ಈ ದೇಶಗಳಲ್ಲಿ ಹಣಕ್ಕೆ ಬೆಲೆಯೇ ಇಲ್ಲ! ಎಲ್ಲದಕ್ಕೂ ಆನ್‌ಲೈನ್!!

ವಿಶ್ವದಲ್ಲಿ ಹಲವು ರಾಷ್ಟ್ರಗಳು ಹೆಚ್ಚಿನ ಅಭಿವೃದ್ಧಿ ಸಾಧಿಸಿದ್ದು ಹೆಚ್ಚೂಕಡಿಮೆ ನಗದನ್ನು ಬಳಸುವುದೇ ಇಲ್ಲ. ಬನ್ನಿ, ಈ ಸಾಧನೆಯನ್ನು ಸಾಧಿಸಿರುವ ದೇಶಗಳ ಬಗ್ಗೆ ಅರಿಯೋಣ.....

By: Arshad
Subscribe to Boldsky

ರೂಪಾಯಿ ಅಪಮೌಲ್ಯ ಇಂದು ಪ್ರತಿ ಭಾರತೀಯನನ್ನು ಕಾಡುತ್ತಿರುವ ಸಿಂಹಸ್ವಪ್ನ. ನಗದು ರೂಪಾಯಿಗಳನ್ನೇ ಅವಲಂಬಿಸಿರುವ ಜನಸಾಮಾನ್ಯರ ಪಾಲಿಗೆ ಬರಸಿಡಿಲಿನ ಆಘಾತ. ನಮಗೆ ಐವತ್ತು ದಿನ ಕೊಡಿ ದೇಶದಿಂದ ಖೋಟಾನೋಟು, ಕಪ್ಪು ಹಣ ನಿವಾರಿಸುತ್ತೇನೆ ಎಂದು ನಮ್ಮ ಪ್ರಧಾನಿ ಘೋಷಿಸಿದ ಬಳಿಕ ದೇಶದಾದ್ಯಂತ ನಗದು ಬದಲಿಸುವ ಪ್ರಕ್ರಿಯೆಯಲ್ಲಿ ಜನತೆ ಎಟಿಎಂಗಳ ಮುಂದೆ ಕ್ಯೂ ನಿಲ್ಲುವಂತಾಗಿದ್ದು ಒಂದು ಸಂಚಲನೆಯಾದರೆ ಇದುವರೆಗೆ ಕುಂಟುತ್ತಾ ನಡೆದಿದ್ದ ನಗದುರಹಿತ ವ್ಯವಹಾರ ಒಮ್ಮೆಲೇ ರಾಕೆಟ್ ವೇಗದ ಅಭಿವೃದ್ಧಿ ಕಂಡಿದೆ.  

ಭಾರತದಲ್ಲಿ ಸುಮಾರು ಮುನ್ನೂರು ವರ್ಷಗಳಿಂದ ನೋಟುಗಳೇ ವ್ಯವಹಾರದ ಮಾಧ್ಯಮವಾಗಿ ಬಳಸಲ್ಪಡುತ್ತಾ ಬಂದಿವೆ. ಪ್ರಗತಿಪರ ದೇಶಗಳಲ್ಲಿ ನಗದುರಹಿತ ವ್ಯವಹಾರಕ್ಕೆ ಹೆಚ್ಚಿನ ಮಹತ್ವ ಮತ್ತು ಸವಲತ್ತುಗಳನ್ನು ಒದಗಿಸಿರುವ ಕಾರಣ ಅಲ್ಲಿನ ಜನತೆ ನಗದು ಹಣವನ್ನು ಅವಲಂಬಿಸಿರುವುದು ಕಡಿಮೆ.  ಕಪ್ಪು ಹಣದ ಮೇಲೆ 'ಸರ್ಜಿಕಲ್ ಸ್ಟ್ರೈಕ್'-ಅಂತೂ ಎಲ್ಲರಿಗೂ ಅಚ್ಚರಿ!

