ನೆನಪಿರಲಿ-ಬ್ರಾ ಅದು ನೀವು ಧರಿಸಿದಷ್ಟು ಸುಲಭವಲ್ಲ!

ಡ್ರೆಸ್ ಒಳಗೆ ಹಾಕಿಕೊಳ್ಳುವ ಬ್ರಾದ ಬಗ್ಗೆ ಕಾಳಜಿ ವಹಿಸುವುದು ತುಂಬಾ ಮುಖ್ಯ. ನಾವು ಬ್ರಾ ಧರಿಸುವಾಗ ಮಾಡುವಂತಹ ತಪ್ಪುಗಳನ್ನು ಕಡೆಗಣಿಸಬೇಕು. ಈ ಲೇಖನದಲ್ಲಿ ನಾವು ಮಾಡುವಂತಹ ತಪ್ಪುಗಳನ್ನು ತಿಳಿದುಕೊಂಡು ಜಾಗ್ರತೆವಹಿಸಿ....

By:
Subscribe to Boldsky

ಒಂದು ಉಡುಗೆ ಖರೀದಿ ಮಾಡುವಾಗ ಅದಕ್ಕಾಗಿ ಗಂಟೆಗಟ್ಟಲೆ ವ್ಯಯಿಸುವ ನಾವು ನಮ್ಮ ಸೌಂದರ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತೇವೆ. ಆದರೆ ಒಳಉಡುಪನ್ನು ಆಯ್ಕೆ ಮಾಡಿಕೊಳ್ಳುವಾಗ ವಿಶೇಷ ಗಮನಹರಿಸುತ್ತೇವೆಯಾ? ಪ್ರತಿಯೊಬ್ಬ ಹುಡುಗಿ ಅಥವಾ ಮಹಿಳೆ ತನ್ನ ಬ್ರಾದ ಆಯ್ಕೆಯಲ್ಲಿ ಹಲವಾರು ರೀತಿಯ ತಪ್ಪುಗಳನ್ನು ಮಾಡುತ್ತಲೇ ಇರುತ್ತಾಳೆ. ಸಿಲಿಕಾನ್ ಬ್ರಾ ಸ್ತನಗಳ ಆರೋಗ್ಯಕ್ಕೆ ಎಷ್ಟು ಸೂಕ್ತ? 

ಬ್ರಾ ಧರಿಸಿ ನಾವು ದಿನಗಟ್ಟಲೆ ಕುಳಿತುಕೊಳ್ಳುವ ಕಾರಣದಿಂದಾಗಿ ಇದರ ಬಗ್ಗೆ ಹೆಚ್ಚಿನ ಗಮನಹರಿಸುವುದು ತುಂಬಾ ಮುಖ್ಯ. ಈ ಲೇಖನದಲ್ಲಿ ನಾವು ಮಾಡುವಂತಹ ಬ್ರಾದ ಆಯ್ಕೆಯಲ್ಲಿನ ತಪ್ಪುಗಳನ್ನು ತಿಳಿಸಿಕೊಡಲಿದ್ದೇವೆ. ದಿನನಿತ್ಯ ಬ್ರಾ ಧರಿಸಿದರೆ, ಅಪಾಯ ಬೆನ್ನೇರಿ ಕಾಡಲಿದೆ ಎಚ್ಚರ!  

ಡ್ರೆಸ್ ಒಳಗೆ ಹಾಕಿಕೊಳ್ಳುವ ಬ್ರಾದ ಬಗ್ಗೆ ಕಾಳಜಿ ವಹಿಸುವುದು ತುಂಬಾ ಮುಖ್ಯ. ನಾವು ಬ್ರಾ ಧರಿಸುವಾಗ ಮಾಡುವಂತಹ ತಪ್ಪುಗಳನ್ನು ಕಡೆಗಣಿಸಬೇಕು. ಈ ಲೇಖನದಲ್ಲಿ ನಾವು ಮಾಡುವಂತಹ ತಪ್ಪುಗಳನ್ನು ತಿಳಿದುಕೊಂಡು ಮುಂದೆ ಅದು ಆಗದಂತೆ ನೋಡಿಕೊಳ್ಳಿ....  

ಬ್ರಾದ ಆಯ್ಕೆ

ಹೆಚ್ಚಿನ ಮಹಿಳೆಯರು ಅದರ ಕಪ್ ಸೈಜ್ ನಿಂದ ಬ್ರಾವನ್ನು ಆಯ್ಕೆ ಮಾಡುತ್ತಾರೆ. ಇದು ನಿಜವಾಗಿಯೂ ತಪ್ಪು. ನೀವು ಬ್ರಾದ ಆಯ್ಕೆ ಮಾಡುವಂತಹ ಒಂದು ಬ್ರಾಂಡ್‌ನ ಸೈಜ್ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಿ. ಯಾಕೆಂದರೆ ಕಪ್ ಸೈಜ್ ಬ್ರಾಂಡ್ ನ ಸೈಜ್ ನ್ನು ಆಧಾರವಾಗಿಟ್ಟುಕೊಳ್ಳಲಾಗಿದೆ.

