For Quick Alerts
ALLOW NOTIFICATIONS  
For Daily Alerts

ನಿಬ್ಬೆರಗಾಗಿಸುವ ದೇಹದಲ್ಲಿ ನಡೆಯುವ ವಿಲಕ್ಷಣ ಸಂಗತಿಗಳು!

|

ನಾವು ಸೇರಿದಂತೆ ನಮ್ಮ ಸುತ್ತ ಮುತ್ತ ಮನುಷ್ಯರ ದೇಹಗಳನ್ನೆ ದಿನಪೂರ್ತಿ ನೋಡುತ್ತಿರುತ್ತೇವೆ (ಇಷ್ಟೆಲ್ಲ ಆದರೂ ನೀವು ಮಾತ್ರ ನೀವಾಗಿಯೇ ಇರುತ್ತೀರಿ). ಬಹುಶಃ ನಿಮಗೆ ಗೊತ್ತಿರುವುದಿಲ್ಲ. ಪ್ರತಿಯೊಬ್ಬರಿಗು ತಮ್ಮ ಕುರಿತು ತಿಳಿದುಕೊಳ್ಳಬೇಕಾದ ವಿಚಾರಗಳು ಅನೇಕವಿರುತ್ತವೆ. ಪ್ರತಿಯೊಬ್ಬರ ದೇಹವು ಸಹ ಒಂದು ಪವಾಡವೇ, ಹಗಲು ರಾತ್ರಿ ಅವು ಕೆಲಸ ಮಾಡುವ ವಿಧಾನವೇ ಒಂದು ಅಚ್ಚರಿಗಳ ಸರಮಾಲೆ. ನಮ್ಮ ದೇಹದಲ್ಲಿರುವ ಕೆಲವು ವಿಲಕ್ಷಣ ಸಂಗತಿಗಳ ಕುರಿತು ನೀವು ಏನಾದರು ತಿಳಿದರೆ ಆಶ್ಚರ್ಯಗೊಳ್ಳುತ್ತೀರಿ.

ನಿಮ್ಮ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಹ ಕೆಲವೊಂದು ವಿಚಾರಗಳನ್ನು ನಾವು ನಿಮಗೆ ಇಂದು ತಿಳಿಸುತ್ತಿದ್ದೇವೆ. ಯಾವುದೇ ಕಾರಣಕ್ಕು ನಿಮ್ಮ ದೇಹವನ್ನು ಹಗುರುವಾಗಿ ಪರಿಗಣಿಸಬೇಡಿ. ಮುಂದೆ ಓದಿ... ಅಚ್ಚರಿಗಳು ನಿಮಗಾಗಿ ನಿಮ್ಮ ದೇಹದಲ್ಲಿಯೇ ಕಾಣುತ್ತವೆ.

ಮನುಷ್ಯನ ಲಾಲಾರಸ

ಮನುಷ್ಯನ ಲಾಲಾರಸ

ಒಬ್ಬ ಸರಾಸರಿ ಮನುಷ್ಯನು ತನ್ನ ಇಡೀ ಜೀವಿತಾವಧಿಯಲ್ಲಿ ಉತ್ಪಾದಿಸುವ ಲಾಲಾರಸ (ಜೊಲ್ಲು) ದಲ್ಲಿ 2 ಈಜುಕೊಳಗಳನ್ನು ಭರ್ತಿ ಮಾಡಬಹುದಂತೆ!

ಕೆಂಪು ರಕ್ತ

ಕೆಂಪು ರಕ್ತ

ಪ್ರತಿ 60 ಸೆಕೆಂಡ್‍ಗೆ ನಮ್ಮ ದೇಹದ ಕೆಂಪು ರಕ್ತ ಕಣಗಳು ನಮ್ಮ ಇಡೀ ದೇಹವನ್ನು ಒಂದು ಸುತ್ತು ಹಾಕಿರುತ್ತವೆ.

ಮಕ್ಕಳ ನೀಲಿ ಕಣ್ಣುಗಳು

ಮಕ್ಕಳ ನೀಲಿ ಕಣ್ಣುಗಳು

ಬಹುತೇಕ ಮಕ್ಕಳು ಹುಟ್ಟುವಾಗ ನೀಲಿ ಕಣ್ಣುಗಳನ್ನು ಹೊಂದಿರುತ್ತಾರೆ. ಆದರೆ ಅಲ್ಟ್ರಾ ವೈಯೊಲೆಟ್ ಕಿರಣಗಳು ಆ ಬಣ್ಣವನ್ನು ಹಾಳು ಮಾಡಿಬಿಡುತ್ತವೆ.

