For Quick Alerts
ALLOW NOTIFICATIONS  
For Daily Alerts

ವಿಶ್ವದಾದ್ಯಂತ ಜನಪ್ರಿಯತೆ ಪಡೆದಿರುವ ಕೋಕಾ ಕೋಲಾ ಯಶಸ್ಸಿನ ಗುಟ್ಟೇನು?

By Arshad
|

ಕೋಕಾ ಕೋಲಾ ಎಂಬ ಲಘು ಪಾನೀಯ ಈ ಹೆಸರಿಗಿಂತಲೂ ಕೋಕ್ ಎಂದೇ ಹೆಚ್ಚು ಜನಪ್ರಿಯವಾಗಿದೆ 1920ರಲ್ಲಿ ಅಮೇರಿಕಾದಲ್ಲಿ ಕುಡಿತದ ಅಮಲು ಇಳಿಯಲು ಕುಡಿಯಿರಿ ಎಂಬ ಪ್ರಚಾರದ ಮೂಲಕ ಮಾರುಕಟ್ಟೆಗಿಳಿದ ಈ ಅಲ್ಯೂಮಿನಿಯಂ ಡಬ್ಬಿಯೊಳಗಣ (ಅಂದು ಗಾಜಿನ ಬಾಟಲಿಯಲ್ಲಿತ್ತು) ನಿಧಾನವಾಗಿ ಅಮೇರಿಕಾ ಹೊರಗೂ ಕಾಲಿಟ್ಟು ಇಂದು ವಿಶ್ವದಾದ್ಯಂತ ಅತ್ಯಧಿಕ ಮಾರಾಟವಾಗುವ ಲಘು ಪಾನೀಯವಾಗಿದೆ.

ಇತ್ತೀಚೆಗೆ ಅಂತರ್ಜಾಲದಲ್ಲಿ ಕೋಕಾ ಕೋಲಾ ಮತ್ತು ಮೆಂಟೋಸ್ ಎಂಬ ಕ್ಯಾಂಡಿ ಸೇರಿದರೆ ಸ್ಫೋಟಕದ ರೂಪ ತಾಳುವ ವೀಡಿಯೋಗಳನ್ನು ವಿಶ್ವದಾದ್ಯಂತ ಜನರು ನೋಡಿದ್ದಾರೆ. ನಿಜವಾಗಿ ಆತಂಕದ ವಿಷಯವಾದರೂ ಮೆಂಟೋಸ್ ಮಾರಾಟ ಕಡಿಮೆಯಾಯಿತೇ ವಿನಃ ಕೋಕಾ ಕೋಲಾವಲ್ಲ. ಶಕ್ತಿವರ್ಧಕ ಪೇಯಗಳೆಲ್ಲಾ ವೇಸ್ಟ್ : ತಜ್ಞರು

ವಾಸ್ತವಾಗಿ ಇಂಗಾಲದ ಡೈ ಆಕ್ಸೈಡ್ ಅನಿಲವನ್ನು ಬಲವಂತವಾಗಿ ದ್ರವರೂಪಕ್ಕಿಳಿಸಿ ನೀರಿನಲ್ಲಿ ಕರಗಿಸಿ ರುಚಿ ಮತ್ತು ಬಣ್ಣಗಳನ್ನು ಸೇರಿಸಿದ ಪಾನೀಯವೇ ಲಘುಪಾನೀಯವಾಗಿದೆ (ಸೋಡಾ). ಕುಡಿಯುವಾಗ ಕರಗಿದ ಇಂಗಾಲದ ಡೈ ಆಕ್ಸೈಡ್ ಮತ್ತೆ ಅನಿಲರೂಪ ಪಡೆದು ಹೊರಬರುವಾಗ ನೀಡುವ ಅನುಭವವೇ ಈ ಪೇಯದ ಯಶಸ್ಸಿನ ಗುಟ್ಟು. ನಿಜ ಹೇಳಬೇಕೆಂದರೆ ನಮಗೆ ಬೇಡವಾದ ಇಂಗಾಲದ ಡೈ ಆಕ್ಸೈಡ್ ಅನಿಲವನ್ನು ನಾವು ಕರಗಿದ ರೂಪದಲ್ಲಿ ಹೊಟ್ಟೆಗಿಳಿಸಿ ಬಳಿಕ ಹೊರಬಿಡುತ್ತಿದ್ದೇವೆ. ಇದು ಆರೋಗ್ಯಕರವೇ ಅಲ್ಲವೇ ಎಂಬ ಬಗ್ಗೆ ಭಿನ್ನ ಅಭಿಪ್ರಾಯಗಳಿವೆ.

