For Quick Alerts
ALLOW NOTIFICATIONS  
For Daily Alerts

ಏಕದಿನದ ಪಂದ್ಯದಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಕ್ರಿಕೆಟಿಗ ಯಾರು?

|

ಸಚಿನ್ ತೆಂಡೂಲ್ಕರ್, ಮಹಮ್ಮದ್ ಯೂಸಫ್, ರಿಕಿ ಪಾಂಟಿಂಗ್, ರಾಹುಲ್ ದ್ರಾವಿಡ್, ಜಾಕ್ ಕ್ಯಾಲಿಸ್ ಮತ್ತು ಇತರೆ ಅದ್ಭುತ ಬ್ಯಾಟ್ಸ್‌ಮೆನ್‍ಗಳನ್ನು ಕ್ರೀಡಾಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ. ಈ ಅಂಕಣದಲ್ಲಿ ನಾವು ಆ ಮಹಾನ್ ತಾರೆಯರ ಬಗ್ಗೆ ಚರ್ಚಿಸುವುದಿಲ್ಲ. ಮೈ ನವಿರೇಳಿಸುವಂತೆ ಮಾಡುವ ಕ್ರಿಕೆಟ್ ಜಗತ್ತಿನ ಅದ್ಭುತ ಸಂಗತಿ..!

ನಾವಿಲ್ಲಿ ಚರ್ಚಿಸಲು ಹೋಗುತ್ತಿರುವುದು ಬೌಲರ್‌ಗಳ ದುಃಸ್ವಪ್ನವಾದ ಬ್ಯಾಟ್ಸ್‌ಮೆನ್‍ಗಳನ್ನು, ಅದರಲ್ಲೂ ಏದಿನ ಪಂದ್ಯದಲ್ಲಿ ಇತರೆ ಬ್ಯಾಟ್ಸ್‌ಮೆನ್‌ಗಳಿಗಿಂತ ಅಧಿಕ ಸಿಕ್ಸರ್ ಬಾರಿಸಿದವರನ್ನು. ಬನ್ನಿ ಏಕ ದಿನದ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅಧಿಕ ಸಿಕ್ಸರ್ ಬಾರಿಸಿದ ಟಾಪ್ 10 ಬ್ಯಾಟ್ಸ್‌ಮೆನ್‌ಗಳ ಕುರಿತು ತಿಳಿದುಕೊಳ್ಳೋಣ.

ಶಾಹಿದ್ ಆಫ್ರಿದಿ -346

ಶಾಹಿದ್ ಆಫ್ರಿದಿ -346

ಪಾಕಿಸ್ತಾನದ ಯುಸೂಫ್ ಪಠಾಣ್ ಎಂದೇ ಪ್ರಸಿದ್ಧಿ ಪಡೆದಿರುವ ಸ್ಫೂಟಕ ಬ್ಯಾಟ್ಸ್‪‌ ಮ್ಯಾನ್ ಶಾಹಿದ್ ಆಫ್ರಿದಿ ತನ್ನ 392 ಪಂದ್ಯಗಳಲ್ಲಿ ಹೊಡೆದ್ದದ್ದು ಬರೋಬರಿ 345 ಸಿಕ್ಸರ್‌ಗಳನ್ನು..! ತನ್ನ ಕ್ರಿಕೆಟ್ ಜೀವನದಲ್ಲಿ 32 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ತನ್ನದಾಗಿಸಿಕೊಂಡಿರುವುದೇ ಅವರ ಆಕ್ರಮಣ ಆಟಕ್ಕೆ ಸಾಕ್ಷಿ...!

ಸನತ್ ಜಯಸೂರ್ಯ- 270

ಸನತ್ ಜಯಸೂರ್ಯ- 270

ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕರಾದ ಸನತ್ ಜಯಸೂರ್ಯ ಬಬ್ಬ ಅದ್ಭುತ ಬ್ಯಾಟ್ಸ್‌ ಮ್ಯಾನ್ ಹಾಗು ಆಲ್-ರೌಂಡರ್. ತಮ್ಮ ಆಕ್ರಮಣಕಾರಿ ಆಟದಿಂದ ಅಪಾರ ಅಭಿಮಾನಿಗಳನ್ನು ಹೊಂದಿರುವ ಜೊತೆಗೆ ಹಲವು ಪಂದ್ಯಗಳನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ, ಸುಮಾರು 445 ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ 250 ಸಿಕ್ಸರ್ ಹಾಗು 1500 ಬೌಂಡರಿ ಬಾರಿಸುವ ಮೂಲಕ ಎರಡನೇಯ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾರೆ.

