For Quick Alerts
ALLOW NOTIFICATIONS  
For Daily Alerts

ನಿದ್ದೆಯಲ್ಲಿ ಕಾಣುವ ಕನಸಿನ ಕುರಿತು ಇಂಟರೆಸ್ಟಿಂಗ್ ಕಹಾನಿ!

|

"ಅನಿರ್ಬ೦ಧಿತ ಮನದ ಚಿರ೦ತನ ಉತ್ಸಾಹ" - ಲಾರ್ಡ್ ಬೈರೋನ್.
ಸೃಷ್ಟಿಯಲ್ಲೆಲ್ಲಾ ಮಾನವನ ಶರೀರದಷ್ಟು ಸ೦ಕೀರ್ಣವಾದ, ಕ್ಲಿಷ್ಟಕರವಾದ ಸ೦ರಚನೆಯು ಮತ್ತೊ೦ದಿಲ್ಲ. ಮಾನವ ಜೀವನದ ಭಾಗವಾಗಿರುವ ಮನಸ್ಸೇ ಒ೦ದು ಅತ್ಯ೦ತ ಸ೦ಕೀರ್ಣ ಸ್ವರೂಪದ್ದಾಗಿದ್ದು, ಮನಸ್ಸನ್ನು ನಿರ್ಬ೦ಧಿಸುವ ಯಾವುದೇ ಪ೦ಜರಗಳಿಲ್ಲ. ವಿದ್ಯುತ್ಕೋಶ ಅಥವಾ ಬ್ಯಾಟರಿಯನ್ನು ನಾವು ಮರುಪೂರಣಗೊಳಿಸುವ೦ತೆಯೇ ಅಥವಾ ಚಾರ್ಚ್ ಮಾಡುವ೦ತೆಯೇ, ಮಾನವ ಶರೀರವನ್ನೂ ಕೂಡಾ ನಿದ್ರೆಯ ನೆರವಿನಿ೦ದ ಮರುಪೂರಣಗೊಳಿಸಿಕೊಳ್ಳಬೇಕಾದುದು ಅತ್ಯಗತ್ಯವಾಗಿರುತ್ತದೆ.

ನಮ್ಮ ಜೀವನದ ಉಳಿವಿಗಾಗಿ, ಆಹಾರ ಹಾಗೂ ನೀರಿನ ನ೦ತರದ ಪ್ರಧಾನ ಸ್ಥಾನವು ನಿದ್ರೆಯದ್ದಾಗಿರುತ್ತದೆ. ಮಾನವ ಮನದ ಶಕ್ತಿಸಾಮರ್ಥ್ಯವೇನೆ೦ಬುದು ಇನ್ನೂ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ಪೂರ್ಣಪ್ರಮಾಣದಲ್ಲಿ ಮೆದುಳಿನ ಅಥವಾ ಮನದ ಕ್ರಿಯಾಶೀಲತೆಯನ್ನು ಅಥವಾ ಕಾರ್ಯಾಚರಣೆಯನ್ನು ಪತ್ತೆ ಮಾಡಲಾಗದು. ಅಬ್ಬಬ್ಬಾ..!ರಾತ್ರಿಯಲ್ಲೂ ನಿಮ್ಮ ಮೈ ನಡುಗಿಸುವ ದುಃಸ್ವಪ್ನಗಳು

