ಮೊದಲ ರಾತ್ರಿಯ-ವಿಚಿತ್ರ ಸಂಪ್ರದಾಯ! ಹೀಗೂ ಉಂಟೇ?

ಆಧುನಿಕತೆಯ ಭರಾಟೆ ವಿವಾಹದ ಸಂಪ್ರದಾಯಗಳನ್ನು ಕಡಿಮೆ ಸಮಯದಲ್ಲಿ ಮುಗಿಸಲು ಅವಸರಿಸಿದರೂ ಕೆಲವು ಸಂಪ್ರದಾಯಗಳು ಇಂದಿಗೂ ಹಿಂದಿನ ವಿಧಿಗಳನ್ನು ಉಳಿಸಿಕೊಂಡಿವೆ. ಬನ್ನಿ, ಇಂತಹ ಕೆಲವು ಅಚ್ಚರಿ ತರಿಸುವ ವಿಧಿಗಳ ಬಗ್ಗೆ ನೋಡೋಣ...

By: manu
Subscribe to Boldsky

ಭಾರತೀಯ ವಿವಾಹ ಪದ್ಧತಿಗಳು ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ವೈವಿಧ್ಯತೆಯಿಂದ ಕೂಡಿದೆ. ಕೆಲವು ಹತ್ತುದಿನಗಳ ದೀರ್ಘ ವಿವಾಹಗಳಾದರೆ ಕೆಲವು ಒಂದೇ ದಿನದಲ್ಲಿ ಪೂರ್ಣಗೊಳ್ಳುವ ವಿವಾಹಗಳಾಗಿವೆ. ಆದರೆ ವಿವಾಹದ ಬಳಿಕ ಪತಿ ಪತ್ನಿಯರು ಕಳೆಯುವ ಆಪ್ತ ಕ್ಷಣಗಳ ಪ್ರಥಮ ರಾತ್ರಿಯ ಸಂಪ್ರದಾಯವೂ ವೈವಿಧ್ಯತೆಯಿಂದ ಕೂಡಿದೆ. ಸುಹಾಗ್ ರಾತ್ ದಿನ ಹಾಲು ಕುಡಿಯುವುದರ ಮಹತ್ವ

ವಧೂವರರು ಕೋಣೆಗೆ ಅಡಿಯಿಡುವ ಮುನ್ನ ಹಳದಿ ಬೆರೆಸಿದ ನೀರು ಕುಡಿಯುವುದು, ಹಾಸಿಗೆಯಲ್ಲಿ ಕಡ್ಡಾಯವಾಗಿ ಬಿಳಿಯ ಬೆಡ್ ಶೀಟನ್ನೇ ಬಳಸುವುದು ಇತ್ಯಾದಿಗಳು ಅಚ್ಚರಿ ಮೂಡಿಸುತ್ತವೆ. ಕೆಲವು ಕಡೆಗಳಲ್ಲಿ ಈ ವಿಧಿ ವಿವಾಹದ ನಂತರದ ಒಂದು ನಿಗದಿತ ರಾತ್ರಿಯಂದು ನಡೆದರೆ ಉಳಿದೆಡೆ ವಿವಾಹದ ದಿನದಂದೇ ಈ ವಿಧಿಯನ್ನೂ ನಡೆಸಲಾಗುತ್ತದೆ. ನಿಮ್ಮ ಪ್ರಥಮ ರಾತ್ರಿಯನ್ನು ಮತ್ತಷ್ಟು ಮಧುರಗೊಳಿಸುವುದು ಹೇಗೆ?

ಇಡಿಯ ದಿನ ವಿವಾಹದ ವಿಧಿಗಳನ್ನು ನಿಭಾಯಿಸುತ್ತಾ, ಆಗಮಿಸಿದ ಅತಿಥಿ-ಸ್ನೇಹಿತರೊಂದಿಗೆ ಸಮಯ ಕಳೆದ ಬಳಿಕ ವಧೂವರರು ರಾತ್ರಿಯಾಗುತ್ತಿದ್ದಂತೆಯೇ ಅತೀವ ಸುಸ್ತಾಗಿರುತ್ತಾರೆ. ಕೆಲವು ಸಂಪ್ರದಾಯಗಳಲ್ಲಿ ವಧೂವರರು ವಿವಾಹದ ವಿಧಿಗಳು ಪೂರ್ಣವಾಗುವವರೆಗೆ ಊಟ ಮಾಡುವಂತಿಲ್ಲ. ಕೆಲವು ಮುಹೂರ್ತಗಳು ತೀರಾ ತಡವಾಗಿದ್ದು ಅಲ್ಲಿಯವರೆಗೆ ಕಾಯುವ ಮೂಲಕ ವಧೂವರರು ಇನ್ನಷ್ಟು ಸುಸ್ತಾಗುತ್ತಾರೆ.

