For Quick Alerts
ALLOW NOTIFICATIONS  
For Daily Alerts

ಮೌಂಟ್ ಎವರೆಸ್ಟ್ ಶಿಖರ-ಎದೆ ಝಲ್‌ ಎನಿಸುವ ಸಂಗತಿ

By Super
|

ವಿಶ್ವದ ಅತ್ಯಂತ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್ ಬಗ್ಗೆ ವಿಶ್ವದ ಜನತೆಗೆ ಕುತೂಹಲವಿದೆ. ನೇಪಾಳದ ಶೆರ್ಪಾಗಳ ಪಾಲಿನ ದೇವರಾದ ಈ ಬೆಟ್ಟವನ್ನು ಹತ್ತಲು ಎಷ್ಟೋ ರಾಷ್ಟ್ರದ ಖ್ಯಾತ ಪರ್ವತಾರೋಹಿಗಳು ಕಳೆದ ಶತಮಾನಗಳಿಂದಲೂ ಪ್ರಯತ್ನ ನಡೆಸುತ್ತಲೇ ಬಂದಿದ್ದಾರೆ. 1920ರಿಂದ ಮೂರು ಬಾರಿ ಬೆಟ್ಟದ ತುದಿ ಏರಲು ಪ್ರಯತ್ನಿಸಿ ವಿಫಲರಾಗಿದ್ದ ಇಂಗ್ಲೆಂಡಿನ ಖ್ಯಾತ ಪರ್ವತಾರೋಹಿ ಜಾರ್ಜ್ ಮೆಲೋರಿಯವರನ್ನು ಈ ವೈಫಲ್ಯದ ಬಳಿಕವೂ ಮತ್ತೊಮ್ಮೆ ಹತ್ತಲು ಪ್ರಯತ್ನಿಸುವುದನ್ನು ಕಂಡವರು ಏಕಾಗಿ ಈ ಹುಚ್ಚುತನ ಎಂದು ಕೇಳಿದಾಗ ಅವರು ನೀಡಿದ ಉತ್ತರ :"ಏಕೆಂದರೆ ಅದು ಅಲ್ಲಿದೆ" ("Because it's there"). ಮೌಂಟ್ ಎವರೆಸ್ಟ್ ಬಗ್ಗೆ ನೀವು ತಿಳಿದಿರದ ಅಚ್ಚರಿಯ ಸಂಗತಿಗಳು

1924ರಲ್ಲಿಯೇ ಇವರು ಆಂಡ್ರ್ಯೂ ಸ್ಯಾಂಡಿ ಎಂಬ ಇನ್ನೋರ್ವ ಪರ್ವತಾರೋಹಿಯೊಂದಿಗೆ ಎವರೆಸ್ಟ್ ಹತ್ತಲು ಹೋಗಿ ಕಾಣೆಯಾಗಿದ್ದರು. ವಾಸ್ತವವಾಗಿ ಇವರು ಅಂದೇ ಎವರೆಸ್ಟ್ ಶಿಖರ ಹತ್ತಿ ಸಫಲರಾಗಿದ್ದು ಹಿಂದಿರುಗುವ ದಾರಿಯಲ್ಲಿ ಕಾಣೆಯಾಗಿದ್ದಾರೆಂದು ಹೆಚ್ಚಿನವರು ಅಭಿಪ್ರಾಯ ಪಡುತ್ತಾರೆ. ಆದ್ದರಿಂದ ಎವರೆಸ್ಟ್ ಹತ್ತಿದ ವಿಶ್ವದ ಪ್ರಥಮ ಮನುಷ್ಯನೆಂಬ ಖ್ಯಾತಿ ಬಳಿಕ, ಅಂದರೆ 1953ರಲ್ಲಿ ಹತ್ತಿದ ಹಿಲರಿ ಮತ್ತು ತೇನಸಿಂಗರ ಪಾಲಾಯಿತು. ಬನ್ನಿ ಎವರೆಸ್ಟ್ ಬಗ್ಗೆ ಇನ್ನೂ ಹೆಚ್ಚಿನ ವಿವರಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ..

