For Quick Alerts
ALLOW NOTIFICATIONS  
For Daily Alerts

ವಾಸ್ತು ಪ್ರಕಾರ ಮನೆಯಲ್ಲಿ ಇಂತಹ ವಸ್ತುಗಳು ಇರಲೇಬಾರದು!

ವಾಸ್ತು ಪ್ರಕಾರ ಕೆಲವೊಂದು ವಸ್ತುಗಳನ್ನು ಮನೆಯ ಒಳಗಡೆ ಇಟ್ಟುಕೊಂಡರೆ ಮನೆಯ ಸುಖ, ನೆಮ್ಮದಿ ಹಾಳಾಗಿ ದಾರಿದ್ರ್ಯ ಬರುತ್ತದೆ ಎನ್ನಲಾಗುತ್ತಿದೆ. ಅಲ್ಲದೆ ಇಂತಹ ವಸ್ತುಗಳನ್ನು ಮನೆಯಲ್ಲಿ ಇಟ್ಟರೆ ಬಡತನ ಮತ್ತು ವೃತ್ತಿಯಲ್ಲೂ ಹಿನ್ನಡೆಯಾಗಬಹುದಂತೆ..

By Manu
|

ಮನೆ ಒಳಗಿನವರು ಹೇಗಿದ್ದಾರೆಂದು ಹೇಳಬೇಕಾದರೆ ಮನೆಯ ಅಂಗಳವನ್ನು ನೋಡಿದರೆ ಸಾಕು ಎಂದು ಹಿರಿಯರು ಹೇಳುತ್ತಾರೆ. ಆದರೆ ಇಂದಿನ ದಿನಗಳಲ್ಲಿ ಮನೆಯ ಅಂಗಳಗಳು ಹಳ್ಳಿಗಳಲ್ಲಿ ಮಾತ್ರ ಕಾಣಸಿಗುತ್ತದೆ. ನಗರಗಳಲ್ಲಿ ಅಪಾರ್ಟ್‌ಮೆಂಟ್ ಗಳಿಂದಾಗಿ ಅಂಗಳವೆನ್ನುವುದು ಏನೆಂದೇ ಮಕ್ಕಳಿಗೆ ತಿಳಿಯದಂತಾಗಿದೆ. ಅಪಾರ್ಟ್‌ಮೆಂಟ್‌ಗಳಲ್ಲಿ ವಾಸ ಮಾಡುತ್ತಿರುವವರು ಹೆಚ್ಚಾಗಿ ಪ್ರತಿಯೊಂದು ವಸ್ತುಗಳನ್ನು ಮನೆಯ ಒಳಗಡೆಯೇ ಇಟ್ಟಿರುತ್ತಾರೆ.

ಯಾಕೆಂದರೆ ಸ್ಥಳದ ಅಭಾವವೂ ಇದಕ್ಕೆ ಕಾರಣವಾಗಿದೆ. ಆದರೆ ವಾಸ್ತು ಪ್ರಕಾರವಾಗಿ ಕೆಲವೊಂದು ವಸ್ತುಗಳನ್ನು ಮನೆಯ ಒಳಗಡೆ ಇಟ್ಟುಕೊಂಡರೆ ಅದರಿಂದ ಮನೆಯ ಸುಖ, ನೆಮ್ಮದಿ ಹಾಳಾಗಿ ದಾರಿದ್ರ್ಯ ಬರುತ್ತದೆ ಎನ್ನಲಾಗುತ್ತಿದೆ. ಈ ಲೇಖನದಲ್ಲಿ ಮನೆಯ ಒಳಗಡೆ ಇಡಬಾರದ ಕೆಲವೊಂದು ವಸ್ತುಗಳ ಬಗ್ಗೆ ತಿಳಿಸಿಕೊಡಲಿದ್ದೇವೆ.

