For Quick Alerts
ALLOW NOTIFICATIONS  
For Daily Alerts

ಅಚ್ಚರಿ, ಆದರೂ ಸತ್ಯ-ಈ ಆಹಾರಗಳು ವಿಷದಷ್ಟೇ ಅಪಾಯಕಾರಿ!

By Super
|

ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆಯೇ ಇದೆ. ಅಂತೆಯೇ ಸೂಕ್ತಪ್ರಮಾಣದಲ್ಲಿ ತಾಜಾ ಮತ್ತು ಪೌಷ್ಠಿಕ ಆಹಾರವನ್ನು ಸೇವಿಸುವ ಮೂಲಕ ಉತ್ತಮ ಆರೋಗ್ಯವನ್ನು ಪಡೆಯಬಹುದು. ನಾವು, ಮನುಷ್ಯರು, ಮಿಶ್ರಾಹಾರಿಗಳು. ಅಂದರೆ ಅತ್ತ ಹಸಿ ಹುಲ್ಲನ್ನೂ ತಿನ್ನಲಾರೆವು, ಇತ್ತ ಪಕ್ಕಾ ಮಾಂಸಾಹಾರಿಗಳಂತೆ ಹಸಿಮಾಂಸವನ್ನೂ ಸೇವಿಸಲಾರೆವು. ಅದಕ್ಕೇ ನಮಗೆ ಆಹಾರ ಬೇಯಿಸಿರಬೇಕು.

ಇದು ವೈವಿಧ್ಯಕ್ಕೆ ದಾರಿ ತೆರೆಯಿತು. ಸಾವಿರಾರು ತರಹದ ರುಚಿಗಳನ್ನು ಕಂಡುಹಿಡಿಯಲಾಯಿತು. ನಮ್ಮ ಹಿರಿಯರು ನೈಸರ್ಗಿಕ ಮತ್ತು ಅಂದು ಲಭ್ಯವಿದ್ದ ಸವಲತ್ತುಗಳ ಮೂಲಕ ತಯಾರಿಸಬಹುದಾದ ಅಡುಗೆಗಳನ್ನು ತಯಾರಿಸಿ ಅದರಲ್ಲಿ ಲೋಪಗಳಿರುವುದನ್ನು ನಿವಾರಿಸಿ ಉತ್ತಮವೆಂದು ಕಂಡುಬಂದದ್ದನ್ನು ಮುಂದಿನ ಪೀಳಿಗೆಗೆ ದಾಟಿಸುತ್ತಾ ಬಂದಿದ್ದಾರೆ. ಏನಾಶ್ಚರ್ಯ, ಈ ಜಗತ್ತಿನಲ್ಲಿ ಆಹಾರಕ್ಕೂ ಹೆದರುವವರಿದ್ದಾರೆ!

ಆದ್ದರಿಂದಲೇ ನಮಗೆ ಹಿರಿಯರಿಂದ ಲಭ್ಯವಾಗಿರುವ ಆಹಾರಕ್ರಮಗಳು ಆರೋಗ್ಯಕರವಾಗಿವೆ. ಆದರೆ ಇಂದು ಕಾಲ ಬದಲಾಗಿದೆ. ಹಿಂದೆ ಬೆಂಕಿ ಒಂದೇ ಆಹಾರವನ್ನು ಬೇಯಿಸಲು ಬಳಸಲ್ಪಟ್ಟ ಶಕ್ತಿಮೂಲವಾಗಿತ್ತು. ಇಂದು ಮೈಕ್ರೋವೇವ್‌ನಿಂದ ಹಿಡಿದು ಹತ್ತು ಹಲವು ಬಗೆಯ ಸವಲತ್ತುಗಳು ಲಭ್ಯವಿವೆ. ಅಂತೆಯೇ ಇದನ್ನು ಅವಲಂಬಿಸಿ ಹೊಸರುಚಿಗಳೂ ಸಾವಿರಾರು ಬಿಡಿ, ಲಕ್ಷಾಂತರ ಪಟ್ಟು ಹೆಚ್ಚಿವೆ.

