For Quick Alerts
ALLOW NOTIFICATIONS  
For Daily Alerts

ನಂಬುತ್ತೀರೋ ಬಿಡುತ್ತೀರೋ, ಇಲ್ಲಿ ಪ್ರೇತ-ಭೂತಗಳದ್ದೇ ಕಾಟವಂತೆ!

By Hemanth
|

ದೇವರನ್ನು ನಂಬಿದವರು ಭೂತಪ್ರೇತಗಳನ್ನು ಕೂಡ ನಂಬಲೇಬೇಕಾಗುತ್ತದೆ ಎನ್ನುವ ಮಾತಿದೆ. ಪ್ರೇತಭಾದೆ ಇರುವ ಬಗ್ಗೆ ನಾವು ಹಲವಾರು ಘಟನೆಗಳಿಂದ ತಿಳಿದುಕೊಂಡಿದ್ದೇವೆ. ಇಂತಹ ಕೆಲವೊಂದು ಘಟನೆಗಳು ನಡೆಯುತ್ತಲೇ ಇರುತ್ತದೆ. ಕೆಲವರು ಇದನ್ನು ಮೂಢನಂಬಿಕೆ ಎಂದರೆ ಇನ್ನು ಕೆಲವರು ಇದು ನಿಜವೆನ್ನುತ್ತಾರೆ. ಪ್ರಸಿದ್ಧ ಹೋಟೆಲ್‌ಗಳು, ಈಗ ಭೂತದ ಕಾಟದಿಂದ ನಲುಗುತ್ತಿದೆ!

ಭಾರತದಲ್ಲಿ ಪ್ರೇತಭಾದೆಯಿರುವ ಹಲವಾರು ಪ್ರದೇಶಗಳ ಬಗ್ಗೆ ಕೇಳಿದ್ದೇವೆ. ಇದು ನಮ್ಮ ರಾತ್ರಿಯ ನಿದ್ರೆ ಕೆಡಿಸಿರುವುದರಲ್ಲಿ ಯಾವುದೇ ಸಂಶಯವಿಲ್ಲ. ಇದು ಸುಳ್ಳು ಅಥವಾ ಸತ್ಯ ಎಂದು ಒಪ್ಪಿಕೊಳ್ಳುವುದು ನಿಮಗೆ ಬಿಟ್ಟಿರುವ ವಿಚಾರ. ಭೂತ- ಪ್ರೇತಗಳು ಬರೀ ಭ್ರಮೆಯಂತೆ! ನಂಬುತ್ತೀರಾ?

ಈ ಲೇಖನದಲ್ಲಿ ರಾಜಸ್ಥಾನದ ಜೈಸಲ್ಮರ್ ಜಿಲ್ಲೆಯಲ್ಲಿರುವ ಪ್ರೇತಭಾದಿತ ಗ್ರಾಮವಾಗಿರುವ ಕುಲ್ದಾರ್ ಬಗ್ಗೆ ತಿಳಿಸಿಕೊಡಲಿದ್ದೇವೆ. ಚಿತ್ರಗಳನ್ನು ನೋಡಿದರೆ ಈ ಪ್ರದೇಶದಲ್ಲಿ ಏನಾಗಿದೆಯೋ ಎನ್ನುವ ಭೀತಿ ನಿಮ್ಮನ್ನು ಕಾಡಬಹುದು. ಈ ಗ್ರಾಮದ ಬಗ್ಗೆ ಇರುವ ಕಥೆಯ ಬಗ್ಗೆ ತಿಳಿದುಕೊಳ್ಳಿ.

ಇದು ಎಲ್ಲಿದೆ?

ಇದು ಎಲ್ಲಿದೆ?

