For Quick Alerts
ALLOW NOTIFICATIONS  
For Daily Alerts

ಕಣ್ಣಲ್ಲಿ ಕಣ್ಣೀರು ತರಿಸುವ ಪ್ರೇಮಿಗಳ 'ಪ್ರೇಮ ಕಥೆ' ಇದು.....

By Manu
|

ಪ್ರೇಮಕಥೆ ಎನ್ನಬೇಕಾದರೆ ಒಂದು ಗಂಡು ಒಂದು ಹೆಣ್ಣು ಮತ್ತು ಇವರ ನಡುವಣ ಪ್ರೀತಿಗೆ ಯಾವುದಾದರೊಂದು ಅಡ್ಡಿ ಇರಲೇಬೇಕು. ಆಗಲೇ ಸಿನಿಮಾ ಮೂರು ಗಂಟೆಯವರೆಗೆ ವಿಸ್ತರಿಸಲು ಸಾಧ್ಯ. ಆದರೆ ವಾಸ್ತವ ಜೀವನದಲ್ಲಿ ಪ್ರೀತಿಗಾಗಿ ಹಲವು ಸವಾಲುಗಳನ್ನು ಎದುರಿಸಿ, ತನ್ನದನ್ನು ಕಳೆದುಕೊಂಡು, ಒಗ್ಗದ್ದನ್ನು ಅನಿವಾರ್ಯವಾಗಿ ಸ್ವಾಗತಿಸಿ ಇದಕ್ಕೆ ಒಗ್ಗಿಕೊಂಡು ತನ್ನ ಪ್ರೀತಿಯನ್ನು ಗೆಲ್ಲಬೇಕಾಗುತ್ತದೆ. ಪ್ರತಿಯೊಬ್ಬರು ಓದಲೇಬೇಕಾದ ಸ್ಟೋರಿ ಇದು

ಇಂದಿನ ಲೇಖನದಲ್ಲಿ ಇಂತಹದ್ದೇ ಒಂದು ಪ್ರೇಮಕಥೆಯನ್ನು ನಿಮ್ಮ ಮುಂದಿಡುತ್ತಿದ್ದೇವೆ. ಈ ಕಥೆಯ ನಾಯಕ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಓರ್ವ ಯೋಧ.... ಮುಂದೆ ಓದಿ....

ಅವರು ಒಬ್ಬರನ್ನೊಬ್ಬರು ಸಂಧಿಸಿದರು

ಅವರು ಒಬ್ಬರನ್ನೊಬ್ಬರು ಸಂಧಿಸಿದರು

ಈತ ಕಲಿಯುತ್ತಿದ್ದ ಶಾಲೆಯಲ್ಲಿಯೇ ಆಕೆಯೂ ಕಲಿಯುತ್ತಿದ್ದಳು. ಸಲಿಗೆ ಸ್ನೇಹಕ್ಕೆ ಬದಲಾಗಿ, ಸ್ನೇಹ ನಿಧಾನವಾಗಿ ಪ್ರೀತಿಯ ರೂಪ ಪಡೆದುಕೊಂಡಿತು. ಆದರೆ ಇಬ್ಬರೂ ಬೇರೆ ಬೇರೆ ಜಾತಿಗೆ ಸೇರಿದವರಾಗಿದ್ದರು. ಆದರೆ ಇವರ ಪ್ರೀತಿ ಈ ಎಲ್ಲೆಗಳನ್ನೆಲ್ಲಾ ಮೀರಿ ಬೆಳೆಯಿತು. ಒಬ್ಬರನ್ನೊಬ್ಬರು ಬಿಟ್ಟಿರಲಾರದ ಸ್ಥಿತಿಗೂ ಬಂದರು.

ಮನೆಯವರಿಂದ ವಿರೋಧ

ಮನೆಯವರಿಂದ ವಿರೋಧ

ಎಲ್ಲವೂ ಸುಸೂತ್ರವಾಗಿದ್ದರೆ ಇದು ಪ್ರೇಮಕಥೆಯಾಗುತ್ತಿರಲಿಲ್ಲ. ಇವರ ಬದುಕಿನಲ್ಲಿಯೂ ಹೀಗೇ ಆಯ್ತು. ಇಬ್ಬರ ಮನೆಯವರಿಗೂ ಈ ವಿಷಯ ಗೊತ್ತಾಯಿತು. ನಾಯಕನ ಜಾತಿ ನಾಯಕಿಯ ಜಾತಿಗಿಂತಲೂ ಸಮಾಜದಲ್ಲಿ ಕೆಳವರ್ಗದ್ದೆಂದು ಪರಿಗಣಿಸಲ್ಪಡುತ್ತಿತ್ತು.