ಆದರೆ ಈ ಆಹಾರಗಳನ್ನು ಒರೆಹಚ್ಚಿ ಆರೋಗ್ಯಕರವೋ ಅಲ್ಲವೋ ಎಂದು ಯಾರಾದರೂ ಪರಾಮರ್ಶಿಸಿ ಕೆಟ್ಟದ್ದೆಂದು ತಿಳಿದುಬಂದು ಬಳಿಕ ಬೇಡವೆಂದು ಹೇಳಿದರೆ ಮಾತ್ರ ಅದರ ಬಳಕೆ ನಿಲ್ಲಬಹುದು. ಅಲ್ಲಿಯವರೆಗೆ ಆ ಬಗ್ಗೆ ಅರಿವಿರದವರು ಇದನ್ನು ಸೇವಿಸುತ್ತಲೇ ಹೋಗಿ ಹೊಟ್ಟೆ ಕೆಡಿಸಿಕೊಳ್ಳುವುದು, ಕೆಲವೊಮ್ಮೆ ಗಂಭೀರವಾದ ಅನಾರೋಗ್ಯಕ್ಕೂ ತುತ್ತಾಗುತ್ತಾರೆ. ವೈದ್ಯಕೀಯ ಸಂಶೋಧನೆಗಳ ವಿಚಿತ್ರ ಸತ್ಯ

ನಮಗರಿವಿಲ್ಲದೇ ಸೇವಿಸುತ್ತಾ ಬಂದಿರುವ ಕೆಲವು ಆಹಾರಗಳು ವಾಸ್ತವವಾಗಿ ಆರೋಗ್ಯಕ್ಕೆ ಹಾನಿಕರವಾಗಿದ್ದು ಇದುವರೆಗೆ ಯಾರೂ ನಮಗೆ ಈ ಬಗ್ಗೆ ಎಚ್ಚರಿಕೆ ನೀಡದೇ ಇರುವ ಕಾರಣ ಅರಿವಿಲ್ಲದೆಯೇ ಅಪಾಯವನ್ನು ನಿಧಾನವಾಗಿ ಎದುರುಹಾಕಿಕೊಳ್ಳುತ್ತಿದ್ದೇವೆ. ಇದಕ್ಕೆ ಸಸ್ಯಾಹಾರ, ಮಾಂಸಾಹಾರವೆಂಬ ಬೇಧವಿಲ್ಲ. ಬೋಲ್ಡ್ ಸ್ಕೈ ತಂಡ ಇಂದು ಇಂತಹ ಆಹಾರಗಳ ಬಗ್ಗೆ ಮಾಹಿತಿ ನೀಡಿ ಈ ಆಹಾರಗಳನ್ನು ಸೇವಿಸುವ ಮುನ್ನ ಎಚ್ಚರಿಕೆ ವಹಿಸಲು ಸೂಚನೆ ನೀಡುತ್ತಿದೆ. ಮನುಷ್ಯ ತಿನ್ನುವ ತುಂಬಾ ವಿಲಕ್ಷಣವಾದ ಆಹಾರಗಳಿವು!

ಹಸಿ ಗೋಡಂಬಿ

ಹಸಿ ಗೋಡಂಬಿ

ಒಂದು ಸಂಶೋಧನೆಯ ಪ್ರಕಾರ ಹಸಿ ಗೋಡಂಬಿ (ಅಂದರೆ ಗೇರುಬೀಜದಿಂದ ನೇರವಾಗಿ ಹೊರತೆಗೆದು ಹಸಿಯಿದ್ದಂತೆಯೇ ತಿನ್ನುವುದು, ಇದು ನಮ್ಮ ಕರಾವಳಿಯ ಪ್ರದೇಶದಲ್ಲಿ ಹೆಚ್ಚು ಜನಪ್ರಿಯ) ಅತಿ ಅಪಾಯಕರ ಆಹಾರವಾಗಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಹಸಿ ಗೋಡಂಬಿ

ಹಸಿ ಗೋಡಂಬಿ

ಇದು ಹಲವು ರೀತಿಯ ಅಲರ್ಜಿಗಳನ್ನು ಹುಟ್ಟುಹಾಕಿ ಇತರ ಆಹಾರಗಳನ್ನು ಸೇವಿಸಿದಾಗ ಚರ್ಮದಲ್ಲಿ ತುರಿಕೆ, ಗುಳ್ಳೆಗಳು ಏಳುವುದು ಮೊದಲಾದ ತೊಂದರೆಗಳನ್ನು ಹುಟ್ಟಿಸುತ್ತದೆ. ವಾಸ್ತವವಾಗಿ ಹಸಿ ಗೋಡಂಬಿಯೇ ನಿಜವಾದ ಕಳ್ಳನಾಗಿದೆ.

