For Quick Alerts
ALLOW NOTIFICATIONS  
For Daily Alerts

ಅತ್ಯಾಚಾರ ಪ್ರಕರಣ ಹೆಚ್ಚಾಗಿರುವ ವಿಶ್ವದ ಪ್ರತಿಷ್ಠಿತ ರಾಷ್ಟ್ರಗಳು

By Super
|

ಯಾವ ರಾಷ್ಟ್ರದಲ್ಲಿ ಹೆಣ್ಣು ಅರ್ಧರಾತ್ರಿಯಲ್ಲಿಯೂ ಸುರಕ್ಷಿತಳಾಗಿ ಹೋಗಬಲ್ಲಳೋ ಆ ರಾಷ್ಟ್ರವೇ ಅತ್ಯಂತ ಸುರಕ್ಷಿತ ಎಂದು ಒಂದು ಸುಭಾಷಿತ ಹೇಳುತ್ತದೆ. ಭಾರತವನ್ನಾಳಿದ ಹಲವು ಚಕ್ರವರ್ತಿಗಳ ರಾಜ್ಯಭಾರದಲ್ಲಿ ಈ ಹೆಗ್ಗಳಿಗೆ ಭಾರತಕ್ಕೆ ಇತಿಹಾಸದಲ್ಲಿ ಲಭ್ಯವಾಗಿದೆ. ಆದರೆ ಇದು ಇತಿಹಾಸವಾಗಿಯೇ ಉಳಿದಿದೆ. ಇಂದು ನಮ್ಮ ಪತ್ರಿಕೆಗಳಲ್ಲಿ ಪ್ರಕಟವಾಗುವ ಅತ್ಯಾಚಾರದ ಪ್ರಕರಣಗಳು ತಲೆತಗ್ಗಿಸುವಂತಿವೆ. ಇಲ್ಲಿನ ಜನರ ಕಥೆ ಕೇಳಿದರೆ, ಕರುಳು ಚುರ್‍ ಅನ್ನುತ್ತದೆ...

ಆದರೆ ಇದು ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ, ವಿಶ್ವದ ಅತ್ಯಂತ ಬಲಿಷ್ಠ ರಾಷ್ಟ್ರಗಳಾದ ಅಮೇರಿಕಾ, ಸ್ವೀಡನ್, ಫ್ರಾನ್ಸ್, ಕೆನಡಾ, ಬ್ರಿಟನ್, ಜರ್ಮನಿಗಳಂತಹ ಮುಂದುವರೆದ ರಾಷ್ಟ್ರಗಳಲ್ಲಿಯೂ ಪ್ರಕರಣಗಳಿವೆ. ಇಂದು ಈ ಪ್ರಮಾಣ ಯಾವ ರಾಷ್ಟ್ರದಲ್ಲಿ ಹೆಚ್ಚು ಎಂಬ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ...

ಇಥಿಯೋಪಿಯಾ

ಇಥಿಯೋಪಿಯಾ

ಮಹಿಳೆಯರ ಮೇಲಿನ ಅನಾಚಾರ, ಅತ್ಯಾಚಾರದ ಪ್ರಕರಣಗಳು ವಿಶ್ವದಲ್ಲಿಯೇ ಅತಿ ಹೆಚ್ಚಾಗಿರುವ ದೇಶಗಳ ಪೈಕಿ ಇಥಿಯೋಪಿಯಾ ಸಹಾ ಒಂದು. ದಿನಂಪ್ರತಿ ಆಗುವ ಅತ್ಯಾಚಾರ ಪ್ರಕರಣಗಳು ಇಥಿಯೋಪಿಯಾ ಸರ್ಕಾರಕ್ಕೊಂದು ತಲೆನೋವು. ಇಷ್ಟೇ ಅಲ್ಲ, ಬಲವಂತವಾಗಿ ಅಪಹರಣ ಮಾಡಿ ಮದುವೆ ಮಾಡುವ ಪ್ರಕರಣಗಳು ವಿಶ್ವದಲ್ಲಿಯೇ ಅತ್ಯಧಿಕವಾಗಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಇಥಿಯೋಪಿಯಾ

