For Quick Alerts
ALLOW NOTIFICATIONS  
For Daily Alerts

ಮೌಂಟ್ ಎವರೆಸ್ಟ್ ಬಗ್ಗೆ ನೀವು ತಿಳಿದಿರದ ಅಚ್ಚರಿಯ ಸಂಗತಿಗಳು

|

ಪ್ರಪಂಚದ ಅತ್ಯಂತ ಎತ್ತರವಾದ ಪರ್ವತವೆಂದು ಖ್ಯಾತಿ ಪಡೆದಿರುವುದು ಮೌಂಟ್ ಎವರೆಸ್ಟ್ ಪರ್ವತವು ಮಾನವನ ಎದುರಿಗೆ ಸೋತಿರಲಿಲ್ಲ. ಆದರೆ 60 ವರ್ಷಗಳ ಹಿಂದೆ ಸರ್ ಎಡ್ಮಂಡ್ ಹಿಲರಿ ಮತ್ತು ತೇನ್‌ಜಿಂಗ್ ನೋರ್ಗೆ ಗೆದ್ದು , ಮೌಂಟ್ ಎವರೆಸ್ಟನ್ನು ಯಶಸ್ವಿಯಾಗಿ ಏರಿದ ಪರ್ವತಾರೋಹಿಗಳು ಎಂಬ ಅಭಿದಾನಕ್ಕೆ ಪಾತ್ರರಾದರು. ಇದಾದ ಮೇಲೆ ಈ ಪರ್ವತವನ್ನು ಹಲವರು ಏರಿ ದಾಖಲೆಯ ಪುಟವನ್ನು ಸೇರಿದರು.

ಕೆಲವರು ಈ ನಿಟ್ಟಿನಲ್ಲಿ ಯಶಸ್ವಿಯಾಗಿ ಕೆಳಗೆ ಬಂದರೆ, ಇನ್ನೂ ಕೆಲವರು ಇದೇ ದಾರಿಯಲ್ಲಿ ತಮ್ಮ ಬದುಕನ್ನು ಕೊನೆಗೊಳಿಸಿಕೊಂಡರು. ಹಿಮಾಲಯ ಎಂದರೆ ನಿಮ್ಮ ಮನಸ್ಸಿಗೆ ಮೊದಲು ಬರುವುದು ಮೌಂಟ್ ಎವರೆಸ್ಟ್. ಅದರ ಎತ್ತರ, ಅಗಾಧತೆ, ಮಂಜು ಕವಿದ ಪರ್ವತಗಳು ನಿಮ್ಮ ಮನಸ್ಸಿನಲ್ಲಿ ಹಾದು ಹೋಗುತ್ತವೆ. ಈ ಪರ್ವತ ಶ್ರೇಣಿಗಳಲ್ಲಿ

ಕೆಲವೊಂದು ಪರ್ವತಗಳು ದಂತ ಕಥೆಗಳಾಗಿ ಖ್ಯಾತಿ ಪಡೆದಿದ್ದರೆ, ಮತ್ತೆ ಕೆಲವು ಹಿಮದ ನಡುವೆ ಮುಚ್ಚಿ ಹೋಗಿವೆ. ಬನ್ನಿ ಈ ಹಿಮದ ನಡುವೆ ಮುಚ್ಚಿ ಹೋಗಿರುವ ಜಗತ್ತಿನ ಎತ್ತರವಾದ ಪರ್ವತದ ಕುರಿತಾದ ನಿಮಗೆ ತಿಳಿಯದ ಕೆಲವೊಂದು ಸಂಗತಿಗಳನ್ನು ನಾವು ಇಂದು ನಿಮಗೆ ತಿಳಿಸುತ್ತಿದ್ದೇವೆ.

ಮೌಂಟ್ ಎವರೆಸ್ಟ್ ಎಂದರೆ ಎತ್ತರ, ಪರಿಸ್ಥಿತಿ , ಇತಿಹಾಸ, ಗೆಲುವು, ಸೋಲು, ಸಾವು-ನೋವು ಇತ್ಯಾದಿಗಳು ನಿಮ್ಮ ಮನಸ್ಸಿನಲ್ಲಿ ಹಾದು ಹೋಗಬಹುದು. ಆದರೆ ನಿಮಗೆ ಗೊತ್ತಿರದ ಕೆಲವೊಂದು ಕುತೂಹಲಕಾರಿ ಸಂಗತಿಗಳನ್ನು ಇಂದು ತಿಳಿದುಕೊಳ್ಳಿ. ಮುಂದೆ ಓದಿ...

