For Quick Alerts
ALLOW NOTIFICATIONS  
For Daily Alerts

ಈ ಬಾರಿಯ ಹೊಸ ವರ್ಷದ ಆಚರಣೆ, ಕೊಂಚ ಡಿಫರೆಂಟ್ ಆಗಿರಲಿ!

By Jayasubramanya
|

2017 ರ ಹೊಸ ವರ್ಷಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಹೊಸ ಯೋಚನೆ, ಹೊಸ ತನವನ್ನು ತರುವ ಹೊಸ ವರ್ಷವು ನಮ್ಮಲ್ಲಿ ಹೊಸ ಚೈತನ್ಯವನ್ನು ಉಂಟುಮಾಡುತ್ತದೆ. ವಿಶ್ವದೆಲ್ಲೆಡೆ ಹೊಸ ವರ್ಷ ಬಂತೆಂದರೆ ಹಬ್ಬದ ಸಂಭ್ರಮ ಮನೆಮಾಡಿರುತ್ತದೆ. ಹಳೆಯವ ವರುಷದ ಕಹಿಯನ್ನು ಮರೆತು ಹೊಸ ವರ್ಷದ ಹೊಸತನ್ನ ತಮ್ಮಲ್ಲಿ ತುಂಬಿಕೊಳ್ಳುವ ಆಹ್ಲಾದ ಜನರಲ್ಲಿ ಮನೆಮಾಡಿರುತ್ತದೆ. ಸಂಭ್ರಮದ ಹೊಸ ವರ್ಷಕ್ಕೆ ಸಿಹಿ ಸಿಹಿ ಪೂರಿ ಮಾಡಿ

ಅದಕ್ಕಾಗಿಯೇ ಆ ದಿನ ಪಾರ್ಟಿಗಳನ್ನು ಸಿದ್ಧಮಾಡುವುದು, ಪಟಾಕಿಗಳನ್ನು ಸಿಡಿಸುವುದು, ಮೋಜು, ಕುಣಿತ ಹೀಗೆ ಸಂಭ್ರಮವೇ ಎಲ್ಲೆಡೆ ತುಂಬಿರುತ್ತದೆ. ಪ್ರತೀ ವರ್ಷವೂ ಹೊಸ ವರ್ಷಕ್ಕಾಗಿ ಈ ಸಿದ್ಧತೆ ಸರ್ವೇ ಸಾಮಾನ್ಯವಾಗಿದ್ದು ಈ ಬಾರಿ ಏನಾದರೂ ಹೊಸತನ್ನು ಮಾಡುವ ಯೋಚನೆ ನಿಮ್ಮಲ್ಲಿರಬಹುದು ಅಲ್ಲವೇ?

ಹೊಸ ವರ್ಷ ಬಂತೆಂದರೆ ಡಿಸೆಂಬರ್ ಮಾಸ ಮೈಕೊಡವಿ ಸಜ್ಜಾಗಿ ಬಿಡುತ್ತದೆ. ತಣ್ಣನೆಯ ವಾತಾವರಣ ಮತ್ತು ವರ್ಷದ ಅಂತ್ಯವನ್ನು ನೆನಪಿಸುವ ಕೊನೆಯ ತಿಂಗಳು ಡಿಸೆಂಬರ್ ಆಗಿದ್ದು ಕ್ರಿಸ್‌ಮಸ್ ಮತ್ತು ಹೊಸ ವರ್ಷಕ್ಕೆ ಮುನ್ನುಡಿ ಬರೆಯುವ ಮಾಸವಾಗಿದೆ.

ಕ್ರಿಸ್‌ಮಸ್ ನಂತರ ಹೊಸ ವರ್ಷದ ಸಂಭ್ರಮ ಮುಗಿಲು ಮುಟ್ಟುತ್ತದೆ. ಪಾರ್ಟಿಗಳನ್ನು ಸಂಘಟಿಸುವುದು, ಏನಾದರೂ ಬಗೆ ಬಗೆಯ ಕಾರ್ಯಕ್ರಮಗಳನ್ನು ಆಯೋಜಿಸುವುದು ಹೀಗೆ ಹೊಸ ವರ್ಷಕ್ಕಾಗಿ ಹೊಸದಾದ ಯೋಜನೆಗಳು ತಯಾರಾಗುತ್ತವೆ. ಅದಾಗ್ಯೂ ಈ ಬಾರಿಯ ಹೊಸ ವರ್ಷಕ್ಕಾಗಿ ನಾವು ಕೆಲವೊಂದು ವಿಚಾರಗಳನ್ನು ನಿಮ್ಮೊಂದಿಗೆ ಹಂಚಬಯಸುತ್ತೇವೆ. ಈ ಬಾರಿಯ ಸಿದ್ಧತೆಗಾಗಿ ನಿಮಗೆ ಹೊಸ ಯೋಚನೆಗಳು ಖಂಡಿತ ದೊರೆಯಬಹುದು.

