For Quick Alerts
ALLOW NOTIFICATIONS  
For Daily Alerts

ಎಂತಹ ಧೈರ್ಯವಂತನ ಎದೆ ನಡುಗಿಸುವ ಭಯಂಕರ ಸ್ಥಳಗಳು!

By Super
|

ವಿಶ್ವಪರ್ಯಟನೆಯ ಬಯಕೆಯೇ? ಭಾರತವನ್ನೊಂದು ಬಾರಿ ಸುತ್ತಿ, ಜಗತ್ತೇ ನಿಮ್ಮೆದುರು ತೆರೆದುಕೊಳ್ಳುತ್ತದೆ ಎನ್ನುತ್ತಾರೆ ಹಿರಿಯರು. ಭೌಗೋಳಿಕವಾಗಿ ಎಲ್ಲಾ ರೀತಿಯ ವೈಪರೀತ್ಯವನ್ನು ಹೊಂದಿರುವ ದೇಶ ಭಾರತ.

ಸಾವಿರಾರು ಹಳ್ಳಿ ನಗರಗಳಿಂದ ಕೂಡಿದ ಭಾರತ ಇಂದಿಗೂ ಹಳೆಯ ಸಂಪ್ರದಾಯಗಳನ್ನು ಮರೆಯದ ದೇಶ. ಜಗತ್ತಿನಲ್ಲಿ ಸಂಪ್ರದಾಯವನ್ನು ಇಂದಿಗೂ ಪಾಲಿಸಿಕೊಂಡು ಬರುತ್ತಿರುವ ದೇಶಗಳಲ್ಲಿ ಚೀನಾ ಪ್ರಮುಖವಾಗಿದೆ. ಆಧುನಿಕತೆಯತ್ತ ದಾಪುಗಾಲು ಹಾಕಿ ದೌಡಾಯಿಸುತ್ತಿರುವ ಚೀನಾದ ಒಂದು ಸುಂದರ ನಗರ ಓರ್ಡೋಸ್ (Ordos) ಆದರೆ ಈ ಸುಂದರ ನಗರ ಭೂತದ ಹೆದರಿಕೆಯಿಂದ ಈಗ ಬರಿದಾಗಿದೆ.

ಕಳೆದ ವರ್ಷ ತ್ಸುನಾಮಿಯ ಬಳಿಕ ಜಪಾನಿನ ಕೆಲವು ಪ್ರದೇಶಗಳಲ್ಲಿಯೂ ಭೂತದ ಹೆದರಿಕೆಯಿಂದ ಹಲವು ಪ್ರದೇಶಗಳು ಜನವಿರಳವಾಗಿದ್ದವು. ಭಾರತದಲ್ಲಿಯೂ ಇಂತಹ ಹಲವು ಪ್ರದೇಶಗಳಿವೆ. ಭೂತದ ಬಗ್ಗೆ ಇರುವ ಕಥೆಗಳನ್ನು ಕೆದಕಿದರೆ ಭಾರತ ಮತ್ತು ಬಾಂಗ್ಲಾದೇಶ ಪ್ರಥಮ ಸ್ಥಾನದಲ್ಲಿ ನಿಲ್ಲುತ್ತವೆ.

ಅಷ್ಟೇ ಏಕೆ, ನಾಗರಿಕತೆಯ ಉತ್ತುಂಗದಲ್ಲಿರುವ ಜಪಾನ್ ದೇಶದಲ್ಲಿಯೂ ಭೂತದ ಕಾಟ ಬಹಳವಾಗಿದೆ. ಭೂತದ ಕಾಟ ತಾಳಲಾರದೇ ಊರನ್ನು ತ್ಯಜಿಸಿದುದರ ಪರಿಣಾಮವಾಗಿ ಆ ಊರು ಹಾಳೂರಾಗುತ್ತದೆ. ಇಂತಹ ಸ್ಥಳಗಳನ್ನು ಈ ಲೇಖನದಲ್ಲಿ ಪ್ರಸ್ತುತಪಡಿಸಲಾಗಿದೆ.

ಈ ಊರು ಬರಿದಾಗಲು ಪ್ರತಿ ಊರಿಗೂ ಒಂದೊಂದು ಕಥೆಯಿದೆ. ಇದನ್ನು ನಂಬುತ್ತೀರೋ ಬಿಡುತ್ತೀರೋ ನಿಮಗೆ ಬಿಟ್ಟಿದ್ದು. ಆದರೆ ಈ ಸ್ಥಳದ ಬಗ್ಗೆ ಪ್ರಚಲಿತವಾಗಿರುವ ನಂಬಿಕೆಗಳು ಮಾತ್ರ ಎಂತಹ ಎದೆಗಾರರನ್ನೂ ವಿಚಲಿತಗೊಳಿಸುವುದಂತೂ ಖಂಡಿತ.

