For Quick Alerts
ALLOW NOTIFICATIONS  
For Daily Alerts

ನೀವು ಎಡ ಮೆದುಳಿನವರೇ ಅಥವಾ ಬಲ ಮೆದುಳಿನವರೇ?

By Deepu
|

ಅರೆ ನಮಗೆ ಇರುವುದೇ ಒಂದು ತಲೆ ಅದರಲ್ಲಿ ಇರುವುದು ಒಂದು ಮೆದುಳು ನೀವು ಯಾವ ರೀತಿ ಕೇಳುತ್ತಿದ್ದೀರಿ ಎಂಬುದು ನಿಮ್ಮ ಅನಿಸಿಕೆಯೇ? ಹೌದು ಮಾನವನ ಮೆದುಳು ನೋಡಲು ಒಂದೇ ಆಗಿ ಕಂಡರು ಅದನ್ನು ವೈಜ್ಞಾನಿಕವಾಗಿ ಎರಡು ಭಾಗ ಮಾಡಬಹುದು. ಒಂದು ಬಲ ಮೆದುಳು ಮತ್ತೊಂದು ಎಡ ಮೆದುಳು ಎಂದು. ಈ ಎರಡು ಮೆದುಳುಗಳ ಕಾರ್ಯ ವೈಖರಿಯು ಬೇರೆ ಬೇರೆಯಾಗಿರುತ್ತವೆ.

ಮಾನವನ ವರ್ತನೆಯು ಅವನ ಯಾವ ಮೆದುಳು ಹೆಚ್ಚಾಗಿ ಬೆಳೆದಿದೆ ಮತ್ತು ಹೆಚ್ಚು ಕ್ರಿಯಾಶೀಲವಾಗಿದೆ ಎಂಬುದನ್ನು ಅವಲಂಬಿಸಿ ನಿರ್ಧಾರವಾಗುತ್ತದೆ. ಅಲ್ಲದೆ, ನಮ್ಮ ಶಿಕ್ಷಣದ ಪ್ರಗತಿಯು ಸಹ ಈ ಎಡ ಮತ್ತು ಬಲ ಮೆದುಳಿನ ಬೆಳವಣಿಗೆಯನ್ನು ಅವಲಂಬಿಸಿ ನಿರ್ಧಾರವಾಗುತ್ತದೆ. ಎಷ್ಟಾದರು ಕಲಿಕೆ ಎಂದರೆ ವರ್ತನೆಯಲ್ಲಾಗುವ ಬದಲಾವಣೆಯಲ್ಲವೇ?

ಯಾವ ಮೆದುಳನ್ನು ಒಬ್ಬ ವ್ಯಕ್ತಿ ಬಳಸುತ್ತಿದ್ದಾನೆ ಎಂಬುದರ ಆಧಾರದ ಮೇಲೆ ಅವನ ವ್ಯಕ್ತಿತ್ವವನ್ನು ಮತ್ತು ಆತನ ಅರ್ಥ ಗ್ರಹಿಕೆಯ ಸಾಮರ್ಥ್ಯವನ್ನು ನಾವು ಗ್ರಹಿಸಬಹುದು. ಇದೇ ಕಾರಣಕ್ಕಾಗಿ ಜನರು ತಾವು ಎದುರಿಸುವ ಸನ್ನಿವೇಶಗಳಿಗೆ ಬೇರೆ ಬೇರೆ ರೀತಿಯಾಗಿ ಪ್ರತಿಕ್ರಿಯಿಸುತ್ತಾರೆ. ಕೆಲವರು ತಾಳ್ಮೆಯಿಂದ ಪ್ರತಿಕ್ರಿಯಿಸಿದರೆ, ಇನ್ನೂ ಕೆಲವರು ಅದಕ್ಕೆ ವಿಪರೀತವಾಗಿ ಪ್ರತಿಕ್ರಿಯಿಸುತ್ತಾರೆ! ಕೆಲವರು ಸಣ್ಣ ವಿಚಾರವನ್ನು ದೊಡ್ಡದಾಗಿ ಮಾಡುತ್ತಾರೆ, ಇನ್ನೂ ಕೆಲವರು ದೊಡ್ಡ ವಿವಾದಗಳಿಗು ಸಹ ತಣ್ಣಗೆ ಪ್ರತಿಕ್ರಿಯಿಸಿ ಸುಮ್ಮನೆ ಹೋಗುತ್ತಾರೆ. ಮಿದುಳಿಗೆ ಅತ್ಯಾವಶ್ಯಕ ಈ 4 ವಿಟಮಿನ್ಸ್