ಇಂದು ಆಧುನಿಕತೆಯ ಭರಾಟೆ ವಿವಾಹದ ಸಂಪ್ರದಾಯಗಳನ್ನು ಕಡಿಮೆ ಸಮಯದಲ್ಲಿ ಮುಗಿಸಲು ಅವಸರಿಸಿದರೂ ಕೆಲವು ಸಂಪ್ರದಾಯಗಳು ಇಂದಿಗೂ ಹಿಂದಿನ ವಿಧಿಗಳನ್ನು ಉಳಿಸಿಕೊಂಡಿವೆ. ಬನ್ನಿ, ಇಂತಹ ಕೆಲವು ಅಚ್ಚರಿ ತರಿಸುವ ವಿಧಿಗಳ ಬಗ್ಗೆ ನೋಡೋಣ...

ಒಂದು ದೊಡ್ಡ ಲೋಟ ಹಾಲು ಕುಡಿಸುವುದು

ಪ್ರಸ್ತಕ್ಕೂ ಮುನ್ನ ವಧೂವರರು ಕಡ್ಡಾಯವಾಗಿ ಒಂದು ದೊಡ್ಡ ಲೋಟ ಹಾಲು ಕುಡಿಯಬೇಕು. ಅಂದರೆ ಒಂದೇ ಲೋಟದ ಹಾಲನ್ನು ಮೊದಲು ವರ ಕುಡಿದ ಬಳಿಕ ಉಳಿದ ಅರ್ಧವನ್ನು ವಧು ಕುಡಿಯಬೇಕು.

ಒಂದು ದೊಡ್ಡ ಲೋಟ ಹಾಲು ಕುಡಿಸುವುದು

ಇದರಿಂದ ಮುಂದಿನ ಜೀವನದ ಸುಖ ದುಃಖಗಳನ್ನು ಸಮಾನವಾಗಿ ಹಂಚಿಕೊಳ್ಳುವುದು ಸಾಂಕೇತಿಕವಾದರೆ ಪ್ರಥಮ ಮಿಲನಕ್ಕೆ ಹೆಚ್ಚಿನ ಶಕ್ತಿ ಪಡೆಯುವುದೂ ಇನ್ನೊಂದು ಕಾರಣವಾಗಿದೆ....

ಪಾನ್ ಜಗಿಯುವುದು

ಕೆಲವು ಸಂಪ್ರದಾಯಗಳಲ್ಲಿ ವಧೂವರರು ಕಡ್ಡಾಯವಾಗಿ ಮಿಲನಕ್ಕೂ ಮುನ್ನ ಪಾನ್ ಬೀಡಾವೊಂದನ್ನು ಜಗಿಯಬೇಕು. ಈ ವಿಧಿಗೆ ಕಾರಣವನ್ನು ಕೇಳಿದರೆ ಇದರಿಂದ ಬಾಯಿಯಲ್ಲಿ ವಾಸನೆ ಬರದೇ ವಧೂವರರು ಅಡ್ಡಿಯಿಲ್ಲದೇ ಮಿಲನಗೊಳ್ಳಬಹುದು ಎಂದು ಹಿರಿಯರು ಉತ್ತರಿಸುತ್ತಾರೆ.

ಪಾನ್ ಜಗಿಯುವುದು

ಆದರೆ ಇಂದು ಬಾಯಿವಾಸನೆ ತಡೆಯಲು ಉತ್ತಮವಾದ ವಿಧಾನಗಳಿರುವಾಗ ಪಾನ್ ಮೆಲ್ಲುವುದು ಅಗತ್ಯವಿದೆಯೇ?

ಕನ್ಯತ್ವದ ಪರೀಕ್ಷೆ!

ವಿವಾಹಿತ ವಧು ಕನ್ಯೆಯಾಗಿದ್ದಳೇ ಎಂಬುದನ್ನು ಪರೀಕ್ಷಿಸಲು ಇಂದಿಗೂ ಈ ವಿಧಾನವನ್ನು ಅನುಸರಿಸಲಾಗುತ್ತದೆ. ವಧೂವರರು ಪವಡಿಸುವ ಮಂಚಕ್ಕೆ ಬೆಳ್ಳಗಿನ ಬೆಡ್ ಶೀಟ್ ಅನ್ನು ಹಾಸಿರಲಾಗುತ್ತದೆ. ಮರುದಿನ ಬೆಳಿಗ್ಗೆ ಹಿರಿಯ ಮಹಿಳೆಯರು ಈ ಬೆಡ್ ಶೀಟನ್ನು ಪರೀಕ್ಷಿಸಿ ಇದರಲ್ಲಿ ರಕ್ತದ ಕಲೆಗಳನ್ನು ಹುಡುಕುತ್ತಾರೆ.  ಭಾರತೀಯರು ವಧುವಿನಲ್ಲಿ ಕನ್ಯತ್ವ ಬಯಸಲು ಕಾರಣಗಳೇನು?