ಈ ಶಿಖರದ ಬಗ್ಗೆ ಪರ್ವತಾರೋಹಿಗಳು ಏನು ಹೇಳುತ್ತಾರೆ?

ಈ ಶಿಖರದ ಬಗ್ಗೆ ಪರ್ವತಾರೋಹಿಗಳು ಏನು ಹೇಳುತ್ತಾರೆ?

ಮೌಂಟ್ ಎವರೆಸ್ಟ್ ಬಗ್ಗೆ ವಿವರ ತಿಳಿಯುತ್ತಾ ಹೋದಂತೆ ಪರ್ವತಾರೋಹಿಗಳು ನೀಡುವ ವಿವರಗಳು ದಂತಕಥೆಗಳಂತೆಯೇ ಕೇಳಿಬರುತ್ತದೆ. ಇದರಲ್ಲಿ ಅತಿ ಹೆಚ್ಚಿನ ಕುತೂಹಲ ಮೂಡಿಸಿರುವ, ಇದುವರೆಗೆ ರಹಸ್ಯ ಬಿಡಿಸಲಾರದ ಮಾಹಿತಿಯೆಂದರೆ ಯೇತಿ ಅಥವಾ ಹಿಮಮಾನವನದ್ದು. ಇದೇ ತರಹ ನೇಪಾಳದ ರಾಜನೊಬ್ಬ ತನ್ನಲ್ಲಿದ್ದ ಅಮೂಲ್ಯ, ಬೆಲೆಕಟ್ಟಲಾಗದ ರತ್ನವೊಂದನ್ನು ಎವರೆಸ್ಟ್ ಶಿಖರದ ತುದಿಯಲ್ಲಿ ಹೂತಿಟ್ಟಿದ್ದಾನೆಂಬ ಕಥೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸಮಸ್ಯೆಗಳ ಆಗರ

ಸಮಸ್ಯೆಗಳ ಆಗರ

ಮೂಳೆ ಕೊರೆಯುವ ಚಳಿ, ಆಳ ಅಳೆಯಲಾಗದ ಹಿಮದ ಪದರ, ಸಡಿಲವಾದ ಹಿಮದ ಪದರ ಜಾರಿ ಬೀಳುವ 'ಅವಲಾಂಚ್' ಭಯ, ನೀರು ಬರೆಯ ಅರವತ್ತು ಡಿಗ್ರಿಯಲ್ಲಿಯೇ ಕುದಿಯುವುದರಿಂದ ಅಡುಗೆ ಮಾಡಾಲಾಗದ ತೊಂದರೆ, ಆಮ್ಲಜನಕದ ಕೊರತೆ ಇತ್ಯಾದಿ ಹತ್ತು ಹಲವು ತೊಂದರೆಗಳನ್ನು ಎದುರಿಸಿ ಪರ್ವತಾರೋಹಿಗಳು ಇದರ ನೆತ್ತಿಯನ್ನು ಏರಲು ಪ್ರಯತ್ನಿಸುತ್ತಲೇ ಇದ್ದಾರೆ.

