For Quick Alerts
ALLOW NOTIFICATIONS  
For Daily Alerts

ಏನಾಶ್ಚರ್ಯ, ಈ ಜಗತ್ತಿನಲ್ಲಿ ಆಹಾರಕ್ಕೂ ಹೆದರುವವರಿದ್ದಾರೆ!

By Arshad
|

ಭಯ! ಎಲ್ಲಾ ಜೀವಿಗಳಲ್ಲಿ ಮನೆಮಾಡಿರುವ ಒಂದು ಸುರಕ್ಷಾ ವ್ಯವಸ್ಥೆಯಾಗಿದೆ. ಇತರ ಜೀವಿಗಳಿಂದ ಅಥವಾ ಬೇರಾವುದೋ ನೈಸರ್ಗಿಕ ಮೂಲಗಳಿಂದ ಅಪಾಯ ಒದಗಿದಾಗ ಇದರಿಂದ ತಕ್ಷಣ ದೂರ ಹೋಗಲು ಅಥವಾ ತಪ್ಪಿಸಿಕೊಳ್ಳಲು ನಿಸರ್ಗ ನೀಡಿರುವ ಒಂದು ವರವಾಗಿದೆ. ಈ ಹೊತ್ತಿನಲ್ಲಿ ನಮ್ಮ ದೇಹದಲ್ಲಿ ಸ್ರವಿಸುವ ಕೆಲವು ರಸದೂತಗಳು ಹಲವು ದೈಹಿಕ ಮತ್ತು ಮಾನಸಿಕ ಬದಲಾವಣೆಗಳಿಗೆ ಕಾರಣವಾಗಿವೆ. ಭಯದ ಬಾಳು ಆಗುವುದು ಗೋಳು

ಉದಾಹರಣೆಗೆ ಏಕಾಏಕಿ ಹಾವು ಎದುರಿಗೆ ನಿಂತು ಹೆಡೆಬಿಚ್ಚಿ ಬುಸುಗುಟ್ಟಿದರೆ ಆ ಕ್ಷಣದಲ್ಲಿ ಭಯ ಆವರಿಸಿ ಬೇರೆಲ್ಲಾ ಯೋಚನೆಗಳಿಗೆ ಕಡಿವಾಣ ಹಾಕಿ ಅಲ್ಲಿಂದ ಪಲಾಯನ ಮಾಡುವತ್ತ ಮನಸ್ಸನ್ನು ಕೇಂದ್ರೀಕರಿಸುತ್ತದೆ.ಮೈಯೆಲ್ಲಾ ಬೆವರುತ್ತದೆ, ಸುಸ್ತು ಆವರಿಸುತ್ತದೆ, ಕಣ್ಣು ಕತ್ತಲು ಕವಿಯುತ್ತದೆ.

ರಸದೂತಗಳ ಪ್ರಭಾವ ಇನ್ನೂ ಹೆಚ್ಚಾದರೆ ಪ್ರಜ್ಞೆ ತಪ್ಪುವ ಸಂಭವವೂ ಇದೆ. ಈ ಹೊತ್ತಿನಲ್ಲಿ ಸಾಂತ್ವಾನ ನೀಡುವ ಮಾತು ಅಥವಾ ಕ್ರಿಯೆ (ಉದಾಹರಣೆಗೆ ನಾನಿದ್ದೇನೆ, ಹೆದರಬೇಡಿ, ಈಚೆ ಬನ್ನಿ) ಭಯದ ಪ್ರಭಾವ ಹೆಚ್ಚಾಗದಂತೆ ತಡೆಯುತ್ತದೆ. ಈ ಭಯ ನೈಸರ್ಗಿಕವಾಗಿದ್ದು ಪ್ರತಿ ಜೀವಿಗೆ ಅನಿವಾರ್ಯವೂ ಆಗಿದೆ. ತುಂಬಾ ಸಿಲ್ಲಿಯಾದ ಹಾಗೂ ವಿಚಿತ್ರವಾದ ಫೋಬಿಯಾಗಳು

