For Quick Alerts
ALLOW NOTIFICATIONS  
For Daily Alerts

ಮಸಾಲೆ ಪದಾರ್ಥಗಳಲ್ಲಿ ಎತ್ತಿದ ಕೈ - ನಮ್ಮ ಭಾರತ

By Arshad
|

ವಿಶ್ವದಲ್ಲಿ ಭಾರತದ ಹೆಸರನ್ನು ಬೆಳಗಿರುವ ವಿಷಯಗಳಲ್ಲಿ ಭಾರತೀಯ ಅಡುಗೆಗಳೂ ಒಂದು. ಒಟ್ಟು ಇಪ್ಪತ್ತೊಂಬತ್ತು ರಾಜ್ಯಗಳ ಲೆಕ್ಕವಿಲ್ಲದಷ್ಟು ಅಡುಗೆಗಳು ನೂರಾರು ವರ್ಷಗಳಿಂದ ಭಾರತೀಯರ ಜಿಹ್ವಾಚಾಪಲ್ಯವನ್ನು ತಣಿಸುತ್ತಾ ಬಂದಿದ್ದು ಅವುಗಳಲ್ಲಿ ಹಲವು ಪಂಚತಾರಾ ಹೋಟೆಲುಗಳಲ್ಲಿಯೂ ನಿತ್ಯದ ಅಡುಗೆಗಳಾಗಿ ರಾರಾಜಿಸುತ್ತಿವೆ.

ಎಣ್ಣೆಯಿಲ್ಲದೇ ನವಿರಾಗಿರುವ ರೊಟ್ಟಿಯ ತುಣುಕನ್ನು ಬಟರ್ ಚಿಕನ್ ಗಸಿಯಲ್ಲಿ ಮುಳುಗಿಸಿ ಬಾಯಲ್ಲಿಟ್ಟರೆ ಅದರ ರುಚಿ ಮತ್ತು ಸ್ವಾದವೇ ಬೇರೆ. ಉಬ್ಬಿದ ಪೂರಿಯನ್ನು ಛೋಲೆಮಸಾಲೆಯೊಂದಿಗೆ ತಿನ್ನುವ ರುಚಿಯೇ ಬೇರೆ. ಇದಕ್ಕೆಲ್ಲಾ ಕಾರಣ ಇದರಲ್ಲಿರುವ ಭಾರತೀಯ ಮಸಾಲೆಗಳು. ಬ್ರಿಟಿಷರನ್ನು ವ್ಯಾಪಾರಕ್ಕಾಗಿ ಸೆಳೆದ ಈ ಭಾರತೀಯ ಮಸಾಲೆಗಳು ಆರೋಗ್ಯಕರವೂ ಹೌದು, ರುಚಿಕರವೂ ಹೌದು. ಆದರೆ ಈ ಮಸಾಲೆಗಳ ಬಗ್ಗೆ ನಾವು ತಿಳಿದುಕೊಂಡಿರುವ ಮಾಹಿತಿಗಳೂ ಮಾತ್ರ ಅತ್ಯಲ್ಪವಾಗಿವೆ. ಯುವಜನರ ಹಾಟ್ ಫೇವರೆಟ್ ಬೀದಿ ಬದಿ ಪಾನಿಪೂರಿಯ ವೈಶಿಷ್ಟ್ಯವೇನು?

ಒಂದು ವೇಳೆ ವಿದೇಶದ ಯಾವುದಾದರೂ ಸ್ನೇಹಿತರು ಇದರ ಬಗ್ಗೆ ನಿಮ್ಮಲ್ಲಿ ವಿಚಾರಿಸಿದರೆ 'ನಮಗೆ ಗೊತ್ತಿಲ್ಲ' ಎಂದು ಉತ್ತರಿಸುವ ಬದಲು ಇದರ ಬಗ್ಗೆ ಕೊಂಚ ಅರಿತಿರುವುದು ಉತ್ತಮ. ನಿಮ್ಮ ನೆರವಿಗಾಗಿ ಹಲವು ಮಾಹಿತಿಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ. ಟಿಪ್ಪಣಿ: ಈ ಖಾದ್ಯಗಳನ್ನು ನೋಡುವಾಗ ಬಾಯಲ್ಲಿ ನೀರೂರಿದರೆ ಅದಕ್ಕೆ ನಾವು ಜವಾಬ್ದಾರರಲ್ಲ..!