ಭಾನಗಡ ಕೋಟೆ, ರಾಜಸ್ಥಾನ

ಭಾನಗಡ ಕೋಟೆ, ರಾಜಸ್ಥಾನ

ಒಂದು ಕಥೆಯ ಪ್ರಕಾರ ಈ ಕೋಟೆಯಲ್ಲಿದ್ದ ತಾಂತ್ರಿಕನೊಬ್ಬ ಛೂಮಂತ್ರ ಮಾಡಿ ಇಡಿಯ ಊರಿನಲ್ಲಿದ್ದ ಅಷ್ಟೂ ಜನರನ್ನು ಸಾವಿಗೀಡಾವಂತೆ ಮಾಡಿದ್ದ. ಬಳಿಕ ಈ ಊರಿಗೆ ಕಾಲಿಡಲು ಯಾರಿಗೂ ಧೈರ್ಯವಾಗುತ್ತಿಲ್ಲ. ಊರಿನ ನಡುವೆ ಇರುವ ಕೋಟೆಯಲ್ಲಿ ಸೂರ್ಯಾಸ್ತ ವಾಗುತ್ತಿದ್ದಂತೆಯೇ ಪ್ರಾರಂಭವಾಗುವ ಭೂತದ ಕಾಟದ ಕಾರಣ ಯಾರೂ ಊರಿನಲ್ಲಿ ಹೊರಗೆ ಕಾಲಿಡುವಂತಿಲ್ಲ! ಕಾಲಿಟ್ಟರೆ ಭೂತ ಏನು ಮಾಡುತ್ತದೆ ಎಂದು ಯಾರಿಗೂ ಗೊತ್ತಿಲ್ಲ. ಏಕೆಂದರೆ ಈ ಕಾಟ ಅನುಭವಿಸಿದವರಾರೂ ಬದುಕಿ ಉಳಿದಿಲ್ಲ. ಇನ್ನೊಂದು ಕಥೆಯ ಪ್ರಕಾರ ಭಾನಗಡ ಕೋಟೆಯ ಅಕ್ಕಪಕ್ಕದಲ್ಲಿರುವ ಯಾವುದೇ ಗ್ರಾಮದ ಮನೆಗಳಿಗೆ ಛಾವಣಿಗಳಿಲ್ಲ! ಏಕೆಂದರೆ ಛಾವಣಿ ಕಟ್ಟಿದ ಮರುಕ್ಷಣವೇ ಕುಸಿದು ಬೀಳುವ ಮರ್ಮವನ್ನು ಯಾರಿಗೂ ಅರಿಯಲಾಗಿಲ್ಲ.

ಅಸ್ಸಾಮಿನ ಜಟಿಂಗಾ ಕಣಿವೆ

ಅಸ್ಸಾಮಿನ ಜಟಿಂಗಾ ಕಣಿವೆ

ಟೀ ಪುಡಿಗೆ ಪ್ರಸಿದ್ಧವಾಗಿರುವ ಅಸ್ಸಾಮ್ ಕಡಿದಾದ ಬೆಟ್ಟ, ಕಣಿವೆಗಳಿಂದ ಕೂಡಿದೆ. ಪ್ರತಿ ಸೆಪ್ಟೆಂಬರ್ ನಲ್ಲಿ ಪ್ರತಿ ಅಮಾವಾಸ್ಯೆಯಂದು ಜಟಿಂಗಾ ಎಂಬ ಸ್ಥಳದ ಒಂದು ಕಣಿವೆಯಲ್ಲಿ ಹಕ್ಕಿಗಳು ರಹಸ್ಯಮಯವಾಗಿ ಸಾವನ್ನಪ್ಪುತ್ತವೆ. ಸೆಪ್ಟೆಂಬರ್ ನಲ್ಲಿ ಎಲ್ಲಿಂದಲೋ ಆಗಮಿಸಿ ಈ ಸ್ಥಳದಲ್ಲಿಯೇ ಸಾವನ್ನಪ್ಪುವ ಈ ಹಕ್ಕಿಗಳ ಮರ್ಮವನ್ನರಿಯಲು ಪಕ್ಷಿಶಾಸ್ತ್ರಜ್ಞರು ಪ್ರಯತ್ನಿಸುತ್ತಲೇ ಬಂದಿದ್ದಾರೆ. ಆದರೆ ಇದರ ಮರ್ಮವನ್ನು ಇನ್ನೂ ಅರಿಯಲಾಗಿಲ್ಲ. ಈ ಸಾವು ತಮಗೂ ಬರಬಹುದೆಂದು ಹೆದರಿ ಈ ಕಣಿವೆಗೆ ಯಾರೂ ಹೋಗುವುದೇ ಇಲ್ಲ.