ಕಾಡಿನ ಅಣಬೆ

ಕಾಡಿನ ಅಣಬೆ

ಅಣಬೆಗಳಲ್ಲಿ ಹಲವು ವಿಧಗಳಿವೆ. ಆದರೆ ನೋಡಲು ಸುಂದರವಾಗಿರುವ ಎಲ್ಲವೂ ತಿನ್ನಲು ಯೋಗ್ಯವಲ್ಲ. ಅದರಲ್ಲೂ ಕಾಡಿನಿಂದ ತಂದಿರುವ ಅಣಬೆಗಳು ವಿಷವನ್ನುಣಿಸಬಹುದು. ಪರಿಣಾಮವಗಿ ಹೊಟ್ಟೆ ತೊಳೆಸುವಿಕೆ, ವಾಂತಿ, ಬೇಧಿ ಮೊದಲಾದ ತೊಂದರೆಗಳು ಉಂಟಾಗಬಹುದು. ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಸಾವೂ ಎದುರಾಗಬಹುದು.

ಕಾಡಿನ ಅಣಬೆ

ಕಾಡಿನ ಅಣಬೆ

ಆದ್ದರಿಂದ ಸರಿಯಾದ ಮಾಹಿತಿಯಿಲ್ಲದೇ ಕಾಡಿನಿಂದ ತಂದ ಯಾವುದೇ ಅಣಬೆಯನ್ನು ಸೇವಿಸದಿರಿ. ಆದರೆ ಹುತ್ತದೊಳಗೆ (ಇರುವೆಗಳು ಕಟ್ಟಿರುವ ದೊಡ್ಡ ಹುತ್ತದೊಳಗೆ ಮೊದಲ ಮಳೆಯಾದ ಬಳಿಕ ಬೆಳ್ಳಂಬೆಳ್ಳಗಿನ ಅಣಬೆಗಳು ಹುಟ್ಟುತ್ತವೆ) ಬೆಳೆಯುವ ಬಿಳಿ ಅಣಬೆ ಮಾತ್ರ ಆರೋಗ್ಯಕರ ಹಾಗೂ ಅತ್ಯಂತ ಸ್ವಾದಿಷ್ಟವಾಗಿವೆ.

ಪಫರ್ ಮೀನು

ಪಫರ್ ಮೀನು

ಜಪಾನ್ ದೇಶದಲ್ಲಿ ಈ ಮೀನಿನ್ನು ತಿನ್ನುವ ಮುನ್ನ ಹೋಟೆಲಿನವರಿಗೆ ಕರಾರು ಬರೆದು ಸಹಿ ಹಾಕಿಕೊಡಬೇಕು. ಏನೆಂದರೆ ಈ ಮೀನು ತಿಂದು ನಾನು ಸತ್ತರೆ ಈ ಹೋಟೆಲಿನವರು ಜವಾಬ್ದಾರರಲ್ಲ ಎಂದು. ಅಪಾಯ ಕಂಡೊಡನೆ ನೀರನ್ನು ಒಳಗೆಳೆದುಕೊಂಡು ಪುಗ್ಗದಂತೆ ಊದಿಕೊಂಡು ಮೈಮೇಲಿನ ಹುರುಪೆಗಳನ್ನು ಮುಳ್ಳುಗಳಂತೆ ಸೆಟೆಸಿ ವೈರಿಯಿಂದ ಪಾರಾಗುವ ಈ ಮೀನಿಗೆ ಫುಗು ಎಂದೂ ಕರೆಯುತ್ತಾರೆ. ಈ ಮೀನಿನಲ್ಲಿ ಒಂದೇ ಒಂದು ಚಿಕ್ಕ ಅಂಗವಿದ್ದು ಅದನ್ನು ನಿವಾರಿಸಿದರೆ ವಿಷವಿಲ್ಲದಂತಾಗುತ್ತದೆ. ಆದರೆ ಎಚ್ಚರ ತಪ್ಪಿ ಈ ಅಂಗ ಒಡೆದರೆ ಇದರ ವಿಷ ಸಯನೈಡ್ ಗಿಂತಲೂ ಭೀಕರವಾಗಿದ್ದು ಇದನ್ನು ಸೇವಿಸಿದವರು ಬಿಲ್ ಕೊಡಲು ಉಳಿದಿರುವುದಿಲ್ಲ! ಇದೇ ಕಾರಣಕ್ಕೆ ಹೋಟೆಲಿನಲ್ಲಿ ಮುಂಗಡ ಹಣ ಪಡೆದುಕೊಳ್ಳಲಾಗುತ್ತದೆ.