ಮನೆಯವರಿಂದ ವಿರೋಧ

ಮನೆಯವರಿಂದ ವಿರೋಧ

ಇದೇ ಕಾರಣಕ್ಕೆ ನಾಯಕನ ಮನೆಯವರಿಗೆ ನಾಯಕಿಯ ಮನೆಯವರು ಒಪ್ಪುತ್ತಾರೋ ಎಂಬ ಅನುಮಾನವಿತ್ತು.ನಾಯಕಿಯ ಮನೆಯವರಿಗೂ ಕೆಳಜಾತಿಯ ಮನೆಗೆ ಮಗಳನ್ನು ಕೊಡಲು ಇಷ್ಟವಿರಲಿಲ್ಲ. ಆದರೆ ಇಬ್ಬರೂ ಒಬ್ಬರ ಮೇಲೆ ಇನ್ನೊಬ್ಬರು ಪ್ರಾಣವನ್ನೇ ಇರಿಸಿರವುದು ಮನದಟ್ಟಾಗುತ್ತಿದ್ದಂತೆಯೇ ಎರಡೂ ಮನೆಯವರು ಮೆತ್ತಗಾದರು.

ನಾಯಕನಿಗೆ ಸೇನಿಯಿಂದ ಕರೆ

ನಾಯಕನಿಗೆ ಸೇನಿಯಿಂದ ಕರೆ

ಆದರೆ ಇದೇ ಸಮಯದಲ್ಲಿ ಯೋಧನಿಗೆ ತಕ್ಷಣ ಬರುವಂತೆ ಕರೆ ಬಂದಿತ್ತು. ಉತ್ತರ ಭಾರತದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದುವ ಕಾರಣ ಎಲ್ಲಾ ಸೈನಿಕರನ್ನು ತುರ್ತಾಗಿ ಕರೆಯಲಾಗಿತ್ತು.

ತರಾತುರಿಯಲ್ಲಿ ನಿಶ್ಚಿತಾರ್ಥ...

ತರಾತುರಿಯಲ್ಲಿ ನಿಶ್ಚಿತಾರ್ಥ...

ಈಗ ಹೋದರೆ ಒಂದು ವರ್ಷ ಬರಲು ಸಾಧ್ಯವಿಲ್ಲ ಎಂದು ಅರಿತಿದ್ದ ಯೋಧ ಆಗಲೇ ತಾನು ಆಕೆಯನ್ನು ಮದುವೆಯಾಗುವ ಘೋಷಣೆಯನ್ನು ಮಾಡಿ ತಕ್ಷಣವೇ ನಿಶ್ಚಿತಾರ್ಥವನ್ನೂ ಮಾಡಿಬಿಟ್ಟ. ಮುಂದಿನ ವರ್ಷ ಬಂದಾಗ ಮದುವೆಯಾಗುವುದು ಎಂದೂ ತೀರ್ಮಾನವಾಯಿತು.

ವಿಧಿಯಾಟ ಬೇರೆಯಾಗಿತ್ತು

ವಿಧಿಯಾಟ ಬೇರೆಯಾಗಿತ್ತು

ಯೋಧ ಸೇನೆಗೆ ತೆರಳಿ ಕೆಲವು ತಿಂಗಳಾಗಿತ್ತಷ್ಟೇ, ಇತ್ತ ನಾಯಕಿ ತನ್ನ ಸ್ಕೂಟಿಯಲ್ಲಿ ಸಾಗುತ್ತಿದ್ದಾಗ ಭೀಕರ ಅಪಘಾತಕ್ಕೆ ಒಳಗಾದಳು. ತಲೆಗೆ ಬಿದ್ದ ಭಾರೀ ಏಟಿನ ಕಾರಣ ಸಾಯುವುದು ಕೂದಲೆಳೆಯ ಅಂತರದಲ್ಲಿ ತಪ್ಪಿದರೂ ನೇರವಾಗಿ ಕೋಮಾ ಸ್ಥಿತಿಗೆ ತಲುಪಿದಳು. ಮುಖ ನೆಲಕ್ಕೆ ಉಜ್ಜಿದ ಪರಿಣಾಮವಾಗಿ ಮೂಡಿದ ಭಾರೀ ಗಾಯದ ಗುರುತುಗಳು ಸ್ವತಃ ಆಕೆಯನ್ನೇ ಭೀತಿಪಡಿಸುವಷ್ಟು ಭೀಕರವಾಗಿತ್ತು.