ಹೈದರಾಬಾದಿನ ರಾಮೋಜಿ ಫಿಲ್ಮ್ ಸಿಟಿ

ಹೈದರಾಬಾದಿನ ರಾಮೋಜಿ ಫಿಲ್ಮ್ ಸಿಟಿ

ಆಧುನಿಕ ಸೌಲಭ್ಯಗಳನ್ನು ಭಾರತದಲ್ಲಿ ತರಲು ಮೊದಲ ಸ್ಥಾನದಲ್ಲಿ ನಿಲ್ಲುವ ನಗರಗಳೆಂದರೆ ಕೊಲ್ಕಾತಾ ಮತ್ತು ಹೈದರಾಬಾದ್.(ಹೈದರಾಬಾದ್ ಇತ್ತೀಚೆಗೆ ಈ ಖ್ಯಾತಿಯನ್ನು ಗಳಿಸಿಕೊಂಡಿದೆ). ಚಲನಚಿತ್ರದ ಚಿತ್ರೀಕರಣದ ಸೌಲಭ್ಯಗಳನ್ನು ಹೊಂದಿರುವ ರಾಮೋಜಿ ಫಿಲ್ಮ್ ಸಿಟಿ ಸಹಾ ಈಗ ಭೂತಗ್ರಸ್ಥ ಎಂಬ ಕುಖ್ಯಾತಿಯನ್ನು ಪಡೆದುಕೊಂಡಿದೆ. ಇಲ್ಲಿರುವ ಹಲವು ಹೋಟೆಲುಗಳಲ್ಲಿ ಉಳಿದುಕೊಂಡಿದ್ದವರು ರಹಸ್ಯಮಯ ನೆರಳು, ಬಾಗಿಲು ತಟ್ಟುವ ಸದ್ದು, ಥಟ್ಟನೇ ಕಂಡು ಮಾಯವಾಗುವ ಆಕೃತಿಗಳು ಮೊದಲಾದವುಗಳನ್ನು ಗಮನಿಸಿ ಮತ್ತೊಮ್ಮೆ ಇಲ್ಲಿ ಬರಲು ನಿರಾಕರಿಸುತ್ತಿದ್ದಾರೆ.

ಮೀರಟ್‌ನ ಜೀಪಿ ಬ್ಲಾಕ್

ಮೀರಟ್‌ನ ಜೀಪಿ ಬ್ಲಾಕ್

ಮೀರಟ್ ನಗರದ ಈ ಭಾಗದಲ್ಲಿ ಭೂತದ ಚಟುವಟಿಕೆ ಇಡಿಯ ರಾಜ್ಯದ ಗಮನ ಸೆಳೆದಿತ್ತು. ಎರಡು ಅಂತಸ್ತಿನ ಈ ಕಟ್ಟಡದಲ್ಲಿ ಆತ್ಮಗಳು ನಿವಾಸವಾಗಿದ್ದು ಕಟ್ಟಡದಲ್ಲಿ ಯಾರದ್ದೇ ಪ್ರವೇಶವನ್ನು ಅವು ಸಹಿಸುವುದಿಲ್ಲ ಎನ್ನಲಾಗುತ್ತಿದೆ. ಒಟ್ಟು ನಾಲ್ವರು ಪ್ರಾಣಸ್ನೇಹಿತರು ಒಟ್ಟಿಗೇ ಮದ್ಯಪಾನ ಮಾಡುತ್ತಿದ್ದು ಯಾವುದೋ ಕಾರಣದಿಂದ ಮೃತ್ಯು ಸಂಭವಿಸಿದ್ದು ಬಳಿಕವೂ ನಾಲ್ವರು ಮದ್ಯ ಕುಡಿಯುತ್ತಿರುವುದನ್ನು ಹಲವರು ಗಮನಿಸಿದ್ದಾರೆ. ಅಷ್ಟೇ ಅಲ್ಲದೇ ಈ ಕಟ್ಟಡದಿಂದ ಅಚ್ಚಕೆಂಪು ಬಟ್ಟೆ ಧರಿಸಿದ ಯುವತಿಯೊಬ್ಬಳು ಹೊರನಡೆಯುತ್ತಿರುವುದನ್ನೂ ಕಂಡವರಿದ್ದಾರೆ.