ಈ ಅಪ್ರತಿಮ ಆರು ರುಚಿಗಳು

ಈ ಅಪ್ರತಿಮ ಆರು ರುಚಿಗಳು

ರುಚಿಗಳಲ್ಲಿ ಒಟ್ಟು ಆರು ವಿಧಗಳಿವೆ. ಸಿಹಿ, ಹುಳಿ, ಉಪ್ಪು, ಕಹಿ, ಖಾರ ಮತ್ತು ಒಗರು. ವಿಚಿತ್ರವೆಂದರೆ ಈ ಎಲ್ಲಾ ಆರು ರುಚಿಗಳನ್ನು ಒಂದೇ ಖಾದ್ಯದಲ್ಲಿ ಎಂದಿಗೂ ಪಡೆಯಲು ಸಾಧ್ಯವಿಲ್ಲ.

ಭಾರತೀಯ ರುಚಿಯ ಮೂಲ: ಮಸಾಲೆಗಳು

ಭಾರತೀಯ ರುಚಿಯ ಮೂಲ: ಮಸಾಲೆಗಳು

ಮಸಾಲೆಗಳಿಲ್ಲದ ಭಾರತೀಯ ಅಡುಗೆಗಳು ಅತಿ ಕಡಿಮೆ. ಉದಾಹರಣೆಗೆ ಇಡ್ಲಿ. ಆದರೆ ಇದನ್ನು ಹಾಗೇ ಸೇವಿಸುವ ಬದಲು ಮಸಾಲೆ ಇರುವ ಬೇರೆ ಖಾದ್ಯಗಳ ಜೊತೆಗೇ (ಉದಾಹರಣೆಗೆ ಸಾಂಬಾರ್)ಇದನ್ನು ಸೇವಿಸುವ ಪರಿ ಭಾರತೀಯ ಅಡುಗೆಯ ವೈಶಿಷ್ಟ್ಯವಾಗಿದೆ. ಅಲ್ಲದೇ ನಮ್ಮ ಅಡುಗೆಗಳಲ್ಲಿ ಒಂದಕ್ಕಿಂತ ಹೆಚ್ಚು ತರಹದ ಮಸಾಲೆಗಳನ್ನು ಉಪಯೋಗಿಸಲಾಗುತ್ತದೆ. ಬೇರೆ ಯಾವ ದೇಶವೂ ಇಷ್ಟು ವೈವಿಧ್ಯದ ಮಸಾಲೆಗಳನ್ನು ಬಳಸದಿರುವುದು ಒಂದು ದಾಖಲೆಯಾಗಿದೆ.

ಭಾರತೀಯ ಪುರಾತನ ಸಿಹಿ ಹೇಗಿತ್ತು ಗೊತ್ತೇ?

ಭಾರತೀಯ ಪುರಾತನ ಸಿಹಿ ಹೇಗಿತ್ತು ಗೊತ್ತೇ?

ಭಾರತಕ್ಕೆ ಸಕ್ಕರೆಯನ್ನು ಪರಿಚಯಿಸಿದವರು ಪೋರ್ಚುಗೀಸಲು. ಇದಕ್ಕೂ ಮುನ್ನ ಸಕ್ಕರೆ, ಬೆಲ್ಲದ ಅರಿವೇ ಇಲ್ಲದ ಭಾರತೀಯರು ಜೇನುತುಪ್ಪ ಮತ್ತು ವಿವಿಧ ಹಣ್ಣುಗಳ ರಸ ಅಥವಾ ಈ ರಸಗಳನ್ನು ಒಣಗಿಸಿದ ಫಲಕಗಳನ್ನು ಉಪಯೋಗಿಸುತ್ತಿದ್ದರು.