ಜೈಸಲ್ಮರ್ ಜಿಲ್ಲೆಯಿಂದ 18 ಕಿ.ಮೀ. ನೈಋತ್ಯದಲ್ಲಿರುವ ಸಣ್ಣ ಹಳ್ಳಿ ಇದಾಗಿದೆ. ಗ್ರಾಮದ ಸಮುದಾಯವು ಸುಮಾರು 85 ಹಳ್ಳಿಗಳನ್ನು ಒಳಗೊಂಡಿದೆ. 1291ರಲ್ಲಿ ಈ ಗ್ರಾಮವನ್ನು ಪಾಲಿವಾಲ್ ಬ್ರಾಹ್ಮಣರು ಮೊದಲ ಸಲ ನಿರ್ಮಿಸಿದ್ದರು.

ಹಳ್ಳಿಯರು ಏನು ಮಾಡುತ್ತಲಿದ್ದರು?

ಹಳ್ಳಿಯರು ಏನು ಮಾಡುತ್ತಲಿದ್ದರು?

ಈ ಗ್ರಾಮಸ್ಥರು ತುಂಬಾ ಪರೋಪಕಾರಿಗಳಾಗಿದ್ದರು ಮತ್ತು ಒಳ್ಳೆಯ ವ್ಯಾಪಾರಸ್ಥರು ಹಾಗೂ ರೈತರಾಗಿದ್ದರು. ಗ್ರಾಮದ ರೈತರು ಎಷ್ಟು ಬುದ್ದಿವಂತರಾಗಿದ್ದರು ಎಂದರೆ ರಾಜಸ್ಥಾನದಂತಹ ಶುಷ್ಕ ವಾತಾವರಣವಿದ್ದ ಪ್ರದೇಶದಲ್ಲೂ ಹೆಚ್ಚು ನೀರಿನ ಅಗತ್ಯವಿರುವ ಗೋಧಿಯನ್ನು ಬೆಳೆಯುತ್ತಲಿದ್ದರು.

ಗ್ರಾಮದ ಜನರಿಗೆ ಏನಾಯಿತು?

ಗ್ರಾಮದ ಜನರಿಗೆ ಏನಾಯಿತು?

ಈ ಗ್ರಾಮದಲ್ಲಿ ಅಥವಾ ಇದರ ಆಸುಪಾಸಿನ ಸುಮಾರು 85 ಗ್ರಾಮಗಳಲ್ಲಿ ಯಾರೂ ವಾಸಮಾಡುತ್ತಿಲ್ಲ. ಯಾಕೆಂದರೆ ಈ ಗ್ರಾಮವನ್ನು ಪ್ರೇತಭಾದೆಯಿರುವ ಗ್ರಾಮವೆಂದು ನಂಬಲಾಗಿದೆ. 1825ರಲ್ಲಿ ಒಂದೇ ರಾತ್ರಿ ಇಲ್ಲಿನ ಕುಟುಂಬಗಳೆಲ್ಲವೂ ಗ್ರಾಮವನ್ನು ಬಿಟ್ಟು ತೆರಳಿದ್ದವು.

ರಕ್ಷಾಬಂಧನದ ದಿನ ಗ್ರಾಮ ತೊರೆದರು

ರಕ್ಷಾಬಂಧನದ ದಿನ ಗ್ರಾಮ ತೊರೆದರು

ಪಲಿವಾಲ್ ಬ್ರಾಹ್ಮಣರು ರಕ್ಷಾಬಂಧನದ ದಿನ ಗ್ರಾಮವನ್ನು ತೊರೆದ ಹಿನ್ನೆಲೆಯಲ್ಲಿ ಇಂದಿಗೂ ಅವರು ರಕ್ಷಾಬಂಧನವನ್ನು ಆಚರಿಸುವುದಿಲ್ಲ. ಗ್ರಾಮವನ್ನು ಯಾಕೆ ತೊರೆದರು ಎನ್ನುವ ಬಗ್ಗೆ ಯಾವುದೇ ಸುಳಿವು ಅಥವಾ ದಾಖಲೆ ಸಿಕ್ಕಿಲ್ಲ.