ಗಣಿತಶಾಸ್ತ್ರಜ್ಞ ರಾಧಾನಾಥ್ ಸಿಕ್ದರ್ ಪ್ರಕಾರ

ಗಣಿತಶಾಸ್ತ್ರಜ್ಞ ರಾಧಾನಾಥ್ ಸಿಕ್ದರ್ ಪ್ರಕಾರ

ಸಾಗರಮಟ್ಟದಿಂದ 29,035 ಅಡಿ ಎತ್ತರವಿರುವ ವಿಶ್ವದ ಅತಿಎತ್ತರದ ಬೆಟ್ಟ ಪ್ರತಿವರ್ಷ ನಾಲ್ಕು ಮಿ.ಮೀ. ಎಷ್ಟು ಎತ್ತರ ಹೆಚ್ಚಿಸಿಕೊಳ್ಳುತ್ತಿದೆ. ಆದರೆ ಇದರ ಎತ್ತರವನ್ನು ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿಯೇ ಭಾರತೀಯ ಗಣಿತಶಾಸ್ತ್ರಜ್ಞ ರಾಧಾನಾಥ್ ಸಿಕ್ದರ್ ಎಂಬುವರು ಲೆಕ್ಕ ಹಾಕಿದ್ದರು. ಅವರ ಪ್ರಕಾರ ಇದು 29,002 ಅಡಿಯಾಗಿತ್ತು. ಸುಮಾರು ಐವತ್ತು ವರ್ಷಗಳ ಬಳಿಕ ಅಂದರೆ 1999ರಲ್ಲಿ American Millennium Expedition ತಂಡದವರು ಉಪಗ್ರಹ ಮತ್ತು ಜೀಪಿಎಸ್ ವ್ಯವಸ್ಥೆಯನ್ನು ಉಪಯೋಗಿಸಿಕೊಂಡು ನಿಖರವಾದ ಎತ್ತರವನ್ನು ಪ್ರಕಟಿಸಿದರು. ಆದರೆ ಇದು 29,035 ಅಡಿಗಳಾಗಿದ್ದು ಪ್ರತಿವರ್ಷ ಕೊಂಚವೇ ಬೆಳೆಯುತ್ತಿರುವುದನ್ನು ಸಾಬೀತುಪಡಿಸಿತು.

ವಿಶ್ವದ ಅತಿ ಎತ್ತರದ ಬೆಟ್ಟ

ವಿಶ್ವದ ಅತಿ ಎತ್ತರದ ಬೆಟ್ಟ

8848 ಮೀಟರ್ (29029 ಅಡಿ) ಎತ್ತರವಿರುವ ಎವರೆಸ್ಟ್ ವಿಶ್ವದ ಅತಿ ಎತ್ತರದ ಬೆಟ್ಟವಾಗಿದೆ. ಆದರೆ ಇದು ಸಾಗರ ಮಟ್ಟದಿಂದ ಅಳೆಯುವ ಎತ್ತರವಾಗಿದೆ. ಆದರೆ ಒಂದು ವೇಳೆ ಸಾಗರದ ತಳದಿಂದ ಎದ್ದಿದ್ದು ನೆಲದ ಮೇಲಕ್ಕೂ ಚಾಚಿರುವ ಪರ್ವತದ ನಿಜವಾದ ಎತ್ತರವನ್ನು ಪರಿಗಣಿಸುವುದಾದರೆ ಪೆಸಿಫಿಕ್ ಮಹಾಸಾಗರದ ನಡುವೆ ಹವಾಯಿ ಬಳಿ ಇರುವ ಮೌನಾ ಕಿಯಾ (Mauna Kea) ಎಂಬ ದ್ವೀಪ ವಾಸ್ತವವಾಗಿ ಸಮುದ್ರ ತಳದಲ್ಲಿ ಬುಡವಿರುವ ಅತಿ ಎತ್ತರದ ಬೆಟ್ಟವಾಗಿದ್ದು ಸಮುದ್ರ ತಳ ಇದರ ಬುಡದಿಂದ ಶಿಖರ ಅಳೆಯುವುದಾದರೆ 33,000 ಅಡಿಗಳ ಎತ್ತರದ ಮೂಲಕ ವಿಶ್ವದ ಅತಿ ಎತ್ತರದ ಬೆಟ್ಟವಾಗಿದೆ. ಇದು ನೇಪಾಳ ಮತ್ತು ಟಿಬೆಟ್ (ಚೀನಾ) ನಡುವೆ ಇರುವ ಹಿಮಾಲಯ ಪರ್ವತ ಶ್ರೇಣಿಯ ಸಾವಿರಾರು ಬೆಟ್ಟಗಳ ನಡುವೆ ಇದೆ.

