For Quick Alerts
ALLOW NOTIFICATIONS  
For Daily Alerts

ಕೊಡು ತಾಯೆ ವರವ, ಕುಡುಕನಲ್ಲದ ಗಂಡನ..!

By Deepu
|

ಮದ್ಯವ್ಯಸನಿಯೊಬ್ಬನಿಗೆ ಇದರ ಬಗ್ಗೆ ತಿಳಿಹೇಳಲು ವೈದ್ಯರೊಬ್ಬರು ಒಂದು ಲೋಟ ಮದ್ಯದಲ್ಲಿ ಜಿರಲೆಯೊಂದನ್ನು ಹಾಕಿ ಅದು ವಿಲವಿಲ ಒದ್ದಾಡಿ ಸತ್ತು ಹೋದುದನ್ನು ತಿಳಿಸಿ ಆತನ ಅಭಿಪ್ರಾಯ ಕೇಳಿದಾಗ ಆತ ಹೇಳಿದ್ದು ಹೀಗೆ "ಮದ್ಯ ಕುಡ್ಯೋದ್ರಿಂದ ಹೊಟ್ಯಾಗಿದ್ದ ಹುಳಾ ಎಲ್ಲಾ ಸತ್ತೋಯ್ತವೆ" ಈ ನಗೆಹನಿ ನಗುವಿನೊಂದಿಗೇ ಈ ವ್ಯಸನದ ಭಯಾನಕತೆಯನ್ನೂ ತಿಳಿಸುತ್ತದೆ.

ಏಕೆಂದರೆ ಒಮ್ಮೆ ವ್ಯಸನಿಯಾದವ ಇದನ್ನು ಬಿಡಲೊಲ್ಲದೇ ಇದರ ಗುಣಗಾನ ಮಾಡುವುದೇ ಈ ವ್ಯಸನದ ಭಯಾನಕ ತೊಂದರೆ. 'ಕೊಡು ತಾಯೆ ವರವ, ಕುಡುಕನಲ್ಲದ ಗಂಡನ' ಎಂದ ಸರ್ಕಾರಕ್ಕೇ ಮದ್ಯಮುಕ್ತ ರಾಜ್ಯವನ್ನಾಗಿಸಲು ಸಾಧ್ಯವಿಲ್ಲ! ಬದಲಿಗೆ ಇದರಿಂದ ಬರುವ ಆದಾಯವನ್ನೇ ಎತ್ತಿ ಹಿಡಿಯಲಾಗುತ್ತದೆ.

ಮದ್ಯಪಾನ, ಧೂಮಪಾನಗಳಂತಹ ಪಿಡುಗುಗಳನ್ನು ಬುಡಸಹಿತ ಕೀಳಲು ಹಲವಾರು ಪ್ರಯತ್ನಗಳಾಗುತ್ತಿದ್ದರೂ ಜನರೇ ಮನಃಪೂರ್ವಕವಾಗಿ ಇದನ್ನು ಬಿಡುವವರೆಗೂ ಇದನ್ನು ನಿಗ್ರಹಿಸಲಾಗದು. ಇದು ದೇಹಕ್ಕೆ ಅಪಾಯಕಾರಿ ಎಂದು ತಿಳಿದಿದ್ದರೂ ಇದರ ವ್ಯಸನಿಗಳು ತಮ್ಮದೇ ಆದ ನೆವಗಳನ್ನು ನೀಡುತ್ತಾರೆ. ಮದ್ಯ ಕುಡಿಯುತ್ತಲೇ ನೂರು ವರ್ಷ ದಾಟಿದ ಮುದುಕರನ್ನು ಉದಾಹರಿಸುತ್ತಾರೆ. ಆದರೆ ವಾಸ್ತವವಾಗಿ ಮದ್ಯ ಒಂದಲ್ಲಾ ಒಂದು ರೀತಿಯಲ್ಲಿ ಆರೋಗ್ಯಕ್ಕೆ ಹಾನಿಕರವೇ ಹೌದು. ಬನ್ನಿ ಮದ್ಯದ ಹಿಂದಿರುವ ಕರಾಳ ಸತ್ಯವೇನು ಎಂಬುದನ್ನು ನೋಡೋಣ.....