ಇದು ಅವರು ಯಾವ ಮೆದುಳನ್ನು ಹೆಚ್ಚಾಗಿ ಬಳಸುತ್ತಾರೆ ಎಂಬುದರ ಮೇಲೆ ಇದು ನಿರ್ಧಾರವಾಗುತ್ತದೆ. ನೀವು ನಿಮ್ಮ ಜೀವನದಲ್ಲಿ ಬಲ ಮೆದುಳನ್ನು ಹೆಚ್ಚಾಗಿ ಬಳಸುವವರನ್ನು ನೋಡಿರುತ್ತೀರಿ. ಅಂದರೆ ಅವರು ತಮ್ಮ ಬಲ ಮೆದುಳನ್ನು ಹೆಚ್ಚಿಗೆ ಬಳಸಿಕೊಳ್ಳುತ್ತಾ ಇರುತ್ತಾರೆ. ಇನ್ನುಳಿದವರು ತಮ್ಮ ಎಡಗಡೆಯ ಮೆದುಳನ್ನು ಹೆಚ್ಚು ಬಳಸಿಕೊಂಡಿರುತ್ತಾರೆ. ಇನ್ನೂ ಕೆಲವರು ಇರುತ್ತಾರೆ, ಅವರು ಎರಡು ಮೆದುಳುಗಳನ್ನು ಬಳಸಿಕೊಳ್ಳುತ್ತಾ ಇರುತ್ತಾರೆ. ಇದನ್ನು ಗುರುತಿಸುವುದು ಹೇಗೆ ಎಂದು ಕೊಂಡಿರಾ?

ಎಡ ಮತ್ತು ಬಲಗೈಯನ್ನು ಬಳಸುವ ಜನರನ್ನು ನೋಡಿ ಆಗ ನಿಮಗೆ ಅರ್ಥವಾಗುತ್ತದೆ. ಅವರು ಸ್ವಲ್ಪ ಹೆಚ್ಚಿನ ಬುದ್ಧಿವಂತರಾಗಿರುತ್ತಾರೆ. ನೀವು ಸಹ ನಿಮ್ಮ ಎರಡು ಮೆದುಳುಗಳನ್ನು ಬಳಸಿಕೊಂಡರೆ ಯಶಸ್ಸನ್ನು ಬೇಗ ಸಾಧಿಸಬಹುದು. ಇದರಿಂದ ನಿಮ್ಮ ವಿಮರ್ಶಾತ್ಮಕ ಚಿಂತನೆ ಸಾಮರ್ಥ್ಯ ಹೆಚ್ಚುತ್ತದೆ, ಮೆದುಳಿನ ಪ್ರಕ್ರಿಯೆಯು ಸಹ ಸುಧಾರಿಸುತ್ತದೆ. ಬರೀ ಹಾಗಾಗುತ್ತದೆ ಹೀಗಾಗುತ್ತದೆ ಎಂದು ಮಾತ್ರ ಹೇಳುತ್ತಿದ್ದೀವಿ ಈ ಬಲ ಮತ್ತು ಎಡ ಮೆದುಳುಗಳು ಏನು ಮಾಡುತ್ತವೆ ಎಂದು ವಿವರಿಸಲಿಲ್ಲ ಎಂದು ಬೇಸರಿಸಿಕೊಳ್ಳಬೇಡಿ. ಬನ್ನಿ ಅದರ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡುತ್ತೇವೆ, ಮುಂದೆ ಒದಿ...

ಎಡಗಡೆ ಇರುವ ಮೆದುಳು

ಎಡಗಡೆ ಇರುವ ಮೆದುಳು

ಎಡಗಡೆ ಇರುವ ಮೆದುಳನ್ನು ಬಳಸುವ ಜನರಲ್ಲಿ ಮೌಖಿಕ ಕೌಶಲ್ಯಗಳು ಚೆನ್ನಾಗಿರುತ್ತವೆ. ಇವರು ಅದ್ಭುತ ವಾಗ್ಮಿಗಳಾಗಿರುತ್ತಾರೆ. ಇವರಲ್ಲಿ ತಾರ್ಕಿಕ ಕೌಶಲ್ಯಗಳು ಸಹ ಚೆನ್ನಾಗಿರುತ್ತವೆ. ಇಡೀ ಪರಿಸ್ಥಿತಿಯನ್ನು ನೋಡಿ ಅದನ್ನು ಅರ್ಥೈಸುವ ಸಾಮರ್ಥ್ಯ ಇವರಿಗಿರುತ್ತದೆ. ಅವರ ಭಾವನೆಗಳು ಹಿಡಿತದಲ್ಲಿರುತ್ತವೆ ಮತ್ತು ಅದನ್ನು ಯೋಜಿತ ರೀತಿಯಲ್ಲಿ ಇವರು ಬಳಸಿಕೊಳ್ಳುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಎಡಗಡೆ ಇರುವ ಮೆದುಳು

ಎಡಗಡೆ ಇರುವ ಮೆದುಳು

ಅಷ್ಟೇ ಅಲ್ಲದೆ ಇವರಲ್ಲಿರುವ ಉತ್ತಮ ಸಂವಹನ ಕೌಶಲ್ಯಗಳು ಜನರನ್ನು ಆಕರ್ಷಿಸುವುದಲ್ಲದೆ, ಇವರಿಗೆ ಲಿಖಿತ ಮತ್ತು ಮೌಖಿಕ ಕೌಶಲ್ಯಗಳು ಚೆನ್ನಾಗಿ ಸಿದ್ಧಿಸಿರುತ್ತವೆ. ಇದರ ಜೊತೆಗೆ ಗಣಿತ ಮತ್ತು ಲೆಕ್ಕಾಚಾರದ ಸಾಮರ್ಥ್ಯ ಸಹ ಚೆನ್ನಾಗಿರುತ್ತದೆ.