ವಿಶ್ವದಲ್ಲಿ ಹಲವು ರಾಷ್ಟ್ರಗಳು ಹೆಚ್ಚಿನ ಅಭಿವೃದ್ಧಿ ಸಾಧಿಸಿದ್ದು ಹೆಚ್ಚೂಕಡಿಮೆ ನಗದನ್ನು ಬಳಸುವುದೇ ಇಲ್ಲ. ಬನ್ನಿ, ಈ ಸಾಧನೆಯನ್ನು ಸಾಧಿಸಿರುವ ದೇಶಗಳ ಬಗ್ಗೆ ಅರಿಯೋಣ...  


ಸ್ವೀಡನ್

ಸ್ವೀಡನ್‌ನಲ್ಲಿ ನಗದು ಮೂಲಕ ನಡೆಯುವ ವ್ಯವಹಾರ ಕೇವಲ ಶೇಖಡಾ ಮೂರು ಮಾತ್ರ. ಇಷ್ಟು ಹೆಚ್ಚು ನಗದುರಹಿತ ವ್ಯವಹಾರವನ್ನು ಹೊಂದಿರುವ ಮೂಲಕ ವಿಶ್ವದ ಅತಿ ಹೆಚ್ಚಿನ ನಗದುರಹಿತ ದೇಶ ಎಂಬ ಖ್ಯಾತಿಯನ್ನು ಸ್ವೀಡನ್ ಪಡೆದಿದೆ. ಈ ದೇಶದಲ್ಲಿ ಅತ್ಯಂತ ಕೆಳಮಟ್ಟದ ವ್ಯವಹಾರದಲ್ಲಿಯೂ ಕಾರ್ಡ್ ರೀಡರ್ ಇಲ್ಲದೇ ಇಲ್ಲ. ಅಷ್ಟೇ ಏಕೆ, ಧಾರ್ಮಿಕ ಸ್ಥಳಗಳಲ್ಲಿ ದಾನವನ್ನೂ ಕಾರ್ಡ್ ಮೂಲಕವೇ ನೀಡಲಾಗುತ್ತದೆ.

ಸೋಮಾಲಿ ಲ್ಯಾಂಡ್

ಆಫ್ರಿಕಾದ ಬಡ ರಾಷ್ಟ್ರಗಳ ಪಟ್ಟಿಯಲ್ಲಿ ಒಂದಾಗಿರುವ ಸೋಮಾಲಿ ಲ್ಯಾಂಡ್ (ಸೋಮಾಲಿಯಾದಿಂದ ಪ್ರತ್ಯೇಕಗೊಂಡು ತನ್ನದೇ ಸಂವಿಧಾನ ಹೊಂದಿರುವ ರಾಷ್ಟ್ರ) ನಲ್ಲಿಯೂ ಅಚ್ಚರಿ ಎಂಬಂತೆ ಎಲ್ಲಾ ವ್ಯವಹಾರಗಳು ನಗದುರಹಿತವಾಗಿ ನಡೆಯುತ್ತವೆ. ಇನ್ನೊಂದು ಅಚ್ಚರಿ ಎಂದರೆ ಇಲ್ಲಿ ವ್ಯವಹಾರ ನಡೆಯುವುದು ಕ್ರೆಡಿಟ್ ಕಾರ್ಡ್ ನಿಂದಲ್ಲ, ಬದಲಿಗೆ ಮೊಬೈಲು ಫೋನುಗಳ ಮುಖಾಂತರ. ರಸ್ತೆಬದಿ ಮಾರುವ ವ್ಯಾಪಾರಿಗಳೂ ಮೊಬೈಲಿನಿಂದ ನೀಡುವ ಹಣವನ್ನು ತಮ್ಮ ಮೊಬೈಲಿಗೆ ಸ್ವೀಕರಿಸುವ ಮೂಲಕ ಈ ದೇಶ ಬಹುತೇಕ ನಗದುರಹಿತ ಎಂಬ ಖ್ಯಾತಿ ಪಡೆದಿದೆ.

