ಕಾಫಿ ಪ್ರಿಯ ಪುರುಷರಿಗೆ ಒಂದು ಸಿಹಿ ಸುದ್ದಿ-ತಪ್ಪದೇ ಓದಿ...

By: Arshad
Subscribe to Boldsky

ಕಾಫಿ ಪ್ರಿಯರಿಗೊಂದು ಶುಭಸುದ್ದಿ. ಕಾಫಿ ಕುಡಿದ ಕೊಂಚ ಸಮಯದ ಬಳಿಕ ಪುರುಷರಲ್ಲಿ ನಿಮಿರು ಶಕ್ತಿ ಹೆಚ್ಚುವುದನ್ನು ಕಾಣಲಾಗಿದೆ. ಆದರೆ ಈ ಶಕ್ತಿಯನ್ನು ಒಂದು ಬಗೆಯ ಕಾಫಿ ಇನ್ನಷ್ಟು ಹೆಚ್ಚಿಸುತ್ತದೆ ಎಂದು ಕಾಫಿ ಮಾರಾಟದ ಸಂಸ್ಥೆಯೊಂದು ಹೇಳಿಕೊಂಡಿದೆ. ಆದರೆ ಇದಕ್ಕೆ ಯಾವ ಕಣ ಕಾರಣ ಎಂದು ಮಾತ್ರ ಹೇಳುತ್ತಿಲ್ಲ! ಆದರೆ ಈ ರಹಸ್ಯವನ್ನು ಇಂದು ಬೋಲ್ಡ್ ಸ್ಕೈ ತಂಡ ಬಹಿರಂಗಪಡಿಸುತ್ತಿದೆ.

ಇದು ಕೊಂಚ ವಿಚಿತ್ರವಾಗಿ ಕಾಣಬಹುದು, ಎಂದರೆ ಬರೆಯ ಕಾಫಿ ಕುಡಿದು ತಮ್ಮ ಪೌರುಷವನ್ನು ಮೆರೆಯಲು ಪುರುಷರಿಗೆ ಅವಕಾಶ ಸಿಕ್ಕಿದೆ. ಇದರ ಪರೋಕ್ಷ ಪರಿಣಾಮ ಮತ್ತು ಪ್ರಯೋಜನಗಳ ಬಗ್ಗೆ ಹೇಳ ಹೊರಟರೆ ಬೇರೆಯೇ ಕಥೆಯಾಗಬಹುದು. ಬನ್ನಿ, ಈ ಕಪ್ಪು ಕಾಫಿಯ ರಹಸ್ಯವೇನು ಎಂಬುದನ್ನು ಈಗ ನೋಡೋಣ: ಪುರುಷರು ತಪ್ಪದೇ ಓದಲೇ ಬೇಕಾದ ಲೇಖನವಿದು!   

ಈ ಕಾಫಿಯಲ್ಲಿ ಮ್ಯಾಜಿಕ್ ಮಾಡುವಂತಹದ್ದೇನಿದೆ?

ಈ ಕಾಫಿಯನ್ನು ನಿಜವಾದ ಕಾಫಿಪುಡಿಯನ್ನೇ ಬಳಸಿ ಮಾಡಲಾಗಿದ್ದರೂ ಇದರೊಂದಿಗೆ Tongkat Ali, Maca Root ಮತ್ತು Guarana ಎಂಬ ಕೆಲವು ಸಾಮಾಗ್ರಿಗಳನ್ನು ಕೊಂಚ ಪ್ರಮಾಣದಲ್ಲಿ ಬಳಸಲಾಗಿದೆ.

ಈ ಕಾಫಿ ಕುಡಿಯುವುದರಿಂದ ಮೂರುದಿನ ನಿಮಿರು ಪೌರುಷ ಇರುತ್ತದಂತೆ ಹೌದೇ?

ಯಾವುದೇ ಪತ್ನಿ ತನ್ನ ಪತಿಯನ್ನು ಮೂರು ದಿನಗಳ ಕಾಲ ಪೌರುಷ ಮೆರೆಯುವವನಾಗಿ ಕಾಣಬಯಸಿದರೂ ಇದು ವೈದ್ಯಕೀಯವಾಗಿ ಆರೋಗ್ಯಕರವಲ್ಲ ಎಂದು ಯಾವುದೇ ವೈದ್ಯರು ತಿಳಿಸುತ್ತಾರೆ. ಆದರೆ ಕಾಫಿ ಮಾರುವ ಸಂಸ್ಥೆ ಮಾತ್ರ ಹೀಗೇ ಪ್ರಚಾರ ಮಾಡುತ್ತಿದೆ. ಅರೆರೆ, ಕಾಫಿ ಪುಡಿಯಲ್ಲೂ ಇಷ್ಟೆಲ್ಲಾ ಪ್ರಯೋಜನಗಳಿವೆಯೇ?  

ಪ್ರಚಾರದಲ್ಲಿ ಏನೆಂದು ಹೇಳಲಾಗುತ್ತಿದೆ?

ಈ ಮ್ಯಾಜಿಕ್ ಮಾಡುವ ಕಾಫಿಯನ್ನು ನೇರವಾಗಿ ಹೀಗೇ ಎಂದು ಹೇಳುವ ಬದಲು "ನಿಮ್ಮ ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ", " ನಿಮ್ಮ ದೇಹದ ಆಯಾಸವನ್ನು ಕಡಿಮೆಮಾಡುತ್ತದೆ" ಎಂದೇ ಪ್ರಚಾರ ಮಾಡುತ್ತಿದೆ.