ಇಂತಹ ವಸ್ತುಗಳನ್ನು ಮನೆಯಲ್ಲಿ ಇಟ್ಟರೆ ಅದರಿಂದ ಬಡತನ ಬರಬಹುದು ಮತ್ತು ವೃತ್ತಿಯಲ್ಲೂ ಹಿನ್ನಡೆಯಾಗಬಹುದು. ನಿಮ್ಮ ಮನೆಯಲ್ಲಿ ಇಂತಹ ವಸ್ತುಗಳು ಇದ್ದರೆ ಅದನ್ನು ತಕ್ಷಣವೇ ಹೊರಹಾಕಿ. ಇಲ್ಲದಿದ್ದರೆ ನಿಮ್ಮ ಬದುಕಿನಲ್ಲೂ ದಾರಿದ್ರ್ಯ ಕಾಣಿಸಿಕೊಳ್ಳಬಹುದು. ಯಾವ ವಸ್ತುಗಳನ್ನು ಮನೆಯಲ್ಲಿ ಇಡಬಾರದು ಎಂದು ತಿಳಿಯಲು ಮುಂದೆ ಓದಿಕೊಂಡು ಮನೆಯೊಳಗೆ ಇದ್ದರೆ ಅದನ್ನು ಹೊರಹಾಕಿ...

ತುಳಸಿ ಗಿಡ

ತುಳಸಿ ಗಿಡ

ತುಳಸಿ ಗಿಡವು ಹಿಂದೂಗಳಿಗೆ ತುಂಬಾ ಪವಿತ್ರವೆಂದು ಹೇಳಲಾಗುತ್ತದೆ. ತುಳಸಿ ಗಿಡವನ್ನು ಮನೆಯ ಅಂಗಳದಲ್ಲಿ ಇಡಬೇಕು. ಮನೆಯ ಒಳಗಡೆ ಅದರಲ್ಲೂ ಮನೆಯ ದಕ್ಷಿಣ ಭಾಗದಲ್ಲಿ ಇದ್ದರೆ ಅದರಿಂದ ನಿಮಗೆ ಮತ್ತು ಕುಟುಂಬಕ್ಕೆ ದೊಡ್ಡ ಸಮಸ್ಯೆಯಾಗಬಹುದು. ದಕ್ಷಿಣ ಭಾಗದಲ್ಲಿ ತುಳಸಿ ಗಿಡವಿದ್ದರೆ ಅದನ್ನು ಈಗಲೇ ಅಲ್ಲಿಂದ ತೆಗೆಯಿರಿ.

ಶೂ ರ್ಯಾಕ್

ಶೂ ರ್ಯಾಕ್

ಮನೆಯ ಒಳಗಡೆ ಯಾವತ್ತೂ ಶೂ ಹಾಕಿಕೊಂಡು ಹೋಗಬೇಡಿ. ಶೂ ರ್ಯಾಕ್ ಇಡಲು ಮನೆಯ ಹೊರಗಡೆ ಜಾಗ ಮಾಡಿಕೊಳ್ಳಿ. ಇದರಿಂದ ಶೂವನ್ನು ಮನೆಯ ಒಳಗಡೆ ತರುವ ಪ್ರಮೇಯವೇ ಬರುವುದಿಲ್ಲ.

ಹಾಲಿನ ಪಾತ್ರೆ ಮುಚ್ಚಿಡಿ

ಹಾಲಿನ ಪಾತ್ರೆ ಮುಚ್ಚಿಡಿ

ಹಾಲಿನ ಪಾತ್ರೆಯನ್ನು ಯಾವಾಗಲೂ ಮುಚ್ಚಿಡಬೇಕೆಂದು ನೆನಪಿಡಿ. ಹಾಲು ಅಥವಾ ಹಾಲಿನ ಯಾವುದೇ ಉತ್ಪನವನ್ನು ಬಾಯಿ ಮುಚ್ಚದೆ ಹಾಗೆ ಇಡಬೇಡಿ. ಹಾಲು ಬಿಸಿಯಾಗಿದ್ದರೆ ಫ್ರಿಡ್ಜ್ ನಲ್ಲಿ ಇಡುವ ಮೊದಲು ಪಾತ್ರೆಯ ಬಾಯಿಮುಚ್ಚಿಕೊಳ್ಳಿ.