ಮರಗೆಣಸು

ಮರಗೆಣಸು

ಕೇರಳದವರಿಗೆ ಅತ್ಯಂತ ಪ್ರಿಯವಾದ ಈ ಗೆಣಸಿಗೆ ಬೇರುಗೆಣಸು ಎಂದೂ ಕರೆಯುತ್ತಾರೆ. ಇದನ್ನು ಬೇಯಿಸಿ ತಿಂದರೆ ಏನೂ ಅಪಾಯವಿಲ್ಲ, ಆದರೆ ಹಸಿಯಾಗಿ ತಿಂದರೆ ಇದರ ಒಂದು ಕಿಣ್ವ ಸಯನೈಡ್ ನಂತೆ ಪರಿವರ್ತಿತವಾಗಿ ಆರೋಗ್ಯಕ್ಕೆ ಮಾರಕವಾಗುತ್ತದೆ.

ಹಸಿ ಶೇಂಗಾಬೀಜ

ಹಸಿ ಶೇಂಗಾಬೀಜ

ಹಸಿ ಶೇಂಗಾಬೀಜವನ್ನು ತಿನ್ನುವುದು ಅಲರ್ಜಿಕಾರಕವಾಗಿದೆ. ಚಿಕ್ಕ ಪ್ರಮಾಣದಲ್ಲಿ ತಿಂದರೆ ತೊಂದರೆಯಿಲ್ಲ ಆದರೆ ರುಚಿ ಹಿಡಿದು ಹಸಿಯಾಗಿಯೇ ತಿನ್ನುತ್ತಾ ಹೋದರೆ ಯಾವುದೋ ಒಂದು ಅಲರ್ಜಿ ಬಹುವಾಗಿ ಕಾಡಬಹುದು. ಆದ್ದರಿಂದ ಹುರಿದು ಅಥವಾ ಬೇಯಿಸಿ ತಿನ್ನುವುದು ಕ್ಷೇಮ.

ರುಬಾರ್ಬ್ ಸೊಪ್ಪು

ರುಬಾರ್ಬ್ ಸೊಪ್ಪು

ಒಂದು ಬಗೆಯ ಕೆಂಪು ದಂಟಿನ ಹಸಿರು ಎಲೆಗಳ ಈ ಸೊಪ್ಪನ್ನು ಸೇವಿಸುವುದಾದರೆ ಕೆಂಪು ದಂಟಿನ ಭಾಗವನ್ನು ಪೂರ್ಣವಾಗಿ ನಿವಾರಿಸಿ ಸೇವಿಸುವುದು ಉತ್ತಮ. ಏಕೆಂದರೆ ಈ ದಂಟಿನಲ್ಲಿ ಕೆಲವೊಂದು ವಿಷಪದಾರ್ಥಾಗಳಿದ್ದು ಒಂದು ವೇಳೆ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಪ್ರಾಣಾಪಾಯವೂ ಎದುರಾಗಬಹುದು.

ಮೊಳಕೆ ಬರಿಸಿದ ಕಾಳುಗಳು

ಮೊಳಕೆ ಬರಿಸಿದ ಕಾಳುಗಳು

ಮೊಳಕೆ ಬರಿಸಿದ ಕಾಳುಗಳು ಆರೋಗ್ಯಕರ ಎಂದು ನಂಬಿದ್ದ ನಮಗೆ ಆಘಾತಕಾರಿ ಸುದ್ದಿ ಬಂದಿದೆ. ಜರ್ಮನಿಯಲ್ಲಿ ಮೊಳಕೆ ಬರಿಸಿದ ಬೀನ್ಸ್ ಕಾಳುಗಳ ಮೂಲಕ ಮಾರಕವಾದ ಈ ಕೊಲೈ ( E coli) ಎಂಬ ಬ್ಯಾಕ್ಟೀರಿಯಾ ಸಾಂಕ್ರಾಮಿಕವಾಗಿ ಹರಡಿದ ಘಟನೆ ವರದಿಯಾಗಿದೆ. ಆ ಪ್ರಾಂತ್ಯದಲ್ಲಿ ಹಲವು ಸಾವು ಮತ್ತು ಕಾಯಿಲೆಗಳಿಗೆ ಈ ಬ್ಯಾಕ್ಟೀರಿಯಾ ಕಾರಣವಾಯಿತು. ಕೂಲಂಕುಶ ತನಿಖೆಯಿಂದ ಬೀನ್ಸ್ ಕಾಳುಗಳ ಮೊಳಕೆಯಲ್ಲಿ ಇದರ ಮೂಲ ಪತ್ತೆಯಾಯಿತು.

