For Quick Alerts
ALLOW NOTIFICATIONS  
For Daily Alerts

ಯಾರು ಏನೇ ಹೇಳಲಿ, ನಾವು ಇರೋದೇ ಹೀಗೆ..!

By manu
|

ಬುದ್ಧಿಮತ್ತೆಯ ಪ್ರಶ್ನೆ ಬಂದಾಗ ಭಾರತೀಯರು ಯಾವುದಕ್ಕೂ ಕಡಿಮೆಯಿಲ್ಲ ಎಂಬುದನ್ನು ಜಗತ್ತಿನಾದ್ಯಂತ ಯಶಸ್ವಿಯಾಗಿರುವ ನಮ್ಮವರು ಈಗಾಗಲೇ ಸಾಬೀತು ಪಡಿಸಿಯಾಗಿದೆ! ಆದರೆ ನಮ್ಮ ರಕ್ತದಲ್ಲಿ ಬೆರೆತುಹೋಗಿರುವ ಕೆಲವು ಅಭ್ಯಾಸಗಳು ಮಾತ್ರ ಅತ್ಯಂತ ತಮಾಷೆಯಾಗಿದ್ದು ಇತರ ರಾಷ್ಟ್ರೀಯರಿಗೆ ನಗಲು ಕಾರಣ ನೀಡುತ್ತದೆ.

ಉದಾಹರಣೆಗೆ ಲಿಫ್ಟ್ ಒಂದರಲ್ಲಿ ಮೇಲೆ ಹೋಗಬೇಕಾದರೆ ಮೇಲೆ ಹೋಗುವ ಬಟನ್ ಒತ್ತಿದರೆ ಸಾಕು. ಕೆಳಗೆ ಹೋಗಬೇಕಾದ ಬಟನ್ ಒತ್ತುವ ಅಗತ್ಯವಿಲ್ಲ. ಆಗ ಲಿಫ್ಟ್‌ನ ವ್ಯವಸ್ಥೆ ಮೇಲೆ ಹೋಗಲಿರುವ ತೊಟ್ಟಿಲುಗಳಲ್ಲಿ ಯಾವುದು ಮೊದಲು ಆಗಮಿಸುತ್ತದೆಯೋ ಅದನ್ನು ನಿಲ್ಲುವಂತೆ ಮಾಡುತ್ತದೆ.

ಆದರೆ ಸರಿಸುಮಾರು ಪ್ರತಿ ಭಾರತೀಯರೂ ಎರಡೂ ಬಟನ್ ಒತ್ತುತ್ತಾರೆ. ಇನ್ನೊಂದು ಅಭ್ಯಾಸವೆಂದರೆ ಎಳೆಯಿರಿ ಎಂದು ಬರೆದಿರುವ ಬಾಗಿಲನ್ನೂ ಮೊದಲು ದೂಡಿ ಅದು ತೆರೆಯುವುದಿಲ್ಲವೆಂದು ತಿಳಿದ ಬಳಿಕವೇ ಎಳೆಯುತ್ತಾರೆ. ವಿದೇಶೀಯರು ಗಹಗಹಿಸಿ ನಗಲು ಇನ್ನೊಂದು ಕಾರಣವೆಂದರೆ ಭಾರತೀಯರು ಯಾವುದೇ ಹೊಸ ವಾಹನ ತೆಗೆದುಕೊಳ್ಳಲಿ, ಸೈಕಲ್ ಆಗಲಿ ಅಥವಾ ದುಬಾರಿ ಕಾರೇ ಆಗಲಿ ಹೊಸದಿದ್ದಾಗ ಅದರ ಸೀಟುಗಳಿಗೆ ಹೊದಿಸಿದ್ದ ಪ್ಲಾಸ್ಟಿಕ್ ಹಾಳೆಗಳನ್ನು ಕೊಂಡು ತಿಂಗಳುಗಟ್ಟಲೇ ತೆಗೆಯದೇ ಇರುವುದು!