ಕ್ರಿಸ್ ಗೇಲ್- 229

ಕ್ರಿಸ್ ಗೇಲ್- 229

ವೆಸ್ಟ್ ಇಂಡೀಸಿನ ಧೈತ್ಯ ಬ್ಯಾಟ್ಸ್‌ಮೆನ್ ಏಕದಿನದ ಪಂದ್ಯಗಳಲ್ಲಿ 229 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.266 ಪಂದ್ಯಗಳಲ್ಲಿ ಇವರು ಸುಮಾರು 9136 ರನ್ ಸಹ ಬಾರಿಸಿದ್ದಾರೆ. ಇವರ ಸರಾಸರಿ 37.44, 1010 ಬಾರಿ ಇವರು ಚೆಂಡನ್ನು ಬೌಂಡರಿಯ ಗೆರೆ ದಾಟಿಸಿದ್ದಾರೆ. ಸಿಕ್ಸರ್‌ಗಳನ್ನು ಅಧಿಕವಾಗಿ ಬಾರಿಸಿದವರ ಪಟ್ಟಿಯಲ್ಲಿ ಇವರು ಮೂರನೆ ಸ್ಥಾನವನ್ನು ಪಡೆದಿದ್ದಾರೆ. ಇತ್ತೀಚೆಗೆ 2015 ವಿಶ್ವಕಪ್‌ನಲ್ಲಿ ಜಿಂಬಾಬ್ವೆ ವಿರುದ್ಧ 215 ರನ್ ಬಾರಿಸಿದಾಗ ಇವರು 16 ಸಿಕ್ಸರ್‌ಗಳನ್ನು ಬಾರಿಸಿದರು. ಇದುಏಕದಿನದ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ, ಒಬ್ಬ ಬ್ಯಾಟ್ಸ್‌ಮೆನ್ ಬಾರಿಸಿದ ಅಧಿಕ ಸಿಕ್ಸರ್‌ಗಳ ದಾಖಲೆಗೆ ಸಮವಾಗಿದೆ ( ಇಷ್ಟೇ ಸಿಕ್ಸರ್‌ಗಳನ್ನು ರೋಹಿತ್ ಶರ್ಮಾ ಮತ್ತು ಎಬಿ ಡಿ ವಿಲಿಯರ್ಸ್) ಹೊಡೆದಿದ್ದಾರೆ. ಜೊತೆಗೆ ಇವರುಏಕದಿನದ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ನಾಲ್ಕನೇ ಅತ್ಯಧಿಕ ವೈಯುಕ್ತಿ ಮೊತ್ತ ಗಳಿಸಿದ ದಾಖಲೆ ಸಹ ಮಾಡಿದ್ದಾರೆ.

ಸಚಿನ್ ತೆಂಡೂಲ್ಕರ್ - 195

ಸಚಿನ್ ತೆಂಡೂಲ್ಕರ್ - 195

ಲಿಟಲ್ ಮಾಸ್ಟರ್, ಕ್ರಿಕೆಟ್ ದೇವರು ಈ ಪಟ್ಟಿಯಲ್ಲಿ ನಾಲ್ಕನೆ ಸ್ಥಾನದಲ್ಲಿದ್ದಾರೆ. ಬಹುತೇಕ ಎಲ್ಲಾ ಕ್ರಿಕೆಟ್ ದಾಖಲೆಗಳಲ್ಲಿ ತಮ್ಮ ಹೆಸರನ್ನು ನಮೂದಿಸಿರುವ ಸಚಿನ್, ಅಧಿಕ ಶತಕ, ಅಧಿಕ ರನ್, ಜೊತೆಗೆ ಅಧಿಕ ಸಿಕ್ಸರ್‌ಗಳ ಪಟ್ಟಿಯಲ್ಲಿ ನಾಲ್ಕನೆ ಸ್ಥಾನ ಪಡೆಯಲು 195 ಸಿಕ್ಸರ್ ಬಾರಿಸಿದ್ದಾರೆ. ಜೊತೆಗೆ ಇವರು 2016 ಬೌಂಡರಿಗಳನ್ನು ಸಹ ಬಾರಿಸಿದ್ದಾರೆ.