ಸುದೀರ್ಘ ಪ್ರಯಾಣ

ಸುದೀರ್ಘ ಪ್ರಯಾಣ

ಹೊಸದಾಗಿ ಮದುವೆಯಾದ ಜೋಡಿ ಅಥವಾ ಮಧ್ಯ ವಯಸ್ಸಿನ ಸಂಗಾತಿಗಳು ಆಗಿದ್ದಲ್ಲಿ, ಹೊಸ ವರ್ಷವನ್ನು ನಿಮಗೆ ವಿಭಿನ್ನವಾಗಿ ಆಚರಿಸಬಹುದು. ಲಾಂಗ್ ಡ್ರೈವ್‌ನಂತಹ ಯೋಜನೆಯನ್ನು ನಿಮಗೆ ರೂಪಿಸಬಹುದು. ಇದಕ್ಕೂ ಮೊದಲು ನಿಮ್ಮ ಕಾರಿನ ಸ್ಥಿತಿಯನ್ನು ನೋಡಿಕೊಳ್ಳಿ ಮತ್ತು ಹೊಸ ವರ್ಷದಂದು ಹೊಸ ಜಾಗದಲ್ಲಿ ಇದ್ದು ಹೊಸದಾದ ಸೂರ್ಯೋದಯವನ್ನು ಆನಂದಿಸಿ.

ಚಲನಚಿತ್ರ ವೀಕ್ಷಣೆ

ಚಲನಚಿತ್ರ ವೀಕ್ಷಣೆ

ನಿಮ್ಮ ಸಂಗಾತಿಯೊಂದಿಗೆ ಹೆಚ್ಚಿನ ಕ್ಷಣಗಳನ್ನು ಕಳೆಯಲು ಈ ವರ್ಷ ದೊರೆತಿಲ್ಲ ಎಂದಾದಲ್ಲಿ ಹೊಸ ವರ್ಷದಂದು ಚಲನಚಿತ್ರಕ್ಕೆ ಅವರನ್ನು ಕರೆದುಕೊಂಡು ಹೋಗುವ ಸಿದ್ಧತೆಯನ್ನು ಮಾಡಿಕೊಳ್ಳಿ. ಅವರ ಇಷ್ಟದ ಚಿತ್ರವನ್ನು ಇದಕ್ಕಾಗಿ ಗೊತ್ತುಪಡಿಸಿ. ಆ ರಾತ್ರಿ ಇದಕ್ಕೆ ಬೇಕಾದ ಡಿವಿಡಿಗಳನ್ನು ಸಂಗ್ರಹಿಸಿ ಮತ್ತು ರಾತ್ರಿ ಪ್ಲೇ ಮಾಡಿ. ಕುರುಕಲು ತಿಂಡಿ ಮತ್ತು ಪಾನೀಯಗಳೊಂದಿಗೆ ನಿಮ್ಮ ಹೊಸ ವರ್ಷವನ್ನು ಸಂಗಾತಿಯೊಂದಿಗೆ ಆಚರಿಸಿ.

ಕಾರ್ಡ್‌ಗಳನ್ನು ತಯಾರಿಸಿ

ಕಾರ್ಡ್‌ಗಳನ್ನು ತಯಾರಿಸಿ

ನೀವು ಸಂಪೂರ್ಣ ಕುಟುಂಬ ವ್ಯಕ್ಇ ಎಂದಾದಲ್ಲಿ ಮತ್ತು ನಿಮ್ಮ ಮನೆಯಾಕೆ ಹಾಗೂ ಮಕ್ಕಳೊಂದಿಗೆ ಸಂತಸವನ್ನು ಹಂಚಿಕೊಳ್ಳಬೇಕು ಎಂದಾದಲ್ಲಿ, ಇದು ನಿಜಕ್ಕೂ ಉತ್ತಮ ಯೋಜನೆಯಾಗಿದೆ. ನಿಮ್ಮ ಪ್ರೀತಿಪಾತ್ರರಿಗಾಗಿ ಅದ್ಭುತ ಕಾರ್ಡ್‌ಗಳನ್ನು ರಚಿಸಿ. ಹೊಸ ವರ್ಷಕ್ಕೆ ಒಂದು ವಾರಕ್ಕಿಂತ ಮುಂಚೆಯೇ ಕಾರ್ಡ್‌ಗಳನ್ನು ತಯಾರಿಸಿ. ನಿಮ್ಮ ಮಕ್ಕಳನ್ನು ಈ ಕಾರ್ಡ್‌ಗಳನ್ನು ಸಿದ್ಧಮಾಡುವಲ್ಲಿ ತೊಡಗಿಸಿ.