ಇದನ್ನು ನಾವು ಸೇವಿಸುವುದಿಲ್ಲವಾದುದರಿಂದ ಅಪಾಯವಿಲ್ಲವೆಂದೂ, ಅತಿಹೆಚ್ಚಿನ ಸಕ್ಕರೆ ಇರುವುದರಿಂದ ಅಪಾಯಕರ ಎಂದೂ ಚರ್ಚಿಸಲಾಗುತ್ತಿದೆ. ಏನೇ ಆದರೂ ಕೋಕಾ ಕೋಲಾದ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೋಕಾ ಕೋಲಾದ ಬಗ್ಗೆ ಹಲವು ಅಚ್ಚರಿಯ ಸಂಗತಿಗಳಿವೆ. ಇವುಗಳಲ್ಲಿ ಇಪ್ಪತ್ತು ಅಚ್ಚರಿಯ ಸಂಗತಿಗಳನ್ನು ಇಲ್ಲಿ ನೀಡಲಾಗಿದೆ.

ಕೋಕಾ ಕೋಲಾ ಯಶಸ್ಸಿನ ಗುಟ್ಟು

ಕೋಕಾ ಕೋಲಾ ಯಶಸ್ಸಿನ ಗುಟ್ಟು

1920ರಲ್ಲಿ ಬಿಡುಗಡೆಯಾದ ವರ್ಷ ಈ ಸಂಸ್ಥೆಯ ಒಟ್ಟು ಮಾರಾಟವಾದ ಬಾಟಲಿಗಳ ಸಂಖ್ಯೆ ಕೇವಲ ಇಪ್ಪತ್ತೈದು. ಆದರೆ ಇದರ ಮಾಲಿಕರು ಧೃತಿಗೆಡಲಿಲ್ಲ. ಮಾರುಕಟ್ಟೆಯಲ್ಲಿ ತಮ್ಮ ಉತ್ಪನ್ನವನ್ನು ಸತತವಾಗಿ ಮಾರುತ್ತಲೇ ಬಂದರು. ಸದಾ ಪ್ರಯತ್ನಶೀಲರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುದನ್ನು ಇದು ಸಾಬೀತುಪಡಿಸುತ್ತದೆ.

ಬಣ್ಣದಲ್ಲಿ ಗೊಂದಲ

ಬಣ್ಣದಲ್ಲಿ ಗೊಂದಲ

ಕೆಂಪು ಕೋಕಾಕೋಲಾ ನೋಡಲು ಕೆಂಪಗಿದ್ದರೂ ಇದಕ್ಕಾಗಿ ಸಂಸ್ಥೆ ಬಹಳಷ್ಟು ಕಷ್ಟಪಡಬೇಕಾಗಿ ಬಂದಿತ್ತು. ಏಕೆಂದರೆ ಬಾಟಲಿಯ ಹೊರಬಣ್ಣದ ಕೆಂಪು ಬಣ್ಣಕ್ಕೂ ಒಳಗಿನ ಬಣ್ಣಕ್ಕೂ ವ್ಯತ್ಯಾಸವಿದ್ದರೆ ಜನರು ಇಷ್ಟಪಡುತ್ತಿರಲಿಲ್ಲ. ಈ ಬಣ್ಣವನ್ನೇ ಇರುವಂತೆ ಮಾಡಲು ಬಹಳಷ್ಟು ಮಾರ್ಪಾಡು ಮಾಡಬೇಕಾಗಿ ಬಂದಿತ್ತು.

ಗುಟ್ಟು ಇಬ್ಬರಿಗೆ ಮಾತ್ರ ತಿಳಿದಿದೆಯಂತೆ!

ಗುಟ್ಟು ಇಬ್ಬರಿಗೆ ಮಾತ್ರ ತಿಳಿದಿದೆಯಂತೆ!