ಈ ಎಲ್ಲಾ ಅಭ್ಯಾಸಗಳು ನಮ್ಮ ರಕ್ತದಲ್ಲಿ ಬೆರೆತು ಹೋಗಿವೆ. ಏಕೆಂದರೆ ನಮ್ಮ ಹಿರಿಯರು ತಾವೂ ಅನುಸರಿಸಿ ನಮಗೂ ಈ ಅಭ್ಯಾಸಗಳನ್ನು ಕಲಿಸಿಬಿಟ್ಟಿದ್ದಾರೆ. ನಗುಬರಿಸುವ ಇಂತಹ ಹಲವು ಅಭ್ಯಾಸಗಳನ್ನು ಬೋಲ್ಡ್ ಸ್ಕೈ ತಂಡ ಕಲೆಹಾಕಿದೆ. ಬನ್ನಿ ಅವು ಯಾವುದು ಎಂಬುದನ್ನು ನೋಡೋಣ..

ಲಿಫ್ಟ್‌ನ ಎರಡೂ ಬಟನ್ ಒತ್ತುವುದು

ಲಿಫ್ಟ್‌ನ ಎರಡೂ ಬಟನ್ ಒತ್ತುವುದು

ಭಾರತೀಯರು ಲಿಫ್ಟ್‌ನ ಬಳಿ ಬಂದಾದ ಮೇಲೆ ಮತ್ತು ಕೆಳಗೆ ಹೋಗುವ ಎರಡೂ ಬಟನ್ನುಗಳನ್ನು ಒತ್ತುವುದು ಸಾಮಾನ್ಯ. ನೀವು ಯಾವುದೇ ದೇಶದಲ್ಲಿರಿ, ಈ ಹುಟ್ಟುಗುಣವನ್ನು ಮಾತ್ರ ಬಿಡಲಾರಿರಿ.

ತಲೆ ಅಲ್ಲಾಡಿಸಿ ಉತ್ತರಿಸುವುದು

ತಲೆ ಅಲ್ಲಾಡಿಸಿ ಉತ್ತರಿಸುವುದು

ಸಾಮಾನ್ಯವಾಗಿ ಭಾರತೀಯ ಮಹಿಳೆಯರು ಗೋಣು ಅಲ್ಲಾಡಿಸಿ ತಮ್ಮ ಉತ್ತರವನ್ನು ಹೌದು ಅಥವಾ ಇಲ್ಲ ಎಂಬ ಮೂಲಕ ನೀಡುತ್ತಾರೆ. ಹೌದು ಎಂದಾದರೆ ಮೇಲಿನಿಂದ ಕೆಳಕ್ಕೂ, ಅಲ್ಲ ಎಂದಾದರೆ ಪಕ್ಕ ಪಕ್ಕಕ್ಕೆ ಅಲ್ಲಾಡಿಸಿದರೆ ಸರಿ, ಮಾತನಾಡುವ ಪ್ರಮೇಯವೇ ಇಲ!