ಕೀನ್ಯಾ

ಮೊಬೈಲ್ ಮೂಲಕವೇ ಹೆಚ್ಚಿನ ವ್ಯವಹಾರಗಳನ್ನು ನಡೆಸುವ ಇನ್ನೊಂದು ದೇಶವೆಂದರೆ ಕೀನ್ಯಾ. ಎರಡನೆಯ ಸ್ಥಾನ ಆನ್ಲೈನ್ ಮೂಲಕ ಬ್ಯಾಂಕ್ ಖಾತೆಯಿಂದ ವರ್ಗಾವಣೆ ರೂಪದಲ್ಲಿ ಜರುಗುತ್ತದೆ. ಬಿಲ್ಲುಗಳು, ಶಾಲಾ ಫೀಸ್ ಮೊದಲಾದ ಎಲ್ಲವೂ ನಗದುರಹಿತವಾಗಿಯೇ ನಡೆಯುತ್ತಿವೆ. ನಗದು ನಿಧಾನವಾಗಿ ಚಲಾವಣೆಯಿಂದ ಹಿಂದೆ ಸರಿಯುತ್ತಿದ್ದು ಇನ್ನು ಕೆಲವೇ ವರ್ಷಗಳಲ್ಲಿ ನೇಪಥ್ಯಕ್ಕೆ ಸರಿಯಲಿದೆ.

ಕೆನಡಾ

ಕೆನಡಾದಲ್ಲಿ ಪ್ರಸ್ತುತ ನೋಟುಗಳು ಚಲಾವಣೆಯಲ್ಲಿದ್ದರೂ ಹೊಸ ನೋಟುಗಳಲ್ಲ, ಇವೆಲ್ಲಾ ಹಳೆಯ ನೋಟುಗಳು ಮಾತ್ರ. ಹೊಸ ನೋಟುಗಳಿಗೆ ಬೇಡಿಕೆ ಇಲ್ಲದ ಕಾರಣ ನಿಧಾನವಾಗಿ ಇವು ನೇಪಥ್ಯಕ್ಕೆ ಸರಿಯುತ್ತಿದೆ. ಉಳಿದಂತೆ ಎಲ್ಲಾ ವಹಿವಾಟುಗಳು ಬ್ಯಾಂಕ್ ಮತ್ತು ಕ್ರಿಡಿಟ್ ಕಾರ್ಡುಗಳ ಮೂಲಕವೇ ನಡೆಯುತ್ತವೆ. ಈ ನೋಟುಗಳು ಹಳೆಯದಾಗಿ ಬ್ಯಾಂಕಿಗೆ ಹಿಂದಿರುಗಿದ ಬಳಿಕ ಇಲ್ಲಿಯೂ ಶೇಖಡಾ ನೂರರಷ್ಟು ನಗದುರಹಿತ ವ್ಯವಹಾರ ಸಾಧ್ಯವಾಗಬಹುದು.

ಬೆಲ್ಜಿಯಂ

ಅಭಿವೃದ್ಧಿಹೊಂದಿರುವ ಬೆಲ್ಜಿಯಂ ಸಹಾ ನಗದುರಹಿತ ದೇಶಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ಈ ದೇಶದ ನಿವಾಸಿಗಳು ಡಿಜಿಟಲ್ ವ್ಯಾಲೆಟ್ ಮೂಲಕವೇ ತಮ್ಮೆಲ್ಲಾ ವ್ಯವಹಾರಗಳನ್ನು ನಡೆಸುತ್ತಾರೆ. ಆದರೆ ಆಚ್ಚರಿಯ ವಿಷಯವೆಂದರೆ ಪ್ರತಿ ನಾಗರಿಕ ಖರ್ಚು ಮಾಡಬಹುದಾದ ನಗದು ಹಣಕ್ಕೆ ಸರ್ಕಾರವೇ ಮಿತಿ ವಿಧಿಸಿದೆ. ಆ ಪ್ರಕಾರ ಓರ್ವ ವ್ಯಕ್ತಿ ಗರಿಷ್ಠ ಮೂರು ಸಾವಿರ ಯೂರೋಗಳಷ್ಟು ಹಣವನ್ನು ಮಾತ್ರ ಪಾವತಿಸಬಹುದು.