ಸೌರವ್ ಗಂಗೂಲಿ - 190

ಸೌರವ್ ಗಂಗೂಲಿ - 190

ಎಡಗೈ ಬ್ಯಾಟ್ಸ್‌ಮನ್, ದಾದಾ, ಆಫ್ ಸೈಡ್ ಮಹಾರಾಜ ಐದನೆ ಸ್ಥಾನದಲ್ಲಿ ವಿರಾಜಮಾನರಾಗಿದ್ದಾರೆ. 311 ಪಂದ್ಯಗಳಲ್ಲಿ ಗಂಗೂಲಿ ಹೊಡೆದದ್ದು ಬರೋಬ್ಬರಿ, 190 ಸಿಕ್ಸರ್‌ಗಳನ್ನು. 1992 ರಿಂದ 2007 ರವರೆಗೆ ಭಾರತದ ತಂಡದ ಆಟಗಾರ, ನಾಯಕನಾಗಿ ಸೇವೆ ಸಲ್ಲಿಸಿದ ಇವರು, 1122 ಬೌಂಡರಿಗಳನ್ನು ಸಹ ಹೊಡೆದಿದ್ದಾರೆ. 22 ಶತಕಗಳನ್ನು ಬಾರಿಸಿರುವ ಇವರು ಹಿಂದಿನ ವಾರದವರೆಗೆ (2015 ವಿಶ್ವಕಪ್) ಅಧಿಕ ಶತಕಗಳನ್ನು ಬಾರಿಸಿದ ಆಟಗಾರರಲ್ಲಿ ನಾಲ್ಕನೆ ಸ್ಥಾನದಲ್ಲಿ ಇದ್ದರು.

ಎಂ.ಎಸ್.ಧೋನಿ -178

ಎಂ.ಎಸ್.ಧೋನಿ -178

ಹೆಲಿಕಾಪ್ಟರ್ ಶಾಟ್‍ನ ಈ ಜಾದೂಗಾರ ಕ್ರಿಕೆಟ್ ಕಂಡ ಅದ್ಭುತ ಫಿನಿಷರ್. 255 ಪಂದ್ಯಗಳಲ್ಲಿ ಇವರು ಬಾರಿಸಿದ ಸಿಕ್ಸರ್‌ಗಳ ಸಂಖ್ಯೆ 178. ಇವರ ಸರಾಸರಿ 53.28, ಇದು ಕ್ರಿಕೆಟ್ ಜಗತ್ತಿನ ನಾಲ್ಕನೆ ಅತ್ಯುತ್ತಮ ಸರಾಸರಿ ಏಕದಿನದ ಪಂದ್ಯಗಳಲ್ಲಿ.

ಬ್ರೆಂಡನ್ ಮೆಕಲಮ್ -170

ಬ್ರೆಂಡನ್ ಮೆಕಲಮ್ -170

ನ್ಯೂಜಿಲ್ಯಾಂಡ್‌ನ ನಾಯಕ, ಮೆಕಲಮ್ ಈ ಟಾಪ್ ಹತ್ತರಲ್ಲಿ ಸದ್ಯ 7 ನೇ ಸ್ಥಾನದಲ್ಲಿದ್ದಾರೆ. ಟಿ20 ಯಲ್ಲಿ ಅಧಿಕ ಸಿಕ್ಸರ್ ಮತ್ತು ರನ್ ಬಾರಿಸಿರುವ ಅಗ್ರಗಣ್ಯ ಆಟಗಾರನಾದ ಮೆಕಲಮ್ಏಕದಿನದ ಪಂದ್ಯಗಳಲ್ಲಿ 158 ಸಿಕ್ಸರ್ ಬಾರಿಸಿದ್ದಾರೆ. ಅದೂ ಕೇವಲ 255 ಪಂದ್ಯಗಳಲ್ಲಿ!, ಇವರ ಸ್ಥಾನ ಮುಂದಿನ ದಿನಗಳಲ್ಲಿ ಮತ್ತಷ್ಟು ಸುಧಾರಿಸುವ ಲಕ್ಷಣಗಳು ಈಗಲೇ ಗೋಚರಿಸುತ್ತಿವೆ.