ಚಿಕನ್ ಟಿಕ್ಕಾ ಮಸಾಲೆಯ ರಹಸ್ಯ

ಚಿಕನ್ ಟಿಕ್ಕಾ ಮಸಾಲೆಯ ರಹಸ್ಯ

ಭಾರತದ ವಿಶಿಷ್ಟ ಮತ್ತು ಅತಿಬೇಡಿಕೆಯ ಖಾದ್ಯವಾದ ಚಿಕನ್ ಟಿಕ್ಕಾ ಮೂಲತಃ ಭಾರತದ್ದಲ್ಲ. ಇದು ಸ್ಕಾಟ್ಲೆಂಡಿನ ಗ್ಲಾಸ್ಗೋವ್ ಪಟ್ಟಣದಲ್ಲಿ ಮೊತ್ತ ಮೊದಲು ಪ್ರಾರಂಭವಾಗಿದ್ದು ಬಳಿಕ ಬ್ರಿಟಿಷರ ಮೂಲಕ ಭಾರತದಲ್ಲಿಯೂ ಪರಿಚಯಿಸಲ್ಪಟ್ಟಿತು.

ಜನಪ್ರಿಯ ದಮ್ ಬಿರಿಯಾನಿ ರಹಸ್ಯ

ಜನಪ್ರಿಯ ದಮ್ ಬಿರಿಯಾನಿ ರಹಸ್ಯ

ಬಿರಿಯಾನಿಯ ರುಚಿಗೆ ಅದನ್ನು ಚಿಕ್ಕ ಉರಿಯಲ್ಲಿ ಮುಚ್ಚಳ ಮುಚ್ಚಿ ಒಳಗಿನ ಹಬೆಯಿಂದ ಅಕ್ಕಿ ಬೇಯುವಂತೆ ಮಾಡುವುದು ಮತ್ತು ಮಸಾಲೆಗಳ ಸಾರವನ್ನು ಹೀರಿಕೊಳ್ಳುವಂತೆ ಮಾಡುವುದು ದಮ್ ಬಿರಿಯಾನಿಯ ವೈಶಿಷ್ಟ್ಯವಾಗಿದೆ. ಆದರೆ ಈ ವಿಧಾನ ವಾಸ್ತವವಾಗಿ ಅವಧ್‌ನ ನವಾಬ್ ರವರು ಬಡವರಿಗೆ ನೀಡುವ ಉತ್ತಮ ಮತ್ತು ಪೌಷ್ಟಿಕ ಅಹಾರ ಹೆಚ್ಚು ಕಾಲ ತಾಜಾ ಆಗಿರಬೇಕೆಂದು ನೀಡಿದ ಆಜ್ಞೆಯ ಫಲವಾಗಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಜನಪ್ರಿಯ ದಮ್ ಬಿರಿಯಾನಿ ರಹಸ್ಯ

ಜನಪ್ರಿಯ ದಮ್ ಬಿರಿಯಾನಿ ರಹಸ್ಯ

ಬಡವರಿಗೆ ಬಿರಿಯಾನಿ ತಯಾರಿಸಿದ ಬಳಿಕ ಮಣ್ಣಿನ ಪಾತ್ರೆಯಲ್ಲಿ ಹಾಕಿ ಇದರ ರೊಟ್ಟಿಯ ಹಿಟ್ಟನ್ನು ಲಟ್ಟಿಸಿ ಮುಚ್ಚಳದಂತೆ ಮುಚ್ಚಲಾಗುತ್ತಿತ್ತು. ಈ ಮಡಕೆ ಬಡವರಿಗೆ ತಲುಪುವಷ್ಟರಲ್ಲಿ ರೊಟ್ಟಿಯು ಸಹಾ ಬೆಂದು ಒಳಗಿನ ಬಿರಿಯಾನಿ ಸಹಾ ಪೂರ್ಣವಾಗಿ ಬೆಂದು ಉತ್ತಮವಾದ ರುಚಿಯ ಬಿರಿಯಾನಿ ಅವರಿಗೆ ಲಭ್ಯವಾಗುತ್ತಿತ್ತು. ಇದು ಎಷ್ಟು ಜನಪ್ರಿಯವಾಯಿತೆಂದರೆ ಈ ವಿಧಾನವನ್ನು ಅನುಸರಿಸಿ ಮಾಡಿದ ಅಡುಗೆಗಳಿಗೆ 'ದಮ್' ಎಂಬ ಪದವನ್ನೇ ಉಪಯೋಗಿಸಲಾಗುತ್ತದೆ.

