For Quick Alerts
ALLOW NOTIFICATIONS  
For Daily Alerts

ವರ್ಷಗಳೇ ಕಳೆದರೂ, ಇಲ್ಲಿನ ಶವಗಳು ಕೊಳೆಯುವುದಿಲ್ಲ!

By Super Admin
|

ಮನುಷ್ಯ ಜನ್ಮ ಎಷ್ಟು ವರ್ಷಗಳ ಕಾಲ ಎಂಬ ಪ್ರಶ್ನೆಗೆ ಹೆಚ್ಚಿನ ಧರ್ಮಗಳಲ್ಲಿ ನೂರು ವರ್ಷ ಎಂಬ ಉತ್ತರ ಸಿಗುತ್ತದೆ. ಅಂತೆಯೇ ಶತಾಯುಶಿಗಳಾಗಿ ಬಾಳುವುದು ಹೆಚ್ಚಿನವರ ಅಪೇಕ್ಷೆ. ಆದರೆ ಕೆಲವರು ತಮ್ಮ ಸಾವಿನ ನಂತರವೂ ತಮ್ಮ ದೇಹ ಹಾಗೇ ಇರಬೇಕು, ಮುಂದೆ ಹೊಸಜನ್ಮ ಪಡೆದು ಹಿಂದಿರುಗಿದಾಗ ಆ ದೇಹವನ್ನು ಮತ್ತೊಮ್ಮೆ ಪಡೆಯಬಹುದು ಎಂಬ ಆಲೋಚನೆಯಿಂದ ಕೆಲವಾರು ಗಿಡಮೂಲಿಕೆಗಳನ್ನು ಅರೆದು ಲೇಪಿಸಿ ಕೆಡದಂತೆ ಕಾಪಾಡುತ್ತಿದ್ದರು.

ಈಜಿಪ್ಟ್ ದೇಶದಲ್ಲಿ ಈ ಪ್ರಕ್ರಿಯೆ ಸುಮಾರು ಮೂರು ಸಾವಿರ ವರ್ಷಗಳ ಹಿಂದಿನಿಂದಲೂ ನಡೆದುಕೊಂದು ಬಂದಿದ್ದು ಈ ದೇಹಗಳು ಇಂದಿಗೂ ಕೆಡದಂತಿವೆ. ಮಮ್ಮಿಗಳು ಎಂದು ಕರೆಯಲ್ಪಡುವ ಈ ಸಂರಕ್ಷಿತ ದೇಹಗಳು ಇಂದಿಗೂ ಪ್ರಾಕ್ತನಶಾಸ್ತ್ರಜ್ಞರಿಗೆ ಒಂದು ಸವಾಲಾಗಿವೆ.

ಇಂದಿನ ಆಧುನಿಕ ತಂತ್ರಜ್ಞಾನದ ಮೂಲಕ ಶವವನ್ನು ಕೆಡದಂತೆ ಸಂರಕ್ಷಿಡುವ ಹಲವು ವಿಧಾನಗಳು ಇಂದು ಲಭ್ಯವಿವೆ. ಇದರಲ್ಲಿ ಅತಿ ಸಾಮಾನ್ಯವಾದುದು ಫಾರ್ಮಾಲ್ಡಿಹೈಡ್ ಎಂಬ ರಾಸಾಯನಿಕ. ಶವಗಳನ್ನು ಸಂಸ್ಕಾರದವರೆಗೆ ಕೆಡದಿಡಲು ಅಥವಾ ಶಾಶ್ವತವಾಗಿ ಉಳಿಸಿಕೊಳ್ಳಲು ಇದನ್ನು ಬಳಸಲಾಗುತ್ತದೆ. ಆಸ್ಪತ್ರೆಯ ಸಂಗ್ರಹಾಲಯದಲ್ಲಿ ಅಂಗಗಳನ್ನು ಬಾಟಲಿಗಳಲ್ಲಿ ಸಂಗ್ರಹಿಸಿಟ್ಟಿರುವುದನ್ನು ಸಾಮಾನ್ಯವಾಗಿ ಕಾಣಬಹುದು. ಯಕ್ಷ ಪ್ರಶ್ನೆಯಂತೆ ಕಾಡುವ, ಈ ವ್ಯಕ್ತಿಗಳ ಚಿದಂಬರ ರಹಸ್ಯ..!