ಆದರೆ ಕೆಲವರಲ್ಲಿ ಇದಕ್ಕೂ ಹೊರತಾದ ಹಲವು ಭಯಗಳು ಮನೆಮಾಡಿರುತ್ತವೆ. ಉದಾಹರಣೆಗೆ ಜಿರಲೆಯ ಭಯ. ಮೈಮೇಲೆ ಜಿರಲೆ (ಅಥವಾ ಜೇಡ) ಬಿದ್ದರೆ ದೊಡ್ಡ ಹಾವೇ ಮೈಮೇಲೆ ಬಿದ್ದವರಂತೆ ಭಯಭೀತಗೊಳ್ಳುತ್ತಾರೆ. ವಿಜ್ಞಾನ ಈ ಭಯಗಳನ್ನೆಲ್ಲಾ ವರ್ಗೀಕರಿಸಿ ಪ್ರತಿ ಭಯಕ್ಕೂ ಒಂದು ಹೆಸರುಗಳನ್ನು ನೀಡಿದೆ. ಬನ್ನಿ ಈ ಬಗ್ಗೆ ಕೆಳಗಿನ ಸ್ಲೈಡ್ ಶೋ ಮೂಲಕ ಆಹಾರಕ್ಕೆ ಹೆದರುವ ಭಯಗಳ ಬಗ್ಗೆ ಕೆಲವು ಮಾಹಿತಿಗಳನ್ನು ನೀಡಲಾಗಿದೆ...

ಸಿಬೋಫೋಬಿಯಾ (Cibophobia)-ಆಹಾರದ ಹೆದರಿಕೆ

ಸಿಬೋಫೋಬಿಯಾ (Cibophobia)-ಆಹಾರದ ಹೆದರಿಕೆ

ಭಯಗಳ ಪಟ್ಟಿಯಲ್ಲಿ ಅತಿ ಕೆಟ್ಟದಾಗಿರುವ ಈ ಭಯ ಹೊಂದಿರುವವರು ಹೆಚ್ಚಿನ ಆಹಾರಗಳನ್ನು ತಿನ್ನಲು ಭಯಪಡುತ್ತಾರೆ. ತಿನ್ನದೇ ಇದ್ದರೆ ಜೀವಂತವಾಗಿ ಉಳಿಯುವುದಾದರೂ ಹೇಗೆ? ಆದರೆ ನಿಸರ್ಗ ಇವರ ಉಳಿಯುವಿಕೆಗೆ ಒಂದು ಅಸ್ತ್ರ ನೀಡಿದೆ ಇವರಿಗೆ ಹಾಳಾಗುಂತಹ ಅಥವಾ ಕೆಡುವ ಆಹಾರಗಳಿಂದ ಮಾತ್ರ ಭಯವಿದ್ದು ಕೆಡದೇ ಇರುವ ಆಹಾರ, ನೀರು ಕುಡಿಯಲು ಶಕ್ತರಿರುತ್ತಾರೆ. ಹಾಲು, ಮೊಸರು ಮೊದಲಾದ ಆಹಾರಗಳನ್ನು ಇವರು ಸೇವಿಸುವುದಿಲ್ಲ. ನೀರು, ಗಟ್ಟಿ ಆಹಾರಗಳು, ಒಣಫಲಗಳನ್ನು ಇವರು ಸೇವಿಸುತ್ತಾ ಜೀವಂತವಾಗಿರುತ್ತಾರೆ.

ಗ್ಯೂಮೋಫೋಬಿಯಾ (Geumophobia)-ರುಚಿಯ ಹೆದರಿಕೆ

ಗ್ಯೂಮೋಫೋಬಿಯಾ (Geumophobia)-ರುಚಿಯ ಹೆದರಿಕೆ

ಈ ಹೆದರಿಕೆ ಇರುವವರಿಗೆ ಯಾವುದೇ ಹೊಸ ರುಚಿಯನ್ನು ಸಹಿಸಲು ಸಾಧ್ಯವಿಲ್ಲ. ಏಕೆಂದರೆ ಈ ಹೊಸ ಆಹಾರದಲ್ಲಿ ಯಾವ ವಿಷ ಇರುತ್ತದೆಯೋ ಇಂದು ಇವರು ಸದಾ ಅತಂಕದಲ್ಲಿರುತ್ತಾರೆ. ಹೊಸ ಆಹಾರ ಕಂಡೊಡನೇ ಇವರ ಹೃದಯಬಡಿತ ಸದಾ ತೀವ್ರಗತಿಯಲ್ಲಿ ಬಡಿಯುತ್ತಾ ಇಲ್ಲದುದನ್ನು ಕಲ್ಪಿಸುತ್ತಾ ಭಯಭೀತರಾಗುತ್ತಾರೆ. ಚಿಕ್ಕಂದಿನಿಂದಲೂ ತಿಂದು ಬಂದಿದ್ದ ಆಹಾರವನ್ನು ಮಾತ್ರ ಇವರು ಸೇವಿಸುತ್ತಾ ಜೀವಂತವಿರಬಲ್ಲರು.