ಒಂದು ದಿನ ಆಕೆ ನಿದ್ದೆಯಿಂದೆದ್ದಳು

ಒಂದು ದಿನ ಆಕೆ ನಿದ್ದೆಯಿಂದೆದ್ದಳು

ಎಷ್ಟೋ ದಿನ ಕೋಮಾ ಸ್ಥಿತಿಯಲ್ಲಿದ್ದ ಬಳಿಕ ಒಂದು ದಿನ ಆಕೆ ನಿಧಾನವಾಗಿ ಎಚ್ಚರಾದಳು. ಆ ಸಮಯದಲ್ಲಿ ಆಕೆಯ ತಂದೆ ತಾಯಿಯರು ಹಾಸಿಗೆಯ ಪಕ್ಕದಲ್ಲಿದ್ದರು. ಈಕೆ ಜೀವಂತವಾಗಿ ಬಂದ ಬಗ್ಗೆ ಆನಂದಭಾಷ್ಪ ಸುರಿಯುತ್ತಿದ್ದರೂ ಇದರೊಂದಿಗೆ ಮುಂದೆ ಕುರೂಪಿಯಾಗಿರುವ ಈಕೆಯನ್ನು ಯಾರು ಮದುವೆಯಾಗುತ್ತಾರೆ ಎಂಬ ಅಳುಕಿನ ಕಣ್ಣೀರೂ ಆನಂದಭಾಷ್ಪದೊಂದಿಗೆ ಬೆರೆತಿತ್ತು.

ತಾನು ಒಂಟಿಯಾಗಿ ಜೀವನ ಸಾಗಿಸಬಯಸಿದಳು

ತಾನು ಒಂಟಿಯಾಗಿ ಜೀವನ ಸಾಗಿಸಬಯಸಿದಳು

ತನ್ನ ಮುಖವನ್ನು ಕನ್ನಡಿಯಲ್ಲಿ ನೋಡಿಕೊಂಡಾಗ ಆಕೆಗೆ ಧರೆಯೇ ತಲೆಯ ಮೇಲೆ ಉರುಳಿದಂತಾಯ್ತು. ತನ್ನ ಮುಖದೊಂದಿಗೆ ತನ್ನ ಜೀವನವೇ ಕೊನೆಗೊಂಡಿದೆ ಎಂದು ಆಕೆ ಭಾವಿಸಿದಳು. ತನ್ನನ್ನು ಅಪಾರವಾಗಿ ಪ್ರೀತಿಸಿದ ಯೋಧ ಸುಂದರವಾಗಿರುವ ಇನ್ನೊಬ್ಬಳನ್ನು ವರಿಸಿ ಸುಖವಾಗಿರಲಿ ಎಂದು ಹಾರೈಸಿದಳು.

ಫೋನ್ ಸ್ವೀಕರಿಸುತ್ತಲೂ ಇರಲಿಲ್ಲ

ಫೋನ್ ಸ್ವೀಕರಿಸುತ್ತಲೂ ಇರಲಿಲ್ಲ

ಈ ನಿರ್ಧಾರದ ಬಳಿಕ ಈಕೆ ಆತನ ಫೋನ್ ಸ್ವೀಕರಿಸುತ್ತಲೂ ಇರಲಿಲ್ಲ, ಆತನ ಪತ್ರಗಳಿಗೂ ಉತ್ತರಿಸುತ್ತಿರಲಿಲ್ಲ. ಪ್ರತಿ ಬಾರಿ ಆತನ ಯಾವುದೇ ಸಂದೇಶ ಬಂದಾಗ ತಾನು ಆ ದಿನ ಅಪಘಾತದಲ್ಲಿ ಸತ್ತಿದ್ದರೇ ಚೆನ್ನಿತ್ತು ಎಂದು ಸದಾ ಅನ್ನಿಸುತ್ತಿತ್ತು.

