For Quick Alerts
ALLOW NOTIFICATIONS  
For Daily Alerts

ಪ್ರಜಾಪ್ರಭುತ್ವದ ಮಹಾಹಬ್ಬ 'ಗಣರಾಜ್ಯೋತ್ಸವ' ಬಗ್ಗೆ ಇರುವ ಸತ್ಯಾಸತ್ಯತೆ

By Staff
|

75ನೇ ಗಣರಾಜ್ಯೋತ್ಸವದ ದಿನಾಚರಣೆಯ ಶುಭಾಶಯಗಳು.... ಪ್ರತಿವರ್ಷದಂತೆ ಈ ಬಾರಿಯೂ ಜನವರಿ ಇಪ್ಪತ್ತಾರು ಬಂದಿದೆ. ಅಮೆರಿಕಾದ ಅಧ್ಯಕ್ಷರಾದ ಒಬಾಮಾ ಬರುತ್ತಿದ್ದಾರೆ, ಅವರ ರಕ್ಷಣೆಗೆ ಪ್ರತಿದಿನಕ್ಕೆ ಒಂಭೈನೂರು ಕೋಟಿ ರೂ ಖರ್ಚಾಗುತ್ತದಂತೆ, ಒಟ್ಟು 2700 ಕೋಟಿ ಖರ್ಚಾಗುತ್ತದಂತೆ ಎಂದೆಲ್ಲಾ ಇಂದು ನಾವೆಲ್ಲಾ ಮಾತನಾಡಿಕೊಳ್ಳುತ್ತಿದ್ದೇವೆ ಹಾಗೂ ಆ ಬಗ್ಗೆಯೇ ಮಾಧ್ಯಮಗಳೂ ಚರ್ಚೆ ಮಾಡುತ್ತಿವೆ. ಹೆಚ್ಚಿನವರಿಗೆ ಜನವರಿ ಇಪ್ಪತ್ತಾರು ಎಂದರೆ ಒಂದು ಸರ್ಕಾರಿ ರಜಾದಿನ, ಅದರಲ್ಲೂ ಈ ವರ್ಷ ಶುಕ್ರವಾರ ಬಂದಿದೆ.

ನಮ್ಮಲ್ಲಿ ಬಹುತೇಕ ಜನರು ಈ ದಿನಗಳನ್ನು ವಿಶ್ರಾಂತಿಯಲ್ಲಿಯೇ ಕಳೆಯುತ್ತಾರೆ. ಸ್ವಲ್ಪ ದೇಶದ ಬಗ್ಗೆ ಚಿಂತೆ ಇರುವವರು ಮಾತ್ರ ಅವರವರ ಊರಿನ ಗಣತಂತ್ರ ದಿನಾಚರಣೆಯಲ್ಲಿ ಭಾಗವಹಿಸುತ್ತಾರೆ. ಮತ್ತೆಲ್ಲರೂ ಟೀವಿಯಲ್ಲಿ ಬರುವ ಗಣತಂತ್ರ ಪೆರೇಡ್ ನೋಡಿ ಧನ್ಯರಾಗುತ್ತೇವೆ.

ಆದರೆ ಗಣತಂತ್ರ ದಿವಸವೇಕೆ ನಮಗೆ ಇಷ್ಟು ಮಹತ್ವದ್ದಾಗಿದೆ ಎಂಬ ಪ್ರಶ್ನೆ ಕೇಳಿದರೆ ಪ್ರಾಥಮಿಕ ಶಾಲೆಯಲ್ಲಿ ಪರೀಕ್ಷೆಗಾಗಿ ಬಾಯಿಪಾಠ ಮಾಡಿದ್ದ ಆ ವಾಕ್ಯಗಳೆಲ್ಲಾ ಮರೆತು ಹೋಗಿರುತ್ತವೆ. ಕೆಲವರಿಗೆ ಮಾತ್ರ ಈ ದಿನವೇ ನಮ್ಮ ರಾಜ್ಯಾಂಗ ವ್ಯವಸ್ಥೆ ಜಾರಿಗೆ ಬಂದ ದಿನ ಎಂದು ನೆನಪಿರಬಹುದು. ಈ ಬಗ್ಗೆ ಕೆಲವು ಮಾಹಿತಿಗಳನ್ನು ತಿಳಿದುಕೊಳ್ಳೋಣ.

