For Quick Alerts
ALLOW NOTIFICATIONS  
For Daily Alerts

ಸ್ತನಗಳ ಬಗ್ಗೆ ನೀವು ತಿಳಿದಿರದ ಕುತೂಹಲಕಾರಿ ಸಂಗತಿಗಳು...

By Arshad
|

ಭೂಮಿಯ ಮೇಲಿನ ಜೀವಿಗಳಲ್ಲಿಯೇ ಮನುಷ್ಯಪ್ರಾಣಿ ಇತರ ಪ್ರಾಣಿಗಳಿಗಿಂತ ಹೆಚ್ಚು ವಿಶಿಷ್ಟ ಮತ್ತು ಹೆಚ್ಚು ಕುತೂಹಲಕರ. ಇತರ ಸಸ್ತನಿಗಳಿಗೆ ಹೋಲಿಸಿದಾಗ ಘ್ರಾಣಶಕ್ತಿ, ದೈಹಿಕ ಶಕ್ತಿ ಮೊದಲಾದವು ಬಹಳ ಕಡಿಮೆ ಇದ್ದರೂ ಬುದ್ಧಿ ಶಕ್ತಿಯಲ್ಲಿ ಮಾತ್ರ ಅತ್ಯಂತ ಹೆಚ್ಚು.

ನಮ್ಮ ದೇಹದ ಅಂಗಗಳೂ ಹಲವು ವಿಸ್ಮಯಗಳ ಆಗರವಾಗಿವೆ. ದೇಹದ ಅಂಗಗಳ ಕಾರ್ಯವಿಧಾನದ ಬಗ್ಗೆ ಹಲವು ಮಾಹಿತಿಗಳಿವೆ. ಆದರೆ ಇವುಗಳನ್ನು ನೋಡುವ ಇತರರ ಮನದಲ್ಲಿ ಮೂಡುವ ಯೋಚನೆಗಳು ಮಾತ್ರ ಬಹಳ ಕ್ಲಿಷ್ಟವಾಗಿವೆ. 'ಎದೆಗಾತಿ'ಯಾಗಲು ಪ್ಲಾಸ್ಟಿಕ್ ಸರ್ಜರಿ ಮೊರೆ ಹೊಕ್ಕ ಸಿನಿ ತಾರೆಯರು!

ಇಂದಿನ ಲೇಖನದಲ್ಲಿ ಚಿಗುರು ಮೀಸೆಯ ಹುಡುಗರಿಂದ ಹಿಡಿದು ವೃದ್ಧರವರೆಗೂ ಎಲ್ಲರೂ ವಾರೆನೋಟದಿಂದಲಾದರೂ ನೋಡಬಯಸುವ ಮಹಿಳೆಯರ ಅಂಗಗಳು ಅಂದರೆ ಸ್ತನ. ವಾಸ್ತವವಾಗಿ ಇವು ಹುಟ್ಟಿದ ಮಗುವಿಗೆ ಜೀವಾಮೃತ ನೀಡುವ ಅಂಗಗಳಾಗಿದ್ದರೂ ಇದರ ಆಕರ್ಷಣೆ ಮಾತ್ರ ಇತರರಿಗೇ ಹೆಚ್ಚು. ಬನ್ನಿ, ಈ ಬಗ್ಗೆ ಕೆಲವು ಅಚ್ಚರಿಯ ಮಾಹಿತಿಗಳನ್ನು ನೋಡೋಣ.....

ಮಾಹಿತಿ #1

ಮಾಹಿತಿ #1

ಚಿಕಾಗೋ ನಗರದಲ್ಲಿ ನಡೆದ ಒಂದು ಸಂಶೋಧನೆಯ ಪ್ರಕಾರ ದೊಡ್ಡ ಗಾತ್ರದ ಸ್ತನಗಳಿರುವ ಮಹಿಳೆಯರು ಹೆಚ್ಚು ಬುದ್ಧಿವಂತರಾಗಿರುತ್ತಾರೆ. ಛೇ ಈ ಮಾಹಿತಿಯಿಂದ ಚಿಕ್ಕ ಸ್ತನದ ಮಹಿಳೆಯರು ತಮಗೆ ನಿಜಕ್ಕೂ ಬುದ್ಧಿ ಕಡಿಮೆ ಎಂದು ನೊಂದುಕೊಳ್ಳಬಹುದು...!

ಮಾಹಿತಿ #2

ಮಾಹಿತಿ #2

ಸ್ತನಗಳು ಅಗಲವಾಗಿದ್ದು ಸೊಂಟ ಕಡಿಮೆ ಇರುವ ಮಹಿಳೆಯರು ಹೆಚ್ಚು ಸಂತಾನ ಫಲವುಳ್ಳವರಾಗಿರುತ್ತಾರೆ. ಅಂದರೆ ತಾನು, ತನ್ನ ಗಂಡ, ತನ್ನ ಸಂಸಾರ ಎನ್ನುವ ಮಹಿಳೆಯರು ಹೀಗಿರುತ್ತಾರಂತೆ.

ಮಾಹಿತಿ #3

ಮಾಹಿತಿ #3

ತೀವ್ರೋದ್ರೇಕವನ್ನು ಪಡೆಯಲು ಕೆಲವು ಮಹಿಳೆಯರಿಗೆ ಸ್ತನತೊಟ್ಟಿನ ಸಂವೇದನೆಯೇ ಸಾಕಂತೆ. ಇವರ ಬಗ್ಗೆ ನಡೆಸಿದ ಸಂಶೋಧನೆಗಳ ಮೂಲಕ ಈ ಮಹಿಳೆಯರ ಮೆದುಳಿನಲ್ಲಿ ಜನನಾಂಗ ಹಾಗೂ ಸ್ತನತೊಟ್ಟಿನ ಸಂವೇದನೆ ಸರಿಸಮನಾಗಿ ಸಂವೇದನೆ ನೀಡುತ್ತದೆ.