ಆದರೆ ಕೆಲವು ದೇಹಗಳು ಇಂತಹ ಯಾವುದೇ ಗಿಡಮೂಲಿಕೆ ಅಥವಾ ರಾಸಾಯನಿಕಗಳ ಪ್ರಭಾವದ ಹೊರತಾಗಿ ಹಲವು ಕಾಲ ಕೆಡದಂತೆ ಉಳಿದಿರುವುದು ಅಚ್ಚರಿಗೆ ಕಾರಣವಾಗಿವೆ. ಇವುಗಳಲ್ಲಿ ಕೆಲವನ್ನು ನಿಸರ್ಗವೇ ನಮಗೆ ಗೊತ್ತಿಲ್ಲದ ವಿಧಾನದಿಂದ ಉಳಿಸಿಕೊಂಡಿದ್ದರೆ ಉಳಿದವನ್ನು ವೈಜ್ಞಾನಿಕ ವಿಶ್ಲೇಷಣೆಗಾಗಿ ಉದ್ದೇಶಪೂರ್ವಕವಾಗಿಯೇ ಸಂರಕ್ಷಿಸಿಡಲಾಗಿದೆ. ಇಂತಹ ಕೆಲವು ವ್ಯಕ್ತಿಗಳ ಬಗ್ಗೆ ಅಮೂಲ್ಯ ಮಾಹಿತಿಯನ್ನು ಸಂಗ್ರಹಿಸಿದ್ದು ಕೆಳಗಿನ ಸ್ಲೈಡ್ ಷೋ ಮೂಲಕ ನೀಡಲಾಗಿದೆ...

ರಾಮ್ಸೇಸ

ರಾಮ್ಸೇಸ

ರಾಮೆಸೇಸ್ ಅಥವಾ ರಾಮ್ಸೇಸ್ ಎಂದು ಕರೆಯಲ್ಪಡುವ ಈ ವ್ಯಕ್ತಿ ಸುಮಾರು ಇಪ್ಪತ್ತನೇ ಶತಮಾನದ ಪ್ರಾರಂಭದಲ್ಲಿ ಈಜಿಪ್ಟಿನ ರಾಜಕೀಯ ಮತ್ತು ಧಾರ್ಮಿಕವಾಗಿ ಪ್ರಮುಖವಾದ ವ್ಯಕ್ತಿ ಅಥವಾ ಫರೋವಾ (pharaoh) ಆಗಿದ್ದ. 1213 ಕ್ರಿ.ಪೂರ್ವದಲ್ಲಿ ತೀರಿಕೊಂಡ ಈತನ ಶವವನ್ನು ಕೆಲವು ಗಿಡಮೂಲಿಕೆಗಳ ರಸದಲ್ಲಿ ಮುಳುಗಿಸಿ ಪಟ್ಟಿಗಳನ್ನು ಕಟ್ಟಿ ಸಂರಕ್ಷಿಡಲಾಗಿದೆ. ಸುಮಾರು ಎಪ್ಪತ್ತು ವರ್ಷಗಳ ಹಿಂದೆ ಈಜಿಪ್ಟಿನ ಪಿರಮಿಡ್ ನಲ್ಲಿ ದೊರೆತ ಈತನ ಮಮ್ಮಿಯನ್ನು ಹೊರತೆಗೆದ ಬಳಿಕ ಕುತ್ತಿಗೆಯಲ್ಲಿ ಆಳವಾದ ಕತ್ತರಿಸಿದ ಗುರುತು ಸುಮಾರು ಕುತ್ತಿಗೆಯ ಮೂಳೆಯವರೆಗೂ ಇದ್ದು ಇದೇ ಆತನ ಸಾವಿಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಆದರೆ ಯಾವಾಗ ಈ ಪಟ್ಟಿಗಳನ್ನು ಕಳಚಲಾಯಿತೋ ದೇಹ ನಿಧಾನವಾಗಿ ಕೊಳೆಯಲು ಪ್ರಾರಂಭಿಸಿದ ಕಾರಣ 1974ರಲ್ಲಿ ಈಜಿಪ್ಟಿನಿಂದ ಒಂದು ಪಾಸ್ ಪೋರ್ಟ್ ಮಾಡಿ ಪ್ಯಾರಿಸ್ಸಿಗೆ ಕೊಂಡು ತರಲಾಯಿತು. ದೇಹ ಇನ್ನಷ್ಟು ಕೆಡದಂತೆ ಎಚ್ಚರಿಕೆ ವಹಿಸಿ ಈಗ ಈಜಿಪ್ಟಿನ ಕೈರೋದಲ್ಲಿರುವ ಮಮ್ಮಿ ಮ್ಯೂಸಿಯಂನಲ್ಲಿರಿಸಲಾಗಿದೆ.