Republic Day Facts You Should Know

ಭಾರತಕ್ಕೆ ಸ್ವಾತಂತ್ಯ ಲಭಿಸಿದ ಬಳಿಕ ಪೂರ್ಣ ಪ್ರಮಾಣದ ಪ್ರಜಾಪ್ರಭುತ್ವ ಜಾರಿಗೆ ಬಂದ ಬಳಿಕವೂ ಭಾರತದ ಆಡಳಿತ ವ್ಯವಸ್ಥೆ ಒಂದು ನೀತಿಗೆ ಒಳಪಟ್ಟಿರಲಿಲ್ಲ. ಅಂದಿನ ಅತಿದೊಡ್ಡ ರಾಜಕೀಯ ಶಕ್ತಿಯಾಗಿದ್ದ ಕಾಂಗ್ರೆಸ್ ಮತ್ತು ನಾಯಕರಾದ ಮಹಾತ್ಮಾ ಗಾಂಧಿ, ನೆಹರೂ, ಸುಭಾಶ್ ಚಂದ್ರ ಬೋಸ್, ರಾಜಾಜಿ, ಪಟೇಲ್ ಮೊದಲಾದವರ ಮುಂದಾಳತ್ವದಲ್ಲಿ ಲಾಹೋರಿನ ರಾವಿ ನದಿಯ ತೀರದಲ್ಲಿ ಜನವರಿ ಇಪ್ಪತ್ತಾರರಂದೇ

ಸುಮಾರು ಇಪ್ಪತ್ತು ವರ್ಷಗಳ ಹಿಂದೆಯೇ ಸ್ವರಾಜ್ಯ ನಮ್ಮ ಜನ್ಮಸಿದ್ಧ ಹಕ್ಕು ಎಂದು ಪ್ರತಿಪಾದಿಸಲಾಗಿತ್ತು. ಆ ದಿನವೇ ಮಹಾತ್ಮಾ ಗಾಂಧೀಜಿಯವರು ತಮ್ಮ ದಂಡಿ ಯಾತ್ರೆಯನ್ನೂ ಆರಂಭಿಸಿದ್ದರು. ಹಾಗಾಗಿ ೧೯೫೦ರ ಜನವರಿ ಇಪ್ಪತ್ತಾರಕ್ಕೂ ಮೊದಲೇ ಸಂವಿಧಾನ ಸಿದ್ಧವಾಗಿದ್ದರೂ ಸುಮಾರು ಎರಡು ತಿಂಗಳ ನಂತರ ಜನವರಿ ಇಪ್ಪತ್ತಾರಂದೇ ಮಂಡಿಸಲಾಯಿತು.

ನಿಜವಾಗಿ ಹೇಳಬೇಕೆಂದರೆ ಭಾರತದ ಮೊದಲ ಸ್ವಾತಂತ್ರ್ಯದ ದಿನ ಜನವರಿ ಇಪ್ಪತ್ತಾರೇ ಆಗಿದೆ. ಸಂವಿಧಾನವು ದೇಶದ ಜನರನ್ನು ಆಳುವ ಸರಕಾರದ ಮೂಲ ರಚನೆಯನ್ನು ನಿರ್ದಿಷ್ಟಪಡಿಸುತ್ತದೆ. ಅದು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳನ್ನು ಸರಕಾರದ ಮೂರು ಮುಖ್ಯ ಅಂಗಗಳಾಗಿ ಏರ್ಪಡಿಸುತ್ತದೆ. ಸಂವಿಧಾನವು ಪ್ರತಿ ಅಂಗದ ಅಧಿಕಾರದ ವ್ಯಾಖ್ಯೆಯನ್ನು ನೀಡುವುದಲ್ಲದೆ ಅವುಗಳ ಜವಾಬ್ದಾರಿಯನ್ನೂ ಖಚಿತಗೊಳಿಸುತ್ತದೆ. ವಿಭಿನ್ನ ಅಂಗಗಳ ನಡುವಿನ ಸಂಬಂಧವನ್ನೂ ಜನತೆ ಹಾಗೂ ಸರಕಾರದ ನಡುವಿನ ಸಂಬಂಧವನ್ನೂ ನಿಯಂತ್ರಿಸುತ್ತದೆ.