ಸ್ವಚ್ಛತೆಗೆ ಆದ್ಯತೆ ನೀಡಿ...

ಸ್ವಚ್ಛತೆಗೆ ಆದ್ಯತೆ ನೀಡಿ...

ಮನೆಯನ್ನು ಯಾವಾಗಲೂ ಸ್ವಚ್ಛ ಮಾಡಿಕೊಳ್ಳುತ್ತಾ ಇರಿ ಮತ್ತು ಆದಷ್ಟು ಜೇಡ ಬಲೆಯನ್ನು ತೆಗೆಯಿರಿ. ಮನೆಯು ಅಸ್ತವ್ಯಸ್ತವಾಗಿರದಂತೆ ನೋಡಿಕೊಂಡರೆ ತುಂಬಾ ಒಳ್ಳೆಯದು.

ಬಾಡಿದ ಹೂಗಳು

ಬಾಡಿದ ಹೂಗಳು

ಬೆಳಿಗ್ಗೆ ನೀವು ದೇವರಿಗೆ ಹೂವಿನಿಂದ ಅಲಂಕಾರ ಮಾಡಿದ ಬಳಿಕ ಸಂಜೆ ವೇಳೆ ಆ ಹೂಗಳು ಬಾಡಿ ಹೋಗುತ್ತದೆ. ಇದರಿಂದ ಸಂಜೆಯಾದ ಬಳಿಕ ಹೂವುಗಳನ್ನು ತೆಗೆಯಿರಿ. ಬಾಡಿದ ಹೂವುಗಳು ಮನೆಯಲ್ಲಿ ನಕಾರಾತ್ಮಕ ಪರಿಣಾಮ ಉಂಟು ಮಾಡುತ್ತದೆ.

ಮುಳ್ಳಿನ ಗಿಡಗಳು

ಮುಳ್ಳಿನ ಗಿಡಗಳು

ಹೆಚ್ಚಿನವರು ಅಲಂಕಾರಕ್ಕಾಗಿ ಪಾಪಸು ಕಳ್ಳಿಯಂತಹ ಮುಳ್ಳಿನ ಗಿಡಗಳನ್ನು ಮನೆಯೊಳಗೆ ಇಡುತ್ತಾರೆ. ಇದರಿಂದ ಬಡತನ ಬರಬಹುದು ಮತ್ತು ಮನೆಯ ಸದಸ್ಯರಿಗೆ ಅನಾರೋಗ್ಯ ಉಂಟಾಗಬಹುದು. ಇದು ತುಂಬಾ ಅಸುರಕ್ಷಿತವೆಂದು ನಂಬಲಾಗಿದೆ.

ಅಶ್ವತ್ಥ ಮರ

ಅಶ್ವತ್ಥ ಮರ

ಅಶ್ವತ್ಥ ಮರದ ಕಟ್ಟೆಗೆ ಸುತ್ತು ಬರುತ್ತೇವೆ. ಇದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಆದರೆ ಇದರಲ್ಲಿ ದುಷ್ಟಶಕ್ತಿಗಳು ಕೂಡ ನೆಲೆನಿಲ್ಲುತ್ತದೆಯಂತೆ. ಅಶ್ವತ್ಥ ಗಿಡವು ಮನೆಯೊಳಗೆ ಇದ್ದರೆ ಕುಟುಂಬದ ಸದಸ್ಯರಿಗೆ ಯಾವಾಗ ನೋಡಿದರೂ ಚಿಂತೆ ಮತ್ತು ಭಯ ಆವರಿಸಿಕೊಂಡಿರುತ್ತದೆ.

English summary

Avoid Keeping These Things At Home

Find out about these things that you totally need to avoid or throw away from your house immediately. Read on to know more and make sure you avoid keeping these things at home or store them as suggested here.
X
Desktop Bottom Promotion