ವೃತ್ತಿಗೂ ಕಲಿಕೆಗೂ ಸಂಬಂಧವೇ ಇಲ್ಲದ ಕೋರ್ಸುಗಳು

ವೃತ್ತಿಗೂ ಕಲಿಕೆಗೂ ಸಂಬಂಧವೇ ಇಲ್ಲದ ಕೋರ್ಸುಗಳು

ಸಾಮಾನ್ಯವಾಗಿ ಭಾರತೀಯ ವಿದ್ಯಾರ್ಥಿಗಳಿಗೆ ತಾವು ಮುಂದೇನಾಗಬೇಕೆಂಬ ಸ್ಪಷ್ಟ ನಿಲುವೇ ಇರುವುದಿಲ್ಲ. ಹೆಚ್ಚಿನವರು ತಾವು ಆಗಬೇಕೆಂದಿರುವುದಕ್ಕೂ ಈಗ ಓದುತ್ತಿರುವ ಪಠ್ಯಕ್ರಮಕ್ಕೂ ತಾಳಮೇಳವೇ ಇರುವುದಿಲ್ಲ. ಕೆಲವರಂತೂ ಕೇವಲ ಅಂಕಗಳಿಗಾಗಿ ತಮಗೆ ಅಗತ್ಯವೇ ಇಲ್ಲದ ಒಂದು ವಿಷಯ ತೆಗೆದುಕೊಂಡಿರುತ್ತಾರೆ. ಉದಾಹರಣೆಗೆ ಫ್ರೆಂಚ್ ಭಾಷೆ. ಈ ಭಾಷೆ ಕಲಿತ ಯಾವ ವಿದ್ಯಾರ್ಥಿಗೆ ಇದು ಭಾರತದಲ್ಲಿ ಉಪಯೋಗಕ್ಕೆ ಬಂದಿದೆ?

ರಸ್ತೆ ಬದಿ ಕಸ ಎಸೆಯುವುದು

ರಸ್ತೆ ಬದಿ ಕಸ ಎಸೆಯುವುದು

ಸ್ವಚ್ಛ ಭಾರತ ಎಂಬ ದೊಡ್ಡ ದೊಡ್ಡ ಮಾತುಗಳಿಗೆ ತಲೆ ಅಲ್ಲಾಡಿಸುವ ನಮಗೆ ನಮ್ಮ ಕಸದ ವಿಷಯ ಬಂದಾಗ ಮಾತ್ರ ಅತಿ ಸೋಮಾರಿಗಳಾಗುತ್ತೇವೆ. ಕಸವನ್ನು ಯಾವುದೋ ಒಂದು ಹರಕು ಚೀಲದಲ್ಲಿ ಒತ್ತಿ ತುಂಬಿಸಿ ಯಾರೂ ಗಮನಿಸದ ವೇಳೆಯಲ್ಲಿ ರಸ್ತೆಬದಿಯಲ್ಲಿ ಎಲ್ಲೋ ಒಂದೆಡೆ ನಿಲ್ಲಿಸಿದರೆ, ಅಥವಾ ನಮ್ಮಂತೆಯೇ ಇನ್ನಾರಾದರೂ ಈಗಾಗಲೇ ನಿಲ್ಲಿಸಿದ್ದರೆ ಅದರ ಪಕ್ಕ ನಿಲ್ಲಿಸಿದರೆ ನಮ್ಮ ಕರ್ತವ್ಯ ಮುಗಿಯಿತು.

ಪ್ರಾಪ್ತ ವಯಸ್ಸಿಗೆ ಮದುವೆ ಮಾಡುವುದು

ಪ್ರಾಪ್ತ ವಯಸ್ಸಿಗೆ ಮದುವೆ ಮಾಡುವುದು

ಭಾರತದಾದ್ಯಂತ ಪಾಲಕರು ತಮ್ಮ ಮಗಳಿಗೆ 'ಪ್ರಾಪ್ತ ವಯಸ್ಸು' ಆಗುತ್ತಲೇ ಮದುವೆ ಮಾಡಿ ಕಳಿಸಿಕೊಡುವ ಯೋಚನೆ ಮಾಡುತ್ತಾರೆ. ಈ ಪ್ರಾಪ್ತ ವಯಸ್ಸು ಎಂಬ ಕಲ್ಪನೆಯೇ ವಿದೇಶೀಯರ ಪಾಲಿಗೆ ನಗು ಬರಿಸುವ ಸಂಗತಿಯಾಗಿದೆ.

ವಿದೇಶದಲ್ಲಿದ್ದಾಗ ಅವರಂತೆಯೇ ಮಾತನಾಡಲು ಯತ್ನಿಸುವುದು

ವಿದೇಶದಲ್ಲಿದ್ದಾಗ ಅವರಂತೆಯೇ ಮಾತನಾಡಲು ಯತ್ನಿಸುವುದು

ಪ್ರತಿ ದೇಶದ ಮಾತನಾಡುವ ಶೈಲಿ ಭಿನ್ನವಾಗಿರುತ್ತದೆ. ಆದರೆ ಆ ದೇಶಕ್ಕೆ ಹೋದ ಭಾರತೀಯರು ಅವರ ಶೈಲಿಯಲ್ಲಿಯೇ ಮಾತನಾಡಲು ಯತ್ನಿಸುವುದು ಅವರಿಗೆ ನಗು ಬರಿಸುತ್ತದೆ.