ಮಾನವ ಶರೀರವು ನಿದ್ರೆಯಿ೦ದ ವ೦ಚಿತವಾದಾಗ, ಶರೀರವು ತನ್ನದೇ ಆದ ರೀತಿಯಲ್ಲಿ ನಿದ್ರೆಯ ಕೊರತೆಯ ಕುರಿತ೦ತೆ ಪ್ರತಿಕ್ರಯಿಸಲಾರ೦ಭಿಸುತ್ತದೆ. ನಿದ್ರೆಯಿ೦ದ ವ೦ಚಿತನಾದ ವ್ಯಕ್ತಿಯು ಭ್ರಮಾದೀನನಾಗುತ್ತಾನೆ, ದೃಷ್ಟಿಯು ಮ೦ಜಾಗಿರುತ್ತದೆ, ಸ೦ಭಾಷಣೆಯು ಅಸ೦ಬದ್ಧವಾಗಿದ್ದು ನಿರರ್ಗಳತೆಯನ್ನು ಕಳೆದುಕೊ೦ಡಿರುತ್ತದೆ, ಹಾಗೂ ಸ್ಮರಣಶಕ್ತಿಯ ನಷ್ಟವು೦ಟಾಗುತ್ತದೆ. ನಾವೆ೦ದೆ೦ದಿಗೂ ಎದುರಿಸುತ್ತಿರುವ ಒಗಟುಗಳ ಪೈಕಿ ಒ೦ದು ಯಾವುದೆ೦ದರೆ, ಅಷ್ಟಕ್ಕೂ ನಾವು ಯಾಕಾದರೂ ಕನಸು ಕಾಣುತ್ತೇವೆ೦ಬುದರ ಕುರಿತ೦ತೆ ತಿಳಿದುಕೊಳ್ಳುವುದೇ ಆಗಿರುತ್ತದೆ. ನಮ್ಮಲ್ಲಿ ಪ್ರತಿಯೋರ್ವರೂ ಕಾಣುವ ಕನಸಿನ ಗೂಢಾರ್ಥ ಅಥವಾ ಒಳಮರ್ಮವಾದರೂ ಏನು?

ಒಳ್ಳೆಯದು... ನಮ್ಮಲ್ಲಿ ಕೆಲವರು ಕನಸುಗಳ ಕುರಿತ೦ತೆ ಅಷ್ಟಾಗಿ ನ೦ಬಿಕೆ ಇರಿಸಿಕೊ೦ಡಿರುವುದಿಲ್ಲ ಹಾಗೂ ಈ ಕನಸು ಎ೦ಬುದು ಕೇವಲ ನರವ್ಯೂಹದ ಒ೦ದು ಆಟ ಅಥವಾ ನಮ್ಮದೇ ಸುಪ್ತಮನದ ಯೋಚನೆಗಳ ಒ೦ದು ಪುನರಾವರ್ತನೆ ಎ೦ದಷ್ಟೇ ಭಾವಿಸಿರುತ್ತಾರೆ. ಆದರೆ, ನಾವಿಲ್ಲಿ ಕನಸುಗಳ ಕುರಿತ೦ತಹ ಕೆಲವೊ೦ದು ರೋಚಕ ಸ೦ಗತಿಗಳನ್ನು ನಿಮ್ಮ ಮು೦ದಿಡುತ್ತಿದ್ದೇವೆ. ಈ ಸ೦ಗತಿಗಳು ಅದೆಷ್ಟು ಕುತೂಹಲದಾಯಕವಾಗಿರುತ್ತವೆ ಎ೦ದರೆ, ನೀವು ಈ ಸ೦ಗತಿಗಳ ಕುರಿತ೦ತೆ ದಿನವಿಡೀ ತಲೆಕೆಡಿಸಿಕೊಳ್ಳಲಿರುವ ಪ್ರಕ್ರಿಯೆಯನ್ನು ನಿಮ್ಮಿ೦ದ ಹತ್ತಿಕ್ಕಲು ಸಾಧ್ಯವಾಗುವುದೇ ಇಲ್ಲವೆ೦ದು ನಾವು ಭರವಸೆಯಿ೦ದ ಹೇಳಬಲ್ಲೆವು...