ಬ್ರಾದ ಆಯ್ಕೆ

ಕಪ್ ಸೈಜ್ ನಿಖರವಾಗಿರುವಂತಹ ಸೈಜ್ ಅಲ್ಲ, ಯಾಕೆಂದರೆ ಕೆಲವೊಂದು ಬ್ರಾಂಡ್ ಗೆ `ಡಿ' ಕಪ್ ಸೈಜ್ ಮತ್ತು ಇನ್ನು ಕೆಲವೊಂದು ಬ್ರಾಂಡ್ ಗಳಿಗೆ `ಈ' ಸೈಜ್ ಬೇಕಾಗುತ್ತದೆ.

ತುಂಬಾ ಸಣ್ಣ ಬ್ರಾವನ್ನು ಧರಿಸುವುದು

ಸಣ್ಣ ಸೈಜ್ ನ ಬ್ರಾವನ್ನು ಹಾಕಿಕೊಳ್ಳುವುದರಿಂದ ಸ್ತನವನ್ನು ನಿಯಂತ್ರಿಸಲು ಸಾಧ್ಯ ಮತ್ತು ಸುಂದರವಾಗಿ ಕಾಣಬಹುದು ಎಂದು ಕೆಲವು ಮಹಿಳೆಯರು ಭಾವಿಸಿದ್ದಾರೆ. ಆದರೆ ಸಣ್ಣ ಬ್ರಾ ತೊಡುವುದರಿಂದ ಸ್ತನಗಳು ಸಣ್ಣದಾಗಬಹುದು ಮತ್ತು ಅದರ ಆಕಾರವೇ ಕೆಡಬಹುದು.

ಅಸಮರ್ಪಕ ಬಟ್ಟೆ

ಲಾಸೆಸ್, ಸ್ಯಾಟಿನ್ ಮತ್ತು ಸಿಂಥೆಟಿಕ್ ನಂತಹ ವಸ್ತ್ರವು ತುಂಬಾ ಸೆಕ್ಸಿಯಾಗಿ ಕಾಣಿಸುತ್ತದೆ ಎಂದು ನೀವು ಭಾವಿಸಬಹುದು. ಇಂತಹ ಬ್ರಾಗಳನ್ನು ಒಂದು ರಾತ್ರಿಗೆ ಮಾತ್ರ ಬಳಸಿಕೊಳ್ಳಬಹುದು. ನಿಯಮಿತವಾಗಿ ಇದನ್ನು ಬಳಸುವುದು ಒಳ್ಳೆಯದಲ್ಲ. ತುಂಬಾ ಹಗುರವಾಗಿರುವಂತಹ ಬಟ್ಟೆಯ ಬ್ರಾವನ್ನು ಧರಿಸಿದರೆ ಚರ್ಮವು ಗಾಳಿಯನ್ನು ಪಡೆಯಲು ಸುಲಭವಾಗುತ್ತದೆ.

ಅಸಮರ್ಪಕ ಬಟ್ಟೆ

ಹತ್ತಿಯ ಬ್ರಾಗಳನ್ನು ಈ ಉದ್ದೇಶದಿಂದಾಗಿಯೇ ಮಾಡಲಾಗಿದೆ. ಇದು ಚರ್ಮಕ್ಕೆ ತುಂಬಾ ಒಳ್ಳೆಯದು ಮತ್ತು ಚರ್ಮವು ಸರಿಯಾಗಿ ಗಾಳಿಯನ್ನು ಪಡೆಯಲು ಇದು ನೆರವಾಗುತ್ತದೆ. ಇಂದಿನ ದಿನಗಳಲ್ಲಿ ಹತ್ತಿಯ ಬ್ರಾದಲ್ಲಿ ಹಲವಾರು ರೀತಿಯ ಬಣ್ಣ ಹಾಗೂ ವಿನ್ಯಾಸಗಳನ್ನು ಕಾಣಬಹುದು.

ಹಳೆಯ ಬ್ರಾ ಬಳಕೆ

ತುಂಬಾ ಹಳೆಯದಾದ ಬ್ರಾವನ್ನು ಯಾವಾಗಲೂ ಧರಿಸುತ್ತಾ ಇರುವುದು ದೇಹದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದು ನಿಮ್ಮ ಫೇವರಿಟ್ ಬ್ರಾವಾಗಿದ್ದರೂ ಅದನ್ನು ಕಸದ ಡಬ್ಬಿಗೆ ಹಾಕಿ ಬೇರೆ ಬ್ರಾ ಧರಿಸುವುದು ಒಳ್ಳೆಯದು.

ಹಳೆಯ ಬ್ರಾ ಬಳಕೆ

ಹಳೆಯ ಬ್ರಾವು ಸಡಿಲವಾಗಿ ನಿಮ್ಮ ಸ್ತನಗಳಿಗೆ ಸರಿಹೊಂದದೆ ಇರಬಹುದು. ಹೊಸ ಬ್ರಾವನ್ನು ಧರಿಸುವುದರಿಂದ ಬ್ರಾವನ್ನು ಸರಿಯಾದ ಸ್ಥಿತಿಯಲ್ಲಿಡಬಹುದು.