Image Courtesy

ಕ್ಸಿಯಾಯೋಳ ಸಾವಿನ ನಂತರವೂ ಉಳಿದ ಸೌಂದರ್ಯ

ಕ್ಸಿಯಾಯೋಳ ಸಾವಿನ ನಂತರವೂ ಉಳಿದ ಸೌಂದರ್ಯ

ಕ್ಸಿಯಾಯೋಳ ಸಾವಿನ ನಂತರವೂ ಉಳಿದ ಸೌಂದರ್ಯ

2003ರಲ್ಲಿ ಚೀನಾದ ಹಳೆಯ ಗೋರಿಯೊಂದನ್ನು ಅಗೆಯುತ್ತಿದ್ದ ಪ್ರಾಕ್ತನಶಾಸ್ತ್ರಜ್ಞರಿಗೆ ಹಲವು ಮಮ್ಮಿಗಳು ಒಂದೆಡೆ ಸಿಕ್ಕವು. ಆದರೆ ಇವುಗಳಲ್ಲಿ ಒಂದು ಮಮ್ಮಿ ಮಾತ್ರ ತನ್ನ ಸೌಂದರ್ಯದಿಂದ ಇವರನ್ನು ಬೆಕ್ಕಸಬೆರಗಾಗಿಸಿತು. ಇದು ಕ್ಸಿಯಾಹೋ ಎಂಬ ಅಪ್ರತಿಮ ಸುಂದರಿಯ ಶವವಾಗಿದ್ದು ಇಡಿಯ ಶರೀರ ಅತ್ಯಂತ ಕಾಳಜಿಯಿಂದ ಸಂರಕ್ಷಿಸಲಾಗಿತ್ತು. ಆಕೆಯ ಚರ್ಮ, ಕಣ್ಣು, ಕಣ್ಣುರೆಪ್ಪೆಗಳ ಕೂದಲು ಸಹಾ ಈಗತಾನೇ ಸತ್ತಿದ್ದಾಳೆ ಎಂಬ ಭ್ರಮೆ ಮೂಡಿಸುತ್ತಿತ್ತು. ಈಕೆ ಧರಿಸಿದ್ದ ಉಣ್ಣೆಯ ಟೊಪ್ಪಿಯಿಂದ ಹಿಂದಿನ ರಾಜಮನೆತನಕ್ಕೆ ಸೇರಿದ ರಾಜಕುಮಾರಿಯಾಗಿರಬಹುದು ಎಂದು ಅಂದಾಜಿಸಲಾಗಿದೆ.

Image Courtesy

ಜಾನ್ ಟಾರಿಗ್ಟಂನ್

ಜಾನ್ ಟಾರಿಗ್ಟಂನ್

ತನ್ನ ಇಪ್ಪತ್ತೆರಡನೇ ಹರೆಯದಲ್ಲಿಯೇ ಸೀಸದ ವಿಷಪ್ರಾಶನದಿಂದ ಸಾವು ಕಂಡ ಜಾನ್ ಟಾರಿಗ್ಟಂನ್ ಓರ್ವ ನೌಸೇನಾ ಅಧಿಕಾರಿಯಾಗಿದ್ದ. ಇವರಿಗೆ ಸಾಗರಯಾನದ ಹೊಸ ಸವಾಲನ್ನು ಹೊರಿಸಲಾಗಿತ್ತು. ಈ ಸವಾಲನ್ನು ಸೋತು ಬಂದದ್ದನ್ನು ಸಹಿಸಲಾರದೇ ಇವರ ಇಬ್ಬರು ಜೊತೆಗಾರರೊಂದಿಗೆ ವಿಶವುಣಿಸಿ ಸಾಯಿಸಿ ಜೌಗುಪ್ರದೇಶದಲ್ಲಿ ಹೂಳಲಾಗಿತ್ತು. ಆದರೆ ಇತ್ತೀಚೆಗೆ ಇವರ ಶವ ಪ್ರಾಕ್ತನಶಾಸ್ತ್ರಜ್ಞರಿಗೆ ಸಿಕ್ಕಿದ್ದಾಗ ಈಗತಾನೇ ಸತ್ತಂತಿದ್ದು ಇವರನ್ನು ಹೊದಿಸಿದ್ದ ಹೊದಿಗೆ ಬಿಡಿಸಿದಾಗ ಬಿಡಿಸಿದವರನ್ನೇ ದುರುಗುಟ್ಟಿ ನೋಡಿದಂತಿದ್ದ ಪರಿ ಭೀತಿ ಹುಟ್ಟಿಸಿತ್ತು.