ಅತ್ಯಂತ ಕೊಳಕಾದ ಪರ್ವತ

ಅತ್ಯಂತ ಕೊಳಕಾದ ಪರ್ವತ

ಪ್ರಪಂಚದ ಎತ್ತರದ ಪರ್ವತ ಮೌಂಟ್ ಎವರೆಸ್ಟ್, ಪ್ರಪಂಚದ ಅತ್ಯಂತ ಕೊಳಕಾದ ಪರ್ವತವು ಸಹ ಹೌದು. ನಂಬಲಸಾಧ್ಯವಾದರು ಸತ್ಯ. ಇದನ್ನು ಗೆಲ್ಲಲು ಹೋಗಿ, ಗೆದ್ದ ಮತ್ತು ಸೋತ ಪ್ರತಿಯೊಬ್ಬ ಪರ್ವತಾರೋಹಿಯು ಇದಕ್ಕೆ ತನ್ನ ಕೊಡುಗೆ ಸಲ್ಲಿಸಿದ್ದಾನೆ. ಬಳಸದೆ ಬಿಟ್ಟ ವಸ್ತುಗಳು, ಪ್ಲಾಸ್ಟಿಕ್ ಇತ್ಯಾದಿಗಳು ಈ ಪರ್ವತದ ಪರಿಸರವನ್ನು ಹಾಳು ಮಾಡಿಬಿಟ್ಟಿವೆ.

ಟ್ರಾಫಿಕ್ ಜಾಮ್!

ಟ್ರಾಫಿಕ್ ಜಾಮ್!

ಅಚ್ಚರಿಯಾಗುತ್ತಿದೆಯೇ? ಹೌದು ಮೌಂಟ್ ಎವರೆಸ್ಟ್ ಮೇಲೆ ಅಕ್ಷರಶಃ ಟ್ರಾಫಿಕ್ ಜಾಮ್ ಆಗುತ್ತದೆ. ಆದರೆ ಅದು ಮಾನವರ ಟ್ರಾಫಿಕ್ ಜಾಮ್. ಇದನ್ನು ಏರಲು ಪರ್ವತಾರೋಹಿಗಳು ಸಾಲುಗಟ್ಟಿ ನಿಂತಿರುತ್ತಾರೆ. ಹಾಗಾಗಿ ಇಲ್ಲಿ ಟ್ರಾಫಿಕ್ ಜಾಮ್ ಸಾಮಾನ್ಯ. ಅದರಲ್ಲಿಯೂ ಇದನ್ನು ಏರಲು ನಿರ್ದಿಷ್ಟ ಸಮಯ ಇರುವುದರಿಂದ ಆ ಸಮಯದಲ್ಲಿ ಇದು ಅತಿ ಹೆಚ್ಚಾಗಿ ಕಂಡು ಬರುತ್ತದೆ.

ವಿವಿಧ ಹೆಸರುಗಳು

ವಿವಿಧ ಹೆಸರುಗಳು

ಇದನ್ನು ಕೆಲವರು "ಚೋಮೊಲುಂಗ್ಮಾ" ಎಂದು ಕರೆದರೆ, ಮತ್ತೆ ಕೆಲವರು " ಸಗರ್‌ಮಾತಾ" ಎಂದು ಕರೆಯುತ್ತಾರೆ. ಹೌದು, ಮೊದಲನೆ ಹೆಸರನ್ನು ನೀಡಿದವರು ಟಿಬೆಟಿಯನ್ನರು. ಎರಡನೆ ಹೆಸರನ್ನು ನೀಡಿದವರು ನೇಪಾಳಿಗಳು. ಚೋಮೊಲುಂಗ್ಮಾ ಎಂದರೆ, " ಪರ್ವತಗಳ ದೇವತೆ" ಎಂದಾದರೆ, ಸಗರ್‌ಮಾತಾ ಎಂದರೆ " ಆಕಶದ ಮುಂದಲೆ" ಎಂದರ್ಥವಾಗುತ್ತದೆ.