Image courtesy - wikipedia

ಮೌಂಟ್ ಎವರೆಸ್ಟ್ ನ ಮೂಲ

ಮೌಂಟ್ ಎವರೆಸ್ಟ್ ನ ಮೂಲ

1830 ರಿಂದ 1843 ರ ಅವಧಿಯಲ್ಲಿ ಭಾರತದಲ್ಲಿದ್ದ ಬ್ರಿಟಿಷ್ ಸರ್ವೇಯರ್ ಅಥವ ಮೋಜಣಿದಾರರಾಗಿದ್ದ ಜಾರ್ಜ್ ಎವರೆಸ್ಟ್ ರವರ ಗೌರವಾರ್ಥ 1865ರಲ್ಲಿ ಈ ಪರ್ವತಕ್ಕೆ ಬ್ರಿಟನ್ನಿನ The Royal Geographical Society ಸಂಸ್ಥೆ ಈ ಹೆಸರು ನೀಡಿದೆ. ಟಿಬೆಟ್ ಮತ್ತು ನೇಪಾಳಿ ಭಾಷೆಯಲ್ಲಿ ಈ ಪರ್ವತಕ್ಕೆ ತಮ್ಮದೇ ಹೆಸರುಗಳಿವೆ.

ನಿಖರವಾದ ಎತ್ತರ

ನಿಖರವಾದ ಎತ್ತರ

1856ರಲ್ಲಿ ಎವರೆಸ್ಟ್ ನ ನಿಖರವಾದ ಎತ್ತರವನ್ನು ಪಡೆಯಲಾಯಿತು. ಅಂದಿನ ದಿನಗಳಲ್ಲಿ ಈ ಪರ್ವತಕ್ಕೆ ಪೀಕ್ ಫಿಫ್ಟೀನ್ (Peak XV) ಎಂದು ಕರೆಯಲಾಗುತ್ತಿತ್ತು.

ಎಡ್ಮಂಡ್ ಹಿಲರಿ ಮತ್ತು ನೇಪಾಳಿ ಶೆರ್ಪಾ ತೇನಸಿಂಗ್

ಎಡ್ಮಂಡ್ ಹಿಲರಿ ಮತ್ತು ನೇಪಾಳಿ ಶೆರ್ಪಾ ತೇನಸಿಂಗ್

1953ರಲ್ಲಿ ನ್ಯೂಜಿಲ್ಯಾಂಡಿನ ಎಡ್ಮಂಡ್ ಹಿಲರಿ ಮತ್ತು ನೇಪಾಳಿ ಶೆರ್ಪಾ ತೇನಸಿಂಗ್ ನಾರ್ಗೆಯವರು ಈ ಮೌಂಟ್ ಎವರೆಸ್ಟ್ ಪರ್ವತವನ್ನು ಪ್ರಥಮ ಬಾರಿ ಹತ್ತಿರುವ ಖ್ಯಾತಿಗೆ ಪಾತ್ರರಾದರು. ಆದರೆ ಇಬ್ಬರೂ ಇನ್ನೊಬ್ಬರ ಹೆಸರನ್ನು ಪ್ರಥಮ ಹೆಜ್ಜೆ ಇಟ್ಟ ವ್ಯಕ್ತಿಯಾಗಿ ಹೆಸರಿಸಿದ ಕಾರಣ ಇಬ್ಬರನ್ನೂ ಜೊತೆಯಾಗಿಯೇ ಹೆಸರಿಸಲಾಗುತ್ತದೆ. ಒಂದು ತಂಡ ಹೇಗೆ ಕೆಲಸ ಮಾಡಬೇಕು ಎಂಬುದನ್ನು ಉದಾಹರಿಸಲು ಇಂದಿಗೂ ಈ ಪ್ರಕರಣವನ್ನು ಪಾಠಗಳಲ್ಲಿ ಹೇಳಲಾಗುತ್ತದೆ.