ಈ ಪಾನೀಯವನ್ನು ತಯಾರಿಸುವ ಸ್ಪಷ್ಟ ವಿಧಾನ ವಿಶ್ವದಲ್ಲಿ ಕೇವಲ ಇಬ್ಬರಿಗೆ ಮಾತ್ರ ತಿಳಿದಿದೆ ಎಂದು ಸಂಸ್ಥೆಯ ಮಾಹಿತಿ ತಿಳಿಸುತ್ತದೆ. ಅದೂ ಈ ಇಬ್ಬರೂ ವ್ಯಕ್ತಿಗಳು ಒಂದೇ ಬಾರಿ ಒಂದೇ ವಿಮಾನದಲ್ಲಿ ಪಯಣಿಸುವಂತಿಲ್ಲ, ಏಕೆಂದರೆ ಆ ವಿಮಾನ ಅಪಘಾತಕ್ಕೀಡಾದರೆ ಸಂಸ್ಥೆಯ ಗುಟ್ಟು ನಶಿಸಿಹೋಗಬಾರದೆಂಬ ಮುನ್ನೆಚ್ಚರಿಕೆ. ಇದು ನಿಜವಾಗಿಯೂ ಹೌದೋ ಅಥವಾ ಕೇವಲ ಮಾರುಕಟ್ಟೆಯನ್ನು ಕಬಳಿಸುವ ತಂತ್ರವೋ ಎಂದು ಸ್ಪಷ್ಟವಾಗಿಲ್ಲ.

ಕೋಕಾಕೋಲಾದ ರುಚಿ ವಿಭಿನ್ನವಾಗಿದೆಯೇ?

ಕೋಕಾಕೋಲಾದ ರುಚಿ ವಿಭಿನ್ನವಾಗಿದೆಯೇ?

ವಿಶ್ವದಾದ್ಯಂತ ಕೋಕಾಕೋಲಾ ಮಾರಾಟವಾಗುತ್ತಿದ್ದರೂ ಅಮೇರಿಕಾದ ಕೋಕಾಕೋಲಾದ ರುಚಿ ಬೇರೆ ದೇಶಗಳಿಗಿಂತ ಭಿನ್ನವಾಗಿಯೂ ಉತ್ತಮವಾಗಿಯೂ ಇರುತ್ತದೆ ಎಂದು ಎರಡೂ ಕಡೆಯ ರುಚಿ ನೋಡಿದವರು ತಿಳಿಸುತ್ತಾರೆ.

ಕೋಕಾಕೋಲಾದ ಲೆಕ್ಕಾಚಾರ

ಕೋಕಾಕೋಲಾದ ಲೆಕ್ಕಾಚಾರ

ಒಂದು ವೇಳೆ 1920ರಲ್ಲಿ ಈ ಸಂಸ್ಥೆಯ ಒಂದು ಶೇರು ಕೊಂಡಿದ್ದರೆ ಇಂದು ಅದು 6.7ಮಿಲಿಯನ್ ಡಾಲರಿಗೆ ಸಮನಾಗುತ್ತಿತ್ತು. ಒಂದು ವೇಳೆ ಸಮಯದಲ್ಲಿ ಹಿಂದೆ ಹೋಗುವಂತಿದ್ದರೆ ಯಾವ ದಿನಾಂಕಕ್ಕೆ ಹೋಗಬೇಕು ಎಂಬ ನಿಮ್ಮ ಲೆಕ್ಕಾಚಾರಕ್ಕೊಂದು ನಿಗದಿತ ದಿನ ಸಿಕ್ಕಂತಾಯಿತು.

ತುಕ್ಕು ತೆಗೆಯಲು

ತುಕ್ಕು ತೆಗೆಯಲು

ತುಕ್ಕು ತೆಗೆಯಲು ಕೋಕಾ ಕೋಲಾ ಉತ್ತಮವಾಗಿದೆ ಎಂದು ಕೆಲವರು ತಿಳಿಸುತ್ತಾರೆ. ತುಕ್ಕು ಹಿಡಿದ ಸ್ಥಳದಲ್ಲಿ ನೇರವಾಗಿ ಕೋಕಾ ಕೋಲಾ ಸುರಿಯಬೇಕು. ಇಲ್ಲದಿದ್ದರೆ ಹತ್ತಿಯ ಬಟ್ಟೆಯನ್ನು ತುಕ್ಕು ಹಿಡಿದ ಸ್ಥಳವನ್ನು ಸುತ್ತುವರೆಯುವಂತೆ ಸುತ್ತಿ ಕೋಕಾಕೋಲಾದಲ್ಲಿ ನೆನೆಸಬೇಕು. ಸುಮಾರು ಎಂಟರಿಂದ ಹತ್ತು ಗಂಟೆಗಳ ಬಳಿಕ ಈ ತುಕ್ಕು ಸಡಿಲಗೊಂಡಿದ್ದು ಸುಲಭವಾಗಿ ಬಟ್ಟೆಯಲ್ಲಿ ಒರೆಸಿ ತೆಗೆಯಬಹುದು.