ಫ್ರಿಗೋಫೋಬಿಯಾ (Frigophobia)-ತಣ್ಣಗಿರುವ ಹೆದರಿಕೆ

ಫ್ರಿಗೋಫೋಬಿಯಾ (Frigophobia)-ತಣ್ಣಗಿರುವ ಹೆದರಿಕೆ

ಇವರಿಗೆ ತಣ್ಣನೆಯ ಆಹಾರಗಳು ಹೆದರಿಕೆ ಹುಟ್ಟಿಸುತ್ತವೆ. ಐಸ್ ಕ್ರೀಂ, ಐಸ್ ತುಂಡು, ನೀರಿನ ಹನಿಗಳು ಹೊರಭಾಗವನ್ನು ಆವರಿಸಿರುವ ಜ್ಯೂಸಿನ ಲೋಟದ ಚಿತ್ರ ಮೊದಲಾದವು ಇವರಿಗೆ ಅತೀವ ಹೆದರಿಕೆ ತರಿಸುತ್ತದೆ. ಅಕ್ಕ ಪಕ್ಕದಲ್ಲಿ ಯಾರಾದರೂ ತಣ್ಣನೆಯ ಪೇಯದ ಬಾಟಲಿಯನ್ನು ಹಿಡಿದುಕೊಂಡಿದ್ದರೂ ಇವರು ಭೂತ ಕಂಡವರಂತೆ ಬೆಚ್ಚಿ ಬೀಳುತ್ತಾರೆ. ಇವರು ಸಮಾಜದಲ್ಲಿದ್ದಾಗ ಒಂದಲ್ಲಾ ಒಂದೆಡೆ ಕಂಡೇ ಕಾಣುವ ತಣ್ಣಗಿನ ವಸ್ತುಗಳಿಂದಾಗಿ ಸದಾ ಚಡಪಡಿಸುತ್ತಲೇ ಇರುತ್ತಾರೆ. ಆದ್ದರಿಂದ ಇವರು ಹೆಚ್ಚಾಗಿ ಹೊರಗೆ ಅಡಿಯಿಡುವುದೇ ಇಲ್ಲ.

ಮೀಥೈಫೋಬಿಯಾ (Methyphobia)-ಮದ್ಯದ ಹೆದರಿಕೆ

ಮೀಥೈಫೋಬಿಯಾ (Methyphobia)-ಮದ್ಯದ ಹೆದರಿಕೆ

ಮದ್ಯವನ್ನು ನೇರವಾಗಿ ಕಂಡರೆ ಅಥವಾ ಮದ್ಯವನ್ನು ಕುಡಿದು ಅಮಲಿನಲ್ಲಿದ್ದವರನ್ನು ಕಂಡರೆ ಇವರು ಅತೀವವಾಗಿ ಹೆದರುತ್ತಾರೆ. ಒಂದು ವೇಳೆ ಅಪ್ಪಿ ತಪ್ಪಿ ಕುಡಿದರೂ ಸ್ನಾಯುಸೆಳೆತ, ಕತ್ತಲು ಕವಿಯುವುದು, ದೇಹದ ಮೇಲೆ ನಿಯಂತ್ರಣವಿಲ್ಲದೇ ಇರುವುದು, ಹೃದಯಸ್ತಂಭನ ಮೊದಲಾದ ತೊಂದರೆಗಳು ಎದುರಾಗುತ್ತವೆ. ಜಗತ್ತಿನಲ್ಲಿನ ಕುಡುಕರಿಗೆ ಈ ಭಯ ಬರಲಿ ಎಂದು ಈಗತಾನೇ ಪ್ರಾರ್ಥಿಸಿದಿರಾ?


English summary

Strange Food Phobias In The World

There are some people who love to eat, there are some who live to eat and of course, there are some who cannot eat. Wondering what we mean? Well, there are a list of strange food phobias that people suffer from in the world which would make youwonder'how'. But, strangely these strange food phobias do exist in almost every take a look at some of these strange food phobias in the world. It will leave you shocked:
X
Desktop Bottom Promotion