THIQ ಎಂಬ ರಾಸಾಯನಿಕ

THIQ ಎಂಬ ರಾಸಾಯನಿಕ

ವೈಜ್ಞಾನಿಕವಾಗಿ ಹೇಳಬೇಕೆಂದರೆ ಮೊತ್ತ ಮೊದಲ ಬಾರಿ ಮದ್ಯ ಕುಡಿದಾಗ ರಕ್ತದಲ್ಲಿ ಸೇರುವ ಆಲ್ಕೋಹಾಲ್ ಮೆದುಳನ್ನು ಸೇರಿ ಮೆದುಳಿನಲ್ಲಿರುವ ರಾಸಾಯನಿಕಗಳ ಮೇಲೆ ಪ್ರಭಾವ ಬೀರುತ್ತದೆ. ಇದನ್ನು ತಡೆಯಲು ನಮ್ಮ ಮೆದುಳು ಇದಕ್ಕೆ ಪ್ರತಿರೋಧವಾಗಿ ಇನ್ನೊಂದು ರಾಸಾಯನಿಕವನ್ನು ತಯಾರಿಸುತ್ತದೆ. (Tetrahydroisoquinoline)ಅಥವಾ THIQ ಎಂಬ ಹೃಸ್ವರೂಪದ ಈ ರಾಸಾಯನಿಕ ಶಾಶ್ವತವಾಗಿ ನಮ್ಮ ಮೆದುಳಿನಲ್ಲಿ ಉಳಿದುಬಿಡುತ್ತದೆ. ಈ ರಾಸಾಯನಿಕವೇ ಪ್ರತಿಬಾರಿಯೂ ಮದ್ಯದ ಚಟಕ್ಕೆ ಮನವನ್ನು ಓಲೈಸುತ್ತದೆ.

ಕರುಳಿನ ಕಾರ್ಯವನ್ನೇ ನಿಷ್ಕ್ರಿಯಗೊಳಿಸಬಹುದು

ಕರುಳಿನ ಕಾರ್ಯವನ್ನೇ ನಿಷ್ಕ್ರಿಯಗೊಳಿಸಬಹುದು

ಆಲ್ಕೊಹಾಲ್ ಕರುಳಿನ ಕೋಶಗಳ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತವೆ. ಇದರಿಂದ ಸಿರ್ರೊಹೊಸಿಸ್ ಸಮಸ್ಯೆಯುಂಟಾಗುತ್ತದೆ. ಇದು ಒಮ್ಮೊಮ್ಮೆ ಮಾರಾಣಾಂತಿಕವಾಗಿ ಕಾಡಬಹುದು. ಇದು ಕರುಳಿನ ಕಾರ್ಯವನ್ನೆ ನಿಷ್ಕ್ರಿಯಗೊಳಿಸುತ್ತದೆ. ಇದು ಯಾರಿಗೆ ಬರುತ್ತದೆ ಎಂದು ಊಹಿಸುವುದು ಕಷ್ಟ. ಒಮ್ಮೊಮ್ಮೆ ಹೆಂಗಸರಲ್ಲು ಈ ಸಮಸ್ಯೆ ಕಾಡುತ್ತದೆ.

ನೋವು ಮರೆಸುವುದು ಬಿಡಿ, ವಿವೇಕವನ್ನೇ ಕಳೆದುಕೊಳ್ಳುತ್ತಾರೆ

ನೋವು ಮರೆಸುವುದು ಬಿಡಿ, ವಿವೇಕವನ್ನೇ ಕಳೆದುಕೊಳ್ಳುತ್ತಾರೆ

ಮದ್ಯಪಾನ ನೇರವಾಗಿ ಮೆದುಳಿಗೆ ದಾಳಿ ಮಾಡಿ ಬಳಿಕ ಮೆದುಳಿನ ಕಾರ್ಯಕ್ಷಮತೆ ತಾತ್ಕಾಲಿಕವಾಗಿ ಕಡಿಮೆ ಮಾಡಿಬಿಡುತ್ತದೆ ಅಲ್ಲದೆ ದೇಹದ ಚಟುವಟಿಕೆಯ ಮೇಲಿನ ಹತೋಟಿಯನ್ನೂ ಕೂಡ ಕಡಿಮೆಗೊಳಿಸುತ್ತದೆ ಇದನ್ನೇ ಅಮಲು ಎನ್ನುತ್ತಾರೆ. ವ್ಯಸನಿಗಳು ಈ ಅಮಲಿಗೆ ನೋವನ್ನು ಮರೆಸುವ ಶಕ್ತಿ ಇದೆ ಎಂದು ನಂಬುತ್ತಾರೆ. ಅಮಲಿನಲ್ಲಿದ್ದಾಗ ಮೆದುಳು ಯೋಚಿಸುವ ಕ್ಷಮತೆಯನ್ನು ಕಳೆದುಕೊಂಡಿರುವುದರಿಂದ ನೋವನ್ನು ಮರೆಸುವುದು ಬಿಡಿ, ಜನರು ತಮ್ಮ ವಿವೇಕವನ್ನೇ ಕಳೆದುಕೊಂಡು ಬಿಡುತ್ತಾರೆ.