ವಿಶ್ವದಲ್ಲಿಯೇ ಅತ್ಯಂತ ದೊಡ್ಡದಾದ ಸಂವಿಧಾನವಾದ ಭಾರತದ ಸಂವಿಧಾನ ಡಾ. ಬಿ.ಆರ್. ಅಂಬೇಡ್ಕರ್ ರವರ ನೇತೃತ್ವದ ತಂಡ ರಚಿಸಿತ್ತು. ತಂಡದಲ್ಲಿ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಗೋಪಾಲಸ್ವಾಮಿ ಅಯ್ಯಂಗಾರ್, ಟಿ.ಟಿ.ಕೃಷ್ಣಮಚಾರಿ, ಡಿ.ಪಿ.ಖೇತಾನ್, ಸರ್ ಬೆನೆಗಲ್, ಕನ್ಹಯ್ಯಲಾಲ್ ಮುನ್ಷಿ ಮತ್ತು ಮೊಹಮ್ಮದ್ ಸಾಅದುಲ್ಲಾ ರಿದ್ದರು. ೪೪೪ ವಿಧಿಗಳನ್ನು ೨೨ ಭಾಗಗಳಲ್ಲಿಯೂ, ೧೦ (ನಂತರ ೧೨) ಅನುಚ್ಛೇದಗಳನ್ನೂ,, ೧೧೮ ತಿದ್ದುಪಡಿಗಳನ್ನೂ ಹೊಂದಿರುವ ಈ ಸಂವಿಧಾನದ ಆಂಗ್ಲ ಭಾಷೆಯ ಆವೃತ್ತಿಯು ೧,೧೭,೩೬೯ ಶಬ್ದಗಳನ್ನು ಹೊಂದಿದೆ.

ಸಂವಿಧಾನದ ಮೂಲ ಪ್ರತಿ 479 ಪುಟಗಳ, ಕೈಬರಹದಲ್ಲಿ ಬರೆದಿರುವ ಬೃಹತ್ ಗ್ರಂಥವಾಗಿದ್ದು ಅಂದಿನ ಎಲ್ಲಾ ನಾಯಕರು ಈ ಸಂವಿಧಾನದ ಬಗ್ಗೆ ತಮ್ಮ ಒಪ್ಪಿಗೆಯನ್ನು ಸೂಚಿಸಿ ಹಸ್ತಾಕ್ಷರ ನಮೂದಿಸಿದ್ದರು. ಈ ಗ್ರಂಥವನ್ನು ಇಂದಿಗೂ ಸುಸ್ಥಿತಿಯಲ್ಲಿ ಕಾಪಾಡಲಾಗಿದ್ದು ನಮ್ಮ ಪಾರ್ಲಿಮೆಂಟ್ ಭವನದಲ್ಲಿ ಹೀಲಿಯಂ ಅನಿಲ ತುಂಬಿದ ಗಾಜಿನ ಕವಚವಿರುವ ಸುಭದ್ರ ಕೋಣೆಯಲ್ಲಿ ಸಂರಕ್ಷಿಸಿಡಲಾಗಿದೆ.

ಗಣತಂತ್ರ ದಿನಾಚರಣೆಯಲ್ಲಿ ಪ್ರಧಾನ ಮಂತ್ರಿಗಳು ಕಾರ್ಯಕ್ರಮದ ಪ್ರಮುಖ ವ್ಯಕ್ತಿಯಾಗಿದ್ದರೂ ಭಾರತದ ಅಧ್ಯಕ್ಷರೇ ದಿನಾಚರಣೆಯ ಅಧ್ಯಕ್ಷರೂ ಆಗಿರುತ್ತಾರೆ. ಅತಿಗಣ್ಯ ವ್ಯಕ್ತಿಗಳಿರುವ ವೇದಿಕೆಯ ಮುಂದಿನ ರಸ್ತೆಯಲ್ಲಿ ಮೊದಲಿಗೆ ಭಾರತದ ರಕ್ಷಣಾ ವ್ಯವಸ್ಥೆಗಳಾದ ಭೂಸೇನೆ, ನೌಕಾಸೇನೆ ಮತ್ತು ವಾಯುಸೇನೆಯ ಪಡೆಗಳಿಂದ ರಾಷ್ಟ್ರವಂದನೆಯನ್ನು ಸಲ್ಲಿಸಲಾಗುತ್ತದೆ. ಭಾರತದ ರಕ್ಷಣಾ ವ್ಯವಸ್ಥೆಯ 'Commander in Chief of Indian Armed forces' ಪದವನ್ನು ಹೊಂದಿರುವ ಭಾರತದ ಅಧ್ಯಕ್ಷರೇ ದೆಹಲಿಯಲ್ಲಿ ಈ ರಾಷ್ಟ್ರವಂದನೆಯನ್ನು ಸ್ವೀಕರಿಸುತ್ತಾರೆ.