ಚಿಪ್ಪಿನ ಮೃದ್ವಂಗಿ

ಚಿಪ್ಪಿನ ಮೃದ್ವಂಗಿ

ಮೃದ್ವಂಗಿಗಳಲ್ಲಿ ಚಲನೆ ಸೀಮಿತವಾಗಿರುವುದರಿಂದ ವೈರಿಗಳಿಂದ ರಕ್ಷಿಸಿಕೊಳ್ಳಲು ನಿಸರ್ಗ ಅದಕ್ಕೆ ರಾಸಾಯನಿಕ ಅಸ್ತ್ರವನ್ನು ನೀಡಿದೆ. ವೈರಿ ಎದುರಾದರೆ ಇದರ ಮೈಮೇಲೆ ಗೋಂದಿನಂತಹ ದ್ರವ ಆವರಿಸುತ್ತದೆ. ಇದರ ರುಚಿ ವೈರಿಯ ನಾಲಿಗೆಯನ್ನು ಸುಡುವುದರಿಂದ ವೈರಿ ಕಂಬಿ ಕೀಳುತ್ತದೆ.

ಚಿಪ್ಪಿನ ಮೃದ್ವಂಗಿ

ಚಿಪ್ಪಿನ ಮೃದ್ವಂಗಿ

ಈ ದ್ರವ ಕೆಲವರಿಗೆ ಅಲರ್ಜಿಕಾರಕವಾಗಿದೆ. ಇದರ ಅರಿವಿಲ್ಲದೇ ಚಿಪ್ಪಿನ ಮೃದ್ವಂಗಿಯ ಖಾದ್ಯವನ್ನು ಸೇವಿಸಿದರೆ ಅನಾರೋಗ್ಯವುಂಟಾಗಬಹುದು. ಆದ್ದರಿಂದ ಗೊತ್ತಿಲ್ಲದೇ ಇರುವ ಮೃದ್ವಂಗಿಗಳಿಂದ ದೂರವಿರುವುದೇ ಲೇಸು.

ಕಾಕಿಹಣ್ಣು (Elderberries)

ಕಾಕಿಹಣ್ಣು (Elderberries)

ಚಿಕ್ಕ ಚಿಕ್ಕ ದ್ರಾಕ್ಷಿಗಳಂತಹ, ಗೊಂಚಲಲ್ಲಿ ಕಪ್ಪು ಬಣ್ಣದಲ್ಲಿರುವ ಈ ಹಣ್ಣುಗಳ ತಿರುಳು ಹುಳಿಮಿಶ್ರಿತ ಸಿಹಿಯಾಗಿದ್ದರೂ ಇದರ ಒಳಗಿನ ಬೀಜಗಳು ಮಾತ್ರ ಮನುಷ್ಯರಿಗೆ ಅಪಾಯಕಾರಿಯಾಗಿವೆ. ಇದರ ಎಲೆ, ತೊಟ್ಟುಗಳು ಸಹಾ ವಿಷಪೂರಿತವಾಗಿವೆ. ಚಿಕ್ಕ ಹಣ್ಣಿನೊಳಗೆ ನೂರಾರು ಚಿಕ್ಕಚಿಕ್ಕ ಬೀಜಗಳಿದ್ದು ಇದನ್ನು ಬೇರ್ಪಡಿಸುವುದು ಅಸಾಧ್ಯವಾದುದರಿಂದ ಈ ಹಣ್ಣಿನ ತಂಟೆಗೆ ಹೋಗದಿರುವುದೇ ವಾಸಿ.

ಜಮೈಕಾದ ಅಕೀ ಹಣ್ಣು

ಜಮೈಕಾದ ಅಕೀ ಹಣ್ಣು

ಜಮೈಕಾ ದೇಶದ ackee apple ಅಥವಾ akee (Blighia sapida) ಹಣ್ಣಿನ ಬೀಜಗಳು ವಿಷಪೂರಿತವಾಗಿದ್ದು ಬೀಜಸಹಿತ ತಿನ್ನುವುದು ಅಪಾಯಕಾರಿಯಾಗಿದೆ.