ಮಾಹಿತಿ #4

ಮಾಹಿತಿ #4

ಪುರುಷರಲ್ಲಿಯೂ ಕೊಂಚ ಕಿರಿದಾದುದಾದರೂ ಸ್ತನ ಹಾಗೂ ಸ್ತನತೊಟ್ಟುಗಳಿವೆ. ಏಕೆಂದರೆ ತಾಯಿಯ ಗರ್ಭದಲ್ಲಿ ಜೀವವೊಂದು ಮೊಳೆಯತೊಡಗಿದ ಆರು ವಾರಗಳವರೆಗೂ ಪುರುಷ ಹಾರ್ಮೋನು ಆದ ಟೆಸ್ಟಾಸ್ಟೆರಾನ್ ಇನ್ನೂ ಕೆಲಸವನ್ನೇ ಮಾಡಿರುವುದಿಲ್ಲ. ಆ ಹೊತ್ತಿಗಾಗಲೇ ಇತರ ಅಂಗಗಳು ಬೆಳೆದಿರುತ್ತವೆ. ಇವುಗಳಲ್ಲಿ ಸ್ತನತೊಟ್ಟು ಸಹಾ ಸೇರಿದೆ. ಬಳಿಕ ಈ ಅಂಗಗಳು ಹಾಗೇ ಇಡಿಯ ಜೀವಮಾನ ಇರುತ್ತವೆ.

ಮಾಹಿತಿ #5

ಮಾಹಿತಿ #5

ಎಡ ಮತ್ತು ಬಲ ಸ್ತನಗಳು ಯಾರಲ್ಲಿಯೂ ಏಕಸಮಾನವಾದ ಗಾತ್ರ ಹೊಂದಿರುವುದಿಲ್ಲ. ಎರಡರಲ್ಲಿಯೂ ಕೊಂಚ ವ್ಯತ್ಯಾಸವಿದ್ದೇ ಇರುತ್ತದೆ. ಕೆಲವು ಸಂದರ್ಭಗಳಲ್ಲಿ ಬಹಳ ಹೆಚ್ಚಿನ ಅಂತರ ಕಂಡುಬಂದು ಇದಕ್ಕೆ ಸೂಕ್ತ ಒಳ ಉಡುಪುಗಳನ್ನು ಪಡೆಯುವುದೇ ಇವರಿಗೆ ದುಸ್ತರವಾಗುತ್ತದೆ. "32,34,36" ನಿಮ್ಮ ಬ್ರಾ ಸೈಜ್ ಯಾವುದು?

ಮಾಹಿತಿ #6

ಮಾಹಿತಿ #6

ಮಹಿಳೆಯರ ದೇಹ ಪ್ರತಿ ಮಾಸಿಕ ದಿನಗಳಲ್ಲಿ ಹಿಗ್ಗುತ್ತದೆ. ಇವುಗಳಲ್ಲಿ ಹೆಚ್ಚು ಹಿಗ್ಗುವ ಅಂಗಗಳೆಂದರೆ ಸ್ತನಗಳು. ಎಷ್ಟು ಎಂದರೆ ಸರಿಸುಮಾರಾಗಿ ಒಂದು ಸೈಜ್ ದೊಡ್ಡದಾದ ಬ್ರಾ ತೊಡುವಷ್ಟು ಹಿಗ್ಗುತ್ತವೆ.

ಮಾಹಿತಿ #7

ಮಾಹಿತಿ #7

ಮುಖದ ಮೇಲೆ ಇರುವಂತೆಯೇ ಸ್ತನಗಳ ಮೇಲೂ ಚಿಕ್ಕ ಚಿಕ್ಕ ಮೊಡವೆ, ಬ್ಲಾಕ್ ಹೆಡ್‌ಗಳು ಮೂಡುತ್ತವೆ. ಏಕೆಂದರೆ ಮುಖದ ಚರ್ಮದಷ್ಟೇ ಈ ಭಾಗದ ಚರ್ಮವೂ ಸಂವೇದಿಯಾಗಿದ್ದು ಹೆಚ್ಚಿನ ಪ್ರಮಾಣದ ತೈಲಗ್ರಂಥಿಗಳನ್ನು ಹೊಂದಿದೆ.

ಮಾಹಿತಿ # 8

ಮಾಹಿತಿ # 8

ದೊಡ್ಡ ಗಾತ್ರದ ಸ್ತನಗಳನ್ನು ಹೊಂದಿರುವ ಮಹಿಳೆಯರ ಈ ಅಂಗ ಸುಮಾರು ಮೂರರಿಂದ ನಾಲ್ಕು ಕೇಜಿ ತೂಗುತ್ತದೆ. ಅಂದರೆ ಡಿ-ಕಪ್ ಗಾತ್ರದ ಸ್ತನಗಳು. ಇವುಗಳಲ್ಲಿ ಇಡಿಯ ದೇಹದ ಸುಮಾರು 4%-5% ರಷ್ಟು ಕೊಬ್ಬು ತುಂಬಿರುತ್ತದೆ.

English summary

Boob Facts That Can Drive You Crazy!

Here, in this article, we are about to share things you should know about boobs. These are some of the most interesting facts that every man would be interested in finding out.
Story first published: Wednesday, September 28, 2016, 20:21 [IST]
X
Desktop Bottom Promotion