ಇಥಿಯೋಪಿಯಾ

ಸಾಮಾನ್ಯವಾಗಿ ವಯಸ್ಸಿಗೆ ಬಂದ ಯುವಕ ತನ್ನ ಮನಸ್ಸಿಗೆ ಒಪ್ಪಿದ ಯುವತಿ ಅಥವಾ ಮಹಿಳೆಯನ್ನು ಸ್ವತಃ ಅಥವಾ ತನ್ನ ಸಂಗಡಿಗರೊಂದಿಗೆ ಸೇರಿ ಅಪಹರಿಸಿ, ಅಜ್ಞಾತ ಸ್ಥಳದಲ್ಲಿ ಬಂಧಿಸಿಟ್ಟು ಆಕೆ ಗರ್ಭವತಿಯಾಗುವವರೆಗೂ ಬಲಾತ್ಕರಿಸಿ ಬಳಿಕ ಮದುವೆಯಾಗುದು ಸಾಮಾನ್ಯ ಸಂಗತಿಯಾಗಿದೆ.

ಶ್ರೀಲಂಕಾ

ಶ್ರೀಲಂಕಾ

ಬೇಲಿಯೇ ಎದ್ದು ಹೊಲ ಮೇದರೆ ಕಾಯುವವರಾರು ಎಂಬ ಗಾದೆಗೆ ತಕ್ಕಂತೆ ಸಾರ್ವಜನಿಕರನ್ನು ರಕ್ಷಿಸಬೇಕಾದ ರಕ್ಷಣಾ ಪಡೆಯ ರಕ್ಷಕರೇ ಅತ್ಯಾಚಾರ ಎಸಗುವುದು ಶ್ರೀಲಂಕಾದಲ್ಲಿ ಮಾಮೂಲಿಯಾಗಿದೆ. ಅಂತರ್ಯುದ್ಧದ ಸಮಯದಲ್ಲಿ ಸರ್ಕಾರದ ವಿರುದ್ದ ತಿರುಗಿಬಿದ್ದವರನ್ನು ಬಂಧಿಸಲು ನೇಮಿಸಿದ ರಕ್ಷಣಾ ಪಡೆ ಬಂಧನಕ್ಕೊಳಗಾದ ಕೈದಿಗಳ ಮೇಲೆ ಅತ್ಯಾಚಾರ ಎಸಗಿರುವುದು ಈಗ ಬಯಲಾದ ಸತ್ಯವಾಗಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಶ್ರೀಲಂಕಾ

ಶ್ರೀಲಂಕಾ

ಕೇವಲ ಅತ್ಯಾಚಾರ ಮಾತ್ರವಲ್ಲ, ದೈಹಿಕ ಹಿಂಸೆಯನ್ನೂ ನೀಡುವ ಈ ರಕ್ಷಣಾ ಪಡೆಗಳ ರಾಕ್ಷಸರು ಅಂತರ್ಯುದ್ಧ ಮುಗಿದ ಬಳಿಕವೂ ಮುಂದುವರೆಸಿಕೊಂಡು ಬರುತ್ತಿದ್ದಾರೆ.ಯುದ್ಧದ ಬಳಿಕ ಶ್ರೀಲಂಕಾದಲ್ಲಿ ಸಂಯುಕ್ತ ರಾಷ್ಟ್ರಗಳ (ಯು.ಎನ್) ಸಮಿತಿಯಿಂದ ನಡೆಸಿದ ವ್ಯಾಪಕ ಅಭ್ಯಾಸದ ಬಳಿಕ ಬಹಿರಂಗ ಪಡಿಸಿದ ಅಂಕಿ ಅಂಶಗಳು ದಿಗಿಲುಪಡಿಸುವಂತಿವೆ. ಇವುಗಳ ಮುಖ್ಯಾಂಶಗಳು ಹೀಗಿವೆ: 14.5% ಶ್ರೀಲಂಕಾದ ಪುರುಷರು ತಮ್ಮ ಜೀವಿತಾವಧಿಯಲ್ಲಿ ಕನಿಷ್ಠ ಒಂದು ಬಾರಿಯಾದರೂ ಅತ್ಯಾಚಾರ ಎಸಗಲು ಪ್ರಯತ್ನಿಸಿದ್ದಾರೆ. 4.9% ಜನರು ಕಳೆದ ಒಂದು ವರ್ಷದಲ್ಲಿ ಒಂದು ಬಾರಿ ಅತ್ಯಾಚಾರ ಎಸಗಿದ್ದಾರೆ. 2.7% ಜನರು ಒಬ್ಬರಿಗಿಂತ ಹೆಚ್ಚಿನವರ ಮೇಲೆ ಅತ್ಯಾಚಾರ ಎಸಗಿದ್ದಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಶ್ರೀಲಂಕಾ