ಕೋಲ್ಕಾತ್ತಾದ ನ್ಯಾಷನಲ್ ಲೈಬ್ರರಿ

ಕೋಲ್ಕಾತ್ತಾದ ನ್ಯಾಷನಲ್ ಲೈಬ್ರರಿ

ದಿನದ ಹೊತ್ತಿನಲ್ಲಿ ಪುಸ್ತಕಗಳ ಪುಟ ಮಡಚುವ ಸರಸರ ಸದ್ದು ಬಿಟ್ಟರೆ ರಾತ್ರಿಯಲ್ಲಿ ನೀರವವಾಗಿರುವ ಈ ಗ್ರಂಥಾಲಯ ರಾತ್ರಿಯಾಗುತ್ತಿದ್ದಂತೆಯೇ ಭೂತಗಳ ಆಗರವಾಗುತ್ತದೆ. ರಾತ್ರಿಪಾಳಿಯಲ್ಲಿ ಕೆಲಸ ಮಾಡುವವರು ಹಲವು ಭೂತಚೇಷ್ಟೆಗಳನ್ನು ಅನುಭವಿಸಿದ್ದಾರೆ. ಈ ಕಟ್ಟಡದಲ್ಲಿಯೇ ಉದ್ಯೋಗದಲ್ಲಿದ್ದು ವಿಧಿವಶರಾದವರು ಗ್ರಂಥಾಲಯದ ನಂಟು ಬಿಡದೇ ಕಟ್ಟಡದಲ್ಲಿ ಉಳಿದಿದ್ದಾರೆ ಎಂದು ಕಥೆ ಹೇಳಲಾಗುತ್ತದೆ.ಆದರೆ ಈ ಬಗ್ಗೆ ಮಾಧ್ಯಮಗಳಲ್ಲಿ ಮಾಹಿತಿ ಸಿಗುವುದು ತುಂಬಾ ಅಪರೂಪ.

ಮುಂಬೈನ ಮಾಹಿಂ ಪ್ರದೇಶದ ಡಿಸೋಜಾ ಚಾಲ್

ಮುಂಬೈನ ಮಾಹಿಂ ಪ್ರದೇಶದ ಡಿಸೋಜಾ ಚಾಲ್

ಅತ್ಯಂತ ಜನನಿಬಿಡ ನಗರವಾದ ಮುಂಬೈಯಲ್ಲಿ ಚಾಲ್‌ಗಳು ಸರ್ವೇ ಸಾಮಾನ್ಯ. ಶೌಚಾಲಯವಿಲ್ಲದ ಪುಟ್ಟ ಕೋಣೆಯೊಂದರಲ್ಲಿ ಚಿಕ್ಕ ಭಾಗ ಅಡುಗೆ ಮನೆಯಾದರೆ ಹತ್ತಾರು ಮನೆಗಳಿಗೆ ಸೇರಿ ಒಂದೇ ಶೌಚಾಲಯವಿರುವ ದೊಡ್ಡ ಕಟ್ಟಡವೇ ಚಾಲ್. ಮಾಹಿಂನ ಇಂತಹದ್ದೇ ಆದ ಡಿಸೋಜಾ ಚಾಲ್ ನಲ್ಲಿ ಮಹಿಳೆಯೊಬ್ಬರು ನೀರು ಸೇದುವಾಗ ಅಕಾಸ್ಮಾತ್ತಾಗಿ ಬಾವಿಗೆ ಬಿದ್ದು ಮರಣವನ್ನಪ್ಪಿದ್ದರು. ಈ ಮಹಿಳೆಯ ಆತ್ಮ ಅದೇ ಬಾವಿಯ ಅಕ್ಕಪಕ್ಕ ಸುಳಿಯುತ್ತಿರುತ್ತದೆ ಎಂದು ಗಮನಿಸಿದವರು ತಿಳಿಸುತ್ತಾರೆ.