ಪ್ರತಿ ರಾಜ್ಯಗಳಲ್ಲಿ ಆಯಾ ರಾಜ್ಯದ ರಕ್ಷಣಾ ಪಡೆಗಳ ರಾಷ್ಟ್ರವಂದನೆಯನ್ನು ಆಯಾ ರಾಜ್ಯಗಳ ರಾಜ್ಯಪಾಲರು ಸ್ವೀಕರಿಸುತ್ತಾರೆ. ದೆಹಲಿಯಲ್ಲಿ ಅತಿಗಣ್ಯರ ವೇದಿಕೆಯಲ್ಲಿ ರಾಷ್ಟ್ರನಾಯಕರೊಂದಿಗೆ ಆ ವರ್ಷ ಆಹ್ವಾನಿಸಲ್ಪಟ್ಟ ಯಾವುದಾದರೂ ವಿದೇಶಿ ಗಣ್ಯರು ಅತಿಥಿಗಳಾಗಿ ಉಪಸ್ಥಿತರಿರುತ್ತಾರೆ. 2013 ರಲ್ಲಿ ಭೂತಾನಿನ ರಾಜ ಅತಿಥಿಗಳಾಗಿ ಆಗಮಿಸಿದ್ದರು. 2014 ರಲ್ಲಿ ಜಪಾನ್ ದೇಶದ ಪ್ರಧಾನ ಮಂತ್ರಿಗಳದ ಶಿನ್ಜೋ ಅಬೇ ಯವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಗಣತಂತ್ರ ದಿನಾಚರಣೆಯ ಉದ್ಘಾಟನೆಯನ್ನು ಪ್ರಧಾನಮಂತ್ರಿಗಳು ನೆರವೇರಿಸುವರು. ನವದೆಹಲಿಯಲ್ಲಿರುವ ಇಂಡಿಯಾ ಗೇಟ್ ಸ್ಮಾರಕ (ಹುತಾತ್ಮರ ನೆನಪಿನ ಸ್ಮಾರಕ) ದಲ್ಲಿ ಅಮರ್ ಜವಾನ್ ಜ್ಯೋತಿಯನ್ನು ಸಕಲ ಮಿಲಿಟರಿ ಮರ್ಯಾದೆಗಳೊಂದಿಗೆ ಬೆಳಗಿಸಲಾಗುತ್ತದೆ. ಪ್ರಧಾನ ಮಂತ್ರಿಗಳಿಂದ ಈ ದಿನದ ಮಹತ್ವದ ಬಗ್ಗೆ ಕಿರುಭಾಷಣದ ಬಳಿಕ ಇತರ ಕಾರ್ಯಕ್ರಮಗಳಿಗೆ ಚಾಲನೆ ದೊರಕುತ್ತದೆ. ಪ್ರಥಮ ದಿನಕ್ಕೆ ಪ್ರಧಾನಮಂತ್ರಿಗಳ ಕರ್ತವ್ಯ ಇಲ್ಲಿಗೆ ಮುಗಿಯುತ್ತದೆ.