ಒಂದು ದಿನ ಆತನ ಬರುವಿಕೆಯ ಸಂದೇಶ ಬಂತು

ಒಂದು ದಿನ ಆತನ ಬರುವಿಕೆಯ ಸಂದೇಶ ಬಂತು

ಒಂದು ದಿನ ಸಂತೋಷದಿಂದ ಓಡೋಡಿ ಬಂದ ಆಕೆಯ ತಾಯಿ "ಆತ ಬರುತ್ತಿದ್ದಾನೆ, ನಿನ್ನನ್ನೇ ಮದುವೆಯಾಗುತ್ತಾನಂತೆ" ಎಂಬ ಸುದ್ದಿಯನ್ನು ಮುಟ್ಟಿಸಿದಳು. ಈ ಸುದ್ದಿಯನ್ನು ಈಕೆ ನಂಬಲಿಕ್ಕೇ ತಯಾರಿರಲಿಲ್ಲ. ಆದರೆ ಆತ ತನ್ನ ಮದುವೆಯ ದಿನಾಂಕವನ್ನೂ ನಿಗದಿಪಡಿಸಿ ಪತ್ರಿಕೆಯನ್ನೂ ಮುದ್ರಿಸಿ ಖಚಿತ ವಾರ್ತೆಯನ್ನು ಕಳುಹಿಸಿದ್ದನ್ನು ತಿಳಿಸಿದ ಆಕೆಯ ತಾಯಿ ಪತ್ರಿಕೆಯನ್ನೂ ಆಕೆಯ ಕೈಗೆ ನೀಡಿದಳು. ಪತ್ರಿಕೆಯಲ್ಲಿ ತನ್ನ ಹೆಸರನ್ನೂ, ಸಂತೋಷದ ಭರದಲ್ಲಿ ಕುಣಿಯುತ್ತಿದ್ದ ತನ್ನ ತಾಯಿಯನ್ನೂ ಒಂದು ಕ್ಷಣ ಅರ್ಥವಾಗದೇ ಪಿಳಿಪಿಳಿ ದಿಟ್ಟಿಸಿದಳು.

ಆಕೆಗೆ ಹೃದಯವೇ ಬಾಯಿಗೆ ಬಂದಂತಾಯ್ತು!

ಆಕೆಗೆ ಹೃದಯವೇ ಬಾಯಿಗೆ ಬಂದಂತಾಯ್ತು!

ಇದರ ಹಿಂದೆಯೇ ಆ ಯೋಧ ಒಂದು ಸುಂದರ ಹೂವುಗಳ ಗುಚ್ಛವನ್ನು ಹಿಡಿದು ಕೋಣೆಯನ್ನು ಪ್ರವೇಶಿಸಿದ. ಕಣ್ಣುಗಳಲ್ಲಿ ಅದೇ ಹೊಳಪು, ಮೊಗದಲ್ಲಿ ಅದೇ ಹಿಂದಿನ ನಗುವಿನೊಂದಿಗೆ. ಈಕೆ ಆತನಿಂದ ತನ್ನ ಮುಖವನ್ನು ಮುಚ್ಚಿಕೊಳ್ಳಲು ಯತ್ನಿಸಿದರೂ ಆತ ಅದಕ್ಕೆ ಅವಕಾಶ ಕೊಡದೇ ಆಕೆಯ ಮುಖವನ್ನು ತನ್ನ ಬೊಗಸೆಯಲ್ಲಿ ಹಿಡಿದು ನೀನೇನೂ ಹೇಳುವುದು ಬೇಡ, ನಿನ್ನ ಮುಖದ ಚಿತ್ರವನ್ನು ನಿನ್ನ ತಾಯಿ ಸತತವಾಗಿ ನನಗೆ ಕಳುಹಿಸಿ ಕೊಡುತ್ತಿದ್ದರು, ಆದ್ದರಿಂದ ನನ್ನ ಮನದಲ್ಲಿ ನಿನ್ನ ಚಿತ್ರ ಅಚ್ಚಳಿಯದೇ ನಿಂತಿದೆ, ಎಂದ.