ಗುಜರಾತಿನ ಸೂರತ್ ನಗರದ ಡುಮಾಸ್ ಬೀಚ್

ಗುಜರಾತಿನ ಸೂರತ್ ನಗರದ ಡುಮಾಸ್ ಬೀಚ್

ಹಿಂದೆ ಸಮುದ್ರತೀರದಲ್ಲಿ ಊರುಗಳಲ್ಲಿಲ್ ಸ್ಮಶಾನವೇ ಇರುತ್ತಿರಲಿಲ್ಲ. ಸಮುದ್ರತೀರದ ಮರಳಿನಲ್ಲಿಯೇ ಹೊಂಡ ತೆಗೆದು ಅಂತಿಮಸಂಸ್ಕಾರ ನಡೆಸುತ್ತಿದ್ದರು. ವರ್ಷಾಂತರಗಳಿಂದ ಹೀಗೆ ಹೂತ ಶವಗಳಿಂದಾಗಿ ನೂರಾರು ಸಂಖ್ಯೆಯಲ್ಲಿ ಪ್ರೇತಾತ್ಮಗಳು ಈ ತೀರದಲ್ಲಿ ತಿರುಗಾಡುತ್ತಿರುತ್ತವೆ ಎಂದು ನಂಬಲಾಗಿದೆ. ನಂಬಿಕೆ ಬರದಿದ್ದವರು ಸೂರತ್‌ಗೆ ಮುಂದಿನ ಸಾರಿ ಭೇಟಿ ನೀಡಿದಾಗ ಈ ತೀರಕ್ಕೊಮ್ಮೆ ಭೇಟಿ ನೀಡಿ. ಯಾರೂ ಇಲ್ಲದಿದ್ದರೂ ಯಾರೋ ಪಿಸುಗುಡುವಂತಹ ಸದ್ದು ಬರುವುದನ್ನು ಕೇಳಿಸುವುದು ಮಾತ್ರ ಖಾತ್ರಿ.

ಗೋವಾದ ಮೂರು ರಾಜರ ಚರ್ಚ್

ಗೋವಾದ ಮೂರು ರಾಜರ ಚರ್ಚ್

ಗೋವಾದಲ್ಲಿರುವ The Church Of Three Kings ಎಂಬ ಇಗರ್ಜಿಯೇ ಭೂತದ ವಾಸಸ್ಥಾನ ಎಂದು ನಂಬಲಾಗಿದೆ. ಗೋವಾ ರಾಜ್ಯದಲ್ಲಿಯೇ ಅತಿ ಪ್ರಸಿದ್ಧವಾಗಿರುವ ಈ ಸ್ಥಳದಲ್ಲಿ ಹಿಂದೆ ಗೋವಾದಲ್ಲಿ ಪೋರ್ಚುಗೀಸರ ಆಡಳಿತವಿದ್ದಾಗ ಓರ್ವ ರಾಜ ಇನ್ನಿಬ್ಬರು ರಾಜರನ್ನು ಕೊಲೆ ಮಾಡಿದ ಬಳಿಕ ವಿರಕ್ತಿ ಹೊಂದಿ ಆತ್ಮಹತ್ಯೆ ಮಾಡಿಕೊಂಡನೆಂಬ ಕಥೆ ಹೇಳಲಾಗುತ್ತದೆ. ಇಂದಿಗೂ ಈ ಮೂರೂ ರಾಜರ ಇರುವಿಕೆಯನ್ನು ಗಮನಿಸಬಹುದು.

ಮುಂಬೈನ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್

ಮುಂಬೈನ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್

ಮುಂಬೈ ನಗರದ ಸುಪ್ರಸಿದ್ಧ ತಾಜ್ ಪ್ಯಾಲೇಸ್ ಹೋಟೆಲ್ ಸಹಾ ಭೂತಗ್ರಸ್ತವಾಗಿದೆ. ಈ ಹೋಟೆಲನ್ನು ವಿನ್ಯಾಸ ಗೊಳಿಸಿದ ವ್ಯಕ್ತಿ ಈ ಹೋಟೆಲಿನೊಳಗೇ ಆತ್ಮಹತ್ಯೆ ಮಾಡಿಕೊಂಡಿದ್ದನಂತೆ. ಏಕೆಂದರೆ ಆತನ ವಿನ್ಯಾಸದ ಪ್ರಕಾರ ಹೋಟೆಲಿನ ಅಂತಿಮ ವಿನ್ಯಾಸವನ್ನು ಮಾಡದಿರುವುದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡನಂತೆ ಎಂದು ಕಥೆ ಹೇಳಲಾಗುತ್ತದೆ. ಇದಕ್ಕೆ ಪೂರಕವಾಗಿ ಹೋಟೆಲಿನಲ್ಲಿ ಉಳಿದುಕೊಂಡಿರುವವರು ಹೋಟೆಲಿನ ಕಾರಿಡಾರ್ ಮತ್ತು ಜಗಲಿಗಳಲ್ಲಿ ಯಾರೋ ಓಡಾಡುತ್ತಿರುವುದನ್ನು ಗಮನಿಸಿದ್ದಾರೆ.