ಕೋಕಾಕೋಲಾ ಪಾನೀಯ ನಿಷೇಧ ಮಾಡಿರುವ ದೇಶ

ಕೋಕಾಕೋಲಾ ಪಾನೀಯ ನಿಷೇಧ ಮಾಡಿರುವ ದೇಶ

ವಿಶ್ವದಲ್ಲಿ ಎರಡು ದೇಶಗಳಲ್ಲಿ ಮಾತ್ರ ಇಂದಿಗೂ ಕೋಕಾಕೋಲಾ ಮಾರುವುದಿಲ್ಲ. ಅವೆಂದರೆ ಉತ್ತರ ಕೊರಿಯ ಮತ್ತು ಕ್ಯೂಬಾ. ಈ ಎರಡೂ ದೇಶಗಳೊಂದಿಗೆ ಅಮೇರಿಕಾ ಎಲ್ಲಾ ರೀತಿಯ ವ್ಯಾಪಾರ ಸಂಬಂಧ ಕಡಿದುಕೊಂಡಿರುವುದರಿಂದ ಕೋಕಾ ಕೋಲಾ ಸಹಿತ ಯಾವುದೇ ಅಮೇರಿಕಾದ ಉತ್ಪನ್ನ ಅಲ್ಲಿ ಸಿಗಲಾರದು. ಒಂದು ವೇಳೆ ಲಭ್ಯವಿದ್ದರೂ ಅದು ಕಳ್ಳಸಾಗಣೆಯ ಮೂಲಕ ಬಂದಿದ್ದು ಎಂದೇ ಅರ್ಥ.

ಮಾರುಕಟ್ಟೆಗೆ ದಿನಕ್ಕೊಂದು ಉತ್ಪನ್ನ

ಮಾರುಕಟ್ಟೆಗೆ ದಿನಕ್ಕೊಂದು ಉತ್ಪನ್ನ

ಕೋಕಾಕೋಲಾ ಸಂಸ್ಥೆ ಇಷ್ಟೊಂದು ವಿವಿಧ ಪ್ರಕಾರದ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ ಎಂದರೆ ದಿನಕ್ಕೊಂದು ಉತ್ಪನ್ನವನ್ನು ಸವಿದರೂ ಎಲ್ಲಾ ಉತ್ಪನ್ನಗಳ ರುಚಿ ನೋಡಲು ನಿಮಗೆ ಬರೋಬ್ಬರಿ ಒಂಭತ್ತು ವರ್ಷ ಬೇಕು. ಹೊಟ್ಟೆಯನ್ನು ಈ ಪ್ರಯೋಗಕ್ಕೆ ಬಲಿಪಶುವಾಗಿಸಲು ನೀವು ಸಿದ್ಧರಿದ್ದೀರಾ?

ಕೀಟಗಳ ಕಡಿತಕ್ಕ ರಾಮಬಾಣ

ಕೀಟಗಳ ಕಡಿತಕ್ಕ ರಾಮಬಾಣ

ಕೀಟಗಳ ಕಡಿತ ಮತ್ತು ಸಮುದ್ರತೀರದಲ್ಲಿರುವ ಜೆಲ್ಲಿಮೀನುಗಳ ಸ್ಪರ್ಶದಿಂದ ಉಂಟಾಗುವ ತುರಿಕೆಗೆ ಕೋಕಾ ಕೋಲಾ ಉತ್ತಮವಾಗಿದೆ. ಕೋಕಾ ಕೋಲಾ ಕುಡಿದ ಬಳಿಕ ಕೀಟಗಳ ಕಡಿತ ನಿಮಗೆ ಹೆಚ್ಚಿನ ಉರಿ ತರಿಸುವುದಿಲ್ಲ.

ಕೋಕಾ ಕೋಲಾದ ಪಾನೀಯದ ನೈಜ ಬಣ್ಣ ಯಾವುದು?

ಕೋಕಾ ಕೋಲಾದ ಪಾನೀಯದ ನೈಜ ಬಣ್ಣ ಯಾವುದು?