ಪಕ್ಕದವ ಸಿಗ್ನಲ್ ಮುರಿದರೆ ಎಲ್ಲರೂ ಮುರಿಯುವರು

ಪಕ್ಕದವ ಸಿಗ್ನಲ್ ಮುರಿದರೆ ಎಲ್ಲರೂ ಮುರಿಯುವರು

ಭಾರತೀಯರು ಸಿಗ್ನಲ್ ಪೂರ್ತಿಯಾಗಿ ಹಸಿರಾಗುವುದನ್ನು ಕಾಯುವಷ್ಟು ತಾಳ್ಮೆ ತೋರುವುದಿಲ್ಲ. ಹಸಿರಾಗಲು ಇನ್ನು ಒಂದೆರಡು ಸೆಕೆಂಡು ಇದೆ ಎನ್ನಬೇಕಾದರೇ ರಾಕೆಟ್ ವೇಗದಲ್ಲಿ ತಮ್ಮ ವಾಹನಗಳನ್ನು ಪೂರ್ಣವೇಗದಲ್ಲಿ ಓಡಿಸಿಕೊಂಡು ಹೋಗುತ್ತಾರೆ. ಓರ್ವ ಈ ರೀತಿ ನಡೆದನೋ ಇಲ್ಲವೋ, ಆತನ ಹಿಂದೆ ಕಾಯುತ್ತಿದ್ದ ಅಷ್ಟೂ ವಾಹನಗಳು ಧಾವಿಸಿ ಟ್ರಾಫಿಕ್ ನಿಯಮಗಳನ್ನು ಗಾಳಿಗೆ ತೂರುತ್ತವೆ.

ಆಂಬ್ಯುಲೆನ್ಸ್ ಹಿಂದೆ ಹಿಂಬಾಲಿಸಿಕೊಂಡು ಹೋಗುವುದು

ಆಂಬ್ಯುಲೆನ್ಸ್ ಹಿಂದೆ ಹಿಂಬಾಲಿಸಿಕೊಂಡು ಹೋಗುವುದು

ಅತ್ಯಂತ ಅಪಾಯಕಾರಿಯಾದ ಮತ್ತು ಜಗತ್ತಿನ ದೃಷ್ಟಿಯಲ್ಲಿ ಭಾರತದ ಹೆಸರನ್ನು ಕುಂದಿಸುವ ಒಂದು ಕ್ರಿಯೆ ಎಂದರೆ ತುರ್ತು ಪರಿಸ್ಥಿತಿಯಲ್ಲಿ ಹೋಗುತ್ತಿದ್ದ ಅಂಬ್ಯುಲೆನ್ಸ್ ವಾಹನವನ್ನು ಅದೇ ವೇಗದಲ್ಲಿ ಹಿಂಬಾಲಿಸುವುದು. ಏಕೆಂದರೆ ಆಂಬ್ಯುಲೆನ್ಸ್ ವಾಹನಕ್ಕೆ ಎಲ್ಲರೂ ದಾರಿ ಬಿಡುವುದರಿಂದ ಅದು ವೇಗವಾಗಿ ತಡೆರಹಿತವಾಗಿ ಹೋಗುತ್ತದೆ. ಅದನ್ನು ಹಿಂಬಾಲಿಸುವುದರಿಂದ ಅದೇ ವೇಗದಲ್ಲಿ ತಾವೂ ಹೋಗಬಹುದು ಎಂಬ ದುರಾಲೋಚನೆ ಭಾರತೀಯರದ್ದು.