ರಾಜಸ್ಥಾನದ ಕುಲ್ಧಾರಾ

ರಾಜಸ್ಥಾನದ ಕುಲ್ಧಾರಾ

ಸುಮಾರು ಹದಿನೆಂಟನೇ ಶತಮಾನದಲ್ಲಿಯೇ ಕುಲ್ಧಾರಾ ಪ್ರದೇಶವನ್ನು ಅಲ್ಲಿನ ನಿವಾಸಿಗಳು ತ್ಯಜಿಸಿ ಗುಳೆಹೋಗಿದ್ದರು. ಇದಕ್ಕೆ ಕಾರಣ ಈ ಪ್ರದೇಶ ಶಾಪಗ್ರಸ್ತವಾಗಿದೆ ಎಂಬ ನಂಬಿಕೆ. ಗುಳೆಹೋದವರ ಕ್ರಮವನ್ನು ವಿರೋಧಿಸಿ ಅಲ್ಲಿಯೇ ಉಳಿದಿದ್ದವರು ಏಕಾಏಕಿ ಒಂದು ರಾತ್ರಿ ಅಷ್ಟೂ ಜನರು ಮಾಯವಾಗಿದ್ದುದು ಈ ಕಥೆಗೆ ಇಂಬು ನೀಡುತ್ತದೆ. ಇನ್ನೂ ಕೆಲವರು ಇದಕ್ಕೆ ವ್ಯತಿರಿಕ್ತವಾದ ಕಥೆಯನ್ನು ಹೇಳುತ್ತಾರೆ. ಈ ಕಥಯ ಪ್ರಕಾರ ಈ ಪ್ರದೇಶದ ಯುವತಿಯೊಬ್ಬಳನ್ನು ಮಂತ್ರಿಯೊಬ್ಬ ಬಲವಂತವಾಗಿ ವಿವಾಹವಾಗಿದ್ದನೆಂದೂ ಬಳಿಕ ಆಕೆಯ ಶಾಪ ಊರಿಗೆ ತಟ್ಟಿತೆಂದೂ ಕಥೆ ಹೇಳಲಾಗುತ್ತದೆ. ಕಥೆಗಳು ಏನೇ ಇರಲಿ, ಇಂದಿಗೂ ಕುಲ್ಧಾರಾ ಪಾಳುಬಿದ್ದಿದ್ದು ಚಲನಚಿತ್ರಗಳ ಚಿತ್ರೀಕರಣಕ್ಕೆ ಮಾತ್ರ ಉಪಯೋಗಿಸಲಾಗುತ್ತಿದೆ.

ಮುಂಬೈನ ಸಂಜಯ್ ಗಾಂಧಿ ನ್ಯಾಷನಲ್ ಪಾರ್ಕ್

ಮುಂಬೈನ ಸಂಜಯ್ ಗಾಂಧಿ ನ್ಯಾಷನಲ್ ಪಾರ್ಕ್

ಉದ್ಯಾನಗಳೇ ವಿರಳವಾಗಿರುವ ಮುಂಬೈಯಲ್ಲಿರುವ ಸಂಜಯ್ ಗಾಂಧಿ ನ್ಯಾಶನಲ್ ಪಾರ್ಕ್ ನಲ್ಲಿಯ ಹಸಿರು ಮೈದಾನದಲ್ಲಿ ಭೂತಗಳ ಇರುವಿಕೆಯನ್ನು ಗಮನಿಸಿದವರಿದ್ದಾರೆ. ಆದರೆ ಈ ಭೂತಗಳು ಯಾರಿಗೂ ಕಾಟ ಕೊಡದೇ ಇರುವ ಕಾರಣ ಇಂದಿಗೂ ಸಾವಿರಾರು ಸಂಖ್ಯೆಯಲ್ಲಿ ಜನರು ಉದ್ಯಾನವನ್ನು ಪ್ರವೇಶಿಸಿ ಸಮಯ ಕಳೆಯುತ್ತಾರೆ.