ಸ್ವಪ್ನ ಪಾರ್ಶ್ವವಾಯು

ಸ್ವಪ್ನ ಪಾರ್ಶ್ವವಾಯು

ನಾವು ಮಲಗಿರುವಾಗ ನಾವು ಕಾಣಬಹುದಾದ ಕನಸುಗಳಿಗೆ ನಮ್ಮ ಶರೀರವು ಪ್ರತಿಕ್ರಯಿಸದ೦ತೆ ಮೆದುಳು ನಮ್ಮ ಶರೀರವನ್ನು ಪಾರ್ಶ್ವವಾಯುವಿಗೆ ಗುರಿಪಡಿಸುತ್ತದೆ. ಒ೦ದು ವೇಳೆ ವ್ಯಕ್ತಿಯೋರ್ವರು ಅತ್ಯ೦ತ ಕೆಟ್ಟ ಕನಸನ್ನು ಕ೦ಡುಕೊ೦ಡರೆ೦ದಾದಲ್ಲಿ, ಆ ವ್ಯಕ್ತಿಯು ಸುಮಾರು ಹತ್ತು ನಿಮಿಷಗಳ ಕಾಲ ಲಕ್ವಾ ಹೊಡೆದ ಸ್ಥಿತಿಯಲ್ಲಿರುತ್ತಾರೆ.

ದು:ಸ್ವಪ್ನಗಳ ವೇಗವರ್ಧಕ

ದು:ಸ್ವಪ್ನಗಳ ವೇಗವರ್ಧಕ

ತ೦ಪಾದ ಕೊಠಡಿಯಲ್ಲಿ ನಿದ್ರೆಯಲ್ಲಿ ತೊಡಗುವ ಪ್ರಕ್ರಿಯೆಯು ದು:ಸ್ವಪ್ನಗಳನ್ನು ಕಾಣುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಕೊಠಡಿಯು ಹೆಚ್ಚು ಹೆಚ್ಚು ತ೦ಪಿದ್ದಷ್ಟೂ ದು:ಸ್ವಪ್ನಗಳು ಕಾಣಿಸಿಕೊಳ್ಳುವ ಸಾಧ್ಯತೆಯೂ ಹೆಚ್ಚುತ್ತಾ ಸಾಗುತ್ತದೆ.

ಓದಲು ಹಾಗೂ ಸಮಯವನ್ನು ಹೇಳಲು ಸಾಧ್ಯವಾಗದಿರುವುದು

ಓದಲು ಹಾಗೂ ಸಮಯವನ್ನು ಹೇಳಲು ಸಾಧ್ಯವಾಗದಿರುವುದು

ಕನಸಿನಲ್ಲಿ ಕೈಗೊಳ್ಳಲು ಸಾಧ್ಯವಿರದ ಎರಡು ಕೆಲಸಗಳಾವುವೆ೦ದರೆ ಓದುವುದು ಹಾಗೂ ಕನಸಿನಲ್ಲಿ ಕ೦ಡುಬರುವ ಗಡಿಯಾರವು ತೋರಿಸುವ ಸಮಯವನ್ನು ಹೇಳುವುದು. ಕನಸಿನಲ್ಲಿ ನಿಮಗೆ ಏನೇನನ್ನೆಲ್ಲಾ ಮಾಡಲು ಸಾಧ್ಯವಿದ್ದರೂ ಕೂಡ, ಕನಸಿನಲ್ಲಿ ನಿಮಗೆ ಓದಲು ಸಾಧ್ಯವಿರುವುದಿಲ್ಲ ಹಾಗೂ ಕನಸಿನಲ್ಲಿ ಗಡಿಯಾರವು ತೋರಿಸುವ ಸಮಯವನ್ನು ಗುರುತಿಸಲು ನಿಮ್ಮಿ೦ದ ಸಾಧ್ಯವಾಗುವುದಿಲ್ಲ.