ಪಾಶ್ಚಾತ್ಯ ಜನರು

ಪಾಶ್ಚಾತ್ಯ ಜನರು

ಬಹುತೇಕ ಪಾಶ್ಚಾತ್ಯ ಜನರು ತಮ್ಮ ಜೀವಿತಾವಧಿಯಲ್ಲಿ 50 ಟನ್ ಆಹಾರವನ್ನು ಮತ್ತು 50,000 ಟನ್ ದ್ರವವನ್ನು ಸೇವಿಸುತ್ತಾರೆ.

ಉಗುರು ಬೆಳೆಯಲು

ಉಗುರು ಬೆಳೆಯಲು

ನಿಮ್ಮ ಕೈ ಮತ್ತು ಕಾಲಿನ ಉಗುರುಗಳು ಹೊಸದಾಗಿ (ಬುಡದಿಂದ ತುದಿಯವರೆಗೆ) ಪೂರ್ತಿ ಬೆಳೆಯಲು 1/2 ವರ್ಷ ಹಿಡಿಯುತ್ತದೆ.

ಕಣ್ಣುಗಳನ್ನು ನಿಯಂತ್ರಿಸುವ ಸ್ನಾಯುಗಳು

ಕಣ್ಣುಗಳನ್ನು ನಿಯಂತ್ರಿಸುವ ಸ್ನಾಯುಗಳು

ನಮ್ಮ ಕಣ್ಣುಗಳನ್ನು ನಿಯಂತ್ರಿಸುವ ಸ್ನಾಯುಗಳು ಪ್ರತಿದಿನವು 100,000 ಬಾರಿ ಸಂಪರ್ಕಿಸುತ್ತವೆ. (ಇದು ನಿಮ್ಮ ಕಾಲ್ನಡಿಗೆಯಲ್ಲಿ 50 ಮೈಲಿ ನಡೆಯುವುದಕ್ಕೆ ಸಮ)

ಮೆದುಳಿನ ರಹಸ್ಯ

ಮೆದುಳಿನ ರಹಸ್ಯ

ನೀವು ಸೇವಿಸುವ ಒಟ್ಟು ಆಹಾರದಲ್ಲಿನ ಶೇ. 20% ಆಮ್ಮಜನಕ ಮತ್ತು ಪ್ರೋಟೀನ್ ಅನ್ನು ನಿಮ್ಮ ಮೆದುಳು ಬಳಸಿಕೊಳ್ಳುತ್ತದೆ.

ಮೂತ್ರಪಿಂಡ

ಮೂತ್ರಪಿಂಡ

ನಿಮ್ಮ ದೇಹದಲ್ಲಿರುವ ಪ್ರತಿಯೊಂದು ಮೂತ್ರಪಿಂಡವು 1 ಮಿಲಿಯನ್ ಫಿಲ್ಟರ್‌ಗಳನ್ನು ಹೊಂದಿದೆ. ಇದು ಪ್ರತಿ ನಿಮಿಷಕ್ಕೆ 1.3 ಲೀಟರ್ ರಕ್ತವನ್ನು ಶುದ್ಧಗೊಳಿಸುತ್ತದೆ ಮತ್ತು ಪ್ರತಿ ದಿನ ಅಂದಾಜು 1.5 ಲೀಟರ್ ಮೂತ್ರವನ್ನು ವಿಸರ್ಜಿಸುತ್ತದೆ.

ಅಂಡಾಶಯಗಳು

ಅಂಡಾಶಯಗಳು

ಅಂಡಾಶಯಗಳು ಸುಮಾರು 5,00,000 ಅಂಡಾಣುಗಳನ್ನು ಹೊಂದಿರುತ್ತದೆ. ಆದರೆ ಅವುಗಳಲ್ಲಿ ಕೇವಲ 400 ಕ್ಕೆ ಮಾತ್ರ ಜೀವವನ್ನು ಸೃಷ್ಟಿಸುವ ಶಕ್ತಿಯಿರುತ್ತದೆ.

ಜಠರದ ರಹಸ್ಯ

ಜಠರದ ರಹಸ್ಯ

ನಿಮ್ಮ ಜಠರವು ಏಕೆ ತನ್ನಷ್ಟಕ್ಕೆ ತಾನು ಜೀರ್ಣಗೊಳ್ಳುವುದಿಲ್ಲ? ಏಕೆಂದರೆ ಜಠರದಲ್ಲಿರುವ ಕೋಶಗಳು ತಾವು ನಾಶವಾಗುವುದಕ್ಕಿಂತ ಬೇಗ ರಚನೆಗೊಳ್ಳುತ್ತವೆ.