Image Courtesy

ಲೇಡಿ ಕ್ಸಿನ್ ಝುಯಿ (Lady Xin Zhui)

ಲೇಡಿ ಕ್ಸಿನ್ ಝುಯಿ (Lady Xin Zhui)

ಚೀನಾದ ಗೋಪುರ ಅಥವಾ ಟೋಂಬ್ ಆಫ್ ಚೀನಾ ಎಂಬ ಸ್ಥಳದಲ್ಲಿ ಅಗೆಯುತ್ತಿದ್ದಾಗ ಸಿಕ್ಕ ಈಕೆಯ ಶವ ಎರಡು ಸಾವಿರ ವರ್ಷಕ್ಕೂ ಹಳೆಯದಾಗಿದ್ದರೂ ಈಕೆಯ ಶವವನ್ನು ಸಂರಕ್ಷಿಸಿಡಲು ಬಳಸಲಾದ ಗಿಡಮೂಲಿಕೆಗಳ ಪರಿಣಾಮವಾಗಿ ನಿನ್ನೆ ಮೊನ್ನೆ ಸತ್ತಂತಿದ್ದ ಸ್ಥಿತಿಯಲ್ಲಿ ಈಕೆಯ ಶವ ಸಿಕ್ಕಿತ್ತು. ಆಕೆಯ ಅಂಗಾಂಶಗಳೂ ಸುಸ್ಥಿತಿಯಲ್ಲಿದ್ದು ಕಾಲುಗಳು ಮಡಚುವಂತಿದ್ದವು. ಕೂದಲು ಒಂದಿನಿಯೂ ಹಾಳಾಗದೇ ಬಾಚಿದ್ದ ಸ್ಥಿತಿಯಲ್ಲಿತ್ತು. ಇನ್ನೂ ಅಚ್ಚರಿಯ ಸಂಗತಿ ಎಂದರೆ ಆಕೆಯ ಚರ್ಮದೊಳಗಿದ್ದ ನರಗಳೂ ಸುಸ್ಥಿತಿಯಲ್ಲಿದ್ದು ಇದರೊಳಗಿನ ರಕ್ತವೂ ಸುರಕ್ಷಿತವಾಗಿತ್ತು. ಇದನ್ನು ವಿಶ್ಲೇಷಿಸಿದಾದ ಇದು ಎ ಗುಂಪಿನ ರಕ್ತ ಎಂದೂ ತಿಳಿದುಬಂದಿದೆ.

Image Courtesy

ಲಾ ಡಾನ್ಸೆಲಾ

ಲಾ ಡಾನ್ಸೆಲಾ

ಹದಿನೈದು ವರ್ಷದ ಬಾಲಕಿ ಲಾ ಡಾನ್ಸೆಲಾಳ ಶವವೂ ಸಂರಕ್ಷಿತ ಸ್ಥಿತಿಯಲ್ಲಿ ಸಿಕ್ಕಿದ್ದು ಐದು ಸಾವಿರಕ್ಕೂ ಹಿಂದಿನ ಕಾಲದಲ್ಲಿ ಜೀವಿಸಿದ್ದಳು ಎಂದು ವಿಶ್ಲೇಷಣೆಗಳು ತಿಳಿಸುತ್ತವೆ. ಈಕೆಗೆ ಚೀಚಾ ಮತ್ತು ಕೋಕೋ ಎಲೆಗಳನ್ನು ಅತಿಯಾಗಿ ತಿನ್ನುವ ಅಭ್ಯಾಸವಿದ್ದು ಈ ಎಲೆಗಳಲ್ಲಿದ್ದ ಮಾದಕ ಪದಾರ್ಥಗಳು ಆಕೆಯನ್ನು ಎಂದೂ ಎಚ್ಚರಾಗದ ನಿದ್ದೆಗೆ ಇಳಿಸಿದ್ದವು. ಈಕೆಯನ್ನು ಬಳಿಕ ಸೂರ್ಯದೇವನಿಗೆ ಬಲಿಯ ರೂಪದಲ್ಲಿ ಅರ್ಪಿಸಿ ಹಾಗೇ ಜೀವಂತ ಹೂಳಲಾಗಿತ್ತು. ಇಂದಿಗೂ ಈಕೆಯ ಶರೀರ ಸರಿಸುಮಾರು ಸತ್ತ ಸ್ಥಿತಿಯಲ್ಲಿಯೇ ಇದೆ. ಈಕೆ ಧರಿಸಿದ್ದ ಬಟ್ಟೆಗಳಿಂದ ಅಂದು ಇಂಕಾ ಜನರು ಯಾವ ರೀತಿಯ ಬಟ್ಟೆ ಉಡುತ್ತಿದ್ದರು ಎಂಬ ಬಗ್ಗೆ ಸ್ಥೂಲವಾದ ಪರಿಚಯ ದೊರಕುತ್ತದೆ.