ಶಿಮ್ಲಾದ ಸುರಂಗ ಸಂಖ್ಯೆ 103

ಶಿಮ್ಲಾದ ಸುರಂಗ ಸಂಖ್ಯೆ 103

ಶಿಮ್ಲಾ ಮತ್ತು ಕಾಲ್ಕಾ ನಗರಗಳ ನಡುವೆ ಹಾದುಹೋಗುವ ಹೆದ್ದಾರಿ ಯಾವಾಗ ಸುರಂಗ ಸಂಖ್ಯೆ 103 ಪ್ರವೇಶಿಸಿತೋ ಆಗ ಜನರ ಎದೆಯಲ್ಲಿ ಡವಡವ ಪ್ರಾರಂಭವಾಗುತ್ತದೆ. ಏಕೆಂದರೆ ಬ್ರಿಟಿಷರ ಕಾಲದಲ್ಲಿ ಕೊರೆಯಲಾದ ಈ ಸುರಂಗದಲ್ಲಿ ಕೆಲವು ಭೂತಗಳು ಮಾತನಾಡುವುದನ್ನು ಕೇಳಿದವರಿದ್ದಾರೆ. ಇನ್ನಷ್ಟು ಭಯಪಡಿಸುವ ವಿಷಯವೆಂದರೆ ಮಹಿಳೆಯ ಆಕಾರವೊಂದು ಸುರಂಗದೊಳಗಣ ಗೋಡೆಯನ್ನೇ ತೂರಿ ಮಾಯವಾಗಿರುವುದನ್ನು ಹಲವರು ಕಂಡಿದ್ದಾರೆ.

ದೆಹಲಿಯ ಅಗ್ರಾಸೆನ್ ಕೀ ಬಾವ್ಡಿ

ದೆಹಲಿಯ ಅಗ್ರಾಸೆನ್ ಕೀ ಬಾವ್ಡಿ

ಹಿಂದೆ ನೀರಿಗಾಗಿ ಬಾವಿಯನ್ನೇ ಅವಲಂಬಿಸಲಾಗುತ್ತಿತ್ತು. ಆಳವಿರುವ ಬಾವಿಗಳಿಗೆ ಇಳಿಯಲು ಸುತ್ತಲೂ ಮೆಟ್ಟಿಲುಗಳನ್ನು ನಿರ್ಮಿಸಲಾಗುತ್ತಿತ್ತು. ಮೊಗಲರ ಕಾಲದಲ್ಲಿ ಇಂತಹ ಚೌಕಾಕಾರದ ಬಾವಿಗಳನ್ನು ಬಾವ್ಡಿ ಎಂದು ಕರೆಯಲಾಗುತ್ತಿತ್ತು. ಅಗ್ರಾಸೆನ್ ನಲ್ಲಿರುವ ಇಂತಹ ಒಂದು ಬಾವಿಯಲ್ಲಿ ಹಿಂದೆ ಕಪ್ಪು ನೀರು ತುಂಬಿದ್ದು ಬಳಿಗೆ ಬಂದವರನ್ನು ಆತ್ಮಹತ್ಯೆಗೆ ಪ್ರೇರೇಪಿಸುತ್ತಿತ್ತು ಎನ್ನಲಾಗಿದೆ. ಇಂದಿಗೂ ಈ ಬಾವಿಯ ಬಳಿ ಸೂರ್ಯಾಸ್ತದ ಬಳಿಕ ತಿರುಗಾಡುವವರನ್ನು ಆತ್ಮಗಳು ಆತ್ಮಹತ್ಯೆಗೆ ಪ್ರೇರೇಪಿಸುತ್ತದೆ ಎಂದು ನಂಬಲಾಗಿದೆ.

ಲೂದಿಯಾನ ಸಮಾಧಿ

ಲೂದಿಯಾನ ಸಮಾಧಿ

ಇಲ್ಲಿ ಕ್ರಿಶ. 1700ರಲ್ಲಿ ಕ್ರೈಸ್ತ ಧರ್ಮ ಗುರುವನ್ನು ಸಮಾಧಿ ಮಾಡಲಾದ ಸ್ಥಳವಾಗಿದೆ. ಆದರೆ ಇಲ್ಲಿ ಮುಂಡವಿಲ್ಲದ ದೆವ್ವ ಓಡಾಡುತ್ತದೆ ಎಂದು ಹೇಳಾಗುತ್ತದೆ. ಈ ದೆವ್ವ ಹಿಂದೆ ಸೈನಿಕನಾಗಿದ್ದ, ತನ್ನ ಪ್ರೇಯಸಿಯಿಂದ ಮೋಸ ಹೋಗಿ ತನ್ನ ತಲೆಯನ್ನು ಕತ್ತರಿಸಿ ಸತ್ತ. ಅಮಾವಾಸ್ಯೆಯಲ್ಲಿ ಮುಂಡವಿಲ್ಲದ ರುಂಡವನ್ನು ಕಾಣಬಹುದು ಎಂಬ ಗಾಳಿ ಸುದ್ಧಿ ಇದೆ. ಇದು ಎಷ್ಟರ ಮಟ್ಟಿಗೆ ಸರಿ ಅನ್ನುವುದು ಆ ದೇವರೇ ಬಲ್ಲ!