ದೇಹದಲ್ಲಿರುವ ಬೆವರು

ದೇಹದಲ್ಲಿರುವ ಬೆವರು

ನಿಮ್ಮ ದೇಹದಲ್ಲಿ ಅರ್ಧ ಮಿಲಿಯನ್ ಬೆವರು ಗ್ರಂಥಿಗಳಿವೆ. ಇವುಗಳೆಲ್ಲವು ಪ್ರತಿದಿನ ಒಂದು ಪಿಂಟ್‌ನಷ್ಟು ಬೆವರನ್ನು ಉತ್ಪಾದಿಸುತ್ತವೆ.

ತ್ವಚೆಗೆ ಕಸಿ ಮಾಡಲು

ತ್ವಚೆಗೆ ಕಸಿ ಮಾಡಲು

ಸುಟ್ಟ ಗಾಯಗಳಿಂದ ಬಳಲುವವರ ತ್ವಚೆಗೆ ಕಸಿ ಮಾಡಲು ಎಳೆ ಮಕ್ಕಳ ಚರ್ಮವನ್ನು ಬಳಸಲಾಗುತ್ತದೆ.

ದೇಹದ ಮೂಳೆಗಳು

ದೇಹದ ಮೂಳೆಗಳು

ನಮ್ಮ ಮೂಳೆಗಳು ಕಾಂಕ್ರೀಟ್‌ಗಿಂತ ನಾಲ್ಕು ಪಟ್ಟು ಬಲಶಾಲಿಯಾಗಿರುತ್ತವೆ.

ದೇಹದ ಅತೀ ದೊಡ್ಡ ಅಂಗ

ದೇಹದ ಅತೀ ದೊಡ್ಡ ಅಂಗ

ನಮ್ಮ ಇಡೀ ದೇಹದಲ್ಲಿ ಅತಿ ದೊಡ್ಡದಾದ ಅಂಗವೆಂದರೆ ಅದು ನಿಮ್ಮ ತ್ವಚೆ. ಒಬ್ಬ ವಯಸ್ಕ ವ್ಯಕ್ತಿಯ ತ್ವಚೆಯನ್ನು ಹರಡಿದರೆ, ಅದು 20 ಚದರ ಅಡಿಯಷ್ಟು ವ್ಯಾಪ್ತಿಯಲ್ಲಿ ಹರಡಿಕೊಳ್ಳುತ್ತದೆ.

ದೇಹವು ಉತ್ಪಾದಿಸುವ ಉಷ್ಣಾಂಶ

ದೇಹವು ಉತ್ಪಾದಿಸುವ ಉಷ್ಣಾಂಶ

ಕೇವಲ 30 ನಿಮಿಷದಲ್ಲಿ ನಿಮ್ಮ ದೇಹವು ಉತ್ಪಾದಿಸುವ ಉಷ್ಣಾಂಶದಲ್ಲಿ, ಅರ್ಧ ಗ್ಯಾಲನ್‌ನಷ್ಟು ನೀರನ್ನು ಕಾಯಿಸಬಹುದು.

ನಾವು ಕಾಣುವು ಕನಸು

ನಾವು ಕಾಣುವು ಕನಸು

ನಿಯಮಿತವಾಗಿ ಕಾಣಿಸಿಕೊಳ್ಳುವ ಕನಸುಗಳು ಅಧಿಕ ಪ್ರಮಾಣದ ಬುದ್ಧಿಶಕ್ತಿಯೊಂದಿಗೆ ಸಹಸಂಬಂಧ ಹೊಂದಿರುತ್ತದೆ.

ನಿಮ್ಮ ಎತ್ತರ

ನಿಮ್ಮ ಎತ್ತರ

ನೀವು ಬೆಳಗ್ಗೆ ಎದ್ದಾಗ ಎಷ್ಟು ಎತ್ತರವಿರುತ್ತೀರೋ, ಅದಕ್ಕಿಂತ ಒಂದು ಸೆಂ.ಮೀ ಕಡಿಮೆ ಎತ್ತರ ಮಲುಗುವಾಗ ಇರುತ್ತೀರಿ. ಹಗಲಿನ ಸಮಯದಲ್ಲಿ ನಿಮ್ಮ ಬೆನ್ನು ಮೂಳೆಯಲ್ಲಿರುವ ಕಾರ್ಟಿಲೆಜ್ ನಿಧಾನವಾಗಿ ಸಂಕುಚನಗೊಳ್ಳುತ್ತದೆ.

English summary

Even though you're around human bodies all day (after all, you have one of your very own), you probably don't know everything there is to know about them. Each of our bodies are a miracle; it's amazing they work the way they do, day in and day out. have a look
X
Desktop Bottom Promotion