ಒಂದು ವೇಳೆ ಕಪ್ಪು ಬಣ್ಣ ಬರುವ ಸಾಮಾಗ್ರಿಗಳನ್ನು ಸೇರಿಸದೇ ಇದ್ದರೆ ಕೋಕಾ ಕೋಲಾದ ನೈಜ ಬಣ್ಣ ಹಸಿರು ಆಗಿದೆ. ಒಂದು ವೇಳೆ ಇದೇ ಬಣ್ಣದಲ್ಲಿ ಮಾರುಕಟ್ಟೆಗೆ ಬಂದಿದ್ದರೆ ಎಲ್ಲರೂ ಹಸಿರು ಬಣ್ಣವನ್ನೇ ತೊಡುವ St. Patrick Day ದಿನಾಚರಣೆಗೆ ಈ ಪಾನೀಯ ಅತ್ಯಂತ ಸೂಕ್ತವಾಗಿರುತ್ತಿತ್ತು.

ಕುಡಿತದ ಅಮಲನ್ನು ಇಳಿಸುತ್ತದೆಯೇ?

ಕುಡಿತದ ಅಮಲನ್ನು ಇಳಿಸುತ್ತದೆಯೇ?

ಪ್ರಾರಂಭಿಕ ದಿನಗಳಲ್ಲಿ "ಕುಡಿದ ಬಳಿಕದ ಅಮಲನ್ನು ಇಳಿಸಲು ಅತ್ಯುತ್ತಮ" ಎಂಬ ಧ್ಯೇಯವಾಕ್ಯದೊಂದಿಗೆ ಕೋಕಾ ಕೋಲಾ ಮಾರುಕಟ್ಟೆ ಪ್ರವೇಶಿಸಿತ್ತು. ಆಗ ಜನರು ಇದರಲ್ಲಿ ಕೊಕೇಯ್ನ್ ಇದೆ ಎಂದು ಅನುಮಾನಿಸುತ್ತಿದ್ದರು.

ಮಾರುಕಟ್ಟೆಯ ತಂತ್ರವೇನು?

ಮಾರುಕಟ್ಟೆಯ ತಂತ್ರವೇನು?

ಪುರುಷರಿಗಾಗಿ ಕೋಕ್ ಜೀರೋ ಮತ್ತು ಮಹಿಳೆಯರಿಗಾಗಿ ಡಯೆಟ್ ಕೋಕ್ ಎಂದು ಎರಡು ಭಿನ್ನ ಪ್ರಕಾರದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದರೂ ನಿಜವಾಗಿ ಎರಡೂ ಡಬ್ಬಿಗಳ ಒಳಗಿರುವ ಪಾನೀಯ ಒಂದೇ ಆಗಿದೆ. ಇದು ಕೇವಲ ಮಾರುಕಟ್ಟೆಯ ತಂತ್ರವಾಗಿದೆ.

ಕ್ರಿಸ್ಮಸ್ ಉಡುಗೆಗೂ ಸಾಂತಾ ಕ್ಲಾಸ್

ಕ್ರಿಸ್ಮಸ್ ಉಡುಗೆಗೂ ಸಾಂತಾ ಕ್ಲಾಸ್

ಸಾಂತಾ ಕ್ಲಾಸ್ ಎಂದಾಕ್ಷಣ ಬಿಳಿಯ ಗಡ್ಡದ, ಕೆಂಪು ಹೊರ ಉಡುಪು, ಟೊಪ್ಪಿ ಧರಿಸಿ ಆಗಮಿಸಿದ ವೃದ್ಧನ ಚಿತ್ರ ಮನದಲ್ಲಿ ಮೂಡುತ್ತದೆ. ಆದರೆ ವಾಸ್ತವವಾಗಿ ಈ ಪಾತ್ರ ಕೋಕಾಕೋಲಾದ ಕ್ರಿಸ್ಮಸ್ ಜಾಹೀರಾತಿನ ಉಡುಗೆಯಾಗಿದೆ. ಅಂದಿನಿಂದ ಸಾಂಟಾ ಕ್ಲಾಸ್ ಎಂದರೆ ಇದೇ ಉಡುಪು ಎಂದು ಪ್ರಚಲಿತವಾಗಿ ಹೋಗಿದೆ.