ಎತ್ತರದ ಸಮಸ್ಯೆ

ಎತ್ತರದ ಸಮಸ್ಯೆ

ಈ ಪರ್ವತದ ಎತ್ತರವನ್ನು 8,848 ಮೀಟರ್ ಎಂದು ಗುರುತಿಸಲಾಗಿದೆ. ಇದನ್ನು ಹಲವಾರು ಚರ್ಚೆಗಳ ನಂತರ ನಿರ್ಧರಿಸಲಾಗಿದೆ. ಚೀನಾ ದೇಶವು ಈ ಪರ್ವತದಲ್ಲಿರುವ ಬಂಡೆಗಳ ಎತ್ತರವನ್ನು ಮಾತ್ರ ಪರಿಗಣನೆಗೆ ತೆಗೆದುಕೊಂಡಿದೆ.ಏನಾದರು ಆಗಲಿ ಇದರ ಎತ್ತರದ ಸಮಸ್ಯೆ ಈಗ ಇತ್ಯರ್ಥವಾಗಿದೆ.

21 ಬಾರಿ ಮೌಂಟ್ ಎವರೆಸ್ಟ್ ಏರಿ ದಾಖಲೆ ಮಾಡಿರುವವರು

21 ಬಾರಿ ಮೌಂಟ್ ಎವರೆಸ್ಟ್ ಏರಿ ದಾಖಲೆ ಮಾಡಿರುವವರು

ಬಹುತೇಕ ಮಂದಿ ಮೌಂಟ್ ಎವರೆಸ್ಟ್ ಹತ್ತಿ ಇಳಿದಿದ್ದಾರೆ. ಆದರೆ ಅಪಾ ಶೇರ್ಪಾ ಮತ್ತು ಫುರ್ಬಾ ಟಶಿ ಎಂಬ ಇಬ್ಬರು ತಮ್ಮ ಜೀವನದಲ್ಲಿ 21 ಬಾರಿ ಮೌಂಟ್ ಎವರೆಸ್ಟ್ ಹತ್ತಿ ಯಶಸ್ವಿಯಾಗಿ ಇಳಿದಿದ್ದಾರೆ. ಇವರು ಏರಿರುವ ಪರಿ ನೋಡಿದರೆ, ಇದು ಅವರ ಮನೆಯ ಪಕ್ಕ ಇರುವ ಮಾರುಕಟ್ಟೆಯೇನೋ ಅನಿಸುತ್ತದೆಯಲ್ಲವೆ? ಏನಾದರು ಆಗಲಿ ಅವರ ಸಾಧನೆಗೆ ನಮ್ಮ ಅಭಿನಂದನೆ ಸಲ್ಲಿಸೋಣ.

ಜೇಡಗಳ ಮನೆ

ಜೇಡಗಳ ಮನೆ

ಈ ಪರ್ವತವಿರುವ ಎತ್ತರದಲ್ಲಿ ಉಸಿರಾಡುವುದೇ ಕಷ್ಟ. ಆದರೆ ಆ ಪರ್ವತದ ಮೇಲೆ ಕಪ್ಪು ಜೇಡಗಳು ಬದುಕಿವೆ ಎಂದರೆ ನೀವು ನಂಬಲೆ ಬೇಕು. ಹೌದು, ಗಾಳಿಯ ಹೊಡೆತಕ್ಕೆ ಸಿಲುಕಿದ ಜೇಡಗಳು ಗಾಳಿಯ ಮೂಲಕ ಈ ಪರ್ವತದ ತುದಿಗೆ ಬಂದು ತಲುಪುತ್ತವೆ. ಅವುಗಳು ಇಲ್ಲಿನ ಬಂಡೆಗಳ ಬಿರುಕಿನಲ್ಲಿ ಆರಾಮವಾಗಿ ಗೂಡು ಕಟ್ಟಿ ವಾಸವಾಗಿರುತ್ತವೆ.

English summary

Unknown Facts About Mount Everest

Mount Everest is the highest land mark of the world. Does that huge height stop men to step their proud step on it? It has been 60 years that Sir Edmund Hillary and Tenjing Norgey had made history to be the first summiteers on the Mount Everest.
X
Desktop Bottom Promotion