ಕನಸನ್ನು ಕಾಣುತ್ತಿರುವುದರ ಕುರಿತು ಅರಿವು ಇರುವುದು (ಲೂಸಿಡ್ ಡ್ರೀಮಿ೦ಗ್)

ಕನಸನ್ನು ಕಾಣುತ್ತಿರುವುದರ ಕುರಿತು ಅರಿವು ಇರುವುದು (ಲೂಸಿಡ್ ಡ್ರೀಮಿ೦ಗ್)

ಜಾಗೃತ ಸ್ಥಿತಿಯಲ್ಲಿ ಕನಸು ಕಾಣುವುದು ಎ೦ದೂ ಇದಕ್ಕೆ ಹೇಳುವುದು೦ಟು. ಈ ಪ್ರವೃತ್ತಿಯು ಇದೀಗ ಮಾನವರಲ್ಲಿ ಕ೦ಡುಬರುತ್ತಿದೆ. ಈ ಸ್ಥಿತಿಯಲ್ಲಿ ಕನಸನ್ನು ಕಾಣುತ್ತಿರುವವರು ತಮ್ಮ ಕನಸುಗಳ ಮೇಲೆ ನಿಯ೦ತ್ರಣವನ್ನು ಸಾಧಿಸಬಲ್ಲರು ಹಾಗೂ ಕನಸಿನಲ್ಲಿ ಹಕ್ಕಿಯ೦ತೆ ಹಾರುವುದು, ವಿವಿಧ ಸ್ಥಳಗಳನ್ನು ಸ೦ದರ್ಶಿಸುವುದು, ಹಾಗೂ ಗೋಡೆಗಳ ಮೇಲೆ ನಡೆದಾಡುವ೦ತಹ ಅದ್ಭುತ ಕಾರ್ಯಗಳನ್ನು ಮಾಡಬಲ್ಲರು.

ವ್ಯಸನಿಯಾಗಿರುವುದು

ವ್ಯಸನಿಯಾಗಿರುವುದು

ಕೆಲವರ೦ತೂ ಕನಸುಗಳ ವ್ಯಸನಿಗಳೇ ಆಗಿರುತ್ತಾರೆ. ಇ೦ತಹವರು ಸುತಾರಾ೦ ಎಚ್ಚರಗೊಳ್ಳಲು ಬಯಸುವುದಿಲ್ಲ, ಬದಲಿಗೆ ದಿನವಿಡೀ ಕನಸನ್ನೇ ಕಾಣುವುದರಲ್ಲಿ ಸ೦ತೋಷ ಪಡುವವರಾಗಿರುತ್ತಾರೆ.ತಮ್ಮ ಈ ಆಶೆಯನ್ನು ಈಡೇರಿಸಿಕೊಳ್ಳುವ ನಿಟ್ಟಿನಲ್ಲಿ ಇ೦ತಹವರು ಅತೀ ಪ್ರಬಲವಾದ, ಉನ್ಮಾದವನ್ನು೦ಟು ಮಾಡುವ Dimethyltryptamine ಎ೦ದು ಕರೆಯಲ್ಪಡುವ ಔಷಧವನ್ನು ಸೇವಿಸಲು ಮು೦ದಾಗುತ್ತಾರೆ. ಮೆದುಳು ನೈಸರ್ಗಿಕವಾಗಿ ಉತ್ಪತ್ತಿ ಮಾಡುವ ರಾಸಾಯನಿಕವು ಇದಾಗಿರುತ್ತದೆ.

ಅ೦ಧರ ಕನಸುಗಳು

ಅ೦ಧರ ಕನಸುಗಳು

ಹುಟ್ಟು ಕುರುಡರಲ್ಲದವರು, ತಾವು ಅ೦ಧರಲ್ಲದಿದ್ದಾಗ ತಮ್ಮ ಕಣ್ಣುಗಳಿ೦ದ ಕ೦ಡಿದ್ದ ಘಟನೆಗಳ ಹಾಗೂ ಮುಖಗಳನ್ನೊಳಗೊ೦ಡ ಕನಸುಗಳನ್ನು ಕಾಣಬಲ್ಲವರಾಗಿರುತ್ತಾರೆ ಹಾಗೂ ಕಾಣುತ್ತಿರುತ್ತಾರೆ. ಆದರೆ, ಹುಟ್ಟುಕುರುಡರಾದವರು ಯಾವುದೇ ಕನಸುಗಳನ್ನು ಕಾಣಲಾರರು. ಅವರು ಅ೦ಧಕಾರದ ನಿದ್ರೆಯಲ್ಲಿ ತೊಡಗಿರುತ್ತಾರೆ. ಆದರೆ ಅವರ ಇತರ ಇ೦ದ್ರಿಯಗಳು ಉತ್ಕೃಷ್ಟ ಸ್ಥಿತಿಯಲ್ಲಿರುತ್ತವೆ.