ಇನ್ನೂ ಪ್ರಚಲಿತದಲ್ಲಿರುವ ಚುಡಾಯಿಸುವ ಗೀಳು

ಇನ್ನೂ ಪ್ರಚಲಿತದಲ್ಲಿರುವ ಚುಡಾಯಿಸುವ ಗೀಳು

ಸಾರ್ವಜನಿಕ ಸ್ಥಳಗಳಲ್ಲಿ ಹೆಣ್ಣುಮಕ್ಕಳು ಓಡಾಡುವಾಗ ನೆರೆದಿರುವ ಪಡ್ಡೆ ಯುವಕರು ಚುಡಾಯಿಸುವ ಗೀಳನ್ನು ಇಂದಿಗೂ ಕಾಣಬಹುದು. ಈ ಬಗ್ಗೆ ಸ್ಪಷ್ಟವಾದ ಕಾನೂನಿದ್ದರೂ ಇದರ ಗೊಡವೇ ಬೇಡವೆಂದು ನಿರ್ಲಕ್ಷ್ಯ ತೋರುವ ಹೆಣ್ಣುಮಕ್ಕಳು ಹಾಗೂ ಪಾಲಕರಿಂದಾಗಿ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ.

ಇವರಿಗೆ ಶೌಚಾಲಯದ ಅಗತ್ಯವೇ ಇಲ್ಲ!

ಇವರಿಗೆ ಶೌಚಾಲಯದ ಅಗತ್ಯವೇ ಇಲ್ಲ!

ದೇಹಬಾಧೆ ತೀರಿಸಿಕೊಳ್ಳಲು ಶೌಚಾಲಯವೇ ಬೇಕಾಗಿಲ್ಲ ಭಾರತೀಯ ಪುರುಷರಿಗೆ ಹೊರಗಿದ್ದಾಗ ಮೂತ್ರಕ್ಕೆ ಹೋಗಲು ಶೌಚಾಲಯದ ಅಗತ್ಯವೇ ಇಲ್ಲ. ಎಲ್ಲಿ ಗೋಡೆ ಕಂಡಿತೋ ಅಲ್ಲಿ ತಮ್ಮ ದಾಹ ತೀರಿಸಿಕೊಂಡುಬಿಡುತ್ತಾರೆ. ಹೆಚ್ಚಿನವರು ಎಲ್ಲಿ ಮೂತ್ರ ಮಾಡಬಾರದು ಎಂದು ಬರೆದಿರುತ್ತಾರೋ ಅಲ್ಲಿಯೇ ಮೂತ್ರ ವಿಸರ್ಜಿಸಿ ಅಟ್ಟಹಾಸ ಮೆರೆದಿರುತ್ತಾರೆ. ಅದಕ್ಕೆ ಕೆಲವರು ವಿವಿಧ ದೇವರ ಪಟವಿರುವ ಟೈಲ್ಸ್ ಗಳನ್ನು ಸಂಭವನೀಯ ಸ್ಥಳಗಳಲ್ಲಿ ಸ್ಥಾಪಿಸಿದ ಬಳಿಕ ಈ ಚಾಳಿ ಕಡಿಮೆಯಾಗಿದೆ. ಭಾರತೀಯರು ದೇವರಿಗೆ ಹೆದರುವಷ್ಟು ಯಾರಿಗೂ ಹೆದರುವುದಿಲ್ಲ. ಪ್ರಮುಖವಾಗಿ ಸಾಕಷ್ಟು ಸಾರ್ವಜನಿಕ ಶೌಚಾಲಯಗಳಿಲ್ಲದಿರುವುದು ಈ ತೊಂದರೆಗೆ ಮುಖ್ಯ ಕಾರಣ.

English summary

Things Indians Do Without Thinking

Indians are intelligent people, look at you and me! But at times we do some of the craziest things which are uncontrollably hilarious. For example, most of us Indians have the habit of pressing both the elevator buttons when we want to go either up or down. The other thing we do without thinking is pushing the door open instead of pulling!
X
Desktop Bottom Promotion