ನೊರೆಬರುವ ಬಿಯರ್‌

ನೊರೆಬರುವ ಬಿಯರ್‌

ನೊರೆಬರುವ ಬಿಯರ್‌ನಲ್ಲಿ ಸಹಾ ಕಡಿಮೆ ಪ್ರಮಾಣದಲ್ಲಿ ಆಲ್ಕೋಹಾಲ್ ಪ್ರಮಾಣ ಇರುತ್ತದೆ. ಪ್ರಮಾಣ ಕಡಿಮೆಯೆಂದು ರಷ್ಯಾದಲ್ಲಿ ಇದಕ್ಕೆ ತಂಪುಪಾನೀಯದ ಸ್ಥಾನ ನೀಡಲಾಗಿತ್ತು. ನೊರೆಭರಿತ ಬಿಯರ್ ಅನ್ನು ಮಕ್ಕಳಿಂದ ವೃದ್ದರವರೆಗೆ ಎಲ್ಲರೂ ಸವಿಯುತ್ತಿದ್ದರು. ಆದರೆ ಕಡಿಮೆ ಪ್ರಮಾಣದಲ್ಲಿದ್ದರೂ ವಿಷ ವಿಷವೇ, ಈ ಸತ್ಯವನ್ನು ಮನಗಂಡ ರಷ್ಯಾ ಸರ್ಕಾರ 2013ರಿಂದ ಇದನ್ನು ಮದ್ಯವೆಂದೇ ಪರಿಗಣಿಸಲಾಗುತ್ತಿದೆ. ಹಾಗಾಗಿ ಈಗ ಅಲ್ಲಿ ಮಕ್ಕಳಿಗೆ ಬಿಯರ್ ಭಾಗ್ಯವಿಲ್ಲ.

ಮದ್ಯಬಿಡುವುದು ಸುಲಭದ ಮಾತಲ್ಲ!

ಮದ್ಯಬಿಡುವುದು ಸುಲಭದ ಮಾತಲ್ಲ!

ಒಮ್ಮೆ ಚಟಕ್ಕೆ ಬಿದ್ದವರು ಇದರಿಂದ ಹೊರಬರಲು ಮಾನಸಿಕವಾಗಿ ಅತ್ಯಂತ ಹೆಚ್ಚು ಕಷ್ಟಪಡಬೇಕಾಗುತ್ತದೆ. ಪ್ರಾರಂಭದಲ್ಲಿ ತಿಂಗಳಿಗೊಂದು, ವಾರಕ್ಕೊಂದರಂತೆ ಪ್ರಾರಂಭವದ ಚಟ ವ್ಯಸನಕ್ಕೆ ತಿರುಗಲು ಹೆಚ್ಚು ಕಾಲಬೇಕಾಗಿಲ್ಲ. ಆದರೆ ಹಿಂದಿರುಗಿ ಬರುವುದು ಮಾತ್ರ ತುಂಬಾ ತುಂಬಾ ಕಷ್ಟ. ಆದರೆ ಅಸಾಧ್ಯವೇನೂ ಅಲ್ಲ. ಇದಕ್ಕಾಗಿ ಬೇಕಾಗಿರುವುದು ಒಂದೇ ಒಂದು ಅಸ್ತ್ರ-ಅದೇ ದೃಢ ಸಂಕಲ್ಪ. ಇನ್ನುಳಿದುದನ್ನು ನಿಮ್ಮ ಕುಟುಂಬ ವೈದ್ಯರು ಅಥವಾ ಮದ್ಯವ್ಯಸನ ನಿರ್ಮೂಲನಾ ಸಂಸ್ಥೆಗಳ ಕಾರ್ಯಕರ್ತರು ನೀಡುವ ಸಲಹೆಗಳನ್ನು ಪಾಲಿಸುವುದರಿಂದ ಖಂಡಿತಾ ಹೊರಬರಬಹುದು.

ಒಮ್ಮೆಲೇ ಬಿಡುವುದೂ ಅಪಾಯಕರ

ಒಮ್ಮೆಲೇ ಬಿಡುವುದೂ ಅಪಾಯಕರ

ಯಾವುದೇ ವ್ಯಸನದಿಂದ ಒಮ್ಮೆಲೇ ಹೊರಬರುವುರು ಅತ್ಯಂತ ಅಪಾಯಕರ. ಇದು ವ್ಯಸನಕ್ಕೆ ಇನ್ನಷ್ಟು ಆಳವಾಗಿ ದೂಡುತ್ತದೆ. ನಾನು ಯಾವಾಗ ಬೇಕಾದರೂ ಬಿಡಬಲ್ಲೆ, ಯಾವಾಗ ಬೇಕಾದರೂ ಪ್ರಾರಂಭಿಬಲ್ಲೆ ಎಂಬ ಸಾಮರ್ಥ್ಯವನ್ನು ಹೊಂದಿರುವ ತಪ್ಪು ಗ್ರಹಿಕೆಯನ್ನೂ ಉಂಟುಮಾಡುತ್ತದೆ. ಇದಕ್ಕಾಗಿ ದೇಹ ನೈಸರ್ಗಿಕವಾಗಿ ಮತ್ತು ಹಂತಹಂತವಾಗಿ ವ್ಯಸನದಿಂದ ಹೊರಬರುವುದು ಅಗತ್ಯ.

Story first published: Monday, November 30, 2015, 12:38 [IST]
X
Desktop Bottom Promotion