ಪ್ರಮುಖ ಗುಣಗಳು

ಪ್ರಮುಖ ಗುಣಗಳು

ತಾರ್ಕಿಕ ಜ್ಞಾನ, ವಿಚಾರ ಶಕ್ತಿಯುಳ್ಳವರು, ವಿವರವಾಗಿ ಮಾಹಿತಿ ತಿಳಿದುಕೊಂಡಿರುವರು, ನಿಯಂತ್ರಣವನ್ನು ಹೊಂದಿರುವವರು ಮತ್ತು ವಿಶ್ಲೇಷಣೆ ಗುಣವುಳ್ಳವರು ಆಗಿರುತ್ತಾರೆ.

ಬಲ ಮೆದುಳು

ಬಲ ಮೆದುಳು

ಬಲ ಮೆದುಳು ಕೆಲಸ ಮಾಡುವವರಲ್ಲಿ, ಚಿತ್ರಗಳಿಗೆ ಗಮನವಹಿಸುವ ಸಾಮರ್ಥ್ಯ ಇರುತ್ತದೆ, ಇವರಲ್ಲಿ ಜಾಗತಿಕ ಮಟ್ಟದಲ್ಲಿ ಪರಿಸ್ಥಿತಿಗಳನ್ನು ವಿವರಿಸುವ ಸಾಮರ್ಥ್ಯ ಇರುತ್ತದೆ. ಇವರಲ್ಲಿ ತಾರ್ಕಿಕ ಜ್ಞಾನ ಇದ್ದರೂ ಅದು ಕಡಿಮೆ ಇರುತ್ತದೆ. ಇವರಿಗೆ ಸಂಖ್ಯೆಗಳನ್ನು, ಅಕ್ಷರಗಳನ್ನು, ಹೆಸರುಗಳನ್ನು ನೆನಪಿಸಿಕೊಳ್ಳುವ ಸಾಮರ್ಥ್ಯ ಕೂಡ ಕಡಿಮೆ ಇರುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಬಲ ಮೆದುಳು

ಬಲ ಮೆದುಳು

ಇವರು ಸ್ವಭಾವತಃ ಕಲಾವಿದರಾಗಿರುವುದರಿಂದಾಗಿ, ಕಲ್ಪನಾ ಶಕ್ತಿ ಮತ್ತು ಸೃಜನಶೀಲತೆ ಇವರಲ್ಲಿ ಹೆಚ್ಚಿರುತ್ತದೆ. ಇವರು ಯಾವುದೇ ಆಯಾಸಗೊಳ್ಳದೆ ಒಂದು ಕತೆಯನ್ನು ಹಲವಾರು ತಿರುವುಗಳೊಂದಿಗೆ ಬರೆಯಬಲ್ಲರು. ಇವರಲ್ಲಿ ಅಭಿವ್ಯಕ್ತಿ ಕೌಶಲ್ಯ ಇದ್ದರು, ಒಳ್ಳೆಯ ವಾಗ್ಮಿಗಳು ಇವರಾಗಿರುವುದಿಲ್ಲ. ಚೆನ್ನಾಗಿ ಬರೆಯಬಲ್ಲರು. ಇವರಿಗೆ ತಮ್ಮದೇ ಆದ ಆಳವಾದ ಆಲೋಚನೆಗಳು ಇರುತ್ತವೆ ಮತ್ತು ಇವರು ಭಾವನಾತ್ಮಕ ಜೀವಿಗಳಾಗಿರುತ್ತಾರೆ.

ಪ್ರಮುಖ ಗುಣಗಳು

ಪ್ರಮುಖ ಗುಣಗಳು

ಇವರು ತಮ್ಮ ಭಾವನೆಯನ್ನು ಇತರರೊಂದಿಗೆ ಮುಕ್ತ ಮನಸ್ಸಿನಿಂದ ಹಂಚಿಕೊಳ್ಳುವವರಾಗಿದ್ದು, ಕಲ್ಪನಾ ಶಕ್ತಿ ಮತ್ತು ಸೃಜನಶೀಲತೆ ಇವರಲ್ಲಿ ಹೆಚ್ಚಿರುತ್ತದೆ

English summary

Which Brain Are You:Left Or Right?

Do you want to know what are the attributes of a person using the right or left side of the brain? Read on the article to find out which part of the brain you use more and your personality based on that...
Story first published: Friday, December 11, 2015, 11:21 [IST]
X
Desktop Bottom Promotion