ಮೌಂಟ್ ಎವರೆಸ್ಟ್‌ನ ಕರಾಳ ಸತ್ಯ

ಮೌಂಟ್ ಎವರೆಸ್ಟ್‌ನ ಕರಾಳ ಸತ್ಯ

ಎವರೆಸ್ಟ್ ಹತ್ತಲು ಹಲವಾರು ದಾರಿಗಳಿವೆ. ಆದರೆ ಇವುಗಳಲ್ಲಿ ಎರಡು ದಾರಿಗಳು ಮಾತ್ರ ಹೆಚ್ಚು ಸುರಕ್ಷಿತ ಮತ್ತು ತಿಳಿದಿರುವ ಅಪಾಯಗಳಿರುವುದರಿಂದ ಹೆಚ್ಚಾಗಿ ಬಳಸಲ್ಪಡುತ್ತವೆ. 1953ರಲ್ಲಿ ಪ್ರಥಮ ವಿಜಯದ ಬಳಿಕ (1924ರಲ್ಲಿ ಮೆಲೋರಿ ಶಿಖರ ಹತ್ತಿದ್ದು ಪುರಾವಿಸದ ಕಾರಣ) ಸಾವಿರಾರು ಆರೋಹಣಗಳು ನಡೆದಿವೆ. ಹಲವಾರು ಅಪಘಾತ, ಕಾಣೆಯಾಗಿರುವ ಪ್ರಕರಣಗಳೂ ಇವೆ. ನೂರಾರು ಪರ್ವತಾರೋಹಿಗಳು ಸಾವನ್ನಪ್ಪಿದ್ದಾರೆ. ಇದರ ಅಪಾಯಗಳು ಒಂದೆರಡಲ್ಲ, ನೂರಾರಿವೆ. ಅತಿವೇಗದ ಗಾಳಿ, ಕೆಡುವ ಹವಾಮಾನ, ಎತ್ತರಕ್ಕೇರಿದಂತೆ ಕಾಡುವ ಬೇನೆ (altitude sickness) ಇವುಗಳಲ್ಲಿ ಮುಖ್ಯವಾಗಿವೆ.

ಹಿಮಾಲಯದ ಅಪಾಯವನ್ನು ಅರಿಯುವ ಉಪಕರಣ

ಹಿಮಾಲಯದ ಅಪಾಯವನ್ನು ಅರಿಯುವ ಉಪಕರಣ

ಇತ್ತೀಚಿನ ದಿನಗಳಲ್ಲಿ ಹಿಮಾಲಯದ ಆಪತ್ತು ಮತ್ತು ಅಪಾಯಗಳನ್ನು ಸಮರ್ಥವಾಗಿ ಎದುರಿಸಬಲ್ಲ ಉಪಕರಣಗಳು ಲಭ್ಯವಾಗುತ್ತಿದ್ದಂತೆಯೇ ಇದನ್ನು ಹತ್ತಬಯಸುತ್ತಿರುವ ಲಕ್ಷಾಂತರ ಪರ್ವತಾರೋಹಿಗಳಲ್ಲಿ ಹೊಸ ಉಮೇದು ಮೂಡಿದೆ. ಪ್ರತಿವರ್ಷ ಇದಕ್ಕಾಗಿ ಅರ್ಜಿ ಹಾಕುವವರ ಸಂಖ್ಯೆ ಹೆಚ್ಚುತ್ತಲೇ ಹೋಗಿದೆ. ಅಂತೆಯೇ ಹಿಂದಿನ ಪರ್ವತಾರೋಹಿಗಳು ಬಿಟ್ಟು ಬಂದ ಕಸವೂ ದಾರಿಯಾದ್ಯಂತ ಶಾಶ್ವತವಾಗಿ ಕೊಳೆಯದೇ ಬಿದ್ದಿದೆ.

ಬೇಸ್ ಕ್ಯಾಂಪ್

ಬೇಸ್ ಕ್ಯಾಂಪ್

ಯಾವುದೇ ಪರ್ವತಾರೋಹಣಕ್ಕೆ ಅಗತ್ಯವಿರುವಂತೆ ಮೂಲ ತಾಣ ಅಥವಾ ಬೇಸ್ ಕ್ಯಾಂಪ್ ಎವರೆಸ್ಟ್ ನಲ್ಲಿಯೂ ಇದೆ. ಬೆಟ್ಟದ ದಕ್ಷಿಣ ಭಾಗದ ತಾಣ 5364 ಮೀ (17598 ಅಡಿ) ಎತ್ತರದ ಸ್ಥಳದಲ್ಲಿದ್ದರೆ ಉತ್ತರ ಭಾಗದ ತಾಣ 5150 ಮೀ (16900 ಅಡಿ) ಎತ್ತರದಲ್ಲಿದೆ.