ಕೋಕಾಕೋಲಾ- ಶೇಂಗಾಬೀಜ ಕಾಂಬೀನೇಷನ್

ಕೋಕಾಕೋಲಾ- ಶೇಂಗಾಬೀಜ ಕಾಂಬೀನೇಷನ್

ಹೆಚ್ಚಿನವರು ಶೇಂಗಾಬೀಜ ಮತ್ತು ಕೋಕಾಕೋಲವನ್ನು ಪ್ರತ್ಯೇಕವಾಗಿ ಸೇವಿಸಲು ಇಷ್ಟಪಟ್ಟರೆ ಅಮೇರಿಕಾದ ದಕ್ಷಿಣ ರಾಜ್ಯಗಳ ಕೆಲವರಿಗೆ ಅತ್ಯಂತ ಶೀತಲವಾದ ಕೋಕಾಕೋಲಾದಲ್ಲಿ ಶೇಂಗಾಬೀಜಗಳನ್ನು ಮುಳುಗಿಸಿ ಸೇವಿಸುವುದು ಇಷ್ಟ.

ಜಾಹೀರಾತುಗಳಲ್ಲಿ ಎತ್ತಿದ ಕೈ

ಜಾಹೀರಾತುಗಳಲ್ಲಿ ಎತ್ತಿದ ಕೈ

ವಿಶ್ವದ ಸರಾಸರಿ ಪರಿಗಣಿಸಿದರೆ ಪ್ರತಿ ವ್ಯಕ್ತಿ ಪ್ರತಿ ನಾಲ್ಕು ದಿನಗಳಿಗೊಮ್ಮೆ ಕೋಕಾಕೋಲಾದ ಉತ್ಪನ್ನಗಳನ್ನು ಸೇವಿಸುತ್ತಾನೆ. ಇದೇ ಕಾರಣವಿರಬಹುದು. ವಿಶ್ವದಲ್ಲಿ ಆಪಲ್ ಮತ್ತು ಮೈಕ್ರೋಸಾಫ್ಟ್ ಸಂಸ್ಥೆಗಳು ಜಂಟಿಯಾಗಿ ನೀಡುವುದಕ್ಕಿಂತಲೂ ಹೆಚ್ಚು ಜಾಹೀರಾತುಗಳನ್ನು ಕೋಕಾಕೋಲಾ ಸಂಸ್ಥೆಯೊಂದೇ ನೀಡುತ್ತದೆ.

ಅಬ್ಬಾ,,,! ಏನಿದು ಆಶ್ಚರ್ಯ

ಅಬ್ಬಾ,,,! ಏನಿದು ಆಶ್ಚರ್ಯ

ಒಂದು ವೇಳೆ ಇದುವರೆಗೆ ಕೋಕಾಕೋಲಾ ಉತ್ಪಾದಿಸಿದ ದ್ರವನ್ನು ಎಂಟು ಔನ್ಸ್ ಬಾಟಲಿಯಲ್ಲಿ ತುಂಬಿಸಿ ಒಂದರ ಪಕ್ಕ ಒಂದಿಟ್ಟರೆ ಇದು ಎಷ್ಟು ಉದ್ದದ ಸಾಲು ಆಗಬಹುದು ಎಂದರೆ ಭೂಮಿಯಿಂದ ಚಂದ್ರನವರೆಗೆ ಎರಡು ಸಾವಿರ ಬಾರಿ ಹೋಗಿ ಬರಬಹುದು!

ಮುಂಚೂಣಿಯಲ್ಲಿರುವ ದೇಶ

ಮುಂಚೂಣಿಯಲ್ಲಿರುವ ದೇಶ

ಕೋಕಾ ಕೋಲಾ ಕುಡಿಯುವವರಲ್ಲಿ ಮೆಕ್ಸಿಕೋ ಮುಂಚೂಣಿಯಲ್ಲಿದೆ. ಇದರ ಸರಾಸರಿ ಬಳಕೆ ಅಮೇರಿಕಾ, ಇಂಗ್ಲೆಂಡ್, ಭಾರತ ಮತ್ತು ಚೀನಾದ ಅಷ್ಟೂ ಜನರು ಕುಡಿಯುವ ಸರಾಸರಿಗಿಂತ ಹೆಚ್ಚಿದೆ.