ಜಮಾಲಿ-ಕಮಾಲಿ ಮಸ್ಜೀದ್

ಜಮಾಲಿ-ಕಮಾಲಿ ಮಸ್ಜೀದ್

ಇದು ದೆವ್ವಗಳ ಹೆಸರಲ್ಲ. ಇಲ್ಲಿ ಹೆಸರಾಂತ ಇಬ್ಬರು ಸಂತರನ್ನು ಸಮಾಧಿ ಮಾಡಲಾಗಿದೆ. ಆದರೆ ಇಲ್ಲಿ ಭೂತದ ಓಡಾಟ ಇದೆ ಎಂದು ಹೇಳಲಾಗುತ್ತಿದೆ. ಈ ಸ್ಥಳಕ್ಕೆ ಭೇಟಿ ಕೊಟ್ಟರೆ ನಿಮ್ಮನ್ನು ಯಾರೋ ಹಿಡಿದು ಎಳೆದಂತೆ, ಕೆನ್ನೆಗೆ ಬಡೆದಂತೆ ಭಾಸವಾಗುವುದು ಎಂದು ಇಲ್ಲಿಗೆ ಹೋದವರು ತಮ್ಮ ಅನುಭವಗಳನ್ನು ಹೇಳಿಕೊಂಡಿದ್ದಾರೆ.

ಖೂನಿ ದರ್ವಾಜಾ

ಖೂನಿ ದರ್ವಾಜಾ

ಇದು ದೆಹಲಿಯಲ್ಲಿರುವ ಮೊಘಲ್ ಸ್ಮಾರಕವಾಗಿದೆ. ಬ್ರಿಟಿಷರು ಬಹದೂರ್ ಷಾ ಜಫರ್ ನ 3 ಗಂಡು ಮಕ್ಕಳನ್ನು ಕೊಂದರು. ಈ ಮಕ್ಕಳು ದೆವ್ವವಾಗಿ ಬ್ರಿಟಿಷರ ವಿರುದ್ಧ ಸೇಡು ತೀರಿಸಿಕೊಳ್ಳಲು ಬಾಗಿಲ ಬಳಿ ಕಾಯುತ್ತಿದೆ. ಇಲ್ಲಿಗೆ ಬ್ರಿಟಿಷರು ಹೋದರೆ ಏನಾದರೂ ಸಂಭವಿಸುತ್ತದೆ ಎಂಬ ಅಂತೆ-ಕಂತೆಗಳು ಈ ಸ್ಮಾರಕದ ಬಗ್ಗೆ ಕೇಳಿ ಬರುತ್ತದೆ.

ಡೆಲ್ಲಿ ಕ್ಯಾಂಟ್

ಡೆಲ್ಲಿ ಕ್ಯಾಂಟ್

ದು ದೆಹಲಿಯಲ್ಲಿರುವ ತುಂಬಾ ಸುಂದರವಾದ ಸ್ಥಳವಾಗಿದೆ. ಈ ಸ್ಥಳ ಕುದುರೆ ಸವಾರಿಗೆ ತುಂಬಾ ಚೆನ್ನಾಗಿದೆ. ಅನೇಕ ಜನರು ಇಲ್ಲಿ ಬಿಳಿ ಡ್ರೆಸ್ ನಲ್ಲಿ ಒಂದು ಸ್ತ್ರೀ ದಾರಿ ಮೇಲೆ ನಿಂತು ಲಿಫ್ಟ್ ಕೇಳುತ್ತಾಳೆ. ನಾವು ಲಿಫ್ಟ್ ಕೊಟ್ಟರೆ ಅವಳು ಸ್ವಲ್ಪ ಸಮಯದಲ್ಲಿ ಮಾಯವಾಗುತ್ತಾಳೆ ಎಂದು ಹೇಳಿದ್ದಾರೆ. ಈ ಕಥೆಯಿಂದಾಗಿ ಜನರು ಈ ಸ್ಥಳಕ್ಕೆ ಹೋಗಲು ಸ್ವಲ್ಪ ಭಯ ಪಡುತ್ತಾರೆ.

Read more about: ನಗರ ಜೀವನ urban life
English summary

Top Most Haunted places in India

India is a land of mysteries-too many questions, no answers. We've all grown up listening to many such stories about ghosts and spirits from friends and relatives. Here are 18 such places in India,
X
Desktop Bottom Promotion