ಬೇಸ್ ಕ್ಯಾಂಪ್

ಬೇಸ್ ಕ್ಯಾಂಪ್

ಎಲ್ಲಾ ಅಗತ್ಯವಸ್ತುಗಳನ್ನು ಬೆನ್ನ ಮೇಲೆ ಹೊತ್ತೊಯ್ಯುವ ತಂಡದ ಹೆಚ್ಚಿನವರು ಈ ಕ್ಯಾಂಪುಗಳಲ್ಲಿ ಸಮಯ ಕಳೆಯುತ್ತಾರೆ. ಅಲ್ಲದೇ ಎತ್ತರಕ್ಕೆ ಹೋಗುತ್ತಿದ್ದ ಹಾಗೆಯೇ ಕಡಿಮೆಯಾಗುವ ಆಮ್ಲಜನಕಕ್ಕೆ ನಮ್ಮ ಶ್ವಾಸಕೋಶಗಳು ಹೊಂದಿಕೊಳ್ಳುವ ಸನ್ನಿವೇಶಾನುಸಂಧಾನ ಅಥವಾ ಅಕ್ಲಮಟೈಸೇಶನ್ (acclimatization) ಗೂ ಈ ಕ್ಯಾಂಪುಗಳು ಆಶ್ರಯ ಒದಗಿಸುತ್ತವೆ.

Image courtesy -adventure.howstuffworks.com

ಸಾವಿನ ವಲಯ ಅಥವಾ Death Zone

ಸಾವಿನ ವಲಯ ಅಥವಾ Death Zone

ಸಾಮಾನ್ಯವಾಗಿ 8000 ಮೀ (26000 ಅಡಿ) ಎತ್ತರ ದಾಟಿದ ಬಳಿಕ ಎದುರಾಗುವ ಎತ್ತರವನ್ನು ಸಾವಿನ ವಲಯ ಅಥವಾ Death Zone ಎಂದು ಕರೆಯಲಾಗುತ್ತದೆ. ಏಕೆಂದರೆ ಇಲ್ಲಿ ಆಮ್ಲಜನಕ ಅತ್ಯಂತ ಕಡಿಮೆಯಾಗಿದ್ದು ಸಿಲಿಂಡರುಗಳ ಮೂಲಕ ಸೇವಿಸಬೇಕಾಗುತ್ತದೆ. ಇಲ್ಲಿ ಎದುರಾಗುವ ಅಪಾಯಗಳು ಅತಿ ಅನೀರೀಕ್ಷಿತವಾಗಿದ್ದು ಪರ್ವತಾರೋಹಿಗಳು ಕೆಲವೊಮ್ಮೆ ಮಾನಸಿಕ ಕ್ಲೇಶಕ್ಕೂ ಒಳಗಾಗುತ್ತಾರೆ.

Image courtesy - adventure.howstuffworks.com

ಸಾವಿನ ವಲಯ ಅಥವಾ Death Zone

ಸಾವಿನ ವಲಯ ಅಥವಾ Death Zone

ಈ ಸ್ಥಿತಿಯಲ್ಲಿಯೇ ಅವರು ಕಂಡಿರುವ ಯಾವುದೋ ಆಕಾರ ಹಿಮಮಾನವ ಅಥವಾ ಯೇತಿಯನ್ನು ನೋಡಿದುದಂತಾಗಿರಬಹುದು ಎಂದು ಹಲವು ಮನಃಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ. ಈ ವಲಯದಲ್ಲಿ ಅತಿ ಹೆಚ್ಚೆಂದರೆ ಎರಡು ಅಥವಾ ಮೂರು ದಿನಗಳು ಕಳೆಯಬಹುದು. ಬಳಿಕ ಕೆಳಗೆ ಇಳಿಯಲೇಬೇಕು. ಇಲ್ಲದಿದ್ದರೆ ಸಾವು ಕಟ್ಟಿಟ್ಟ ಬುತ್ತಿ.