ಸಲಹೆ ಪಡೆಯಿರಿ

ಬ್ರಾವನ್ನು ಆಯ್ಕೆ ಮಾಡುವಾಗ ನೀವು ಸರಿಯಾದ ಗಾತ್ರವನ್ನು ಆಯ್ಕೆ ಮಾಡಬೇಕಾದರೆ ಅಲ್ಲಿ ಇರುವ ಸೇಲ್ಸ್ ಗರ್ಲ್ ನ ಸಲಹೆ ಪಡೆಯಬಹುದು. ಸಲಹೆಯನ್ನು ಕಡೆಗಣಿಸುವುದು ನೀವು ಮಾಡುವಂತಹ ದೊಡ್ಡ ತಪ್ಪಾಗಿದೆ. ಸಲಹೆಯನ್ನು ಪರಿಗಣಿಸಿದರೆ ನೀವು ಸರಿಯಾದ ಗಾತ್ರದ ಬ್ರಾವನ್ನು ಆಯ್ಕೆ ಮಾಡಿಕೊಳ್ಳಬಹುದು.

ಸಲಹೆ ಪಡೆಯಿರಿ

ಸೇಲ್ಸ್ ಗರ್ಲ್ ನಿಮಗಿಂತ ಹೆಚ್ಚಿನ ಜ್ಞಾನವನ್ನು ಹೊಂದಿರುತ್ತಾಳೆ ಮತ್ತು ನಿಮಗೆ ಬೇಕಿರುವ ಅಗತ್ಯ ಸಲಹೆಯನ್ನು ಅವಳು ನೀಡುತ್ತಾಳೆ. ಇದರಿಂದ ನೀವು ಆಕೆಯ ಸಲಹೆಯನ್ನು ಪರಿಗಣಿಸಲೇಬೇಕು.

ಎರಡು ದಿನ ಒಂದೇ ಬ್ರಾ ಧರಿಸುವುದು

ಕೆಲವು ಹುಡುಗಿಯರು ಒಂದೇ ಬ್ರಾವನ್ನು ಎರಡು ದಿನಗಳ ಕಾಲ ಧರಿಸುತ್ತಾಳೆ. ಒಂದು ದಿನ ಧರಿಸಿದ ಬ್ರಾಗೆ ಒಂದು ದಿನ ವಿಶ್ರಾಂತಿಯನ್ನು ನೀಡಿ. ಇದರಿಂದ ಬ್ರಾವು ಸ್ಥಿತಿಸ್ಥಾಪಕತ್ವವನ್ನು ಮರಳಿ ಪಡೆಯಲು ನೆರವಾಗುತ್ತದೆ. ಬ್ರಾವನ್ನು ತೊಳೆಯುವಾಗ ತಂಪಾದ ನೀರಿನಲ್ಲಿ ತೊಳೆದರೆ ಅದು ತನ್ನ ಸ್ಥಿತಿಸ್ಥಾಪಕತ್ವವನ್ನು ಉಳಿಸಿಕೊಳ್ಳುತ್ತದೆ.

ಸೂಕ್ತವಲ್ಲದ ಬ್ರಾ ಸಿದ್ಧತೆ

ಮಹಿಳೆಯರು ಹೆಚ್ಚಾಗಿ ಒಂದು ಗಾತ್ರದ ಬ್ರಾ ತನ್ನ ಸ್ತನಗಳಿಗೆ ಹೊಂದಿಕೊಳ್ಳಲ್ಲ ಎಂದು ಯಾವತ್ತೂ ಒಪ್ಪಿಕೊಳ್ಳಲು ತಯಾರಿರುವುದಿಲ್ಲ.

ಸೂಕ್ತವಲ್ಲದ ಬ್ರಾ ಸಿದ್ಧತೆ

ತಮ್ಮ ಬ್ರಾ ಸೈಜ್ ಬಗ್ಗೆ ಮುಕ್ತವಾಗಿ ಮಾತನಾಡಲು ಹೆಚ್ಚಿನ ಮಹಿಳೆಯರು ಹಿಂಜರಿಯುತ್ತಾರೆ. ನಿಮ್ಮ ಸ್ತನ ಗಾತ್ರದ ಬಗ್ಗೆ ಖಚಿತತೆ ಇಲ್ಲವೆಂದಾದಲ್ಲಿ ಸೇಲ್ಸ್ ಗರ್ಲ್ ಗೆ ಹೇಳಿ ನಿಮ್ಮ ಗಾತ್ರವನ್ನು ಅಳೆದುಕೊಳ್ಳಿ.

 

Story first published: Friday, November 11, 2016, 10:16 [IST]
English summary

Bra Mistakes Every Girl Makes

Women are making a lot of mistakes from purchasing a wrong kind of bra to keeping it properly in the wardrobe, everything seems to be so difficult for us. However, wearing a well-fitted bra is just not enough; you should also take essential steps to avoid these mistakes while wearing a bra. Check more on the bra mistakes that girls should avoid making RIGHT NOW!
Please Wait while comments are loading...
Subscribe Newsletter