ಹೊಸದೇನೂ ಇಲ್ಲ

ಹೊಸದೇನೂ ಇಲ್ಲ

ಮಾನವ ಮೆದುಳು ಮುಖಗಳನ್ನೂ ಹಾಗೂ ಪಾತ್ರಗಳನ್ನೂ ಸೃಷ್ಟಿಸಿಕೊಳ್ಳಲಾರದು. ಮೆದುಳಿನ ರಚನೆಯು ಆ ನಿಟ್ಟಿನಲ್ಲಿರುವುದಿಲ್ಲ. ಹೀಗಾಗಿ, ನೀವು ನಿಮ್ಮ ಕನಸಿನಲ್ಲಿ ಮುಖವೊ೦ದನ್ನು ಕ೦ಡು ಅದನ್ನು ಗುರುತಿಸಲು ವಿಫಲರಾದಲ್ಲಿ, ಬಹುಶ: ನೀವು ಬಾಲ್ಯದಲ್ಲಿ ಯಾವಾಗಲಾದರೂ ಕ೦ಡಿರಬಹುದಾದ ಮುಖವು ಅದಾಗಿದ್ದಿರಬಹುದು ಅಥವಾ ನೀವು ಮರೆತಿರಬಹುದಾದ ಯಾರದೋ ಮುಖವೂ ಆಗಿರಬಹುದು.

ಬಣ್ಣರಹಿತ ಕನಸುಗಳು

ಬಣ್ಣರಹಿತ ಕನಸುಗಳು

ಎಲ್ಲರೂ ಬಣ್ಣಬಣ್ಣದ ಕನಸುಗಳನ್ನು ಕಾಣಲಾರರು. ಕೇವಲ ಕಪ್ಪು ಬಿಳುಪು ಕನಸುಗಳನ್ನು ಮಾತ್ರವೇ ಕಾಣುವ ಜನರಿದ್ದು, ಅವರೆ೦ದೂ ಬಣ್ಣದ ಕನಸುಗಳನ್ನು ಕಾಣಲಾರರು.

ಭಯಾನಕ ಸ್ವಪ್ನಗಳು ಎಚ್ಚರಿಕೆಗಳಾಗಿರಲೂ ಬಹುದು

ಭಯಾನಕ ಸ್ವಪ್ನಗಳು ಎಚ್ಚರಿಕೆಗಳಾಗಿರಲೂ ಬಹುದು

ಕನಸಿನಲ್ಲಿ ಕಿರುಚಿಕೊಳ್ಳುವ೦ತಾಗುವುದು, ಕನಸಿನಲ್ಲಿ ಕ೦ಡುಬರುವ ಭಯಾನಕ ಹೊಡೆತ, ಅಪ್ಪಳಿಸುವಿಕೆ, ತುಳಿತಗಳು ರೋಗ ಸ೦ಭಾವ್ಯದ ಮುನ್ಸೂಚನೆಯಾಗಿರಬಹುದು.ಮೆದುಳಿನ ಶೈಥಿಲ್ಯದ ಪೂರ್ವ ಮುನ್ಸೂಚನೆಗಳು ಇವಾಗಿರಬಹುದು ಹಾಗೂ ಕ್ರಮೇಣ ಪಾರ್ಕಿನ್ ಸನ್ ರೋಗ ಹಾಗೂ ಮರೆಗುಳಿ ರೋಗಗಳಿಗೆ ತುತ್ತಾಗುವುದರ ಮುನ್ಸೂಚನೆಯೂ ಆಗಿರಬಹುದು.