ಭಾರತೀಯ ಅಡುಗೆಗಳ ಮೂರು ಪ್ರಾಕಾರಗಳು

ಭಾರತೀಯ ಅಡುಗೆಗಳ ಮೂರು ಪ್ರಾಕಾರಗಳು

ಭಾರತೀಯ ಅಡುಗೆ ಅಥವಾ ಆಹಾರವನ್ನು ಮೂರು ಪ್ರಾಕಾರಗಳಲ್ಲಿ ವಿಂಗಡಿಸಲಾಗಿದೆ. ೧) ಸಾತ್ವಿಕ ಆಹಾರ (ತಾಜಾ ಹಣ್ಣುಗಳು ಮತ್ತು ತರಕಾರಿಗಳು), ೨) ರಾಜ್ಸಿಕ ಆಹಾರ (ಎಣ್ಣೆ ಮತ್ತು ಮಸಾಲೆಯುಕ್ತ ಆಹಾರಗಳು) ೩) ತಾಸ್ಮಿಕ ಆಹಾರ - (ಮಾಂಸ ಮತ್ತು ಮದ್ಯ ಹೊಂದಿರುವ ಆಹಾರಗಳು)

ಭಾರತದ ಪ್ರಖ್ಯಾತ ಆದರೆ ಬೇರೆ ದೇಶದಿಂದ ಪರಿಚಯಿಸಲ್ಪಟ್ಟ ಆಹಾರಗಳು

ಭಾರತದ ಪ್ರಖ್ಯಾತ ಆದರೆ ಬೇರೆ ದೇಶದಿಂದ ಪರಿಚಯಿಸಲ್ಪಟ್ಟ ಆಹಾರಗಳು

ಭಾರತದಲ್ಲಿ ಇಂದು ಪ್ರಖ್ಯಾತವಾಗಿರುವ ಹಲವು ಅಡುಗೆ ಮತ್ತು ಸಾಂಬಾರವಸ್ತುಗಳು ವಾಸ್ತವವಾಗಿ ಬೇರೆ ದೇಶದಿಂದ ಪರಿಚಯಿಸಲ್ಪಟ್ಟಿವೆ. ಇದರಲ್ಲಿ ಪ್ರಮುಖವಾದವು ಸಮೋಸ (ಮೂಲತಃ ಅರೇಬಿಯಾ, ಸಂಬೋಸಾ ಎಂಬ ಹೆಸರಿನಿಂದ ಸಮೋಸಾ ಆಗಿದೆ)

ಭಾರತದ ಪ್ರಖ್ಯಾತ ಆದರೆ ಬೇರೆ ದೇಶದಿಂದ ಪರಿಚಯಿಸಲ್ಪಟ್ಟ ಆಹಾರಗಳು

ಭಾರತದ ಪ್ರಖ್ಯಾತ ಆದರೆ ಬೇರೆ ದೇಶದಿಂದ ಪರಿಚಯಿಸಲ್ಪಟ್ಟ ಆಹಾರಗಳು

ಗುಲಾಬ್ ಜಾಮೂನು(ಪರ್ಷಿಯಾ), ಚಹಾ (ಚೀನಾ), ಜಿಲೇಬಿ (ಪರ್ಷಿಯಾ), ಮೆಣಸು (ಮೆಕ್ಸಿಕೋ), ಕೇಸರಿ (ಅಫ್ಘಾನಿಸ್ತಾನ), ಇತ್ಯಾದಿ.

English summary

Yummmmmmy Facts About Indian Food You Didn't Know

Indian food is everyone's favourite. With over 29 states contributing to the Indian cuisine and with the number of dishes we have to our name, we should be nothing but proud of it. Indian food is rich in flavour and texture, the taste of soft rotis dipped with butter chicken gravy, or the fluffy puris with chole is simply the best. One of the many reasons why Indian food is loved by all is because of the spices it contains.
X
Desktop Bottom Promotion