Image courtesy - adventure.howstuffworks.com

ಆಮ್ಲಜನಕದ ಕೊರತೆ

ಆಮ್ಲಜನಕದ ಕೊರತೆ

ಎತ್ತರಕ್ಕೆ ಸಾಗಿದಂತೆಲ್ಲಾ ಆಮ್ಲಜನಕ ವಿರಳವಾಗುವ ಕಾರಣ ಬುಡದಲ್ಲಿ ಕಾಣಸಿಗುತ್ತಿದ್ದ ಸಸ್ಯವೈವಿಧ್ಯ ಮತ್ತು ಹಕ್ಕಿಗಳ ಕಲವರ ಕಾಣೆಯಾಗುತ್ತಾ ಹೋಗುತ್ತದೆ. ಆದರೆ 6500 ಮೀ (21325 ಅಡಿ) ಎತ್ತರದಲ್ಲಿಯೂ ಕೆಲವು ಬಗೆಯ ಹಕ್ಕಿಗಳು ಮತ್ತು ಒಂದು ವಿಧದ ಪಾಚಿ ಕಲ್ಲುಗಳ ಅಂಚುಗಳಲ್ಲಿ ಬೆಳೆಯುವುದನ್ನು ಪರ್ವತಾರೋಹಿಗಳು ಗಮನಿಸಿದ್ದಾರೆ.

Image Courtesy - adventure.howstuffworks.com

ಅತಿ ಎತ್ತರದ ಸ್ಥಾನವನ್ನು ಕಳೆದುಕೊಳ್ಳಲು ಕಾರಣ

ಅತಿ ಎತ್ತರದ ಸ್ಥಾನವನ್ನು ಕಳೆದುಕೊಳ್ಳಲು ಕಾರಣ

ಭೂಮಿಯ ಕೇಂದ್ರದಿಂದ ಅಳೆದರೆ ಎವರೆಸ್ಟ್ ತನ್ನ ಅತಿ ಎತ್ತರದ ಸ್ಥಾನವನ್ನು ಕಳೆದುಕೊಳ್ಳುತ್ತದೆ. ಏಕೆಂದರೆ ಭೂಮಿಯ ಕೇಂದ್ರದಿಂದ ಅಳೆದರೆ ಕಿತ್ತಳೆ ಹಣ್ಣಿನಂತೆ ಸಮಭಾಜಕ ವೃತ್ತದಲ್ಲಿ ಉಬ್ಬಿರುವ ಭೂಮಿ ಅತಿ ಹೆಚ್ಚಿನ ತ್ರಿಜ್ಯವನ್ನು ಹೊಂದಿದ್ದು ಉತ್ತರ ಮತ್ತು ದಕ್ಷಿಣ ಧೃವಗಳಲ್ಲಿ ಕಡಿಮೆ ತ್ರಿಜ್ಯವನ್ನು ಹೊಂದಿದೆ. ಇದೇ ಕಾರಣದಿಂದ ಎವರೆಸ್ಟ್ ಐದನೆಯ ಸ್ಥಾನ ಪಡೆಯುತ್ತದೆ. ಈಕ್ವಡಾರ್ ದೇಶದಲ್ಲಿರುವ ಮೌಂಟ್ ಚಿಂಬೋರಾಜೋ (Mt Chimborazo) ಎಂಬ ಪರ್ವತ ಅತಿ ಎತ್ತರದ್ದಾಗಿದೆ.

Image courtesy-adventure.howstuffworks.com

English summary

Things You Might Not Know About Mount Everest

Mount everest is the ohighest point on Earth is currently listed at 29,035 feet above sea level, though it presently grows at four millimeters a year. The height was originally calculated by Indian mathematician Radhanath Sikdar in the mid nineteenth century.
X
Desktop Bottom Promotion