ಶ್ರೀಲಂಕಾ

1.6% ಜನರು ಸಾಮೂಹಿಕ ಅತ್ಯಾಚಾರದಲ್ಲಿ ಪಾಲ್ಗೊಂಡಿದ್ದಾರೆ. 96.5% ಅತ್ಯಾಚಾರಿಗಳಿಗೆ ಕಾನೂನಿನಿಂದ ಯಾವುದೇ ಬಂಧನ, ವಿಚಾರಣೆ ಅಥವಾ ಶಿಕ್ಷೆ ಆಗಲೇ ಇಲ್ಲ. 65.8% ಜನರಿಗೆ ತಮ್ಮ ಘನಕಾರ್ಯದ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ. 64.9% ಜನರು ತಮ್ಮ ಜೀವಿತಾವಧಿಯಲ್ಲಿ ಒಂದರಿಂದ ಮೂರು ಅತ್ಯಾಚಾರ ಎಸಗಿದ್ದಾರೆ. 11.1% ಜನರು ನಾಲ್ವರಿಗಿಂತ ಹೆಚ್ಚು ಯುವತಿ ಅಥವಾ ವಯಸ್ಸಾದ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದಾರೆ.

ಕೆನಡಾ

ಕೆನಡಾ

ಸ್ಪಷ್ಟ ಹಾಗೂ ಬಿಗಿ ಕಾನೂನುಗಳಿದ್ದರೂ ಬಲಿಷ್ಠ ರಾಷ್ಟ್ರ ಕೆನಡಾದಲ್ಲಿಯೂ ಇದುವರೆಗೆ 2,516,918 ಪ್ರಕರಣಗಳು ದಾಖಲಾಗಿವೆ. ಆದರೆ ದಿಗಿಲುಪಡಿಸುವ ಮಾಹಿತಿಯೆಂದರೆ ಈ ಪ್ರಮಾಣ ಕೇವಲ ಪೋಲೀಸರಲ್ಲಿ ದಾಖಲಾದ ಪ್ರಕರಣಗಳು ಮಾತ್ರ. ಇದು ನಿಜವಾದ ಸಂಖ್ಯೆಯ ಕೇವಲ ಶೇ ಆರರಷ್ಟು ಮಾತ್ರ. ಇನ್ನುಳಿದ ತೊಂಭತ್ತನಾಲ್ಕು ಶೇಖಡಾ ಪ್ರಕರಣಗಳು ಪೋಲೀಸರತ್ತ ಬರುವುದೇ ಇಲ್ಲ. ಪ್ರತಿ ಮೂವರಲ್ಲಿ ಒಬ್ಬಳು ಮಹಿಳೆಯ ಮೇಲೆ ಅತ್ಯಾಚಾರವಾಗುತ್ತದೆ ಎಂದು ಒಂದು ಸಮೀಕ್ಷೆ ತಿಳಿಸುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕೆನಡಾ

ಕೆನಡಾ

Justice Institute of British Columbia ಸಂಸ್ಥೆ ನಡೆಸಿದ ಸಮೀಕ್ಷೆಯ ಪ್ರಕಾರ ಪ್ರತಿ ಹದಿನೇಳರಲ್ಲಿ ಓರ್ವ ಮಹಿಳೆ ಬಲಾತ್ಕಾರಕ್ಕೊಳಗಾಗುತ್ತಾಳೆ, ಬಲಾತ್ಕಾರಕ್ಕೊಳಗಾದವರಲ್ಲಿ 62% ಮಹಿಳೆಯರನ್ನು ದೈಹಿಕವಾಗಿ ಹಿಂಸಿಸಲಾಗುತ್ತದೆ ಹಾಗೂ 9% ಮಹಿಳೆಯರನ್ನು ಬಡಿಯಲಾಗುತ್ತದೆ ಅಥವಾ ಗುರುತು ಸಿಗದಂತೆ ಮಾಡುವ ಪ್ರಯತ್ನವನ್ನೂ ನಡೆಸಲಾಗುತ್ತದೆ.

ಫ್ರಾನ್ಸ್

ಫ್ರಾನ್ಸ್

1980ರವರೆಗೂ ಫ್ರಾನ್ಸ್ ನಲ್ಲಿ ಅತ್ಯಾಚಾರ ಎಂಬುವುದು ಅಪರಾಧವಾಗಿರಲೇ ಇಲ್ಲ. ಮಹಿಳೆಯರಿಗಾಗಿ ವಿಶೇಷ ಕಾನೂನು ಮತ್ತು ಹಕ್ಕು ಹಾಗೂ ರಕ್ಷಣೆಯ ಬಗ್ಗೆ ಸ್ಪಷ್ಟ ಕಾನೂನುಗಳು ಮೂಡಿದ್ದು ತೀರಾ ಇತ್ತೀಚೆಗೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಫ್ರಾನ್ಸ್

ಫ್ರಾನ್ಸ್

ಇದರ ಹೊರತಾಗಿಯೂ ಫ್ರಾನ್ಸ್ ನಲ್ಲಿ ಪ್ರತಿವರ್ಷ ಸುಮಾರು 75,000 ಪ್ರಕರಣಗಳು ದಾಖಲಾಗುತ್ತವೆ. ಆದರೆ ಇದು ನಿಜವಾಗಿ ಅತ್ಯಾಚಾರಕ್ಕೊಳಗಾದವರ ಕೇವಲ ಹತ್ತು ಶೇಖಡಾದಷ್ಟೇ ಆಗಿದೆ. ಇದುವರೆಗೆ ದಾಖಲಾದ ಪ್ರಕರಣಗಳನ್ನು ಪರಿಗಣಿಸಿದರೆ 3,771,850 ಪ್ರಕರಣಗಳ ಮೂಲಕ ವಿಶ್ವದ ಏಳನೆಯ ಸ್ಥಾನದಲ್ಲಿದೆ.

ಜರ್ಮನಿ

ಜರ್ಮನಿ

ಜರ್ಮನಿಯಲ್ಲಿ ಇದುವರೆಗೆ ಸುಮಾರು 240,000 ಮಹಿಳೆಯರು ಮತ್ತು ಯುವತಿಯರು ಅತ್ಯಾಚಾರದ ಬಳಿಕ ಸಾವಿಗೀಡಾಗಿದ್ದಾರೆ. ಒಟ್ಟು 6,507,394 ಪ್ರಕರಣ ಮೂಲಕ ಜರ್ಮನಿ ವಿಶ್ವದಲ್ಲಿ ಆರನೆಯ ಸ್ಥಾನ ಪಡೆದಿದೆ.

ಭಾರತ

ಭಾರತ

ಭಾರತದಲ್ಲಿಯೂ ಅತ್ಯಾಚಾರದ ಪ್ರಕರಣಗಳು ಬಲು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿವೆ ಮತ್ತು ದಿನೇ ದಿನೇ ಹೆಚ್ಚುತ್ತಿವೆ. ಅದರಲ್ಲೂ ಮಹಿಳೆಯರ ಮೇಲಿನ ದೌರ್ಜನ್ಯದಲ್ಲಿ ಅತ್ಯಾಚಾರ ಪ್ರಮುಖ ಪಾತ್ರ ವಹಿಸುತ್ತದೆ. National Crime Records Bureau ಸಂಸ್ಥೆಯ ಪ್ರಕಾರ 2012ರಲ್ಲಿ 24,923 ಪ್ರಕರಣಗಳು ದಾಖಲಾಗಿವೆ.

