಬರೆಯುವುದರಿಂದ ಮೆದುಳಿನ ಪ್ರತಿಫಲ ವ್ಯವಸ್ಥೆಯು ಕ್ರಿಯಾಶೀಲವಾಗುತ್ತದೆ. ಡ್ರಗ್ಸ್ ಸೇವಿಸಿದ ವೇಳೆ ನಿಮಗೆ ಒಂದು ಕಿಕ್ ಕೊಟ್ಟಂತೆ ಇರುತ್ತದೆ.

ವಾಸ್ತವ #9

ಕೆಟ್ಟ ಕೈಬರಹ ತುಂಬಾ ಕೆಟ್ಟ ವ್ಯಕ್ತಿಗಳದ್ದದೆಂದು ಯಾರು ಹೇಳಿರುವುದು? ಅತಿ ಜಾಣ್ಮೆಯನ್ನು ಹೊಂದಿರುವ ವ್ಯಕ್ತಿಯು ಕೆಟ್ಟದಾದ ಕೈಬರಹವನ್ನು ಹೊಂದಿರುತ್ತಾನೆ.  ವ್ಯಕ್ತಿಯ 'ಹಸ್ತಾಕ್ಷರ' ಕೂಡ ಆತನ ವ್ಯಕ್ತಿತ್ವವನ್ನು ಬಿಚ್ಚಿಡುತ್ತದೆ!

ವಾಸ್ತವ #10

ಆನ್ ಲೈನ್ ನಲ್ಲಿ ವೀಡಿಯೋ ಗೇಮ್ ಆಡುವ ಮಹಿಳೆಯು ಇತರ ಮಹಿಳೆಯರಿಗಿಂತ ತುಂಬಾ ಸಂತೋಷವಾಗಿರುತ್ತಾಳೆ ಎಂದು ಮನಶಾಸ್ತ್ರದ ಅಧ್ಯಯನಗಳು ಹೇಳಿವೆ. ಇಂತಹ ಮಹಿಳೆಯರನ್ನೇ ಪುರುಷರು ಕೂಡ ಇಷ್ಟಪಡುವುದು.

 

Story first published: Friday, October 14, 2016, 10:10 [IST]
English summary

Did You Know Of These Amazing 10 Facts? Read On!

Facts are something that amuse us most of the time. There are so many different facts that most of us are not aware of. We are here to just help you learn these unknown facts. Here, in this article, we are about to share some of the most interesting facts that one needs to know. These are a mixture of all the worldly facts and the scientific facts that make this article an interesting read. After all, learning is interesting and important as well, isn't it?
Please Wait while comments are loading...
Subscribe Newsletter