ಫ್ರಾನ್ಸ್

ನಗದುರಹಿತ ನಿಟ್ಟಿನಲ್ಲಿ ಹೊಸ ಹೊಸ ವಿಧಾನಗಳನ್ನು ಪ್ರಥಮವಾಗಿ ಅಳವಡಿಸಿಕೊಳ್ಳುವ ದೇಶವಾದ ಫ್ರಾನ್ಸ್ ಸಹಾ ಬಹುತೇಕ ನಗದುರಹಿತವಾಗಿದ್ದು ಕೆಲವೇ ವರ್ಷಗಳಲ್ಲಿ ಸಂಪೂರ್ಣ ನಗದುರಹಿತವಾಗುವ ಎಲ್ಲಾ ಲಕ್ಷಣಗಳನ್ನು ತೋರುತ್ತಿದೆ. ಅಲ್ಲದೇ ಅತ್ಯಾಧುನಿಕ ವಿಧಾನಗಳಾದ ಮೊಬೈಲ್ ವ್ಯವಹಾರ ಹಾಗೂ ಸ್ಪರ್ಶರಹಿತ ಕಾರ್ಡುಗಳ ಬಳಕೆಯಲ್ಲಿ ಮುಂಚೂಣಿಯಲ್ಲಿದೆ.

ಯುನೈಟೆಡ್ ಕಿಂಗ್ ಡಂ

ಯುಕೆ ಅಥವಾ ಇಂಗ್ಲೆಂಡ್ ನಲ್ಲಿಯೂ ನಗದುರಹಿತ ವ್ಯವಹಾರಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದ್ದು ಕೆಲವೇ ಸ್ಥಳಗಳಲ್ಲಿ ಮಾತ್ರವೇ ನಗದು ಬಳಕೆಯಾಗುತ್ತಿದೆ. ಈ ದೇಶದ ಶೇಖಡಾ ಅರವತ್ತಾರರಷ್ಟು ಜನರು ನಗದು ಬಳಸದೇ ಮೊಬೈಲ್ ಪೇಮೆಂಟ್ ವಿಧಾನವನ್ನು ಬಳಸುತ್ತಿದ್ದಾರೆ. ಹೆಚ್ಚೂ ಕಡಿಮೆ ಎಲ್ಲಾ ಸರ್ಕಾರಿ ಮತ್ತು ಖಾಸಗಿ ವ್ಯವಹಾರಗಳು ನಗದುರಹಿತವಾಗಿವೆ. 

 ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಆಗುತ್ತಿರುವ ಬದಲಾವಣೆ ಕಂಡರೆ ಇನ್ನೇನು ಈ ಪಟ್ಟಿಯಲ್ಲಿ ಭಾರತವೂ ಸ್ಥಾನ ಪಡೆಯುವ ದಿನ ದೂರವಿಲ್ಲ ಎನ್ನಿಸುತ್ತಿದೆ.

 

Story first published: Saturday, November 26, 2016, 11:14 [IST]
English summary

Countries That Have Almost Gone Cashless

Cash is still a king, and with demonetisation, the world turns upside down. While much has changed about how we make, sell, and buy goods, cash has been a medium. It's been nearly 300 years that paper money has become a legal tender. However, can you imagine that there are nations that have gone cashless?Hence, check out the list of the countries that are really making a move toward becoming cashless. A great move indeed!
Please Wait while comments are loading...
Subscribe Newsletter