ಭಾರತ

ಭಾರತ

ಆದರೆ ತಜ್ಞರು ಈ ಅಂಕಿ ಅಂಶಗಳನ್ನು ಅಲ್ಲಗಳೆದು ಮಾನಕ್ಕಾಗಿ ಅಂಜಿ ಪ್ರಕರಣವನ್ನು ದಾಖಲಿಸದಿರುವ ಕಾರಣ ಈ ಸಂಖ್ಯೆ ವಾಸ್ತವಕ್ಕಿಂತ ತುಂಬಾ ಕಡಿಮೆ ಎಂದು ಅಭಿಪ್ರಾಯ ಪಡುತ್ತಾರೆ.

ಭಾರತ

ಭಾರತ

ಆದರೆ ಇದರಲ್ಲಿ ಗಾಬರಿ ಪಡಿಸುವ ಅಂಶವೆಂದರೆ 24,923 ರಲ್ಲಿ 24,470 ಪ್ರಕರಣಗಳು ಅತ್ಯಾಚಾರಕ್ಕೆ ಒಳಗಾದ ಯುವತಿಯ ಆಪ್ತರೇ ಆಗಿದ್ದಾರೆ. ಅಂದರೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ತಂದೆ ತಾಯಿ, ಬಂಧು, ನೆರೆಯವರು ಅಥವಾ ಪರಿಚಿತರೇ ಆಗಿದ್ದಾರೆ. ಇನ್ನೂ ಗಾಬರಿಪಡಿಸುವ ವಿಚಾರವೆಂದರೆ 98 ಶೇಖಡಾ ಪ್ರಕರಣಗಳಲ್ಲಿ ಅತ್ಯಾಚಾರ ನಡೆಸಿದ ಪುರುಷ ಅತ್ಯಾಚಾರಕ್ಕೆ ಒಳಗಾದ ವ್ಯಕ್ತಿಯ ತೀರಾ ನಿಕಟವರ್ತಿ ಅಥವಾ ಹತ್ತಿರದ ಪರಿಚಯದವನೇ ಆಗಿರುತ್ತಾನೆ. ಒಂದು ಅಂಕಿ ಅಂಶದ ಪ್ರಕಾರ ಪ್ರತಿ ಇಪ್ಪತ್ತೆರಡು ನಿಮಿಷಗಳಲ್ಲಿ ಒಂದು ಅತ್ಯಾಚಾರ ಪ್ರಕರಣ ದಾಖಲಾಗುತ್ತದೆ.

ಸ್ವೀಡನ್

ಸ್ವೀಡನ್

ಯೂರೋಪ್ ಖಂಡದಲ್ಲಿಯೇ ಅತಿ ಹೆಚ್ಚು ಅತ್ಯಾಚಾರ ಪ್ರಕರಣಗಳು ದಾಖಲಾಗಿರುವುದು ಸ್ವೀಡನ್ ನಲ್ಲಿ. ಇದು ಯೂರೋಪ್ ಮಾತ್ರವಲ್ಲ, ಇಡಿಯ ವಿಶ್ವದಲ್ಲಿಯೇ ಅತಿ ಹೆಚ್ಚಿನ ಸಂಖ್ಯೆಯಾಗಿದೆ. ಒಂದು ಸಮೀಕ್ಷೆಯ ಪ್ರಕಾರ ಪ್ರತಿ ನಾಲ್ವರಲ್ಲಿ ಒರ್‍ವ ಮಹಿಳೆ ಅತ್ಯಾಚಾರಕ್ಕೆ ಒಳಗಾಗಿರುತ್ತಾಳೆ.