ಆತನ ಪಾಲಿಗೆ ಆಕೆ ಇಂದಿಗೂ ಹಿಂದಿನಷ್ಟೇ ಸುಂದರಳು

ಆತನ ಪಾಲಿಗೆ ಆಕೆ ಇಂದಿಗೂ ಹಿಂದಿನಷ್ಟೇ ಸುಂದರಳು

ತಾನು ಪ್ರತಿ ಬಾರಿ ಅಕೆಯ ವಿರೂಪಗೊಂಡ ಚಿತ್ರವನ್ನು ನೋಡಿದಾಗಲೂ ಇದು ತನ್ನ ಪ್ರೇಮವನ್ನು ಇನ್ನಷ್ಟು ಗಟ್ಟಿಯಾಗಿಸುತ್ತಾ ಹೋಯಿತೇ ಹೊರತು ಕಡಿಮೆಯಾಗಿಸಲಿಲ್ಲ. ಏಕೆಂದರೆ ಒಂದು ವೇಳೆ ಮದುವೆಯಾದ ಬಳಿಕ ಈ ಅಪಘಾತ ನಡೆದಿದ್ದರೂ ತನ್ನ ಪ್ರೀತಿ ಕಡಿಮೆಯಾಗುತ್ತಿತ್ತೇ? ಅಷ್ಟಕ್ಕೂ ಕೇವಲ ಬಾಹ್ಯ ರೂಪದಲ್ಲಿ ಕೊಂಚ ಕಡಿಮೆಯಾದರೆ ಅಪಾರವಾದ ತನ್ನ ಪ್ರೀತಿ ಕಡಿಮೆಯಾಗುವುದೇ?

ಆತನ ಪಾಲಿಗೆ ಆಕೆ ಇಂದಿಗೂ ಹಿಂದಿನಷ್ಟೇ ಸುಂದರಳು

ಆತನ ಪಾಲಿಗೆ ಆಕೆ ಇಂದಿಗೂ ಹಿಂದಿನಷ್ಟೇ ಸುಂದರಳು

ಅಷ್ಟಕ್ಕೂ ಬರೆಯ ಮುಖದ ರೂಪ ಕಳೆದುಕೊಂಡ ಮಾತ್ರಕ್ಕೆ ಪ್ರೀತಿಯನ್ನೂ ಕಳೆದುಕೊಂಡೆ ಎಂದು ಆಕೆ ತನ್ನನ್ನು ಕೇಳದೇ ಹೇಗೆ ತೀರ್ಮಾನ ತೆಗೆದುಕೊಂಡಳು ಎಂದೆಲ್ಲಾ ವಿಚಾರಿಸಿದ ಆತ, ಈಗಲೂ ನೀನು ನನ್ನ ಪಾಲಿಗೆ ಮೊದಲಿಗಿಂತಲೂ ಹೆಚ್ಚು ಸುಂದರವಾಗಿದ್ದೀಯಾ ಎಂದ. ಆಕೆ ದುಃಖ ತಡೆಯಲಾರದೇ ಆತನನ್ನು ಬಿಗಿಯಾಗಿ ಅಪ್ಪಿ ತನ್ನ ಅಷ್ಟೂ ದಿನದ ದುಃಖವನ್ನು ಧಾರೆಯಾಗಿ ಹರಿಸಿದಳು. ನಂತರ ಅವರು ಮದುವೆಯಾಗಿ ಸುಖವಾಗಿದ್ದರು.

ಇದು ನಿಜವಾದ ಕಥೆ.....

ಇದು ನಿಜವಾದ ಕಥೆ.....

ಹೇಗೆನಿಸಿತು ಈ ಪ್ರೇಮಕಥೆ? ಈ ಜಗತ್ತಿನಲ್ಲಿ ಅತ್ಯಂತ ಬೆಲೆಬಾಳುವುದು ಏನೆಂದರೆ ಅದೇ ನಿಃಸ್ವಾರ್ಥ ಪ್ರೇಮ! ಅಂದ ಹಾಗೆ, ಇದು ನಿಜವಾದ ಕಥೆ.

English summary

An Unconditional Love Story...

Here, in this article, we are sharing an inspirational, true love story of a military man and the things that have changed in his love life. This story can makes you realise that love is something which is purely unconditional and there is nothing that can hamper it if the feelings for each other always remains true. Check out this most amazing, inspirational love story of life that can bring a smile onto your face.
X
Desktop Bottom Promotion