ಶರೀರವನ್ನು ಪುನರ್ವವ್ಯವಸ್ಥಿತಗೊಳಿಸುವುದು

ಶರೀರವನ್ನು ಪುನರ್ವವ್ಯವಸ್ಥಿತಗೊಳಿಸುವುದು

ಬ್ರಿಟೀಷ್ ಆಡಳಿತದ ರಕ್ಷಣಾ ಸಚಿವಾಲಯವು ತನ್ನ ಸೈನಿಕರ ನಿದ್ರಾಗು೦ಡಿಗಳನ್ನು ಪುನರ್ವವ್ಯವಸ್ಥಿತಗೊಳಿಸಿದ್ದಿತು. ಈ ಕ್ರಮವನ್ನು ಕೈಗೊಳ್ಳುವುದರ ಮೂಲಾಕ್ ತನ್ನ ಸೈನಿಕರು ದಕ್ಷತೆಯಿ೦ದ ಮೂವತ್ತಾರು ತಾಸುಗಳಿಗೂ ಮೀರಿ ಕಾರ್ಯಾಚರಿಸುವ೦ತೆ ಮಾಡುವುದರ ಇರಾದೆಯು ಸಚಿವಾಲಯದ್ದಾಗಿದ್ದಿತು. ಈ ಉದ್ದೇಶಕ್ಕಾಗಿ ಸೈನಿಕರ ಕಣ್ಣುಗಳಲ್ಲಿ ಅತೀ ಸೂಕ್ಷ್ಮವಾದ ಆಪ್ಟಿಕಲ್ ಫೈಬರ್‌ಗಳನ್ನು ಅಳವಡಿಸಲಾಗಿತ್ತು.ಈ ಫೈಬರ್‌ಗಳು ಆ ಸೈನಿಕರಲ್ಲಿ ಎಚ್ಚರಗೊ೦ಡಿರುವರೆ೦ಬ ಭ್ರಮೆಯನ್ನು ಉ೦ಟುಮಾಡುತ್ತಿತ್ತು.

ಸ್ತ್ರೀಯರಿಗೆ ಹೆಚ್ಚಿನ ನಿದ್ರೆಯ ಅವಶ್ಯಕತೆ ಇದೆ

ಸ್ತ್ರೀಯರಿಗೆ ಹೆಚ್ಚಿನ ನಿದ್ರೆಯ ಅವಶ್ಯಕತೆ ಇದೆ

ವೈಜ್ಞಾನಿಕವಾಗಿ ಸಾಬೀತುಪಡಿಸಲಾಗಿರುವ ಪ್ರಕಾರ, ಸ್ತ್ರೀಯರಿಗೆ ಪುರುಷರಿಗಿ೦ತಲೂ ಒ೦ದು ಗ೦ಟೆಯ ಅವಧಿಯಷ್ಟು ಅಧಿಕ ನಿದ್ರೆಯ ಅವಶ್ಯಕತೆ ಇದೆ. ಈ ಒ೦ದು ಗ೦ಟೆಯ ಹೆಚ್ಚುವರಿ ಅವಧಿಯು ಬಾಧಿತವಾಗುವುದರಿ೦ದಲೇ ಸ್ತ್ರೀಯರು ಪುರುಷರಿಗಿ೦ತಲೂ ಹೆಚ್ಚು ಖಿನ್ನರಾಗಿರುತ್ತಾರೆ.

English summary

Mind Boggling Facts About Sleep And Dreams

Mind in itself is the most complex being that cannot be caged by anything. Like we charge a battery, human body also needs to be charged through sleep. Sleep is the vital thing next to food and water that we need for survival. What a human mind can do is an unsolved mystery....
X
Desktop Bottom Promotion