ದ. ಆಫ್ರಿಕಾ

ದ. ಆಫ್ರಿಕಾ

2012ರಲ್ಲಿ 65,000 ಅತ್ಯಾಚಾರ ಪ್ರಕರಣಗಳನ್ನು ದಾಖಲಿಸುವ ಮೂಲಕ ವಿಶ್ವದ ಅತಿ ಹೆಚ್ಚಿನ ಅತ್ಯಾಚಾರ ನಡೆದ ರಾಷ್ಟ್ರವಾಗಿ ದ. ಆಫ್ರಿಕಾ ಗುರುತಿಸಲ್ಪಟ್ಟಿದೆ.

ದ. ಆಫ್ರಿಕಾ

ದ. ಆಫ್ರಿಕಾ

ಇದೇ ಕಾರಣಕ್ಕೆ ದ. ಆಫ್ರಿಕಾದ ರಾಜಧಾನಿ ಜೋಹಾನ್ನೆಸ್ಬರ್ಗ್ "ವಿಶ್ವದ ಅತ್ಯಾಚಾರಿಗಳ ರಾಜಧಾನಿ" ಎಂಬ ಕುಖ್ಯಾತಿಯನ್ನೂ ಪಡೆದಿದೆ.

ಯು.ಎಸ್.ಎ

ಯು.ಎಸ್.ಎ

ವಿಶ್ವದ ಸುಪರ್ ಪವರ್ ಆಗಿರುವ ಅಮೇರಿಕಾ ಅತ್ಯಾಚಾರದಲ್ಲಿಯೂ ಪ್ರಥಮ ಸ್ಥಾನದಲ್ಲಿದೆ. ಇದರಲ್ಲಿ ಅತ್ಯಾಚಾರ ನಡೆಸಿದವರು 99% ಪುರುಷರೇ ಆಗಿದ್ದಾರೆ. ಆದರೆ ಅತ್ಯಾಚಾರವಾಗಿರುವುದು 91% ಮಹಿಳೆಯರ ಮೇಲೆ ಹಾಗೂ 9% ಪುರುಷರ ಮೇಲೆ. National Violence Against Women Survey ಸಂಸ್ಥೆ ನಡೆಸಿದ ಸಮೀಕ್ಷೆಯ ಪ್ರಕಾರ ಪ್ರತಿ ಆರರಲ್ಲಿ ಓರ್ವ ಮಹಿಳೆ ಮತ್ತು ಪ್ರತಿ ಮೂವತ್ತಮೂರರಲ್ಲಿ ಓರ್ವ ಪುರುಷನ ಮೇಲೆ ಅವರ ಜೀವಿತಾವಧಿಯಲ್ಲಿ ಕನಿಷ್ಠ ಒಮ್ಮೆಯಾದರೂ ಅತ್ಯಾಚಾರ ಯತ್ನ ಅಥವಾ ಅತ್ಯಾಚಾರ ಎಸಗಲಾಗಿದೆ.

ಯು.ಎಸ್.ಎ

ಯು.ಎಸ್.ಎ

ಅದರಲ್ಲೂ ಕಾಲೇಜಿಗೆ ಹೋಗುವ ಯುವತಿಯರಲ್ಲಿ ಕಾಲು ಭಾಗದಷ್ಟು ಯುವತಿಯರು ತಮ್ಮ ಹದಿನಾಲ್ಕು ವರ್ಷ ವಯಸ್ಸಿಗೇ ಅತ್ಯಾಚಾರದ ಪ್ರಯತ್ನ ಅಥವಾ ಅತ್ಯಾಚಾರವನ್ನು ಅನುಭವಿಸಿದ್ದಾರೆ. ಇಲ್ಲಿ ಮನೆಯಿಂದ ಹೊರಗೆ ಆಗುವ ಅತ್ಯಾಚಾರಗಳು ಬಹಳ ಕಡಿಮೆ. ಹೆಚ್ಚಿನವು ಮನೆಯೊಳಗೇ ಸಂಭವಿಸುತ್ತವೆ.

English summary

Top Countries With Highest Rape Crime

Here is the list of top countries with highest rape crime. You would be amazed to read that the most developed countries like U.S., Sweden, France, Canada, UK and Germany are the most immersed ones in this crime.
X
Desktop Bottom Promotion