ಗಣರಾಜ್ಯೋತ್ಸವದ ಪ್ರಮುಖ ಅಂಗವಾದ ಪಥಸಂಚಲನ (ಪೆರೇಡ್) ರಾಜ್ ಪಥ್ ನಲ್ಲಿ ನಡೆಯುತ್ತದೆ. ಈ ರಸ್ತೆಯ ಇಕ್ಕೆಲಗಳಲ್ಲಿಯೇ ದೇಶದ ಪ್ರಮುಖ ಸರ್ಕಾರಿ ಮತ್ತು ಐತಿಹಾಸಿಕ ಕಟ್ಟಡಗಳಿವೆ. ರಾಷ್ಟ್ರಪತಿ ಭವನ್ ಮತ್ತು ಇಂಡಿಯಾ ಗೇಟ್ ನಡುವೆ ಈ ಪಥಸಂಚಲನ ಮುಂದುವರೆಯುತ್ತದೆ.

ಗಣತಂತ್ರ ದಿನಾಚರಣೆ ಜನವರಿ ಇಪ್ಪತ್ತಾರಕ್ಕೆ ಪ್ರಾರಂಭವಾದರೂ ಮುಂದಿನ ಮೂರು ದಿನಗಳ ಕಾಲ ನಡೆಯುತ್ತದೆ. ಜನವರಿ ಇಪ್ಪತ್ತೊಂಭತ್ತಕ್ಕೆ ಕ್ರೈಸ್ತ ಗಾನವಾದ 'ಅಬೈಡ್ ವಿಥ್ ಮಿ' ಎಂಬ ಹಾಡಿನೊಂದಿಗೆ ಮುಕ್ತಾಯಗೊಳ್ಳುತ್ತದೆ. ಈ ಸಂಪ್ರದಾಯ ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯ ಕಾಲದಿಂದಲೂ ನಡೆದುಕೊಂಡು ಬಂದಿದ್ದು ಇಂದಿನ ದಿನಕ್ಕೆ ಕಾಲಾಭಾಸದಂತೆ ಕಾಣಿಸುತ್ತದೆ.

ಇನ್ನೊಂದು ಮಹತ್ವದ ಸಂಗತಿಯೆಂದರೆ ಸ್ವಾತಂತ್ಯ ಸಿಕ್ಕ ಬಳಿಕವೂ ನಮ್ಮ ಸರ್ಕಾರ ಅಂದು ಅಸ್ತಿತ್ವದಲ್ಲಿದ್ದ ಬ್ರಿಟಿಷರ Government of India Act 1935 ಎಂಬ ಸಂವಿಧಾನವನ್ನೇ ಅನುಸರಿಸುತ್ತಿತ್ತು. ೧೯೫೦ರ ಗಣತಂತ್ರ ದಿನದ ಬಳಿಕವೇ ನಮ್ಮದೇ ಸಂವಿಧಾನ ಆಚರಣೆಗೆ ಬಂದ ಕಾರಣ ನಮಗೆ ಸ್ವಾತಂತ್ರ್ಯ ದಿನಕ್ಕಿಂತಲೂ ಗಣತಂತ್ರ ದಿನವೇ ಹೆಚ್ಚು ಮಹತ್ವದ್ದಾಗಿದೆ.

ಇನ್ನೊಂದು ಪ್ರಮುಖ ಮಾಹಿತಿಯೆಂದರೆ ಭಾರತ ಸರ್ಕಾರ ನೀಡುವ ಪ್ರಮುಖ ಪ್ರಶಸ್ತಿಗಳಾದ ಭಾರತ ರತ್ನ, ಪದ್ಮ ಭೂಷಣ ಮೊದಲಾದವುಗಳು ಯಾರಿಗೆ ಲಭಿಸಿವೆ ಎಂದು ಈ ಮೊದಲೇ ಘೋಷಿಸಲಾಗಿದ್ದರೂ ಗಣತಂತ್ರ ದಿನಾಚರಣೆಯಂದೇ ಈ ಪ್ರಶಸ್ತಿಗಳನ್ನು ಆ ವ್ಯಕ್ತಿಗಳಿಗೆ ಪ್ರದಾನಿಸಲಾಗುತ್ತದೆ.

English summary

Republic Day Facts You Should Know

Watching the Republic day celebration on TV is a ritual for most people on 26th January which is a national holiday. However, not many people know much about why it is celebrated or the significance of the day. Republic is not 'just' another holiday and there lies a lot of significance behind the celebrations.
X
Desktop Bottom Promotion