Image courtesy

ಡಾಶಿ-ಡಾರ್ಜೋ-ಇಟಿಗಿಲೊವ್ (Dashi-Dorzho Itigilov)

ಡಾಶಿ-ಡಾರ್ಜೋ-ಇಟಿಗಿಲೊವ್ (Dashi-Dorzho Itigilov)

ರಷ್ಯಾದಲ್ಲಿದ್ದು ಬೌದ್ಧ ಧರ್ಮವನ್ನು ಅನುಸರಿಸುತ್ತಿದ್ದ ಈ ವ್ಯಕ್ತಿ ಪದ್ಮಾಸನದಲ್ಲಿ ಕುಳಿತು ಧ್ಯಾನದಲ್ಲಿ ಓಂಕಾರ ಹೇಳುತ್ತಿದ್ದ ಸಮಯದಲ್ಲಿಯೇ ಸಾವು ಕಂಡಿದ್ದ. ಅದರೆ ಸಾಯುವ ಮೊದಲು ತನ್ನ ಶಿಷ್ಯರಿಗೆ ತನ್ನ ಶವವನ್ನು ಹೂತ ಕೆಲವು ವರ್ಷಗಳ ಬಳಿಕ ಹೊರತೆಗೆಯುವಂತೆ ಸೂಚಿಸಿದ್ದ. ಅಂತೆಯೇ ಆತನ ಶವವನ್ನು ಹೊರತೆಗೆದ ಶಿಷ್ಯರಿಗೆ ಸಾಯುವಾಗ ಹೇಗಿತ್ತೂ ಹಾಗೇ ಕಂಡ ಗುರುವಿನ ಸಮಾಧಿಸ್ಥಿತಿಯನ್ನು ಕಂಡು ದಿಗ್ಭ್ರಮೆಗೊಳಗಾದರು.

Image courtesy

ಟೋಲುಂಡ್ ಮ್ಯಾನ್

ಟೋಲುಂಡ್ ಮ್ಯಾನ್

ಸುಮಾರು ಆರು ಸಾವಿರ ವರ್ಷಗಳಿಗೂ ಹಿಂದಿನ ಈ ಮಮ್ಮಿ ಪ್ರಶಾಂತವಾಗಿ ಮಲಗಿರುವ ಸ್ಥಿತಿಯಲ್ಲಿ ಕಂಡುಬಂದಿದ್ದು ಯಾವುದೇ ಸಂರಕ್ಷಗಳಿಲ್ಲದೇ ಕಡದೇ ಇರುವ ಸ್ಥಿತಿಯಲ್ಲಿ ಪ್ರಾಕ್ತನಶಾಸ್ತ್ರಜ್ಞರಿಗೆ 1950ರಲ್ಲಿ ಪೋಲ್ಯಾಂಡ್ ದೇಶದಲ್ಲಿ ಅಕಸ್ಮಾತ್ತಾಗಿ ಸಿಕ್ಕಿತ್ತು. ಸಿಕ್ಕಿದಾಗ ಇವರು ಈತನನ್ನು ಯಾರೋ ಇತ್ತೀಚೆಗೆ ಕೊಂದು ಶವವನ್ನು ಎಸೆದು ಹೋಗಿದ್ದಾರೆ ಎಂದು ತಿಳಿದಿದ್ದರು. ಆದರೆ ಕೂಲಂಕಶ ವಿಶ್ಲೇಷಣೆಯ ಬಳಿಕ ಈತನನ್ನು ಕ್ರಿ.ಪೂ ನಾಲ್ಕನೆಯ ಶತಮಾನದಲ್ಲಿ ನೇಣು ಹಾಕಿ ಕೊಲ್ಲಲಾಗಿತ್ತು ಎಂದು ತಿಳಿದುಬಂದಿದೆ.

Image courtesy

English summary

Bodies That Refused To Rot

We wish we could live forever and be remembered by the world always, right? However, this is something that we can only wish for. But, imagine if you were still around even after your death! In this article, we are here to share some of the weirdest cases of mummified bodies that have been preserved for the world to see.
X
Desktop Bottom Promotion