3 ಲಕ್ಷ ಟನ್ ಅಲ್ಯೂಮಿನಿಯಂ

3 ಲಕ್ಷ ಟನ್ ಅಲ್ಯೂಮಿನಿಯಂ

ಕೇವಲ ಅಮೇರಿಕಾದ ಬೇಡಿಕೆಯನ್ನು ಪೂರೈಸಲು ಸಂಸ್ಥೆಗೆ ಮೂರು ಲಕ್ಷ ಟನ್ ಅಲ್ಯೂಮಿನಿಯಂ ಬೇಕು. ಇದು ಅಮೇರಿಕಾ ಉತ್ಪಾದಿಸುವ ಒಟ್ಟು ಅಲ್ಯೂಮಿನಿಯಂ ನ 17.4% ರಷ್ಟಿದೆ.

ಸಂಸ್ಥೆಯ ಉನ್ನತ ಅಧಿಕಾರಿಗಳು

ಸಂಸ್ಥೆಯ ಉನ್ನತ ಅಧಿಕಾರಿಗಳು

ಎರಡನೆಯ ಮಹಾಯುದ್ಧದ ಸಮಯದಲ್ಲಿ ಕೋಕಾಕೋಲಾ ಸಂಸ್ಥೆಯ ಉನ್ನತ ಅಧಿಕಾರಿಗಳು ಜರ್ಮನಿ ನಾಜಿ ಪಕ್ಷದ ಸದಸ್ಯರಾಗಿದ್ದರು.

ಭಾರತದಲ್ಲಿ ಈ ಪಾನೀಯದ ಮಾರಾಟ ಇಂದಿಗೂ ತಗ್ಗಿಲ್ಲ!

ಭಾರತದಲ್ಲಿ ಈ ಪಾನೀಯದ ಮಾರಾಟ ಇಂದಿಗೂ ತಗ್ಗಿಲ್ಲ!

2003ರಲ್ಲಿ ದೆಹಲಿಯ Center for Science and Environment ಸಂಸ್ಥೆ ಕೋಕಾ ಕೋಲದಲ್ಲಿ ಉಪಯೋಗಿಸುವ ನೀರು ಕ್ರಿಮಿನಾಶಕದಿಂದ ಕೂಡಿದೆ ಇದು ಕ್ಯಾನ್ಸರ್ ಮತ್ತು ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುತ್ತದೆ ಎಂದು ಆರೋಪಿಸಿ ಉತ್ಪಾದನೆಯನ್ನು ನಿಲ್ಲಿಸಿತ್ತು. ಆದರೆ ಇದರ ಪರೀಕ್ಷೆಯ ಗುಣಮಟ್ಟವನ್ನೇ ಪ್ರಶ್ನಿಸಿದ ಕೋಕಾ ಕೋಲಾ ಸಂಸ್ಥೆ ತನ್ನದೇ ಪ್ರಯೋಗಾಲದಯ ಪರೀಕ್ಷೆಗಳನ್ನೇ ಸಮರ್ಥಿಸಿ ಭಾರತ ಸರ್ಕಾರದ ಮೇಲೆ ಒತ್ತಡ ಹೇರಿತು. ಈ ಒತ್ತಡದ ಕಾರಣ ಇಂದಿಗೂ ಭಾರತದಲ್ಲಿ ಈ ಪಾನೀಯದ ಮಾರಾಟ ಇಂದಿಗೂ ತಗ್ಗಿಲ್ಲ.

ಕೋಕಾಕೋಲಾ ಇಷ್ಟೊಂದು ಜನಪ್ರಿಯ ಪೇಯವಾಗಿದ್ದರೂ ಇದರ ದುರ್ಗುಣಗಳನ್ನು ವಿರೋಧಿಸುವವರ ಬಣವೂ ದೊಡ್ಡದೇ ಇದೆ. ಇವರೆಲ್ಲಾ ಸೇರಿ ಕೋಕಾಕೋಲಾ ವಿಷ ಎಂಬ ವಿಷಯವನ್ನು ತಾಣದಲ್ಲಿ ಪ್ರಕಟಿಸಿ ಜನತೆಯನ್ನು ಎಚ್ಚರಿಸುತ್ತಾ ಬಂದಿದ್ದಾರೆ.

English summary

Mind Blowing Facts About Coca-Cola

You know it’s so unhealthy but sometimes you simply cannot resist a cold misted bottle of Coca-Cola… Here we present you 20 facts about this beverage you might never heard of.
X
Desktop Bottom Promotion