ಸಂಶೋಧಕರು ಈ ಬಗ್ಗೆ ಏನು ಹೇಳುತ್ತಾರೆ?

ಸಂಶೋಧಕರು ಮತ್ತು ತಜ್ಞರು ಈ ರೀತಿಯ ದಿಢೀರ್ ನಿಮಿರು ಅಪಾಯಕಾರಿ ಎಂಬ ಅಭಿಪ್ರಾಯ ಹೊಂದಿದ್ದಾರೆ. ಏಕೆಂದರೆ ನಿಸರ್ಗ ಯಾವುದೇ ಜೀವಿಗೆ ಹೆಚ್ಚಿನ ಹೊತ್ತಿನ ನಿಮಿರು ಸಾಮರ್ಥ್ಯವನ್ನು ನೀಡಿಲ್ಲ.

ಸಂಶೋಧಕರು ಈ ಬಗ್ಗೆ ಏನು ಹೇಳುತ್ತಾರೆ?

ಒಂದು ವೇಳೆ ಬಲವಂತವಾಗಿ ಈ ಶಕ್ತಿಯನ್ನು ಹೆಚ್ಚು ಹೊತ್ತಿನವರೆಗೆ ಇರಿಸಿದರೆ ಇದು ನರದೌರ್ಬಲ್ಯದ ತೊಂದರೆಯಾದ necrosis, ಜೀವಕೋಶಗಳು ಮತ್ತೆ ಹುಟ್ಟಲಾರದಂತೆ ಸಾಯುವುದು ಮೊದಲಾದವುಗಳ ಮೂಲಕ ಈಗ ಇರುವ ಪುರುಷತ್ವವೂ ಕಳೆದುಕೊಳ್ಳುವ ಅಪಾಯವಿದೆ ಎಂದು ಹೇಳುತ್ತಾರೆ.

ಅಂತಿಮವಾಗಿ FDA ಏನು ಹೇಳುತ್ತದೆ?

The Food and Drug Administration ಅಥವಾ FDA ಸಂಸ್ಥೆ ಈ ಬಗ್ಗೆ ಆಳವಾದ ಸಂಶೋಧನೆ ನಡೆಸಿ ಈ ಕಾಫಿಯಲ್ಲಿರುವ "desmethyl carbodenafil" ಎಂಬ ರಾಸಾಯನಿಕವೇ ನಿಮಿಸು ಸಾಮರ್ಥ್ಯ ಹೆಚ್ಚಿಸಲು ಕಾರಣ ಎಂದು ಕಂಡುಕೊಂಡಿದ್ದಾರೆ.

ಅಂತಿಮವಾಗಿ FDA ಏನು ಹೇಳುತ್ತದೆ?

ಇದು ವಯಾಗ್ರಾ ಎಂಬ ಕಾಮೋತ್ತೇಜಕ ಮಾತ್ರೆಯ ಪರ್ಯಾಯವಾಗಿದೆ. ಇದರ ಪ್ರಮಾಣವೂ ಮನುಷ್ಯರ ಸೇವನೆಗೆ ಇರುವ ಮಿತಿಗೂ ಮೀರಿದ್ದು ಇದರ ಬಗ್ಗೆ ಈ ಪ್ಯಾಕೆಟ್ಟಿನಲ್ಲಿ ಯಾವುದೇ ವಿವರಗಳಿಲ್ಲ.   ವಯಾಗ್ರದಂತೆ ಕೆಲಸ ಮಾಡುವ 10 ಅದ್ಭುತ ಆಹಾರಗಳು

ಅಂತಿಮವಾಗಿ FDA ಏನು ಹೇಳುತ್ತದೆ?

ಆದ್ದರಿಂದ ಈ ಕಾಫಿಯನ್ನು ಕುಡಿಯುವುದು ಆರೋಗ್ಯಕ್ಕೆ ಮಾರಕ ಎಂದು FDA ತಿಳಿಸುತ್ತದೆ ಹಾಗೂ ಈ ಉತ್ಪನ್ನವನ್ನು ತಕ್ಷಣವೇ ನಿಷೇಧಿಸುವಂತೆ ಸಂಬಂಧಪಟ್ಟ ಇಲಾಖೆಗೆ ನಿರ್ದೇಶನ ನೀಡುತ್ತದೆ. ಆದ್ದರಿಂದ ನಿಮಿರು ಸಾಮರ್ಥ್ಯ ಹೆಚ್ಚಿಸುತ್ತದೆ ಎಂದು ಹೇಳುವ ಯಾವುದೇ ಉತ್ಪನ್ನವನ್ನು ಸುರಕ್ಷಿತ ಎಂದು ಪರಿಗಣಿಸಲಾಗದು.

 

English summary

All About The Coffee That Gives You Erection!

What better treat can coffee lovers get than getting an erection after drinking just coffee, right? Well, there are claims by companies that suggest a new type of coffee that can actually wake up the beast inside of a man who drinks it! We here at Boldsky are about to disclose the actual facts of the coffee that claims to give an erection.
Please Wait while comments are loading...
Subscribe Newsletter