ಹಸಿ ಹಾಲು

ಹಸಿ ಹಾಲು

ಕರೆದ ಹಾಲನ್ನು ಕುದಿಸದೇ ಕುಡಿಯದಿರಿ ಎಂದು ಹಿರಿಯರು ಹೇಳುವುದನ್ನು ಏಕೆ ಎಂಬ ಪ್ರಶ್ನೆ ಕೇಳದೆ ಪಾಲಿಸಿದಷ್ಟೂ ಕ್ಷೇಮ. ಏಕೆಂದರೆ ಹಸಿ ಹಾಲಿನಲ್ಲಿ ಕೆಲವು ಬ್ಯಾಕ್ಟೀರಿಯಾಗಳಿದ್ದು ಅವನ್ನು ಜೀರ್ಣಿಸಿಕೊಳ್ಳಲು ಕೇವಲ ಹಸುವಿನ ಕರುವಿನ ಹೊಟ್ಟೆಯಲ್ಲಿರುವ ಜೀರ್ಣರಸಗಳಿಗೆ ಮಾತ್ರ ಸಾಧ್ಯ. ನಮ್ಮ ಹೊಟ್ಟೆಯಲ್ಲಿ ಅವು ಇಲ್ಲದಿರುವುದರಿಂದ ಪ್ಯಾಶ್ಚರೀಕರಿಸಿ (ಕುದಿಸಿ ತಣಿಸಿದ) ಕುಡಿಯುವುದು ಉತ್ತಮ. ಇತ್ತೀಚಿನ ಸಂಶೋಧನೆಯಲ್ಲಿ ಹಸಿ ಹಾಲಿನಲ್ಲಿ ಮಾರಕವಾದ ಈ ಕೊಲೈ ಬ್ಯಾಕ್ಟೀರಿಯಾ ಸಹಾ ಇರುವುದು ಪತ್ತೆಯಾಗಿದೆ.

ಕಪರಾಕ್ಷೀ ಹಣ್ಣು ( STAR Fruit)

ಕಪರಾಕ್ಷೀ ಹಣ್ಣು ( STAR Fruit)

ಕತ್ತರಿಸಿದರೆ ಪಂಚಬಾಹುಗಳ ನಕ್ಷತ್ರದಂತೆ ಕಾಣಿಸುವ ಕಪರಾಕ್ಷೀ ಹಣ್ಣು ಹುಳಿಸಿಹಿಯ ಸ್ವಾದ ಹೊಂದಿದೆ. ಆದರೆ ಈ ಹಣ್ಣುಗಳಲ್ಲಿ ಕೆಲವು ನ್ಯೂರೋಟಾಕ್ಸಿನ್ (ನರಗಳಿಗೆ ಮಾರಕವಾದ ವಿಷ) ಗಳಿದ್ದು ನರಮಂಡಲ, ಮೆದುಳಿನ ಕ್ಷಮತೆ ಮತ್ತು ನರವ್ಯವಸ್ಥೆಯನ್ನು ಬಾಧಿಸುತ್ತದೆ. ಅಲ್ಲದೇ ಮೂತ್ರಪಿಂಡದ ತೊಂದರೆಯಿದ್ದರೆ ಆ ತೊಂದರೆಯನ್ನು ವಿಪರೀತವಾಗಿ ಹೆಚ್ಚಿಸುತ್ತದೆ. ಆದ್ದರಿಂದ ಈ ಹಣ್ಣನ್ನು ಮೆಚ್ಚಿ ದೂರದಿಂದಲೇ ಶ್ಲಾಘಿಸಿದರೆ ಸಾಕು, ತಿನ್ನುವ ಗೊಡವೆ ಬೇಡವೇ ಬೇಡ.


English summary

Most Dangerous Foods In The World

Time has gone when people limited their food experiments with in the healthy options. Now there are a variety of foods that are available in the market. Experimenting with the variety of foods is a hobby for some. Are you an adventurous eater? Then beware, before trying a new food, check whether it’s good for you. You can find at least 12 most dangerous foods in the world. 
Story first published: Tuesday, October 6, 2015, 15:09 [IST]
X
Desktop Bottom Promotion