ಅನಾಥಾಲಯದಲ್ಲಿ ಹೊಸ ವರ್ಷ ಆಚರಣೆ

ಅನಾಥಾಲಯದಲ್ಲಿ ಹೊಸ ವರ್ಷ ಆಚರಣೆ"

ಅನಾಥ ಮಕ್ಕಳೊಂದಿಗೆ ಕೂಡ ಈ ಬಾರಿಯ ಹೊಸ ವರ್ಷವನ್ನು ನಿಮಗೆ ವಿಭಿನ್ನವಾಗಿ ಆಚರಿಸಬಹುದಾಗಿದೆ. ಅವರಿಗೆ ದೊರಕದೇ ಇರುವ ವಿಶೇಷ ಆನಂದವನ್ನು ನೀವು ಅವರಿಗೆ ನೀಡಬಹುದು. ಅವರಿಗೆ ಉತ್ತಮ ಉಡುಗೊರೆಗಳನ್ನು ನೀಡಿ, ಊಟದ ವ್ಯವಸ್ಥೆಯನ್ನು ಮಾಡಿ ಅಂತೆಯೇ ಅವರ ಸಂತಸದಲ್ಲಿ ಭಾಗಿಯಾಗಿ.

ವೃದ್ಧಾಶ್ರಮದಲ್ಲಿ ಹೊಸ ವರ್ಷ

ವೃದ್ಧಾಶ್ರಮದಲ್ಲಿ ಹೊಸ ವರ್ಷ

ತಮ್ಮವರ ಪ್ರೀತಿಯಿಂದ ವಂಚಿತರಾಗಿ ವೃದ್ಧಾಶ್ರಮಕ್ಕೆ ಸೇರುವ ಹಿರಿಜೀವಿಗಳ ಮೊಗದಲ್ಲಿ ನಗುವನ್ನು ತರುವ ಕಾರ್ಯವನ್ನು ಈ ಬಾರಿಯ ಹೊಸ ವರ್ಷದ ಸಮಯದಲ್ಲಿ ನಿಮಗೆ ಮಾಡಬಹುದಾಗಿದೆ. ನಿಮ್ಮ ದಿನವನ್ನು ಅವರೊಂದಿಗೆ ಕಳೆಯಿರಿ ಮತ್ತು ಅವರ ಸುಕ್ಕುಗಟ್ಟಿದ ಮುಖದಲ್ಲಿ ಮೂಡುವ ಮಂದಹಾಸ ಹಾಗೂ ಅವರು ಹೃದಯಪೂರ್ವಕವಾಗಿ ನಿಮ್ಮನ್ನು ಆಶೀರ್ವದಿಸುವ ಆ ಕ್ಷಣವನ್ನು ಕಣ್ತುಂಬಿಕೊಳ್ಳಿ.

ಜೊತೆಯಾಗಿ ಅಡುಗೆ ತಯಾರಿ

ಜೊತೆಯಾಗಿ ಅಡುಗೆ ತಯಾರಿ

ಹೊಸ ವರ್ಷದ ಸಂಜೆಯಲ್ಲಿ ತಯಾರಾಗುವ ಖಾದ್ಯ ಹೆಚ್ಚು ಮುಖ್ಯವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ಖಾದ್ಯ ತಯಾರಿಸಲು ಭಾಗಿಯಾಗಿ ಮತ್ತು ಇದೊಂದು ಅಪೂರ್ವ ಕ್ಷಣವಾಗಿರುತ್ತದೆ. ಜೊತೆಯಾಗಿ ಅವರೊಂದಿಗೆ ಸಮಯವನ್ನು ಕಳೆಯುತ್ತಾ ರುಚಿಯಾದ ಖಾದ್ಯವನ್ನು ತಯಾರಿಸಬಹುದಾಗಿದೆ.

ನಿಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿ

ನಿಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿ

ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ದಿನವನ್ನು ಕಳೆಯುವುದು ಹೊಸ ಅನುಭೂತಿಯಾಗಿರುತ್ತದೆ. ನಿಮ್ಮ ಸಂಗಾತಿಯ ಕೈ ಹಿಡಿದುಕೊಂಡು ನೀವು ಮೊದಲು ಭೇಟಿ ಮಾಡಿದ ಸ್ಥಳಗಳಿಗೆ ಭೇಟಿ ನೀಡಿ. ಹೊಸ ವರ್ಷದ ಸಂಜೆಯಲ್ಲಿ ನೀವು ಇದನ್ನು ಮಾಡುತ್ತೀರಿ ಎಂದಾದಲ್ಲಿ, ಇದು ನಿಮ್ಮ ಹಳೆಯ ಸುಂದರ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡುತ್ತದೆ.

English summary

Amazing Things You Can Do Instead of Partying This New Year

There are lots of innovative things you can do to make your upcoming year special and these will definitely keep you contented from the inside. Have you planned anything like that yet?
Story first published: Tuesday, December 13, 2016, 18:49 [IST]
X
Desktop Bottom Promotion