ಇತಿಹಾಸ ತಜ್ಞರ ಪ್ರಕಾರ

ಇತಿಹಾಸ ತಜ್ಞರ ಪ್ರಕಾರ

ಜೈಸಲ್ಮರ್ ನ ದಿವಾನ್ ಆಗಿರುವಂತಹ ಸಲೀಂ ಸಿಂಗ್ ಎಂಬಾತನಿಗೆ ಗ್ರಾಮದ ಮುಖ್ಯಸ್ಥನ ಮಗಳ ಕಡೆ ಆಕರ್ಷಣೆ ಉಂಟಾಯಿತು. ಆಕೆ ಗ್ರಾಮದಲ್ಲಿದ್ದ ಅತ್ಯಂತ ಸುಂದರ ಯುವತಿಯಾಗಿದ್ದಳು. ಆಕೆಯನ್ನು ಪಡೆಯಲು ಆತ ತುಂಬಾ ಕೆಳಮಟ್ಟದ ಮಾರ್ಗವನ್ನು ಅನುಸರಿಸಿದ್ದ ಎನ್ನಲಾಗುತ್ತಿದೆ.

ಇದು ಮುಂದುವರಿಯಿತು.....

ಇದು ಮುಂದುವರಿಯಿತು.....

ತನ್ನ ಆಯ್ಕೆಯ ಹುಡುಗಿಯನ್ನು ಮದುವೆಯಾಗಲು ಬಿಡದೇ ಇದ್ದರೆ ಗ್ರಾಮಸ್ಥರಿಗೆ ತನ್ನ ಇಚ್ಛೆಯಂತೆ ಅತಿಯಾಗಿ ತೆರಿಗೆ ಹಾಕುವುದಾಗಿ ಆತ ಗ್ರಾಮಸ್ಥರನ್ನು ಬೆದರಿಸಿದ್ದ. ಆದರೆ ಗ್ರಾಮಸ್ಥರು ಇದಕ್ಕೆ ತಯಾರಾಗಿರಲಿಲ್ಲ.

ಗ್ರಾಮ ತೊರೆದರು.....

ಗ್ರಾಮ ತೊರೆದರು.....

ಗ್ರಾಮದ ಗೌರವವನ್ನು ಕಾಪಾಡಲು ಮತ್ತು ಸ್ವಾಭಾಮಾನದಿಂದ ಗ್ರಾಮಸ್ಥರು ಗ್ರಾಮವನ್ನೇ ಬಿಟ್ಟು ತೆರಳಲು ಬಯಸಿದರು. ಗ್ರಾಮವನ್ನು ತೊರೆಯುವ ಸಂದರ್ಭದಲ್ಲಿ ಅವರು ಯಾವ ವಸ್ತುವನ್ನು ಇಲ್ಲಿಂದ ತೆಗೆದುಕೊಂಡು ಹೋಗಲಿಲ್ಲ. ಒಂದೇ ರಾತ್ರಿ ಸುಮಾರು 85 ಗ್ರಾಮಗಳ ಜನರು ಗ್ರಾಮವನ್ನು ತೊರೆದರು. ಒಂದೇ ರಾತ್ರಿಯಲ್ಲಿ ಗ್ರಾಮವನ್ನು ತೊರೆಯಲು ಅಲ್ಲಿ ಏನು ನಡೆಯಿತು ಎನ್ನುವ ಬಗ್ಗೆ ಈಗಲೂ ಯಾರಿಗೂ ತಿಳಿದಿಲ್ಲ. ಈ ವೀಡಿಯೋದಲ್ಲಿ ಹಿರಿಯ ವ್ಯಕ್ತಿಯೊಬ್ಬರು ಗ್ರಾಮದ ಬಗ್ಗೆ ಎಲ್ಲಾ ಕಥೆಯನ್ನು ಹೇಳುತ್ತಾ ಇದ್ದಾರೆ.

English summary

An Abandoned Village Near Jaisalmer: Kuldhara

Knowing about the most haunted places in India is something interesting and we're sure it does give us nightmares as well! There are so many haunted villages in India that could sure make you not want to wander alone. Knowing about the history behind this can scare you or make you realise if it has been a lie, OR IS IT TRUE!! Here, in this article, we are about to throw some light on one of the most haunted villages in India called Kuldhara, in the Jaisalmer district, in Rajasthan.
X
Desktop Bottom Promotion