ರಿಕಿಪಾಂಟಿಂಗ್ -162

ರಿಕಿಪಾಂಟಿಂಗ್ -162

ಕ್ರಿಕೆಟ್ ಜಗತ್ತಿನ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ರಿಕಿ, ವಿಶ್ವದ ಸಾರ್ವಕಾಲಿಕ ಅತ್ಯುತ್ತಮ ಬ್ಯಾಟ್ಸ್‌ಮೆನ್ ಎಂಬುದನ್ನು ವಿವರಿಸಿ ಹೇಳಬೇಕಾಗಿಲ್ಲ. ಪಾಂಟಿಂಗ್ಏಕದಿನದ ಪಂದ್ಯಗಳಲ್ಲಿ 162 ಸಿಕ್ಸರ್ ಬಾರಿಸಿ,ಈ ಪಟ್ಟಿಯಲ್ಲಿ 8ನೇ ಸ್ಥಾನವನ್ನು ಪಡೆದಿದ್ದಾರೆ. 372 ಏಕ ದಿನದ ಪಂದ್ಯಗಳನ್ನು ಆಡಿರುವ ಪಾಂಟಿಂಗ್ 13704 ರನ್ ಹೊಡೆದಿದ್ದಾರೆ. ಜೊತೆಗೆ ಪಾಂಟಿಂಗ್ ಒಬ್ಬ ಅದ್ಭುತ ಫೀಲ್ಡರ್ ಸಹ ಹೌದು.

ಕ್ರಿಸ್ ಕೈರ್ನ್ಸ್ - 153

ಕ್ರಿಸ್ ಕೈರ್ನ್ಸ್ - 153

ಮಾಜಿ ನ್ಯೂಜಿಲ್ಯಾಂಡ್ ಕ್ರಿಕೆಟ್ ಪಟು, ಕ್ರಿಸ್ ಕೈರ್ನ್ಸ್ ಈ ಪಟ್ಟಿಯಲ್ಲಿ 9 ನೇ ಸ್ಥಾನ ಪಡೆದಿದ್ದಾರೆ. ವಿಶ್ವ ಕಂಡ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ, ಒಬ್ಬರಾದ ಇವರು ಏಕದಿನದ ಪಂದ್ಯಗಳಲ್ಲಿ ಒಟ್ಟಾರೆ 153 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

ಆಡಂ ಗಿಲ್‍ಕ್ರಿಸ್ಟ್ -149

ಆಡಂ ಗಿಲ್‍ಕ್ರಿಸ್ಟ್ -149

ಕ್ರಿಕೆಟ್ ಇತಿಹಾಸ ಕಂಡ ಮಹಾನ್ ವಿಕೆಟ್ ಕೀಪರ್-ಬ್ಯಾಟ್ಸ್‌ಮೆನ್ ಗಿಲ್‍ಕ್ರಿಸ್ಟ್( 1996-2006), ಇವರು 287 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಸ್ಟ್ರೇಲಿಯಾವನ್ನು ಪ್ರತಿನಿಧಿಸಿದ್ದರು. ಇವರು ತಮ್ಮ ಏಕದಿನದ ಅಂತಾರಾಷ್ಟ್ರೀಯ ಪಂದ್ಯಗಳ ವೃತ್ತಿ ಜೀವನದಲ್ಲಿ ಸರಾಸರಿ 35.89ರಂತೆ 9619 ರನ್ ಬಾರಿಸಿದ್ದರು. ಈ ಅವಧಿಯಲ್ಲಿ ಅವರು 149 ಸಿಕ್ಸ್ ಮತ್ತು 1162 ಬೌಂಡರಿಗಳನ್ನು ಬಾರಿಸಿದ್ದರು.

English summary

Top 10 Batsmen With Most Sixes in ODI Cricket

There are some Fine batsmen like Sachin Tendulkar, Muhammad Yousif, Ricky Ponting, Rahul Dravid, Jacques Kallis and lot more. so here we going to make the list of Top 10 Batsmen With Most Sixes in One Day Internationals.
X
Desktop Bottom Promotion