ಕನ್ಯತ್ವದ ಪರೀಕ್ಷೆ!

ಇದರಲ್ಲಿ ಇದ್ದರೆ ಆಕೆ ಕನ್ಯೆ ಎಂದು ನಿರ್ಧರಿಸುತ್ತಾರೆ. ವಾಸ್ತವಕ್ಕೂ ಅನುಮಾನಕ್ಕೂ ತಾಳೆಯೇ ಇಲ್ಲದ ಈ ವಿಧಾನವನ್ನು ಇಂದಿಗೂ ಭಾರತದ ಹಲವೆಡೆ ಅನುಸರಿಸಲಾಗುತ್ತಿದೆ.

ಕಲೆಯಿರುವ ಬೆಡ್ ಶೀಟ್ ಪವಿತ್ರವೆಂಬ ಭಾವನೆ!

ಒಂದು ವೇಳೆ ಈ ಬೆಡ್ ಷೀಟ್ ನಲ್ಲಿ ನಿಜವಾಗಿಯೂ ರಕ್ತದ ಕಲೆಗಳಿದ್ದರೆ ಇದು ಆ ಜನರ ಪಾಲಿಗೆ ಪವಿತ್ರವಾದ ಬಟ್ಟೆಯಾಗಿದ್ದು ಇದನ್ನು ಸಂಭ್ರಮಿಸಲಾಗುತ್ತದೆ.ಈ ಬಟ್ಟೆಯನ್ನು ವರನ ತಾಯಿ ಒಗೆಯುವ ಮುನ್ನ ಇದನ್ನು ಪೂಜಿಸುತ್ತಾಳೆ.

ಕಲೆಯಿರುವ ಬೆಡ್ ಶೀಟ್ ಪವಿತ್ರವೆಂಬ ಭಾವನೆ!

ಈ ಪೂಜೆಯಿಂದ ತಮ್ಮ ಮನೆಗೆ ಸಂತಾನಭಾಗ್ಯ ಪ್ರಾಪ್ತವಾಗುವಂತೆ ಬೇಡಿಕೊಳ್ಳುತ್ತಾಳೆ. ಒಂದು ವೇಳೆ ಕಲೆ ಇಲ್ಲದಿದ್ದರೆ? ಸೊಸೆಯ ಪಾಡು ದೇವರೇ ಬಲ್ಲ...!!!

ಕಾಳ ರಾತ್ರಿ

ಪಶ್ಚಿಮ ಬಂಗಾಳ ರಾಜ್ಯದಲ್ಲಿ ಈ ವಿಧಿಯನ್ನು ಅನುಸರಿಸಲಾಗುತ್ತದೆ. ಅಂದರೆ ಪ್ರಥಮ ರಾತ್ರಿಯಂದು ವಧೂವರರನ್ನು ಪ್ರತ್ಯೇಕವಾಗಿರಿಸಲಾಗುತ್ತದೆ. ಇಬ್ಬರೂ ಇಡಿಯ ರಾತ್ರಿ ಒಬ್ಬರನ್ನೊಬ್ಬರು ನೋಡುವಂತೆಯೂ ಮಾತನಾಡುವಂತೆಯೂ ಇಲ್ಲ.

ಕಾಳ ರಾತ್ರಿ

ವಧು ಮರುದಿನ ಬೆಳಿಗ್ಗೆ ತನ್ನ ಕುಟುಂಬವನ್ನು ಸಂದರ್ಶಿಸಿ ತನ್ನ ಮುಂದಿನ ಜೀವನವನ್ನು ಪತಿಯ ಮನೆಯಲ್ಲಿ ಪತಿಯ ಜೊತೆಗೆ ಕಳೆಯುವುದಾಗಿ ಪ್ರತಿಜ್ಞೆ ಮಾಡಬೇಕು. ಆ ಬಳಿಕವೇ ಪತಿ ಪತ್ನಿಯರಿಗೆ ಮಿಲನದ ಅನುಮತಿ ದೊರಕುತ್ತದೆ.

 

Story first published: Saturday, November 5, 2016, 12:26 [IST]
English summary

Bizarre 'First Night' Rituals Of An Indian Wedding!

There are plentiful ceremonies and rituals that go around during the wedding season, which makes the couple feel exhausted by end of the day. But, having some prolonged after-wedding rituals definitely makes a couple feel even more tired. Find out more about some of these bizarre and weird practices that people still follow in India. We're sure some of these would totally surprise you...
Please Wait while comments are loading...
Subscribe Newsletter